1553. ಕಣ್ಣೀರು (೧೯೭೦)



ಕಣ್ಣೀರು ಚಲನಚಿತ್ರದ ಹಾಡುಗಳು
  1. ಏನೋ ಏನೋ ಆನಂದ ತಂದಿದೆ ಅನುಬಂಧ 
  2. ನಾನೊಂದು ಬೇಡಲು ವಿಧಿಯೊಂದು
ಕಣ್ಣೀರು (೧೯೭೦) - ಏನೋ ಏನೋ ಆನಂದ ತಂದಿದೆ ಅನುಬಂಧ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಬಿ.ಎಂ.ಶಂಕರ ಗಾಯನ : ಎಸ್.ಜಾನಕೀ 

ಲಲಲಲಾ ಆಆಹಹಾ ಲಲಲಲಾ ಆಆಹಹಾ ಆಆಹಹಾ 
ಏನೋ ಏನೋ ಆನಂದ ತಂದಿದೆ ಅನುಬಂಧ
ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ 
ನಿನಗಾಗೇ ಬರುವನೇ ಊರಿಂದ  
ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ ನಿನಗಾಗೇ ಬರುವನೇ ಊರಿಂದ  
ಏನೋ ಏನೋ ಆನಂದ ತಂದಿದೆ ಅನುಬಂಧ

ಮಧುಮಾಸವೇ ಓಡಿ ಬಾ ಮಧುರಸವ ನೀಡು ಬಾ 
ಮಧುರವಾಗಿ ಕೋಗಿಲೆ ಹಾಡು ಬಾ 
ಮಧುಮಾಸವೇ ಓಡಿ ಬಾ ಮಧುರಸವ ನೀಡು ಬಾ 
ಮಧುರವಾಗಿ ಕೋಗಿಲೆ ಹಾಡು ಬಾ 
ನವಿಲೇ ನಲಿದಾಡು ಬಾ ಗಿಣಿಯೇ ಮಾತಾಡು ಬಾ 
ಇನಿಯನ ಸ್ವಾಗತಿಸಲು ಜೊತೆಗೆ ಸೇರು ಬಾ 
ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ 
ನಿನಗಾಗೇ ಬರುವನೇ ಊರಿಂದ  
ಏನೋ ಏನೋ ಆನಂದ ತಂದಿದೆ ಅನುಬಂಧ
ಲಲಲಲಾ ಆಆಹಹಾ ಲಲಲಲಾ ಆಆಹಹಾ ಆಆಹಹಾ 

ಸೊಂಪಾದ ಮಲ್ಲಿಗೆ ಕೆಂಪಾದ ಸಂಪಿಗೆ ತಂಪಾದ ಪರಿಮಳವ ಚೆಲ್ಲು ಬಾ  ಆ ಆಆಆಆಆ  
ಸೊಂಪಾದ ಮಲ್ಲಿಗೆ ಕೆಂಪಾದ ಸಂಪಿಗೆ ತಂಪಾದ ಪರಿಮಳವ ಚೆಲ್ಲು ಬಾ 
ತಂಗಾಳಿಯೇ ಬೀಸು ಬಾ ತನುಮನಗಳ ತಣಿಸು ಬಾ 
ಸತಿಪತಿಯಾಗಿರೆಂದು ಹಾರೈಸು ಬಾ 
ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ 
ನಿನಗಾಗೇ ಬರುವನೇ ಊರಿಂದ  
ಲಲಲಲಾ ಲಲಲಲಾ ಓಹೋಹೋಹೊಹೋ ಆಆಹಹಾ 
ಹೂಂಹುಂಹೂಂಹುಂ  ಹೂಂಹುಂಹೂಂಹುಂ  
-----------------------------------------------------------------------------------------------------------

ಕಣ್ಣೀರು (೧೯೭೦) - ನಾನೊಂದು ಬೇಡಲು ವಿಧಿಯೊಂದು
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಬಿ.ಎಂ.ಶಂಕರ ಗಾಯನ : ಎಸ್.ಜಾನಕೀ 

ನಾನೊಂದು ಬೇಡಲು ವಿಧಿಯೊಂದು ಮಾಡಲು 
ಬಾಳಿನಾಸೆ ಅಳಿಯಿತು ಕೊನೆಗೆ ಕಣ್ಣೀರು ಉಳಿಯಿತು ಕೊನೆಗೇ ... 
ಕಣ್ಣೀರು ಉಳಿಯಿತು
ನಾನೊಂದು ಬೇಡಲು ವಿಧಿಯೊಂದು ಮಾಡಲು 
ಬಾಳಿನಾಸೆ ಅಳಿಯಿತು ಕೊನೆಗೆ ಕಣ್ಣೀರು ಉಳಿಯಿತು ಕೊನೆಗೇ ... 
ಕಣ್ಣೀರು ಉಳಿಯಿತು

ಮದುವೆ ಎಂಬ ಆಟವಾಡಿಸಿ ಮನದ ತುಂಬ ಆಸೆಯ ತುಂಬಿಸೀ 
ಬಿರುಗಾಳಿಯೊಂದನು ಬೀಸಿ ಬಾಳನೌಕೆಯನ್ನು ಒಡೇಸಿ 
ಯಾರನ್ನೂ ಸೇರದಂತೇ .. ಎನ್ನ ದೂರ ನೂಕಿಸೀ .... 
ದೂರ... ದೂರ ನೂಕಿತು.. ಆಆ 
ನಾನೊಂದು ಬೇಡಲು ವಿಧಿಯೊಂದು ಮಾಡಲು 
ಬಾಳಿನಾಸೆ ಅಳಿಯಿತು ಕೊನೆಗೆ ಕಣ್ಣೀರು ಉಳಿಯಿತು ಕೊನೆಗೇ ... 
ಕಣ್ಣೀರು ಉಳಿಯಿತು

ಹೆಣ್ಣು ಜನ್ಮ ಪಾವನವೆಂದೂ ಬಣ್ಣಿಸಿದರು ಸನಾತರಂದೂ.. 
ಸುಣ್ಣದಂತೆ ಜೀವ ಬೆಂದೂ ಮಣ್ಣುಗೂಡಿ ಹೋಯಿತಿಂದು 
ಬಾಳದೀಪ ಆರಿತು ಬದುಕು ಕತ್ತಲಾಯಿತು...   
ಬದಕು ಕತ್ತಲಾಯಿತು...   
ಬಾಳಿನಾಸೆ ಅಳಿಯಿತು ಕೊನೆಗೆ ಕಣ್ಣೀರು ಉಳಿಯಿತು ಕೊನೆಗೇ ... 
ಕೊನೆಗೇ ... ಕಣ್ಣೀರು ಉಳಿಯಿತು... ಆಆಅ 
-----------------------------------------------------------------------------------------------------------

No comments:

Post a Comment