1561. ಆತ್ಮ ಬಂಧನ (೧೯೯೨)



ಆತ್ಮ ಬಂಧನ ಚಲನಚಿತ್ರದ ಹಾಡುಗಳು 
  1. ನನ್ನ ಹೃದಯದಲ್ಲಿ ಧಕ್ ಧಕ್ 
  2. ಹೇಳುವರಾರಿಲ್ಲ ನಮ್ಮನ್ನೂ ಕೇಳುವರಾರಿಲ್ಲ.. 
  3. ಪ್ರೇಮ ಎಂದರೇ ಏನೂ 
  4. ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 
  5. ರಾಜೇಶ್ವರೀ ಯೋಗೇಶ್ವರೀ 
ಆತ್ಮ ಬಂಧನ (೧೯೯೨) - ನನ್ನ ಹೃದಯದಲ್ಲಿ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ   

ಗಂಡು : ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 
            ಏನೇನೋ ಸ್ವರ ಹೊಮ್ಮಿದೇ .. ವೀಣೆ ಮಿಡಿದಂತಿದೆ ಆಹಾ... 
ಹೆಣ್ಣು : ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 
            ಏನೇನೋ ಸ್ವರ ಹೊಮ್ಮಿದೇ .. ವೀಣೆ ಮಿಡಿದಂತಿದೆ.. 
ಗಂಡು : ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 
 
ಗಂಡು : ಕೆಂಪು ತುಟಿಯ ಮಿಂಚು ನನ್ನ ಬಳಿಗೆ ಕೂಗಿತು 
            ಮಾತು ಸಾಕು ಮುತ್ತು ಬೇಕು ನನ್ನೇ ಎಂದಿತು 
            ಸಂತೋಷಕೇ .. ಹುಚ್ಚಾಯಿತು.. 
ಹೆಣ್ಣು : ಕಣ್ಣು ನಿನ್ನ ಅಂದವನ್ನು ತುಂಬಿಕೊಂಡಿತು 
          ಗಿಣಿಯು ನಿನ್ನ -ಪ್ರೀತಿ ಮಾತ ಕೇಳಿ ಕೊಂಡಿತು.. 
          ನಿನ್ನಾಸೆಯೂ .. ಹೆಚ್ಚಾಯಿತು 
ಗಂಡು : ನೀ ನಕ್ಕು ನಾ ಮೆಚ್ಚಾಯಿತು ಮನವು ನಿನ್ನ ಮನವ ಸೇರಿತೂ...         
           ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 
ಹೆಣ್ಣು : ಏನೇನೋ ಸ್ವರ ಹೊಮ್ಮಿದೇ .. ವೀಣೆ ಮಿಡಿದಂತಿದೆ.. 
         ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 
ಗಂಡು : ಏನೇನೋ ಸ್ವರ ಹೊಮ್ಮಿದೇ .. ವೀಣೆ ಮಿಡಿದಂತಿದೆ.. 
ಹೆಣ್ಣು : ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 

ಗಂಡು : ಆ.. ಆಹಾಹಾಹ.....      ಹೆಣ್ಣು : ಹೂಂ..  ಹೂಂಹೂಂಹೂಂಹೂಂ
ಗಂಡು : ಲಾ (ಲಲಲಲ) ಲಾ (ಲಲಲ ) ಲಾ (ಲಲಲ ) ಲಲಾ 
           ಲಲ (ಲಲ ) ಲಲ (ಲಲ ) ಆಆಆಆಅ 
ಹೆಣ್ಣು : ನಿನ್ನ ನೋಡಿ ನನ್ನ ಮನಸೂ ಮಾತನಾಡಿತು 
          ನಾಚಬೇಡ ಕೇಳು ಬೇಗ ಎಂದು ಹೇಳಿತು 
          ನನ್ನಾಸೆಯಾ.. ನೀ ಬಲ್ಲೆಯಾ.. 
ಗಂಡು : ಸಂಜೆ ರಂಗು ನಿನ್ನ ಕೆನ್ನೆಯನ್ನು ಕೊಂದಿತು 
            ಕೆನ್ನೆ ರಂಗು ನಿನ್ನ ಆಸೇ ಎಲ್ಲ ಹೇಳಿತು.. ಅಹ್ಹಹ್ಹಹಹ  
           ಸಂಕೋಚವೂ ಇನ್ನೇತಕೆ.. 
ಹೆಣ್ಣು : ಬಾ ನೀಗಿಸು ಬಾಯಾರಿಕೇ .. ತುಟಿಯ ಬೆರೆಸು ನನ್ನ ಹಾಡಿಗೇ .. 
         ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 
ಗಂಡು : ಏನೇನೋ ಸ್ವರ ಹೊಮ್ಮಿದೇ .. ವೀಣೆ ಮಿಡಿದಂತಿದೆ.. 
         ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 
ಹೆಣ್ಣು : ಏನೇನೋ ಸ್ವರ ಹೊಮ್ಮಿದೇ .. ವೀಣೆ ಮಿಡಿದಂತಿದೆ.. 
ಇಬ್ಬರು : ನನ್ನ ಹೃದಯದಲ್ಲಿ ಧಕ್ ಧಕ್ ಧಕ್ ಎನ್ನುವಾ ತಾಳವೊಂದು ಕುಣಿದಾಡಿದೇ .. 
------------------------------------------------------------------------------------------

ಆತ್ಮ ಬಂಧನ (೧೯೯೨) - ಹೇಳುವರಾರಿಲ್ಲ ನಮ್ಮನ್ನೂ ಕೇಳುವರಾರಿಲ್ಲ.. 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಚಿ.ಉದಯಶಂಕರ, ಗಾಯನ :  ಚಿತ್ರಾ   

ಹೇಳುವರಾರಿಲ್ಲ ನಮ್ಮನ್ನೂ ಕೇಳುವರಾರಿಲ್ಲ.. 
ಆಸರೇ ನಮಗಿಲ್ಲ ಯಾರ ಆದರವು ಇಲ್ಲ.. 
ನಾನಾದೇ ಇಂದೂ ಉಸಿರಾಡೋ ಬೊಂಬೆ  
ನೀನಾದೇ ಒಂದು ಜಡವಾದ ಬೊಂಬೆ  
ಹೇಳುವರಾರಿಲ್ಲ ನಮ್ಮನ್ನೂ ಕೇಳುವರಾರಿಲ್ಲ.. 

ಪ್ರೀತಿ ಪ್ರೇಮ ಎಲ್ಲಿದೇ ಹಣವೇ ಎಲ್ಲ ಬಾಳಲೀ ... 
ಬರೀ ಭೀತಿ ರೀತಿ ಎನ್ನೋರು ಎಲ್ಲಾ ಮಾತಲೀ .. 
ಬಂಧು ಬಳಗ ಎಲ್ಲಿದೇ .. ಸಿರಿಯೇ ಜಾರ ದೇವರೂ .. 
ಕಡುಬಡವ ಸತ್ಯ ಹೇಳಲೂ ಯಾರೂ ನಂಬರೂ .. 
ಯಾವ ಗತಿ ನನಗೀ ಹೀಗಾಯಿತು ತಿಳಿಸುವರಾರಿಲ್ಲ 
ಕಂಬನಿಯೊಂದೇ ಗತಿಯಾಯ್ತು ಇಂದೂ ಕಣ್ಣಲಿ.. 
ಹೇಳುವರಾರಿಲ್ಲ ನಮ್ಮನ್ನೂ ಕೇಳುವರಾರಿಲ್ಲ.. 
ಆಸರೇ ನಮಗಿಲ್ಲ ಯಾರ ಆದರವು ಇಲ್ಲ.. 
ನಾನಾದೇ ಇಂದೂ ಉಸಿರಾಡೋ ಬೊಂಬೆ  
ನೀನಾದೇ ಒಂದು ಜಡವಾದ ಬೊಂಬೆ  
ಹೇಳುವರಾರಿಲ್ಲ ನಮ್ಮನ್ನೂ ಕೇಳುವರಾರಿಲ್ಲ.. 

ಖೈದಿ ಹೆದರಿ ಓಡಲೂ ಹಾದಿ ಹೇಗೆ ಕಾಣಲಿ 
ಬರ ಸಿಡಿಲು ಬಡಿವ ಹೊತ್ತಲ್ಲಿ ಯಾರನು ಕೂಗಲೀ .. 
ಕಲ್ಲು ಮುಳ್ಳು ತುಂಬಿದೆ.. ನಾನು ನಡೆವ ದಾರಿಲೀ   
ಬಿರುಗಾಳಿ ಮಳೆಯೂ ಇರುಳಲ್ಲಿ ಏನೆಂದೂ ಮಾಡಲೀ .. 
ಭ್ರಮೆಯ ಹೊತ್ತು ನಿದಿರೆಯಲೀ ಯಾರಿಗೂ ತೂಕಡಿಸಿ 
ಬರೆದಿರಬೇಕೂ ಹಣೆಬರಹ ಅದಕೇ ಈ ಗತಿ 
ಹೇಳುವರಾರಿಲ್ಲ ನಮ್ಮನ್ನೂ ಕೇಳುವರಾರಿಲ್ಲ.. 
ಆಸರೇ ನಮಗಿಲ್ಲ ಯಾರ ಆದರವು ಇಲ್ಲ.. 
ನಾನಾದೇ ಇಂದೂ ಉಸಿರಾಡೋ ಬೊಂಬೆ  
ನೀನಾದೇ ಒಂದು ಜಡವಾದ ಬೊಂಬೆ  
ಹೇಳುವರಾರಿಲ್ಲ ನಮ್ಮನ್ನೂ ಕೇಳುವರಾರಿಲ್ಲ.. 
-----------------------------------------------------------------------------------------

ಆತ್ಮ ಬಂಧನ (೧೯೯೨) - ಪ್ರೇಮ ಎಂದರೇ ಏನೂ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ   

ಹೆಣ್ಣು : ಪ್ರೇಮ ಎಂದರೇ ಏನೂ .. ಅದು ಏನೂ .. 
ಗಂಡು : ಅರಳಿರಲೂ ಅನುರಾಗ... ಆಆಆ ಬೆರೆತಿರಲೂ ಶುಭಯೋಗ 
ಹೆಣ್ಣು : ಪ್ರೇಮ ಎಂದರೇ ಏನೂ .. ಅದು ಏನೂ .. 
ಗಂಡು : ಅರಳಿರಲೂ ಅನುರಾಗ... ಆಆಆ ಬೆರೆತಿರಲೂ ಶುಭಯೋಗ 
ಹೆಣ್ಣು : ಪ್ರೇಮ ಎಂದರೇ ಏನೂ .. ಅದು ಏನೂ .. 
 
ಹೆಣ್ಣು : ನಡುವೊಂದು ಎದೆಯಾದ ಹಾಗೇ .. ಒಡಲೆಲ್ಲ ಹೂವಾದ ಹಾಗೇ .. 
          ನನ್ನೆದೆಯ ಅಂಗಳದಿ ಬೆಳದಿಂಗಳು ತುಂಬುತಿದೆ ಬಾ... ಬಾ.. 
ಗಂಡು : ಬೇಕೇ.. ಅಹ್ಹಹ್ಹಾಹ ಓಹೋ ಓಹೋಹೋ 
ಹೆಣ್ಣು : ಲಾಲ  ಲಲಾಲಾಲಾ ಲಾ ಲಾ ಲಲ 
ಗಂಡು : ಮನವೊಂದು ಮಾತಾಡಿಯಾಗಿ.. ಬಾನೆಲ್ಲ ಹಾರಾಡಿಯಾಗಿ       
            ಜೀವನದ ಪಲ್ಲವಿಯ ಸಂಭ್ರಮದಿ ಹಾಡುತಿದೆ ಬಾ ಬಾ 
ಹೆಣ್ಣು : ಹಿತವಾಗಿದೆ ಸುಖವಾಗಿದೆ ಹೊಸಲೋಕವಿದೆ  
ಗಂಡು : ಪ್ರೇಮ ಎಂದರೇ ಏನೂ .. ಅದು ಏನೂ .. 
ಹೆಣ್ಣು : ಅರಳಿರಲೂ ಅನುರಾಗ... ಆಆಆ ಬೆರೆತಿರಲೂ ಶುಭಯೋಗ 
ಗಂಡು : ಪ್ರೇಮ ಎಂದರೇ ಏನೂ .. ಅದು ಏನೂ .. 

ಗಂಡು : ಒಲವಿಂದ ಆಡುವ ಮಾತೆ ಸವಿಯಾದ ಪ್ರೇಮದ ಗೀತೆ 
            ಹೊಂಗನಸು ತುಂಬಿರಲೂ ಮಧುಮಾಸ ಹಾಡೆಲ್ಲವೂ ... ಆಆಅಹ್ಹಹ್ಹಾ 
ಹೆಣ್ಣು : ಮನದಲ್ಲಿ ನೋಡುವ ಆಸೆ ತುಟಿಯಲ್ಲಿ ಕಾಡುವ ಭಾಷೆ  
          ಅರಿತಾಗ ಸುಖವೊಂದೇ ದಿನವೆಲ್ಲ ಆನಂದವೇ.. ಓಓಓಓಓ 
ಗಂಡು : ಹೊಸ ಜೀವನ ಸವಿಜೇನಿನ ಕಡಲಾಗಲಿ ಬಾ     
ಹೆಣ್ಣು : ಪ್ರೇಮ ಎಂದರೇ ಏನೂ .. ಅದು ಏನೂ .. 
ಗಂಡು : ಅರಳಿರಲೂ ಅನುರಾಗ... ಆಆಆ ಬೆರೆತಿರಲೂ ಶುಭಯೋಗ 
ಹೆಣ್ಣು : ಪ್ರೇಮ ಎಂದರೇ ಏನೂ .. ಅದು ಏನೂ .. 
ಗಂಡು : ಅರಳಿರಲೂ            ಹೆಣ್ಣು : ಅನುರಾಗ... ಆಆಆ 
ಗಂಡು : ಬೆರೆತಿರಲೂ           ಹೆಣ್ಣು : ಶುಭಯೋಗ 
ಇಬ್ಬರು : ಲಾಲಾ ಲಾಲಲಲಾ ಲಾಲಾ ಲಲಲಾಲಾ ... 
-----------------------------------------------------------------------------------------

ಆತ್ಮ ಬಂಧನ (೧೯೯೨) - ಹತ್ತಿರ ಹತ್ತಿರ ನೀ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ   

ಹೆಣ್ಣು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 
          ಮುತ್ತಿನ ಮತ್ತನು ನೀ ತಂದಾಗ ಪ್ರತಿನಿಮಿಷ 
          ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ 
ಗಂಡು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 
          ಮುತ್ತಿನ ಮತ್ತನು ನೀ ತಂದಾಗ ಪ್ರತಿನಿಮಿಷ 
          ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ 
ಹೆಣ್ಣು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 

ಹೆಣ್ಣು : ಕಣ್ಣು ನೀ ಕಂಡು ಒಂದಾಗಲೂ ಮಿಂಚೊಂದು ಮೈಯ್ಯಲ್ಲೀ ... 
          ಕಣ್ಣೆ ನೀ ಕಂಡು ಒಂದಾಗಲೂ ಮಿಂಚೊಂದು ಮೈಯ್ಯಲ್ಲೀ ... 
          ಎಂದಿಗೂ ಕಾಣದ ಮಹದಾನಂದ ನನ್ನಲ್ಲಿ 
          ಲಾ...ಲಾ.. ಲಾಲಾಲಾಲಾಲಾ       ಗಂಡು : ಲಾಲಾಲಲಾ 
ಇಬ್ಬರು : ಲಾಲಾಲಲಾ ಲಾಲಾಲಲಾ 
ಗಂಡು : ಕೆನ್ನೆಗೇ ಕೆನ್ನೇ ತಂದಾಗಲೇ ಜುಂಮ್ಮೆನ್ದು ಎದೆಯಲ್ಲಿ   
           ಕೆನ್ನೆಗೇ ಕೆನ್ನೇ ತಂದಾಗಲೇ ಜುಂಮ್ಮೆನ್ದು ಎದೆಯಲ್ಲಿ  
           ಆಸೆಯ ಸಾಗರ ಹರಿದಾಡಿತು ಒಡಲಲ್ಲಿ   
ಗಂಡು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 
ಹೆಣ್ಣು : ಮುತ್ತಿನ ಮತ್ತನು ನೀ ತಂದಾಗ ಪ್ರತಿನಿಮಿಷ 
ಗಂಡು : ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ 
ಹೆಣ್ಣು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 
ಗಂಡು : ಮುತ್ತಿನ ಮತ್ತನು ನೀ ತಂದಾಗ ಪ್ರತಿನಿಮಿಷ 
ಹೆಣ್ಣು : ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ 
ಗಂಡು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 

ಗಂಡು : ಕಾಮನ ಬಿಲ್ಲ ನಾವೇರುವ ಬಾನಲ್ಲೇ ಹೋಗೋಣ 
            ಕಾಮನ ಬಿಲ್ಲ ನಾವೇರುವ ಬಾನಲ್ಲೇ ಹೋಗೋಣ 
            ಬೆಳ್ಳಿಯ ಮೋಡದಿ ಬಾ ತುಂಟಾಟ ಆಡೋಣ 
ಹೆಣ್ಣು : ಸೂರ್ಯನು ಹೋಗು ಬಂಗಾರದ ರಥವನ್ನು ಮುಟ್ಟೋಣ 
           ಸೂರ್ಯನು ಹೋಗು ಬಂಗಾರದ ರಥವನ್ನು ಮುಟ್ಟೋಣ  
           ನೀಲಿಯ ಬಾನಲೀ ಬಾ ಸಂಗೀತ ಹಾಡೋಣ 
ಹೆಣ್ಣು : ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 
ಗಂಡು : ಮುತ್ತಿನ ಮತ್ತನು ನೀ ತಂದಾಗ ಪ್ರತಿನಿಮಿಷ 
ಹೆಣ್ಣು : ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ 
ಗಂಡು : ಹತ್ತಿರ ಹತ್ತಿರ              ಹೆಣ್ಣು : ನೀ ಬಂದಾಗ ಸಂತೋಷ 
ಹೆಣ್ಣು : ಮುತ್ತಿನ ಮತ್ತನು        ಗಂಡು : ನೀ ತಂದಾಗ ಪ್ರತಿನಿಮಿಷ
ಇಬ್ಬರು: ಸುಂದರ ಅತಿ ಸುಂದರ ಬಾಳೆಲ್ಲಾ ಬಂಗಾರ 
            ಹತ್ತಿರ ಹತ್ತಿರ ನೀ ಬಂದಾಗ ಸಂತೋಷ 
----------------------------------------------------------------------------------------

ಆತ್ಮ ಬಂಧನ (೧೯೯೨) - ರಾಜೇಶ್ವರೀ ಯೋಗೇಶ್ವರೀ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಚಿತ್ರಾ   

ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ... 
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ... 
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ 
ನೊಂದು ಬೆಂದೆನು ನಂಬಿ ಬಂದೆನು ಆದಿಶಕ್ತಿಯೇ ಕಾಪಾಡು.... 
ಹರಿಸೀ ಕಣ್ಣೀರೂ ಧಾರೇ ಸೂರು ಮನಕೆ ಶಾಂತೀ ನೀಡು 
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ... 
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ 

ಬೀಸುವ ಗಾಳಿಗೇ ಜೀವವೂ ಆಡಿದೆ ನೋಡಮ್ಮಾ 
ಅಭಯ ನೀ ನೀಡದೇ ಗತಿಯೇನೂ ಮಾಡೇನಮ್ಮಾ .. 
ಪ್ರಾಣದ ಜ್ಯೋತಿಯೂ ಆರದೇ ರಕ್ಷಿಸು ಬಾರಮ್ಮಾ.. 
ಭಯವೇ ಬಾಯಾರಿದೇ ಮಾತಾಡಲಾರೇನಮ್ಮಾ .. 
ಮೊರೆಯನು ನೀ ಆಲಿಸು ಪತಿಯನು ನೀ ರಕ್ಷಿಸು 
ಕೈ ಮುಗಿವೇ .. ಶರಣೆನುವೇ ..    
ಕೈ ಮುಗಿವೇ .. ಶರಣೆನುವೇ .. ವೇದನೇ .. ತಾಳೇನೇ ಬೇಡುತ ಬಂದೇನೇ ... 
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ... 
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ 
ನೊಂದು ಬೆಂದೆನು ನಂಬಿ ಬಂದೆನು ಆದಿಶಕ್ತಿಯೇ ಕಾಪಾಡು.... 
ಹರಿಸೀ ಕಣ್ಣೀರೂ ಧಾರೇ ಸೂರು ಮನಕೆ ಶಾಂತೀ ನೀಡು 
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ... 
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ 

ದುಷ್ಟಶಕ್ತಿಯ ತನ್ನದೇ ಶಾಂತಿಯೂ ಇಲ್ಲಮ್ಮಾ.. 
ಭಕ್ತಳ ನೀ ಸಲಹದೇ ನೆಮ್ಮದಿ ಇಲ್ಲಮ್ಮಾ 
ಕಷ್ಟ ತಾಳದೆ ಕೂಗಿದೆ..  ಬಾರೆಯೇ ನಮ್ಮಮ್ಮಾ 
ಉಳಿಸೇಯ ತಾಳಿಯ ತಾಯೀ ಗೌರಮ್ಮಾ... 
ಅಳಿಸದೇ ಅರಿಷಿಣ ಉಳಿಸು ನೀ ಕುಂಕುಮಾ    
ನೀ ತಂದ ಸೌಭಾಗ್ಯ ಎಂದೆಂದೂ ಇರಲಮ್ಮಾ 
ಶಂಕರೀ ಶುಭಕರೀ ಶ್ರೀ ಹರಿ ಸಾಧಿನೀ .. 
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ... 
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ 
ನೊಂದು ಬೆಂದೆನು ನಂಬಿ ಬಂದೆನು ಆದಿಶಕ್ತಿಯೇ ಕಾಪಾಡು.... 
ಹರಿಸೀ ಕಣ್ಣೀರೂ ಧಾರೇ ಸೂರು ಮನಕೆ ಶಾಂತೀ ನೀಡು 
ರಾಜೇಶ್ವರೀ ಯೋಗೇಶ್ವರೀ ಶುಭಕರಿ ಓಂಕಾರೀ ... 
ಗತಿ ನೀನೇ ಹೇ ಜಗನ್ಮಾತೆ ಚಾಮುಂಡಿಶ್ವೇರಿ 
ರಾಜ ರಾಜೇಶ್ವರೀ ... ಚಾಮುಂಡೇಶ್ವರೀ... ಕಾಪಾಡಮ್ಮಾ.. 
-----------------------------------------------------------------------------------------

No comments:

Post a Comment