1567. ಕೊಡೆ ಮುರುಗ (೨೦೨೧)

ಕೊಡೆ ಮುರುಗ ಚಲನಚಿತ್ರದ ಹಾಡುಗಳು 
  1. ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ 
ಕೊಡೆ ಮುರುಗ (೨೦೨೧) - ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ 
ಸಂಗೀತ : ಎಂ.ಎಸ್. ತ್ಯಾಗರಾಜ, ಸಾಹಿತ್ಯ : ಸುಬ್ರಮಣ್ಯಂ ಪ್ರಸಾದ. ಗಾಯನ : ಕೈಲೇಶ ಖೈರ್ 

ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ತಿಪ್ಪೆ ಕೆದ್ರೋದ ಬಿಟ್ಟಿತ್ತಾ
ನಾಯಿ ಕೊರಳಿಗೆ ಲಿಂಗ ಕಟ್ಟಿದ್ರೇ ಮೂಳೆ ಕಡಿಯೋದ ಬಿಟ್ಟಿತ್ತಾ
ಕಾವಿ ತೊಟ್ಟ ಮಾತ್ರಕ್ಕೆ ಕಾಮ ಸತ್ತು ಹೋಗುತ್ತಾ
ಕಾವಿ ತೊಟ್ಟ ಮಾತ್ರಕ್ಕೆ ದೇಶ ಆಳೋಕಾಗುತ್ತಾ
ಇಲ್ಲಿ ಇರುವುದೇ ಹಿಂಗೆ ಬದಲಾದ್ರೇ ಹ್ಯೆಂಗೆ
ಇಲ್ಲಿ ಇರುವುದೇ ಹಿಂಗೆ ಬದಲಾದ್ರೇ ಹ್ಯೆಂಗೆ
ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ತಿಪ್ಪೆ ಕೆದ್ರೋದ ಬಿಟ್ಟಿತ್ತಾ
ನಾಯಿ ಕೊರಳಿಗೆ ಲಿಂಗ ಕಟ್ಟಿದ್ರೇ ಮೂಳೆ ಕಡಿಯೋದ ಬಿಟ್ಟಿತ್ತಾ

ಮಂತ್ರಕ್ಕೊಂದು ಪಂಗಡ ಶಾಸ್ತ್ರಕ್ಕೊಂದು ಪಂಗಡ
ಅರೆಬರೆ ಪಂಡಿತರು ಹೊಡೀತಾರೆ ಬಾಂಬೊಡ
ಬದುಕಲು ಇಲ್ಲಿ ಬಣ್ಣ ಹಚ್ಚಲೇಬೇಕು
ನ್ಯಾಯ ದೇವಿ ಕಣ್ಣು ಮುಚ್ಚಲೆಬೇಕು
ಕಾಲಿ ಬಂದಾಯಿತು ಬಳಿ ಎಂದಾಯಿತು
ತಲೆಗಿಳಿಗಿಲ್ಲಿ ಬೆಲೆ ಇಲ್ಲದಾಯಿತು
ಪುಣ್ಯವಂತ ಒಬ್ಬ ಸತ್ತು ಊರತ್ತರೇನು
ಪುಣ್ಯವಂತ ಒಬ್ಬ ಸತ್ತು ಊರತ್ತರೇನು
ಸುಡಗಾಡು ಕಾಯುನು ನಗಲೇಬೇಕು
ಜಗವರಿವುದು ಹಿಂಗೆ ಜರಿದರು ಹ್ಯೇಂಗೆ
ಜಗವರಿವುದು ಹಿಂಗೆ ನೀ ಜರಿದರು ಹ್ಯೇಂಗೆ
ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ತಿಪ್ಪೆ ಕೆದ್ರೋದ ಬಿಟ್ಟಿತ್ತಾ
ನಾಯಿ ಕೊರಳಿಗೆ ಲಿಂಗ ಕಟ್ಟಿದ್ರೇ ಮೂಳೆ ಕಡಿಯೋದ ಬಿಟ್ಟಿತ್ತಾ

ಉಪದೇಶ ಹೇಳೋರೆಲ್ಲ ಹುಳಿ ತಿನ್ನೋದ ಬಿಟ್ಟಾವ್ರ
ದೇಶಾ ಆಳೋರೆಲ್ಲಾ ಮನೆ ನೆಟ್ಟಗಿಟ್ಟವ್ರಾ
ಊರು ಎಂದ ಮೇಲೆ ಬಾರ್ ಇರಬೇಕು
ಗೌಡನೆಂದ ಮೇಲೆ ಗದ್ದಲವಿರಬೇಕು
ತಿರಬೋಕಿಯೊಬ್ಬ ಬಂದು ಕೈ ಮುಗಿದು ನಿಂತರೆ
ನೋಟಿಗೊಬ್ಬ ಇಲ್ಲಿ ವೋಟ್ ಹಾಕಬೇಕು
ಕಾರಬಾರು ಮಾಡಿ ಎಷ್ಟೇ ಮೇರೆದರುನು
ಕಾರಬಾರು ಮಾಡಿ ಎಷ್ಟೇ ಮೇರೆದರುನು
ಮಾರಿಬೇಡ ಕೊನೆಗೆ ಆರು ಮೂರು
ಜಗವರಿವುದು ಹಿಂಗೆ ನೀ ಜರಿದರು ಹ್ಯೇಂಗೆ
ಜಗವರಿವುದು ಹಿಂಗೆ ಜರಿದರು ಹ್ಯೇಂಗೆ
ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ತಿಪ್ಪೆ ಕೆದ್ರೋದ ಬಿಟ್ಟಿತ್ತಾ
ನಾಯಿ ಕೊರಳಿಗೆ ಲಿಂಗ ಕಟ್ಟಿದ್ರೇ ಮೂಳೆ ಕಡಿಯೋದ ಬಿಟ್ಟಿತ್ತಾ
--------------------------------------------------------------------------------------------------------------

No comments:

Post a Comment