- ಚಲುವ ಚಲುವ ಬೇಲೂರ ಚೆನ್ನ ಚೆಲುವ
- ರಾಮ ರಾಮ
- ತಾತ ತಾತ ಅಜ್ಜಿಯನ್ನು ಎಲ್ಲಿ ನೋಡಿದೆ
- ಕೋಳಿ ಕಳ್ಳ ಕೋಳಿ ಕಳ್ಳ
- ಬಾಳಿಗೂ ಭೂಮಿಗೂ ಚಿರಬಾಂಧವ್ಯ
ಚಿರಬಾಂಧವ್ಯ (೧೯೯೩) - ಚಲುವ ಚಲುವ ಬೇಲೂರ ಚೆನ್ನ ಚೆಲುವ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ
ಹೆಣ್ಣು : ಚಲುವ ಚಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ
ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ ಬಾರೋ ನನ್ನ ರಾಮಾ....ಆ.ಆ..
ಗಂಡು : ಚಲುವೆ ಚಲುವೆ ಬೇಲೂರ ಚೆನ್ನ ಚಲುವೆ
ಯಾಕೋ ಯಾಕೋ ನಿನ್ನ ಮೇಲೆ ನನ್ನ ಮನವೆ
ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ ಬಾರೆ ನನ್ನ ಸೀತೆ..ಏ.ಏ...
ಹೆಣ್ಣು : ಚಲುವ ಚಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ
ಹೆಣ್ಣು : ಮನದ ಬನದ ಸುಮದಲ್ಲಿ ಚೈತ್ರಮೆಳ

ಗಂಡು : ಎದೆಯ ಗುಡಿಯಾ ಪದದಲ್ಲಿ ಪ್ರೇಮತಾಳ
ಹೆಣ್ಣು : ಕಣ್ಣ ಸನ್ನೆಯಲ್ಲಿ ಇಂದ್ರಲೋಕ ದೊರೆತಾಗ
ಗಂಡು : ಬೆರಳಿನಾಜ್ಞೆಯಲ್ಲಿ ಸ್ವರ್ಗಲೋಕ ತೆರೆದಾಗ
ಹೆಣ್ಣು : ಏನ ಹೇಳಲಿ ಈಗ ನಾ ಮಾತು ಬಾರದಿದೆ..
ಗಂಡು : ಏನ ಮಾಡಲಿ ಈಗ ನಾ ಜೀವ ಜಾರುತಿದೆ
ಹೆಣ್ಣು : ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ ಬಾರೋ ನನ್ನ ರಾಮಾ....ಆ.ಆ..
ಗಂಡು : ಚಲುವೆ ಚಲುವೆ ಬೇಲೂರ ಚೆನ್ನ ಚಲುವೆ
ಯಾಕೋ ಯಾಕೋ ನಿನ್ನ ಮೇಲೆ ನನ್ನ ಮನವೆ
ಹೆಣ್ಣು : ಉರಿಯೋ ಸೂರ್ಯ ತಂಪಾಗಿ ಕೈಗೆ ಬಂದ
ಗಂಡು : ಹರಿಯೋ ನದಿಯು ಕಡಲಾಯ್ತು ಪ್ರೇಮದಿಂದ
ಹೆಣ್ಣು : ಮೊದಲ ನೋಟದಲ್ಲಿ ಪೂರ್ವ ಪುಣ್ಯ ಸುಳಿದಾಗ
ಗಂಡು : ಮೊದಲ ಸ್ಪರ್ಶದಲ್ಲಿ ಪೂರ್ವ ಜನ್ಮ ಸೆಳೆದಾಗ
ಹೆಣ್ಣು : ಏನ ನೋಡಲಿ ಈಗ ನಾ ಲೋಕ ಕಾಣದಿದೆ
ಗಂಡು : ಏನ ನೀಡಲಿ ಈಗ ನಾ ಆಸೆ ಕಾಡುತಿದೆ
ಹೆಣ್ಣು : ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ ಬಾರೋ ನನ್ನ ರಾಮಾ....ಆ.ಆ..
ಚಲುವ ಚಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ
ಗಂಡು : ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ ಬಾರೆ ನನ್ನ ಸೀತೆ..ಏ.ಏ...
ಚಲುವೆ ಚಲುವೆ ಬೇಲೂರ ಚೆನ್ನ ಚಲುವೆ

------------------------------------------------------------------------------------------------
ಚಿರಬಾಂಧವ್ಯ (೧೯೯೩) - ರಾಮ ರಾಮ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ,
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್
ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಂ ಜಗ ಜಂ
ಹಾಗೆ ಹೋಗಿ ಹೀಗೆ ಬಂದೆ ನಾ ಜಿಗಿ ಜಿಗ ಜಿಗಿ ಜಿಗ ಜಂ
ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ಫ್ರೆಂಡ್ಸ್ ಆವರ್ಸ್ ಇಸ್ ಕರ್ಮ ಭೂಮಿ ದೇರ್ ಇಸ್ ಕಂಪ್ಯೂಟರ್ ಭೂಮಿ
ಅಮ್ಮಮ್ಮ ಸುತ್ತಿ ಬಂದೆ ಅಮೇರಿಕ ಅಪ್ಪಪ್ಪಾ ಕಲಿತು ತಂದೆ ಕಂಪ್ಯೂಟರಿಕ್
ಇಲ್ಲಿ ನಮಗಿದೆ ಜ್ಞಾನ ಅಲ್ಲಿ ಇದೆ ವಿಜ್ಞಾನ
ಇಲ್ಲಿ ಶಾಸ್ತ್ರಗಳುಂಟು ಅಲ್ಲಿ ಶಾಸ್ತ್ರಗಳುಂಟು
ಅಲ್ಲೆಲ್ಲ ಆಗಸದಲ್ಲಿ ಮನೆಗಳ ಸೂರು ಅದರಲ್ಲೂ ಅಮೆರಿಕಾ ಕೊಲೆಗಳ ತೌರು
ಇಲ್ಲಿ ಬಡತನ ಉಂಟು ಅಲ್ಲಿ ಕಳ್ಳತನ ಉಂಟು
ಇಲ್ಲಿ ದ್ರೋಹಿಗಳುಂಟು ಅಲ್ಲಿ ಪಾಪಿಗಳುಂಟು
ಅಲ್ಲಿ ದುಡಿಯುವರು ಇಲ್ಲಿ ಕಳೆಯುವರು
ಅಲ್ಲಿ ಕುಣಿಯುವರು ಇಲ್ಲಿ ದಣಿಯುವರು
ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಂ ಜಗ ಜಂ
ಹಾಗೆ ಹೋಗಿ ಹೀಗೆ ಬಂದೆ ನಾ ಜಿಗಿ ಜಿಗ ಜಿಗಿ ಜಿಗ ಜಂ
ಜನನಿ ಜನ್ಮ ಭೂಮಿಶ್ಚ ಸ್ವರ್ಗಾದತಿ ಗರಿಯಸ್ ಅಂದರೇ ..
ಜನ್ಮ ಕೊಟ್ಟ ತಾಯಿ ಜನ್ಮಭೂಮಿ ಸ್ವರ್ಗಕ್ಕಿಂತಲೂ ವಿಶಿಷ್ಟವಾದದು
ಅಜ್ಜಮ್ಮ ಸ್ವರ್ಗವಮ್ಮ ನಮ್ಮ ಊರು ಅವರಿಗೋ ದೇವರ ಊರು
ನಮ್ಮ ಮಣ್ಣಿನ ಗಂಧ ಗಾಳಿಗುರಿದರೆ ಚೆಂದ
ತಂದ ಅನುಭವದಿಂದ ಬೆಳೆದರೆ ಇನ್ನೂ ಚೆಂದ
ತಾತಯ್ಯ ಅವರಿಗೆ ನಮ್ಮ ರಾಮ ಇಷ್ಟ ಕೃಷ್ಣನ ಗೀತೆ ಅಂತೂ ತುಂಬಾ ಇಷ್ಟ
ನಮ್ಮ ರಾಗವ ಕೇಳಿ ನಲಿಯುತ್ತಾರೆ ಅವರು
ಅವರ ತಾಳವ ಕೇಳಿ ಕುಣಿಯುತ್ತೇವೆ ನಾವು
ಅಲ್ಲೂ ಇರಬಹುದು ಇಲ್ಲಿಯೂ ಇರಬಹುದು
ಅಲ್ಲಿರೋ ಸೂರ್ಯಾನೇ ಇಲ್ಲೂ ಬರಬಹುದು
ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಂ ಜಗ ಜಂ
ಹಾಗೆ ಹೋಗಿ ಹೀಗೆ ಬಂದೆ ನಾ ಜಿಗಿ ಜಿಗ ಜಿಗಿ ಜಿಗ ಜಂ
------------------------------------------------------------------------------------------------
ಚಿರಬಾಂಧವ್ಯ (೧೯೯೩) - ತಾತ ತಾತ ಅಜ್ಜಿಯನ್ನು ಎಲ್ಲಿ ನೋಡಿದೆ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಶಿವರಾಜಕುಮಾರ, ಕೋರಸ್
ಗಂಡು : ತಾತ ತಾತ ತಾತ ಮೀಸೆ ತಾತ ತಾತ ಅಜ್ಜಿಯನ್ನು ಎಲ್ಲಿ ನೋಡಿದೆ ಏನು ಮೆಚ್ಚಿ ಪ್ರೀತಿ ಮಾಡಿದೆ
ಮೀಸೆ ನೋಡಿ ಭಯ ಪಟ್ಟಿದ್ದು ತಕ್ಷಣ ನಗಿಸಿ ಮರುಕ್ಷಣ ವರಿಸಿದೆ
ಅಜ್ಜಿ ಅಜ್ಜಿ ಅಜ್ಜಿ ತಾತ ಮೆಚ್ಚಿದಜ್ಜಿ ಮೀಸೆ ನೋಡಿ ಯಾಕೆ ಬೆಚ್ಚಿದೆ ಬೆಚ್ಚಿ ಒಲೆ ಯಾಕೆ ಹಚ್ಚಿದೆ..
ಹೆಣ್ಣು : ಮೂತಿ ತುಂಬ ಮೀಸೆ ತುಂಬಿತ್ತು ತುದಿ ಮೇಲೆ ಲಡ್ಡು ನಿಂತಿತ್ತು
ಮೂತಿಗೆ ಹೆದರಿದೆ ಮಾತಿಗೆ ವರಿಸಿದೆ
ಗಂಡು : ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ ನೂರು ಹುಟ್ಟುಹಬ್ಬ ಮಾಡಿರಿ ನೂರು ಕಾಲ ಹೀಗೆ ಹಾಡಿರಿ
ಗಂಡು : ಒಟ್ಟಿಗೆ ಇಬ್ಬರು ಹಾಡಿದ್ದೀರಾ ಒಟ್ಟಿಗೆ ಬಯಸ್ಕೋಪು ನೋಡಿದ್ದೀರಾ
ಬೇಸಿಗೆ ಒಳಗೆ ಹುಲ್ಲಿನ ಹಾಸಿಗೆ ಹಾಸಿಕೊಂಡು ನೆಲ್ಲಿಕಾಯಿ ತಿಂದಿದ್ದೀರಾ
ಹ್ಹಾ.. ಅಜ್ಜನು ಅಜ್ಜಿಗೆ ಬೈದಿದ್ದುಂಟು ಅಜ್ಜಿ ಮೇಲೆ ಅಜ್ಜ ಕೈಯ್ಯಿ ಎತ್ತಿದುಂಟಾ
ಗೋವಿನ ತರದ ಅಳುವೇ ಬರದಾ ಅಜ್ಜಿಯು ಕಷ್ಟವೆಂದು ಅತ್ತಿದುಂಟಾ
ಒಮ್ಮೆ ಜ್ವರ ಮಲಗಿದ್ದೆ ಗಂಜಿ ಬೇಡ ಎಂದು ಬೈದಿದ್ದೇ ಮುಡಿಯಲಿ ಅತ್ತಳು ಜ್ವರವನೇ ಕಿತ್ತಳು
ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ ನೂರು ಹುಟ್ಟುಹಬ್ಬ ಮಾಡಿರಿ ನೂರು ಕಾಲ ಹೀಗೆ ಹಾಡಿರಿ
ಗಂಡು : ಹಿಂದಿನ ಕಾಲದ ಜೋಡಿ ಮುಂದೆ ಈಗಿನ ಜೋಡಿಗಳು ತುಂಬಾ ಹಿಂದೆ
ಒಮ್ಮತ ಇಲ್ಲದ ಸಮ್ಮತ ಇಲ್ಲದ ಪರಿಣಾಮ ತುಂಬಾ ಬರಿ ನಿಂದೆ ನಿಂದೆ
ಹೆಣ್ಣು : ಅಕ್ಕರೆ ಇಲ್ಲದಾ ನಮ್ಮ ಕಥೆ ಹಾಡುತಾ ಸೇರಿದೆ ನಿನ್ನ ಜೊತೆ
ಬೀದಿಗೆ ಬಿದ್ದಿರೋ ಮಕ್ಕಳಾ ಪಾಲಿಗೆ ತಾತನೇ ಎಂದಿಗೂ ಆಶಾಲತೆ
ಇಬ್ಬರು : ಯಾರು ಅಲ್ಲ ಇಲ್ಲಿ ಅನಾಥ ಪ್ರೀತಿ ನಮ್ಮ ನಿತ್ಯ ಪ್ರಭಾತ
ಕರುಣೆಯೇ ಜೆವಿನ ಶಾಂತಿಯೇ ಗಾಯನ
ಗಂಡು : ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ ನೂರು ಹುಟ್ಟುಹಬ್ಬ ಮಾಡಿರಿ ನೂರು ಕಾಲ ಹೀಗೆ ಹಾಡಿರಿ
-----------------------------------------------------------------------------------------------
ಚಿರಬಾಂಧವ್ಯ (೧೯೯೩) - ಕೋಳಿ ಕಳ್ಳ ಕೋಳಿ ಕಳ್ಳ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ,
ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಮುಚ್ಚಮರೆ ಏನು ಹಾಡು ಹೇಳುವಾಗ
ಕಳ್ಳತನವೇನು ಪ್ರೀತಿಮಾಡುವಾಗ ಜೋಪಾನ
ಖಾಲಿ ದೀಪ ಹಚ್ಚಬಾರದು ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಓ ಓ ಓಹೋ.. ಓ ಓ ಓಹೋ
ಜಾಣ ಜಾಣ ಜಾಣರ ಜಾಣ ಪ್ರೀತಿಗೆ ಬೆಲೆಯ ಕೊಡುವನು
ಬಂಡವಾಳ ಇಡದೇನೆ ಲಾಭ ಪಡೆಯುವನು
ಜಾಣೆ ಜಾಣೆ ಕಿನ್ನರ ವೀಣೆ ಪ್ರೇಮದ ಸ್ವರವ ನುಡಿವವಳು
ವಾದ್ಯವೃಂದ ಇರದೆನೇ ಮನವ ಮಿಡಿಸುವಳು
ಜಾಣ ಜಾಣೆಗೆ ಯಾಕೆ ಭೈರಿಗೇ ಒಂದೇ ನುಡಿ ಸಾಕು
ಲೋಕ ನಿಮಗಿದು ಪ್ರೀತಿ ನಿಮದಿದು ಬೇಗ ತಿಳಿಬೇಕು
ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಅಂಜಿ ಅಂಜಿ ಸುಮ್ಮನೆ ಹಿಂಜಿ ಹೆಣ್ಣಿಗೆ ಮಾತು ಕೊಡಬೇಡ
ಗುಂಡು ಹೊಡೆದ ಹಾಗಿರಲಿ ಗಂಡುತನವೆಂದು
ಹೂವೇ ಹೂವೇ ಅರಳಲು ನೋವೇ ಪ್ರೇಮದ ಪರಿಮಳ ತಡೀಬೇಡ
ಸುಗ್ಗಿಯಂತೆ ಸುಖ ತರಲಿ ಹೆಣ್ಣುತನವೆಂದು
ಯಾರು ಮುನಿಯಲಿ ಯಾರು ಜರಿಯರು ನೈಜ ಪ್ರೇಮವನು
ಎಲ್ಲ ಅರಿಯರು ಎಲ್ಲ ಸವಿಯರು ಪ್ರೇಮ ಭಾಷೆಯನು
ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಮುಚ್ಚಮರೆ ಏನು ಹಾಡು ಹೇಳುವಾಗ
ಕಳ್ಳತನವೇನು ಪ್ರೀತಿಮಾಡುವಾಗ ಜೋಪಾನ
ಖಾಲಿ ದೀಪ ಹಚ್ಚಬಾರದು ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಓ ಓ ಓಹೋ.. ಓ ಓ ಓಹೋ
ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
-----------------------------------------------------------------------------------------------
ಚಿರಬಾಂಧವ್ಯ (೧೯೯೩) - ಬಾಳಿಗೂ ಭೂಮಿಗೂ ಚಿರಬಾಂಧವ್ಯ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಡಾ||ರಾಜಕುಮಾರ
ಬಾಳಿಗೂ ಭೂಮಿಗೂ ಬಿಡಿಸಿದಾ ಚಿರಬಾಂಧವ್ಯ
ಭಾವಕೂ ಜೀವಕೂ ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
ಬಾಳಿಗೂ ಭೂಮಿಗೂ ಬಿಡಿಸಿದಾ ಚಿರಬಾಂಧವ್ಯ
ನಿರ್ಮಲ ಕೋಮಲ ಬಾಲ್ಯದಾ ಆ ಮನಗಳು
ಹಿರಿತನ ಸಿರಿತನ ಭೇದ ಅರಿಯದಿರೋ ಸುಮಗಳು
ಇಂದಿಗಿಂತ ಅಂದೇ ಚೆಂದೆನ್ನುವ ಮಾನವನ ಮಾತು ಸತ್ಯವಾಗಿದೆ
ಸತ್ಯವನ್ನು ಒಂದೇ ದೇವರೆನ್ನುವ ಮಂಗಳದ ಸೂತ್ರ ನಿತ್ಯವಾಗಿದೆ
ಬಾಳಿಗೂ ತಾಳಿಗೂ ಬಿಡಿಸದಾ ಚಿರಬಾಂಧವ್ಯ
ಭಾವಕೂ ಜೀವಕೂ ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
ಬಾಳಿಗೂ ಭೂಮಿಗೂ ಬಿಡಿಸಿದಾ ಚಿರಬಾಂಧವ್ಯ
ಬಾಲ್ಯದಾ ನೆನಪಿನ ಅಂಗಳ ಒಂದು ಮಧುವನ
ಎಡವಿದಾ ದುಡಕಿದಾ ಮಧುರ ಕಲೆಗಳಿರೋ ಗುಣಗಾನ
ಅಂದುಕೊಳ್ಳದೇನೆ ಸಾಗಿ ಹೋಗುವಾ ಆಟಪಾಠವಿಂದು ನಿತ್ಯನೂತನ
ಹೂವ ದೋಣಿಯಾಗಿ ಸಾಗಿ ಹೋಗುವಾ ಬಾಲಲೀಲೆ ಇಂದು ನಿತ್ಯ ನೂತನ
ಬಾಳಿಗೂ ಭೂಮಿಗೂ ಬಿಡಿಸಿದಾ ಚಿರಬಾಂಧವ್ಯ
ಭಾವಕೂ ಜೀವಕೂ ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
ಬಾಳಿಗೂ ಭೂಮಿಗೂ ಬಿಡಿಸಿದಾ ಚಿರಬಾಂಧವ್ಯ
-----------------------------------------------------------------------------------------------
No comments:
Post a Comment