1569. ಸವ್ಯಸಾಚಿ (೧೯೯೫)

ಸವ್ಯಸಾಚಿ ಚಲನಚಿತ್ರದ ಹಾಡುಗಳು
  1. ಚಂಗುಲಾಬಿ ತೋಟದಲ್ಲಿ  
  2. ರಾಜರಾಣಿ ನಾವಿ ಲೋಕಕೆ 
  3. ನಾಗರ ಹಾವೇ 
  4. ಈ ಹೃದಯದ ಹಾಡು 
  5. ನಮ್ಮ ಮಧುಚಂದ್ರ 
ಸವ್ಯಸಾಚಿ (೧೯೯೫) - ಚಂಗುಲಾಬಿ ತೋಟದಲಿ 
ಸಂಗೀತ : ಸಾಧುಕೋಕಿಲ ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ. ಚಿತ್ರಾ 

ಹೆಣ್ಣು : ಬಾ...ಬಾ...ಬಾಬಾಬಾ 
          ಚೆಂಗುಲಾಬಿ ತೋಟದಲ್ಲಿ ಈ ಪ್ರೇಮದಾಟದಲ್ಲಿ ಈಗ ನನ್ನ ಜೋಡಿ ಆಗು ಬಾರೋ  
          ಹಾದಿಯಲ್ಲಿ ಬೀದಿಯಲ್ಲಿ ಮಾರುಕಟ್ಟೆ ಸಂದಿಯಲ್ಲಿ ಕೂತು ನಿಂತು ಮಾತನಾಡು ಬಾರೋ 

ಹೆಣ್ಣು : ಮೋಜುಗಾರನೇ ನನ್ನ ಜೋಕಮಾರನೇ ಹೂವಿನಂಥ ಹೆಣ್ಣು ನಾನು ನಿನ್ನ ಮೇಲೆ ಕಣ್ಣು ಹಾಕಿದೆ 
          ಓ.. ಚೆನ್ನಿಗ ಪ್ರೀತಿಯಿಂದ ಅಪ್ಪಿಕೊಂಡು ನನ್ನಾ ನೀನು ಸೇರಬಾರದೇ 
ಗಂಡು : ಈ ಆಸೆ ಬೇಡ ನನ್ನಾ ಮುಟ್ಟಬೇಡ ಕಣ್ಣಿನಲ್ಲಿ ಸನ್ನೆ ಮಾಡಿ ಕಾಡಬೇಡ ಹೋಗು ಸುಮ್ಮನೇ 
ಹೆಣ್ಣು : ಹೀಗೆತಕೆ ಇನ್ನೂ ನಾಚಿಕೆ ತೋಳಲ್ಲಿ ಹೆಣ್ಣ ಬಳಸಿಮುತ್ತು ನೀಡು ಬಾ 
          ತಕಧಿಮಿ ತಕಧಿಮಿ ತಕಧಿಮಿ ತಾ 
          ಚೆಂಗುಲಾಬಿ ತೋಟದಲ್ಲಿ ಈ ಪ್ರೇಮದಾಟದಲ್ಲಿ ಈಗ ನನ್ನ ಜೋಡಿ ಆಗು ಬಾರೋ  
          ಹಾದಿಯಲ್ಲಿ ಬೀದಿಯಲ್ಲಿ ಮಾರುಕಟ್ಟೆ ಸಂದಿಯಲ್ಲಿ ಕೂತು ನಿಂತು ಮಾತನಾಡು ಬಾರೋ 

ಗಂಡು : ಪ್ರಾಯ ಬಂದ ಕಾಲದಲ್ಲಿ ದಾರಿ ತಪ್ಪಿ ಹೋಗಬೇಡವೇ ಓ.. ಚಂಚಲೇ 
            ಪ್ರೇಮ ತಂದ ಮೋಜಿನಲ್ಲಿ ತಾಳ ತಪ್ಪಿ ಜಾರಿ ಬೀಳುವೆ 
ಹೆಣ್ಣು : ನಾ ಬಲ್ಲೆ ಎಲ್ಲ ನನ್ನಾ ನಂಬು ನಲ್ಲಾ ನಿನ್ನ ಕಂಡು ಮೆಚ್ಚಿಕೊಡು 
          ಪ್ರೀತಿಯಿಂದ ಬಂದೆ ಇಲ್ಲಿಗೆ 
ಗಂಡು : ಬಾ ಕೋಮಲೆ ನನ್ನಾ ನೈದಿಲೆ ನಿನ್ನ ಪ್ರೇಮದಿಂದ ಮೋಡಿ ಹಾಕಿದೆ     
          ಚೆಂಗುಲಾಬಿ ತೋಟದಲ್ಲಿ ಈ ಪ್ರೇಮದಾಟದಲ್ಲಿ ಈಗ ನನ್ನ ಜೋಡಿ ಆಗು ಬಾರೋ  
          ಹಾದಿಯಲ್ಲಿ ಬೀದಿಯಲ್ಲಿ ಮಾರುಕಟ್ಟೆ ಸಂದಿಯಲ್ಲಿ ಕೂತು ನಿಂತು ಮಾತನಾಡು ಬಾರೋ 
------------------------------------------------------------------------------------------------------------

ಸವ್ಯಸಾಚಿ (೧೯೯೫) - ರಾಜರಾಣಿ ನಾವಿ ಲೋಕಕೆ 
ಸಂಗೀತ : ಸಾಧುಕೋಕಿಲ ಸಾಹಿತ್ಯ : ಹಂಸಲೇಖ  ಗಾಯನ : ಎಸ್.ಪಿ.ಬಿ. ಚಿತ್ರಾ 

ಗಂಡು : ರಾಜ ರಾಣಿ ನಾವೀ .. ಲೋಕಕೆ 
ಹೆಣ್ಣು : ಪ್ರೀತಿ ಪ್ರೇಮ ನಮ್ಮಿ ಊಟಕೆ 
ಗಂಡು : ಕನಸು ಕಣ್ಣು ಮನಸು ಹಣ್ಣು ಈ ಬೆಸುಗೆ ಸುಂದರ 
ಹೆಣ್ಣು : ಹಗಲು ರಾತ್ರಿ ಮೈಮನ ಪುತ್ರಿ ಇಡೀ ಮುತ್ತೇ ಉಂಗುರ 
ಗಂಡು : ಅಂತೂ ಇಂತೂ ಕೂಡುತ್ತ ಸರಸ ಮಾಡುತ್ತ ಹಾಡಾದೆವು 
ಹೆಣ್ಣು : ಅಂತೂ ಇಂತೂ ಕೂಡುತ್ತ ಸರಸ ಮಾಡುತ್ತ ಹಾಡಾದೆವು 
ಗಂಡು : ರಾಜ ರಾಣಿ ನಾವೀ ಲೋಕಕೆ 

ಗಂಡು : ಪ್ರಾಯ ಅಡಿಪಾಯ ಪ್ರಣಯದ ಮನೆಗೆ 
ಹೆಣ್ಣು : ಆಸೆ ಪ್ರಿಯ ಭಾಷೆ ವಿರಹದ ಎದೆಗೆ 
ಗಂಡು : ಸಾಗರ ಮೇಲೆ ಅಂಬರ ಹಾರಿದೆ ಹಕ್ಕಿ ನಾ 
ಹೆಣ್ಣು : ತೀರದ ಮೇಲೆ ಕೂಗಿದ ಪ್ರೇಮಿಗೆ ಸಿಕ್ಕೇ ನಾ 
ಗಂಡು : ನೋಡು ಎಲ್ಲೆಲ್ಲೂ ಮಳೆಯ ಹೂ ಬಿಲ್ಲು ಹೃದಯದಾಕಾಶದಲೀ  
ಗಂಡು : ಕನಸು ಕಣ್ಣು ಮನಸು ಹಣ್ಣು ಈ ಬೆಸುಗೆ ಸುಂದರ 
ಹೆಣ್ಣು : ಹಗಲು ರಾತ್ರಿ ಮೈಮನ ಪುತ್ರಿ ಇಡೀ ಮುತ್ತೇ ಉಂಗುರ 
ಗಂಡು : ಅಂತೂ ಇಂತೂ ಕೂಡುತ್ತ ಸರಸ ಮಾಡುತ್ತ ಹಾಡಾದೆವು 
ಹೆಣ್ಣು : ಅಂತೂ ಇಂತೂ ಕೂಡುತ್ತ ಸರಸ ಮಾಡುತ್ತ ಹಾಡಾದೆವು 
ಗಂಡು : ರಾಜ ರಾಣಿ ನಾವೀ ಲೋಕಕೆ 

ಹೆಣ್ಣು : ಬಾರಾ ಮಧುಸಾರ ಉಣಿಸುವೆ ನಿನಗೆ 
ಗಂಡು : ಹಾರ ಆಹಾರ ಚೆಲುವಿದು ನನಗೆ 
ಹೆಣ್ಣು : ಆಂಕುರ ಮೋಹದಂಕುರ ಎದೆಯಲಿ\ಡಂಗುರ 
ಗಂಡು : ಇಂಚರ ಪ್ರೇಮದಿಂಚರ ನುಡಿಸಿದೆ ಸುಸ್ವರ 
ಹೆಣ್ಣು : ಕೇಳು ಎಲ್ಲೆಲ್ಲೂ ಕೋಮಲ ಸೊಲ್ಲು ತನುವ ತಂಬೂರದಿ 
ಗಂಡು : ರಾಜ ರಾಣಿ ನಾವೀ .. ಲೋಕಕೆ 
ಹೆಣ್ಣು : ಪ್ರೀತಿ ಪ್ರೇಮ ನಮ್ಮಿ ಊಟಕೆ 
ಗಂಡು : ಕನಸು ಕಣ್ಣು ಮನಸು ಹಣ್ಣು ಈ ಬೆಸುಗೆ ಸುಂದರ 
ಹೆಣ್ಣು : ಹಗಲು ರಾತ್ರಿ ಮೈಮನ ಪುತ್ರಿ ಇಡೀ ಮುತ್ತೇ ಉಂಗುರ 
ಗಂಡು : ಅಂತೂ ಇಂತೂ ಕೂಡುತ್ತ ಸರಸ ಮಾಡುತ್ತ ಹಾಡಾದೆವು 
ಹೆಣ್ಣು : ಅಂತೂ ಇಂತೂ ಕೂಡುತ್ತ ಸರಸ ಮಾಡುತ್ತ ಹಾಡಾದೆವು 
ಗಂಡು : ರಾಜ ರಾಣಿ ನಾವೀ ಲೋಕಕೆ 
-------------------------------------------------------------------------------------------------------------

ಸವ್ಯಸಾಚಿ (೧೯೯೫) - ನಾಗರ ಹಾವೇ 
ಸಂಗೀತ : ಸಾಧುಕೋಕಿಲ ಸಾಹಿತ್ಯ : ಹಂಸಲೇಖ  ಗಾಯನ : ಎಸ್.ಪಿ.ಬಿ. ಚಿತ್ರಾ, ಮಂಗಳ, ರಾಜೇಶ   

ಗಂಡು : ನಾಗರ... ಹಾವೇ... ನೀನು ಎಲ್ಲಿಗೆ ಓಡುವೇ 
           ನಾಗರ... ಹಾವೇ ನನ್ನ ಹಾಡಿಗೆ ಆಡುವೇ 
           ಹೂವೇ ಹೂವೇ ಹೂವೇ ನೀ ನಾಳೆ ನೋಡಲಾರೆ 
           ಹೇ.. ಹೂವೇ ಹೂವೇ ಹೂವೇ ನೀ ಮತ್ತೆ ಅರಳಲಾರೆ 
           ಮುಳ್ಳಲಿರೋ ಹೂವಾದೆ ನೀ ಹೂವಂತಿರು ಹಾವಾದೇ 
           ಛೂ ಮಂತ್ರಕೆ ಮರುಳಾದೆ ನೀ ಬಂಚಕ್ ಬಂಚಕ್ ಬಂಚ ಬಂ 
ಕೋರಸ್ : ರೂರುರು ರೂರುರು ರೂರುರು ಧೀರ್ ಧೀರ್ 
ಗಂಡು : ನಾಗರ... ಹಾವೇ... ನೀನು ಎಲ್ಲಿಗೆ ಓಡುವೇ 
           ನಾಗರ... ಹಾವೇ ನನ್ನ ಹಾಡಿಗೆ ಆಡುವೇ 

ಹೆಣ್ಣು : ನೊಂದ ಹೆಣ್ಣು ಬಂದಾಗ ಪ್ರೀತಿಗಾಗಿ ನಿಂದಾಗ ಏನೆಂಬೆ 
ಗಂಡು : ಪ್ರೀತಿ ನಿಮ್ಮ ಆಧಾರ ರೋಷ ನಮ್ಮ ವ್ಯಾಪಾರ ಹೋಗೆಂದೇ 
ಹೆಣ್ಣು : ಬೀಸೋ ಬಲೆ ಇರುವಲ್ಲಿ ನೂರು ಕಣ್ಣು ಬೇಕಿನ್ನು ಓ ಹೆಣ್ಣೇ 
ಗಂಡು : ಅಯ್ಯೋ ಪಾಪ ಕಣ್ಣಲ್ಲಿ ಕಾಣಲಾರೇ ನೀನಿಲ್ಲಿ ಓ.. ಹೆಣ್ಣೇ 
ಹೆಣ್ಣು : ಓ ದೈವ   ಕರುಣಾಳು ಬೆಳಕಾಗಿ ಬಾ 
          ಈ ಬಂಧನ ನಿರ್ಬಂಧನ ನಿನಗೇನು ದೊಡ್ಡದಲ್ಲ 
ಗಂಡು : ನಾಗರ... ಹಾವೇ... ನೀನು ಎಲ್ಲಿಗೆ ಓಡುವೇ 
           ನಾಗರ... ಹಾವೇ ನನ್ನ ಹಾಡಿಗೆ ಆಡುವೇ 

ಹೆಣ್ಣು : ಸತ್ಯಕೆಂದು ಸಾವಿಲ್ಲ ನ್ಯಾಯಕ್ಕೆಂದು ಸೋಲಿಲ್ಲ ಓ.. ಜಗವೇ .. 
ಗಂಡು : ಹೇ... ಯುದ್ಧದಲ್ಲಿ ದಯೆ ಇಲ್ಲ ಸೋಲು ನಿಮಗೆ ಹಿತವಲ್ಲ ಓ.. ಜಗವೇ 
ಹೆಣ್ಣು : ಪಕ್ಷಿಯಂತೆ ಇವಳ ಪ್ರಾಣ ಹಾರಿಹೋಗಲಿ ಜಾಣ ಬಿಡು ಬಾಣ 
ಗಂಡು : ಮುಟ್ಟಿದರೆ ಮಣ್ಣಾಗೋ ಹೆಣ್ಣಿಗೇಕೆ ವಿಷಬಾಣ ಕಾಜಾಣ 
ಹೆಣ್ಣು : ಓ.. ಪ್ರೇಮ ಕಾಪಾಡೋ ವರವಾಗಿ ಬಾ 
          ಈ ಜೀವನ ಸಂಜೀವನ ನಿನ್ನಿಂದ ದೂರವಿಲ್ಲ 
ಗಂಡು : ನಾಗರ... ಹಾವೇ... ನೀನು ಎಲ್ಲಿಗೆ ಓಡುವೇ 
           ನಾಗರ... ಹಾವೇ ನನ್ನ ಹಾಡಿಗೆ ಆಡುವೇ 
           ಹೂವೇ ಹೂವೇ ಹೂವೇ ನೀ ನಾಳೆ ನೋಡಲಾರೆ 
           ಹೇ.. ಹೂವೇ ಹೂವೇ ಹೂವೇ ನೀ ಮತ್ತೆ ಅರಳಲಾರೆ 
           ಮುಳ್ಳಲಿರೋ ಹೂವಾದೆ ನೀ ಹೂವಂತಿರು ಹಾವಾದೇ 
           ಛೂ ಮಂತ್ರಕೆ ಮರುಳಾದೆ ನೀ ಬಂಚಕ್ ಬಂಚಕ್ ಬಂಚ ಬಂ 
ಕೋರಸ್ : ರೂರುರು ರೂರುರು ರೂರುರು ಧೀರ್ ಧೀರ್ 
ಗಂಡು : ನಾಗರ... ಹಾವೇ... ನೀನು ಎಲ್ಲಿಗೆ ಓಡುವೇ 
           ನಾಗರ... ಹಾವೇ ನನ್ನ ಹಾಡಿಗೆ ಆಡುವೇ 
--------------------------------------------------------------------------------------------------------------

ಸವ್ಯಸಾಚಿ (೧೯೯೫) - ಈ ಹೃದಯದ ಹಾಡು 
ಸಂಗೀತ : ಸಾಧುಕೋಕಿಲ ಸಾಹಿತ್ಯ : ಎಂ.ಏನ್.ವ್ಯಾಸರಾವ್  ಗಾಯನ : ಮಂಜುಳಗುರುರಾಜ 

ಹೇ.. ತನನನ ನಾನಾ ತಾನನ ತಾಣ ತಾನಾನಾ ಲಾ ಲಾ ಲಾಏ ಲಲಲಾ 
ಈ ಹೃದಯದ ಹಾಡು ಪ್ರೀತಿಸುವ ಕಾತರವ ಚಿಮ್ಮುತಲಿ ನಿನ್ನ ಕೂಗುತಿದೆ... ಹೇಹೇಹೇಹೇಹೇಹೇ 
ನೋಟದಾ ಕುಡಿಯಂಚಿಗೆ ಏನೋ ಆವೇಗವು ಪ್ರೇಮಿಯ ಜೊತೆ ಕೂಡಲು ಏಕೆ ಈ ದಾಹವು ಹೇಹೇಹೇಹೇಹೇಹೇ 
ಈ ದೂರ ಇನ್ನೇಕೆ ಈ ಜೀವ ನಿಂದಾಗಿದೆ ತೂರೂರು ತೂರೂರು  ತುರು ತುರು ತುರು 
ಈ ಹೃದಯದ ಹಾಡು ಪ್ರೀತಿಸುವ ಕಾತರವ ಚಿಮ್ಮುತಲಿ ನಿನ್ನ ಕೂಗುತಿದೆ... ಹೇಹೇಹೇಹೇಹೇಹೇ 

ಜೀವನ ಹಂಗಿಲ್ಲದೇ ಬೇಟೆ ನೀನಾಡುವೇ 
ಬೇಟೆಯ ರುಚಿ ಬಲ್ಲೆನು ಅಂದೇ ಶರಣಾದೇನು... ಹೇಹೇಹೇಹೇಹೇಹೇ 
ಈ ಪ್ರೀತಿ ಈ ಮೋಹ ನೀ ತಂದ ಹಾಡಾಗಿದೆ.. ತೂರುರು..ತೂರುರು..ತುರು ತುರು ತುರು 
ಹೇ.. ತನನನ ನಾನಾ ತಾನನ ತಾಣ ತಾನಾನಾ ಲಾ ಲಾ ಲಾಏ ಲಲಲಾ 
ಈ ಹೃದಯದ ಹಾಡು ಪ್ರೀತಿಸುವ ಕಾತರವ ಚಿಮ್ಮುತಲಿ ನಿನ್ನ ಕೂಗುತಿದೆ... ಹೇಹೇಹೇಹೇಹೇಹೇ 
-------------------------------------------------------------------------------------------------------------

ಸವ್ಯಸಾಚಿ (೧೯೯೫) - ನಮ್ಮ ಮಧುಚಂದ್ರ 
ಸಂಗೀತ : ಸಾಧುಕೋಕಿಲ ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ. ಚಿತ್ರಾ 

ಇಬ್ಬರು : ನಮ್ಮ ಮಧುಚಂದ್ರ ಬಂದ ಸಮಯ ಎದೆಯ ಕಡಲಿಂದ ಪ್ರೀತಿ ಉದಯ 
             ಬಿಸಿ ಪ್ರಾಯದ ಪಿಸು ಮಾತಿಗೆ ನರನಾಡಿ ಎಲ್ಲ ಆಡಿ ಬಾಡಿ 
             ಛಳಕ್ಕು ಛಳಕ್ಕು ಜುಮ್ಮಕ್ಕೂ ಜುಮ್ಮಕ್ಕೂ ಲವ್ ಲವ್ ಲವ್ ಲವ್ ಲವ್ 
             ನಮ್ಮ ಮಧುಚಂದ್ರ ಬಂದ ಸಮಯ ಎದೆಯ ಕಡಲಿಂದ ಪ್ರೀತಿ ಉದಯ 

ಗಂಡು : ಬಾ ಏಳು ಸುತ್ತಿನ ದುಂಡು ಮಲ್ಲಿಗೆ ಮುತ್ತಿನ ಪೇಟೆಗೆ 
ಹೆಣ್ಣು : ಓ.. ತಾ ಏಳು ಮತ್ತಿನ ದಂಡ ಕೆನ್ನೆಗೆ ಆಗಲು ಜೋಡಿಗೆ 
ಗಂಡು : ನಾ ನಿನ್ನ ಕಂಗಳಲ್ಲಿ ಕೆನ್ನೆ ತುಟಿಗಳಲಿ ಸವಿದೆ ಪ್ರೇಮಿಗಳ ಕವಿತೆ 
ಹೆಣ್ಣು : ನಾ ನಿನ್ನ ಹೃದಯದಲಿ ಬಣ್ಣ ಕುಂಚದಲಿ ಬರೆದೆ ಪ್ರಣಯಗಳ ಚರಿತೆ 
ಗಂಡು : ಛಳಿಯಲ್ಲಿ ನಡುಗುತಲಿ ನಾನು 
ಹೆಣ್ಣು : ಬಿಸಿ ಬಿಸಿಯ ತಿನಿಸು ಬೇಕೇನು 
ಗಂಡು : ಸಿಹಿಯಾದ ಮುತ್ತು ಬಯಸೋ ಹೊತ್ತು ಎದೆಯ ಒಳಗೆ ಧಡಕ್ಕೂ ಧಡಕ್ಕೂ  
           ಲವ್ ಲವ್ ಲವ್ ಲವ್ ಲವ್ 
           ನಮ್ಮ ಮಧುಚಂದ್ರ ಬಂದ ಸಮಯ ಎದೆಯ ಕಡಲಿಂದ ಪ್ರೀತಿ ಉದಯ 

ಹೆಣ್ಣು : ನೂರಾರು ಆಸೆ ಬಾಷೇ ನೀ ತಂದೆ ಪಡೆಯಲು ನಾ ಬಂದೆ 
ಗಂಡು : ಓ... ಇಂಪಾದ ರಾಗ ಭಾವ ನೀ ತಂದೆ ಆಡಲು ನಾ ನಿಂದೆ 
ಹೆಣ್ಣು : ಈ ಸಂಜೆ ಹೊತ್ತಿನಲಿ ರಂಗು ತುಂಬಿರುವ ಸುಖವ ತಂದಿರುವೆ ನೀನು 
ಗಂಡು : ಈ ಕಣ್ಣು ರೆಪ್ಪೆಯಲಿ ಗೂಡು ಕಟ್ಟಿರುವ ಕನಸು ಅರಿತಿರುವೆ ನಾನು 
ಹೆಣ್ಣು : ಸವಿಯಾದ ಮಾತುಗಳ ಚತುರ 
ಗಂಡು : ಪ್ರಿಯೇ ನಿನ್ನ ಪ್ರೇಮ ಬಲು ಮಧುರ ಅರಿತು ಬೆರೆತು 
           ಮಿಡಿದ ಹೃದಯ ಚಮ್ಮಕ್ಕೂ ಚಮ್ಮಕ್ಕೂ ಲವ್ ಲವ್ ಲವ್ ಲವ್ ಲವ್ 
ಇಬ್ಬರು : ನಮ್ಮ ಮಧುಚಂದ್ರ ಬಂದ ಸಮಯ ಎದೆಯ ಕಡಲಿಂದ ಪ್ರೀತಿ ಉದಯ 
             ಬಿಸಿ ಪ್ರಾಯದ ಪಿಸು ಮಾತಿಗೆ ನರನಾಡಿ ಎಲ್ಲ ಆಡಿ ಬಾಡಿ 
             ಛಳಕ್ಕು ಛಳಕ್ಕು ಜುಮ್ಮಕ್ಕೂ ಜುಮ್ಮಕ್ಕೂ ಲವ್ ಲವ್ ಲವ್ ಲವ್ ಲವ್ 
             ನಮ್ಮ ಮಧುಚಂದ್ರ ಬಂದ ಸಮಯ ಎದೆಯ ಕಡಲಿಂದ ಪ್ರೀತಿ ಉದಯ 
-------------------------------------------------------------------------------------------------------------

No comments:

Post a Comment