1576. ಮಂಗಳವಾರ ರಜಾದಿನ (೨೦೨೧)

ಮಂಗಳವಾರ ರಜಾದಿನ ಚಲನಚಿತ್ರದ ಹಾಡುಗಳು 
  1. ನೀನೆ ಗುರು ನೀನೆ ಗುರಿ ನೀನೆ ಗುರುತು 
  2. ಗಿವಿಂಗ್ ಕೂಲೆ 
  3. ಮಂಗಳವಾರ ರಜಾದಿನ 
ಮಂಗಳವಾರ ರಜಾದಿನ (೨೦೨೧) - ನೀನೆ ಗುರು ನೀನೆ ಗುರಿ ನೀನೆ ಗುರುತು 
ಸಂಗೀತ : ರಿತ್ವಿಕ್ ಮುರಳೀಧರ, ಸಾಹಿತ್ಯ : ಗೌಸ ಪೀರ್ ಗಾಯನ : ಪುನಿತರಾಜಕುಮಾರ  

ನೀನೆ ಗುರು ನೀನೆ ಗುರಿ ನೀನೆ ಗುರುತು ಏನಿಲ್ಲಾ ನಿನ್ನ ಹೊರತು
ನೀನೆ ಬಲ ನೀನೆ ಛಲ ನೀನೆ ಸಕಲ ಉಸಿರಲ್ಲಿ ಇರುವೆ ಬೆರೆತು
ಮುಕ್ಕೋಟಿ ದೇವರು ಒಟ್ಟಾಗಿ ಬಂದರೂ ಸಮವಲ್ಲ ಅಪ್ಪನ ಎದುರು... 
ನಾ ಎಷ್ಟೇ ಬೆಳೆದರೂ ನಾ ಹೇಗೆ ಮೆರೆದರೂ ಬೆನ್ನೆಲಬು ಅಪ್ಪನಾ ಬೆವರು
ಮುಗಿಲಂತೆ ಪೋಷಿಸೋ ಕಡಲಂತೆ ಪ್ರೀತಿಸೋ ಆ ಕಾಮಧೇನು ನೀ ಅಪ್ಪಾ... 
ನೆರಳನ್ನು ನೀಡುವ ಹಸಿವನ್ನೂ ನೀಗುವ ಆ ಕಲ್ಪವೃಕ್ಷ ನೀ ಅಪ್ಪಾ 

ಗುಣಗಾನ ಮಾಡಲು ನಿನ್ನ ಸಿಗೋ ಎಲ್ಲಾ ಪದಗಳು ಸಣ್ಣ  ಬಾಳೆಂಬ ರಥಕೆಂದೂ ನೀ ಸಾರಥಿ
ಹೆಗಲಲ್ಲಿ ಕೂರಿಸಿ ನನ್ನ ತೆರೆದಿಟ್ಟೆ ಲೋಕದ ಬಣ್ಣ ನನ್ನ ಜ್ಞಾನ ಭಂಡಾರಕೆ ನೀ ಸಾಹಿತಿ 
ನಿನ್ನ ಕನಸುಗಳು ಸಾಯಿಸಿ ನನ್ನ ಕನಸುಗಳ ಪೋಣಿಸಿ ಕಂಡೆ ಅದರಲ್ಲೇ ನೀ ಖುಷಿ ಅಪ್ಪಾ
ನೀನು ಮಾಡಿರುವ ತ್ಯಾಗಕ್ಕೆ ಏನು ನೀಡೋದು ಕಾಣಿಕೆ ನಿನಗೆ ನೀನೇನೆ ಹೋಲಿಕೆ ಅಪ್ಪಾ... 
ನೀನೆ ಗುರು ನೀನೆ ಗುರಿ ನೀನೆ ಗುರುತು ಏನಿಲ್ಲ ನಿನ್ನ ಹೊರತು 
ಕಡು ಕಷ್ಟ ಬಂದರೂ ಸ್ಥಿತಿ ಹೇಗೆ ಇದ್ದರೂ ಎದೆಯೊಡ್ಡಿ ನಿಲ್ಲುವ ಭೂಪಾ
ಪರಿವಾರ ತೂಗುತ ಪರಿಹಾರ ನೀಡುತ ಧೃವತಾರೆಯಂತಿರೋ ದೀಪಾ 
ದಣಿವನ್ನೇ ಕಾಣದ ಬಿಡುವನ್ನೇ ಕೇಳದ ಅಲೆಯಂತೆ ಎಂದೂ ನೀ ಅಪ್ಪಾ.
-------------------------------------------------------------------------------------------------------------------

ಮಂಗಳವಾರ ರಜಾದಿನ (೨೦೨೧) - ಗಿವಿಂಗ್ ಕೂಳೇ  
ಸಂಗೀತ : ರಿತ್ವಿಕ್ ಮುರಳೀಧರ, ಸಾಹಿತ್ಯ : ಯುವಿನ್ ಉದಯ ಲೀಲಾ  ಗಾಯನ : ನವೀನ ಸಜ್ಜು 

ಪಂ ಪಂ ಪಪಂ ಪಪಂ ಪಂ ಪಂ ಪಂ ಪಪಂ ಪಪಂ ಪಂ 
ಗೋಯಿಂಗ್ ಪೀಪಲ್ ಆನ್ ರೋಡ್ ಇಸ್ ಗಿವಿಂಗ್ ಕೂಳೆ 
ನಾವ್ ಏ ವೆಲ್ ಗಿವಿಂಗ್ ಕೂಳೆ 
ಗೋಯಿಂಗ್ ಪೀಪಲ್ ಆನ್ ರೋಡ್ ಇಸ್ ಗಿವಿಂಗ್ ಕೂಳೆ 
ನಾವ್ ಏ ವೆಲ್ ಗಿವಿಂಗ್ ಕೂಳೆ 
ಗಿವಿಂಗ್ ಕೂಳೆ ಟು ದ ಕೂಳೆ   ಗಿವಿಂಗ್ ಕೂಳೆ ಟು ದ ಕೂಳೆ 
ಗಿವಿಂಗ್ ಕೂಳೆ ಟು ದ ಕೂಳೆ   ಗಿವಿಂಗ್ ಕೂಳೆ ಟು ದ ಕೂಳೆ 

ಕೂಳೆ ಡ್ರಿಂಕಿಂಗ್ ಡೈಲಿ ಥ್ರೋಟ್ ಫುಲ್ ಆಯಿಲೂ 
ಹಿಸ್ ಲೈಫ್ ವಿಲ್ ಬಿ ನೌ ರೋಸ್ಟೆಡ್ ಹಾಫ್ ಬಾಯಿಲೂ 
ಮಚ್ಚಾ ಮಚ್ಚಾ  ಅದು ಹಾಫ್ ಬಾಯಿಲು ಅಲ್ಲ ಕಣೋ ಅರ್ಧಾ ತಾನೇ
ಲೋ ಎರಡೂ ಒಂದೇ ಕಣೋ ಓಕೆ 
ಕೂಳೆ ಡ್ರಿಂಕಿಂಗ್ ಡೈಲಿ ಥ್ರೋಟ್ ಫುಲ್ ಆಯಿಲೂ 
ಹಿಸ್ ಲೈಫ್ ವಿಲ್ ಬಿ ನೌ ರೋಸ್ಟೆಡ್ ಹಾಫ್ ಬಾಯಿಲೂ 
ಬಿಟ್ಟ ಬಿಡಿ ಕೂಳೆ ಅಣ್ಣನಾ ಪ್ಲೀಸ್  ಮುಗಿತೀವಿ ನಿಮಗೆ ಕೈಯ್ಯನಾ 
ಅಣ್ಣಾ ಅಣ್ಣಾ ಪ್ಲೀಸ್ ಬಿಟ್ಟಬಿಡಿ ಅಣ್ಣಾ 
ಬೀಡತೀವೋ  ನಿಮ್ಮಣ್ಣಗೇ ಸರಿಯಾಗಿ ಬಿಡ್ತಿವಿ ಓಕೆ ಅಣ್ಣಾ 
ಗಿವಿಂಗ್ ಕೂಳೆ ಟು ದ ಕೂಳೆ   ಗಿವಿಂಗ್ ಕೂಳೆ ಟು ದ ಕೂಳೆ 
ಗಿವಿಂಗ್ ಕೂಳೆ ಟು ದ ಕೂಳೆ   ಗಿವಿಂಗ್ ಕೂಳೆ ಟು ದ ಕೂಳೆ 
ಅಮ್ರಾ ತಾ ನಮ್ಮಕ್ಕನ್ ಉಪ್ಪಿನಕಾಯಿ 
ರಮ್ಯಕೃಷ್ಣನ್.. ಮೋರ್ಟಿನ್ ಹೆಡ್ ಸುಳ್ಳ ಹೇಳ್ದ 
ಹುಳಿನೂ ಹೊಡೀಬಹುದು ಟಿನ್ ಟಿನ್ ಟಿಡಿನ್ 
ಆಹ್ಹಾ... ಕೂಳೆ 
-------------------------------------------------------------------------------------------------------------------

ಮಂಗಳವಾರ ರಜಾದಿನ (೨೦೨೧) - ಮಂಗಳವಾರ ರಜಾದಿನ
ಸಂಗೀತ : ಪ್ರಜ್ವೋ ದಾಸ್, ಸಾಹಿತ್ಯ : ಯೋಗರಾಜ ಭಟ್ಟ ಗಾಯನ : ವಿಜಯಪ್ರಕಾಶ 

ಜುಟ್ಟು ಸೀಕ್ರೆ ಕಟ್ಟು ಮಾಡು ಕತ್ತರಿನೇ ದೇವರೂ 
ಸೋಪು ಹಾಕಿ ದಾಡಿ ಮಾಡು ವೃತ್ತಿ ನಮ್ಮ ದೇವರೂ 
ಫೂಲ್ಲೂ ಊರಿಗೂ ಊರೇ ನಮ್ಮ ಹತ್ರ ಬರಬೇಕು ನಮ್ಮ ಅಂಗಡಿಗೇನೇ ಬನ್ನಿ ಸಾರ್ 
ಸುಮ್ನೇ ಕೂತುಕೊಳ್ಳಿ ಕಣ್ಣು ಮುಚ್ಚಿ ಹಾಯಾಗಿ ಕಾಣುತೈತೆ ಸ್ವರ್ಗ ಕೈಲಾಸ 
ಹಲೋ ಕ್ಯಾನ್ ಐ ಮೀಟ್ ಯೂ ಟುಮಾರೋ 
ನಮಗೆ ಮಂಗಳವಾರ ರಜಾದಿನ ಸಿಗರೀ ಬ್ಯಾರೇ ದಿವಸ ಮಾತನಾಡೋಣ 
ನಮಗೆ ಮಂಗಳವಾರ ರಜಾದಿನ ಸಿಗರೀ ಬ್ಯಾರೇ ದಿವಸ ಮಾತನಾಡೋಣ 

(ಪ್ರಪಂಚಕೇ ಭಾನುವಾರ ರಜಾದಿನಾದರೇ ತಮಗೇ ಮಂಗಳವಾರ ರಜಾದಿನ 
ಏನ್ ಮಾಡ್ತಾ ಇದ್ದಿರೀ ಮಂಗಳವಾರದ ಹೊತ್ತು 
ಅಕ್ಕಪಕ್ಕದ ಮನೆ ಆಂಟಿಯರೆಲ್ಲಾ ನಮ್ಮ ಮನೆಗೆ ಬರತಾ ಇದ್ರೂ..  ಓ...
ನಾವ್ ಅವರ ಜೊತೆ ಸೇರಿಕೊಂಡು )

ತಲೆಯು ಕೆಟ್ಟ ಘಳಿಗೆಯಲ್ಲಿ ಟೇನ್ಷನ್  ಯಾಕೆ ಸ್ವಾಮಿ 
ಬುರುಡೆ ಸ್ವಲ್ಪ ನಮಗೆ ಕೊಡ್ರಿ ರೇಡಿ ಮಾಡ್ತೀವಿ 
ರೂಪಾವತಿಯರೇಲ್ಲಾ ಬನ್ನೀ ನಿಮ್ಮ ಬಂಧು ಬಳಗ ನಾವೇ 
ಅಮ್ಮ ಹಾಕಿದಷ್ಟೇ ಚಂದ ಜಡೆಯ ಕಟ್ಟತಿವೇ 
ವಾರ ತಿಂಗಳಿಗೊಮ್ಮೆ ನಾವು ಅನಿವಾರ್ಯ 
ಬರಲೇ ಬೇಕು ಏನೇ ಇದ್ರೂ ಘನಕಾರ್ಯ 
ವಾರ ತಿಂಗಳಿಗೊಮ್ಮೆ ನಾವು ಅನಿವಾರ್ಯ 
ಬರಲೇ ಬೇಕು ಏನೇ ಇದ್ರೂ ಘನಕಾರ್ಯ 
ರಾಜಾ ಇರಲೀ ದಾಸ ಇರಲೀ 
ಹೇ.. ರಾಜಾ ಇರಲೀ ದಾಸ ಇರಲೀ ಆಂಟಿ ಅಂಕಲ್ ಇಬ್ಬರೂ ಬರಲೀ 
ಎಲ್ಲರ ಜುಟ್ಟೂ ನಮ್ಮ ಕೈಯಲ್ಲಿದೇ  ಇಲ್ಲಿ ಎಲ್ಲರ ಜುಟ್ಟು ನಮ್ಮ ಕೈಯ್ಯಲ್ಲಿದೇ 
ಹೇ... ತಿಥಿ ಮದುವೆ ಮುಂಜಿವೇ ಇರಲೀ ಲವ್ವು ಸತ್ತು ಗಡ್ಡ ಬರಲೀ 
ಬಳಿಗೆ ಬಾರದಿದ್ರೆ ಮುಕ್ತಿ ಎಲ್ಲಿದೇ  ನಮ್ಮ ಬಳಿಗೆ ಬಾರದಿದ್ರೆ ಮುಕ್ತಿ ಎಲ್ಲಿದೇ 
ನೆತ್ತಿಯೆಲ್ಲಿದೆ ಬನ್ನಿ ಆಂಗಡಿ ಇಲ್ಲಿದೆ 
ಜುಟ್ಟು ಸೀಕ್ರೆ ಕಟ್ಟು ಮಾಡು ಕತ್ತರಿನೇ ದೇವರೂ 
ಸೋಪು ಹಾಕಿ ದಾಡಿ ಮಾಡು ವೃತ್ತಿ ನಮ್ಮ ದೇವರೂ 
ಫೂಲ್ಲೂ ಊರಿಗೇ ಊರೇ ನಮ್ಮ ಹತ್ರ ಬರಬೇಕು ನಮ್ಮ ಅಂಗಡಿಗೇನೇ ಬನ್ನಿ ಸಾರ್ 
ಸುಮ್ನೇ ಕೂತುಕೊಳ್ಳಿ ಕಣ್ಣು ಮುಚ್ಚಿ ಹಾಯಾಗಿ ಕಾಣುತೈತೆ ಸ್ವರ್ಗ ಕೈಲಾಸ 
( ಅಣ್ಣ ನಾಳೇ ಬಂದ್ರೇ ಸ್ವಲ್ಪ ಶೇವ್ ಮಾಡ್ತೀಯಾ )
ನಮಗೆ ಮಂಗಳವಾರ ರಜಾದಿನ ಸಿಗರೀ ಬೇರೆ ದಿವಸ ಮಾತನಾಡೋಣ 
ನಮಗೆ ಮಂಗಳವಾರ ರಜಾದಿನ ಸಿಗರೀ ಬೇರೆ ದಿವಸ ಮಾತನಾಡೋಣ 
ನಮಗೆ ಮಂಗಳವಾರ ರಜಾದಿನ ಸಿಗರೀ ಬೇರೆ ದಿವಸ ಮಾತನಾಡೋಣ 
ನಮಗೆ ಮಂಗಳವಾರ ರಜಾದಿನ ಸಿಗರೀ ಬೇರೆ ದಿವಸ ಮಾತನಾಡೋಣ 
-------------------------------------------------------------------------------------------------------------------

No comments:

Post a Comment