ಕನಸು ಮಾರಾಟಕ್ಕಿದೆ ಚಲನಚಿತ್ರದ ಹಾಡುಗಳು
- ಕಲ ಕಲ ಕಲ ಕನಸ ಬೆನ್ನೇರಿ
- ಪುಂಡಿ ಎಂದರೆ ಬದುಕಿ
- ನಿನ್ನ ನೋಡಿ ಬರೆದೆ ಒಂದು ಕವನ
ಕನಸು ಮಾರಾಟಕ್ಕಿದೆ (೨೦೨೧) - ಕಲ ಕಲ ಕಲ ಕನಸ ಬೆನ್ನೇರಿ
ಸಂಗೀತ : ಮಾನಸ ಹೊಳ್ಳ, ಸಾಹಿತ್ಯ : ನಾಗೇಂದ್ರಪ್ರಸಾದ್ ಗಾಯನ : ವಿಜಯ ಪ್ರಕಾಶ
ಕಲ ಕಲ ಕಲ ಕನಸ ಬೆನ್ನೇರಿ ಹುಡುಕಿರುವೆನು ಹೊಸ ನಗರಿ
ಪಯಣ ಸಾಗುತಿದೆ ಖುಷಿಯ ನೀಡುತಿದೆಹೊಸ ಮೋಡದ ಕೆಳಗೆ ನಾನು ಹೊಸ ದಾರಿಯ ಗಮನ ಇನ್ನು
ಕಲ ಕಲ ಕಲ ಕನಸ ಬೆನ್ನೇರಿ ಹೊರಟಿರುವೆನು ಹೃದಯ ಸವರಿ
ಈ ಸೌಂದರ್ಯದ ಈ ಸೌಗಂಧದ ಈ ಸಮ್ಮೇಳಕೆ ನಾ ಸೋತೆ
ಈ ಶ್ರೀಮಂತದ ಈ ಜೀವಂತದ ಈ ಮಣ್ಣಲ್ಲಿನ ಕೂಸಂತೆ
ಹಗುರಾದೆ ನಾ ಗರಿಯ ಹಾಗೆ ದನಿಯಾದೆನಾ ನಾ ಝರಿಯ ಹಾಗೆ
ಕಲ ಕಲ ಕಲ ಕನಸ ಬೆನ್ನೇರಿ ಹೊರಟಿರೊ ಈ ಬದುಕೇ ಅಂಬಾರಿ
ಈ ಶ್ರೀಮಂತದ ಈ ಜೀವಂತದ ಈ ಮಣ್ಣಲ್ಲಿನ ಕೂಸಂತೆ
ಹಗುರಾದೆ ನಾ ಗರಿಯ ಹಾಗೆ ದನಿಯಾದೆನಾ ನಾ ಝರಿಯ ಹಾಗೆ
ಕಲ ಕಲ ಕಲ ಕನಸ ಬೆನ್ನೇರಿ ಹೊರಟಿರೊ ಈ ಬದುಕೇ ಅಂಬಾರಿ
ಈ ತಂಗಾಳಿಯ ಈ ಜೋಲಾಲಿಯು ಈ ಕಾಡಂಚಿನ ಝೇಂಕಾರ
ಈ ಸದ್ದಿಲ್ಲದ ಈ ಹೆದ್ದಾರಿಗೆ ಈ ಸಾಲು ಮರ ಸಿಂಗಾರ
ವರವಾಗಲಿ ಹುಡುಕೊ ಜಾಡು ಚಿರವಾಗಲಿ ಎದೆಯ ಹಾಡು
ಕಲ ಕಲ ಕನಸ ಬೆನ್ನೇರಿ ಹೊರಟಿರುವೆನು ಹೃದಯ ಸವರಿ
ಪಯಣ ಸಾಗುತಿದೆ ಖುಷಿಯ ನೀಡುತಿದೆ
ಹೊಸ ಮೋಡದ ಕೆಳಗೆ ನಾನು ಹೊಸ ದಾರಿಯ ಗಮನ ಇನ್ನು
ಕಲ ಕಲ ಕಲ ಕಲ ಕನಸ ಬೆನ್ನೇರಿ ಹೊರಟಿರೋ ಈ ಬದುಕೇ ಅಂಬಾರಿ
--------------------------------------------------------------------------------------------------------------
ಈ ಸದ್ದಿಲ್ಲದ ಈ ಹೆದ್ದಾರಿಗೆ ಈ ಸಾಲು ಮರ ಸಿಂಗಾರ
ವರವಾಗಲಿ ಹುಡುಕೊ ಜಾಡು ಚಿರವಾಗಲಿ ಎದೆಯ ಹಾಡು
ಕಲ ಕಲ ಕನಸ ಬೆನ್ನೇರಿ ಹೊರಟಿರುವೆನು ಹೃದಯ ಸವರಿ
ಪಯಣ ಸಾಗುತಿದೆ ಖುಷಿಯ ನೀಡುತಿದೆ
ಹೊಸ ಮೋಡದ ಕೆಳಗೆ ನಾನು ಹೊಸ ದಾರಿಯ ಗಮನ ಇನ್ನು
ಕಲ ಕಲ ಕಲ ಕಲ ಕನಸ ಬೆನ್ನೇರಿ ಹೊರಟಿರೋ ಈ ಬದುಕೇ ಅಂಬಾರಿ
--------------------------------------------------------------------------------------------------------------
ಕನಸು ಮಾರಾಟಕ್ಕಿದೆ (೨೦೨೧) - ಪುಂಡಿ ಎಂದರೆ ಬದುಕಿ
ಸಂಗೀತ : ಮಾನಸ ಹೊಳ್ಳ, ಸಾಹಿತ್ಯ : ಸುಖೇಶ್ ಶೆಟ್ಟಿ ಗಾಯನ : ಶಶಾಂಕ ಶೇಷಗಿರಿ, ಶ್ರೀಹರ್ಷ, ಶುಭ ರಾಘವೇಂದ್ರ
ಪುಂಡಿ ಎಂದರೆ ಬದುಕಿ ಬಾಳಬೇಕಾದ ನವಯುವಕರ
ಕಾಡುವ ಮಾರಕ ಕಾಯಿಲೇ ...
ಹಾದಿಬೀದಿಲು ಹಗಲು ರಾತ್ರಿಲೂ ತಪ್ಪೋದಿಲ್ಲ ಫೋನೂ
ಕಂಬಿ ಇಲ್ದೇನೇ ಬಿಡ್ತಾರಲ್ಲಾ ಕಲರ್ ಕಲರ್ ಟ್ರೈನು
ಡೇ ಏಂಡ್ ನೈಟು ಡೈಲಿ ಚ್ಯಾಟೂ ಹಾಯ್ ಹಲೋ ಜಾನೂ ..
ಗಂಟೆ ಗಂಟ್ಲೆ ಮಾತಾಡಿದ್ರೂ ಕೇಳ್ತಾರೆ ಮತ್ತೀನೇನೋ ...
ಪುಂಡಿ ಇಲ್ಲದೇ ಪಯಣವು ಸಾಗದು
ಪುಂಡಿ ಇಲ್ಲದೇ ಪ್ರೇಮವೂ ಉಳಿಯದು
ಪುಂಡಿ ಪುಂಡಿ ಪುಂಡಿ ಪುಂಡಿ
ಪುಂಡಿ ಪುಂಡಿ ಪುಂಡಿ ಪುಂಡಿ
ಏನು ಅಂತಾ ಹೇಳೋದು ಹಲೋ ಎಸ್ಕ್ಯೂಸ್ ಮೀ
ಈ ಫೋನಿಗಿಂತ ಒಳ್ಳೆ ಫ್ರೆಂಡು ನಮಗಿಲ್ಲ ಸ್ವಾಮಿ
ದಿನಕ್ ಇಪ್ಪತ್ತನಾಲ್ಕು ಘಂಟೆ ಸಾಲೋದಿಲ್ಲ ಸ್ವಾಮೀ
ಈ ಹಾಳಾದ ನೆಟ್ಟು ಫ್ರೀಯಾಗ್ ಕೊಟ್ಟು ಹಾಳಾಗ ಬಿಟ್ಟ ಪ್ರೇಮಿ
ಒಂದಾನೊಂದ ಕಾಲದಲ್ಲಿ ಒಬ್ಬ ರಾಜನಿದ್ದ ಇದ್ದ ಹಿಂಗೇ ಫೇಸ್ ಬುಕ್ಕಲೀ ..
ತೀರಾಗಾಡೋಕೆ ಹೋದಾಗ ಎಲ್ಲೋದ ಗುರೂ ..
ಒಬ್ಬಳು ಸುಂದ್ರಿನ್ ನೋಡ್ದ್ ಆಮೇಲ್ ಏನಾಯ್ತು ಬ್ರೋ
ಅವಳ ಪ್ರೊಫೈಲ್ ನೋಡ್ ಬಿಟ್ಟೂ ಅಯ್ಯೋ.. ಹಹ್ಹಹ್
ಫೇಸ್ ಬುಕನಲ್ಲಿ ರಿಕ್ವೆಸ್ಟ್ ಕೊಟ್ಟನು ವಾಟ್ಸಪ್ ನಂಬರು ಕೇಳಿಯೇ ಬಿಟ್ಟನು
ಅವಳ ಡೇಟಾ ಖಾಲಿಯಾದರೇ ರಿಚಾರ್ಜ್ ಮಾಡಿಸಿ ರೋಮಿಯೋ ಆದನು
ವ್ಹಾ ಆಗೇ ಬಿಟ್ಟಾ...
ಅವಳು ಫೋನ್ ಬಿಲ್ಲಿಗೇ ರಾಜ್ಯವಿಟ್ಟ ಸೇಲಿಗೆ
ರಾಜ್ಯ ಬಿಟ್ಟ ರಾಜನ ಬಿಟ್ಟು ಹೋದ್ಳು ಮೆಲ್ಲಗೇ ...
ಸೋ ... ಸ್ಯಾಡ್ ಮಚ್ಚಾ..
ಪುಂಡಿ ಪುಂಡಿ ಪುಂಡಿ ಪುಂಡಿ
ಪುಂಡಿ ಪುಂಡಿ ಪುಂಡಿ ಪುಂಡಿ
ಬ್ರದರ್ ಎಲ್ಲಾ ಓಕೇ ಈಗ ಫೋನ್ ಎಲ್ಲಾರ್ ಹತ್ರ ಇರಲ್ಲಾ
ಈ ಫೋನ್ ಇಲ್ಲದೇ ಇರೋರ್ ಹೆಂಗ್ ಪುಂಡಿ ತೇಗಿಸ್ತಾರೆ
ಓ ಓ ಓ ಓ ಓ ಓ ಓ ಓ ಓ
ಫೋನ್ ಇಲ್ಲದ ಹುಡುಗುರ ಕಥೆ ಕೇಳೇ ಬೇಡ ಬ್ರದರೂ ಅವರ ಮನೇಲಿರೋ ಫೋನಲ್ಲಿ ಕದ್ದು ಮುಚ್ಚಿ ಪುಂಡಿ ಬೇಯಿಸಿದ್ರೂ
ಅನನೌನ್ ಮೆಸೇಜಿಗೂ ರಿಪ್ಲೈ ಹಾಯ್ ಮೈ ಡಿಯರೂ
ಗರ್ಲ್ ಫ್ರೆಂಡ ಕಾಂಟಾಕ್ಟ್ ನಂಬರ... ಗೂ
ಯಾರೋ ಹುಡುಗನ ಹೆಸರೂ ಇನ್ಸ್ಟಾದಲ್ಲಿ ಕಾಲ್ ಆ ಕೊಟ್ಟು
ಕಾಳು ಹಾಕೋ ಟ್ರಿಕ್ಸೂ ಇವನ್ ಮೆಸೇಜಿಗೇ ಅವ್ಳು ರಿಪ್ಲೈ ಕೊಟ್ರೇ
ಪುಂಡಿ ಬೇಯಿಸೋದು ಫಿಕ್ಸೂ
ಪುಂಡಿ ಪುಂಡಿ ಪುಂಡಿ ಪುಂಡಿ ಪುಂಡಿ ಪುಂಡಿ ಪುಂಡಿ ಪುಂಡಿ
ಪುಂಡಿ ಪುಂಡಿ ಪುಂಡಿ ಪುಂಡಿ ಪುಂಡಿ ಪುಂಡಿ ಪುಂಡಿ ಪುಂಡಿ
ಈ ಪುಂಡಿಲ್ ಬಿದ್ದ ಹುಡುಗುರೆಲ್ಲಾ ಇಡೀ ಲೊಕಾನ್ ಮರೆತುಹೋಗ್ತಾರೋ
ಅಯ್ಯೋ ದೇವರೇ... ಈ ಹುಡುಗುರನ ಯಾರ್ ಕಾಪಾಡವರೂ
--------------------------------------------------------------------------------------------------------------ಕನಸು ಮಾರಾಟಕ್ಕಿದೆ (೨೦೨೧) - ನಿನ್ನ ನೋಡಿ ಬರೆದೆ ಒಂದು ಕವನ
ಸಂಗೀತ : ಮಾನಸ ಹೊಳ್ಳ, ಸಾಹಿತ್ಯ : ಚೇತನಕುಮಾರ ಗಾಯನ : ರಾಜೇಶ ಕೃಷ್ಣನ್ ಮಾನಸ ಹೊಳ್ಳ
ನಿನ್ನ ನೋಡಿ ಬರೆದೆ ಒಂದು ಕವನ
ಮನಸ್ಸಿನೊಳಗೇ ಪ್ರೀತಿ ಈಗ ಜನನ
ನಿನ್ನ ನೋಡಿ ಬರೆದೆ ಒಂದು ಕವನ... ಕವನ
ಮನಸ್ಸಿನೊಳಗೇ ಪ್ರೀತಿ ಈಗ ಜನನ... ಜನನ
ನನ್ನ ಒಳಗೆ ಏನೋ ಹೊಸತು ಚಲನ... ಚಲನ
ನಿನಗೆ ನನ್ನ ಧನ್ಯವಾದ ತರುಣ.. ತರುಣ
ಸನಿಹ ಬರಲು ಸೆಳೆವ ಒಲವೇ ಜೊತೆಗೆ ಇರಲು ಮಧುರ ಕ್ಷಣವೇ
ಇವನು ನಗಲೂ ಒಳಗೆ ದಿಗಿಲೇ ಎದುರು ಸಿಗಲು ಏನೋ ಆಮೇಲೇ
ಇದುವೇ ನಿಜವೇ ಒಲವೇ ...
ಅರೇ ಅರೇ ಅರೇ ಅದುರಿದೆ ಈ ಹೃದಯ... ಹೃದಯಾ
ಸರಿಗಮವನು ಕಲಿಸಿದೆ ಈ ಹರೆಯ... ಹರೆಯಾ..
ಅರೇ ಅರೇ ಅರೇ ಅದುರಿದೆ ಈ ಹೃದಯ... ಹೃದಯಾ
ಸರಿಗಮವನು ಕಲಿಸಿದೆ ಈ ಹರೆಯ... ಹರೆಯಾ..
ಆ ಆ ಆ ಆ ಅ ಆ ಆ ಆ
ಕನಸಿಗೆ ನಿನ್ನ ಪರಿಚಯ ಆದಮೇಲೆ ನಂಗೇ ಯಾಕೋ ಭಯ ತಂದಿರುವೆ ಪ್ರೀತಿಯ ಮಳೆಯ ... ಓಓಓಓಓ
ಮನಸಲಿ ಏನೋ ಅತಿಶಯ ಜೊತೆಲಿರೆ ನೀನು ನಂಗೆ ಜಯ
ಪ್ರತಿಸಲ ಕುಣಿದಿದೆ ಹೃದಯ ಸನಿಹ ಬರೆಯ ಸೆಳೆವ ಒಲವೇ
ಜೊತೆಗೆ ಇರಲು ಜಗವ ಮರೆವೆ ನನ್ನ ಒಳಗೆ ಉಸಿರ ತರುವೆ
ನೀನು ಇರಲು ನಂಗೆ ಬಲವೇ ನಿಜವೇ ಇದುವೇ ಒಲವೇ
ಅರೇ ಅರೇ ಅರೇ ಅದುರಿದೆ ಈ ಹೃದಯ... ಹೃದಯಾ
ಸರಿಗಮವನು ಕಲಿಸಿದೆ ಈ ಹರೆಯ... ಹರೆಯಾ..
ಅರೇ ಅರೇ ಅರೇ ಅದುರಿದೆ ಈ ಹೃದಯ... ಹೃದಯಾ
ಸರಿಗಮವನು ಕಲಿಸಿದೆ ಈ ಹರೆಯ... ಹರೆಯಾ..
ಗಮಗರೆಸ ಗಮಗರೆಸರಿಸ ಗಮಗರೆಸ ರಿಸಗಗಮಗಮ
ಗಮಗರೆಸ ಗಮಗರೆಸರಿಸ ಪನಿನಿಸಸಗ ಗಮಗಗರಿನಿಸ
ಹ್ಹಾಂ .... ಮರೆತೆನು ನಾನು ತರಗತಿ ಕೋಡುವೆಯಾ ನೀನು ಅನುಮತಿ
ಹಿಂಬಾಲಿಸಿ ಬರುವೆನು ಬಯಸಿ ಮೀರಿದಂತೆ ಆಯ್ತು ಈಗ ಮಿತಿ
ಸರಿ ಇಲ್ಲ ಯಾಕೋ ಪರಿಸ್ಥಿತಿ ಪ್ರೀತಿ ಜ್ವರ ತಂದೆ ನೀನು ಅತಿಥಿ
ಕನಸೋ ನನಸೋ ಇಲ್ಲ ಸೊಗಸೋ ನನ್ನ ನುಡಿಸು ನನ್ನ ನಡೆಸು ಓಓಓಓಓಓಓ
ಮುನಿಸು ಮರೆಸು ಮನಸ ಸರಿಸು ಪ್ರೀತಿ ತಿಳಿಸು ಪ್ರೀತಿ ಉಳಿಸು
ಒಲವೇ ಇದುವೇ ನಿಜವೇ
ಅರೇ ಅರೇ ಅರೇ ಅದುರಿದೆ ಈ ಹೃದಯ... ಹೃದಯಾ
ಸರಿಗಮವನು ಕಲಿಸಿದೆ ಈ ಹರೆಯ... ಹರೆಯಾ..
ಅರೇ ಅರೇ ಅರೇ ಅದುರಿದೆ ಈ ಹೃದಯ... ಹೃದಯಾ
ಸರಿಗಮವನು ಕಲಿಸಿದೆ ಈ ಹರೆಯ... ಹರೆಯಾ..
-------------------------------------------------------------------------------------------------------------
No comments:
Post a Comment