- ಬಾರೋ ಬಾರೋ ಮಳೆರಾಯ
- ಮನದಾಸೆ ನೂರು ನಾ ಹೇಳಲಾರೇ
- ಅಂದು ನಿನ್ನ ಕಂಡಾಗಲೇ
- ಒಂದು ಬೇಕು ಎರಡು ಸಾಕು
- ಕೆಂಪೇಗೌಡರೇ
ಬಾ ನನ್ನ ಪ್ರೀತಿಸು (೧೯೯೨) - ಬಾರೋ ಬಾರೋ ಮಳೆರಾಯ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ ಗಾಯನ : ಎಸ್.ಪಿ.ಬಿ
ಗಂಡು : ಲೇ ಲೇ ಲೇ ಲೇ ಲೇ ಲೇ ಲೇ ಲೇ ಲೇ ಲೇ ಕೇ ... ಡಿಕ್ಕೂ
ಕೋರಸ್ : ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ
ಗಂಡು : ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ
ಹಸುರಿಲ್ಲದೇ ಉಸಿರಿಲ್ಲಾ.. ನೀರಿಲ್ಲದೇ ಬಾಳಿಲ್ಲಾ ... ಆಆಆ ಆಆಆ
ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ
ಕೋರಸ್ : ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ
ಗಂಡು : ಎಲಬು ಗೂಡಾಗವೇ ದನಕರ ಒಣಗಿಟ್ಟರಾಗಬೇಕೇ ಗಿಡಮರ
ಎಲಬು ಗೂಡಾಗವೇ ದನಕರ ಒಣಗಿಟ್ಟರಾಗಬೇಕೇ ಗಿಡಮರ
ಬಿರಿದು ಬಡಿಟ್ಟಾವೇ ಕೆರೆಕಟ್ಟೆ ಮಿಂಡಿಗಂಟ್ಯಾ ಬಂದು ಎಲ್ಲಾರ ಹೊಟ್ಟೇ
ಹೊಟ್ಟೆಗೇ ಹಿಟ್ಟಿಲ್ಲವೋ.. ಮಳೆರಾಯ ಜುಟ್ಟಿಗೇ ಹೂವಿಲ್ಲವೋ
ನೀ ಬಾರದಿದ್ದರೇ ಮದುವೆ ಸೋಬನವಿಲ್ಲಾ ಜಾತ್ರೆಯ ಜೋರಿಲ್ಲವೋ
ಮೈ ಮುಚ್ಚೋಕೆ ಬಟ್ಟಿಲ್ಲವೋ ನೆತ್ತಿಗೇ ಎಣ್ಣಿಲ್ಲವೋ
ಒಲವಿನ ನಗುವಿಲ್ಲ ಗೆಲುವಿನ ಮೊಗವಿಲ್ಲ ಬಾರಯ್ಯ ಮಳೆರಾಯನೇ..
ಊರ ಮುಂದಿನ ಮಲ್ಲೇಶ್ವರ.. ನೂರೊಂದು ಈಡುಗಾಯಿ ಈಶ್ವರ
ಕೋರಸ್ : ಹುಯ್ಯೋ ಹುಯ್ಯೋ ಮಳೆರಾಯ ಹುಯ್ಯೋ ಹುಯ್ಯೋ ಮಳೆರಾಯ
ಗಂಡು : ಬೆಟ್ಟದ ಮ್ಯಾಗಳ ಬಸವಣ್ಣ ಬೆಲ್ಲ ಅಕ್ಕಿ ನಿಂದಣ್ಣ ...
ಕೋರಸ್ : ಬಾರೋ ಬಾರೋ ಮಳೆರಾಯ ಬಾರೋ ಬಾರೋ ಮಳೆರಾಯ
ಗಂಡು : ಹುತ್ತದಾಗಿನ ನಾಗಪ್ಪಾ ಹಾಲು ತುಪ್ಪ ನಿಂಗಪ್ಪಾ
ಕೋರಸ್ : ಹುಯ್ಯೋ ಹುಯ್ಯೋ ಮಳೆರಾಯ ಹುಯ್ಯೋ ಹುಯ್ಯೋ ಮಳೆರಾಯ
ಗಂಡು : ಬಾರೇ ಮ್ಯಾಗಳ ಮಾರುತಿ ನಿನಗೆ ಎಳ್ಳಿನ ಆರುತಿ
ಕೋರಸ್ : ಆರುತೀ .. ಆರುತೀ .. ಆರು ತೆಂಗಿನ ಆರುತಿ
ಗಂಡು : ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ
ಕೋರಸ್ : ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ
ಗಂಡು : ಮಳೆರಾಯ ನೀ ಬಂದು ನೆಲನೆಂದೂ ಮಣ್ಣೆಲ್ಲಾ ಅರಳಿತು ಘಮ್ಮಾನೆಂದೂ
ಹೋಯ್ ಮಳೆರಾಯ ನೀ ಬಂದು ನೆಲನೆಂದೂ ಮಣ್ಣೆಲ್ಲಾ ಅರಳಿತು ಘಮ್ಮಾನೆಂದೂ
ಭೂಮೀ ತಾಯೀ ಹಸುರಿನ ಹೊಸ ಸೀರೆ ಹೂವಿನ ರವಿಕೆ ತೊಟ್ಟಾಳಲ್ಲೋ
ಹೊಳೆ ಹಳ್ಳ ನೀರು ತುಂಬೀ .. ಹಸೆಯ ಮೇಕೆ ಕೆಚ್ಚಾಲೆಲ್ಲಾ ಹಾಲು ತುಂಬೀ
ಹೊಸ ಬಟ್ಟೆ ಉಟ್ಟಕೊಂಡು ಆರುತೀ ಎತ್ತಕೊಂಡು ತೇರಿಗೇ ಹೊಂಟಾರಲ್ಲೋ
ಮದುವೆಯ ಮೋಜು ನೋಡೂ ಹಬ್ಬದ ಜೋರು ನೋಡೂ
ತವರಿಗೆ ಬಂದ ಹೆಣ್ಮಕ್ಕಳ ಮಡಿಲ ಕಂದನ ಕೇಕೇ ಕೇಳೂ
ಪೈರು ಪಟ್ಟೆ ಹೆಚ್ಚಲೀ ದವಸದ ಕಣಜ ತುಂಬಲೀ
ಕೋರಸ್ : ಹುಯ್ಯೋ ಹುಯ್ಯೋ ಮಳೆರಾಯ ಹುಯ್ಯೋ ಹುಯ್ಯೋ ಮಳೆರಾಯ
ಗಂಡು : ರಾಗಿ ಕಲ್ಲು ಬೀಸಲೂ ಊರೆಲ್ಲ ನಮಗೇ ನೆಂಟರೂ
ಕೋರಸ್ : ಬಾರೋ ಬಾರೋ ಮಳೆರಾಯ ಬಾರೋ ಬಾರೋ ಮಳೆರಾಯ
ಗಂಡು : ಭಿಕ್ಷಕೇ ಬಂದ ಜಂಗಮ ಜೋಳಿಗೆ ತುಂಬಾ ನೀಡಮ್ಮಾ
ಕೋರಸ್ : ಹುಯ್ಯೋ ಹುಯ್ಯೋ ಮಳೆರಾಯ ಹುಯ್ಯೋ ಹುಯ್ಯೋ ಮಳೆರಾಯ
ಗಂಡು : ದೇವರಿಗೆಲ್ಲಾ ದ್ಯಾವರೂ ನೀನೇ ದೊಡ್ಡ ದೇವರೂ
ಕೋರಸ್ : ದೇವರಿಗೆಲ್ಲಾ ದೇವರೂ ನೀನೇ ದೊಡ್ಡ ದೇವರೂ
ಗಂಡು : ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ
ಹಸುರಿಲ್ಲದೇ ಉಸಿರಿಲ್ಲಾ.. ನೀರಿಲ್ಲದೇ ಬಾಳಿಲ್ಲಾ ... ಆಆಆ ಆಆಆ
ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ
ಎಲ್ಲರು : ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲಾ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲಾ... ಹ್ಹಾ...
------------------------------------------------------------------------------------------
ಬಾ ನನ್ನ ಪ್ರೀತಿಸು (೧೯೯೨) - ಮನದಾಸೆ ನೂರು ನಾ ಹೇಳಲಾರೇ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ
ಹೆಣ್ಣು : ತಾನನ್ನ ತಾನನ್ನೋ ತಾನನ್ನ ತಾನನ್ನೋ ತಾನನ್ನ ತಾನನನ್ನ ತಾನಾನಾನಾ
ಮನದಾಸೆ ನೂರು ನಾ ಹೇಳಲಾರೇ ಎದೆ ತುಂಬ ಕಾತರವೇ
ಎದುರು ನಿಂತು ನಗಲು ನೀನು ಕರಗಿ ನೀರಾಗು ನಾಚಿಕೇ ..
ಗಂಡು : ಸಿರಿದೇವಿ ನೀನು ಬಂದಾಗ ನನ್ನ ಮನವೇಕೋ ಸೋಲುತಿದೇ..
ಮಾತು ಬೆಳ್ಳಿ ಮೌನ ಚಿನ್ನ ಬೇರೆ ಇನ್ನೇನೂ ಬೇಕಿದೇ...
ಹೆಣ್ಣು : ಮನದಾಸೆ ನೂರು ನಾ ಹೇಳಲಾರೇ ಎದೆ ತುಂಬ ಕಾತರವೇ
.
ಹೆಣ್ಣು : ನಿನ್ನ ಹೆಜ್ಜೆ ಸಪ್ಪಳ ನನ್ನ ಕಿವಿಯ ತಾಕಲು ಎದೆಯಲ್ಲಿ ನವಿಲೊಂದು ನಲಿದಾಡಿತು
ನಿನ್ನ ಹೆಜ್ಜೆ ಸಪ್ಪಳ ನನ್ನ ಕಿವಿಯ ತಾಕಲು ಎದೆಯಲ್ಲಿ ನವಿಲೊಂದು ನಲಿದಾಡಿತು
ನಿನ್ನ ಮೈಯ್ಯ ವಾಸನೇ ನಿನಗಿಂತ ಮುಂಚೇನೇ ನೀ ಬಂದ ಸುದ್ದಿ ಹೇಳಿತು... ಅಹ್ಹಹ್ಹಹ ಅಹ್ಹಹ್ಹಹ
ಗಂಡು : ನಿನ್ನ ಕಣ್ಣ ನೋಟದ ಸೂಜಿಗಲ್ಲ ಸೆಳೆತಕೂ ನನ್ನನ್ನೂ ನಿನ್ನತ್ತ ಎಳೆ ತಂದಿದೇ ..
ನಿನ್ನ ನಗೆಯ ಸದ್ದಿನ ಹಲವಾರು ಕಂಪನ ಬಾ ಎಂದು ಕರೆ ತಂದಿದೇ ...
ಹೆಣ್ಣು : ಈ ನಿನ್ನ ಮಾತಿಂದಲೇ .. ಉಯ್ಯಾಲೇ ತೂಗಾಡಿ ತೇಲುವಂತಿದೇ... ಓ
ಮನದಾಸೆ ನೂರು ನಾ ಹೇಳಲಾರೇ ಎದೆ ತುಂಬ ಕಾತರವೇ
ಎದುರು ನಿಂತು ನಗಲು ನೀನು ಕರಗಿ ನೀರಾಗು ನಾಚಿಕೇ ..
ಗಂಡು : ಸಿರಿದೇವಿ ನೀನು ಬಂದಾಗ ನನ್ನ ಮನವೇಕೋ ಸೋಲುತಿದೇ..
ಗಂಡು : ತಾನನ್ನ ತನ್ನನನ್ನೋ (ತಾನನ್ನ ತಾನೋ ) ತನ್ನನ್ನ ತಾನ ತಾನ
ಇಬ್ಬರು : ತನ್ನನ್ನ ತಾನ ತಾನ
ಹೆಣ್ಣು : ದೂರದಲ್ಲಿ ಇದ್ದರೇ ಮಾತಿನಾಸೇ ಸಾವಿರ ಹತ್ತಿರ ಕಂಡಾಗ ಮೂಕಾದೆನೂ..
ದೂರದಲ್ಲಿ ಇದ್ದರೇ ಮಾತಿನಾಸೇ ಸಾವಿರ ಹತ್ತಿರ ಕಂಡಾಗ ಮೂಕಾದೆನೂ..
ನನಗೂಚ್ಚು ಆಸೆಯಾ ನೀ ತಪ್ಪು ಎಂದರೇ ಹೇಗೆಂದು ಭಯಗೊಂಡೇನೂ
ಗಂಡು : ನಾಳೆ ನಿನ್ನ ನಾಲಿಗೇ ಆಗಿ ಮಾತನಾಡುವುದು ಪ್ರೀತೀಲಿ ಮುಚ್ಚಿಟ್ಟು ಕಾಪಾಡುವೇ
ಬಳಸುತ್ತ ತೋಳಲಿ ಸಲಹುತ್ತ ಬಾಳಲೀ ಜೋತೆಗಾರ ನಾನಾಗುವೇ ..
ಹೆಣ್ಣು : ಈ ಮಾತೇ ಸಾಕಾಗಿದೇ... ನಾ ಕಂಡ ಕನಸು ನನಸಾಗಿ ಹೋಗಿದೇ ... ಆ
ಗಂಡು : ಸಿರಿದೇವಿ ನೀನು ಬಂದಾಗ ನನ್ನ ಮನವೇಕೋ ಸೋಲುತಿದೇ..
ಮಾತು ಬೆಳ್ಳಿ ಮೌನ ಚಿನ್ನ ಬೇರೆ ಇನ್ನೇನೂ ಬೇಕಿದೇ...
ಇಬ್ಬರು : ತಾನಾ ತಾನ ತಾನನನ ತಾನಾ ತಾನ ತಾನನನ
-----------------------------------------------------------------------------------------
ಬಾ ನನ್ನ ಪ್ರೀತಿಸು (೧೯೯೨) - ಅಂದು ನಿನ್ನ ಕಂಡಾಗಲೇ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ
ಇಬ್ಬರು : ಆಹಾ.. ಆಆಆಅ ಆಹಾ ಓಹೋ ... ಹೋಯ್ ಹೋಯ್ ಹೋಯ್
ಗಂಡು : ಆಂದು ನಿನ್ನ ಕಂಡಾಗಲೇ ನಿನಗೆ ಸೋತೇನೂ
ಈ.. ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯಾ ತೊಳಲಾಟ ತಿಳಿಸೋ ಮನಸಾಯ್ತು ಮಾತೇ ಬರದಾಯ್ತು ಓ ಓ ಓ
ಹೆಣ್ಣು : ಆಂದು ನಿನ್ನ ಕಂಡಾಗಲೇ ನಿನಗೆ ಸೋತೇನೂ
ಈ.. ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯಾ ತೊಳಲಾಟ ತಿಳಿಸೋ ಮನಸಾಯ್ತು ಮಾತೇ ಬರದಾಯ್ತು ಹೋಯ್ ಹೋಯ್ ಆ ..
ಗಂಡು : ಆಂದು ನಿನ್ನ ಕಂಡಾಗಲೇ ನಿನಗೆ ಸೋತೇನೂ
ಈ.. ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಹೆಣ್ಣು : ನಿನ್ನನ್ನೂ ಕಂಡಾಗ ಆ ದೇವರ ಕಂಡಂತೇ
ನಿನ್ನನ್ನೂ ಕಂಡಾಗ ಆ ದೇವರ ಕಂಡಂತೇ ನಿನ್ನ ಮಾತು ಜೇನಿನಲ್ಲೇ ಮಿಂದ ಬಂದಂತೇ
ಗಂಡು : ಹೆಣ್ಣಿನ ರೂಪದಲೀ.. ಆ ದೇವಿಯೇ ಬಂದಂತೇ
ಹೆಣ್ಣಿನ ರೂಪದಲೀ.. ಆ ದೇವಿಯೇ ಬಂದಂತೇ ನನ್ನ ಅಂತರಂಗ ಸೇರಿ ಪಂಚಪ್ರಾಣ ಆಗ್ಯಾಳೇ
ನನ್ನ ಅಂತರಂಗ ಸೇರಿ ಪಂಚಪ್ರಾಣ ಆಗ್ಯಾಳೇ
ಹೆಣ್ಣು : ಒಲಿದು ಬಂದೆ ಎಂದೂ... ನಿನ್ನಾಣೆ
ಗಂಡು : ಆಂದು ನಿನ್ನ ಕಂಡಾಗಲೇ ನಿನಗೆ ಸೋತೇನೂ
ಈ.. ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಹೆಣ್ಣು : ಎದೆಯಾ ತೊಳಲಾಟ ತಿಳಿಸೋ ಮನಸಾಯ್ತು ಮಾತೇ ಬರದಾಯ್ತು ಹಾಯ್ ಹಾಯ್ ಆ ..
ಗಂಡು : ಆಂದು ನಿನ್ನ ಕಂಡಾಗಲೇ ನಿನಗೆ ಸೋತೇನೂ
ಹೆಣ್ಣು : ಈ.. ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಗಂಡು : ಮಾಟದ ಮೈಯ್ಯೋಳೇ ತುಂಟಾಟವ ಆಡೋಳೆ
ಮಾಟದ ಮೈಯ್ಯೋಳೇ ತುಂಟಾಟವ ಆಡೋಳೆ ಗೆಜ್ಜೆಯಿಟ್ಟ ಮಣ್ಣಿನಲ್ಲೂ ಕಂಪು ತಂದೊಳೇ
ಹೆಜ್ಜೆಯಿಟ್ಟ ಮಣ್ಣಿನಲ್ಲೂ ಕಂಪು ತಂದೊಳೇ
ಹೆಣ್ಣು : ಮಾರನು ನೀನಂತೇ ಮರುಳಾಗುತ ಮನಸೋತೆ
ಮಾರನು ನೀನಂತೇ ಮರುಳಾಗುತ ಮನಸೋತೆ ನಾನು ನೀನು ಜೋಡಿಯಾಗಿ ಹೀಗೆ ಇರುವಾಸೇ ..
ನಾನು ನೀನು ಜೋಡಿಯಾಗಿ ಹೀಗೆ ಇರುವಾಸೇ ..
ಗಂಡು : ನುಡಿದೆ ನೀನು ನನ್ನ ಮನದಾಸೆ
ಹೆಣ್ಣು : ಆಂದು ನಿನ್ನ ಕಂಡಾಗಲೇ ನಿನಗೆ ಸೋತೇನೂ
ಈ.. ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯಾ ತೊಳಲಾಟ ತಿಳಿಸೋ ಮನಸಾಯ್ತು ಮಾತೇ ಬರದಾಯ್ತು ಹಾಯ್ (ಆ) ಹಾಯ್ (ಆ) ..
ಗಂಡು : ಆಂದು ನಿನ್ನ ಕಂಡಾಗಲೇ ನಿನಗೆ ಸೋತೇನೂ
ನೀ .. ಇಂದು ಎದುರು ಬಂದಾಗಲೇ ಬೆವೆತು ಹೋದೆನು
ಎದೆಯಾ ತೊಳಲಾಟ ತಿಳಿಸೋ ಮನಸಾಯ್ತು ಮಾತೇ ಬರದಾಯ್ತು ಓ (ಆ) ಓ (ಆ) \ ಆ ..
ಹೆಣ್ಣು : ಆಂದು ನಿನ್ನ ಕಂಡಾಗಲೇ ನಿನಗೆ ಸೋತೇನೂ
ಗಂಡು : ಈ.. ಇಂದು ಎದುರು ಬಂದಾಗಲೇ ಬೆವೆತು ಹೋದೆನು
-----------------------------------------------------------------------------------------
ಬಾ ನನ್ನ ಪ್ರೀತಿಸು (೧೯೯೨) - ಒಂದು ಬೇಕು ಎರಡು ಸಾಕು
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ ಮಂಜುಳ ಗುರುರಾಜ
ಹೆಣ್ಣು : ಒಂದು ಬೇಕೂ ಎರಡು ಸಾಕೂ
ಒಂದು ಬೇಕೂ ಎರಡು ಸಾಕೂ ಹೆಣ್ಣಾದರೂ.. ಗಂಡಾದರೂ ... ಮೂರನೇದು ಆಗದಂತೇ ಹಾಕಿ ಬೇಕೂ ..
ಗಂಡು : ಒಂದು ಬೇಕೂ ಎರಡು ಸಾಕೂ
ಇಬ್ಬರು : ಒಂದು ಬೇಕೂ ಎರಡು ಸಾಕೂ
ಗಂಡು : ಸಂತಾನ ನೀಡೋನು ಭಗವಂತಾನ ಹಿಂದಿಂದೇ ಸಾಲಾಗಿ ಹೇರು ಅಂತಾನ
ಸಂತಾನ ನೀಡೋನು ಭಗವಂತಾನ ಹಿಂದಿಂದೇ ಸಾಲಾಗಿ ಹೇರು ಅಂತಾನ
ಹೆಣ್ಣು ಗಂಡು ಕೂಡಿ ನೀವೇ ತಪ್ಪು ಮಾಡಿ ದೇವರೇ ಕೊಟ್ಟನೆಂದೂ ವಾದ ಮಾಡಬೇಡಿ..
ಮುಂದಿನ ಮಕ್ಕಳಾ ಅಪ್ಪಗಳಿರಾ ಹೊತ್ತು ಹೆತ್ತು ಸುಸ್ತಾದ ಅಮ್ಮಗಳಿರಾ
ಇಬ್ಬರು : ಹೆಚ್ಚು ಮಕ್ಕಳಾ ಕಡೇ ಆರೋಗ್ಯವೂ ನಷ್ಟ..
ಹೆಣ್ಣು : ಪ್ರಿತಿ ಫಲಿಸಿ ಸಾಕುವುದು ಇನ್ನೂ ಕಷ್ಟ..
ಗಂಡು : ಒಂದು ಬೇಕೂ ಎರಡು ಸಾಕೂ
ಒಂದು ಬೇಕೂ ಎರಡು ಸಾಕೂ ಹೆಣ್ಣಾದರೂ.. ಗಂಡಾದರೂ ... ಮೂರನೇದು ಆಗದಂತೇ ಹಾಕಿ ಬೇಕೂ ..
ಇಬ್ಬರು : ಒಂದು ಬೇಕೂ ಎರಡು ಸಾಕೂ ಒಂದು ಬೇಕೂ ಎರಡು ಸಾಕೂ
ಗಂಡು : ಭೂಮಿ ನೀರು ಗಾಳಿ ಎಂದು ಹೆಚ್ಚೋದಿಲ್ಲಾ.. ಇರುವುದೆಲ್ಲ ಇರೋರಿಗೇ ಸಾಲೋದಿಲ್ಲಾ ... ಹೌದೂ ..
ಭೂಮಿ ನೀರು ಗಾಳಿ ಎಂದು ಹೆಚ್ಚೋದಿಲ್ಲಾ.. ಇರುವುದೆಲ್ಲ ಇರೋರಿಗೇ ಸಾಲೋದಿಲ್ಲಾ ...
ದೇಶದಲ್ಲಿ ಹೆಚ್ಚುತದೇ ಜನರೇಷನ್ನೂ... ಹೊಟ್ಟೆಗಿಲ್ಲ ರೇಷನ್ನೂ ಮಾಡಿಸೀ ಆಪರೇಷನ್ನೂ
ಹೆಣ್ಣು : ಆಪರೇಷನ್ ಆದ ಮೇಲೆ ಆ ಹೆಂಗಸರಿಗೇ ಮೈಯ್ಯ ಮರುವುದೆಂಬೋದೂ ಸುಳ್ಳೂ ಅಂಜಿಕೆ
ಗಂಡು : ಗಂಡು ಷಂಡ ಆಗ್ತಾನೇ ಅಂತಾ ಹೇಳೋದೂ ಬುದ್ದಿ ಇಲ್ಲದವರು ಹೇಳೋ ಮೂಢನಂಬಿಕೇ
ಇಬ್ಬರು : ಒಂದು ಬೇಕೂ ಎರಡು ಸಾಕೂ ಒಂದು ಬೇಕೂ ಎರಡು ಸಾಕೂ
ಹೆಣ್ಣು : ಎಲ್ಲಾ ಹೆಣ್ಣಾದವೆಂದೂ ಗಂಡೊಂದು ಬೇಕೆಂದೂ ಜಂಜಾಟ ಯಾಕಮ್ಮಾ ನಿಮಗೇ ಇನ್ನೂ
ಎಲ್ಲಾ ಹೆಣ್ಣಾದವೆಂದೂ ಗಂಡೊಂದು ಬೇಕೆಂದೂ ಜಂಜಾಟ ಯಾಕಮ್ಮಾ ನಿಮಗೇ ಇನ್ನೂ
ಹೆಣ್ಣಾಗಲೀ ಗಂಡಾಗಲೀ ಬೇಧವೇನೋ ಅದರಲೀ
ಆರತಿಗೊಂದು ಕೀರತಿಗೊಂದು ಎರಡೇ ಸಾಕೂ ತಿಳಿತಾ...
ಗಂಡು : ಹೆಂಗಸಿಗೇ ವಂಕೀ ಗಂಡಸಿಗೇ ನಿರೋಧು ಉಪಯೋಗಿಸಿ ಇದು ನಿಮಗೆ ಇರೋದು
ಇಬ್ಬರು : ಚಿಕ್ಕದಾದ ಸಂಸಾರ ಸಂತೋಷಕೆ ಆಧಾರ ಮೂರನೇದೂ ಬೇಡವೆಂದೂ ಮಾಡಿ ನಿರ್ಧಾರ..
ಇಬ್ಬರು : ಒಂದು ಬೇಕೂ ಎರಡು ಸಾಕೂ ಒಂದು ಬೇಕೂ ಎರಡು ಸಾಕೂ
ಹೆಣ್ಣಾದರೂ.. ಗಂಡಾದರೂ ... ಮೂರನೇದು ಆಗದಂತೇ ಹಾಕಿ ಬ್ರೇಕೂ ..
ಒಂದು ಬೇಕೂ (ಹ್ಹಾ) ಎರಡು ಸಾಕೂ (ಹೌದು) ಒಂದು ಬೇಕೂ ಎರಡು ಸಾಕೂ
-----------------------------------------------------------------------------------------
ಬಾ ನನ್ನ ಪ್ರೀತಿಸು (೧೯೯೨) - ಕೆಂಪೇಗೌಡರೇ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ
ಕೆಂಪೇಗೌಡರೇ ಕೆಂಪೇಗೌಡರೇ ನಿಂತುಬಿಟ್ರೆಲ್ಲಾ ಸುಮ್ನೇ ನಿಂತುಬಿಟ್ರೆಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ಲದಂಗೇ ಮರೆತೇ ಬಿಟ್ರೇಲ್ಲಾ ಎಲ್ಲಾ ಮರೆತೇ ಬಿಟ್ರೇಲ್ಲಾ
ಒಂದು ಸಲ ಇಳಿದು ಸುತ್ತ ನೋಡಿ ಎಲ್ಲಾ ಹನುಮಂತನ ಬಾಲದಂಗೇ ಬೆಳೆದ್ಹೋಯ್ತಲ್ಲಾ
ಕೆಂಪೇಗೌಡರೇ ಕೆಂಪೇಗೌಡರೇ ನಿಂತುಬಿಟ್ರೆಲ್ಲಾ ಸುಮ್ನೇ ನಿಂತುಬಿಟ್ರೆಲ್ಲಾ
ಬೆಂಕಿ ಪಟ್ಟಣ ಪೇರಿಸದಂಗೆ ಮನೆಯೋ ಮನೇ.. ಹುಳುಗಳಂಗೇ ಪಿತ ಪಿತಾಂತ ಜನವೋ ಜನ
ಬೆಂಕಿ ಪಟ್ಟಣ ಪೇರಿಸದಂಗೆ ಮನೆಯೋ ಮನೇ.. ಹುಳುಗಳಂಗೇ ಪಿತ ಪಿತಾಂತ ಜನವೋ ಜನ
ಬಸ್ಸೂ ಲಾರಿ ಆಟೋ ಕಾರು ಮೈಮೇಲ ಬರ್ತಾವೇ
ರಸ್ತೇ ದಾಟಕ್ಕ ಹೋದರೇ ಪೊಲೀಸ್ ಪೀಪಿ ಊದ್ತಾನೇ
ಬ್ಯಾಡಪ್ಪೋ.. ಬ್ಯಾಡಪ್ಪೋ ಬೆಂಗಳೂರು ಸಹವಾಸ ಕೆಂಪೇಗೌಡ್ರೇ ಗೊತ್ತೆತೈನು ಇಲ್ಲಿ ವನವಾಸ
ಕೆಂಪೇಗೌಡರೇ ಕೆಂಪೇಗೌಡರೇ ನಿಂತುಬಿಟ್ರೆಲ್ಲಾ ಸುಮ್ನೇ ನಿಂತುಬಿಟ್ರೆಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ಲದಂಗೇ ಮರೆತೇ ಬಿಟ್ರೇಲ್ಲಾ ಎಲ್ಲಾ ಮರೆತೇ ಬಿಟ್ರೇಲ್ಲಾ ಆ... ಅಹಹಹ್ಹ
ಕಷ್ಟ ಇಲ್ಲದ ಸಂಪಾದನೆಂತಾ ಬೆಂಗಳೂರು ಸೇರ್ತಾರೇ ಫ್ಯಾಷನ್ ಬಟ್ಟೆ ತೊಟ್ಕೊಂಡು ಡೌಲ ಮಾಡ್ತಾರೇ
ಕಷ್ಟ ಇಲ್ಲದ ಸಂಪಾದನೆಂತಾ ಬೆಂಗಳೂರು ಸೇರ್ತಾರೇ ಫ್ಯಾಷನ್ ಬಟ್ಟೆ ತೊಟ್ಕೊಂಡು ಡೌಲ ಮಾಡ್ತಾರೇ
ಬೈ ಟೂ ಕಾಫಿ ಇಡ್ಲಿ ತಿಂದೂ ಢರ್ ಅಂತಾರೇ
ಬಿಟಿಎಸ್ ಬಸ್ಸಿನಲ್ಲಿ ಜೋತಾಡ್ತಾರೇ ನೆಂಟ್ರೂ ಗಿಂಟ್ರೂ ಮನೆಗೆ ಬಂದ್ರೇ ಕಣ್ಣ ಕಣ್ಣ ಬಿಡ್ತಾರೇ ..
ಬೆಳೆಯೋರ ಯಾರು ಕೇಳಿ ಹಳ್ಳಿ ಜನ ಇಲ್ಲಿ ಬಂದ್ರೇ
ಕೆಂಪೇಗೌಡರೇ ಕೆಂಪೇಗೌಡರೇ ನಿಂತುಬಿಟ್ರೆಲ್ಲಾ ಸುಮ್ನೇ ನಿಂತುಬಿಟ್ರೆಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ಲದಂಗೇ ಮರೆತೇ ಬಿಟ್ರೇಲ್ಲಾ ಎಲ್ಲಾ ಮರೆತೇ ಬಿಟ್ರೇಲ್ಲಾ ಆ... ಅಹಹಹ್ಹ
ಬೆಂಗಳೂರೇಲ್ಲಾ ನಮ್ದೇ ಅಂತಾ ಯಾರಿಗ್ಹೇಳ್ತಾರೇ ಕಂಡ ಕಂಡೋರೇ ಲಕ್ಷ ಲಕ್ಷ ತುಂಬ್ಕೊಂಡವರೇ
ಬೆಂಗಳೂರೇಲ್ಲಾ ನಮ್ದೇ ಅಂತಾ ಯಾರಿಗ್ಹೇಳ್ತಾರೇ ಕಂಡ ಕಂಡೋರೇ ಲಕ್ಷ ಲಕ್ಷ ತುಂಬ್ಕೊಂಡವರೇ
ಕನ್ನಡ ಬಾಷೇ ತಬ್ಬಲಿಯಾಗಿ ಪರದಾಡತೈತೇ
ದಾರೀ ಗೀರೀ ತಪ್ಪದಾ ಅಂತಾ ಭಯವಾಗತೈತೇ ಕೆಂಪೇಗೌಡ್ರೇ ಹೇಳಿ ನಮಗೇ ಮುಂದೇನ್ ಗತಿ
ಹಿಂಗೇ ಹೋದ್ರೇ ನಿಮಗೂ ಕೂಡ ದೇವರೇ ಗತೀ...
ಕೆಂಪೇಗೌಡರೇ ಕೆಂಪೇಗೌಡರೇ ನಿಂತುಬಿಟ್ರೆಲ್ಲಾ ಸುಮ್ನೇ ನಿಂತುಬಿಟ್ರೆಲ್ಲಾ
ಬೆಂಗಳೂರು ಕಟ್ಟಿ ಗೊತ್ತಿಲ್ಲದಂಗೇ ಮರೆತೇ ಬಿಟ್ರೇಲ್ಲಾ ಎಲ್ಲಾ ಮರೆತೇ ಬಿಟ್ರೇಲ್ಲಾ ಆ...
ಒಂದು ಸಲ ಇಳಿದು ಸುತ್ತ ನೋಡಿ ಎಲ್ಲಾ ಹನುಮಂತನ ಬಾಲದಂಗೇ ಬೆಳೆದ್ಹೋಯ್ತಲ್ಲಾ
ಕೆಂಪೇಗೌಡರೇ ಕೆಂಪೇಗೌಡರೇ ನಿಂತುಬಿಟ್ರೆಲ್ಲಾ ಸುಮ್ನೇ ನಿಂತುಬಿಟ್ರೆಲ್ಲಾ
-----------------------------------------------------------------------------------------
No comments:
Post a Comment