- ಬೆಳ್ಳಿ ಮಂಜಿನ
- ಹೋಯ್ಯಾ ರಕ್ಕಾ
- ಕೋಗಿಲೇ ಕುಹೂ
- ಉಸಿರೇ ಪ್ರೀತಿ ಉಸಿರೇ
- ಬಣ್ಣದ ಲೋಕದ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಉಷಾ
ಕೋರಸ್ : ಹೋಯ್ಯಾರೇ... ಹೋಯ್ಯಾರೇ... ಹೋಯ್ಯಾರೇ... ಹೋಯ್ಯಾರೇ...
ಹೆಣ್ಣು : ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ ನೋಡು ನೋಡು
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ ಕೇಳು ಕೇಳು
ಮನಸಿಗೆ ಮುಗಿಲಲಿ ಆಸೆಯ ನವಿಲಿನ ಗರಿ ಬಿಚ್ಚಿ ವಯಸು ಚಿಗುರಿಕೊಂಡಿತು
ಅಮ್ಮಮ್ಮಾ ನೂರು ಕನಸು ಕಂಡಿತು
ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ ನೋಡು ನೋಡು
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ ಕೇಳು ಕೇಳು
ಹೆಣ್ಣು : ಸಾವಿರ ಚುಕ್ಕಿಯ ಎಣಿಸಿ ನಿಜ ಚುಕ್ಕಿಗಳೆಡೋಣ
ಒಂದೊಂದು ಚುಕ್ಕಿಯ ಮೈಯಲ್ಲೂ ರಂಗೋಲಿ ಆಗೋಣ
ಓ.. ಸಾವಿರ ಹಕ್ಕಿಯ ಗುಟ್ಟಾಗಿ ಕರೆದು ಪತ್ರವ ಬರೆಯೋಣ
ಒಂದೊಂದು ಪ್ರೀತಿಯ ಸಾಲೆಲ್ಲ ಸುವ್ವಾಲಿ ಆಗೋಣ
ಮೋಡಕ್ಕೆ ಎಲ್ಲಿದೆ ಬಾಯಾರಿಕೆ ತಡೆ ಎಂಬುದೆಲ್ಲಿದೆ ತುಂಟಾಟಕೆ
ಅರಳುವ ಅಂದರೆ ಬೇಲಿ ಅನ್ನೋ ಮಾತೆ ಇಲ್ಲ
ವಯಸು ಚಿಗುರಿಕೊಂಡಿತು ಅಮ್ಮಮಾ ನೂರು ಕನಸು ಕಂಡಿತು
ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ ನೋಡು ನೋಡು
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ ಕೇಳು ಕೇಳು
ಹೆಣ್ಣು : ಕಡಲ ಅಲೆಯ ಅಳೆದು ಅಳೆದು ಮುತ್ತುಗಳಿಡೋಣ
ಒಂದೊಂದು ಮುತ್ತಲ್ಲೂ ನಮ್ಮೆಲ್ಲರ ಚಿತ್ರವ ಬಿಡಿಸೋಣ
ಓಓಓಓ.... ಕಾಮನ ಬಿಲ್ಲಿಗೆ ಕಣ್ಣಿಗಳಿಂದಲೇ ಬಣ್ಣವ ಬಳಿಯೋಣ
ಒಂದೊಂದು ಬಣ್ಣಕ್ಕೂ ನಮ್ಮುಸಿರ ಹಚ್ಚೆಯ ಹಾಕೋಣ
ಗಾಳಿಗೆ ಎಲ್ಲಿಗೆ ಛಳಿಯ ಬೆದರಿಕೆ ಕೊನೆ ಎಂಬುದೆಲ್ಲಿದೆ ನಮ್ಮವರೆಸೆಗೆ
ಚಿಮ್ಮುವ ಬಯಕೆಗೆ ಕಾಯಿ ಅನ್ನೋ ಮಾತೆ ಇಲ್ಲ
ವಯಸು ಚಿಗುರಿಕೊಂಡಿತು ಅಮ್ಮಮ್ಮಾ ನೂರು ಕನಸು ಕಂಡಿತು
ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ ನೋಡು ನೋಡು
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ ಕೇಳು ಕೇಳು
ಮನಸಿಗೆ ಮುಗಿಲಲಿ ಆಸೆಯ ನವಿಲಿನ ಗರಿ ಬಿಚ್ಚಿ ವಯಸು ಚಿಗುರಿಕೊಂಡಿತು
ಅಮ್ಮಮ್ಮಾ ನೂರು ಕನಸು ಕಂಡಿತು
ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ ನೋಡು ನೋಡು
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ ಕೇಳು ಕೇಳು
-----------------------------------------------------------------------------------
ಬದ್ರಿ (೨೦೦೩) - ಹೋಯ್ಯಾ ರಕ್ಕಾ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸುರೇಶ ಪೀಟರ್ ಮಾಲ್ಗುಡಿ ಶೋಭಾ
ಬದ್ರಿ (೨೦೦೩) - ಕೋಗಿಲೇ ಕುಹೂ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕವಿತಾ ಕೃಷ್ಣಮೂರ್ತಿ
ಬದ್ರಿ (೨೦೦೩) - ಉಸಿರೇ ಪ್ರೀತಿ ಉಸಿರೇ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಎಸ್.ಪಿ.ಬಿ
ಬದ್ರಿ (೨೦೦೩) - ಬಣ್ಣದ ಲೋಕದ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸುರೇಶ ಪೀಟರ್ ಮಾಲ್ಗುಡಿ ಶೋಭಾ
ಗಂಡು : ಹೋಯ್ಯ ರಕ್ಕಾ ಹೇಹೇ ಹೋಯ್ಯ ರಕ್ಕಾ ವಾಯ್ಸು ಒದ್ದಾಡಂಗಾಗೈತೇ ಯಾಕಾ ಯಾಕಾ
ಡಬ್ಬು ಬೇಕಾ ಹೇ ಹೇ ಡಾಬು ಬೇಕಾ ಡಬ್ಬಲ್ ಗೇಂ ಮಾತ್ರ ಆಡ್ಬೇಡಾ ಯಕ್ಕಾ ಯಕ್ಕಾ
ಹೈವೇಗೆ ಒಬ್ಬಳೇ ಸುಂದ್ರಿ ನೋಡದೇನೆ ಹೋದ್ರೆ ಕಣ್ಣುರಿ
ಸಿಕ್ಕಿದ್ರೆ ನಮಗೆ ಒಂದ್ಸಾರಿ ಕೊಡ್ತೀವಿ ಪ್ರೀತಿ ಕಿಂದರಿ
ಹೋಯ್ಯ ರಕ್ಕಾ ಹೇಹೇ ಹೋಯ್ಯ ರಕ್ಕಾ ವಾಯ್ಸು ಒದ್ದಾಡಂಗಾಗೈತೇ ಯಾಕಾ ಯಾಕಾ
ಹೆಣ್ಣು : ರೂಟು ಅಂದ್ರೆ ಹಳ್ಳ ದಿಣ್ಣೆ ಇದ್ದೆ ಇರತೈತೆ ಆದರು ಕೂಡ ಬಸ್ಸೂ ಲಾರಿ ಬಂದು ಹೋಗೈತೆ
ಗಂಡು : ಹೇ.. ಹುಡ್ಗಿಯಾದ್ರೆ ನೇಚರ್ ಅಂತಾ ಗಾದೆ ಮಾತೈತೇ ಆದ್ರೂ ಹುಟ್ತಾರಾ ತಿನ್ನೋ ಬಾಕಿ ಹೆಂಗೆ ಕೊಡೈತೆ
ಕೋರಸ್ : ಅಯ್ಯಯ್ಯೋ ವಯಸ್ಸಲ್ಲಿ ಅಂದ ಇಲ್ಲಿ ಅಂದವು ದೊಡ್ಡದು ಮುಟ್ಟಿದರೆ ಕರೆಂಟು ಒಸಿ ಕಾಣಯ್ಯೋ
ಗಂಡು : ಹೋಯ್ಯ ರಕ್ಕಾ ಹೇಹೇ ಹೋಯ್ಯ ರಕ್ಕಾ ವಾಯ್ಸು ಒದ್ದಾಡಂಗಾಗೈತೇ ಯಾಕಾ ಯಾಕಾ
ಗಂಡು : ಲೆಫ್ಟಲ್ ಇವಳೂ ಕಾಶ್ಮೀರದ ಬಾರ್ಡರ್ ಇದ್ದಂಗೇ ರೈಟಲ್ ಇವಳು ಕೆಆರಎಸನ ಪ್ರಾಬ್ಲಮ್ ಇದ್ದಂಗೆ
ವಾಕಿಂಗನಲ್ಲಿ ನೇಪಾಳದ ಪ್ಯಾಲೇಸ್ ಇದ್ದಂಗೆ ಫ್ರಂಟ್ ಬ್ಯಾಕು ಯುರೋಪಿಯನ್ ಡೊಮೇಟ್ ಇದ್ದಂಗೆ
ಹೆಣ್ಣು : ರಬ್ಬರು ಇವಳ ಕುಲಕೋ ಕುಲುಕೋ ಮೈಯೋ ರಬ್ಬರೋ
ಲೇಬಲೋ ಈ ನೋಡೋ ನೋಟ ಒಂದೇ ಕೇಳೇ ಕಣೋ
ತಿಕ್ಕಲೋ ಕಿಕ್ಕಲೋ ತಿಕ್ಕಲೋ ಹೈಲಾ ಹೈಲಾ ಹೈಲಾ ಆಆಆ
ಹ್ಹಾ... ಡೋಲು ಡೋಲು ಹೇ ಡಬ್ಬಲ್ ಡೋಲು
ರಂಗ್ನವಯ್ನೋರ ಕಂಡೋರ್ಗೆ ಡೀಲು ಡೀಲು
ಮಾಲು ಮಾಲು ಹೇ ಮಸ್ತು ಮಾಲು
ಮಸ್ಕಾ ಹೊಡೆಯೋರ್ಗೆ ಬಂದೋರ್ಗೆ ಅವರೇಕಾಳು
ಮೈಯ್ಯಿಗೆ ನಾನೇ ಕಿಕ್ಕು ನನ್ನ ಟೆಕ್ನಿಕ್ಕೂ ನಾನಿಲ್ಲಿ ಮಾಡೋ ಟೆಕ್ನಿಕ್ಕೂ
ಬಟ್ಟೆ ಬರೆ ಎಲ್ಲಾ ಟಾಕ್ನಿಕೂ
ಗಂಡು : ಹೋಯ್ಯ ರಕ್ಕಾ ಹೇಹೇ ಹೋಯ್ಯ ರಕ್ಕಾ ವಾಯ್ಸು ಒದ್ದಾಡಂಗಾಗೈತೇ ಯಾಕಾ ಯಾಕಾ
ಡಬ್ಬು ಬೇಕಾ ಹೇ ಹೇ ಡಾಬು ಬೇಕಾ ಡಬ್ಬಲ್ ಗೇಂ ಮಾತ್ರ ಆಡ್ಬೇಡಾ ಯಕ್ಕಾ ಯಕ್ಕಾ
ಹೈವೇಗೆ ಒಬ್ಬಳೇ ಸುಂದ್ರಿ ನೋಡದೇನೆ ಹೋದ್ರೆ ಕಣ್ಣುರಿ
ಸಿಕ್ಕಿದ್ರೆ ನಮಗೆ ಒಂದ್ಸಾರಿ ಕೊಡ್ತೀವಿ ಪ್ರೀತಿ ಕಿಂದರಿ
ಹೋಯ್ಯ ರಕ್ಕಾ ಹೇಹೇ ಹೋಯ್ಯ ರಕ್ಕಾ ವಾಯ್ಸು ಒದ್ದಾಡಂಗಾಗೈತೇ ಯಾಕಾ ಯಾಕಾ
----------------------------------------------------------------------------------
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕವಿತಾ ಕೃಷ್ಣಮೂರ್ತಿ
ಕೋಗಿಲೆ ಕುಹೂ ಹಾಡುವೆ ಈ ದಿನ ಮುದ್ದಿಸಿ ಕೊಡು ನನ್ನ ಕವನ
ಕನಸೇ ನನ್ನ ಪಲ್ಲವಿ ಚರಣ ಮನಸು ಕೊಡು ಮರೆಯೇನು ನಿನ್ನಾ
ಕಣ್ಣಿಗೆ ಸ್ಫೂರ್ತಿ ನಮ್ಮ ನೇಸರ ಆಸೆಗೆ ಸ್ಫೂರ್ತಿ ನಮ್ಮ ಅಂಬರ
ಅಂದಕೆ ಸ್ಫೂರ್ತಿ ನಮ್ಮ ಸಾಗರ ಬಾಳಿಗೆ ಸ್ಫೂರ್ತಿ ನಮ್ಮ ಸ್ವರ
ಕೋಗಿಲೆ ಕುಹೂ ಹಾಡುವೆ ಈ ದಿನ ಮುದ್ದಿಸಿ ಕೊಡು ನನ್ನ ಕವನ
ಕನಸೇ ನನ್ನ ಪಲ್ಲವಿ ಚರಣ ಮನಸು ಕೊಡು ಮರೆಯೇನು ನಿನ್ನಾ
ಮೋಡವ ತುಂಬಿಕೊಳ್ಳೋ ಮಳೆ ಹನಿಯ ಹಾಡು ಯಾವುದೂ
ಗಾಳಿಯ ತಬ್ಬಿಕೊಳ್ಳು ಪರಿಮಳದ ಜಾಡು ಯಾವುದು
ಅರಳೋ ಸಾವಿರ ಹೂವುಗಳ ಜೇನ ಹೀರೊ ದುಂಬಿಗಳ ಪ್ರಣಯ ಪದವು ಯಾವುದದೂ
ಹೃದಯ ಹೃದಯದ ಸಂಗಮ ಮರೆತು ಮರೆಯದು ಸಂಭ್ರಮ
ನಡೆಯುವ ನಾಳೆಯ ದಾರಿಗೆ ಕೊರಳ ಗಾನ ಸರಿಗಮ
ಕೋಗಿಲೆ ಕುಹೂ ಹಾಡುವೆ ಈ ದಿನ ಮುದ್ದಿಸಿ ಕೊಡು ನನ್ನ ಕವನ
ಕನಸೇ ನನ್ನ ಪಲ್ಲವಿ ಚರಣ ಮನಸು ಕೊಡು ಮರೆಯೇನು ನಿನ್ನಾ
ಯಾರಿಗೂ ಕಾಣದ ನಾಳೆಗಳು ದಾರಿ ಯಾವುದು
ಎಂದಿಗೂ ಹಾಡುವ ಮನಸುಗಳ ದಿಕ್ಕು ಯಾವುದು
ಪ್ರೀತಿ ಪ್ರೇಮ ವಾತ್ಸಲ್ಯ ಬೆಳಗೋ ಮನಸಿನ ಸೌಂದರ್ಯ ಬೆರೆಯೋ ಬಂಧ ಯಾವುದದೂ
ಜಗವ ಮೆಚ್ಚುವ ಗುಣಗಳು ಬದುಕೇ ಮೆಚ್ಚುವ ಋಣಗಳು
ಸಾವಿರ ದೈವದ ಆಣೆಗಳು ಎಲ್ಲರು ಪ್ರೀತಿಯ ಕಣಗಳು
ಕೋಗಿಲೆ ಕುಹೂ ಹಾಡುವೆ ಈ ದಿನ ಮುದ್ದಿಸಿ ಕೊಡು ನನ್ನ ಕವನ
ಕನಸೇ ನನ್ನ ಪಲ್ಲವಿ ಚರಣ ಮನಸು ಕೊಡು ಮರೆಯೇನು ನಿನ್ನಾ
ಕಣ್ಣಿಗೆ ಸ್ಫೂರ್ತಿ ನಮ್ಮ ನೇಸರ ಆಸೆಗೆ ಸ್ಫೂರ್ತಿ ನಮ್ಮ ಅಂಬರ
ಅಂದಕೆ ಸ್ಫೂರ್ತಿ ನಮ್ಮ ಸಾಗರ ಬಾಳಿಗೆ ಸ್ಫೂರ್ತಿ ನಮ್ಮ ಸ್ವರ
ಕೋಗಿಲೆ ಕುಹೂ ಹಾಡುವೆ ಈ ದಿನ ಮುದ್ದಿಸಿ ಕೊಡು ನನ್ನ ಕವನ
ಕನಸೇ ನನ್ನ ಪಲ್ಲವಿ ಚರಣ ಮನಸು ಕೊಡು ಮರೆಯೇನು ನಿನ್ನಾ
-----------------------------------------------------------------------------------
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಎಸ್.ಪಿ.ಬಿ
ಉಸಿರೇ ಪ್ರೀತಿ ಉಸಿರೇ ಬದುಕು ನೀನೇ ಉಸಿರೇ
ಕಲ್ಲಾದ ನನ್ನನು ನೀರಾಗಿ ಮಾಡಿದೇ ನಾನಾಗಿ ಬಂದರೆ ನೀ ಬೇರಾಗಿ ಮಾಡಿದೆ
ನೀನೇ ಬರೆದ ಪ್ರೇಮಗೀತೆ ಮರೆತು ಹೋಯಿತೇ...
ಉಸಿರೇ ಪ್ರೀತಿ ಉಸಿರೇ ಬದುಕು ನೀನೇ ಉಸಿರೇ
ಓಓಓಓ .. ನನ್ನೊಳಗೆ ಸಾವಿರ ಕನಸುಗಳ ಚೆಲ್ಲಿದೆ
ನೋಡೋಕೆ ಮುಂಚೆನೇ ಕಣ್ಣುಗಳ ಚುಚ್ಚಿದೆ
ಎದೆಯೊಳಗೆ ಸಾವಿರ ಬಯಕೆಗಳ ತುಂಬಿದೆ
ಹಾಡೋಕೆ ಮುಂಚೆನೇ ಹೃದಯಾನ ಅಳಿಸಿದೆ
ಪ್ರೇಮ ಹೀಗೇನಾ... ಹೇಳು ನ್ಯಾಯಾನಾ...
ಪ್ರತಿ ರಾತ್ರಿ ಹಗಲು ನೀ ಜೊತೆಗಿರಲು ಪ್ರಾಣವನ್ನೇ ಕೊಡುವೇ
ಉಸಿರೇ ಪ್ರೀತಿ ಉಸಿರೇ ಬದುಕು ನೀನೇ ಉಸಿರೇ
ಆಆಆಅಅಅಅಅ ಭೂಮಿಯಲಿ ಪ್ರೇಮಿಗೆ ಅದು ಎಷ್ಟೋ ನೋವಿದೆ
ನನ ಪ್ರೀತಿಯ ದಾರಿಗೆ ಕವಲುಗಳು ನೂರಿವೇ
ಪ್ರತಿ ಹೆಜ್ಜೇ ಪ್ರತಿ ಸಂಜೆ ಸುಳಿವೇ ಸಿಗದಾಗಿದೆ
ಲೋಕಾ ಹೀಗೇನಾ ... ದೈವ ಕುರುಡಾನಾ
ಪ್ರತಿ ಹುಟ್ಟು ಸಾವಿನ ಆಣೆಗೂ ನಿನ್ನಲೇ ನನ್ನ ಪುನರ್ಜನ್ಮ
ಉಸಿರೇ ಪ್ರೀತಿ ಉಸಿರೇ ಬದುಕು ನೀನೇ ಉಸಿರೇ
ಕಲ್ಲಾದ ನನ್ನನು ನೀರಾಗಿ ಮಾಡಿದೇ ನಾನಾಗಿ ಬಂದರೆ ನೀ ಬೇರಾಗಿ ಮಾಡಿದೆ
ನೀನೇ ಬರೆದ ಪ್ರೇಮಗೀತೆ ಮರೆತು ಹೋಯಿತೇ...
ಉಸಿರೇ ಪ್ರೀತಿ ಉಸಿರೇ ಬದುಕು ನೀನೇ ಉಸಿರೇ
------------------------------------------------------------------------------------
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಉಷಾ, ಬದ್ರೀ
ಹೆಣ್ಣು : ಬಣ್ಣದ ಲೋಕದ ಹೂವೂಗಳೇ ಶುಭಾಷಯ
ಚಂದದ ಕನಸಿನ ತಾರೆಗಳೇ ಶುಭಾಷಯ
ಬಣ್ಣದ ಲೋಕದ ಹೂವುಗಳೇ ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆಗರೆಯೋ ಶುಭಾಷಯ ಶುಭಾಷಯ
ಅಭಿಮಾನದ ಹೂಮಳೆಯಲ್ಲಿ ಪ್ರತಿ ಅಭಿಮಾನಿಯ ನೆನಪಿರಲೀ
ಕೋರಸ್ : ಬದುಕು ನಾಗಲಿ ಪ್ರತಿ ಸ್ನೇಹದ ಅಲೆಅಲೆಯಲಿ
ಹೆಣ್ಣು : ಬಣ್ಣದ ಲೋಕದ ಹೂವೂಗಳೇ ಶುಭಾಷಯ
ಚಂದದ ಕನಸಿನ ತಾರೆಗಳೇ ಶುಭಾಷಯ
ಬಣ್ಣದ ಲೋಕದ ಹೂವುಗಳೇ ನಿಮಗೆ ಶುಭಾಷಯ ಶುಭಾಷಯ
ಹೆಣ್ಣು : ನೂರು ವರುಷದ ಕನಸುಗಳೆಲ್ಲ ಒಂದೇ ನಿಮಿಷಕೆ ನಡೀಬೇಕು
ಒಂದು ನಿಮಿಷದ ಧ್ಯೇಯದ ಮಾತು ನೂರು ವರುಷವೂ ನಡೀಬೇಕು
ಗಂಡು : ಮಾನವೇ ನಿಮ್ಮ ಒಳಮಾತು ದಾನವೇ ನಿಮ್ಮ ನಿಜ ಗುರುತೂ
ಹೆಣ್ಣು : ಅಕ್ಕರೆ ತುಂಬಿದ ಕೊರಳಿರಲಿ ಆಸರೆ ತುಂಬಿದ ನೆರಳಿರಲಿ
ನಂಬಿಕೆ ಎಂಬುದೇ ನಿಮ್ಮ ನಾಳೆಗಳ ಕಾಯಲಿ
ಬಣ್ಣದ ಲೋಕದ ಹೂವೂಗಳೇ ಶುಭಾಷಯ
ಚಂದದ ಕನಸಿನ ತಾರೆಗಳೇ ಶುಭಾಷಯ
ಬಣ್ಣದ ಲೋಕದ ಹೂವುಗಳೇ ನಿಮಗೆ ಶುಭಾಷಯ ಶುಭಾಷಯ
ಗಂಡು : ಯಾವ ಸೋಲಿಗೂ ಕುಗ್ಗದ ಹಾಗೆ ದಿಟ್ಟತನದಾ ನಿಲುವಿರಲೀ
ಯಾವ ನೋವಿಗೂ ಸೋಲದ ಹಾಗೆ ಪುಟ್ಟ ಮಗುವಿನ ನಗುವಿರಲಿ
ಹೆಣ್ಣು : ಕಲೆಗೆ ಕನ್ನಡಿ ನೀವಾಗಿ ಕಲಿಕೆಗೆ ಮುನ್ನಡಿ ನೀವಾಗಿ
ಸಾವಿರ ದೈವದ ಕೃಪೆ ಇರಲಿ ಮನೆ ಮನೆಯಲ್ಲೂ ನಿಮ್ಮ ಕಥೆ ಇರಲಿ
ಮಣ್ಣಿನ ಋಣವು ಭೂಮಿ ಇರೋ ವರೆಗಿರಲೀ
ಬಣ್ಣದ ಲೋಕದ ಹೂವೂಗಳೇ ಶುಭಾಷಯ
ಚಂದದ ಕನಸಿನ ತಾರೆಗಳೇ ಶುಭಾಷಯ
ಬಣ್ಣದ ಲೋಕದ ಹೂವುಗಳೇ ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆಗರೆಯೋ ಶುಭಾಷಯ ಶುಭಾಷಯ
ಅಭಿಮಾನದ ಹೂಮಳೆಯಲ್ಲಿ ಪ್ರತಿ ಅಭಿಮಾನಿಯ ನೆನಪಿರಲೀ
------------------------------------------------------------------------------------
No comments:
Post a Comment