1585. ಭೀಮಸೇನ ನಳಮಹಾರಾಜ (೨೦೨೦)

ಭೀಮಸೇನ ನಳಮಹಾರಾಜ ಚಲನಚಿತ್ರದ ಹಾಡುಗಳು 
  1. ತಣ್ಣೀರ ಮಿಂದ್ರೇ ತಣ್ಣಗಾಯ್ತದೆ 
  2. ಕಣ್ಣ ಮುಚ್ಚೆ ಒಮ್ಮೆ ನೀನು ನನ್ನ ನೋಡೆ
  3. ನಿನ್ನಲೆ ನಿನ್ನಲೇ ನಾ ಕಂಡೆ ನಿನ್ನಲೇ
ಭೀಮಸೇನ ನಳಮಹಾರಾಜ (೨೦೨೦) - ತಣ್ಣೀರ ಮಿಂದ್ರೇ ತಣ್ಣಗಾಯ್ತದೆ 
ಸಂಗೀತ : ಚರಣರಾಜ, ಸಾಹಿತ್ಯ : ಅಂಕನಾಯಕ(ಜೋಗಪ್ಪಾ ಮಾಸ್ಟರ್ ) ಗಾಯನ : ಜನಾರ್ಧನ, ಚಿಂತನ ವಿಕಾಸ 

ತಣ್ಣೀರ್ ಮಿಂದ್ರೇ ತಣ್ಗಾಯ್ತದೆ ಬಿಸ್ನೀರ್ ಮೀದ್ರೆ ಬೆಚ್ಗಯ್ತದೆ
ತಣ್ಣೀರ್ ಮಿಂದ್ರೇ ತಣ್ಗಾಯ್ತದೆ ಬಿಸ್ನೀರ್ ಮೀದ್ರೆ ಬೆಚ್ಗಯ್ತದೆ

ದಾರಿಲಿ ಮರ ಇದ್ರೆ ನೆರಳಾಯ್ತದೆ ದಾರಿ ತಪ್ಪಿ ನಡೆದರೆ ಕೇಡಾಯ್ತದೆ
ದಾಂಡಿಗ್ನಾಗಿ ಬೆಳೆದ್ರೆ ದಂಡವಾಯ್ತದೆ
ದಾನ ಧರ್ಮ ಮಾಡುದ್ರೆ ಸುಖವಾಯ್ತದೆ ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
ತಣ್ಣೀರ್ ಮಿಂದ್ರೇ ತಣ್ಗಾಯ್ತದೆ ಬಿಸ್ನೀರ್ ಮೀದ್ರೆ ಬೆಚ್ಗಯ್ತದೆ
ತಣ್ಣೀರ್ ಮಿಂದ್ರೇ ತಣ್ಗಾಯ್ತದೆ ಬಿಸ್ನೀರ್ ಮೀದ್ರೆ ಬೆಚ್ಗಯ್ತದೆ

ಕುಂತವ ಕುಣಿಯಬೇಕು ಆಹಾ.. ಆಹಾ ಕಣ್-ಮನ ತಣಿಯ ಬೇಕು ಆಹಾ..ಆಹಾ
ಕಾಲಿಗೆ ಗೆಜ್ಜೆ ಬೇಕು ಆಹಾ.. ಆಹಾ ಕಾಡಿಗೆ ಕಣ್ಣಿಗೆ ಬೇಕು ಆಹಾ ಆಹಾ
ದುಡ್ಕು -ಗಿಡ್ಕು ಬೀಳಬೇಕು ದುಡಿಮೆಗಾರ ನಗಬೇಕು
ದುಡ್ಡಣ್ಙ ದುಡಿಬೇಕು ದೊಡ್ಡ ಗುಣ ಪಡಿಬೇಕು
ದುಡ್ಡು ಗಿಡ್ಡು ಮಡ್ಗುದ್ರೆ ನಿನ್ದಾಯ್ತದೆ
ರಂಬೆ ಹಿಂದೆ ಹೋಗೊ ಬಾಳು ಹಾಳಾಯ್ತದೆ ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
ತಣ್ಣೀರ್ ಮಿಂದ್ರೇ ತಣ್ಗಾಯ್ತದೆ ಬಿಸ್ನೀರ್ ಮೀದ್ರೆ ಬೆಚ್ಗಯ್ತದೆ
ತಣ್ಣೀರ್ ಮಿಂದ್ರೇ ತಣ್ಗಾಯ್ತದೆ ಬಿಸ್ನೀರ್ ಮೀದ್ರೆ ಬೆಚ್ಗಯ್ತದೆ

ರಾಗಿ ಮುದ್ದೆ ಉಂಡ್ರೆ ರೋಗ ಹೋಯ್ತದೆ ರೋಗ ಹೋಯ್ತದೆ
ರಾಗವಾಗಿ ಹಾಡು ಹಾಡು ಹಾಡು ಹಾಡು ಸೊಗಸಾಯ್ತದೆ ಹಾಡು ಸೊಗಸಾಯ್ತದೆ
ಹಾಡು ಸೊಗಸಾಯ್ತದೆ ಹಾಡು ಸೊಗಸಾಯ್ತದೆ ಕನ್ನಡ ಕನ್ನಡ
ಕನ್ನಡ ಕಲಿಬೇಕು ಗಂಡುಗಲಿ ಆಗಬೇಕು ಕಿಚ್ಚೆದೆ ಇರಬೇಕು ಕೈ ತುತ್ತು ಕಟ್ಟಬೇಕು 
ಹೌದನೋ ಹೌದು ಹುಲಿಯಾ
ತೆಂಗಿನ್ ಮರ ನೆಟ್ರೆ ನೀರ್ ಕೊಡ್ತದೆ ಏನೊ ತಮ್ಮ? 
ತೆಂಗಿನ್ ಮರ ನೆಟ್ರೆ ನೀರ್ ಕೊಡ್ತದೆ ಕಾಡು-ಕುಡಿ ಬೆಳುದ್ರೆ ಸಾರ್ಗಾಯ್ತದೆ
ಆಯ್ತದೆ ಆಯ್ತದೆ ಆಯ್ತದೆ ಆಯ್ತದೆ
ತಣ್ಣೀರ್ ಮಿಂದ್ರೇ ತಣ್ಗಾಯ್ತದೆ ಬಿಸ್ನೀರ್ ಮೀದ್ರೆ ಬೆಚ್ಗಯ್ತದೆ
ತಣ್ಣೀರ್ ಮಿಂದ್ರೇ ತಣ್ಗಾಯ್ತದೆ ಬಿಸ್ನೀರ್ ಮೀದ್ರೆ ಬೆಚ್ಗಯ್ತದೆ
------------------------------------------------------------------------------------------------

ಭೀಮಸೇನ ನಳಮಹಾರಾಜ (೨೦೨೦) - ಕಣ್ಣು ಮುಚ್ಚಿ ಒಮ್ಮೆ ನೀನು ನನ್ನ ನೋಡೇ 
ಸಂಗೀತ : ಚರಣರಾಜ, ಸಾಹಿತ್ಯ : ಕಾರ್ತಿಕ ಸರಗೂರ ಗಾಯನ : ಸಿದ್ದಾರ್ಥ ಸುಂದರ, ಸಾಧ್ವಿನಿ ಕೊಪ್ಪ 

ಕಣ್ಣ ಮುಚ್ಚೆ ಒಮ್ಮೆ ನೀನು ನನ್ನ ನೋಡೆ
ಕಾಡೆ ಗೂಡೆ ನೆನಪ ಮೂಟೆ ತೆರೆದು ನೀ ಕೊಡೆ

ಕರೆದರೂ ಕೇಳಿಸದಂತೆ ಕಂಡರೂ ಕಾಣಿಸದಂತೆ
ಗುರುತೆ ಹಿಡಿಯದ ಆಟವು ಏಕೆ? ಇನಿಯನ ಸೋಲು ನಿನಗು ಬೇಕೆ?
ಕಣ್ಣ ಮುಚ್ಚೆ ಒಮ್ಮೆ ನೀನು ನನ್ನ ನೋಡೆ!
ಕಾಡೆ ಗೂಡೆ ನೆನಪ ಮೂಟೆ ತೆರೆದೊಮ್ಮೆ ದೂಡೆ
ಕಣ್ಣ ಮುಚ್ಚೆ ಒಮ್ಮೆ ನೀನು ನನ್ನ ನೋಡೆ

ಬೆಳಕೊಂದು ಹರಿಯುತ ಇರುಳೆಲ್ಲಾ ಕಳೆಯಲಿ
ಈ ಬಿಸುಪೆಲ್ಲಾ ಸೇರುತ ಹೊಸ ರುಚಿಯು ಮೂಡಲಿ
ಬಾನ ಬಾಳ ಬೆಳಗೊ ಆಸರೆ ಆದರೆ
ಸಾಕು ಹೆಜ್ಜೆ ಮೂಡೊ ಗಳಿಗೆಗೆ ಭರವಸೆ ಬೇಕು
ಕಣ್ಣ ಮುಚ್ಚೆ ಒಮ್ಮೆ ನೀನು ನನ್ನ ನೋಡೆ!
ಕಾಡೆ ಗೂಡೆ ನೆನಪ ಮೂಟೆ ತೆರೆದೊಮ್ಮೆ ದೂಡೆ
ಕಣ್ಣ ಮುಚ್ಚೆ ಒಮ್ಮೆ ನೀನು ನನ್ನ ನೋಡೆ!
ಕಾಡೆ ಗೂಡೆ ನೆನಪ ಮೂಟೆ ತೆರೆದೊಮ್ಮೆ ದೂಡೆ.
------------------------------------------------------------------------------------------------

ಭೀಮಸೇನ ನಳಮಹಾರಾಜ (೨೦೨೦) - ನಿನ್ನಲೇ ನಿನ್ನಲೇ ನಾ ಕಂಡೆ ನಿನ್ನಲೇ 
ಸಂಗೀತ : ಚರಣರಾಜ, ಸಾಹಿತ್ಯ : ಕಾರ್ತಿಕ ಸರಗೂರ ಗಾಯನ : ಶರತ ಸಂತೋಷ, ಶ್ರೀಲಕ್ಷ್ಮೀ ಬೆಲ್ಮನ್ನೂ  

ನಿನ್ನಲೆ ನಿನ್ನಲೇ ನಾ ಕಂಡೆ ನಿನ್ನಲೇ
ಕಣ್ಣಲೇ ಕಣ್ಣಲೇ ನೀ ಒಲಿವ ಈ ಕಲೆ

ಒಂದಾದೆ ನಾನಾಗಲೆ ನಾನಾದೆ ನೀನಾದೆ ನನ್ನಲೇ
ಒಡಲಾಳದಲ್ಲಿದೆ ಜೀವದ ಹೂವು
ಒಡನಾಡಿ ನೀಡಿದೆ ಪ್ರೀತಿ ಕಾವು
ಸಿಹಿರಾಗ ಸೇರಿ ಭಾವ ತೀರ ಸೇರಲೆ
ನಿನ್ನಲೆ ನಿನ್ನಲೇ ನಾ ಕಂಡೆ ನಿನ್ನಲೇ
ಕಣ್ಣಲೆ ಕಣ್ಣಲೇ ನೀ ಒಲಿವ ಈ ಕಲೆ

ಇನ್ನೇತಕೆ ಈ ನಾಚಿಕೆ ಸಂಗಾತಿ ನೀನಲ್ಲವೆ
ನಿನ್ನಾಸೆಯ ಪೂರೈಸುವ ಮಹಾರಾಜ ನಾನಲ್ಲವೆ
ಒಲವಾಗಿ ನೀ ಬಾರೋ ಕಣ್ಮಣಿ
ಆಗಲು ನೀ ಇಂದು ನನ್ನಾ ಧಣಿ
ನಿನ್ನಯ ನೋವನು ತೀರದ ನೆನಪನು
ಮರೆಯುವ ಹಾಗೆನಾ ಹಾಡಾಗಲೆ
ಸಿಹಿಬಾವ ಸೇರಿ ನಲ್ಲ ನಾದವಾಗಲಿ
ನಿನ್ನಲೆ ನಿನ್ನಲೇ ನಾ ಕಂಡೆ ನಿನ್ನಲೇ
ಕಣ್ಣಲೆ ಕಣ್ಣಲೇ ನೀ ಒಲಿವ ಈ ಕಲೆ....
------------------------------------------------------------------------------------------------

No comments:

Post a Comment