- ಗೆದ್ದವಳು ನಾನೇ
- ಪಿಳಿಪಿಳಿ ಕಣ್ಣಿನ ಬೊಂಬೆ
- ಹೆಂಡತಿಯಂತೇ ಸಂಸಾರವಂತೇ
- ಸಾಕಪ್ಪ ಸಾಕು
- ನಾನು ಕಾರಣಳಲ್ಲಾ
ಗೆದ್ದವಳು ನಾನೇ (೧೯೭೭) - ಗೆದ್ದವಳು ನಾನೇ
ಗೆದ್ದವಳು ನಾನೇ (೧೯೭೭) - ಪಿಳಿಪಿಳಿ ಕಣ್ಣಿನ ಬೊಂಬೆ
ಗೆದ್ದವಳು ನಾನೇ (೧೯೭೭) - ಹೆಂಡತಿಯಂತೇ ಸಂಸಾರವಂತೇ
ಗೆದ್ದವಳು ನಾನೇ (೧೯೭೭) - ಸಾಕಪ್ಪ ಸಾಕೂ
ಗೆದ್ದವಳು ನಾನೇ (೧೯೭೭) - ನಾನು ಕಾರಣಳಲ್ಲಾ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಕೆ.ಜೆ.ಏಸುದಾಸ್, ಪಿ.ಸುಶೀಲಾ
ಗಂಡು : ಹೇಹೇ .. ಹೆಣ್ಣು : ಆ.. ಆಹಾ
ಗಂಡು : ಓಹೋಹೋ.. ಹೆಣ್ಣು : ಆ.. ಆಹಾಹಾ
ಹೆಣ್ಣು : ಗೆದ್ದವಳೂ ನಾನೇ .. ಬಾಳಿನ ಪಂದ್ಯದೇ
ಸೋತವಳೂ ನಾನೇ ಹೆಣ್ಣನೊಲವಿನ ತೋಟದೇ...
ಗಂಡು : ಗೆದ್ದವಳು ನೀನೇ .. ಒಲವಿನ ಪಂದ್ಯದೇ..
ಸೋತವನೂ ನಾನೇ... ಈ ಚೆಲುವಿನ ಬೊಂಬೆಗೇ ...
ಹೆಣ್ಣು : ಮುಗಿಲಿನ ಗೆಲುವೂ ನವಿಲಿನ ಸೋಲೂ ಸೂರ್ಯನ ಧ್ಯೇಯವು ತಾವರೇ ಮೇಲೂ
ಗಂಡು : ಗಂಡಿನ ಹೃದಯ ಹೆಣ್ಣಿನ ಪಾಲು ಸೊಬಗಿಗೇ ಸೋತಿದೆ ಕವಿಗಳ ಸಾಲೂ ..
ಹೆಣ್ಣು : ನನ್ನ ಕಣ್ಣಲೀ ನಿನ್ನ ರೂಪದ ಪ್ರತಿಬಿಂಬವೂ ..
ಗಂಡು : ಪ್ರೀತಿ ಎನ್ನುವ ಕಥೆಗೆ ಇಲ್ಲಿದೆ ಆರಂಭವೂ ..
ಹೆಣ್ಣು : ಗೆದ್ದವಳೂ ನಾನೇ .. ಬಾಳಿನ ಪಂದ್ಯದೇ
ಸೋತವಳೂ ನಾನೇ ಹೆಣ್ಣನೊಲವಿನ ತೋಟದೇ...
ಹೆಣ್ಣು : ಗರತಿಗೆ ಅಂದ ಕುಂಕುಮದಿಂದ ಪ್ರೀತಿಯ ತುಂಬಿದ ಗೃಹವೇ ಚೆಂದ
ಗಂಡು : ಗಂಡನ ಬಾಳಿಗೆ ಮಡದಿಯೇ ಅಂದ ಮುದ್ದಿನ ಮಕ್ಕಳ ನಗೆ ಮಕರಂದ
ಹೆಣ್ಣು : ನಿಮ್ಮ ಚಿನ್ಮಣಿ ಹೊತ್ತು ತಂದಿಹ ಮಗುವಾಗಲಿ
ಗಂಡು : ನಿನ್ನ ಹರಕೆಯು ನನ್ನ ಬಯಕೆಯು ಈಡೇರಲೀ ...
ಹೆಣ್ಣು : ಗೆದ್ದವಳೂ ನಾನೇ .. ಬಾಳಿನ ಪಂದ್ಯದೇ
ಸೋತವಳೂ ನಾನೇ ಹೆಣ್ಣನೊಲವಿನ ತೋಟದೇ...
ಗಂಡು : ಗೆದ್ದವಳು ನೀನೇ .. ಒಲವಿನ ಪಂದ್ಯದೇ..
ಸೋತವನೂ ನಾನೇ... ಈ ಚೆಲುವಿನ ಬೊಂಬೆಗೇ ... ಏಏಏಏಏಏಏ
ಹೆಣ್ಣು : ಗೆದ್ದವಳೂ ನಾನೇ ..
-------------------------------------------------------------------------------------------------
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ
ಪಿಳಿಪಿಳಿ ಕಣ್ಣಿನ ಗೊಂಬೀ ಟೊಮೆಟೋ ಕೆನ್ನೆಯ ಗೊಂಬೀ
ಮುದ್ದಿನ ಮಾತೆನು ಆಡುತ ಬರುವ ಚೆಲುವಿನ ಪುಟಾಣಿ ಗೊಂಬೆ
ಪಿಳಿಪಿಳಿ ಕಣ್ಣಿನ ಗೊಂಬೀ ಟೊಮೆಟೋ ಕೆನ್ನೆಯ ಗೊಂಬೀ
ಮುದ್ದಿನ ಮಾತೆನು ಆಡುತ ಬರುವ ಚೆಲುವಿನ ಪುಟಾಣಿ ಗೊಂಬೆ
ಹಲ್ಲಿಲ್ಲದ ಬಾಯಲ್ಲಿ ನಗೆ ತೇರನ್ನೂ ಸುತ್ತುವಾ
ಹಸಿವಾದಾಗ ತಾರಕ್ಕ ಎರದೇ ಕಚೇರಿಯನ್ನು ನಡೆಸುವ (ಮಗುವಿನ ಅಳು)
ಹಲ್ಲಿಲ್ಲದ ಬಾಯಲ್ಲಿ ನಗೆ ತೇರನ್ನೂ ಸುತ್ತುವಾ
ಹಸಿವಾದಾಗ ತಾರಕ್ಕ ಎರದೇ ಕಚೇರಿಯನ್ನು ನಡೆಸುವ
ಹೊಟ್ಟೆ ತುಂಬಿದ ಮೇಲೆ ಲೊಟ್ಟೇ ಹೊಡೆದು ಆಡುವಾ
ಹೊಟ್ಟೆ ತುಂಬಿದ ಮೇಲೆ ಲೊಟ್ಟೇ ಹೊಡೆದು ಆಡುವಾ
ಅಂಬೆಗಾಲದೆ ಹೆಚ್ಚುತ್ತ ನೆಲಕೆ ಚರಕ ಎಂದು ಓಡುವಾ
ಪಿಳಿಪಿಳಿ ಕಣ್ಣಿನ ಗೊಂಬೀ ಟೊಮೆಟೋ ಕೆನ್ನೆಯ ಗೊಂಬೀ
ಮುದ್ದಿನ ಮಾತೆನು ಆಡಿಸ ಬರುವ ಚೆಲುವಿನ ಪುಟಾಣಿ ಗೊಂಬೆ
ಬೆಣ್ಣೆ ಕೃಷ್ಣನ ಹಾಗೇ ತುಂಟುತನವನ್ನೂ ಮಾಡುವಾ
ಕಣ್ಣ ಜಗ ತುತ್ತೂರಿಯಲ್ಲಿ ತಕತಕ ಚಿಕಿಚಿಕಿ ಊದುವಾ
ಬೆಣ್ಣೆ ಕೃಷ್ಣನ ಹಾಗೇ ತುಂಟುತನವನ್ನೂ ಮಾಡುವಾ
ಕಣ್ಣ ಜಗ ತುತ್ತೂರಿಯಲ್ಲಿ ತಕತಕ ಚಿಕಿಚಿಕಿ ಊದುವಾ
ಅಪ್ಪನ ಬೆನ್ನನೂ ಏರಿ ಕುದುರೆ ಸವಾರಿಯೂ ಮಾಡುವಾ
ಅಪ್ಪನ ಬೆನ್ನನೂ ಏರಿ ಕುದುರೆ ಸವಾರಿಯೂ ಮಾಡುವಾ
ಅಮ್ಮನ ಸೀರೆ ಸೆರಗಲ್ಲಿ ಕಣ್ಣಾಮುಚ್ಚಾಲೆ ಆಡುವಾ
ಪಿಳಿಪಿಳಿ ಕಣ್ಣಿನ ಗೊಂಬೀ ಟೊಮೆಟೋ ಕೆನ್ನೆಯ ಗೊಂಬೀ
ಮುದ್ದಿನ ಮಾತೆನು ಆಡಿಸ ಬರುವ ಚೆಲುವಿನ ಪುಟಾಣಿ ಗೊಂಬೆ
ತಾಯ ಮಡಿಲಿನ ಮೇಲೆ ರಾಜ್ಯಭಾರವ ಮಾಡುವಾ
ತೋಟ್ಟಿದರೇ ತಾ ಮಲಗಿ ಜೋಗುಳ ಕೇಳುತ ಮಲಗುವಾ
ಉಳುಲುಲುಳುಲಾಯಿ ಉಳುಲುಲುಳುಲಾಯಿ
ಉಳುಲುಲುಳುಲಾಯಿ ಉಳುಲುಲುಳುಲಾಯಿ
ನಮ್ಮ ಮನೆಯ ಈ ಅತಿಥಿ ಮನೆಯನು ನಂದನ ಮಾಡುವ
ನಮ್ಮ ಮನೆಯ ಈ ಅತಿಥಿ ಮನೆಯನು ನಂದನ ಮಾಡುವ
ಎಲ್ಲರ ಹರಕೆ ತಾ ಪಡೆದು ನೂರು ವರುಷ ಬಾಳುವ
ಪಿಳಿಪಿಳಿ ಕಣ್ಣಿನ ಗೊಂಬೀ ಟೊಮೆಟೋ ಕೆನ್ನೆಯ ಗೊಂಬೀ
ಮುದ್ದಿನ ಮಾತೆನು ಆಡಿಸ ಬರುವ ಚೆಲುವಿನ ಪುಟಾಣಿ ಗೊಂಬೆ
-------------------------------------------------------------------------------------------------
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ, ಕೋರಸ್
ಹೆಂಡತಿಯಂತೇ ಸಂಸಾರವಂತೇ ಎಲ್ಲಾ ಬರಿ ಸುಳ್ಳೇ
ಜೀವನವೆಂಬುದೂ ನಾಕು ದಿನ ಸಂತೆ ನೀರನ ಮೇಲಿನ ಗುಳ್ಳೇ .. ನೀರನ ಮೇಲಿನ ಗುಳ್ಳೇ ..
(ಆಆಆಆಅ ಆಆಆಆಅ ಆಆಆಆಅ ಆಆಆಆಅ )
ಸಾವಿನ ವರೆಗೆ ಸಂಗಾತಿ ಎಂದಳು ಸಪ್ತಪದಿಗಳ ತುಳಿಯುವ ವೇಳೆ
(ಹೂಂಹೂಂಹೂಂಹೂಂಹೂಂಹೂಂಹೂಂ)
ಸಾವಿನ ವರೆಗೆ ಸಂಗಾತಿ ಎಂದಳು ಸಪ್ತಪದಿಗಳ ತುಳಿಯುವ ವೇಳೆ
ಮರೆಯಿತೇ ವಚನ ಮುಗಿಯಿತೇ ಸ್ನೇಹ...
ಮರೆಯಿತೇ ವಚನ ಮುಗಿಯಿತೇ ಸ್ನೇಹ ಕಣ್ಮರೆಯಾಗುವ ವೇಳೇ .....
ಹೆಂಡತಿಯಂತೇ ಸಂಸಾರವಂತೇ ಎಲ್ಲಾ ಬರಿ ಸುಳ್ಳೇ
ಜೀವನವೆಂಬುದೂ ನಾಕು ದಿನ ಸಂತೆ ನೀರನ ಮೇಲಿನ ಗುಳ್ಳೇ .. ನೀರನ ಮೇಲಿನ ಗುಳ್ಳೇ ..
(ಆಆಆಆಅ ಆಆಆಆಅ ಆಆಆಆಅ ಆಆಆಆಅ )
ನೆನೆಯಲು ಕಲಿತ ಹೃದಯವೇ ಏಕೆ ಮರೆಯಲು ನೀನೂ ಕಲಿಯಲಿಲ್ಲ
(ಆಆಆಆ ಆಆಆಆ ಆಆಆಆ ಆಆಆಆ )
ನೆನೆಯಲು ಕಲಿತ ಹೃದಯವೇ ಏಕೆ ಮರೆಯಲು ನೀನೂ ಕಲಿಯಲಿಲ್ಲ (ಆ ಆ ಆ ಆ ಆ ಆ)
ಮರೆಯಲು ನೆನೆಯಲು ಬೇರೆ ಬೇರೆ ಮನಗಳ ದೈವವು ಕೊಡಲಿಲ್ಲ
ಕಂಬನಿ ಒರೆಸಲೂ ಅವಳೇ ಇಲ್ಲ...
ಕಂಬನಿ ಒರೆಸಲೂ ಅವಳೇ ಇಲ್ಲ ಬದುಕಿಗೇ ಅರ್ಥವೇ ಇನ್ನಿಲ್ಲಾ...
--------------------------------------------------------------------------------------------------
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನೋರಮಾ
ಅಬ್ಬಬ್ಬಬ್ಬಬ್ಬಬ್ಬಬ್ಬಬಾ ...ಸಾಕಪ್ಪಾ ಸಾಕೂ ಇನ್ಯಾಕಪ್ಪಾ ಬೇಕೂ
ಸಾಕಪ್ಪಾ ಸಾಕೂ ಇನ್ಯಾಕಪ್ಪಾ ಬೇಕೂ
ಕಲ್ಲ ತಾಗಿದ್ದ ಮ್ಯಾಲೆ ಬುದ್ದಿ ಬಂತೂ ಬುದ್ದಿ ಬರೋ ಹೊತ್ತಿ ಮಾನ ಹೋಯ್ತು
ಈ ಬುದ್ದಿ ಮುಂಚೇನೇ ಇದ್ದಿದ್ರೇ ನಮ್ಮೂರಿಗೇ ತಾಪತ್ರೇ ಯಾಕೇ ಬರತಿತ್ತೂ
ಸಾಕಪ್ಪಾ ಸಾಕೂ ಇನ್ಯಾಕಪ್ಪಾ ಬೇಕೂ
ಊರೂರ ನಮಸ್ಕಾರ ಬೇಡವೇ ಬೇಡ ಮೂಲೆ ಮೂಲೆಯಲೂ ಕರೆದಿದೆ ನೋಡ
ಊರೂರ ನಮಸ್ಕಾರ ಬೇಡವೇ ಬೇಡ ಮೂಲೆ ಮೂಲೆಯಲೂ ಕರೆದಿದೆ ನೋಡ
ಹನ್ನೆರಡರಾದರೇ ಪಡುತ್ತಿರೂ ಪಾಡು ನಮ್ಮ ಶತೃಕೂ ಬೇಡಪ್ಪಾ ಬೇಡ
ಸೋಡಾ... ಸೋಡಾ... ಸೋಡಾ...
ಸಾಕಪ್ಪಾ ಸಾಕೂ ಇನ್ಯಾಕಪ್ಪಾ ಬೇಕೂ
ಕಲ್ಲ ತಾಗಿದ್ದ ಮ್ಯಾಲೆ ಬುದ್ದಿ ಬಂತೂ ಬುದ್ದಿ ಬರೋ ಹೊತ್ತಿ ಮಾನ ಹೋಯ್ತು
ಈ ಬುದ್ದಿ ಮುಂಚೇನೇ ಇದ್ದಿದ್ರೇ ನಮ್ಮೂರಿಗೇ ತಾಪತ್ರೇ ಯಾಕೇ ಬರತಿತ್ತೂ
ಸಾಕಪ್ಪಾ ಸಾಕೂ ಇನ್ಯಾಕಪ್ಪಾ ಬೇಕೂ
ಕೊರವಂಜಿಗೇ ಯಾಕೇ ಓವರ್ ಟೈಮ್ಮೂ.. ಅವನಿಗೂ ಹಾಕ್ ಬೇಕೂ ಡ್ಯೂಟಿ ಟೈಮೂ
ಬ್ರಹ್ಮನಿಗೇ ಯಾಕೇ ಓವರ್ ಟೈಮ್ಮೂ.. ಅವನಿಗೂ ಹಾಕ್ ಬೇಕೂ ಡ್ಯೂಟಿ ಟೈಮೂ
ಆರುತಿಗೊಂದು ಕೀರುತಿಗೊಂದು ಬೇಡೋಕೂ ಚೆಂದ ನೋಡೋಕೂ ಚೆಂದ
ಕೊಟ್ಟಿದ್ರೆ ಒಂದ್ ಗಂಡೂ ಮುಂಚೆನೇ ನಂಗೇ ಹನುಮಾನ ಬಾಲ ಬೆಳಿತ್ತಿತ್ತೇ ಹಿಂಗೇ..
ಲೊಲೊಳೊಳಾಯೀ... ಲೊಲೊಳೊಳಾಯೀ... ಲೊಲೊಳೊಳಾಯೀ...
ಅಪ್ಪಗೇರ ಬಯಕೆಗಳ ತುಂಬೋದು ಕಷ್ಟ.. ಹನ್ನೊಂದು ಹೆಣ್ಣಗಳ ಮದುವೆಯೂ ಕಷ್ಟ..
ಅದುಮಿರೋ ಬಯಕೆಗಳ ತುಂಬೋದು ಕಷ್ಟ.. ಹನ್ನೊಂದು ಹೆಣ್ಣಗಳ ಮದುವೆಯೂ ಕಷ್ಟ..
ನಮ್ಮಂಥೊರಿಂದ ದೇಶಕ್ಕೇ ಕಷ್ಟ ಜನಸಂಖ್ಯೆ ಹೆಚ್ಚಿದ್ರೆ ನಮಗೇ ನಷ್ಟ..
ಮಿತಿಮೀರಿ ಮಕ್ಕಳ ಪಡೆಯಲೇ ಬೇಡ ಇಲ್ಲದಿದ್ರೇ ನಮ್ಮಂಗೇ ಅಳಬೇಕ ನೋಡ..
ಸೋಡಾ... ಸೋಡಾ... ಸೋಡಾ...
ಸಾಕಪ್ಪಾ ಸಾಕೂ ಇನ್ಯಾಕಪ್ಪಾ ಬೇಕೂ
ಕಲ್ಲ ತಾಗಿದ್ದ ಮ್ಯಾಲೆ ಬುದ್ದಿ ಬಂತೂ ಬುದ್ದಿ ಬರೋ ಹೊತ್ತಿ ಮಾನ ಹೋಯ್ತು
ಈ ಬುದ್ದಿ ಮುಂಚೇನೇ ಇದ್ದಿದ್ರೇ ನಮ್ಮೂರಿಗೇ ತಾಪತ್ರೇ ಯಾಕೇ ಬರತಿತ್ತೂ
ಸಾಕಪ್ಪಾ ಸಾಕೂ ಇನ್ಯಾಕಪ್ಪಾ ಬೇಕೂ
ಸಾಕಪ್ಪಾ ಸಾಕೂ ಇನ್ಯಾಕಪ್ಪಾ ಬೇಕೂ ಹೂಂ ... ಸಾಕೂ ...
--------------------------------------------------------------------------------------------------
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ನಾನೂ ಕಾರಣ ಅಲ್ಲಾ ಇದಕ್ಕೇ ನೀವೂ ಕಾರಣರಲ್ಲಾ
ನಮ್ಮನೂ ಬಾಳಲಿ ಬೆಸೆದಿರಲು ನೂತನ ಕಥೆಯ ಬರೆದವನು ಆ ಅವನೇ... ಕಾರಣನೂ ...
ನಾನೂ ಕಾರಣ ಅಲ್ಲಾ ಇದಕ್ಕೇ ನೀವೂ ಕಾರಣರಲ್ಲಾ
ಸಾವಿರ ಮಾತಲಿ ಕೆಳಗೇ .. ತುಟಿ ಹೇಳಿದೇ.. ಹೇಳದೇ ಉಳಿದಿವೆ ಹಲವು ನನ್ನ ನಾಲಿಗೇ ...
ಸಾವಿರ ಮಾತಲಿ ಕೆಳಗೇ .. ತುಟಿ ಹೇಳಿದೇ.. ಹೇಳದೇ ಉಳಿದಿವೆ ಹಲವು ನನ್ನ ನಾಲಿಗೇ ...
ಒಲವೆನ್ನಲೇ.... ಒಗಟೇನ್ನಲೇ ... ಒಡನಾಡಿಯಾ.. ಹಿತವೆನ್ನಲ್ಲೇ...
ಮತ್ತೇ ಏಕೇ ಇಂದೂ ನಿನ್ನ ಈ ಮೌನ..
ನಾನೂ ಕಾರಣ ಅಲ್ಲಾ ಇದಕ್ಕೇ ನೀವೂ ಕಾರಣರಲ್ಲಾ
ತ್ಯಾಗದ ಪೂಜೆಯ ಮೇಲೆ ಸಂಸಾರವಂತೇ .. ಕಂಬನಿ ಹನಿಗಳ ಹಿಂದೆ ಸಂತೋಷವಂತೇ ..
ತ್ಯಾಗದ ಪೂಜೆಯ ಮೇಲೆ ಸಂಸಾರವಂತೇ .. ಕಂಬನಿ ಹನಿಗಳ ಹಿಂದೆ ಸಂತೋಷವಂತೇ ..
ಮನ ನೆಮ್ಮದಿ.. ನಿಮ್ಮದಾಗಲೀ .. ಹೊಳೆಯೆಲ್ಲವೂ ನನದಾಗಲೀ ..
ಎಂಬ ಸೌಖ್ಯ ನನ್ನ ಭಾಗ್ಯ ಎಂ.. ದೆಂ.. ದೂ
ನಾನೂ ಕಾರಣ ಅಲ್ಲಾ ಇದಕ್ಕೇ ನೀವೂ ಕಾರಣರಲ್ಲಾ
ನಮ್ಮನೂ ಬಾಳಲಿ ಬೆಸೆದಿರಲು ನೂತನ ಕಥೆಯ ಬರೆದವನು ಆ ಅವನೇ... ಕಾರಣನೂ ...
ನಾನೂ ಕಾರಣ ಅಲ್ಲಾ ಇದಕ್ಕೇ ನೀವೂ ಕಾರಣರಲ್ಲಾ
-------------------------------------------------------------------------------------------------
No comments:
Post a Comment