- ಇಂಡಿಯಾನ್ ಹಿಂಡೋ ಹಿಂಡಾ
- ದಿಕ್ಕರಿಸೂ ತಿರಸ್ಕರಿಸೂ
- ಅಂಜಬೇಡ ಯಾರಿಗೂ
- ವಸಂತ ಕಾಲವೇ..
- ಬಾಪೂ ಬಾಪೂ ಸತ್ಯವ ಹೇಳೆಂದಾ
ಗೋಲಿಬಾರ್ (೧೯೯೩) - ಇಂಡಿಯಾನ್ ಹಿಂಡೋ ಹಿಂಡಾ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ್ ಕೃಷ್ಣನ್
ಗಂಡು : ಬೂಟಿನ ಬೀಟಿಗೆ ಲಾಠಿಯ ಏಟಿಗೇ ಗಡಗಡ ಎನ್ನಲ್ಲೀ ಕಳ್ಳ ಖದೀಮರೂ
ಖಾಕಿಯ ಕಾವಿಗೇ ಕೋರ್ಟಿನ ಕೂಗಿಗೇ ಕಟಕಟೆ ಎರಲೀ ಲಂಚ ಕುಬೇರರೂ
ಕೋರಸ್ : ಊರೇ ಕಲಬರಕೆ ಉಂಟೂ ಗಂಡು : ಊರೇ ಕಲಬರಕೆ ಉಂಟೂ
ಕೋರಸ್ : ದಾರೀ ಕಸಬರಕೆಯಲ್ಲುಂಟೂ
ಗಂಡು : ದಾರೀ ಕಸಬರಕೆಯಲ್ಲುಂಟೂ ಗುಡಿಸೋ ಚೆಲುವಾ ಮಾತುಗಳಾ
ನಗಿಸೋ ಸುರಿಯೋ ವರಗಳ
ಇಂಡಿಯಾನ ಹಿಂಡೋ ಹಿಂಡಾ ಹಿಂಡಿ ಹಿಂಡಿ ಮಾಡೂ
ಮತದಾರ ಹೇಳೋ ಮಾತ ನಾಡಗೀತೆ ಮಾಡೂ
ರೂಪಾಯಿ ಭೂಪರಿಂದ ಲಾಭೀ ದೂರ ಮಾಡೂ
ಸಾರಾಯಿ ಶಾಪದಿಂದ ನಾಡ ಮುಕ್ತ ಮಾಡೂ
ಗಂಡು : ಲಂಚ ಅಂದರೇ ಗುದ್ದೂ ಹಾಕು ಒಳಗೇ ಒದ್ದೂ
ಅಲ್ಲೊಬ್ಬ ಹಾಲುಂಡು ನಾಡೆಲ್ಲಾ ನೊವುಂಡೂ
ಅವನೊಬ್ಬ ಮೆರೆದಾಡೋ ಜನರೆಲ್ಲ ಪರದಾಡೋ
ಬೇಧ ಭಾವಗಳೆಂಬ ದ್ರೋಹಿಗಳನ್ನೂ ತಿಪ್ಪೆಗೇ ಹಾಕೂ
ಜಾತಿ ಬೆಳೆಸೋರೆಲ್ಲಾ ಮೂತಿಗಳನ್ನೂ ಗಲ್ಲಿಗೇ ಹಾಕೂ
ಬಾಂಬಿಗೇ ಹಣ ಪೋಲಾಗಿರಲೂ ಧರ್ಮಕ್ಕೇ ಹಣ ಸಾಲಗಾರಿಲೂ
ಹೇ... ಹೇ... ಹೇ... ಖಾಕೀ .. ಆಗೂ ಜ್ವಾಲಾಮುಖೀ ..
ಬೂಟಿನ ಬೀಟಿಗೆ ಲಾಠಿಯ ಏಟಿಗೇ ಗಡಗಡ ಎನ್ನಲ್ಲೀ ಕಳ್ಳ ಖದೀಮರೂ
ಖಾಕಿಯ ಕಾವಿಗೇ ಕೋರ್ಟಿನ ಕೂಗಿಗೇ ಕಟಕಟೆ ಎರಲೀ ಲಂಚ ಕುಬೇರರೂ
ಕೋರಸ್ : ಊರೇ ಕಲಬರಕೆ ಉಂಟೂ ಗಂಡು : ಊರೇ ಕಲಬರಕೆ ಉಂಟೂ
ಕೋರಸ್ : ದಾರೀ ಕಸಬರಕೆಯಲ್ಲುಂಟೂ
ಗಂಡು : ದಾರೀ ಕಸಬರಕೆಯಲ್ಲುಂಟೂ ಗುಡಿಸೋ ಚೆಲುವಾ ಮಾತುಗಳಾ
ನಗಿಸೋ ಸುರಿಯೋ ವರಗಳ
ಇಂಡಿಯಾನ ಹಿಂಡೋ ಹಿಂಡಾ ಹಿಂಡಿ ಹಿಂಡಿ ಮಾಡೂ
ಮತದಾರ ಹೇಳೋ ಮಾತ ನಾಡಗೀತೆ ಮಾಡೂ
-------------------------------------------------------------------------
ಗೋಲಿಬಾರ್ (೧೯೯೩) - ದಿಕ್ಕರಿಸೂ ತಿರಸ್ಕರಿಸೂ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಮಂಜುಳಗುರುರಾಜ
ಹೆಣ್ಣು : ದಿಕ್ಕರಿಸೂ ತಿರಸ್ಕರಿಸೂ ಅಧಿಕಾರದ ಸರಕಾರದ ದೌರ್ಜನ್ಯವ
ಕೊನೆಗಾಣಿಸು ಜನ ದ್ರೋಹದ ಸಾಮ್ರಾಜ್ಯವಾ..
ಗಂಡು : ಎಚ್ಚರಿಸೂ ನಿಜ ತಿಳಿಸೂ ಆಡಳಿತದ ಅಪರಾಧದ ಆಕ್ರಮಗಳ
ಮನಗಾಣಿಸು ಜನತಂತ್ರದ ಸದ್ದ ಭ್ರಮಗಳಾ
ಹೆಣ್ಣು : ಆಳುವ ಮಂತ್ರಿಯಾ ನಿದ್ರೆಯಿಂದ ಎಬ್ಬಿಸು
ಗಂಡು : ತೂಗುವ ಕತ್ತಿಯ ತಲೆಯ ಮೇಲೆ ತೂರಿಸು
ಹೆಣ್ಣು : ಹಣದಾಸೆಗೆ ಬಲಿ ಎಂದಿಗೂ ಮಾನವ..
ಗಂಡು : ದೌರ್ಭಲ್ಯ ಎನ್ನುವರು ನಮ್ಮ ಮೌನವ...
ಇಬ್ಬರು : ಹಗಲಿರುಳೆಂಬುದಿಲ್ಲ ಕಾಯೋ ಕಣ್ಣಿಗೇ ..
ಹೆಣ್ಣು : ಅಬ್ಬರಿಸೋ ಗಂಡು : ಧೃಡೀಕರಿಸೂ
ಹೆಣ್ಣು : ಜನರಿಂದಲೇ ಜನಕ್ಕಾಗಿಯೇ ಈ ಕಾಣಿಕೆ
ಗಂಡು : ಭುಗಿಲೇಬ್ಬಿಸು ನ್ಯಾಯಾಂಗದ ಮಿತಿ ಮೀರದೇ ..
ಹೆಣ್ಣು : ಬೀದಿಗೆ ಎಳೇಯದೇ ಬಣ್ಣ ಬಯಲು ಆಗದು
ಗಂಡು : ಘೋಷಣೇ ಕೂಗದೇ ಮಂತ್ರಿ ಮನೆಯು ನಡುಗದು
ಹೆಣ್ಣು : ಜನ ತಂತ್ರದ ಪರಮಾತ್ವವೇ ಚಳುವಳೀ ...
ಗಂಡು : ನಡೆ ತಪ್ಪಿದ ಕಪಿ ಮಂತ್ರಿಯ ಕೆಳಗಿಳೀ ...
ಹೆಣ್ಣು : ಕಾಯುವ ಧೂಪವೇ ಕಾಲಕೂಟವಾದರೇ
ಗಂಡು : ಓಟಿನ ಶಕ್ತಿಯೂ ಪಾಪ ಬುದ್ದಿಯಾಗದೇ
ಹೆಣ್ಣು : ಅನ್ಯಾಯದ ಹುಲಿಯೇರಿದ ದುರ್ಜನ... ನೀ ಕೆಳಗಿಳಿದರೇ ಅದರಿಂದಲೇ ಮರ್ಧನ...
ಇಬ್ಬರು : ಭಯ ಭವವೆಂಬುದಿಲ್ಲ ನ್ಯಾಯದ ಸನ್ನಿಧೀ ..
ಸ್ವೀಕರಿಸೂ ಪುರಸ್ಕರಿಸೂ ಮತದಾರರ ಮನದಾಳದ ಅಭಿಮಾನವ
ಸಂಯೋಜಿಸು ಸಮಭಾವದ ಸರಕಾರವ
-------------------------------------------------------------------------
ಗೋಲಿಬಾರ್ (೧೯೯೩) - ಅಂಜಬೇಡ ಯಾರಿಗೂ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಡಾ|| ರಾಜಕುಮಾರ
ಅಂಜಬೇಡ ಯಾರಿಗೂ ಹಿಂದೇ ಬೇಡ ಎಂದಿಗೂ
ಎದುರಿಸೂ ನೀಚರ .. ಅಡಗಿಸು ಧೂತರ
ಕಾಲಿನಲ್ಲಿ ಮುಳ್ಳಿದೂ ಸತ್ಯದಲ್ಲಿ ಸುಳ್ಳಿದೂ
ಬೆಳೆಯುವ ಕಾಲರಾ ಬಿಟ್ಟರೇ ಭೀಕರ..
ಅಜ್ಞಾನ ಇವರ ಮೂಲ ಅಲ್ಪಾಟೇ ಇವರ ಕಾಲ
ಹಂಸ ಮಾರೀಚರ ಕೋಸರು ಆಳೋರೇ ಇವರ ಮೂಲ
ಅನ್ಯಾಯ ಇವರ ಬಾಲ ಪಾಪೇನೇ ಎಂದೂ ಇವರ ಹೆಸರು
ಅಂಜಬೇಡ ಯಾರಿಗೂ ಹಿಂದೇ ಬೇಡ ಎಂದಿಗೂ
ಎದುರಿಸೂ ನೀಚರ .. ಅಡಗಿಸು ಧೂತರ
------------------------------------------------------------------------
ಗೋಲಿಬಾರ್ (೧೯೯೩) - ವಸಂತ ಕಾಲದೇ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಲತಾ ಹಂಸಲೇಖ
ವಸಂತ ಕಾಲವೇ ಹೋದೇಯಾ .. ಹೋದೇಯಾ
ಅಪೂರ್ವ ಸ್ನೇಹವ ಮರೆತೇಯಾ... ಮರೆತೇಯಾ
ನೂರುಕಾಲ ನನ್ನ ಬಾಳ ಬೆಳಗ ಬಂದವ
ಹೇಳದೇ .. ಹೇಳದೇ ... ಹೋದೇ.. ಎಲ್ಲೀ ಹೋದೇ
ವಸಂತ ಕಾಲವೇ ಹೋದೇಯಾ .. ಹೋದೇಯಾ
-------------------------------------------------------------------------
ಗೋಲಿಬಾರ್ (೧೯೯೩) - ಬಾಪೂ ಬಾಪೂ ಸತ್ಯವ ಹೇಳೆಂದಾ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಸೌಮ್ಯ
ಬಾಪೂ ಬಾಪೂ ಬಾಪೂ ಸತ್ಯ ಹೇಳೆಂದ ಸತ್ಯ ಹೇಳುವಾಗ ಭಯವೇ ಬೇಡೆಂದಾ
ನನಗೀ ಭಯವ್ಯಾಕೇ .. ಅನುಮಾನಗಳ್ಯಾಕೇ...
ನಿಜವಾ ನುಡಿಯೇ ನನ್ನ ನಾಲಿಗೆ ಬರದೇಕೇ
ಬಾಪೂ ಬಾಪೂ ಬಾಪೂ ಸತ್ಯ ಹೇಳೆಂದ ಸತ್ಯ ಹೇಳುವಾಗ ಭಯವೇ ಬೇಡೆಂದಾ
-------------------------------------------------------------------------
No comments:
Post a Comment