1587. ನಾವಿಬ್ಬರು ನಮಗಿಬ್ಬರು (೧೯೯೩)


ನಾವಿಬ್ಬರು ನಮಗಿಬ್ಬರು ಚಲನಚಿತ್ರದ ಹಾಡುಗಳು 
  1. ಅಂದದಲಿ ಮಿಂದಿರುವ 
  2. ಶೃಂಗೇರಿ ಶಾರದಕ್ಕ 
  3. ನಿನ್ನ ಅಂದ ನೋಡಿದಂತೆ 
  4. ಮೈ ಗಡಗಡ ನಡುಗುವ ಚಳಿಯಲಿ 
  5. ಯಾವುದು ಈ ಬಂಧ 
  6. ನಾವಿಬ್ಬರು ನಮಗಿಬ್ಬರು 
ನಾವಿಬ್ಬರು ನಮಗಿಬ್ಬರು (೧೯೯೩) - ಅಂದದಲಿ ಮಿಂದಿರುವ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗೀತಪ್ರಿಯ ಗಾಯನ : ರಾಘವೇಂದ್ರ ರಾಜಕುಮಾರ, ಕೋರಸ್ 

ಅಂದದಲಿ ಮಿಂದಿರುವ ಸುಂದರಿಯ ನೋಡಿ ಚಂದನದ ಗಂಧವನು ತಂಪಿರುವ ಮೋಡಿ 
ಇಂಥ ಮೈಯ್ಯ ಮಾಟ ಕಂಡು 
ಇಂಥ ಮೈಯ್ಯ ಮಾಟ ಕಂಡು ಕಣ್ಣಾಗಿರೋ ನೋಟ ಕಂಡು ಎಲ್ಲ ಕೊಂಡಾಡಿ 
ಇವಳೇ ನನ್ನ ಮಾವನ ಮಗಳು ದಿಲ್ಲಿಯಿಂದ ಹಳ್ಳಿಗ ಬಂದ ಮೆಚ್ಚಿನ ಬಳ್ಳಿ ಚೆಲುವೇ ಚೆಂದುಳ್ಳಿ 
(ಆಹಾ ಅ ಓಹೋಹೋ )
ಅಂದದಲಿ ಮಿಂದಿರುವ ಸುಂದರಿಯ ನೋಡಿ ಇಂಥ ಮೈಯ್ಯ ಮಾಟ ಕಂಡು 
ಕಣ್ಣಾಗಿರೋ ನೋಟ ಕಂಡು ಎಲ್ಲ ಕೊಂಡಾಡಿ 
ಇವಳೇ ನನ್ನ ಮಾವನ ಮಗಳು ದಿಲ್ಲಿಯಿಂದ ಹಳ್ಳಿಗ ಬಂದ ಮೆಚ್ಚಿನ ಬಳ್ಳಿ ಚೆಲುವೇ ಚೆಂದುಳ್ಳಿ 
(ಯಾರ ಹುಡುಗಿ ಬಂದೇ ಹುಡುಗಿ ಎಲ್ಲಿ ದೊರೆತೇ ನೀ ಇಲ್ಲಿ ದೊರೆತೇ ನೀ 
ಯಾರ ಹುಡುಗಿ ಬಂದೇ ಹುಡುಗಿ ಎಲ್ಲಿ ದೊರೆತೇ ನೀ ಇಲ್ಲಿ ದೊರೆತೇ ನೀ )

ಬೆಡಗಿನ ಬಂಗಾರಿಯ ಶೃಂಗಾರವ ನೋಡೋ ಕಣ್ಣಂಗೇ ಹಬ್ಬ ಆಗೈತೇ ... 
ಅರಗಿಣಿ ಬಣ್ಣ ಕಂಡು ನನ್ನ ತನು ಮನ ಗೆದ್ದ ಉಬ್ಬಿ ಹೋಗೈತೇ .. 
ಹವಳದ ತುಟಿಯಲಿ ಜೇನೂ ತುಂಬೈತೇ ಸಿಹಿ ಜೇನು ತುಂಬೈತೇ 
ಮದ್ದು ಬಂದು ಸರಿಯನು ಹಾರಿ ಬಂದೈತೆ ದುಂಬಿ ಹಾರಿ ಬಂದೈತೆ 
ಮನವನು ಕೆಣಕುವಾ.... ಓಓಓಓಓ... (ಓಓಓಓಓ) 
ಮನವನು ಕೆಣಕುವ ಹುಡುಗಿಯ ಚೆಂದ ಚೆಲ್ಲಿ ತುಂಟಾಟವು ಬಿಂಕಾಟವೂ ಒಂದೂಗುಡೈತೆ
ಇವಳೇ ನನ್ನ ಮಾವನ ಮಗಳು ದಿಲ್ಲಿಯಿಂದ ಹಳ್ಳಿಗ ಬಂದ ಮೆಚ್ಚಿನ ಬಳ್ಳಿ ಚೆಲುವೇ ಚೆಂದುಳ್ಳಿ 

ರಸಪೂರಿ ಹಣ್ಣಿನಂತ ಹೆಣ್ಣೇ ನಿನ್ನ ಅಂದವನ್ನೂ ನೋಡಿ ಮೆಚ್ಚಕೊಂಡೇ 
ಕನಸಿನ ಕನ್ಯೆಯಿಂದ ನೋಡಿ ನೋಡಿ ಆಸೆಯನ್ನೂ ಹಾಗೆ ತಡಕೊಂಡೇ 
ಬೆಡಗಿ ನಿನ್ನ ರೂಪ ಕಣ್ಣಾ ತುಂಬಕೊಂಡೇ ನನ್ನ ಕಣ್ಣಾ ತುಂಬಕೊಂಡೇ 
ಹೊಳೆಯುವ ಗಲ್ಲ ನೋಡಿ ಬೆಲ್ಲ ಅಂದಕೊಂಡೇ ಮುದ್ದೆ ಬೆಲ್ಲ ಅಂದಕೊಂಡೇ 
ಅರಳುವ ವಯಸಲೀ ... ಓಓಓಓಓ... (ಅವ್ವೀ )        
ಅರಳುವ ವಯಸಲೀ ಹರೆಯದ ಭಾರ ತಂದ ನಿನ್ನ ತೆಳು ದೇಹದಲ್ಲಿ ಹ್ಯಾಂಗೇ ಹೊದ್ಕೊಂಡಿ  
ಇವಳೇ ನನ್ನ ಮಾವನ ಮಗಳು ದಿಲ್ಲಿಯಿಂದ ಹಳ್ಳಿಗ ಬಂದ ಮೆಚ್ಚಿನ ಬಳ್ಳಿ ಚೆಲುವೇ ಚೆಂದುಳ್ಳಿ 
ಅಂದದಲಿ ಮಿಂದಿರುವ ಸುಂದರಿಯ ನೋಡಿ ಇಂಥ ಮೈಯ್ಯ ಮಾಟ ಕಂಡು 
ಕಣ್ಣಾಗಿರೋ ನೋಟ ಕಂಡು ಎಲ್ಲ ಕೊಂಡಾಡಿ 
ಇವಳೇ ನನ್ನ ಮಾವನ ಮಗಳು ದಿಲ್ಲಿಯಿಂದ ಹಳ್ಳಿಗ ಬಂದ ಮೆಚ್ಚಿನ ಬಳ್ಳಿ ಚೆಲುವೇ ಚೆಂದುಳ್ಳಿ .
(ಈತ ಚೆಲುವ ಈಕೇ ಚೆಲುವೇ ಎಂಥ ಮದುವೆಯೋ ಎಂಥ ಮದುವೆಯೋ 
ಈತ ಚೆಲುವ ಈಕೇ ಚೆಲುವೇ ಎಂಥ ಮದುವೆಯೋ ಎಂಥ ಮದುವೆಯೋ  )
-----------------------------------------------------------------------------------------------------

ನಾವಿಬ್ಬರು ನಮಗಿಬ್ಬರು (೧೯೯೩) - ಶೃಂಗೇರಿ ಶಾರದಕ್ಕ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಹಂಸಲೇಖ ಗಾಯನ : ರಾಘವೇಂದ್ರ ರಾಜಕುಮಾರ, ಸಂಗೀತಕಟ್ಟಿ 

ಹೆಣ್ಣು : ಓ.. ಓಹೋ .. ಓ...ಓಹೋ  ಓ.. ಓಹೋ .. ಓ... ಓಹೋ 
          ಶೃಂಗೇರಿ ಶಾರದಕ್ಕ ರಾಗ ಕೊಟ್ಟು ಹಾಡಾಕ 
          ಚಾಮುಂಡಿ ತಾಯಕ್ಕ ಯೋಗ ಕೊಟ್ಟು ಕೂಡಾಕ  
          ಬಂಗಾರ... ಬೆಳ್ಳಿ ಬಂಗಾರ ಯಾಕ್ ಬೇಕ್ ನಾವ್ ಪ್ರೀತಿ ಮಾಡಕ್ 
          ಶೃಂಗೇರಿ ಶಾರದಕ್ಕ ರಾಗ ಕೊಟ್ಟು ಹಾಡಾಕ 
          ತಕಿಟ್ ಧಿನಕಧಿನ ಕುಣಿಯುವ ತಕಿಟ್ ಕಧಿನಕಧಿನ ಕುಣಿಯುವ   
ಗಂಡು : ಶೃಂಗೇರಿ ಶಾರದಕ್ಕ ರಾಗ ಕೊಟ್ಟು ಹಾಡಾಕ 
           ಚಾಮುಂಡಿ ತಾಯಕ್ಕ ಯೋಗ ಕೊಟ್ಟು ಕೂಡಾಕ  
           ಬಂಗಾರ... ಬೆಳ್ಳಿ ಬಂಗಾರ ಯಾಕ್ ಬೇಕ್ ನಾವ್ ಪ್ರೀತಿ ಮಾಡಕ್ 
ಹೆಣ್ಣು : ಶೃಂಗೇರಿ ಶಾರದಕ್ಕ ರಾಗ ಕೊಟ್ಟು ಹಾಡಾಕ 
ಗಂಡು : ತಕಿಟ್ ಧಿನಕಧಿನ ಕುಣಿಯುವ ತಕಿಟ್ ಕಧಿನಕಧಿನ ಕುಣಿಯುವ   

ಗಂಡು : ಓಹೋ ... (ಓಹೋ ) ಓಹೋ ... (ಓಹೋ ... )
            ಹೂವಿನ ಬಾಣ ಕಬ್ಬಿನ ಬಿಲ್ಲ ತಂದಾನ ಮಾರ ಕಾಮಣ್ಣ 
ಹೆಣ್ಣು : ಬಾನಂತ ಆಸೆ ಮಿಂಚಂತ ರೂಪ ತಂದಾಳೇ ಆರತಿ ಎತ್ತ.. 
ಗಂಡು : ತಿಂಗಳಾದಾಗ ಹಾಲು ಉಕ್ಕಿ ಅಂಗಳದಾಗ ಹೂವು ನಕ್ಕೀ ಸಂಸಾರ ತೇರಾಗಬೇಕು 
           ಓ ಓಹೋ ಓಓಓಓಓ ಸ್ವರ್ಗಾನ ತೌರಾಗಬೇಕು 
ಹೆಣ್ಣು : ಬಾಳಕ... ಅಂತರ ಯಾಕ್ ತಂತರ ಯಾಕ್ ಮುತ್ತಿನ ಮಂತ್ರ ಸಾಕ್ .. 
ಗಂಡು : ಶೃಂಗೇರಿ ಶಾರದಕ್ಕ ರಾಗ ಕೊಟ್ಟು ಹಾಡಾಕ 
ಹೆಣ್ಣು : ಚಾಮುಂಡಿ ತಾಯಕ್ಕ ಯೋಗ ಕೊಟ್ಟು ಕೂಡಾಕ  
 
ಹೆಣ್ಣು : ಹಾಲಾಗ ಬೆಣ್ಣೆ ಬೆಣ್ಯಾಗ ತುಪ್ಪ ಇದ್ದಂಗ ನೀ ನನ್ನೊಳಗ 
ಗಂಡು : ಹೂವಾಗ ಕಂಪೂ ಕಂಪಾಗ ಜೇನೂ ಇದ್ದಾಂಗ ನೀ ನನ್ನಳೊಗ 
ಹೆಣ್ಣು : ಬಡತನದಾಗ ತೋಳು ಹಾಕಿ ತುಂಬಲದಾಗ ಗಾಳಿ ಬಿಸಿ ಈ ಕೆಂಪಾನೆ ರಂಗಾಗುವ.. 
           ಓ ಓಹೋ ಓಓಓಓಓ ಈ ಗಿಣಿಯ ಹಾಡಾಗುವ 
ಗಂಡು : ಬಾಳಕ... ಅಂತರ ಯಾಕ್ ತಂತರ ಯಾಕ್ ಮುತ್ತಿನ ಮಂತ್ರ ಸಾಕ್ .. 
ಹೆಣ್ಣು  : ಶೃಂಗೇರಿ ಶಾರದಕ್ಕ ರಾಗ ಕೊಟ್ಟು ಹಾಡಾಕ 
ಗಂಡು: ಚಾಮುಂಡಿ ತಾಯಕ್ಕ ಯೋಗ ಕೊಟ್ಟು ಕೂಡಾಕ  
ಹೆಣ್ಣು : ಬಂಗಾರ... ಬೆಳ್ಳಿ ಬಂಗಾರ 
ಗಂಡು : ಯಾಕ್ ಬೇಕ್ ನಾವ್ ಪ್ರೀತಿ ಮಾಡಕ್ 
ಹೆಣ್ಣು : ಶೃಂಗೇರಿ ಶಾರದಕ್ಕ ರಾಗ ಕೊಟ್ಟು ಹಾಡಾಕ 
ಗಂಡು: ಚಾಮುಂಡಿ ತಾಯಕ್ಕ ಯೋಗ ಕೊಟ್ಟು ಕೂಡಾಕ  
ಇಬ್ಬರು : ತಕಿಟ್ ಧಿನಕಧಿನ ಕುಣಿಯುವ ತಕಿಟ್ ಕಧಿನಕಧಿನ ಕುಣಿಯುವ   
             ತಕಿಟ್ ಧಿನಕಧಿನ ಕುಣಿಯುವ ತಕಿಟ್ ಕಧಿನಕಧಿನ ಕುಣಿಯುವ   
 -------------------------------------------------------------------------------------------------------

ನಾವಿಬ್ಬರು ನಮಗಿಬ್ಬರು (೧೯೯೩) - ನಿನ್ನ ಅಂದ ನೋಡಿದಂತೆ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಚಿ.ಉದಯಶಂಕರ ಗಾಯನ : ರಾಘವೇಂದ್ರ ರಾಜಕುಮಾರ, ಕೋರಸ್ 

ಗಂಡು : ನಿನ್ನ ಅಂದ ನೋಡಿದಂತೇ ನಾನು ಅಂದುಕೊಂಡೆ  
           ನಿನ್ನ ಅಂದ ನೋಡಿದಂತೇ ನಾನು ಅಂದುಕೊಂಡೆ  
           ನಿನ್ನ ಅಮ್ಮ ರಂಭೆ ಎಂದೇ ಕಲ್ಪನೆ ಮಾಡಿಕೊಂಡೆ 
           ನಿನ್ನ ಅಮ್ಮ ರಂಭೆ ಎಂದೇ ಕಲ್ಪನೆ ಮಾಡಿಕೊಂಡೆ 
           ಫೀಲಾದಂತೇ ತುಂಬಾ ಲಕ್ಕೀ ... ಇಂಥಾ ವೈಫೂ ಕೈಗೆ ಸಿಕ್ಕೀ 
           ನಿನ್ನ ಅಂದ ನೋಡಿದಂತೇ ನಾನು ಅಂದುಕೊಂಡೆ  
          ನಿನ್ನ ಅಮ್ಮ ರಂಭೆ ಎಂದೇ ಕಲ್ಪನೆ ಮಾಡಿಕೊಂಡೆ 
          ತಾಯಿಗಿಂತ ಮಗಳು ಚಂದ ಮಗಳಿಗಿಂತ ತಾಯಿ ಚಂದ 
          ಒಬ್ಬರಗಿಂತ ಒಬ್ಬರು ಚಂದ ಜಿಂಕೆ ಕಣ್ಣಿಗಿಂತ ನಿನ್ನೆಯಿಂದ  
          ಸೂರ್ಯನಾಣೆ ಚಂದ್ರನಾಣೆ ನಿಮ್ಮ ಗಂಡ ಗುಡುಗುತಾನೆ 
          ನಲವತ್ತೆರಡು ಖಂಡಿತ ಅಲ್ಲ ಕೆನ್ನೆ ಮೇಲೆ ಚುಕ್ಕೇ ಇಲ್ಲ 
          ಹ್ಹಾ .. ನಿನ್ನ ಅಂದ ನೋಡಿದಂತೇ ನಾನು ಅಂದುಕೊಂಡೆ  
         ನಿನ್ನ ಅಂದ ನೋಡಿದಂತೇ ನಾನು ಅಂದುಕೊಂಡೆ  
         ನಿನ್ನ ಅಮ್ಮ ರಂಭೆ ಎಂದೇ ಕಲ್ಪನೆ ಮಾಡಿಕೊಂಡೆ 
         ನಿನ್ನ ಅಮ್ಮ ರಂಭೆ ಎಂದೇ ಕಲ್ಪನೆ ಮಾಡಿಕೊಂಡೆ 

ಗಂಡು : ಬ್ರಹ್ಮ ನಿಂಗೆ ಜೋಡಿಸ್ತೀನಿ ಕೂಲಡ್ರಿಂಕ್ಸ್ ಮುಟ್ಟಿದ ಕೈನ್ 
           ಬ್ರಹ್ಮ ನಿಂಗೆ ಜೋಡಿಸ್ತೀನಿ ಕೂಲಡ್ರಿಂಕ್ಸ್ ಮುಟ್ಟಿದ ಕೈನ್ 
          ಭೂಮಿ ಉದ್ದಕ ಬಾಗಿಸ್ತೀನಿ ಭಕ್ತಿಯಿಂದ ಮೈಯ್ಯನ (ಹರಿ ಓಂ) ಹರಿ ಓಂ (ಹರಿ ಓಂ)
           ಬ್ರಹ್ಮ ನಿಂಗೆ ಜೋಡಿಸ್ತೀನಿ ಕೂಲಡ್ರಿಂಕ್ಸ್ ಮುಟ್ಟಿದ ಕೈನ್ 
          ಭೂಮಿ ಉದ್ದಕ ಬಾಗಿಸ್ತೀನಿ ಭಕ್ತಿಯಿಂದ ಮೈಯ್ಯನ 
          ನನ್ನ ಲೇಡಿ ಹೀಗಿರಲ್ಲ ಪ್ಯಾರಿಸ್ ಬಾಡಿ ಹೀಗಿರಲ್ಲ 
          ಹುಡ್ಕೋದಿಕ್ಕೆ ಎಲ್ಲೇ ಹೋಗು ಯಾರಗೂ ಇಲ್ಲ ಇಂಥಾ ಮೂಗು 
          ವರ್ಷ ವರ್ಷ ಕಮ್ಮಿ ಕಮ್ಮಿ ಆಗ್ತಿದಾರೆ ನಿನ್ನ ಮಮ್ಮಿ ಎಂಥ ಚೆನ್ನ ಈ ಮೈಕಟ್ಟು 
          ದೇವ್ರೇ ಬಲ್ಲ ಅದರ ಗುಟ್ಟು ಹ್ಹಾ .. 
          ನಿನ್ನ ಅಂದ ನೋಡಿದಂತೇ ನಾನು ಅಂದುಕೊಂಡೆ  
         ನಿನ್ನ ಅಂದ ನೋಡಿದಂತೇ ನಾನು ಅಂದುಕೊಂಡೆ  
         ನಿನ್ನ ಅಮ್ಮ ರಂಭೆ ಎಂದೇ ಕಲ್ಪನೆ ಮಾಡಿಕೊಂಡೆ 
         ನಿನ್ನ ಅಮ್ಮ ರಂಭೆ ಎಂದೇ ಕಲ್ಪನೆ ಮಾಡಿಕೊಂಡೆ 

ಕೋರಸ್:  ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ 
ಗಂಡು : ಯಾರಿಗುಂಟು ಇಂಥ ತಾಯಿ ಹೇಳೇ ನನ್ನ ಬೆಡಗಿ 
           ಯಾರಿಗುಂಟು ಇಂಥ ತಾಯಿ ಹೇಳೇ ನನ್ನ ಬೆಡಗಿ 
           ಲಂಗಾ ಹಾಕಿ ನಿಂತರಾಯ್ತು ನಿನ್ನ ಹಾಗೆ ಹುಡುಗಿ 
           ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ 
           ಯಾರಿಗುಂಟು ಇಂಥ ತಾಯಿ ಹೇಳೇ ನನ್ನ ಬೆಡಗಿ 
           ಲಂಗಾ ಹಾಕಿ ನಿಂತರಾಯ್ತು ನಿನ್ನ ಹಾಗೆ ಹುಡುಗಿ 
          ಬೇಕು ಬೇಕು ಯಾರಿಗೇ ಬೇಕು  ತಾಯಿ ಮಗಳು ಬ್ಯೂಟಿ ಸಾಕು 
          ನೋಡು ನೋಡು ಎಂಥಾ ಲಕ್ಕೂ ಮಿಕ್ಕಿದೆಲ್ಲ ಆಚೆ ನೂಕು 
          ಬಾಡಿನಲ್ಲಿ ಹೀಗೆ ಇದ್ರೇ ಇಂಥ ಹೆಣ್ಣು ಬರ್ತಾ ಇದ್ರೇ ಸುಳ್ಳು ನಾನು ಹೇಳೋದಿಲ್ಲ 
           ಬೀದಿಯಲ್ಲೇ ದೊಡ್ಡ ಜಾತ್ರೆ ಅಬ್ಬಾ... 
           ಇಂಥಾ ಹೆಂಡ್ತಿ ಇಂಥಾ ಮಗಳು ಯಾರಿಗುಂಟೂ ಅಂಕಲ್ 
           ನಿಮ್ಮ ಬಾಳ ಬಾನಿನಲ್ಲಿ ಈವರು ಟ್ವಿಂಕಲ್ ಟ್ವಿಂಕಲ್
           ಇಂಥಾ ಹೆಂಡ್ತಿ ಇಂಥಾ ಮಗಳು ಯಾರಿಗುಂಟೂ ಅಂಕಲ್ 
           ನಿಮ್ಮ ಬಾಳ ಬಾನಿನಲ್ಲಿ ಈವರು ಟ್ವಿಂಕಲ್ ಟ್ವಿಂಕಲ್
           ಇಂಥಾ ಹೆಂಡ್ತಿ ಇಂಥಾ ಮಗಳು ಯಾರಿಗುಂಟೂ ಅಂಕಲ್ 
           ನಿಮ್ಮ ಬಾಳ ಬಾನಿನಲ್ಲಿ ಈವರು ಟ್ವಿಂಕಲ್ ಟ್ವಿಂಕಲ್
-------------------------------------------------------------------------------------------------------

ನಾವಿಬ್ಬರು ನಮಗಿಬ್ಬರು (೧೯೯೩) - ಮೈ ಗಡಗಡ ನಡುಗುವ ಚಳಿಯಲಿ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಚಿ.ಉದಯಶಂಕರ  ಗಾಯನ :  ಡಾ|| ರಾಜಕುಮಾರ, ಕೋರಸ್ 

ಗಂಡು : ಮೈ ಗಡಗಡ ನಡುಗುವ ಮಾಗಿಯ ಚಳಿಯಲಿ ಹೊತ್ತಾರೇ ಏದ್ದೇಳುವಾ ಹಳ್ಳಿಯ ಜೀವನ ನೋಡವ್ವಾ 
           ಕಸ ಪೂರೆಕೆಯ ಹಿಡಿಯುತ ಹಟ್ಟಿಯ ಗುಡಿಸುತ ರಂಗೋಲಿಯಾ ಹಾಕುವಾ ಒಳ್ಳೇಯ ಕಾಯಕ ಮಾಡವ್ವಾ 
           ನಿನ್ನ ಚಾಲೂಕು ನಯ ನಾಜುಕೂ ಬಿಡು ಥಳಕೂ ಬಳುಕು ಧೀಮಾಕೂ 
           ನವನಾಗರಿಕತೆಯ ಆಡಂಬರದ ಬಿಂಕವೂ ಬೇಡವ್ವಾ 
ಎಲ್ಲರು : ಮೈ ಗಡಗಡ ನಡುಗುವ ಮಾಗಿಯ ಚಳಿಯಲಿ ಹೊತ್ತಾರೇ ಏದ್ದೇಳುವಾ ಹಳ್ಳಿಯ ಜೀವನ ನೋಡವ್ವಾ 
ಗಂಡು : ಕಸ ಪೂರೆಕೆಯ ಹಿಡಿಯುತ ಹಟ್ಟಿಯ ಗುಡಿಸುತ ರಂಗೋಲಿಯಾ ಹಾಕುವಾ ಒಳ್ಳೇಯ ಕಾಯಕ ಮಾಡವ್ವಾ  

ಗಂಡು : ರಸ ಗೊಬ್ಬರ ತಿಪ್ಪೇಗೆ ಸುರಿದೂ ಹಸುಕರುಗಳ ಮೈಯ್ಯನೂ ತೋಳೇದು 
            ಹಸಿ ಹುಲ್ಲಿನ ಮೇವನು ನೀಡಿ ಗೋಮಾತೆಯ ಸೇವೆಯ ಮಾಡಿ 
            ಉರಿಬಿಸಿಲಲ್ಲಿ ಹೊಲಗೆದ್ದೇಲಿ ನಾಟಿ ಹಾಕೂ ಪೈರೂ 
            ಹಸಿವಾದಾಗ ಬಿಸಿ ಮುದ್ದೆಗೇ ಬೆರಕಿ ಸೊಪ್ಪು ಸಾರೂ 
            ಹಸಿಮೆಣಸಿನಕಾಯಿ ಅಗಿದರೇ ಬಾಯೀ ಖಾರವ ನೋಡವ್ವಾ ಅಮ್ಮಣ್ಣೀ ...   
ಕೋರಸ್ :  ಖಾರವ ನೋಡವ್ವಾ
ಗಂಡು : ಮೈ ಗಡಗಡ ನಡುಗುವ ಮಾಗಿಯ ಚಳಿಯಲಿ ಹೊತ್ತಾರೇ ಏದ್ದೇಳುವಾ ಹಳ್ಳಿಯ ಜೀವನ ನೋಡವ್ವಾ 
           ಕಸ ಪೂರೆಕೆಯ ಹಿಡಿಯುತ ಹಟ್ಟಿಯ ಗುಡಿಸುತ ರಂಗೋಲಿಯಾ ಹಾಕುವಾ ಒಳ್ಳೇಯ ಕಾಯಕ ಮಾಡವ್ವಾ 

ಗಂಡು : ನಿನ್ನ ಬಾಪಕಟ್ ಹೆಸರೇಳದೇ ಕಿತ್ತೂ ಜಡೆಹಾಕಿ ಕುಂಕುಮ ಇಟ್ಟೂ ಹೊಸ ಫ್ಯಾಷನ್ ಮಿಡ್ಕಿಯ ಕಿತ್ತೂ 
            ಒಳ್ಳೇ ಇಳಕಲ್ ಸೀರೆಯ ಊಟ್ಟೂ ಹಿಟ್ಟು ಬೀಸುತ್ತ ಬಟ್ಟೆ ಒಗೆಯುತ್ತಾ ದುಡಿಯೋ ಮೈಯ್ಯಿ ಘಟ್ಟಿ (ಘಟ್ಟಿ) 
            ನೀರು ಸೇದುತ್ತಾ ಹಾಲು ಕರೆಯುತ್ತಾ ಸೆಗಣಿ ಭರಣಿ ತಟ್ಟಿ (ತಟ್ಟಿ)
            ಆಭಾಸಾ ಸಾ ಆಪಕೇ ನೀಡುವ ಡಿಗ್ರಿಯ ಪಡೆಯವ್ವಾ ಥೈತಕ (ಹ್ಹಾ) ತಕತಕ (ಹ್ಹಾ) ಅಮೇರಿಕ ಅಮ್ಮಣ್ಣೀ ... 
ಗಂಡು : ಮೈ ಗಡಗಡ ನಡುಗುವ ಮಾಗಿಯ ಚಳಿಯಲಿ ಹೊತ್ತಾರೇ ಏದ್ದೇಳುವಾ ಹಳ್ಳಿಯ ಜೀವನ ನೋಡವ್ವಾ 
           ನಿನ್ನ ಚಾಲೂಕು ನಯ ನಾಜುಕೂ ಬಿಡು ಥಳಕೂ ಬಳುಕು ಧೀಮಾಕೂ 
           ನವನಾಗರಿಕತೆಯ ಆಡಂಬರದ ಬಿಂಕವೂ ಬೇಡವ್ವಾ... ಅಮ್ಮಣ್ಣೀ ... ( ಆ ಆ ಆ ) 
--------------------------------------------------------------------------------------------------------

ನಾವಿಬ್ಬರು ನಮಗಿಬ್ಬರು (೧೯೯೩) - ಯಾವುದು ಈ ಬಂಧ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಎಂ.ಏನ್.ವ್ಯಾಸರಾವ ಗಾಯನ : ರಾಘವೇಂದ್ರ ರಾಜಕುಮಾರ,ಸಂಗೀತಕಟ್ಟಿ 

ಇಬ್ಬರು : ಯಾವುದು ಈ ಬಂಧ ಸುಖ ನೀಡಿದೆ ಇಂದು 
            ತುಂಬಿದೆ ಆನಂದ ಹೊಸ ಪ್ರೇಮವ ಕಂಡು 
           ಆಕಾಶ ಭೂಮಿಯು ಒಂದಾಗಿ ಹೋಯಿತು 
           ನೂರು ವೀಣೆ ಮೀಟಿದಂತೆ ಹೊಸ ರಾಗ ನೀ ತಂದೆ 
           ಬೆರೆಯಿತು ತನುಮನ ಜೀವ ಜೀವ ಸೇರಿತು 

ಗಂಡು : ಮಧು ಬೆರೆತ ತುಟಿಗಳನು ನೀಡು ಬಾರೆ ನೀನು 
           ಹಗಲಿರುಳು ನೆನೆದಿರು ಪರಾಗ ಜೇನು  
ಹೆಣ್ಣು : ಎದೆಯೊಳಗೆ ನಡಗುತಿಹೆ ಏಕೋ ಏನೋ ಕಾಣೆ 
          ಸನಿಹವನು ಬಯಸುತಿದೆ ದೇಹ ತನ್ನಂತೇ ತಾನೇ 
ಗಂಡು : ಪ್ರೀತಿಯ ದೋಣಿ ಏರಿ ಹೊಸ ತೀರವ ನಾವು ಸೇರಿ 
            ಪ್ರಣಯದ ಹೊಸ ಬಗೆ ನಾವು ಇಂದು ಕಾಣುವ 
ಇಬ್ಬರು : ಯಾವುದು ಈ ಬಂಧ ಸುಖ ನೀಡಿದೆ ಇಂದು 
            ತುಂಬಿದೆ ಆನಂದ ಹೊಸ ಪ್ರೇಮವ ಕಂಡು 
           ಆಕಾಶ ಭೂಮಿಯು ಒಂದಾಗಿ ಹೋಯಿತು 
           ನೂರು ವೀಣೆ ಮೀಟಿದಂತೆ ಹೊಸ ರಾಗ ನೀ ತಂದೆ 
           ಬೆರೆಯಿತು ತನುಮನ ಜೀವ ಜೀವ ಸೇರಿತು 

ಹೆಣ್ಣು : ಬದುಕಿನಲಿ ಆಸರೆಯಾ ನಂಬಿ ಬಂದೆ ನಾನು 
          ಭರವಸೆಯಾ ಮೂಡಿಸುತ ತಂದೆ ಉಲ್ಲಾಸ ನೀನು  
ಗಂಡು : ಯುಗ ಉರುಳಿ ಯುಗ ಬರಲಿ ನೀನೇ ನನ್ನ ಜೀವ 
            ಜನುಮಗಳು ಸರಿದಿರಲಿ ಬೇಡ ವಿಷಾದ ಭಾವ 
ಹೆಣ್ಣು : ನಾನು ನೀನು ಕೂಡಿ ನವ ಜೀವನ ಗಾಡಿ ಹೂಡಿ 
          ಅನುದಿನ ಅನುಪಮ ಪ್ರೇಮದಿಂದ ಸಾಗುವಾ 
ಇಬ್ಬರು : ಯಾವುದು ಈ ಬಂಧ ಸುಖ ನೀಡಿದೆ ಇಂದು 
            ತುಂಬಿದೆ ಆನಂದ ಹೊಸ ಪ್ರೇಮವ ಕಂಡು 
           ಆಕಾಶ ಭೂಮಿಯು ಒಂದಾಗಿ ಹೋಯಿತು 
           ನೂರು ವೀಣೆ ಮೀಟಿದಂತೆ ಹೊಸ ರಾಗ ನೀ ತಂದೆ 
           ಬೆರೆಯಿತು ತನುಮನ ಜೀವ ಜೀವ ಸೇರಿತು 
-------------------------------------------------------------------------------------------------------

ನಾವಿಬ್ಬರು ನಮಗಿಬ್ಬರು (೧೯೯೩) - ನಾವಿಬ್ಬರು ನಮಗಿಬ್ಬರು 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಚಿ.ಉದಯಶಂಕರ ಗಾಯನ : ರಾಘವೇಂದ್ರ ರಾಜಕುಮಾರ, ಕೋರಸ್ 

ನಾವಿಬ್ಬರು ಹೇ.. ನಮಗಿಬ್ಬರೂ .. ಓ.. ನಮಗಾಗಿಯೇ ಅವರಿಬ್ಬರೂ 
ಇದು ಬ್ರಹ್ಮನ ಬರಹ ಕ್ಷಣ ಕಾಲವೇ ವಿರಹ 

ಅತ್ತೆ ಮೆಚ್ಚುವ ಹುಡುಗ ನಾನಾದರೇ ನಿನ್ನ ಮದುವೆ ಈಗ 
ಮಾವ ಮೆಚ್ಚಿದ ಅಳಿಯನಾದರೆ ನಿನ್ನ ಮದುವೆ ಬೇಗ 
ಪ್ರೀತಿ ಪ್ರೇಮ ಏನು ಬಲ್ಲನು ತರಕಲ್ಲಾಂಟೀ ಮಾವಾ..  ಹೌದು  
ಕುಸ್ತಿ ಬಿಟ್ರೇ ಮದುವೆ ಎಂದು ತೆಗಿತಾನೆ ಜೀವ 
ಹೆದರಬೇಡ ಜಟ್ಟಿಯ ಕೊಬ್ಬು ಕರಗಿಸುವೆ 
ಮಾವನ ಪೊಗರು ಅಡಗಿಸುವೆ ಓಹೋ ... ಓಹೋ 
ನಾವಿಬ್ಬರು ಹೇ.. ನಮಗಿಬ್ಬರೂ .. ಓ.. ನಮಗಾಗಿಯೇ ಅವರಿಬ್ಬರೂ 
ಇದು ಬ್ರಹ್ಮನ ಬರಹ ಕ್ಷಣ ಕಾಲವೇ ವಿರಹ 

ಫ್ಯಾಷನ್ ಬೆಡಗಿಗೆ ಬಲಿಯಾದವನಿಗೆ ಬಂಧು ಬಳಗ ಗೊತ್ತೇ.. 
ಅರಳಿದ ಮಲ್ಲಿಗೆ ಚೆಲ್ಲುವ ಪರಿಮಳ ಬಲ್ಲದೇನು ಕತ್ತೆ 
ಅಮೇರಿಕ ಅಳಿಯ ಸಿಗಬೇಕೆಂದು ಅವಳ ಮನದ ಚಿಂತೆ ಇರಲಿ 
ಅಮೇರಿಕ ಆಸೆ ಅಡಗಿಸುವೆ ನಿನ್ನ ಅತ್ತೆಯ ಪಳಗಿಸುವೆ ಓಹೋಹೋ ... 
ನಾವಿಬ್ಬರು ಹೇ.. ನಮಗಿಬ್ಬರೂ .. ಓ.. ನಮಗಾಗಿಯೇ ಅವರಿಬ್ಬರೂ 
ಇದು ಬ್ರಹ್ಮನ ಬರಹ ಕ್ಷಣ ಕಾಲವೇ ವಿರಹ 
-------------------------------------------------------------------------------------------------------

No comments:

Post a Comment