ಗಾಜನೂರ ಗಂಡು ಚಲನಚಿತ್ರದ ಹಾಡುಗಳು
- ಕಾಲೇಜು ಟೀಮಿನಲ್ಲಿ
- ಹೆಣ್ಣಾ ಲೈಫ್ ಮಿಸ್ಟರೀ
- ಮಳೆಯ ಮುತ್ತು ಮಳೆಯ
- ಮುತ್ತು ರತ್ನಗಳ
- ಸಿಂಧೂರ ಭಾಗ್ಯವ
- ಯುಗ ಯುಗ ಸಾಗಿ
ಗಾಜನೂರ ಗಂಡು (೧೯೯೬) - ಕಾಲೇಜು ಟೀಮಿನಲ್ಲಿ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ
ಗಂಡು : ಕಾಲೇಜು ಟೀಮಿನಲ್ಲಿ ಟೀನೇಜು ಫ್ರೆಂಡು ನಾನು
ಜೀವಕ್ಕೆ ಜೀವ ನೀಡೋ ಗಾಜನೂರು ಗಂಡು ನಾನು
ಅಲ್ಲಿ ಇಲ್ಲಿ ಕಲ್ಲು ಮುಳ್ಳಲಿ ಹಳ್ಳಿ ಡಿಲ್ಲಿ ಸುತ್ತಿ ಬಂದೆ
ಜಟ್ಟಿಯಂತೆ ಘಟ್ಟಿ ಮುಟ್ಟಾಗಿ ಬೆಟ್ಟ ಗುಡ್ಡ ಹತ್ತಿ ಬಂದೆ
ಗಂಡು : ಹೇ.. ನಾಟೀ .. ಕೆಂಪು ಗುಲಾಬಿ ಬಳುಕು ನಡೆವ ಬಲು ಮಿಟುಕುಲಾಡಿ ಕಣೇ
ಕಿರುಕು ಮಾಡೋ ನಿನ ಸಿಡುಕು ಜೋರು ಕಣೇ
ಪಟ್ಟು ಹಾಕಿ ಕೈ ಸುಟ್ಟು ನಗುವ ನಿನ್ನ ಕಣ್ಣ ಎಷ್ಟು ಮಿಂಚಂಥ ಏಟು ಕಣೇ ..
ಹೆಣ್ಣು : ಹೇ.. ಇನ್ನು ಬೇಡ ನಿನ್ನಾ ವೇಷ ಈ ಹಣದಿಂದ ಇಲ್ಲ ಸಂತೋಷ
ಗಂಡು : ಏಳು ಬೀಳು ನಮ್ಮಾ ಲೈಫಲ್ಲಿ ದುಡ್ಡೇ ಎಂದು ದೊಡ್ಡದ್ದಲ್ಲ
ದುಡ್ಡಿನಿಂದ ಮಾರುಕಟ್ಟೇಲಿ ಶಾಂತಿ ಸಂತೋಷ ಸಿಕ್ಕೋದಿಲ್ಲ
ಕಾಲೇಜು ಟೀಮಿನಲ್ಲಿ ಟೀನೇಜು ಫ್ರೆಂಡು ನಾನು
ಜೀವಕ್ಕೆ ಜೀವ ನೀಡೋ ಗಾಜನೂರು ಗಂಡು ನಾನು
ಅಲ್ಲಿ ಇಲ್ಲಿ ಕಲ್ಲು ಮುಳ್ಳಲಿ ಹಳ್ಳಿ ಡಿಲ್ಲಿ ಸುತ್ತಿ ಬಂದೆ
ಜಟ್ಟಿಯಂತೆ ಘಟ್ಟಿ ಮುಟ್ಟಾಗಿ ಬೆಟ್ಟ ಗುಡ್ಡ ಹತ್ತಿ ಬಂದೆ
ಗಂಡು : ಹೇ... ನಾಟಿ ಕಾಲೇಜು ಬ್ಯೂಟೀ ನ್ಯಾಯಕ್ಕಾಗಿ ನಾ ಜೀವ ಕೊಡುವೆ ಕಣೇ
ಸತ್ಯವನ್ನ ನಾ ಎತ್ತಿ ಹಿಡಿವೆ ಕಣೇ
ಪುಂಡತನವ ಚೆಂಡಾಡೋ ಗಂಡು ಕಣೆ
ಸೊಕ್ಕಿದವರ ಮುರಿದಿಕ್ಕೋ ಸಿಡಿಲಮರಿ
ಹೆಣ್ಣು : ಈ ಪರಿಹಾಸವೆಲ್ಲ ಏಕೆ ಈ ಸಹವಾಸ ಅಪಾಯ ಜೋಕೆ
ಗಂಡು : ಮಾತು ಬೆಳ್ಳಿ ಮೌನ ಬಂಗಾರ ಗಾದೆ ಮಾತು ಕೇಳೇ ನೀನು
ತಗ್ಗಿ ಬಗ್ಗಿ ತುಂಬು ತುಂಬು ಗಂಭೀರ ರೀತಿ ನೀತಿ ಕಲಿಯೇ ನೀನು
ಕಾಲೇಜು ಟೀಮಿನಲ್ಲಿ ಟೀನೇಜು ಫ್ರೆಂಡು ನಾನು
ಜೀವಕ್ಕೆ ಜೀವ ನೀಡೋ ಗಾಜನೂರು ಗಂಡು ನಾನು
ಅಲ್ಲಿ ಇಲ್ಲಿ ಕಲ್ಲು ಮುಳ್ಳಲಿ ಹಳ್ಳಿ ಡಿಲ್ಲಿ ಸುತ್ತಿ ಬಂದೆ
ಜಟ್ಟಿಯಂತೆ ಘಟ್ಟಿ ಮುಟ್ಟಾಗಿ ಬೆಟ್ಟ ಗುಡ್ಡ ಹತ್ತಿ ಬಂದೆ
-----------------------------------------------------------------------------------------------
ಗಾಜನೂರ ಗಂಡು (೧೯೯೬) - ಹೆಣ್ಣಾ ಲೈಫ್ ಮಿಸ್ಟರೀ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ವಿ.ಮನೋಹರ ಗಾಯನ : ಸಾಧುಕೋಕಿಲ, ಚಿತ್ರ
ಹೆಣ್ಣು : ಹೆಣ್ಣು ಲೈಫೇ ಮಿಸ್ಟರೀ ಓದಿ ನೋಡು ಹಿಸ್ಟರೀ
ಪೇಜು ತುಂಬಾ ಟ್ರ್ಯಾಜಡಿ ಬಾಳಲಿಲ್ಲ ಸಂಯಮವಿಲ್ಲ
ಗಂಡು : ಗುಲ್ಲ ಗುಲ್ಲ ರಸಗುಲ್ಲ ಕೇಳೋರ್ಯಾರಿಲ್ಲ ಎಲ್ಲ ಗುಲ್ಲು ಗುಲ್ಲ
ಹೆಣ್ಣು : ಎಲ್ಲಾ ಮರುಳುಗಾಡು ಬೆಂಕಿ ಎದೆಯ ಗೂಡು
ಅಯ್ಯೋ ನನ್ನ ಪಾಡು ರಾಗಾ ಇರದ ಹಾಡು
ವಯಸ್ಸು ಸುಡುತಿದೆ ಬಾ ಬಳಲಿ ಬೆದರಿದೆ ನಾ
ಗಂಡು : ಅಂಜೂರ ಹೆಣ್ಣೇ ಮದಿರೆಯ ಹೆಣ್ಣು ಕಾಬುಲು ಖರ್ಜುರ ಇದು
ಹೆಣ್ಣು : ಹೇ ಹೇ ಹೇ ಹೇ ಹೈ ಲೈಲಾ..
ಹೆಣ್ಣು : ಹೆಣ್ಣು ಲೈಫೇ ಮಿಸ್ಟರೀ ಓದಿ ನೋಡು ಹಿಸ್ಟರೀ
ಪೇಜು ತುಂಬಾ ಟ್ರ್ಯಾಜಡಿ ಬಾಳಲಿಲ್ಲ ಸಂಯಮವಿಲ್ಲ
ಗಂಡು : ಗುಲ್ಲ ಗುಲ್ಲ ರಸಗುಲ್ಲ ಕೇಳೋರ್ಯಾರಿಲ್ಲ ಎಲ್ಲ ಗುಲ್ಲು ಗುಲ್ಲ
ಹೆಣ್ಣು : ನನ್ನ ಅಲಿಬಾಬ ಇಲ್ಲಿ ಇರುವೆ ಬಾ ಬಾ
ಇಂಥ ಚೋರರಿಂದ ಉಳಿಸು ಬೇಗ ಬಾ ಬಾ
ಪ್ರಾಣ ಹೋದರು ನಾ ತಾನ ಬಿಡೆನು ನಾ
ಗಂಡು : ಬಳುಕೋ ಸುಂದರಿ ಗುಲೇಬ ಕಾವಲಿ ತಾವರೇ ನನ್ನ ಕೋಲ್ಮಿಂಚು
ಗುಲ್ಲ ಗುಲ್ಲ ರಸಗುಲ್ಲ ಕೇಳೋರ್ಯಾರಿಲ್ಲ ಎಲ್ಲ ಗುಲ್ಲು ಗುಲ್ಲ
ಹೆಣ್ಣು : ಹೆಣ್ಣು ಲೈಫೇ ಮಿಸ್ಟರೀ ಓದಿ ನೋಡು ಹಿಸ್ಟರೀ
ಪೇಜು ತುಂಬಾ ಟ್ರ್ಯಾಜಡಿ ಬಾಳಲಿಲ್ಲ ಸಂಯಮವಿಲ್ಲ
------------------------------------------------------------------------------------------------
ಗಾಜನೂರ ಗಂಡು (೧೯೯೬) - ಮಳೆಯ ಮುತ್ತು ಮಳೆಯ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ
ಹೆಣ್ಣು : ಆಹ್ಹಹಾ...ಆಹ್ಹಹಾ...ಆಆಆ ಓಓಓಓ ಓಹೋ
ಮಳೆಯ ಮುತ್ತು ಮಳೆಯ ನೀ ಸುರಿಸೋ ಗೆಣೆಯಾ
ಮಧುರ ಹೊಳೆ ಹರಿಸಿ ನೀ ತಣಿಸೋ ತುಟಿಯಾ ಹೇ ಹೇ ಹೇಹೇ ಹೇಹೇ
ಗಂಡು : ಪ್ರಣಯ ಸವಿ ಸಮಯ ಈ ಮನವಿ ಹೃದಯ
ಹೃದಯ ಗರಿ ಗೆದರೋ ಯೌವ್ವನದ ಹರೆಯ ಹೇ ಹೇ ಹೇಹೇ ಹೇಹೇ
ಹೆಣ್ಣು : ನಿನ್ನೇ ಕನಸಿನಲಿ ಜೇನ ಕೊಳವಿನ ಈಜುವಾ ವೇಳೆಲಿ
ಕದ್ದು ನೋಡುತಲಿ ಮೆಲ್ಲ ಬಂದವನೇ ಕದ್ದೆಯಾ ಸೀರೆಯಾ
ಗಂಡು : ಅಯ್ಯೋ ನನ್ನ ಕಥೆ ಕೇಳಬೇಡ ಪ್ರಿಯೇ ನಿನ್ನೆಯ ರಾತ್ರಿಯೂ
ನಿನ್ನ ನೋಡಿದುದೂ ಎಲ್ಲ ನೆನೆಯುತಲಿ ಇರುವೇ ನಾನು
ಹೆಣ್ಣು : ಓ... ಅಂಕೆಯೂ ಸಾಲದು
ಗಂಡು : ಸುಮ್ಮನೇ ಕೂರದು
ಹೆಣ್ಣು : ಬೆಸುಗೆಯದಿರಿಯಲಿ ಬಗೆ ಬಗೆ ಸುಖವಾ ಆಹಾ..ಆಹಾ ಆ.. ಆ
ಮಳೆಯ ಮುತ್ತು ಮಳೆಯ ನೀ ಸುರಿಸೋ ಗೆಣೆಯಾ
ಹೆಣ್ಣು : ಯಾರು ಇಲ್ಲದಿರು ಜಾಗದಾಸೆಯಲಿ ಹಾಡಿದೆ ಹೋದೆ ನಾ
ಅಲ್ಲೂ ಕೂಡ ಹೊಸ ಜೋಡಿ ಪ್ರೇಮಿಗಳ ಚುಂಬನಾಲಿಂಗನ..
ಗಂಡು : ಪ್ರೀತಿ ಇಲ್ಲದಿರೋ ಜಾಗವಿಲ್ಲ ಕಣೇ ಭೂಮಿಯೇ ಪ್ರೇಮಿಯೂ ...
ಸೂರ್ಯನಾಸೆಯಲಿ ಸುತ್ತುತಿರುವುದೂ ತೀರದ ಆಸೆಯೂ
ಹೆಣ್ಣು : ಓ...ಸಾಲೇನೂ ರಸಿಕತೆ
ಗಂಡು : ನಿನ್ನನೂ ಸೋಕಿತೇ ..
ಹೆಣ್ಣು : ಚಳಿಯಲಿ ಬಿಸಿ ಬಿಸಿ ನೆನಪಿನ ಸಿಹಿಯಾ ಓಹೋ ಓಹೋ ಓ ಆ
ಗಂಡು : ಪ್ರಣಯ ಸವಿ ಸಮಯ ಈ ಮನವಿ ಹೃದಯ
ಹೃದಯ ಗರಿ ಗೆದರೋ ಯೌವ್ವನದ ಹರೆಯ ಹೇ ಹೇ ಹೇಹೇ ಹೇಹೇ
ಹೆಣ್ಣು : ಹೇ ಹೇ ಹೇಹೇ ಹೇಹೇ
------------------------------------------------------------------------------------------------
ಗಾಜನೂರ ಗಂಡು (೧೯೯೬) - ಮುತ್ತು ರತ್ನಗಳ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ವಿ.ಮನೋಹರ ಗಾಯನ : ಸುರೇಶ, ಸುಜಾತದತ್ತ
ಗಂಡು : ಮುತ್ತು ರತ್ನಗಳ ಲೋಕಕೆ ಸಿಹಿ ಮುತ್ತು ಮುತ್ತುಗಳ ಕಾಣಿಕೆ
ಮುತ್ತಲ್ಲೇ ಸ್ನಾನ ಮುತ್ತಿಗೆ ಸ್ಥಾನ ಮುತ್ತೊಂದೇ ಧ್ಯಾನ ಮುತ್ತೊಂದೇ ಪಾನ
ಧೀಮತ್ ಧೀಮ್ ತಕಿತತಾ
ಹೆಣ್ಣು : ಅಷ್ಟ ದಿಕ್ಕುಗಳ ಹಾದಿಗೆ ಫಲ ಪುಷ್ಪ ವೃಷ್ಟಿಗಳ ಹಾಸಿಗೆ
ಮುತ್ತಲ್ಲೇ ಸ್ನಾನ ಮುತ್ತೇ ಪ್ರಧಾನ ಮುತ್ತು ಸಂಧಾನ ಮುತ್ತಲ್ಲೇ ಎಲ್ಲ..
ಧೀಮತ್ ಧೀಮ್ ತಕಿತತಾ
ಗಂಡು : ಮುಂಜಾನೆಗೂ ಮೊದಲೇ ಪ್ರೀತಿಯ ತುತ್ತೂ
ಮುಸ್ಸಂಜೆಯ ತನಕ ಕಳೆಯುವ ಹೊತ್ತು ರಸಬಾಳೆ ಹೂದೋಟವೂ
ರಸದೂಟ ತುಂಟಾಟವೂ ಜೊತೆಗೆ ನಾನು ಇದ್ದಾಗ ಪಡಿಬೇಕು ಬೇಕು ಅನ್ನೋ ಆಸೆಯೂ
ಹೆಣ್ಣು : ಎಲ್ಲೆಲ್ಲಿಯೂ ಹಸಿರು ಮೂಡಣ ತೇರು ಕಾಲಿಟ್ಟರೆ ನವಿರು ಪ್ರೇಮದ ನೀರು
ಉಸಿರಾಟ ವಿಲವಿಲವು ಜಗವೆಲ್ಲ ಶ್ರೀಗಂಧವು ಗಿಳಿ ಹಾಡು ರತಿ ಬೀಡು
ಪ್ರತಿ ವೇಳೆ ಇಲ್ಲಿ ನಮ್ಮ ಭೇಟಿಯೂ ..
ಗಂಡು : ಮುತ್ತು ರತ್ನಗಳ ಲೋಕಕೆ ಸಿಹಿ ಮುತ್ತು ಮುತ್ತುಗಳ ಕಾಣಿಕೆ
ಮುತ್ತಲ್ಲೇ ಸ್ನಾನ ಮುತ್ತಿಗೆ ಸ್ಥಾನ ಮುತ್ತೊಂದೇ ಧ್ಯಾನ ಮುತ್ತೊಂದೇ ಪಾನ
ಧೀಮತ್ ಧೀಮ್ ತಕಿತತಾ
ಹೆಣ್ಣು : ನೂರಾರಿವೆ ಬಯಕೆ ಸುಂದರ ಕಾವ್ಯ ಆರಂಭದಿ ಎಣಿಕೆ ಕಲ್ಪನೆ ಭವ್ಯ
ಕಣ್ಣಂಚೆ ಹೂಬಾಣವು ಎದುರಾಯ್ತು ಈ ಗಾನವು
ಅನುರಾಗ ಅತಿವೇಗ ಕನಸೆಲ್ಲ ಬೇಗ ತೀರೋ ಯೋಗವು
ಗಂಡು : ಮುಟ್ಟಿದ್ದೆಲ್ಲಾ ಸೊಗಸು ಭೂಮಿಯ ಮೇಲೆ ಕಾಣೋದೆಲ್ಲ ತಿನಿಸು ಪ್ರೇಮದ ಲೀಲೆ
ಕೈತುಂಬ ಪ್ರೇಮಾಂಜಲಿ ಬಾಯ್ತುಂಬಾ ಜೇನಾಂಜಲಿ
ಕ್ಷಣ ಕೂಡ ತಡ ಬೇಡ ತುಟಿ ಆಹ ಆಹ ಎಲ್ಲ ಸ್ವಾಹವೂ ..
ಗಂಡು : ಮುತ್ತು ರತ್ನಗಳ ಲೋಕಕೆ ಸಿಹಿ ಮುತ್ತು ಮುತ್ತುಗಳ ಕಾಣಿಕೆ
ಮುತ್ತಲ್ಲೇ ಸ್ನಾನ ಮುತ್ತಿಗೆ ಸ್ಥಾನ ಮುತ್ತೊಂದೇ ಧ್ಯಾನ ಮುತ್ತೊಂದೇ ಪಾನ
ಧೀಮತ್ ಧೀಮ್ ತಕಿತತಾ
ಹೆಣ್ಣು : ಅಷ್ಟ ದಿಕ್ಕುಗಳ ಹಾದಿಗೆ ಫಲ ಪುಷ್ಪ ವೃಷ್ಟಿಗಳ ಹಾಸಿಗೆ
ಮುತ್ತಲ್ಲೇ ಸ್ನಾನ ಮುತ್ತೇ ಪ್ರಧಾನ ಮುತ್ತು ಸಂಧಾನ ಮುತ್ತಲ್ಲೇ ಎಲ್ಲ..
ಧೀಮತ್ ಧೀಮ್ ತಕಿತತಾ
------------------------------------------------------------------------------------------------
ಗಾಜನೂರ ಗಂಡು (೧೯೯೬) - ಸಿಂಧೂರ ಭಾಗ್ಯವ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ರಮೇಶರಾವ ಗಾಯನ : ಎಸ್.ಪಿ.ಬಿ. ಚಿತ್ರಾ
ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ ಶೃಂಗಾರ ಕಾವ್ಯವ ಬರೆದವ ನೀನೇ
ಓಹೋಹೋ... ಓಹೋಹೊಹೋ.. ಪ್ರೇಮಿ...
ಗಂಡು : ಆ... ಚೆಂದದ ಚಂದನ ಗೊಂಬೇ ನೀ ನನಗೆ ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ
ಓಹೋಹೋ... ಓಹೋಹೊಹೋ.. ಪ್ರೇಮಿ...
ಗಂಡು : ಕಣ್ಣು ಕಣ್ಣು ನೋಟ ನೋಟ ಕೂಡಿದಾಗ ಸಿಹಿಯ ಊಟ ... ಆಹಾಹಾ..
ಹೆಣ್ಣು : ಗಾಜನೂರು ರಾಜ ನೀನು ನಿದ್ದೆ ಕದ್ದ ಪೋರ ನೀನು
ಒಲಿದೆ ಒಲವಿನಲಿ ಸೆಳೆದೆ ಚೆಲುವಿನಲಿ
ಗಂಡು : ಹೃದಯ ಪುಟಗಳಲಿ ಬೆರೆತೆ ಪ್ರೇಮದಲಿ
ಇಬ್ಬರು : ವಿನೂತನ ವಿವಾಹವು ನಮ್ಮನು ಜೊತೆ ಮಾಡಿತು
ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ ಶೃಂಗಾರ ಕಾವ್ಯವ ಬರೆದವ ನೀನೇ
ಓಹೋಹೋ... ಓಹೋಹೊಹೋ.. ಪ್ರೇಮಿ...
ಗಂಡು : ಆ... ಚೆಂದದ ಚಂದನ ಗೊಂಬೇ ನೀ ನನಗೆ ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ
ಓಹೋಹೋ... ಓಹೋಹೊಹೋ.. ಪ್ರೇಮಿ...
ಗಂಡು : ನಾನು ಒಂದು ಹೆಜ್ಜೆ ಇಡಲು ನೀನು ಒಂದು ಹೆಜ್ಜೆ ಇಡು
ಹೆಣ್ಣು : ಹೆಜ್ಜೆ ಹೆಜ್ಜೆ ಸೇರಿಸುವೆ ಬಾಳ ಪಯಣ ಸುಖದ ಹಾದಿ
ಗಂಡು : ಜನುಮ ಜನುಮದ ಮಿಲನ
ಹೆಣ್ಣು : ಯುಗ ಯುಗಾಂತರಕು ಮಾಸದು ಈ ಗಾನ
ಇಬ್ಬರು : ಪರೀಕ್ಷೆಗೂ ನಿರೀಕ್ಷೆಗೂ ಮೀರಿದ ಈ ಬಂಧವೂ ..
ಹೆಣ್ಣು : ಸಿಂಧೂರ ಭಾಗ್ಯವ ತಂದವ ನೀನೇ ಶೃಂಗಾರ ಕಾವ್ಯವ ಬರೆದವ ನೀನೇ
ಓಹೋಹೋ... ಓಹೋಹೊಹೋ.. ಪ್ರೇಮಿ...
ಗಂಡು : ಆ... ಚೆಂದದ ಚಂದನ ಗೊಂಬೇ ನೀ ನನಗೆ ಗಂಧರ್ವ ಗಿರಿಯಿಂದ ಬಂದೆ ನೀ ಧರೆಗೆ
ಓಹೋಹೋ... ಓಹೋಹೊಹೋ.. ಪ್ರೇಮಿ...
------------------------------------------------------------------------------------------------
ಗಾಜನೂರ ಗಂಡು (೧೯೯೬) - ಯುಗ ಯುಗ ಸಾಗಿ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಡಾ||ರಾಜಕುಮಾರ
ಯುಗ ಯುಗ ಸಾಗಿ ಹೋಗಿ ನೆಲೆ ಬೆಲೆ ನಂಜಾದವೋ
ಬಗೆ ಬಗೆ ಆಸೆ ಮೂಡಿ ತನುಮನ ನಂಜಾದವೋ
ನ್ಯಾಯ ನೀತಿ ಸತ್ತು ಸುಣ್ಣ ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು...
ತಂಗಿ ಮದುವೆ ಒಂದೆಡೇ ಪ್ರೀತಿ ಸೆಳೆತ ಒಂದೆಡೇ
ನಿರಪರಾಧಿಗೆ ಬೇಡಿಯಾ ತೊಡಿಸಿದೆ
ನಾನು ಕನಸು ಕಾಣದೆ ಒಂದು ಸುಳ್ಳು ಹೇಳದೇ
ನಾಳೆ ಹಾದಿಗೆ ಮುಳ್ಳನೇ ದೂಡಿದೆ
ಅಂತರಂಗ ಮಾಯದಾ ಗಾಯವಾಗಿದೆ
ಯುಗ ಯುಗ ಸಾಗಿ ಹೋಗಿ ನೆಲೆ ಬೆಲೆ ನಂಜಾದವೋ
ಬಗೆ ಬಗೆ ಆಸೆ ಮೂಡಿ ತನುಮನ ನಂಜಾದವೋ
ನ್ಯಾಯ ನೀತಿ ಸತ್ತು ಸುಣ್ಣ ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು...
ಯಾವ ಘಳಿಗೆ ಏನುಂಟೋ ಯಾರು ಹೇಳಲಾಗದು
ಆಗ್ನಿ ಸಾಕ್ಷಿಯ ಪರೀಕ್ಷೆಯು ನಡೆದಿದೆ
ಯಾರ ಬದುಕು ಹೇಗುಂಟೂ ಯಾರು ತಿಳಿಯಲಾಗದು
ಯೋಗಾ ಯೋಗದಾ ಸಂಘರ್ಷ ಒಳದಾಗಿದೆ
ಅಂತರಂಗ ಮಾಯಾದ ಗಾಯವಾಗಿದೆ
ಯುಗ ಯುಗ ಸಾಗಿ ಹೋಗಿ ನೆಲೆ ಬೆಲೆ ನಂಜಾದವೋ
ಬಗೆ ಬಗೆ ಆಸೆ ಮೂಡಿ ತನುಮನ ನಂಜಾದವೋ
ನ್ಯಾಯ ನೀತಿ ಸತ್ತು ಸುಣ್ಣ ಸತ್ಯ ಧರ್ಮ ಮುಚ್ಚಿ ಕಣ್ಣ
ಅಲ್ಲೂ ಇಲ್ಲೂ ಎಲ್ಲೂ ಬಾಳೇ ಸುಳ್ಳು...
-------------------------------------------------------------------------------------------------
No comments:
Post a Comment