- ಓ ಪ್ರಿಯತಮ
- ಏನೋ ಹೊಸತನ
- ಹೊನ್ನಂಥ ನಾಡು
- ಕಣ್ಣಿಗೆ ಕಾಣುವ
- ಅಮ್ಮಾ ಎನುವಾ
ಆನಂದ ಜ್ಯೋತಿ (೧೯೯೩) - ಓ ಪ್ರಿಯತಮ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ ಚಿತ್ರಾ
ಕೋರಸ್ : ತಮಸೋಮ ಜ್ಯೋತಿರ್ಗಮಯಃ ತಮಸೋಮ ಜ್ಯೋತಿರ್ಗಮಯಃ ಓಓಓಓಓಓಓ
ಹೆಣ್ಣು : ಓ... ಪ್ರಿಯತಮಾ ಓ.. ಪ್ರಿಯತಮಾ
ಓ... ಪ್ರಿಯತಮಾ ಓ.. ಪ್ರಿಯತಮಾ
ಎಂದು ನಿನ್ನ ಜೋಡಿಯಾಗಿ ನಾ ನೀಯುವೇ
ಇಡುವ ಹೆಜ್ಜೆಗೊಂದು ದೀಪ ಬಾ ತೋರುವೇ ಬಾಳಲ್ಲಿ ಸುಖವ ತುಂಬುವೇ
ಓ... ಪ್ರಿಯತಮಾ ಓ.. ಪ್ರಿಯತಮಾ
ಹೆಣ್ಣು : ನಡೆವ ದಾರಿಯಲ್ಲಿ ಸುಂವ ಹಾಸಿ ನಲ್ಲ ಹಿತವ ಕೊಡುವೇ
ನಗಿಸಿ ಕುಣಿಸಿ ಹೊಸ ಹೊಸ ಬಯಕೆ ತರುವೆ
ಉರಿವ ಜ್ಯೋತಿಯಾಗಿ ಕಣ್ಣಕಾಂತಿಯಾಗಿ ಶಾಂತಿ ಕೊಡುವೇ ..
ಹೃದಯ ಎನ್ನುವ ಕುಸಮದಿ ಒಲವ ಸುರಿವೇ ..
ಗಂಡು : ಬಾಳಿನಲ್ಲಿ ಎಂದು ಕಾಣೆ ಇಂಥ ಪ್ರೀತಿ ನಾನು
ಒಲಿದು ಬಂದ ಒಡತಿಯನ್ನು ಇನ್ನೂ ಬಿಡುವುದೇನೂ
ಎಂಥ ಭಾಗ್ಯ ನನ್ನದಾಯಿತು
ಓ.. ಪ್ರಿಯತೆಮೆ... ಓ.. ಪ್ರಿಯತೆಮೆ...
ಕೋರಸ್ : ಆ ಆ ಆ ಅ ಅ ಅ ಆಆಆ
ನಿಸನಿಪಪ ಮಪಪಪ ಮಪಪಪ ಗಬಗರಿಬ ದನಿನಿನಿ ನಿಸಸಸ ಸಗಗಗಸ
ಆಆಆಅ ತನನ ತನನ ತನನ ತನನನ
ಗಂಡು : ಗಗನದಲ್ಲಿ ಕೋಟಿ ಮಿನುಗು ತಾರೆಯಂತೆ ಬೆಳಕ ಕಂಡೆ
ಮನದಿ ಇಡಲು ಹರುಷದ ಹೊನ್ನ ಹಣತೆ
ಧರೆಗೆ ಜಾರಿಬಂದ ಸುರರ ಲೋಕದಂದ ಇಂದು ಕಂಡೆ
ತನುವು ಮನವು ಅರಳಲು ನನ್ನೇ ಮರೆತೇ
ಹೆಣ್ಣು : ನೀನು ಎಲ್ಲೋ ನಾನು ಅಲ್ಲೇ ನಮ್ಮದೊಂದೇ ಯೋಗ
ಗೆಳೆಯ ನಮ್ಮ ಬಾಳಗೀತೆ ಇನ್ನು ಒಂದೇ ರಾಗ ಬದುಕಿನಲ್ಲಿ ಶಾಂತಿ ಕಾಣುವಾ
ಗಂಡು : ಓ.. ಪ್ರಿಯತೆಮೆ... ಓ.. ಪ್ರಿಯತೆಮೆ...
-----------------------------------------------------------------------------------------
ಆನಂದ ಜ್ಯೋತಿ (೧೯೯೩) - ಏನೋ ಹೊಸತನ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ ಚಿತ್ರಾ
ಗಂಡು : ಏನೋ ಹೊಸತನ ಹೊಸ ಆಸೆ ಅನುದಿನ
ಹೆಣ್ಣು : ಮಾತು ಮನದಲ್ಲಿ ಈ ಮೌನವೇ ಹೇಳದೆ ಕಾರಣ
ಗಂಡು : ಆಯ್ ಲವ್ ಯೂ ಓ ಮೈ ಲವ್
ಹೆಣ್ಣು : ಓ ಮೈ ಲವ್ ಆಯ್ ಲವ್ ಯೂ
ಗಂಡು : ಏನೋ ಕನಸುಗಳು ಸವಿಯಾದ ವಿರಹ ತರಲು
ಹೆಣ್ಣು : ಏನೋ ನೆನಪುಗಳು ಸುಮದಂತೆ ಅರಳುತಿರಲು
ಗಂಡು : ಒಲಿದಾ ಹೃದಯದೊಳು ನಯನ ಬರೆದಿರಲೂ
ಹೆಣ್ಣು : ನೂರು ಪ್ರೇಮ ಕವನ ಹಿತವಾಗಿ ಹಾಡಿ ತನನನಾ
ಗಂಡು : ಏನೋ ಹೊಸತನ ಹೊಸ ಆಸೆ ಅನುದಿನ
ಹೆಣ್ಣು : ಮಾತು ಮನದಲ್ಲಿ ಈ ಮೌನವೇ ಹೇಳದೆ ಕಾರಣ
ಗಂಡು : ಆಯ್ ಲವ್ ಯೂ ಓ ಮೈ ಲವ್
ಹೆಣ್ಣು : ಓ ಮೈ ಲವ್ ಆಯ್ ಲವ್ ಯೂ
ಹೆಣ್ಣು : ಸೇರಿ ಜೊತೆ ಇರಲು ಬಿಸಿಲೆಲ್ಲ ತಂಪು ನೆರಳು
ಗಂಡು : ಕೂಡಿ ನಲಿದಿರಲು ಮುಳ್ಳೆಲ್ಲ ಸುಮದ ಒಡಲು
ಹೆಣ್ಣು : ಒಲವು ಬೆಸೆದಿರಲು ಬಯಕೆ ಕುಣಿದಿರಲು
ಗಂಡು : ಬಾಳು ಒಂದು ಕಥೆಯ ಆಹಾ ಮಾಸಿಹೋಯ್ತು ವ್ಯಥೆಯಾ
ಏನೋ ಹೊಸತನ ಹೊಸ ಆಸೆ ಅನುದಿನ
ಹೆಣ್ಣು : ಮಾತು ಮನದಲ್ಲಿ ಈ ಮೌನವೇ ಹೇಳದೆ ಕಾರಣ
ಗಂಡು : ಆಯ್ ಲವ್ ಯೂ ಓ ಮೈ ಲವ್
ಹೆಣ್ಣು : ಓ ಮೈ ಲವ್ ಆಯ್ ಲವ್ ಯೂ
-----------------------------------------------------------------------------------------
ಆನಂದ ಜ್ಯೋತಿ (೧೯೯೩) - ಹೊನ್ನಂಥ ನಾಡು
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಹೊನ್ನಂಥ ನಾಡು ಶ್ರೀಗಂಧ ಬೀಡು ಚಾಮುಂಡಿ ತೌರೂರಿದು ಹೇ...ಹೇ...
ಹೊನ್ನಂಥ ನಾಡು ಶ್ರೀಗಂಧ ಬೀಡು ಚಾಮುಂಡಿ ತೌರೂರಿದು
ಕನ್ನಡದಾ ಹೊನ್ನುಡಿಯು ಕಸ್ತೂರಿ ತಾನೇ
ಕನ್ನಡದಾ ಮಾತುಗಳಾ ನನ್ನದು ತಾನೇ
ಸೊಗಸು ಕೇಳಲು ಎಂದು ಸೊಗಸು ಹಾಡಲೂ ಹೇಹೇಹೇಹೇ
ಹೇ ಹೊನ್ನಂಥ ನಾಡು ಶ್ರೀಗಂಧ ಬೀಡು ಚಾಮುಂಡಿ ತೌರೂರಿದು ಹೇಹೇಹೇಹೇ
ರಪ ರಪ ರಪ ಪ ಪ ಪ ಪ ರಪ ಪ ರಪ ಪ ಹೇ
ಬೆಲ್ಲಕ್ಕಿಂತ ಸಿಹಿಯ ಮಾತು ನಗುತಲಿ ನೀನು ನುಡಿದರೆ ಹೇಹೇಹೇಹೇಹೇ
ಕಬ್ಬಿಗಿಂತ ಸವಿಯು ಮಾತು ಸರಸದಿ ನೀನು ನುಡಿದರೆ ಆಹ
ಸ್ನೇಹದಿಂದ ಸೇರಿದಾಗ ಕಥೆಯ ಹೇಳುವೆ ಪ್ರೀತಿಯಿಂದ
ಹಾಡಿದಾಗ ಕವಿತೆ ಹಾಡುವೆ ಶಶಿಯು ತರುವ ಬೆಳಕಂತೆ
ಸುರಿವ ಜೇನ ಹನಿಯಂತೆ ಸಬಬ ಗಿಬಬ
ಗಬಕಬಬಬ ರೈಬಬಬ ರಿಬಬ ರಿಬಬ
ಹೇ.. ಹೊನ್ನಂಥ ನಾಡು ಶ್ರೀಗಂಧ ಬೀಡು ಚಾಮುಂಡಿ ತೌರೂರಿದು ಹೇಹೇಹೇಹೇ
ಅಮ್ಮ ಎಂದು ನುಡಿಯುವಾಗ ನಲಿಯದೆ ನಿನ್ನ ಪ್ರಾಣವು ಹ್ಹಾಂ ..
ತಾಯಿ ಬಾಷೆ ಆಡುವಾಗ ಕುಣಿಯದೇ ನಿನ್ನ ಜೀವವು ಹೇಯ್ ...
ನಿನ್ನ ಹೆತ್ತ ತಾಯಿ ಮಡಿಲು ದೇವ ಮಂದಿರ
ಕಣ್ಣ ಬಿಟ್ಟು ನೋಡಿದೆಡೆಯು ನಿತ್ಯ ಸುಂದರ
ಕೋಟಿ ಜನುಮ ಬರಲು ನೀನೇ ಜೊತೆಯಾಗಿರು ನಲ್ಲೆ
ಆಹ್ ಜಿಗಜಗ ಜಿಗಜಗಾ ಡಡಡಡ ಡರ ದಿರ ಏಯ್
ಹೊನ್ನಂಥ ನಾಡು ಶ್ರೀಗಂಧ ಬೀಡು ಚಾಮುಂಡಿ ತೌರೂರಿದು ಹೇ...ಹೇ...
ಹೊನ್ನಂಥ ನಾಡು ಶ್ರೀಗಂಧ ಬೀಡು ಚಾಮುಂಡಿ ತೌರೂರಿದು
ಕನ್ನಡದಾ ಹೊನ್ನುಡಿಯು ಕಸ್ತೂರಿ ತಾನೇ
ಕನ್ನಡದಾ ಮಾತುಗಳಾ ನನ್ನದು ತಾನೇ
ಸೊಗಸು ಕೇಳಲು ಎಂದು ಸೊಗಸು ಹಾಡಲೂ ಹೇಹೇಹೇಹೇ
ಹೇ ಹೊನ್ನಂಥ ನಾಡು ಶ್ರೀಗಂಧ ಬೀಡು ಚಾಮುಂಡಿ ತೌರೂರಿದು ಹೇಹೇಹೇಹೇ
------------------------------------------------------------------------------------------
ಆನಂದ ಜ್ಯೋತಿ (೧೯೯೩) - ಕಣ್ಣಿಗೆ ಕಾಣುವ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ರಾಜೇಶ
ಹೇ..ಹೇ. ಹೇ.ಹೇ. ಕಣ್ಣಿಗೆ ಕಾಣುವ ದೇವರ ನೋಡಿದೇಯಾ ...
ಹೇ ಹೇ ಹೇ ಹೇ ದೇವರು ಕುಡಿಸಿದ ಅಮೃತ ಕುಡಿದಿಹೆಯಾ..
ನನ್ನ ಬಾಳಲ್ಲಿ ಬೆಳಕಾದೋಳು ನನ್ನ ದೇಹಕ್ಕೆ ಉಸಿರಾದೊಳು
ತನ್ನ ಒಂದೊಂದು ಮಾತಲ್ಲಿ ಪ್ರೀತಿಯ ಜೇನನ್ನು ತಂದೋಳು
ತನ್ನ ಹೂವಂತ ಮಡಿಲಲ್ಲಿ ನಮ್ಮನ್ನು ಬೆಳೆಸುತ್ತ ಬಂದೋಳು
ಆಹ್ ಆಹ್ ಬಂದೋಳು... ಹೇಯ್
ಹೆತ್ತವಳ ಮನಸ್ಸೆಂದು ಮಲ್ಲಿಗೆಯ ಹೂವಂತೆ
ಹೆತ್ತವಳ ವಾತ್ಸಲ್ಯ ಬಿಸಿಲಲ್ಲಿ ನೆರಳಂತೆ
ನಮ್ಮಮ್ಮ ಎನ್ನುವಾಗ ಆನಂದ ಕಂಡಂತೆ
ಅವಳಿಂದ ಕಲಿತಂಥ ಮಾತೆಲ್ಲ ಮುತ್ತಂತೆ
ಮುಕ್ಕೋಟಿ ದೇವರಿದ್ದರೇನು ಆ ಸೂರ್ಯಂಗೇ ಅವರು ಸಾಟಿಯೇನೂ
ನಮ್ಮ ಬಾಳಲ್ಲಿ ಎಂದೆಂದೂ ಬೇರೇನೂ ಬೇಡಲ್ಲ ನಾವು
ನಮ್ಮ ತಾಯಿಗೆ ಎಂದೆಂದೂ ಕೊಡಬೇಡ ಬದುಕಲ್ಲಿ ನೋವು
ಹೇ..ಹೇ. ಹೇ.ಹೇ. ಕಣ್ಣಿಗೆ ಕಾಣುವ ದೇವರ ನೋಡಿದೇಯಾ ...
ಹೇ ಹೇ ಹೇ ಹೇ ದೇವರು ಕುಡಿಸಿದ ಅಮೃತ ಕುಡಿದಿಹೆಯಾ..
ದೀದಿತಾಮ್ ದೀದಿತಾಮ್ ಹೇ ಹೇ ಹೇ ತಕತಕತಾ
ಹೆತ್ತವಳ ಮಡಿಲಲ್ಲಿ ರತ್ನಗಳು ಇದ್ದಂತೆ ಸೋದರರು ನಾವುಗಳು
ಯಾರಿಲ್ಲ ನಮ್ಮಂತೆ ಆಹ್ ಪ್ರೀತಿಯಲ್ಲಿ ಬೆರೆತಾಗ ಕೆನೆಹಾಲು ಸವಿದಂತೆ
ಮಾತಿನಲಿ ನಡತೆಯಲಿ ನಾವು ಹೊನ್ನಂತೆ
ಎಂದೆಂದೂ ನಮ್ಮ ಜೀವ ಒಂದೇ ಬಾಳಲ್ಲಿ ನಮ್ಮ ರೀತಿ ಒಂದೇ
ನಮ್ಮನ್ನು ಬೇರೆ ಮಾಡೋರಿಲ್ಲ ಈ ಸತ್ಯ ಬಲ್ಲೋನೇ ಎಲ್ಲ
ಸುಖ ಸಂತೋಷ ಅನ್ನೋದು ಕಾಡಲ್ಲಿ ಮೇಡಲ್ಲಿ ಇಲ್ಲ
ಮನಸೊಂದಾಗಿ ಇರುವಾಗ ನಮಗಾದ ಚಿಂತೇನೇ ಇಲ್ಲ ಹೇಹೇಹೇಹೇ
ಹೇ..ಹೇ. ಹೇ.ಹೇ. ಕಣ್ಣಿಗೆ ಕಾಣುವ ದೇವರ ನೋಡಿದೇಯಾ ...
ಹೇ ಹೇ ಹೇ ಹೇ ದೇವರು ಕುಡಿಸಿದ ಅಮೃತ ಕುಡಿದಿಹೆಯಾ..
ನನ್ನ ಬಾಳಲ್ಲಿ ಬೆಳಕಾದೋಳು ನನ್ನ ದೇಹಕ್ಕೆ ಉಸಿರಾದೊಳು
ತನ್ನ ಒಂದೊಂದು ಮಾತಲ್ಲಿ ಪ್ರೀತಿಯ ಜೇನನ್ನು ತಂದೋಳು
ತನ್ನ ಹೂವಂತ ಮಡಿಲಲ್ಲಿ ನಮ್ಮನ್ನು ಬೆಳೆಸುತ್ತ ಬಂದೋಳು
ಆಹ್ ಆಹ್ ಬಂದೋಳು... ಹೇಯ್
------------------------------------------------------------------------------------------
ಆನಂದ ಜ್ಯೋತಿ (೧೯೯೩) - ಅಮ್ಮಾ ಎನುವಾ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಡಾ||ರಾಜಕುಮಾರ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಮನದಿ ತುಡಿತ ಏನೋ ಸೆಳೆತ
ಮನದಿ ತುಡಿತ ಏನೋ ಸೆಳೆತ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಮನದಿ ತುಡಿತ ಏನೋ ಸೆಳೆತ
ಮನದಿ ತುಡಿತ ಏನೋ ಸೆಳೆತ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಬಿಡದ ಬಂಧನವೋ ಪ್ರೇಮ ಚಂದನವೋ ಅರಿಯದು ಮನ ಅರಿಯದು...
ನಡೆದ ದಾರಿಗಳ ಸ್ಮರಣೆ ಮೂಡುತಲಿ ಅಳುವುದು ಮನ ಅಳುವುದು...
ಮರೆಯದ ನೆನಪಿನ ಸುಳಿಯಲಿ ಸಿಲಿಕಿದೆ
ಮರೆಯದ ನೆನಪಿನ ಸುಳಿಯಲಿ ಸಿಲಿಕಿದೆ ಸುಖ ಶಾಂತಿ ಕಾಣದೆ
ಅಮ್ಮ ಎನುವ ಸವಿ ಮಾತು ಎಂಥ ಚನ್ನ ಆ ಆ ಆ
ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ
ಬದುಕು ಎನ್ನುವುದು ಒಗಟು ಎಂಬುದನು ತಿಳಿದರೆ ಮನ ತಿಳಿದರೇ...
ಮಿಡಿದ ಕಂಬನಿಗೆ ಸುಡುವ ತನ್ನೆದೆಗೆ ಹೆದರದು ಮನ ಹೆದರದು...
ಆತುರ ಕುಣಿದಿರೆ ಕಾತರ ಕೆಣಕಿರೆ
ಆತುರ ಕುಣಿದಿರೆ ಕಾತರ ಕೆಣಕಿರೆ ಸುಖ ಶಾಂತಿ ಎಲ್ಲಿದೆ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಮನದಿ ತುಡಿತ ಏನೋ ಸೆಳೆತ
ಮನದಿ ತುಡಿತ ಏನೋ ಸೆಳೆತ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
------------------------------------------------------------------------------------------
ನಡೆದ ದಾರಿಗಳ ಸ್ಮರಣೆ ಮೂಡುತಲಿ ಅಳುವುದು ಮನ ಅಳುವುದು...
ಮರೆಯದ ನೆನಪಿನ ಸುಳಿಯಲಿ ಸಿಲಿಕಿದೆ
ಮರೆಯದ ನೆನಪಿನ ಸುಳಿಯಲಿ ಸಿಲಿಕಿದೆ ಸುಖ ಶಾಂತಿ ಕಾಣದೆ
ಅಮ್ಮ ಎನುವ ಸವಿ ಮಾತು ಎಂಥ ಚನ್ನ ಆ ಆ ಆ
ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ
ಬದುಕು ಎನ್ನುವುದು ಒಗಟು ಎಂಬುದನು ತಿಳಿದರೆ ಮನ ತಿಳಿದರೇ...
ಮಿಡಿದ ಕಂಬನಿಗೆ ಸುಡುವ ತನ್ನೆದೆಗೆ ಹೆದರದು ಮನ ಹೆದರದು...
ಆತುರ ಕುಣಿದಿರೆ ಕಾತರ ಕೆಣಕಿರೆ
ಆತುರ ಕುಣಿದಿರೆ ಕಾತರ ಕೆಣಕಿರೆ ಸುಖ ಶಾಂತಿ ಎಲ್ಲಿದೆ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಮನದಿ ತುಡಿತ ಏನೋ ಸೆಳೆತ
ಮನದಿ ತುಡಿತ ಏನೋ ಸೆಳೆತ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
------------------------------------------------------------------------------------------
No comments:
Post a Comment