ಶ್ವೇತ ಗುಲಾಬಿ ಚಲನಚಿತ್ರದ ಹಾಡುಗಳು
- ಸಂತೋಷದಿಂದ
- ಪ್ರೀತಿ ಜಗದ
- ಸಂಗಾತಿ ಸಂಬಂಧ
- ಸೂರ್ಯ ಹಗಲೆಲ್ಲ ಉರಿದರೂ
- ಪ್ರೀತಿ ಮಮ್ಮಿ
- ದುಡ್ಡಿದವನೆಂದೂ
ಶ್ವೇತ ಗುಲಾಬಿ (೧೯೮೫) - ಸಂತೋಷದಿಂದ ಹಾಡುವೇ
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಜಯಚಂದ್ರನ್, ವಾಣಿಜಯರಾಂ
ಗಂಡು : ಸಂತೋಷದಿಂದ ಹಾಡುವೇ ಗೀತೇ...
ಸಂತೋಷದಿಂದ ಹಾಡುವೇ ಗೀತೆ ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ ಸ್ನೇಹ ತಂದಾ ಮಿಲನದಾ ಕಥೆ...
ಸಂತೋಷದಿಂದ ಹಾಡುವೇ ಗೀತೇ...
ಗಂಡು : ಜೀವ ಭಾವದ ಅನುರಾಗ ಹಾಲೋಳು ಜೇನು ಬೆರೆತಂತೆ ...
ದೇಹ ಪ್ರಾಣದ ಒಡನಾಟ.. ಹೂವೋಳು ಗಂಧ ಇರುವಂತೇ ..
ಬೆಸೆದ ಬಾಂಧವ್ಯ ಬಿಡದಂತೇ .. ಒಲುಮೆ ಮಾಧುರ್ಯ ಮಿಡಿದಂತೇ ..
ಚಿರ ಪ್ರೇಮ ಹಾರೈಸೀ ಹಾಡಿದೇ ...
ಜಯ : ಸಂತೋಷದಿಂದ ಹಾಡುವೇ ಗೀತೇ...
ಸಂತೋಷದಿಂದ ಹಾಡುವೇ ಗೀತೆ ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ ಸ್ನೇಹ ತಂದಾ ಮಿಲನದಾ ಕಥೆ...
ಸಂತೋಷದಿಂದ ಹಾಡುವೇ ಗೀತೇ...
ಜಯ : ಸ್ನೇಹ ಸುಂದರ ಸಿರಿ ಗಂಗೆ ಸಾಗುತ ಮುಂದೆ ಹರಿದಂತೇ ...
ಮೋಹ ಮಿಂಚಿನ ಕುಡಿನೋಟ ಪ್ರೀತಿಯ ಮನಸ ತೆರೆದಂತೇ ..
ಅರಳಿ ಹೂವೊಂದು ನಗುವಂತೇ .. ಸುಖದ ಸೌಭಾಗ್ಯ ಬಿರಿದಂತೇ ...
ನಿಜ ಸ್ನೇಹ ಒಂದಾಗಿ ಹಾಡಿದೇ ...
ಹೆಣ್ಣು : ಸಂತೋಷದಿಂದ ಹಾಡುವೇ ಗೀತೇ...
ಸಂತೋಷದಿಂದ ಹಾಡುವೇ ಗೀತೆ ಬದುಕಿನ ಪುಟ ಅರಿತ ಮರೆಯದ ಮಮತೆ
ಹೃದಯದ ನುಡಿ ಬರೆದ ಒಲವಿನ ಕವಿತೆ ಸ್ನೇಹ ತಂದಾ ಮಿಲನದಾ ಕಥೆ...
ಸಂತೋಷದಿಂದ ಹಾಡುವೇ ಗೀತೇ...
ಹೆಣ್ಣು : ಭೂಮಿ ಬಾನಿನ ಸೆಳೆದಾಗ.. ಪ್ರೀತಿಗೆ ವಿರಹದ ಉಸಿರಂತೇ ...
ಗಂಡ ಹೆಂಡಿರ ಸರಿಜೋಡಿ ರಾಗದಿ ಪಾದದ ಜೊತೆಯಂತೇ ..
ಹಗಲು ಇರುಳನು ಸೆಳೆದಂತೆ ಬೆಳಕು ನೆರಳನು ಕೊಡುವಂತೇ ..
ಈ ನಲ್ಮೆ ಕಣ್ತುಂಬಿ ಹಾಡಿದೇ ... ಈ ಬಂಧ ಎಂದೆಂದೂ ಕಾಡಿದೇ...
ಗಂಡು : ಸಂತೋಷದಿಂದ ಹಾಡುವೇ ಗೀತೆ
ಹೆಣ್ಣು : ಬದುಕಿನ ಪುಟ ಅರಿತ ಮರೆಯದ ಮಮತೆ
ಜಯ : ಹೃದಯದ ನುಡಿ ಬರೆದ ಒಲವಿನ ಕವಿತೆ
ಎಲ್ಲರು : ಸ್ನೇಹ ತಂದಾ ಮಿಲನದಾ ಕಥೆ...
ಲಲಾ ಲಾಲ ಲಲಾ ಲಲ್ಲಲ್ಲಲಲಾ ಲಲ ಲಲಲಲಾ ಲಲ್ಲಲ್ಲಾಲಲಲ
------------------------------------------------------------------------------------------------------------
ಶ್ವೇತ ಗುಲಾಬಿ (೧೯೮೫) - ಪ್ರೀತಿ ಜಗದ
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್ ಪಿ/ಬಿ, ಮಂಜುಳಗುರುರಾಜ
ಗಂಡು : ಪ್ರೀತಿ ಜಗದ ಪಾತ್ರ ಪಡೆದ ನನ್ನ ಆಟಕೆ ನೀನೇ ತುಂಬಿ
ಸೂತ್ರ ಹಿಡಿದ ನೇತ್ರ ಸೆಳೆದ ನಿನ್ನ ಬಾಳಿಗೇ .. ನಾನೇ ದುಂಬಿ
ಪ್ರೀತಿ ಜಗದ ಪಾತ್ರ ಪಡೆದ ನನ್ನ ಆಟಕೆ ನೀನೇ ತುಂಬಿ
ಸೂತ್ರ ಹಿಡಿದ ನೇತ್ರ ಸೆಳೆದ ನಿನ್ನ ಬಾಳಿಗೇ .. ನಾನೇ ದುಂಬಿ
ಗಂಡು : ಆಗಿ ಹೋದ ಕವಿಯ ಮರೆತು ನಗಬೇಕು ನೀನೂ ...
ಯಾವ ವಿಧಿಯ ಸಂಚೋ ಏನೋ ನತದೃಷ್ಟ ನಾನೂ ...
ಒಂಟಿ ಮರವ ಬಳಸೋ ಬಳ್ಳಿಯಾಗೂ ನೀನೋ ..
ಮೂಕಹಕ್ಕಿ ಇಂದೂ ಹಾಡಬಾರದೇನೂ ...
ಇನ್ನಾದರೂ ಆನಂದದಿ ಬದುಕಿ ಹರಿಸುವ
ಪ್ರೀತಿ ಜಗದ ಪಾತ್ರ ಪಡೆದ ನನ್ನ ಆಟಕೆ ನೀನೇ ತುಂಬಿ
ಸೂತ್ರ ಹಿಡಿದ ನೇತ್ರ ಸೆಳೆದ ನಿನ್ನ ಬಾಳಿಗೇ .. ನಾನೇ ದುಂಬಿ
ಗಂಡು : ಕಲ್ಲು ಮುಳ್ಳು ಹಾದಿಯಲ್ಲಿ ಹೆದರಬೇಡ ನೀನೂ ...
ಪ್ರೀತಿ ಸಂಗದಲ್ಲಿ ಎಂದೂ ಮುಗ್ದ ಬರಿಯೇ ನಾನೂ
ನನ್ನ ಸನಿಹ ಸೌಖ್ಯದಲ್ಲಿ ಸಂತೋಷ ಸೂರೇ..
ನಮ್ಮ ರಾಗ ಲೋಕದಲ್ಲಿ ಯಾರಿಲ್ಲ ಬೇರೇ ..
ಇನ್ನಾದರೂ ಹೊಸ ಬಾಳಿಗೆ ನಾನೇ ಹಾಡುವ
ಪ್ರೀತಿ ಜಗದ ಪಾತ್ರ ಪಡೆದ ನನ್ನ ಆಟಕೆ ನೀನೇ ತುಂಬಿ
ಸೂತ್ರ ಹಿಡಿದ ನೇತ್ರ ಸೆಳೆದ ನಿನ್ನ ಬಾಳಿಗೇ .. ನಾನೇ ದುಂಬಿ
ಪ್ರೀತಿ ಜಗದ ಹೆಣ್ಣು : ಪಾತ್ರ ಪಡೆದ
ಗಂಡು : ನನ್ನ ಆಟಕೆ ನೀನೇ ತುಂಬಿ
ಹೆಣ್ಣು : ಸೂತ್ರ ಹಿಡಿದ ಗಂಡು : ನೇತ್ರ ಸೆಳೆದ
ಹೆಣ್ಣು : ನಿನ್ನ ಬಾಳಿಗೇ .. ನಾನೇ ಗೊಂಬೆ... ಗೊಂಬೆ... ಗೊಂಬೆ... ಅಹ್ಹಹ್ಹಹಹಹ
-------------------------------------------------------------------------------------------------------------
ಶ್ವೇತ ಗುಲಾಬಿ (೧೯೮೫) - ಸಂಗಾತಿ ಸಂಬಂಧ
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಶ್ವೇತಾ ... ಶ್ವೇತಾ ... ಶ್ವೇತಾ ... ಹೆಣ್ಣು : ರಾಜಾ... ರಾಜಾ... ರಾಜಾ...
ಗಂಡು : ಸಂಗಾತಿ ಸಂಬಂಧ ಪ್ರೀತಿ ಹೃದಯದ ಅನುಬಂಧ
ಸಂಗಾತಿ ಸಂಬಂಧ ಪ್ರೀತಿ ಹೃದಯದ ಅನುಬಂಧ
ಎಂದೆಂದೂ ರಂಗಾದ ಪ್ರೇಮ ಪಯಣದ ಆತ್ಮ ಬಂಧ
ಹೆಣ್ಣು : ನೀ ತಂದ ಈ ಬಂಧ ಜೀವಭಾವದ ಆನಂದ
ನೀ ತಂದ ಈ ಬಂಧ ಜೀವಭಾವದ ಆನಂದ
ನಾವೆಂದೋ ಒಂದಾದ ಜನುಮ ಜನುಮದ ಸ್ನೇಹ ಬಂಧ
ಗಂಡು : ಸಂಗಾತಿ ಸಂಬಂಧ ಪ್ರೀತಿ ಹೃದಯದ ಅನುಬಂಧ
ಗಂಡು : ಬಳ್ಳಿ ನೀನು ಮರವು ನಾನು ಜೋತೆಯ ಬಿಟ್ಟು ಬದುಕಲೂ ..
ಹೆಣ್ಣು : ಕಡಲು ಮೀನು ನದಿಯು ನಾನು ಸಂಗ ಸರಿಯ ತೊರೆಯದೂ
ಗಂಡು : ಆಸೇ ಕಂಡ ಹಾದಿಗೇ ನೀನೇ ನಲ್ಮೆ ಮಲ್ಲಿಗೇ ..
ಹೆಣ್ಣು : ಕೂಡಿ ಬಾಳಲೆಂದೇ
ಗಂಡು : ನಿನಗೆಂದೇ ನಾ ಹುಟ್ಟಿ ಬಂದೇ ...
ಹೆಣ್ಣು : ಸಂಗಾತಿ (ಹೂಂ) ಸಂಬಂಧ (ಹೂಂ) ಪ್ರೀತಿ ಹೃದಯದ ಅನುಬಂಧ
ಹೆಣ್ಣು : ರವಿಯು ನೀನೂ ಭುವಿಯು ನಾನೂ ಬದುಕ ಸೆಳೆತ ಮುಗಿಯದು
ಗಂಡು : ಹೂವೂ ನೀನು ದುಂಬಿ ನಾನೂ ಮಧುರ ಮಿಲನ ತೊರೆಯದು
ಹೆಣ್ಣು : ನಮ್ಮ ಪ್ರೇಮ ನೌಕೆಗೇ ನೀನೇ ದಾರೀ ದೀವಿಗೇ
ಗಂಡು : ಪ್ರೀತೀ .. ನೀಡಲೆಂದೇ
ಹೆಣ್ಣು : ನನಗೆಂದೇನೇ ನೀ ಹುಟ್ಟಿ ಬಂದೇ ..
ಗಂಡು : ನೀ ತಂದ ಈ ಬಂಧ ಜೀವಭಾವದ ಆನಂದ
ನಾವೆಂದೋ ಒಂದಾದ ಜನುಮ ಜನುಮದ ಸ್ನೇಹ ಬಂಧ
ಹೆಣ್ಣು : ಸಂಗಾತಿ ಸಂಬಂಧ ಪ್ರೀತಿ ಹೃದಯದ ಅನುಬಂಧ
ಎಂದೆಂದೂ ರಂಗಾದ ಪ್ರೇಮ ಪಯಣದ ಆತ್ಮ ಬಂಧ
ಗಂಡು : ಲಲಲಾ (ಲಲಲಾ )
ಇಬ್ಬರು : ಲಾಲಲಲ ಲಲಲಲಲಾ
ಹೆಣ್ಣು : ಲಲಲಾ (ಲಲಲಾ )
ಇಬ್ಬರು : ಲಾಲಲಲ ಲಲಲಲಲಾ
------------------------------------------------------------------------------------------------------------
ಶ್ವೇತ ಗುಲಾಬಿ (೧೯೮೫) - ಸೂರ್ಯ ಹಗಲೆಲ್ಲ ಉರಿದರೂ
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಪಿ.ಸುಶೀಲಾ
ಸೂರ್ಯ ಹಗಲೆಲ್ಲ ಉರಿದರೂ ಚಂದ್ರ ಇರುಳೆಲ್ಲಾ ಹೊಳೆದರೂ
ಭೂಮಿ ತಾಯಿಗೇ ... ತಂಪೆಲ್ಲ ರಂಗೂ ..ಹೂವೂ ಮಳೆ ಬೆಂಕಿಯಾಗಿ ಈ ಬಾಳು ಕಂಡಿದೇ ...
ಹೂವೂ ಮಳೆ ಬೆಂಕಿಯಾಗಿ ಈ ಬಾಳು ಕಂಡಿದೇ ...
ನಲಿವ ಚೆಲುವಿನ ಸೊಗಸು ಹೂವಿನ ಕನಸೇ ಮುಳ್ಳಾಗಿದೇ ..
ನಗುವ ಹೂವಿಗೇ ಬರುವ ದುಂಬಿಯಾ ಬದುಕೇ ಮುಳ್ಳಾಗಿದೇ .....
ಒಲಿದ ಭೃಂಗದಾ ಸುಖದ ಸಂಗದಾ ಹೃದಯ ಗಾನಾಗಿ ತೂಕಾಗಿದೇ....
ಹೃದಯ ಗಾನಾಗಿ ತೂಕಾಗಿದೇ....
ಸೂರ್ಯ ಹಗಲೆಲ್ಲ ಉರಿದರೂ ಚಂದ್ರ ಇರುಳೆಲ್ಲಾ ಹೊಳೆದರೂ
ಭೂಮಿ ತಾಯಿಗೇ ... ತಂಪೆಲ್ಲ ರಂಗೂ ..ಹೂವೂ ಮಳೆ ಬೆಂಕಿಯಾಗಿ ಈ ಗಾಯ ಬೆಂದಿದೆ ...
ಪ್ರೀತಿಯ ಕಿರಣದಿ ಕಂಗನ ಸೇರಲೂ ಕಡಲು ಹಿಮ್ಮೆಟಿದೇ...
ಒಲುಮೆಯ ಜಲಪಾತ ದಂಡೆಯೂ ತಾನಾಗೀ ಪುಷ್ಪವೇ ತಾ ಹಾಡಿದೇ...
ಕರುಳ ಕಂದನಾ ಒಲಿದ ನಂದನಾ ಬದುಕೇ ಕ್ಷಾಮವೂ ತಾ ಹೇಳಿದೇ ...
ಬದುಕೇ ಕ್ಷಾಮವೂ ತಾ ಬೇಡಿದೇ ...
ಸೂರ್ಯ ಹಗಲೆಲ್ಲ ಉರಿದರೂ ಚಂದ್ರ ಇರುಳೆಲ್ಲಾ ಹೊಳೆದರೂ
ಭೂಮಿ ತಾಯಿಗೇ ... ತಂಪೆಲ್ಲ ನೋವೂ ..ಹೂವೂ ಮಳೆ ಬೆಂಕಿಯಾಗಿ ಈ ಬಾಳು ನೊಂದಿದೇ...
ಹೂವೂ ಮಳೆ ಬೆಂಕಿಯಾಗಿ ಈ ಬಾಳು ನೊಂದಿದೇ...
------------------------------------------------------------------------------------------------------------
ಶ್ವೇತ ಗುಲಾಬಿ (೧೯೮೫) - ಪ್ರೀತಿ ಮಮ್ಮಿ
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಜಾನಕೀ
ಪ್ರೀತಿ ಮಮ್ಮಿ ಇಲ್ಲಿ ನೋಡು ಪ್ರೀತಿ ಮಮ್ಮಿ ನಗುತಾ ಹಾಡು
ನಾ ನಾ ನಾ ಮುದ್ದು ಪಾಪ ಬೇಡ ಈ ಕೋಪ ತಾಪ
ಕೂಗಿ ಕರೆ ನಗಾಡಿ ಜಗಳದಲಿ
ಎಲ್ಲಾ ನೀ ಮರೆತು ನಮ್ಮ ಜೊತೆ ನೀನು ಕೂಡಿ ಆಡೂ
ಪ್ರೀತಿ ಮಮ್ಮಿ ಇಲ್ಲಿ ನೋಡು ಪ್ರೀತಿ ಮಮ್ಮಿ ನಗುತಾ ಹಾಡು
ನಾ ನಾ ನಾ ಮುದ್ದು ಪಾಪ ಬೇಡ ಈ ಕೋಪ ತಾಪ
ಕೂಗಿ ಕರೆ ನಗಾಡಿ ಜಗಳದಲಿ
ಎಲ್ಲಾ ನೀ ಮರೆತು ನಮ್ಮ ಜೊತೆ ನೀನು ಕೂಡಿ ಆಡೂ
ಸುಸ್ತಾಗಿ ಬಂದಂತ ಹೊತ್ತಿನಲಿ ರಾದ್ಧಾಂತ ಕಂಡೇನೂ ಮನೆಯಲ್ಲಿ
ಸುಸ್ತಾಗಿ ಬಂದಂತ ಹೊತ್ತಿನಲಿ ರಾದ್ಧಾಂತ ಕಂಡೇನೂ ಮನೆಯಲ್ಲಿ
ರೊಚ್ಚೆದ್ದೂ ಹುಚ್ಚಾಗಿ ಹೊಡೆದೇ ಬೆತ್ತಲ್ಲೀ...
ತಪ್ಪಾಯ್ತು ನನ್ನ ಚಿನ್ನ ನನಗೇಲ್ಲಾ ನೀನಮ್ಮಾ
ತಪ್ಪಾಯ್ತು ನನ್ನ ಚಿನ್ನ ನನಗೇಲ್ಲಾ ನೀನಮ್ಮಾ
ಇನ್ನೆಂದೂ ನಾನು ಹೊಡೆಯಲ್ಲ ಕಾದಾಗೀ .. ಓ ಓಹೋ ಕಮಾನ್ ಟೇಕ್ ಈಜಿ
ಪ್ರೀತಿ ಮಮ್ಮಿ ಇಲ್ಲಿ ನೋಡು ಪ್ರೀತಿ ಮಮ್ಮಿ ನಗುತಾ ಹಾಡು
ನಾ ನಾ ನಾ ಮುದ್ದು ಪಾಪ ಬೇಡ ಈ ಕೋಪ ತಾಪ
ಕೂಗಿ ಕರೆ ನಗಾಡಿ ಜಗಳದಲಿ
ಎಲ್ಲಾ ನೀ ಮರೆತು ನಮ್ಮ ಜೊತೆ ನೀನು ಕೂಡಿ ಆಡೂ
ಪಾತಿಯಾಗಿರು ಹೂದೋಟ ಪಕೋಡ ಮಾಡೋಕೆ ಇಷ್ಟೊತ್ತಾ
ಪಾತಿಯಾಗಿರು ಹೂದೋಟ ಪಕೋಡ ಮಾಡೋಕೆ ಇಷ್ಟೊತ್ತಾ
ಇಪ್ಪತ್ತೂ ರೂಪಾಯಿ ಕೊಡೋಕೇ ಬೇಕೂಫ..
ಇದಕೆಲ್ಲ ಕರಗುತ್ತ ಮುಸ್ಸಂಜೆ ಆಗುತ್ತಾ...
ಇದಕೆಲ್ಲ ಕರಗುತ್ತ ಮುಸ್ಸಂಜೆ ಆಗುತ್ತಾ...
ಹುಚ್ಚಿಂದ ಬಾಳು ನಲಿಸಿ ನೀ ಮಮ್ಮಿ .. ಓ.. ಕಮಾನ್ ಮಮ್ಮಿ
ಪ್ರೀತಿ ಮಮ್ಮಿ ಇಲ್ಲಿ ನೋಡು ಪ್ರೀತಿ ಮಮ್ಮಿ ಅಹ್ಹಹ್ಹಹ್ಹಾ ನಗುತಾ ಹಾಡು
ನಾ ನಾ ನಾ ಮುದ್ದು ಪಾಪ ಬೇಡ ಈ ಕೋಪ ತಾಪ
ಕೂಗಿ ಕರೆ ನಗಾಡಿ ಜಗಳದಲಿ
ಎಲ್ಲಾ ನೀ ಮರೆತು ನಮ್ಮ ಜೊತೆ ನೀನು ಕೂಡಿ ಆಡೂ
------------------------------------------------------------------------------------------------------------
ಶ್ವೇತ ಗುಲಾಬಿ (೧೯೮೫) - ದುಡ್ಡಿದವನೆಂದೂ
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಅಹ್ಹಹ್ಹಹ್ಹಹಾ
ಹ್ಹಾ.... ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ.. ಹ್ಹ್
ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ..
ಹೆಜ್ಜೇ ಹೆಜ್ಜೆಗೇ ಸ್ವರ್ಗವ ಕಂಡು ಭೋಗ ಭಾಗ್ಯ ಎಲ್ಲಾ ಉಂಡೂ ... ಹ್ಹ್
ಹೆಜ್ಜೇ ಹೆಜ್ಜೆಗೇ ಸ್ವರ್ಗವ ಕಂಡು ಭೋಗ ಭಾಗ್ಯ ಎಲ್ಲಾ ಉಂಡೂ
ಆನಂದ ಲೋಕದಲ್ಲಿ ಮೂರೂ ರೀತಿ ಮೋಜಿನಲ್ಲಿ ದಿನ ದಿನ ಕ್ಷಣ ಕ್ಷಣ ಮೆರೆದಾಡುವಾ..
ಕೋರಸ್ : ದುಡ್ಡೂ... ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...
ಗಂಡು : ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ.. ಹ್ಹ್
ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ..
ಗಂಡು : ಮುತ್ತು ಹವಳ ಕಂಡಾ ಸಾವುಕಾರ ಶ್ರೀಪತಿ (ವ್ವವ್ವವ್ವಾ )
ಹ್ಹಾ.. ಲಕ್ಷ್ಮೀ ಒಲಿದು ಬಂದ ಬಹದ್ದೂರ ಭೂಪತಿ.. (ಕಿಲಾಕಿಲಾ )
ಹ್ಹಹ್ಹಾ.. ಮುತ್ತು ಹವಳ ಕಂಡಾ ಸಾವುಕಾರ ಶ್ರೀಪತಿ
ಲಕ್ಷ್ಮೀ ಒಲಿದು ಬಂದ ಬಹದ್ದೂರ ಭೂಪತಿ..
ಹೆಣ್ಣು : ವೈಡೂರ್ಯ ಮಾಣಿಕ್ಯ ಪಡೆದ ನಾ ಯಜಮಾನೀ ಶ್ರೀಮತಿ (ಬ್ಯೂಟೀ)
ಕಣ್ತುಂಬಾ ಬಂಗಾರ ಮೆರೆಗು ನನ್ನಗಿಲ್ಲ ಸರಿಸಾಟಿ
ಗಂಡು : ಹೋಯ್ ಹೇ.. ಸಾವಿರ ಸಾವಿರ ಆಸೆ ಈಡೇರಿಸೋ..
ಕೋರಸ್ : ದುಡ್ಡೂ... ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...
ಎಲ್ಲರು : ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ.. ಹ್ಹ್
ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ..
ಗಂಡು : ಹೆಜ್ಜೇ ಹೆಜ್ಜೆಗೇ ಸ್ವರ್ಗವ ಕಂಡು ಭೋಗ ಭಾಗ್ಯ ಎಲ್ಲಾ ಉಂಡೂ ... ಪ ಪ ಪ ಪ ಪ ಪ
ಹೆಣ್ಣು : ಹೆಜ್ಜೇ ಹೆಜ್ಜೆಗೇ ಸ್ವರ್ಗವ ಕಂಡು ಭೋಗ ಭಾಗ್ಯ ಎಲ್ಲಾ ಉಂಡೂ
ಗಂಡು : ಆನಂದ ಲೋಕದಲ್ಲಿ ಮೂರೂ ರೀತಿ ಮೋಜಿನಲ್ಲಿ ದಿನ ದಿನ ಕ್ಷಣ ಕ್ಷಣ ಮೆರೆದಾಡುವಾ..
ಕೋರಸ್ : ದುಡ್ಡೂ... ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...
ಎಲ್ಲರು : ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ.. ಅಹ್ಹಹಹ್ಹ್
ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ..
ಗಂಡು : ಬಡ್ಡಿ ಚಕ್ರಬಡ್ಡಿ ಇಲ್ಲದೇನೇ ಸಾಲ ಕೊಡುವೇ .. (ಹ್ಹಾಂ.. ನಿಜವಾಗಲೂ)
ಹ್ಹಾ.. ಅಂಗಡಿ ಬಕ್ರ ರಂಗಾ ನಿನ್ನನ್ನೇ ನಾನು ಕೋಳ್ಳುವೇ... ಹೇಯ್ .. (ಬೇಡ ಬೇಡ )
ಅಹ್ಹಹ್ಹಹ.. ಬಡ್ಡಿ ಚಕ್ರಬಡ್ಡಿ ಇಲ್ಲದೇನೇ ಸಾಲ ಕೊಡುವೇ ಅಂಗಡಿ ಬಕ್ರ ರಂಗಾ ನಿನ್ನನ್ನೇ ನಾನು ಕೋಳ್ಳುವೇ
ಹೆಣ್ಣು : ದಲಿತರ ನೋವನು ಕಂಡು ನಾ ಸೇವೆಯ ಮಾಡುವೇ ..(ಫೆಂಟಾಸ್ಟಿಕ್)
ಕೈಯ್ಯ ಒಡ್ಡಿ ಬಂದೋರಿಗೆಲ್ಲಾ ನಾ ದಾನವ ನೀಡುವೇ
ಗಂಡು : ಹೋಯ್ ... ಬಾಳಿನ ಏಳಿಗೆ ಎಲ್ಲಕ್ಕೂ ಪೇಚಾಗುವಾ ...
ಕೋರಸ್ : ದುಡ್ಡೂ... ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...
ಎಲ್ಲರು : ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ.. ಹ್ಹ್ ಅಹ್ಹಹ್ಹ
ದುಡ್ಡಿದವನೆಂದೂ ಬಲು ದೊಡ್ಡವನೇ ಹೌದೂ..
ಹೆಣ್ಣು : ಹೆಜ್ಜೇ ಹೆಜ್ಜೆಗೇ ಸ್ವರ್ಗವ ಕಂಡು ಭೋಗ ಭಾಗ್ಯ ಎಲ್ಲಾ ಉಂಡೂ ...
ಗಂಡು : ಅರೇ .. ಹೆಜ್ಜೇ ಹೆಜ್ಜೆಗೇ ಸ್ವರ್ಗವ ಕಂಡು ಭೋಗ ಭಾಗ್ಯ ಎಲ್ಲಾ ಉಂಡೂ
ಕೋರಸ್ : ಆನಂದ ಲೋಕದಲ್ಲಿ ಮೂರೂ ರೀತಿ ಮೋಜಿನಲ್ಲಿ ದಿನ ದಿನ ಕ್ಷಣ ಕ್ಷಣ ಮೆರೆದಾಡುವಾ..
ದುಡ್ಡೂ... ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...ದುಡ್ಡೂ...
-------------------------------------------------------------------------------------------------------------
No comments:
Post a Comment