1604. ಅಕ್ಷಿ (೨೦೨೧)


ಅಕ್ಷಿ ಚಲನಚಿತ್ರದ ಹಾಡುಗಳು
  1. ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ 
  2. ಬಣ್ಣ ಬಣ್ಣ ಬಣ್ಣ ಭಾವನೆಯ ಬಣ್ಣ 
ಅಕ್ಷಿ (೨೦೨೧) - ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ 
ಸಂಗೀತ : ಸಾಹಿತ್ಯ : ಕಲಾದೇಗುಲ ಶ್ರೀನಿವಾಸ, ಗಾಯನ : ಮಾನಸ ಹೊಳ್ಳ 

ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ 
ಕತ್ತಲಾ ಜೀವಕೇ ಹೊಸದೊಂದು ನೋಟ 
ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ 
ಕತ್ತಲಾ ಜೀವಕೇ ಹೊಸದೊಂದು ನೋಟ 

ಕಣ್ಣಿದ್ದೂ ಕುರುಡಾಗದೇ ಕುರುಡರಿಗೇ ಕಣ್ಣಾಗಿರೀ....  
ಕ್ಷಣ ಕ್ಷಣಕೂ ಸಾಯುವವರ ಕಂಗಳ ಕೊಲ್ಲದೀರಿ 
ಆ.. ಅಂತರಂಗ ಬೆಳಕಿಗೇ ಬಣ್ಣ ನೀಡೋ ಕಣ್ಣಾಗೂ 
ನೀ ಸತ್ತರೂ ಬದುಕುವ ಕೆಲಸ ಮಾಡಿ ಮಣ್ಣಾಗೂ...     
ಆ.. ಅಂತರಂಗ ಬೆಳಕಿಗೇ ಬಣ್ಣ ನೀಡೋ ಕಣ್ಣಾಗೂ 
ನೀ ಸತ್ತರೂ ಬದುಕುವ ಕೆಲಸ ಮಾಡಿ ಮಣ್ಣಾಗೂ...     
ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ 
ಕತ್ತಲಾ ಜೀವಕೇ ಹೊಸದೊಂದು ನೋಟ 

ಜೀವವಿರದ ಆ ದೇಹಕೆ ಮುಕ್ತಿಯನ್ನೂ ನೀಡುವ ಬದಲು 
ಬದುಕಿರುವ ಬಾಳಿಗೆ ನೆರವಾಗುವ ಬೆಳಕ ನೀಡುವಾ ... 
ಜೀವವಿರದ ಆ ದೇಹಕೆ ಮುಕ್ತಿಯನ್ನೂ ನೀಡುವ ಬದಲು 
ಬದುಕಿರುವ ಬಾಳಿಗೆ ನೆರವಾಗುವ ಬೆಳಕ ನೀಡುವಾ ... 
ಆ ಕತ್ತಲೆಯಾ ಅಳಿಸಿ ಹಾಕಿ ಬೆಳಕ ತುಂಬುವಾ 
ಆ ಭಾವನೆಯ ಬಣ್ಣ ಕಣ್ಣಾಗಲೀ... 
ಆ ಕತ್ತಲೆಯ ಅಳಿಸಿ ಹಾಕಿ ಬೆಳಕ ತುಂಬುವಾ..   
ಆ ಭಾವನೆಯ ಬಣ್ಣ ಕಣ್ಣಾಗಲೀ... 
ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ 
ಕತ್ತಲಾ ಜೀವಕೇ ಹೊಸದೊಂದು ನೋಟ 

ಕಾಣದವರ ಜಗವ ನೋಡಲು...  ನಿನ್ನಾಕ್ಷಿ ಸಾಕ್ಷಿಯಾಗಲೀ ... 
ಮರುನೋಟದಿ ಮತ್ತೇ..... ಮರು ಹುಟ್ಟು ನೀ ಪಡೆಯುವೇ 
ಈ ಸಮಾಜದ ಕಣ್ಣಾಗುವ ಕಾಯಕವ ಮಾಡುತಾ .. 
ಇದನು ತಿಳಿದು ತಿಳಿಸುತ ಸಾಗು ಎಂದೆಂದೂ ನೀ ಮುಂದೇ ... 
ಈ ಸಮಾಜದ ಕಣ್ಣಾಗುವ ಕಾಯಕವ ಮಾಡುತಾ .. 
ಇದನು ತಿಳಿದು ತಿಳಿಸುತ ಸಾಗು ಎಂದೆಂದೂ ನೀ ಮುಂದೇ ... 
ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ 
ಕತ್ತಲಾ ಜೀವಕೇ ಹೊಸದೊಂದು ನೋಟ 
ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ 
ಕತ್ತಲಾ ಜೀವಕೇ ಹೊಸದೊಂದು ನೋಟ 
----------------------------------------------------------------------------------------------------

ಅಕ್ಷಿ (೨೦೨೧) - ಬಣ್ಣ ಬಣ್ಣ ಬಣ್ಣ ಭಾವನೆಯ ಬಣ್ಣ 
ಸಂಗೀತ : ಸಾಹಿತ್ಯ : ಕಲಾದೇಗುಲ ಶ್ರೀನಿವಾಸ, ಗಾಯನ : ಎಸ್.ಪಿ.ಬಾಲಸುಬ್ರಮಣ್ಯಮ್ 

ಗಂಡು : ಬಣ್ಣ ಬಣ್ಣ ಬಣ್ಣ ಭಾವನೆಯೇ ಬಣ್ಣ 
           ಬಣ್ಣ ಬಣ್ಣ ಬಣ್ಣ ಭಾವನೆಯೇ ಬಣ್ಣ 
          ಭಾವನೇಯಾ ಬಣ್ಣ ನಿನ್ನ ಒಳಗಣ್ಣು 
          ಭಾವನೇಯಾ ಬಣ್ಣ ನಿನ್ನ ಒಳಗಣ್ಣು 
          ಬಣ್ಣ ಬಣ್ಣ ಬಣ್ಣ ಭಾವನೆಯೇ ಬಣ್ಣ ಬಣ್ಣ ಬಣ್ಣ ಬಣ್ಣ 

ಗಂಡು : ತುತ್ತನಿಟ್ಟು ಜೋಗುಳ ಹಾಡಿ ಮುದ್ದು ಮಾಡುತ ಮಲಗಿಸಿ 
           ಮಕ್ಕಳಾ ಆ ನಗುವಲಿ ತನ್ನ ನೋವನು ಮರೆವ ತಾಯಿಯೇ ಬಿಳಿ ಬಣ್ಣ  
           ತುತ್ತನಿಟ್ಟು ಜೋಗುಳ ಹಾಡಿ ಮುದ್ದು ಮಾಡುತ ಮಲಗಿಸಿ 
           ಮಕ್ಕಳಾ ಆ ನಗುವಲಿ ತನ್ನ ನೋವನು ಮರೆವ ತಾಯಿಯೇ ಬಿಳಿ ಬಣ್ಣ  
ಕೋರಸ್ : ತನ್ನ ನೋವನು ಮರೆವ ತಾಯಿಯೇ ಬಿಳಿ ಬಣ್ಣ  
ಗಂಡು : ಬಣ್ಣ ಬಣ್ಣ ಬಣ್ಣ ಭಾವನೆಯೇ ಬಣ್ಣ ಬಣ್ಣ ಬಣ್ಣ ಬಣ್ಣ 

ಗಂಡು : ಹೆಗಲ ಮೇಲೆ ಹೊತ್ತು ಕುಣಿವ ಅಣ್ಣನಂತೆ 
            ನಿನ್ನ ಪಾದ ಸ್ಪರ್ಶಕ್ಕೇ ನಲಿದು ಉಸಿರ ಕೊಡುವ ಭೂಮಿಯೇ ಹಸಿರು ಬಣ್ಣ  
ಕೋರಸ್ : ಉಸಿರ ಕೊಡುವ ಭೂಮಿಯೇ ಹಸಿರು ಬಣ್ಣ  
ಗಂಡು : ನಿನ್ನ ಹಸಿವಿನ ತಳಮಳ ನೀಗಿಸಿ ಭರವಸೆಯನ್ನೂ ತುಂಬುತ 
            ಕಷ್ಟ ತಾ ನುಂಗಿ ಶಕ್ತಿಯ ನೀಡುವ ಎಲ್ಲರ ಅಪ್ಪನೇ ಹಳದಿ ಬಣ್ಣ   
ಕೋರಸ್ : ಶಕ್ತಿಯ ನೀಡುವ ಎಲ್ಲರ ಅಪ್ಪನೇ ಹಳದಿ ಬಣ್ಣ   
ಗಂಡು : ಇಂಪಾದ ನಿನ್ನ ಧ್ವನಿಗೇ ಸರಿಗಮವಾ ಸೇರಿಸಿ ನಿನ್ನ ಜ್ಞಾನ ದೀಪವ ಬೆಳಗಿಸಿ 
            ಶೌರ್ಯ ತುಂಬಿ ದಾರಿ ತೋರೋ ಗುರುವೇ ಕೇಸರಿ ಬಣ್ಣ  
ಕೋರಸ್ : ಶೌರ್ಯ ತುಂಬಿ ದಾರಿ ತೋರೋ ಗುರುವೇ ಕೇಸರಿ ಬಣ್ಣ  
ಗಂಡು : ಬಣ್ಣ ಬಣ್ಣ ಬಣ್ಣ ಭಾವನೆಯೇ ಬಣ್ಣ ಬಣ್ಣ ಬಣ್ಣ ಬಣ್ಣ 

ಮಗು : ತಾತಾ, ನಮ್ ಅಣ್ಣಂಗೂ ಬಣ್ಣ ಇದೇಯಾ .. 
ಗಂಡು : ಹ್ಹಾ... ಇದೇ ... ನಿಮ್ ಅಣ್ಣಂಗೂ ಇದೇ .. 
           ನಿನ್ನ ದಣಿವನು ನೀಗಿಸಿ ಮರೆಸೋ ಕಾವೇರಿಯಂತೇ 
           ಸದಾ ಮುದ್ದುಮಾಡುತ ನಿನ್ನಾಸೆಗೆ ಕಣ್ಣೇ ಆಗಿಹ ಅಣ್ಣನೇ ನೀಲಿ ಬಣ್ಣ   
ಕೋರಸ್ : ನನ್ನಾಸೆಗೆ ಕಣ್ಣೇ ಆಗಿಹ ಅಣ್ಣನೇ ನೀಲಿ ಬಣ್ಣ   
ಗಂಡು : ಚಂದದ ಅಂದದ ನೋಟದ ಹಣೆಯ ಸಿಂಗಾರವು 
            ನಿನ್ನ ಸುಂದರ ಬದುಕಲಿ ಬರುವ ಮುಳ್ಳುಗಳಂತ ಅಪಾಯವೇ ಕೆಂಪು ಬಣ್ಣ 
ಕೋರಸ್ : ಮುಳ್ಳುಗಳಂತ ಅಪಾಯವೇ ಕೆಂಪು ಬಣ್ಣ 
ಗಂಡು : ತಪ್ಪುಗಳನ್ನು ತಿಳಿಸಿ ಹೇಳುತಾ ಕತ್ತಲ ಜಗವನು ತೋರುತ 
           ಯಾರೂ ಇಲ್ಲವೆಂಬ ಆಂತಕದಿ ನಿನ್ನಾವರಿಸೋ ಭಯವೇ ಕಪ್ಪು ಬಣ್ಣ  
ಕೋರಸ್ : ಆತಂಕದಿ ನಿನ್ನಾವರಿಸೋ ಭಯವೇ ಕಪ್ಪು ಬಣ್ಣ  
ಗಂಡು : ಬಣ್ಣ ಬಣ್ಣ ಬಣ್ಣ ಭಾವನೆಯೇ ಬಣ್ಣ  ಬಣ್ಣ ಬಣ್ಣ ಬಣ್ಣ ಭಾವನೆಯೇ ಬಣ್ಣ 
          ಭಾವನೇಯಾ ಬಣ್ಣ ನಿನ್ನ ಒಳಗಣ್ಣು 
          ಭಾವನೇಯಾ ಬಣ್ಣ ನಿನ್ನ ಒಳಗಣ್ಣು 
ಎಲ್ಲರು : ಲ ಲ ಲ ಲಲಾ ಲಲಲಲಲಲ್ಲಲಲಾ ಲ ಲ ಲ ಲಲಾ ಲಲಲಲಲಲ್ಲಲಲಾ 
           ಲ ಲ ಲ ಲಲಾ ಲಲಲಲಲಲ್ಲಲಲಾ  ಹ್ಹಾ... ಲ ಲ ಲ ಲಲಾ ಲಲಲಲಲಲ್ಲಲಲಾ 
--------------------------------------------------------------------------------------------------

No comments:

Post a Comment