- ಲುಷ್ಕ ಲುಷ್ಕ ಮರುಷ್ಕ
- ಚಿನ್ನ ರನ್ನ ಮುತ್ತು ಹವಳ ಎಲ್ಲಿರುವೇ
- ಆಗಲೀ ಆಗಲೀ ನೋಡುವೆ
- ಬಾಳು ಬೆಳಗಿತು
- ತಿಳಿದೇ ತಿಳಿದೇ ನಿನ್ನ
ಗಗನ ಚುಕ್ಕಿ ಭರಚುಕ್ಕಿ (೧೯೭೧) - ಲುಷ್ಕ ಲುಷ್ಕ ಮರುಷ್ಕ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಲ್.ಆರ್.ಈಶ್ವರಿ, ವಿಜಯ ಭಾಸ್ಕರ
ಗಂಡು : ಲುಷ್ಕ ಲುಷ್ಕ ಮರುಷ್ಕ
ಹೆಣ್ಣು : ಆಹ್ ಆಹ್ ಆಹ್ ಆಹ್ ಹುಷಾರೂ ಆಹ್ ಆಹ್ ಆಹ್ ಆಹ್ ಹುಷಾರೂ
ನಾನೂ .. ನೀನೂ .. ಸೇರಿದ ಮೇಲಿನ್ನೇನೂ... ಅವಳೋ... ಇವನೋ.. ಏನೇ ಹೇಳುವನೋ
ಹೆಣ್ಣು : ನನ್ನಲ್ಲೋ ನುಡಿಯನಲೇ ಗುಟ್ಟಾಗಿಡಲೂ ನೋಡುವೇಯಾ
ಒಲಿದರೂ ನಾ ಹೇಳದಲೇ ವಿಷಯವ ನೀ ಮರೆಮಾಚುವೇಯಾ
ನನ್ನಲ್ಲೋ ನುಡಿಯನಲೇ ಗುಟ್ಟಾಗಿಡಲೂ ನೋಡುವೇಯಾ
ಒಲಿದರೂ ನಾ ಹೇಳದಲೇ ವಿಷಯವ ನೀ ಮರೆಮಾಚುವೇಯಾ
ಸನಿಹದಲೇ.. ಹೊಯ್ಯ್ ನಾನಿರುವೇ .. ಹೊಯ್ಯ್ ಕೇಳದಲೇ ಹೊಯ್ಯ್ ನಾ ಕೊಡುವೇ
ಗಂಡು : ಲುಷ್ಕ ಲುಷ್ಕ ಮರುಷ್ಕ
ಹೆಣ್ಣು : ಆಹ್ ಆಹ್ ಆಹ್ ಆಹ್ ಹುಷಾರೂ ಆಹ್ ಆಹ್ ಆಹ್ ಆಹ್ ಹುಷಾರೂ
ನಾನೂ .. ನೀನೂ .. ಸೇರಿದ ಮೇಲಿನ್ನೇನೂ... ಅವನೋ... ಇವನೋ.. ಹೇಳೇ ಹೇಳುವನೂ
ಹೆಣ್ಣು : ಕಣ್ಣಲ್ಲೇ ಕುಣಿಸುವೇನೋ ಕೇಳುವೇನೊಂದ ಹೇಳುವೇಯಾ..
ಮಧುವನ್ನೇ ಕುಡಿಸುವೇನೋ ನಿಜವನು ಕುಡಿಯಲಿ ನುಡಿಯುವೇಯಾ
ಕಣ್ಣಲ್ಲೇ ಕುಣಿಸುವೇನೋ ಕೇಳುವೇನೊಂದ ಹೇಳುವೇಯಾ..
ಮಧುವನ್ನೇ ಕುಡಿಸುವೇನೋ ನಿಜವನು ಕುಡಿಯಲಿ ನುಡಿಯುವೇಯಾ
ತೀರಿಸುವೇ ಹೋಯ್ಯ್ ಆಸೆಯನೇ ಹೋಯ್ಯ್ ತೋರಿಸುವೇ ಹೋಯ್ಯ್ ಸ್ವರ್ಗವನೇ...
ಗಂಡು : ಲುಷ್ಕ ಲುಷ್ಕ ಮರುಷ್ಕ
ಹೆಣ್ಣು : ಆಹ್ ಆಹ್ ಆಹ್ ಆಹ್ ಹುಷಾರೂ ಆಹ್ ಆಹ್ ಆಹ್ ಆಹ್ ಹುಷಾರೂ
ನಾನೂ .. ನೀನೂ .. ಸೇರಿದ ಮೇಲಿನ್ನೇನೂ... ಅವನೋ... ಇವನೋ.. ಹೇಳೇ ಹೇಳುವನೂ
---------------------------------------------------------------------------------------------------------
ಗಗನ ಚುಕ್ಕಿ ಭರಚುಕ್ಕಿ (೧೯೭೧) - ಚಿನ್ನ ರನ್ನ ಮುತ್ತು ಹವಳ ಎಲ್ಲಿರುವೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ
ಗಂಡು : ಚಿನ್ನಾ... ರನ್ನಾ...
ಚಿನ್ನ ರನ್ನ ಮುತ್ತು ಹವಳ ಎಲ್ಲಿರುವೇ ಎಲ್ಲಿರುವೇ ಕಮಲಾ... ವಿಮಲಾ...
ಕಮಲಾ ವಿಮಲಾ ಗಿರಿಜಾ ಜಲಜಾ ನಿನಗಾಗೇ ಬಂದಿರುವೇ
ಕಾಮಿನಿಯೋ ಮಂದಾಕಿನಿಯೋ ರಾಗಿಣಿಯೋ ಮನ ಮೋಹಿನಿಯೋ
ಕಾಮಿನಿಯೋ ಮಂದಾಕಿನಿಯೋ ರಾಗಿಣಿಯೋ ಮನ ಮೋಹಿನಿಯೋ ಗಂಗಾ... ಜಮುನಾ..
ಗಂಡು : ಅರಳು ಹುರಿದಂತೇ ಮಾತನಾಡಿ ಮೋಡಿಯ ಮಾಡಿದಳು
ಕೊರಳು ಕೊಂಪಿಸೀ ನೋಟದಾ ಹೂಬಾಣ ಭೀರಿದಳು
ಅರಳು ಹುರಿದಂತೇ ಮಾತನಾಡಿ ಮೋಡಿಯ ಮಾಡಿದಳು
ಕೊರಳು ಕೊಂಪಿಸೀ ನೋಟದಾ ಹೂಬಾಣ ಭೀರಿದಳು
ಮನಸನು ಕೆಡಿಸಿ ಆಸೆಯ ಬರಿಸಿ ಮನತನು ಕೆಡಿಸಿ ಆಸೆಯ ಬರಿಸಿ
ಕೆರಳಿಸಿ ನನ್ನ ಇಂದೆಲ್ಲೋ ಮರೆಯಾದಳು
ಚಿನ್ನ ರನ್ನ ಮುತ್ತು ಹವಳ ಎಲ್ಲಿರುವೇ ಎಲ್ಲಿರುವೇ
ಕಮಲಾ ವಿಮಲಾ ಗಿರಿಜಾ ಜಲಜಾ ನಿನಗಾಗೇ ಬಂದಿರುವೇ
ಗಂಡು : ಚೆಲುವೇ ನನ್ನವಳೇ ಊರನೇಲ್ಲಾ ಹುಡುಕಾಡುತಲಿರುವೇ
ಮರೆತು ನಿನ್ನವನ ನೀರಿನಲ್ಲಿ ಈಜಾಡುತಲಿರುವೇ..
ಚೆಲುವೇ ನನ್ನವಳೇ ಊರನೇಲ್ಲಾ ಹುಡುಕಾಡುತಲಿರುವೇ
ಮರೆತು ನಿನ್ನವನ ನೀರಿನಲ್ಲಿ ಈಜಾಡುತಲಿರುವೇ..
ದುಂಬಿಯೂ ನಾನೂ ತಾವರೆ ನೀನೂ
ದುಂಬಿಯೂ ನಾನೂ ತಾವರೆ ನೀನೂ ಚೆಂದುಟಿ ಜೇನ ಹೀರೋಣ ಬಾ ಚಿನ್ನ
ಚಿನ್ನ ರನ್ನ ಮುತ್ತು ಹವಳ ಎಲ್ಲಿರುವೇ ಎಲ್ಲಿರುವೇ
ಕಮಲಾ ವಿಮಲಾ ಗಿರಿಜಾ ಜಲಜಾ ನಿನಗಾಗೇ ಬಂದಿರುವೇ
ಕಾಮಿನಿಯೋ ಮಂದಾಕಿನಿಯೋ ಷಾಕಿಣಿಯೋ ಢಾಕಿಣಿಯೋ
ಚಿನ್ನ ರನ್ನ ಮುತ್ತು ಹವಳ ಎಲ್ಲಿರುವೇ ಎಲ್ಲಿರುವೇ
ಕಮಲಾ ವಿಮಲಾ ಗಿರಿಜಾ ಜಲಜಾ ನಿನಗಾಗೇ ಬಂದಿರುವೇ
--------------------------------------------------------------------------------------------------------
ಗಗನ ಚುಕ್ಕಿ ಭರಚುಕ್ಕಿ (೧೯೭೧) - ಆಗಲೀ ಆಗಲೀ ನೋಡುವೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ
ಆಗಲೀ ಆಗಲೀ ನೋಡುವೇ.... ಇನ್ನೂ ಬರಲೀ ತಾಳುವೇ
ಆಗಲೀ ಆಗಲೀ ನೋಡುವೇ.... ಇನ್ನೂ ಬರಲೀ ತಾಳುವೇ
ಎನ್ನುತ ಧೈರ್ಯದಿ ನಡೆದಾಗ ನೀ ನೆಮ್ಮದಿಯಾಗಿ ಬಾಳುವೇ ...
ಆಗಲೀ ಆಗಲೀ ನೋಡುವೇ.... ಇನ್ನೂ ಬರಲೀ ತಾಳುವೇ
ಪ್ರೇಮದಿ ನಿನ್ನ ಸಲಹಿದನು ಬಾಳುವ ರೀತಿಯ ಕಲಿಸಿದನು
ಪ್ರೇಮದಿ ನಿನ್ನ ಸಲಹಿದನು ಬಾಳುವ ರೀತಿಯ ಕಲಿಸಿದನು
ತಾಯಿಯ ಮಮತೆ ತಂದೆಯ ಘನತೆ ತೋರುತ ನಿನ್ನ ಬೆಳೆಸಿದನು
ಆಗಲೀ ಆಗಲೀ ನೋಡುವೇ.... ಇನ್ನೂ ಬರಲೀ ತಾಳುವೇ
ಸುಮ್ಮನೇ ಏತಕೆ ಅಳುತಿರುವೆ ದುಗಡದಿ ಏನನೂ ಸಾಧಿಸುವೇ
ಕಂಬನಿ ತೊಳೆವ ನಗುತಲಿ ನಡೆವ ಜನತೆಯ ಸೇವೆಗೆ ಮುನ್ನಡೆವಾ...
ಆಗಲೀ ಆಗಲೀ ನೋಡುವೇ.... ಇನ್ನೂ ಬರಲೀ ತಾಳುವೇ
ತಂದೆಯ ಮಾತಿನ ಬೆಳಕಲ್ಲಿ ಆತನು ತೋರಿದ ದಾರಿಯಲೀ
ತಂದೆಯ ಮಾತಿನ ಬೆಳಕಲ್ಲಿ ಆತನು ತೋರಿದ ದಾರಿಯಲೀ
ನಡೆಯುತ ಹೋಗಿ ಗುರಿಯನು ಸೇರಿ ನ್ಯಾಯವ ನಿಲ್ಲಿಸೂ ನಾಡಲ್ಲಿ...
ಆಗಲೀ ಆಗಲೀ ನೋಡುವೇ.... ಇನ್ನೂ ಬರಲೀ ತಾಳುವೇ
ಎನ್ನುತ ಧೈರ್ಯದಿ ನಡೆದಾಗ ನೀ ನೆಮ್ಮದಿಯಾಗಿ ಬಾಳುವೇ ...
---------------------------------------------------------------------------------------------------------
ಗಗನ ಚುಕ್ಕಿ ಭರಚುಕ್ಕಿ (೧೯೭೧) - ಬಾಳು ಬೆಳಗಿತು
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ಕೋರಸ್
ಕೋರಸ್ : ಆ ಆ ಆ ಆ ಅ... ಆ ಆ ಆ ಆ ಅ... ಆ ಆ ಆ ಆ ಅ...
ಗಂಡು : ರೂರೂರೂ... ರೂರೂರೂ...
ಕೋರಸ್ : ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ
ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ
ಗಂಡು : ಬಾಳು ಬೆಳಗಿತು ನ್ಯಾಯ ಉಳಿಯಿತು
ಬಾಳು ಬೆಳಗಿತು ನ್ಯಾಯ ಉಳಿಯಿತು
ದ್ರೋಹದ ಕಥೆಯು ಮುಗಿಯುವ ಕಾಲ ಬಂದೇ ಬಂದಿತು... ಬಂದೇ ಬಂದಿತು
ಕೋರಸ್ : ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ
ಗಂಡು : ಎಲ್ಲೋ ಹೋಗುವಾ.. ಎಂದೋ ಕಾಣುವಾ..
ಎಲ್ಲೋ ಹೋಗುವ ಎಂದೋ ಕಾಣುವ ದುರುಳರ ಮುಗಿಸಿ ನೀತಿಯ ಉಳಿಸಿ
ಜನರ ಸಲಹುವಾ... ಜನರ ಸಲಹುವಾ
ಕೋರಸ್ : ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ
ಗಂಡು : ಏನೂ ಕೇಳನು... ಏನೂ ಹೇಳನು..
ಏನೂ ಕೇಳನು ಏನೂ ಹೇಳನು ಧರ್ಮದ ಹಾದೀಲಿ ಸತ್ಯದ ಬೆಳಕಲೀ ಎಂದೂ ನಡೆವನೂ
ಎಂದೂ ನಡೆವನೂ
ಕೋರಸ್ : ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ
ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ
ಗಂಡು : ಬಾಳು ಬೆಳಗಿತು ನ್ಯಾಯ ಉಳಿಯಿತು
ಬಾಳು ಬೆಳಗಿತು ನ್ಯಾಯ ಉಳಿಯಿತು
ದ್ರೋಹದ ಕಥೆಯು ಮುಗಿಯುವ ಕಾಲ ಬಂದೇ ಬಂದಿತು... ಬಂದೇ ಬಂದಿತು
ಕೋರಸ್ : ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ
ಗಗನ ಚುಕ್ಕಿ ಭರಚುಕ್ಕಿ ಗಗನ ಚುಕ್ಕಿ ಭರಚುಕ್ಕಿ
--------------------------------------------------------------------------------------------------------
ಗಗನ ಚುಕ್ಕಿ ಭರಚುಕ್ಕಿ (೧೯೭೧) - ತಿಳಿದೇ ನಿನ್ನ ನಾ ತಿಳಿದೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ,
ಗಂಡು : ತಿಳಿದೇ ಹೆಣ್ಣು : ಹೂಂಹೂಂ ನಿನ್ನ ನಾ ತಿಳಿದೇ
ಗಂಡು : ಯಾರೆಂದೂ ನೀ ಯಾರೆಂದೂ
ಅರಿತೇ... ಹೆಣ್ಣು : ಹೂಂಹೂಂ ನಿನ್ನ ನಾ ಅರಿತೇ
ಗಂಡು : ಏನೆಂದೂ ನೀ ಏನೆಂದೂ
ಹೆಣ್ಣು : ತಿಳಿದೇ ತಿಳಿದೇ ಯಾರೆಂದೂ ನೀ ಯಾರೆಂದೂ
ಅರಿತೇ ಅರಿತೇ ಏನೆಂದೂ ನೀ ಏನೆಂದೂ
ಗಂಡು : ಹೇಹೇ ಹೇಹೇ ಆಹಾ ಆಹಾಹಾ ಹೆಣ್ಣು : ಆಹಾ ಆಹಾ ಆಹಾಹಾಹಾ
ಗಂಡು : ಸಂಜೆಯ ಹೆಣ್ಣು ರಂಗಿನ ಆಟ ಕಲಿತಳು ನಿನ್ನಿಂದ..
ಸಂಜೆಯ ಹೆಣ್ಣು ರಂಗಿನ ಆಟ ಕಲಿತಳು ನಿನ್ನಿಂದ..
ಮಿಂಚಿನ ಬೆಡಗಿ ಮೇಘದಿ ಓಟ ಅರಿತಳು ನಿನ್ನಿಂದ ...
ಹೆಣ್ಣು : ಬೆರಗಾಗಲು ಆ ಸೂರ್ಯನು ನಿನ್ನ ಕಂಗಳ ಬೆಳಕಿಂದ...
ಕಲ್ಪನೆಯಲ್ಲೂ ಕಾಣೇನೇ ನಾನೂ ಇಂಥ ಈ ಅಂದ
ಗಂಡು : ಏನೇ ಹೇಳೂ ಏನೇ ಮಾಡು ನೀನೇ ನನ್ನವಳೂ ..
ಹೆಣ್ಣು : ತಿಳಿದೇ ತಿಳಿದೇ ಯಾರೆಂದೂ ನೀ ಯಾರೆಂದೂ
ಗಂಡು : ಅರಿತೇ ಅರಿತೇ ಏನೆಂದೂ ನೀ ಏನೆಂದೂ
ಹೆಣ್ಣು : ಆಹಾ ಆಹಾ ಆಹಾಹಾಹಾ ಗಂಡು : ಹೇಹೇ ಹೇಹೇ ಆಹಾ ಆಹಾಹಾ
ಹೆಣ್ಣು : ಸಿಂಹವು ನಿನ್ನ ಪೌರುಷ ಕಂಡು ನಾಚುತ ಓಡುವುದೂ
ಸಿಂಹವು ನಿನ್ನ ಪೌರುಷ ಕಂಡು ನಾಚುತ ಓಡುವುದೂ
ಸಿಡಿಲಿನ ಸಾಲೇ ನೋಡಲೂ ನಿನ್ನ ಅತೀ ಮೈಗಾಗುವುದೂ
ಗಂಡು : ಮಾತಿನಲೇನೂ ಸಾಹಸದಲ್ಲೂ ನೀನೇ ಗೆದ್ದಿರುವೇ ..
ನಾಚಿಕೆಯೇನೂ ನಿಜ ಹೇಳುವೇನು ನಾನೇ ಸೋತಿದ್ದೇ
ಹೆಣ್ಣು : ಸೋಲೋ ಗೆಲುವೋ ಅಂತೂ ಇಂತೂ ನೀನೇ ನನ್ನವನೂ ..
ಇಬ್ಬರು : ತಿಳಿದೇ ತಿಳಿದೇ ಯಾರೆಂದೂ ನೀ ಯಾರೆಂದೂ
ಅರಿತೇ ಅರಿತೇ ಏನೆಂದೂ ನೀ ಏನೆಂದೂ
-------------------------------------------------------------------------------------------------------
No comments:
Post a Comment