1627. ಮುಗಿಲ್ ಪೇಟೆ (೨೦೨೧)

ಮುಗಿಲ್ ಪೇಟೆ ಚಲನಚಿತ್ರದ ಹಾಡುಗಳು 
  1. ತಾರೀಫೂ ಮಾಡಲು ತಾರೀಖು ಮೂಡಿದೆ
  2. ದೂರ ಹೋಗೋ ಮುನ್ನ ದೂರಲಾರೇ ನಿನ್ನ 
  3.  ಜೀನ್ಸನಲ್ಲಿ ಮಾಸಗ್ವಳೇ ಚೂಡೀಲೀ ಖಾಸಗ್ವಳೇ  
ಮುಗಿಲ್ ಪೇಟೆ (೨೦೨೧) - ತಾರೀಫೂ ಮಾಡಲು ತಾರೀಖು ಮೂಡಿದೆ
ಸಂಗೀತ : ಶ್ರೀಧರ ಸಂಭ್ರಮ, ಸಾಹಿತ್ಯ : ಭರತ, ಶ್ರೀಧರ, ಗಾಯನ : ನಕುಲ ಅಭಯಂಕರ, ಶ್ವೇತಾ ದೇವನಹಳ್ಳಿ   

ತಾರೀಫೂ ಮಾಡಲು ತಾರೀಖು ಮೂಡಿದೆ
ನನ್ನೋಳು ನೀನು ನಂಗಾಗೆ ನೀನು
ಇದು ಒಂದೇ ನನ್ನ ಆಲಾಪನೆ

ಮುಗಿಲಿನಾ ಪುಟದಲ್ಲಿಯೇ ಬರೆದಾಗಿದೆ ನಿನ್ ಹೆಸರನು ನನ್ನೊಂದಿಗೆ
ಸಾವಿರ ಜನುಮಕೂ ನನ್ನನೇ ಪ್ರೀತಿಸು ಎಂಬುದೇ ಪ್ರಾರ್ಥನೆ
ತಾರೀಫೂ ಮಾಡಲು ತಾರೀಖು ಮೂಡಿದೆ
ನನ್ನೋನು ನೀನು ನಂಗಾಗಿ ನೀನು
ಇದು ಒಂದೇ ನನ್ನ ಆಲಾಪನೆ

ರಾಗಾ ರಾಗ ಹರಿಯೋವಾಗ ಎದೆಯ ಬಡಿತ ವೇಗ
ನೀನು ನಾನು ಸೇರೋ ಜಾಗ ನೆನಪು ನೆನಪು ಆಗ
ಕಾಣದೆ ಓಡಿದೆ ಭಾವವು ಜೋರಿದೆ
ಕಲ್ಪನೆಮಿತಿ ಮೀರಿದೆ ಇದೇನಾಗಿದೆ
ಸ ರೆ ಸ ರೆ ಸ ರೆ ಗಾ ಸ ರೆ ಸ ರೆಆ
ತಾರೀಫೂ ಮಾಡಲು ತಾರೀಕು ಮೂಡಿದೆ
--------------------------------------------------------------------------------------------------------

ಮುಗಿಲ್ ಪೇಟೆ (೨೦೨೧) - ದೂರ ಹೋಗೋ ಮುನ್ನ ದೂರಲಾರೇ ನಿನ್ನ 
ಸಂಗೀತ : ಶ್ರೀಧರ ಸಂಭ್ರಮ, ಸಾಹಿತ್ಯ : ಪ್ರಮೋದ ಮರವಂತೆ, ಗಾಯನ : ವಾಸುಕೀ, ಶ್ರೀಧರ  

ದೂರ ಹೋಗೋ ಮುನ್ನ ದೂರಲಾರೇ ನಿನ್ನ ಮೌನದಲ್ಲೇ ಇನ್ನೂ ಗಾಯಾಳು ನಾ 
ನಾನು ನೀನು ಭಿನ್ನ ಮಾಡಲಾರೇ ನಿನ್ನ ನೋವಿನಲ್ಲಿ ಎಂದೂ ಶಾಮೀಲು ನಾ 
ಮಾಯವಾದ ಮೇಲೆ ನೀ ಭಾರವಾಯ್ತು ಕಂಬನಿ ಸೋತಿದೆ ಭಾವನೇ ವೇದನೇ... ಏಕೇ .. ಹೀಗೇ ... 
ದೂರ ಹೋಗೋ ಮುನ್ನ ದೂರಲಾರೇ ನಿನ್ನ ಮೌನದಲ್ಲೇ ಇನ್ನೂ ಗಾಯಾಳು ನಾ 
ನಾನು ನೀನು ಭಿನ್ನ ಮಾಡಲಾರೇ ನಿನ್ನ ನೋವಿನಲ್ಲಿ ಎಂದೂ ಶಾಮೀಲು ನಾ 

ಕನಸಿನ ಮರಣಕೆ ಮುಗಿಯದ ಸೂತಕ ಉಸಿರಿನ ಸಂಕಟ ಹೀನಾಯ 
ನಲುಮೆಯ ಇರುಳಿಗೆ ಚಂದ್ರನೇ ಘಾತುಕ ಸಹಿಸಲೀ ಹೇಗೆ ನಾ ಅನ್ಯಾಯ... 
ವಿಳಾಸವಿಲ್ಲ ನಾ ಸಾಗೋ ಈ ಕಾಲು ದಾರಿಗೆ ಕಣ್ಣೀರ ಮಾತೆ ವಿದಾಯ 
ಈ ನನ್ನ ಬಾಳಿಗೇ..ಅರಳುವ ಮುಂಚೆ ಬಾಡಿದೇ ಹೂ ನಗೆ... 
ದೂರ ಹೋಗೋ ಮುನ್ನ ದೂರಲಾರೇ ನಿನ್ನ ಮೌನದಲ್ಲೇ ಇನ್ನೂ ಗಾಯಾಳು ನಾ 
 
ಜಗದಲಿ ಅನುದಿನ ನಗುವಿನ ನಾಟಕ ಮರೆಯಲಿ ಅಳುವುದು ಮಾಮೂಲೀ ... 
ಮನಸಿನ ಅಳುವೇ ನೋವಿನ ಕಂದಕ ಬೀಳದೇ ಸಾಗು ನೀ ಬಾಳಲ್ಲಿ... 
ವಿಷಾದವೇನೂ ಇನ್ನಿಲ್ಲ.. ಈ ನನ್ನ ಪಾಲಿಗೇ 
ಸಂಪೂರ್ಣವಾಗಿ ಸೋತಂತೇ ನಾನೀಗ ಸೋಲಿಗೇ .. ಹೇ... 
ಮುಗಿಯದ ನೂರು ಮಾತೂ ಹೇಳಲೂ .... 
ದೂರ ಹೋಗೋ ಮುನ್ನ ದೂರಲಾರೇ ನಿನ್ನ ಮೌನದಲ್ಲೇ ಇನ್ನೂ ಗಾಯಾಳು ನಾ 
ನಾನು ನೀನು ಭಿನ್ನ ಮಾಡಲಾರೇ ನಿನ್ನ ನೋವಿನಲ್ಲಿ ಎಂದೂ ಶಾಮೀಲು ನಾ 
ಮಾಯವಾದ ಮೇಲೆ ನೀ ಭಾರವಾಯ್ತು ಕಂಬನಿ ಸೋತಿದೆ ಭಾವನೇ ವೇದನೇ... ಏಕೇ .. ಹೀಗೇ ... 
--------------------------------------------------------------------------------------------------------

ಮುಗಿಲ್ ಪೇಟೆ (೨೦೨೧) - ಜೀನ್ಸನಲ್ಲಿ ಮಾಸಗ್ವಳೇ ಚೂಡೀಲೀ ಖಾಸಗ್ವಳೇ  
ಸಂಗೀತ : ಶ್ರೀಧರ ಸಂಭ್ರಮ, ಸಾಹಿತ್ಯ : ಭರ್ಜರಿ ಚೇತನ, ಗಾಯನ : ಟಿಪ್ಪು ನಾರಾಯಣ 

ಜೀನ್ಸನಲ್ಲಿ ಮಾಸಗ್ವಳೇ ಚೂಡೀಲೀ ಖಾಸಗ್ವಳೇ ತುಂಬಾನೇ ಫೇರಾಗ್ವಳೇ 
ಬ್ಯೂಟೀಲಿ ಸಿಂಡ್ರೆಲ್ಲಾ.. ಸ್ಮೈಲಲ್ಲಿ ಕ್ಯೂಟಗ್ವಾಳೇ... 
ಗತ್ತಲ್ಲಿ ಜೋರಾಗ್ವಳೇ... ಸಕ್ಕತ್ತೂ ಮುದ್ದಾಗ್ವಳೇ   
ಬಿಟ್ಟಿರೋಕೇ  ಆಯ್ತಿಲ್ಲಾ .. ಸಿಗ್ನಲ್ ಯಾಕೋ ಸಿಗ್ತಿಲ್ಲಾ... ಆಆಆಅ 
ಇವಳ್ಯಾಕೋ   ಸ್ಪೇಸೇ ಕೊಡ್ತಿಲ್ಲಾ.... 
ಹೌದೇನ್ಲಾ.... ಹಂಗೇನ್ಲಾ... ಬೇಕೇನ್ಲಾ.... ಸುಮ್ಮಿನ್ರಲಾ... 

ಫ್ರೆಂಡಶಿಪಗೇ ಓಕೇ ಅನ್ನೂ ಕೇಳಿದ್ದೂ ಕೊಡಿಸುವೇ ನಾನು 
ಫೀಲಿಂಗ್ ವರ್ಕ್ ಔಟ್ ಆದ್ರೇ ಲವ್ ಮಾಡುವಾ.. 
ಕೇಳಲ್ಲ ಬೇರೇನೂ ಮುಂಗೋಪ ಬಿಟ್ಟ ಬಿಡು ಇನ್ನೂ 
ಫ್ಲೋನಲ್ಲಿ ಮಿಸ್ಟೇಕ್ ಆದ್ರೇ ಮ್ಯಾರೇಜ್ ಆಗುವಾ...    
ಡೌಟ್ ಇದ್ರೇ ಸೆಲ್ಫೀಯನೇ ಕ್ಲಿಕ್ಲ್ ಮಾಡು 
ಪರ್ಫೆಕ್ಟ್ ಜೋಡಿ ಕಣೇ ಚೆಕ್ ಮಾಡು ಮ್ಯಾಚ್ ಆಗಿದೇ ಜಾತಕ್ .. 
ಹೌದೇನ್ಲಾ.... ಹಂಗೇನ್ಲಾ... ಬೇಕೇನ್ಲಾ.... ಸುಮ್ಮಿನ್ರಲಾ... 
ನಿಸಗರಿಸ .. ನಿಸಗರಿಗರಿ.. ಗರಿಗಮಪ... ಗಮಪನಿ ... ರೀ 
ನಿರಿನಿರಿಪ ಪಸನಿಸಸ ಗಗಗರಿಸ.. ಗರಿಗಮಪ.. ನಿಸಗರಿಸ 

ಕಣ್ಣ ಮುಂದೆ ಬಂದರೇ ನೀನೂ ಐಸ್ ಅಂತೇ ಕರಗುವೇ ನಾನೂ 
ಬಿಟ್ಟಿರಲೂ ಆಗದ ಸೆಳೆತ ಶುರುವಾಗಿದೆ... 
ಇದ್ರಂತೇ ಲೈಲಾ ಮಜನೂ ಅವರಂತೇ ನಾನು ನೀನೂ 
ಲೈಫ್ ಲಾಂಗೂ ಜೊತೆಗೇ ಇರುವ ಕನಸೂ ಬಿದ್ದಿದೇ ... 
ಅತಿಯಾಗಿ ಆಗಿಬಿಟ್ಟಿದೇ ಕನ್ಫ್ಯೂಸನ್ 
ದಿನವೆಲ್ಲಾ ಇಲ್ಲಿ ಬರಿ ಇಲ್ಲ್ಯೂಷನ್  ಸಿಂಕಾಗಿದೇ ಕನೆಕ್ಷನ್.... ಹ್ಹಾಂ.. ಹ್ಹಾಂ
ಹೌದೇನ್ಲಾ.... ಹಂಗೇನ್ಲಾ... ಬೇಕೇನ್ಲಾ.... ಸುಮ್ಮಿನ್ರಲಾ... 
ಜೀನ್ಸನಲ್ಲಿ ಮಾಸಗ್ವಳೇ ಚೂಡೀಲೀ ಖಾಸಗ್ವಳೇ ತುಂಬಾನೇ ಫೇರಾಗ್ವಳೇ 
ಬ್ಯೂಟೀಲಿ ಸಿಂಡ್ರೆಲ್ಲಾ.. ಸ್ಮೈಲಲ್ಲಿ ಕ್ಯೂಟಗ್ವಾಳೇ... 
ಗತ್ತಲ್ಲಿ ಜೋರಾಗ್ವಳೇ... ಸಕ್ಕತ್ತೂ ಮುದ್ದಾಗ್ವಳೇ ಬಿಟ್ಟಿರೋಕೇ  ಆಯ್ತಿಲ್ಲಾ .. 
--------------------------------------------------------------------------------------------------------

No comments:

Post a Comment