ಸಾಹೇಬ ಚಲನಚಿತ್ರದ ಹಾಡುಗಳು
- ಹೀಗೇತಕೆ ನೀ ಸೆಳೆಯುವೆ ವಿಪರೀತ
- ಕೋಳಿಕೆ ರಂಗಾ
- ಜೀವಕೋಬ್ಬ ಜನ್ಮಕೊಬ್ಬ
- ತೇರು ಹಾಡು
- ಯಾರೇ ನೀನು ರೋಜಾ ಹೂವೇ
ಸಾಹೇಬ (೨೦೧೭) - ಹೀಗೇತಕೆ ನೀ ಸೆಳೆಯುವೆ ವಿಪರೀತ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಗಾಯನ :
ಹೀಗೇತಕೆ ನೀ ಸೆಳೆಯುವೆ ವಿಪರೀತ ಹೀಗಾದರೇ ಈ ಹೃದಯವು ಉಳಿದೀತಾ...
ಪರಿಚಯ ಮೆಲ್ಲಗೆ ಪರಿಮಳವಾಗಿ ಸಿಹಿ ಸಿಹಿ ಭಾವದ ಸುರಿ ಮಳೆಯಾಗಿ
ಬಡಬಡಿಸುವೇ ನಾನು ನಿನ್ನನ್ನೇ...
ಮನಸಿದು ಹೂವಿನ ಮಂಟಪವಾಗಿ ಗಮನವ ಕೊಡದಿರೇ ಸಂಕಟವಾಗಿ
ಸರಿಪಡಿಸುವೆ ನಾನು ನಿನ್ನನೇ...
ಪ್ರೀತಿಗಿಂತ ಇಲ್ಲ ಬೇರೆ ದೇವರೇ ಇಲ್ಲಿ ಪ್ರೀತಿಗಿಂತ ಇಲ್ಲ ಬೇರೆ ದೇವರೇ
ಪ್ರೀತಿಗಿಂತ ಇಲ್ಲ ಬೇರೆ ದೇವರೇ ಇಲ್ಲಿ ಪ್ರೀತಿಗಿಂತ ಇಲ್ಲ ಬೇರೆ ದೇವರೇ
ಹಣೆಯಲಿ ಬರೆಯಲೇ ಉಸಿರಿನ ರೇಖೆ ಹೃದಯವೇ ತೆರೆದಿದೆ ಒಲವಿನ ಇಲಾಖೆ
ನಯನಗಳು ದೀಪವಾಗುತ ಬೆರಳುಗಳೇ ಮಾತನಾಡುತ
ಬಯಕೆ ಇದೆ ರೂಪ ತಾಳುತ ಬಗೆಹರಿಸು ನೀ
ಚಲಿಸುವೇ ಕನಸಿನ ಶೃಂಗಾರದಂತೇ ತುಟಿಯಲಿ ಉಳಿದ ಬಿನ್ನಹದಂತೇ
ಅಪಹರಿಸುವೆ ನಾನು ನಿನ್ನನ್ನೇ... ಬೀದಿಯಲ್ಲಿ ನಿಂತುಕೊಂಡು ಪ್ರೀತಿಯಿಂದ ಹಾಡುವಾಗ
ಬರಲೀ ಬರಲೀ ನಿನ್ನ ಮೆರವಣಿಗೆ
ಬೀದಿಯಲ್ಲಿ ನಿಂತುಕೊಂಡು ಪ್ರೀತಿಯಿಂದ ಹಾಡುವಾಗ
ಬರಲೀ ಬರಲೀ ನಿನ್ನ ಮೆರವಣಿಗೆ ಹೊಸ ಹೊಸ ನೆಪಗಳ ಕಲಿಯುವೇ ನಾನು
ತರಿಸಲೇ ಚಂದ್ರನ ಬೆಳಕಿನ ಕಮಾಲು
ಇರುಳಗಳ ಧೀರ್ಘವಾಗಿಸೀ ವಿರಹವನು ತೀರ್ವವಾಗಿಸಿ
ಭವಣೆಯನು ಮುಕವಾಗಿಸಿ ಉಪಕರಿಸು ನೀನು ನೆನಪಿನ ಕಣಜದ ಕದ ತೆರೆದಂತೇ
ನೆನೆಯುವ ಮುನ್ನವೇ ಬಳಿಯಿರುವಂತೇ
ಆವಸರಿಸುವೇ ನಾನು ನಿನ್ನನ್ನೇ ನಿನ್ನನ್ನೇ
ಸಾಹೇಬ (೨೦೧೭) - ಕೋಳಿಕೆ ರಂಗಾ
ನಮ್ಮೂರು ಮಂಡ್ಯ ಕೊಪ್ಪ ನಮ್ ತಾತ್ ಸಂಪಗಪ್ಪ
ಹೀಗೇತಕೆ ನೀ ಸೆಳೆಯುವೆ ವಿಪರೀತ ಹೀಗಾದರೇ ಈ ಹೃದಯವು ಉಳಿದೀತಾ...
----------------------------------------------------------------------------------
ಸಾಹೇಬ (೨೦೧೭) - ಕೋಳಿಕೆ ರಂಗಾ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಟಿಪ್ಪು
ನಮ್ ಅಪ್ಪ ಸಂಪಿಗಣಪಪ್ಪ ಕೇಳಪ್ಪ...
ಇಷ್ಟೆಲ್ಲಾ ಹೇಳ್ತಿನಪ್ಪ ಯಾಕಂತ ಗೊತ್ತೇನಪ್ಪಾ
ನೀ ನನ್ನ ತಿಳ್ಕೋಬೇಕಪ್ಪಾ ... ಹೌದಪ್ಪ..
ಅವ್ವ ತುಂಬಾ ಅತ್ತು ಅತ್ತು ಕೋಳಿ ಹುಂಜ ಕೂಗೋ ಹೊತ್ತು
ನಾನು ಹುಟ್ಟದೇ ಅಷ್ಟೇ ಗೊತ್ತು ನಾನ್ಯಾರು ಹೇಳೋಲ್ಲ
ನಾನು ಕೋಳಿಕೆ ರಂಗ... ನಾನು ಕೋಳಿಕೆ ರಂಗ...
ನಮ್ಮೂರು ಮಂಡ್ಯ ಕೊಪ್ಪ ನಮ್ ತಾತ್ ಸಂಪಗಪ್ಪ
ನಮ್ ಅಪ್ಪ ಸಂಪಿಗಣಪಪ್ಪ ಕೇಳಪ್ಪ...
ಇಷ್ಟೆಲ್ಲಾ ಹೇಳ್ತಿನಪ್ಪ ಯಾಕಂತ ಗೊತ್ತೇನಪ್ಪಾ
ನೀ ನನ್ನ ತಿಳ್ಕೋಬೇಕಪ್ಪಾ ... ಹೌದಪ್ಪ..
ಹುಣುಸೂರು ಅಣ್ಣನ ಭಾವ ತಂಗಿ ಗಂಡನ ಸಡ್ಕಾನೇ
ನಮ್ ಸ್ಕೂಲ್ ಮೇಷ್ಟ್ರಾಗಿದ್ದರಪ್ಪಾ ಮಾಡಿದ್ದೇ ಲೆಕ್ಕದಲ್ ತಪ್ಪ
ಬಸ್ಕಿ ಹೊಡ್ಸಿದರಪ್ಪಾ ನಾ ಇವಾಗ ಹಂಗಿಲ್ಲಪ್ಪಾ
ಮೊಟಕಿದರು ನನ್ ತಲೆ ಮ್ಯಾಲೇ ಕದ್ದು ಮಾಡಿದೆ ನಾ ವರ್ಣಮಾಲೆ
ಹೇಯ್ ಕತ್ತಲೆಗ್ಯಾರು ಕಪ್ಪ ಹಂಗು ಬದಲು ಇಟ್ಟ ಊರಪ್ಪ
ಇಂಥಾವೇ ಕ್ವೆಶ್ಚನಪ್ಪಾ ತಲೆಯಾಗೆ ಹೂತವಪ್ಪ
ನಾನೂ ಕೋಳಿಕೆ ರಂಗಾ... ನಾನೂ ಕೋಳಿಕೆ ರಂಗಾ...
ಅವನ್ ತಂಗಿ ಮಾತನ್ ಕೇಳಿ ಸೀತೇನ ಯತ್ಕೊಂಡ ಬಂದ್ಬುಟ್ಟ ದಶಕಂಠ ರಾವಣೇಶಪ್ಪ
ತಂಗಲು ಶ್ರೀ ರಾಮಪ್ಪ ಜೊತೆಗಿದ್ದ ಹನುಮಂತಪ್ಪ ದೊಡ್ಡ ಯುದ್ಧ ನಡೆದಹೋಯಿತಪ್ಪ
ವಾಪಸವಾದಳು ನಮ ಸೀತಮ್ಮಾ ಲವಕುಶ ಆದರೂ ಅಣ್ಣ ತಮ್ಮ
ಹಾಕ್ತನಾಗೇ ಹಾಲಗೇ ಹೆಪ್ಪ.. ಬಲು ಘಟ್ಟಿ ಕಥೆಗಳಪ್ಪಾ
ಕೇಳ್ಕೊಂಡೇ ಬೆಳದಿವನಪ್ಪ ಬೆಳೆದಿದ್ದೇ ಗೋತ್ತಿಲ್ಲಪ್ಪ
ನಾನೂ ಕೋಳಿಕೆ ರಂಗಾ... ನಾನೂ ಕೋಳಿಕೆ ರಂಗಾ...
--------------------------------------------------------------------------------
ಸಾಹೇಬ (೨೦೧೭) - ಜೀವಕೋಬ್ಬ ಜನ್ಮಕೊಬ್ಬ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ ಗಾಯನ : ಶ್ವೇತಾಮೋಹನ, ಕಾರ್ತಿಕ
ಜೀವಕೊಬ್ಬ ಜನ್ಮಕೊಬ್ಬ .. ಸ್ನೇಹಕೊಬ್ಬ ಪ್ರೀತಿಗೊಬ್ಬ
ಹೃದಯಕೊಬ್ಬ ಉಸಿರಿಗೊಬ್ಬ ಎಲ್ಲಾ ನೀನೇ ಒಬ್ಬ..
ಕಣ್ಣಿಗೊಬ್ಬ ಕನಸಿಗೊಬ್ಬ ನೋವಿಗೊಬ್ಬ ನಲಿವಿಗೊಬ್ಬ
ಬದುಕಿಗೊಬ್ಬ ಸಾವಿಗೊಬ್ಬ ಎಲ್ಲಾ ನೀನೇ ಒಬ್ಬ..
ನನ್ನ ಜಗದ ತುಂಬಾ ನೀನೇ ನೀನೇ ಒಬ್ಬ
ನಿನ್ನ ಸೇರೋ ಆಸೆ ತುಂಬಾ ತುಂಬಾ
ಬಾ ಬಾ ಬಾ ಸಾಹೇಬ ಬಾ ಬಾ ಬಾ ಸಾಹೇಬ
ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ
ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ ಗಲೀ
ಧೀರೇ ನಾರೇ ನಾ ನಾ
ಬಾ ನನ್ನ ತುಸು ನೀ ಆಲಂಗಿಸು ಜನ್ಮ ಪೂರ ಕಳೆವ ಹಾಗೆ ನಿನ್ನ ತೋಳಲ್ಲಿ
ಆಕಾಶದ... ವಿಸ್ತಾರಕ್ಕಿಂತ ನಿನ್ನೆಂದರೇ ... ನನಗಿಷ್ಟ ಗೋತ್ತಾ ...
ಬಾಳೆಲ್ಲವೂ ನಿನ್ನ ಭಾಗನೇ ನಾ.. ಸಾವಲ್ಲಿಯೂ ನಿನ್ನ ಸಂಗಾತಿ ನಾ
ನನ್ನ ಅಧ್ಯಾತ್ಮ ಕಧ್ಯಾತ್ಮ ನೀ..
ಬಾ ಬಾ ಬಾ ಸಾಹೇಬ ಬಾ ಬಾ ಬಾ ಸಾಹೇಬ
ಉಸಿರಾಡದೇ ... ಇರಬಲ್ಲೆನೇನೂ .. ನೀನಿಲ್ಲದೇ... ಇರಲಾರೇ ನಾನೂ ..
ಬೇರಾವುದೇ ವರ ನಾ ಬೇಡೆನು ನೀ ಸಿಕ್ಕಿದೆ ಅದೇ ಪುಣ್ಯ ಕಣೇ
ನನ್ನ ಏಕೈಕ ಸಂತೋಷ ನೀ..
ಬಾ ಬಾ ಬಾ ಸಾಹೇಬ ಬಾ ಬಾ ಬಾ ಸಾಹೇಬ
-------------------------------------------------------------------------------
ಸಾಹೇಬ (೨೦೧೭) - ತೇರು ಹಾಡು
ಬಾಯಾರಿದ ಆ ಜಿಂಕೆ ಮರಿ ನೀರಿಗೆ ಬೀಳಲು ಕಾಲ ಜಾರಿ
ಸಾಹೇಬ (೨೦೧೭) - ತೇರು ಹಾಡು
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವೆಂಕಟೇಶಮೂರ್ತಿ ಗಾಯನ : ಕಾರ್ತಿಕ
ಹರಿವ ಹೊಳೆಯ ಮೇಲೆ ಹರಿದು ಬಂತು ಎತ್ತರದ ತೇರು ಗೋತ್ತಾ..
ಜುಮ್ಮ್ ಜುಮ್ಮ್ ಜುಮ್ಮ್ ಗೋತ್ತಾ .. ಜುಮ್ಮ್ ಜುಮ್ಮ್ ಜುಮ್ಮ್
ಇದನು ಕಂಡಿ ಬೆರಗಾಗಿ ನೋಡಿದವು ಕಾಡು ಪ್ರಾಣಿ ಸುತ್ತ
ಜುಮ್ಮ್ ಜುಮ್ಮ್ ಜುಮ್ಮ್ ಸುತ್ತ.. ಜುಮ್ಮ್ ಜುಮ್ಮ್ ಜುಮ್ಮ್
ತನ್ನ ಬೆನ್ನಲ್ಲಿ ಹೊತ್ತು ಸಾಗಿಸಿತು ಮೊಸಳೆ ಮರಿ
ಗಿಳಿ ಮರಿ ಹೇಳಿತು ಸರಿ ಸರಿ ಆಹಾ ಈಗಿದು ಬರೋಬ್ಬರೀ ..
ಜಿಂಕೆಯ ಕೊಂಬಲ್ಲಿ ಕೂತ ಗಿಳಿ ಚೂ ಚೂ ಎಂದಿತು ಪ್ರೀತಿಯಲೀ
ಮೊಸಳೆಯ ಮೇಲ ಜಿಂಕೆ ಮರೀ ಜಿಂಕೆಯ ಮೇಲ ಹಕ್ಕಿ ಮರಿ
ಚಿಟ್ಟೆಯು ನೋಡಿತು ಈ ತೇರ ನನ್ನನ್ನು ಕೂಡ ಕರಕೋತಿರಾ
ನೀರ ಮೇಲ ಮೊಸಳೆ ಮೊಸಳೆ ಮೇಲ ಜಿಂಕೆ
ಜಿಂಕೆ ಮೇಲ ಹಕ್ಕಿ ಹಕ್ಕಿ ಮೇಲ ಚಿಟ್ಟೇ
ಕಾಣ್ತಾ ಇತ್ತು ನೀರ ಮೇಲೆ ತೇರು ಹೊರಟಂಗೆ
ನೀರ ಮೇಲ ಮೊಸಳೆ ಮೊಸಳೆ ಮೇಲ ಜಿಂಕೆ
ಜಿಂಕೆ ಮೇಲ ಹಕ್ಕಿ ಹಕ್ಕಿ ಮೇಲ ಚಿಟ್ಟೇ
ಕಾಣ್ತಾ ಇತ್ತು ನೀರ ಮೇಲೆ ತೇರು ಹೊರಟಂಗೆ
ಒಬ್ಬರಿಗ ಒಬ್ಬರೂ ಹೊಂದಕೊಂಡ ಇದ್ರೇ ತೇರ ಹಬ್ಬ ಹಿಂಗೇ
ಜುಮ್ಮ್ ಜುಮ್ಮ್ ಜುಮ್ಮ್ ಜುಮ್ಮ್ ಜುಮ್ಮ್ ಜುಮ್ಮ್
-------------------------------------------------------------------------------
ಸಾಹೇಬ (೨೦೧೭) - ಯಾರೆ ನೀನು ರೋಜಾ ಹೂವೆ
ಸಾಹಿತ್ಯ: ಹಂಸಲೇಖ ಸಂಗೀತ: ಶಂಕರ್-ಗಣೇಶ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಂಜಿತ
ಇದು ಹೂವಿನ ಲೋಕವೆ... ಇಲ್ಲಿ ಗೆಳತಿಯರಿಲ್ಲವೆ.... ಹೇಗೆ ನಾ ಹಾಡಲಿ.... ಹೇಳಿ ಹೂಗಳೆ....
ಆಲ್ ಯೂ ಸೇ ಕಮ್ ಆನ್ ಕಮ್ ಆನ್ ಕಮ್ ಆನ್ ಕಮ್ ಆನ್
ಇದು ಹೂವಿನ ಲೋಕವೆ... ಇಲ್ಲಿ ಗೆಳತಿಯರಿಲ್ಲವೆ.... ಹೇಗೆ ನಾ ಹಾಡಲಿ.... ಹೇಳಿ ಹೂಗಳೆ....
ಆಲ್ ಯೂ ಸೇ ಕಮ್ ಆನ್ ಕಮ್ ಆನ್ ಕಮ್ ಆನ್ ಕಮ್ ಆನ್
ಬ್ರೇಕ್ ದಿ ರೂಲ್ಸ್ ನ ನ ನ ನ ನ ನ ನ ನ ನ ನ ನ ನ
ಎವ್ರಿ ಒನ್ ಕಮ್ ಆನ್ ಕಮ್ ಆನ್ ಕಮ್ ಆನ್ ಕಮ್ ಆನ್
ಹಿಯರ್ ವೀ ಗೋ ಗೆಟ್ ಇನ್ ಗೆಟ್ ಇನ್ ಗೆಟ್ ಇನ್ ಗೆಟ್ ಇನ್ ನೌ.. ನೌ
ಯಾರೆ ನೀನು ರೋಜ ಹೂವೆ ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ... ಚೆಲುವಿನಾ ಹೂವೆ
ಸೌಗಂಧ ಹೂವಲ್ಲಿ ತುಂಬಿಕೊಂಡಿತಂತೆ ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ.. ಹೇ.. ಹೇ.. ಹೇ.. ಹೇ..
ಹೂವಿನಲ್ಲಿ ಹೆಣ್ಣಿನ ಅಂದ ನೋಡು ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು
ಹೆಣ್ಣೇ ಹೂವೆಂದು ಪ್ರೀತಿ ಮಾಡು
ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು
ಹೆಣ್ಣೇ ಸಂಗೀತ ಎಂದು ಹಾಡು
ಜಾಲಿ ಮಾಡು ಲೈಫಲ್ಲಿ ಸೌಗಂಧ ಸೌಂದರ್ಯ ಸಂಗೀತ ನಿನ್ನದು
ಹುಡ್ಗೀರಿಗೆ ನಾನೆ ರಾಜ ನಾನು ಹುಡ್ಗರಿಗೆ ಖದೀಮ ಕಳ್ಳ ನಾನು
ಪ್ರಳಯಾಂತಕ ನಾನು ಕೇಳು ನೀನು
ಲೋಕವೆಲ್ಲ ನನ್ನ ಪಾಕೆಟ್‍ನಲ್ಲಿ ಸ್ನೇಹವೆಂಬ ಲವ್ಲಿ ರಾಕೆಟ್‍ನಲ್ಲಿ
ತೇಲಿ ಹಾಡೋ ಪ್ರೇಮಿ ನಾನು
ಶಬಬ ರಪಪಾ... ಕೇಳಿ ನನ್ನ ಪ್ರೇಮಿಗಳೆ
ಈ ಪ್ರೀತಿ ಅಭಿಮಾನ ಎಂದೆಂದು ನನ್ನದು
ಸೌಗಂಧ ಹೂವಲ್ಲಿ ತುಂಬಿಕೊಂಡಿತಂತೆ ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ.. ಹೇ.. ಹೇ.. ಹೇ.. ಹೇ..
ಯಾರೆ ನೀನು ರೋಜ ಹೂವೆ ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ... ಚೆಲುವಿನಾ ಹೂವೇ ... ಒನ್ ಟೂ ಥ್ರೀ.. ಗೋ..
ಹೆಣ್ಣೇ ಹೂವೆಂದು ಪ್ರೀತಿ ಮಾಡು
ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು
ಹೆಣ್ಣೇ ಸಂಗೀತ ಎಂದು ಹಾಡು
ಜಾಲಿ ಮಾಡು ಲೈಫಲ್ಲಿ ಸೌಗಂಧ ಸೌಂದರ್ಯ ಸಂಗೀತ ನಿನ್ನದು
ಯಾರೆ ನೀನು ರೋಜ ಹೂವೆ ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ... ಚೆಲುವಿನಾ ಹೂವೆ
ಹುಡ್ಗೀರಿಗೆ ನಾನೆ ರಾಜ ನಾನು ಹುಡ್ಗರಿಗೆ ಖದೀಮ ಕಳ್ಳ ನಾನು
ಪ್ರಳಯಾಂತಕ ನಾನು ಕೇಳು ನೀನು
ಲೋಕವೆಲ್ಲ ನನ್ನ ಪಾಕೆಟ್‍ನಲ್ಲಿ ಸ್ನೇಹವೆಂಬ ಲವ್ಲಿ ರಾಕೆಟ್‍ನಲ್ಲಿ
ತೇಲಿ ಹಾಡೋ ಪ್ರೇಮಿ ನಾನು
ಶಬಬ ರಪಪಾ... ಕೇಳಿ ನನ್ನ ಪ್ರೇಮಿಗಳೆ
ಈ ಪ್ರೀತಿ ಅಭಿಮಾನ ಎಂದೆಂದು ನನ್ನದು
ಯಾರೆ ನೀನು ರೋಜ ಹೂವೆ ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ... ಚೆಲುವಿನಾ ಹೂವೆ
--------------------------------------------------------------------------------
No comments:
Post a Comment