1631. ಲಂಚ ಲಂಚ ಲಂಚ (೧೯೮೬)



ಲಂಚ ಲಂಚ ಲಂಚ ಚಲನಚಿತ್ರದ ಹಾಡುಗಳು 
  1. ಲಂಚ ಲಂಚ ಲಂಚ 
  2. ಚೆಲುವೆಯ ಜಾಡು 
  3. ಚಿಪ್ಪಲ್ಲಿ ಹನಿ ಜಾರಿದೇ 
  4. ಈ ಜೀವ ನೆರಳಾಗಿದೆ 
ಲಂಚ ಲಂಚ ಲಂಚ (೧೯೮೬) - ಲಂಚ ಲಂಚ ಲಂಚ 
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ಸಿದ್ದಲಿಂಗಯ್ಯ, ಗಾಯನ : ಎಸ್.ಪಿ.ಬಿ. 

ಲಂಚ ಲಂಚ ಲಂಚ ಹೇ ಲಂಚ ಲಂಚ ಲಂಚ 
ಲಂಚ ಲಂಚ ಲಂಚ ಹೇ ಲಂಚ ಲಂಚ ಲಂಚ 
ಯಾವ ಘಳಿಗೇಯಲಿ ಆಯಿತೋ ಏನೋ ನಿನ್ನಯ ಈ ಅವತಾರ.. 
ಯಾವ ಘಳಿಗೇಯಲಿ ಆಯಿತೋ ಏನೋ ನಿನ್ನಯ ಈ ಅವತಾರ.. 
ಅಲ್ಲಿಯ ಹೂಡಿದೆ ಸಂಸಾರ ಇಲ್ಲಿಯೂ ಬೆಳೆಸಿದೆ ಪರಿವಾರ 
ಎಲ್ಲೆಲ್ಲಿಯೂ ನಿನ್ನ ಚಮತ್ಕಾರ.. (ಲಂಚ ಲಂಚ ಲಂಚ)
ಹ್ಹಾ... ಲಂಚ ಲಂಚ ಲಂಚ ಹೇ ಲಂಚ ಲಂಚ ಲಂಚ 
ಲಂಚ ಲಂಚ ಲಂಚ ಹೇ ಲಂಚ ಲಂಚ ಲಂಚ 

ಮರೆಯಲಿ ಸಲ್ಲುವ ಸಂದಾಯ ಅದು ತೆರಿಗೆಗೆ ಸಿಲುಕದ ಆದಾಯ 
ಮರೆಯಲಿ ಸಲ್ಲುವ ಸಂದಾಯ ಅದು ತೆರಿಗೆಗೆ ಸಿಲುಕದ ಆದಾಯ 
ಹಲವರಿಗಿದುವೇ ವ್ಯಾಪಾರ ಇದು ಮಾಮೂಲ ಆಗಿರೋ ವ್ಯವಹಾರ.. 
ಹಲವರಿಗಿದುವೇ ವ್ಯಾಪಾರ ಇದು ಮಾಮೂಲ ಆಗಿರೋ ವ್ಯವಹಾರ.. 
ಅರ್ಜಿಗೂ ಲಂಚ... ಮರ್ಜಿಗೂ ಲಂಚ... ಕುರ್ಚಿಗೂ ಲಂಚ... ಮೇಜಿಗೂ ಲಂಚ 
ಅವರಿಗೂ ಲಂಚ..  ಇವರಿಗೂ ಲಂಚ...  ಮೇಲೆಯೂ ಲಂಚ..  ಕೆಳಗೂ ಲಂಚ.. 
ಲಂಚವ ಕೊಟ್ಟೂ ಕೆಲಸವ ಪಡೆದವ ಪಡೆಯದೇ ಬಿಡುವೇನೇ ತಾನೂ ಲಂಚ.. 
ಆ... ಆಆಅಹ್ಹಹ್ಹಹ್ಹ   ಲಂಚ.. ಲಂಚ.. ಲಂಚ.. ಲಂಚ.. 

ಕರೆ ಬಿಡದ ವಿಷ ಚಕ್ರ ಲಂಚದ ಹಾದಿಯೂ ಬಲು ವಕ್ರ..  ಒಳಹೊಕ್ಕರೇ ಬಿಡದ ವಿಷಚಕ್ರ 
ನಿನ್ನನೂ ಸೆಳೆದಿದೇ  ಈ ಸುಳಿಯೂ ಇನ್ನೆಲಿದೇ ನಿನಗೆ ಬಿಡುಗಡೆಯೋ 
ನಿನ್ನನೂ ಸೆಳೆದಿದೇ  ಈ ಸುಳಿಯೂ ಇನ್ನೆಲಿದೇ ನಿನಗೆ ಬಿಡುಗಡೆಯೋ 
ತನ್ನನೂ ತಾನೇ ವಂಚಿಸುವಂಥ ಅನ್ಯರ ಕಣ್ಣಚಲಿ ಸಿಲುಕಿಸುವಂಥ 
ತನ್ನನೂ ತಾನೇ ವಂಚಿಸುವಂಥ ಅನ್ಯರ ಕಣ್ಣಚಲಿ ಸಿಲುಕಿಸುವಂಥ 
ಸೋಚಿಸಿದವರನು ಬೆನ್ನ ಬಿಡದಂಥ ಬೇತಾಳವಂತೇ ಈ ಲಂಚ..   
ಬೇತಾಳವಂತೇ ಈ ಲಂಚ..    (ಲಂಚ ಲಂಚ ಲಂಚ)
ಹ್ಹಾ... ಲಂಚ ಲಂಚ ಲಂಚ ಹೇ ಲಂಚ ಲಂಚ ಲಂಚ 
ಲಂಚ ಲಂಚ ಲಂಚ ಹೇ ಲಂಚ ಲಂಚ ಲಂಚ 

ನಿನ್ನದೂ ಅಲ್ಲ ಈ ಜಯಮಾಲೇ... ಇದು ಲಂಚಕೆ ಸಿಕ್ಕಿದ ವಿಜಯದ ಮಾಲೇ 
ಇನ್ನೂ ಏಕೀ ಈ ಸತ್ಕಾರ.. ಇಂತಹ ಜಯಕೇ ಧಿಕ್ಕಾರ.. 
ಮುಳ್ಳಿನ ಜೊತೆಗೇ ಇಟ್ಟರೂ ಹೂವು ಮುಳ್ಳಾಗದು ಎಂದೂ ಇಟ್ಟರೂ ಲಂಚ
ಪಶ್ಚಿಮದಲ್ಲಿ ಹುಟ್ಟನೂ ಸೂರ್ಯ ಎಷ್ಟೂ ಕೊಟ್ಟರೂ ಅವನಿಗೇ ಲಂಚ.. 
ಲಂಚ.. ಅಹ್ಹಹ್ಹಹ್ಹಹ್ಹ ಲಂಚ.. ಅಹ್ಹಹ್ಹಹ್ಹಹ್ಹ ಲಂಚ.. ಅಹ್ಹಹ್ಹಹ್ಹಹ್ಹ 
ಲಂಚ ಲಂಚ ಲಂಚ ಹೇ ಲಂಚ ಲಂಚ ಲಂಚ 
ಲಂಚ ಲಂಚ ಲಂಚ ಹೇ ಲಂಚ ಲಂಚ ಲಂಚ 
ನೆಮ್ಮದಿ ಸಿಗದು ಬಡ ಜನಕೆಂದೂ ಆಗದೇ ನಿನ್ನ ಸಂಹಾರ 
ನೆಮ್ಮದಿ ಸಿಗದು ಬಡ ಜನಕೆಂದೂ ಆಗದೇ ನಿಮ್ಮ ಸಂಹಾರ 
ಸ್ವಾರ್ಥವೇ ತುಂಬಿರೇ ಜನರಲ್ಲಿ ಮಾಡುವರಾರೀ ಜಗದಲ್ಲಿ 
ನಿನಗೀಗಲೇ ಕೊನೆಯ ಸಂಸ್ಕಾರ..   
---------------------------------------------------------------------------------------------------------

ಲಂಚ ಲಂಚ ಲಂಚ (೧೯೮೬) - ಚೆಲುವೆಯ ಜಾಡು 
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ: ಗೀತಪ್ರಿಯ, ಗಾಯನ :ವಾಣಿಜಯರಾಂ, ಎಸ್.ಪಿ.ಬಿ, ಬೆಂಗಳೂರು ಲತಾ, ಮಂಜುಳಾ   

ಜಗದೀಶ : ಚೆಲುವೆಯ ಜಾಡು ಹಿಡಿಯುತ ಬಂದೇ ದಿನ ದಿನ 
ಹೆಣ್ಣು : ಒಲವಿನ ತಂಪು ಅನುಭವ ಕಂಡೇ ಕ್ಷಣ ಕ್ಷಣ 
ಜಗದೀಶ : ಹ್ಹ.. ಚೆಲುವೆಯ ಜಾಡು ಹಿಡಿಯುತ ಬಂದೇ ದಿನ ದಿನ 
ಹೆಣ್ಣು : ಒಲವಿನ ತಂಪು ಅನುಭವ ಕಂಡೇ ಕ್ಷಣ ಕ್ಷಣ 
ಜಗದೀಶ : ಸ್ನೇಹ ಒಂದಾಗಿದೇ   ಹೆಣ್ಣು : ಮೋಹ ರಂಗಾಗಿದೇ.. 
ಇಬ್ಬರು : ನಮ್ಮ ರಾಜ ಲೋಕ ಸುಖವ ತಿಳಿದು ಹಿತವಾಗಿದೇ ..
ವಾಣಿ : ಪ್ರಣಯ ಮೂಡಿ ಹೃದಯಗೀತೆ ಹಾಡಿದೇ .. 
ರಾಜ : ಮಿಲನ ಕೂಡಿ ಮಧುರ ಸ್ವಪ್ನ ಸಾಗಿದೇ .. 
ವಾಣಿ : ಪ್ರಣಯ ಮೂಡಿ ಹೃದಯಗೀತೆ ಹಾಡಿದೇ .. 
ರಾಜ  : ಮಿಲನ ಕೂಡಿ ಮಧುರ ಸ್ವಪ್ನ ಸಾಗಿದೇ .. 
ಹೆಣ್ಣು : ಋತುಮಾನ ಕೂಗಲು     ರಾಜ : ಮನದಾಸೇ ಕಾಣಲೂ  
ಇಬ್ಬರು : ನಮ್ಮ ಜೀವ ಭಾವ ಹೊಂದಿಕೊಂಡು ಹರುಷ ಹೊಮ್ಮಿದೇ ...   
ಲೋಕೇಶ : ಆಲಂಗಿಸೂ .. ಬಾರೇ ಪ್ರಾಣೇಶ್ವರೀ .. ಆಯ್ಯಯ್ಯಯ್ಯಯೋ  ಆರಾಧಿಸೂ ನಲ್ಮೆ ಹೃದಯೇಶ್ವರೀ 
                ವಿರಹಾಗ್ನಿ ಭುಗಿವಾಗಿ ಹಗಲು ಇರುಳೂ ತನುವೂ ಮನವೂ ಸುಡುತಿದೇ 
                ಓ.. ಕಾಮಿನೀ.. ಬಾರೇ ನವಮೋಹಿನೀ... ಭಾಮಿನೀ ...    

ಜಗದೀಶ : ಕಣ್ಣೂ ಮಾತನಾಡಿ ಆಸೇ ಕಾಡಿದೇ ನಿನ್ನ ಸಂಗ ಸೇರಿ ಮೋಜು ಮಾಡಿದೇ 
ಹೆಣ್ಣು : ಲಜ್ಜೇ ದೂರ ಹೋಗಿ ನಂಟೂ ಅಂತಿದೇ 
ರಾಜ : ನಿನ್ನಿಂದ ಹೊಸ ಚೇತನ 
ಹೆಣ್ಣು : ಸಂತೋಷ ಮೈತುಂಬೀ ಸುಖ ಸ್ಪಂದನ ನಿನ್ನಿಂದ ನವ ಜೀವನ 
ಲೋಕೇಶ : ಯೌವ್ವನ ಎಂದಿಗೂ ಹರುಷವೇ ನಾಳೆ ನಿನ್ನ ಬಾಳಿನಲ್ಲಿ ಭವಣೆಯೂ   
                ಹಾಗೆಂದವೋ ಮುಗಿಯದ ಪೇಚಾಟವೇ.. 
ಜಯಂತಿ : ಹೀಗೇಕೇ ನಿಮಗಿಂದು ಮಗಳ ಮೇಲೆ ಮಗನ ಮೇಲೆ ಸಿಡಿಮಿಡಿ 
                ಶೃಂಗಾರಕೇ ಒಲಿದು ಬಾ ಓ.. ಮೋಹನ.. ಮೋಹನ 

ರಾಜ : ಲಾಲಲಲಲ್ಲಲ್ಲಾ  ಲಾಲಲಲಲ್ಲಲ್ಲಾ  
ಜಗದೀಶ : ಉಕ್ಕಿ ಬಂದ ಪ್ರೀತಿ ಮೇರೇ ಮಿರಿದೇ ಹೆಜ್ಜೆ ಹಾಕಿದಾಗ ರಂಗು ತೋರಿದೇ 
ಮಹಾಲಕ್ಷ್ಮಿ : ಹೊತ್ತು ಮೀರಿ ಹೋಗಿ ಮುತ್ತು ಬೇಡಿದೆ ಸುತ್ತಿ ಬಳಸಿ ನೋಡಿ ಗಂಧ ಕೂಡಿದೇ 
ರಾಜ : ಉಲ್ಲಾಸ ಉಸಿರಾಗಿ ಹೂ ನಂದನ ಬಾಳಲ್ಲಿ ಸಿರಿ ತೋರಣ 
ವಿಜಯರಂಜಿನಿ : ಸಲ್ಲಾಪ ಇಂಪಾಗಿ ಸಿಹಿ ಚುಂಬನ ಎಂದೆಂದೂ ಸವಿ ಬಂಧನ 
ಲೋಕೇಶ : ಮೇರೆಯೇ... ಇಲ್ಲವೇ ಸರಸಕೂ ಇಂದೂ ಎಲ್ಲ ಮೋಜಿನಾಟ ನಿಮಗೇ 
                 ಸಂಸಾರವೂ ಅಂತಲೂ ನರಳಾಟವೇ 
ಜಯಂತಿ : ಅನುರಾಗ ಗುರುತಾದ ಒಲುಮೆ ಹೊನಲು ತುಂಬಿ ಹರಿದು ಸಂಕಟ 
                ಪ್ರೇಮಾನುಭೂತಿ ಸಿಲುಕಲು ಓ..ನಲ್ಲನೇ.. ನಲ್ಲನೇ         
ಜಗದೀಶ : ಚೆಲುವೆಯ ಜಾಡು ಹಿಡಿಯುತ ಬಂದೇ ದಿನ ದಿನ 
ಹೆಣ್ಣು : ಒಲವಿನ ತಂಪು ಅನುಭವ ಕಂಡೇ ಕ್ಷಣ ಕ್ಷಣ 
ಲೋಕೇಶ : ಚೆಲುವೆಯ ಜಾಡು ಹಿಡಿಯುತ ಬಂದೇ ದಿನ ದಿನ 
--------------------------------------------------------------------------------------------------------

ಲಂಚ ಲಂಚ ಲಂಚ (೧೯೮೬) - ಚಿಪ್ಪಲ್ಲಿ ಹನಿ ಜಾರಿದೇ 
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ, ಕೋರಸ್  

ಚಿಪ್ಪಲ್ಲಿ ಹನಿ ಜಾರಿದೇ ಮೊಗ್ಗಲ್ಲಿ ಬಿಸಿ ಏರಿದೇ.. 
ಚಿಪ್ಪಲ್ಲಿ ಹನಿ ಜಾರಿದೇ ಮೊಗ್ಗಲ್ಲಿ ಬಿಸಿ ಏರಿದೇ.. 
ನಿಷೇ ಜಾಲ ಬೀಸಿದಂತೇ ದಹದಹಿಸಿ ನಾ ಬೆಂಕಿ ಹೂವಾದೇ    
ಚಿಪ್ಪಲ್ಲಿ ಹನಿ ಜಾರಿದೇ ಮೊಗ್ಗಲ್ಲಿ ಬಿಸಿ ಏರಿದೇ.. 

ರೂರೂ... ರೂರುರುರೂರು  ಲಾಲಲಾಲಲಲಾ ಹೇ..ಹೇ.. 
(ಲಾಳಲ್ಲಲ್ಲಲ್ಲಾಲಲಲಾ... ಲಾಳಲ್ಲಲ್ಲಲ್ಲಾಲಲಲಾ... )
ಮತ್ತಲ್ಲಿ ನೀ ಬಂದೇ ಮಬ್ಬಲ್ಲಿ ನಾ ನಿಂದೇ ನನ್ನಲ್ಲಿ ನಿನ್ನಾಸೇ ಬಲ್ಲೇ .. 
(ತಕಧಿಮಿ ತಕಜನು  ತಕಧಿಮಿ ತಕಜನು  ತಂಗಡತೋಮ್ ತಂಗಡತೋಮ್ ತಂಗಡತೋಮ್ ) 
ಹುಬ್ಬಲ್ಲಿ ಕೈ ಚಾಚಿ ಲಿಪ್ಪಲ್ಲಿ ಮೈ ಬಾಚಿ  ಶಿಸ್ತಿನ ನಿನ್ನಾಟ ಬಲ್ಲೇ .. 
(ಬಪ್ಪರ್ ಬಪ್ಪರಲೇ.. ಹುಡುಗೀ ಬಪ್ಪರ್ )
ಸಂತೋಷದ ಉಲ್ಲಾಸಕೇ ಶೃಂಗಾರದ...  ಸಲ್ಲಾಪಕೇ ಸಂಗ ಬೇಕಾಗಿದೆ.. ಆ... ಅಹ್ಹಹ್ಹಹಹ 
(ಚಿಪ್ಪಲ್ಲಿ ಹನಿ ಜಾರಿದೇ ) ಅಹ್ಹಹ್ಹಹ್ಹಹ (ಮೊಗ್ಗಲ್ಲಿ ಬಿಸಿ ಏರಿದೇ  )
ಚಿಪ್ಪಲ್ಲಿ ಹನಿ ಜಾರಿದೇ ಮೊಗ್ಗಲ್ಲಿ ಬಿಸಿ ಏರಿದೇ  

ನಾ ಬಳ್ಳಿ ಮಿಂಚಾಗಿ ಈ ಕಾಟ ಹೆಚ್ಚಾಗಿ ಹಬ್ಬಿತು ಮೈಯ್ಯಲ್ಲಿ ದಾಹ... 
(ಸಸ ಸನಿಪನಿಸ ಪರಿಪಮಪ ಪರಿಗನಿ  ಪದನಿಸ)
ಬಿಲ್ಲಾಗಿ ನಾ ಬಾಗಿ ಹಾವಾಗಿ ನೀ ತೂಗಿ ತುಂಬಿದೇ ಅಪ್ಪುವ ಮೋಹ 
(ಭಲೇ.. ಭಲೇ.. ಭಲೇ ಮಹಾರಾಯತೀ )
ಕಣ್ಣಂಚಿನ ಸನ್ನಾಹಕೆ   ಮೈ ಸಂಚಿನ ಸಮ್ಮೋಹಕೆ ಮೇರೇ ಮೈ ಮಿರಿದೇ .. 
(ಚಿಪ್ಪಲ್ಲಿ ಹನಿ ಜಾರಿದೇ ) ಅಹ್ಹಹ್ಹಹ್ಹಹ (ಮೊಗ್ಗಲ್ಲಿ ಬಿಸಿ ಏರಿದೇ  )
ಚಿಪ್ಪಲ್ಲಿ ಹನಿ ಜಾರಿದೇ ಮೊಗ್ಗಲ್ಲಿ ಬಿಸಿ ಏರಿದೇ  
(ಚಿಪ್ಪಲ್ಲಿ ಹನಿ ಜಾರಿದೇ ) ಅಹ್ಹಹ್ಹಹ್ಹಹ (ಮೊಗ್ಗಲ್ಲಿ ಬಿಸಿ ಏರಿದೇ  ) ಅಹ್ಹಹ್ಹಹ್ಹಹ 
(ಚಿಪ್ಪಲ್ಲಿ ಹನಿ ಜಾರಿದೇ ) ಅಹ್ಹಹ್ಹಹ್ಹಹ (ಮೊಗ್ಗಲ್ಲಿ ಬಿಸಿ ಏರಿದೇ  ) ಓ.... 
-------------------------------------------------------------------------------------------------------

ಲಂಚ ಲಂಚ ಲಂಚ (೧೯೮೬) - ಈ ಜೀವ ನೆರಳಾಗಿದೆ 
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ವ್ಯಾಸರಾವ, ಗಾಯನ : ಬೆಂಗಳೂರ ಲತಾ, ಮಂಜುಳಾ  

ಜಯಂತಿ : ಈ ಜೀವ ನೆರಳಾಗಿದೆ ನಮ್ಮ ಬಾಳೆಲ್ಲ ಹೊನಲಾಗಿದೇ... 
               ಸವಿ ಸಂಪ್ರೀತಿಯೂ ಇನಿ ಹಾಡಾಗಿದೆ.. ಮನ ಜೇನಾಗಿ ತಂಪಾಗಿದೇ 
               ನಮ್ಮ ಸಂಬಂಧ ಸ್ಥಿರವಾಗಿದೇ .. 
ವಿಜಯರಂಜನಿ : ಈ ಜೀವ ನೆರಳಾಗಿದೆ ನಮ್ಮ ಬಾಳೆಲ್ಲ ಹೊನಲಾಗಿದೇ... 
ಮಹಾಲಕ್ಷ್ಮಿ : ಸವಿ ಸಂಪ್ರೀತಿಯೂ ಇನಿ ಹಾಡಾಗಿದೆ.. ಮನ ಜೇನಾಗಿ ತಂಪಾಗಿದೇ 
ಜಯಂತಿ :  ನಮ್ಮ ಸಂಬಂಧ ಸ್ಥಿರವಾಗಿದೇ .. 

ಜಯಂತಿ : ಬಂಧನ ಬಾಳಿನ ಗೀತೆಯಾಗಿದೇ ಪ್ರೇಮವೂ ಪೂಜೆಯ ಆರತಿಯಾಗಿದೇ .. 
ವಿಜಯರಂಜಿನಿ : ಬದುಕಿನ ಬಳ್ಳಿ ಹಬ್ಬಿ ನಿಂತೀದೇ.. ಒಲವಿನ ಹೂಗಳು ನಗೆಯ ಚೆಲ್ಲಿವೇ .. 
ಅರವಿಂದ : ಸ್ನೇಹ ಸಕ್ಕರೇ ಬೆರೆಸಿದ ಹಾಲು ಸಕ್ಕರೇ (ಆ)                 
                ಸ್ನೇಹ ಸಕ್ಕರೇ ಬೆರೆಸಿದ ಹಾಲು ಸಕ್ಕರೇ ಹುಟ್ಟಿದ ಈ ಸೊಪ್ಪು ಬೆರೆಸಿ ಬೆರೆಸಿ ನಾವೂ ... 
                ಕುಡಿದು ಹಾಡುವಾ         ಎಲ್ಲರು : ಅಹ್ಹಹ್ಹಹ್ಹಹ್ಹಾ.. 
ಜಯಂತಿ : ಈ ಜೀವ ನೆರಳಾಗಿದೆ ನಮ್ಮ ಬಾಳೆಲ್ಲ ಹೊನಲಾಗಿದೇ... 
ವಿಜಯರಂಜಿನಿ : ಸವಿ ಸಂಪ್ರೀತಿಯೂ ಇನಿ ಹಾಡಾಗಿದೆ.. 
ಮಹಾಲಕ್ಷ್ಮಿ : ಮನ ಜೇನಾಗಿ ತಂಪಾಗಿದೇ 
ಜಯಂತಿ :  ನಮ್ಮ ಸಂಬಂಧ ಸ್ಥಿರವಾಗಿದೇ .. 

ಮಹಾಲಕ್ಷ್ಮಿ : ಹಿರಿಯರು ಹಾಕಿದ ಗೆರೆಯ ದಾಟದೇ .. 
ವಿಜಯರಂಜಿನಿ : ಹಿರಿಯರ ಬಾಳಿನ ಬನ್ನಿಯೂ ತಾಗಿದೆ 
ಜಯಂತಿ : ಮಮತೆಯ ಭಾವ ಹರುಷ ತುಂಬಲೂ 
ಮಹಾಲಕ್ಷ್ಮಿ : ಸವಿಗನಸೆಲ್ಲಾ ನನಸೂ ಆಗಲೂ 
ಲೋಕೇಶ  : ಜೀವ ಗೆಳೆಯನೇ ಕಹಿಯನು ಮರೆತು ನಡೆಯುವಾ.. 
                ಜೀವ ಗೆಳೆಯನೇ ಕಹಿಯನು ಮರೆತು ನಡೆಯುವಾ.. 
                ಸಕ್ಕರೆಯಿನ್ನೂ ಸಾಕೂ ಎಷ್ಟು ಬೇಕೂ ನಮ್ಮಾ... ಮೂಟೆ ತುಂಬಿದೇ (ಅಹ್ಹಹ್ಹಹ್ಹಹಾ )
ಅರವಿಂದ : ನಮ್ಮಾ... ಮೂಟೆ ತುಂಬಿದೇ (ಅಹ್ಹಹ್ಹಹ್ಹಹಾ )
--------------------------------------------------------------------------------------------------------

No comments:

Post a Comment