1636. ಭವಾನಿ (೧೯೯೭)

ಭವಾನಿ ಚಲನಚಿತ್ರದ ಹಾಡುಗಳು
  1. ಹೆಣ್ಣೆಂದರೇ ಒಂದು ದೇವರೂ 
  2. ಇದೇನಾಯಿತು 
  3. ಕಣ್ಮಣಿಯೇ 
  4.  ಕನ್ನಡ ನಾಡಿನ 
  5. ಊರಿಗೂರೇ ಧಂಗೇ 
ಭವಾನಿ (೧೯೯೭) - ಹೆಣ್ಣೆಂದಂರೇ ಒಂದು ದೇವರೂ 
ಸಂಗೀತ : ವಿ.ಮನೋಹರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ 

ಹೆಣ್ಣೆಂದರೇ ಒಂದು ದೇವರೂ ಅಂತಾರೆ ಇಲ್ಲಿ ಎಲ್ಲರೂ 
ಅಂತಾದರೇ ಒಂದು ಪ್ರಶ್ನೆ ಉತ್ತರಾನೂ ಹೇಳೋರು ಯಾರೂ 
ಎದೆಯಲ್ಲಿ ಹಾಲನ್ನೇ ತುಂಬಿದ ಹೆಣ್ಣಿಗೇ .. 
ಕಣ್ಣಲ್ಲಿ ನೀರು ತುಂಬಿದೆ ಯಾಕೇ ... 
ಹೆಣ್ಣೆಂದರೇ ಒಂದು ದೇವರೂ ಅಂತಾರೆ ಇಲ್ಲಿ ಎಲ್ಲರೂ 
ಅಂತಾದರೇ ಒಂದು ಪ್ರಶ್ನೆ ಉತ್ತರಾನೂ ಹೇಳೋರು ಯಾರೂ 

ತಾಯಂತೇ ಮಗಳಂತೇ ಸೊಸೆಯಂತೇ ಹೆಣ್ಣೂ 
ಪ್ರತಿ ಗಂಡಿನ ಜಯದಲ್ಲೂ ಬೆನ್ನ ಹಿಂದೆ ಹೆಣ್ಣೂ 
ಧರಣಿಗಿಂತ ಸಹನೆ ಈ ಹೆಣ್ಣಿಗಲ್ಲವೇ.. 
ಆದಿಶಕ್ತಿಯಂತೆ ಛಲ ಇವಳಿಗಲ್ಲವೇ... 
ನಗುತಾ ಮಗೀನ ಹೊರುವ ಹೆಣ್ಣಿಗೇ .. ಬಳಿಕ ಕಂಬನಿ ಯಾಕೇ ... 
ಹೆಣ್ಣೆಂದರೇ ಒಂದು ದೇವರೂ ಅಂತಾರೆ ಇಲ್ಲಿ ಎಲ್ಲರೂ 
ಅಂತಾದರೇ ಒಂದು ಪ್ರಶ್ನೆ ಉತ್ತರಾನೂ ಹೇಳೋರು ಯಾರೂ 

ಬಿರುಗಾಳಿ ಬಿರುಸನ್ನೇ ಪಡೆಯೊಳು ಹೆಣ್ಣೂ 
ಸುಡೋ ಅಗ್ನಿಗೇ ಚಳಿಯನ್ನೇ ತರುತ್ತಾಳೋ ಹೆಣ್ಣೂ 
ಪಂಚಭೂತಗಳಿಗೂ ಈ ಹೆಣ್ಣೇ ಒಡತಿಯೂ    
ಅಷ್ಟದಿಕ್ಕುಗಳಿಗೂ ಈ ಹೆಣ್ಣೇ ಮಾರ್ಗವೂ 
ದಿಕ್ಕೂ ದಾರೀ .. ತೋರೋ .. ಹೆಣ್ಣಿಗೇ  ದಿಕ್ಕೇ ತಪ್ಪಿದೇ ಯಾಕೇ ... 
ಹೆಣ್ಣೆಂದರೇ ಒಂದು ದೇವರೂ ಅಂತಾರೆ ಇಲ್ಲಿ ಎಲ್ಲರೂ 
ಅಂತಾದರೇ ಒಂದು ಪ್ರಶ್ನೆ ಉತ್ತರಾನೂ ಹೇಳೋರು ಯಾರೂ 
ಎದೆಯಲ್ಲಿ ಹಾಲನ್ನೇ ತುಂಬಿದ ಹೆಣ್ಣಿಗೇ .. 
ಕಣ್ಣಲ್ಲಿ ನೀರು ತುಂಬಿದೆ ಯಾಕೇ ... 
ಹೆಣ್ಣೆಂದರೇ ಒಂದು ದೇವರೂ ಅಂತಾರೆ ಇಲ್ಲಿ ಎಲ್ಲರೂ 
ಅಂತಾದರೇ ಒಂದು ಪ್ರಶ್ನೆ ಉತ್ತರಾನೂ ಹೇಳೋರು ಯಾರೂ 
-----------------------------------------------------------------------------------------------------

ಭವಾನಿ (೧೯೯೭) - ಇದೇನಾಯಿತು 
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ 

ಇದೇನಾಯಿತು ಹೀಗೇಕಾಯಿತು ಏಕೆಂದು ತೋಚದು 
ಏನೋ ನೋವು ಏನೋ ಗೋಳು ಎದೆಯಲ್ಲಿ ತುಂಬಿತು 
ಆಸೆಗಳ ಕನಸುಗಳು ಒಂದೊಂದೇ ಕರಗ್ಹೊಯಿತೂ..  
ಅದೇಕೋ ಒಲವಿನ ಸಂಸಾರ ಒಡೆದಾಯಿತೂ .. 
ಇದೇನಾಯಿತು ಹೀಗೇಕಾಯಿತು ಏಕೆಂದು ತೋಚದು 

ಯಾವುದೋ ಕಾಣದ ಭೀತಿ ನೆಲೆಯಾಯಿತೇ.. 
ಯಾತಕೋ ನಂಬಿದ ನೆಲವೇ ಬಿರುಕಾಯಿತೇ... 
ಹಾಲಿನ ಪಾತ್ರೆಯಲ್ಲಿ  ಹುಳಿ ಸೇರಿತೇ.. 
ಮಮತೆಯ ಸೌಧ ಕುಸಿದೂ.. ಮಣ್ಣಾಯಿತೇ.. 
ಇದೇನಾಯಿತು ಹೀಗೇಕಾಯಿತು ಏಕೆಂದು ತೋಚದು 
ಏನೋ ನೋವು ಏನೋ ಗೋಳು ಎದೆಯಲ್ಲಿ ತುಂಬಿತು 

ಬದುಕಿಗೆ ಯಾವುದೇ ರೀತಿ ಸಿಗದಾಯಿತೇ 
ಬಂಧನದ ಹಾದಿಯೆಲ್ಲಾ ಮುಳ್ಳಾಯಿತೇ 
ಕಣ್ಣಿರಧಾರೆಯೊಂದೇ.. ಜೊತೆಯಾಯಿತೇ... 
ನುಂಗುವಾ ನೋವಿಗೆಲ್ಲಾ ನುಡಿ ಎಲ್ಲಿದೇ .. 
ಇದೇನಾಯ್ತು ಹೀಗೇಕಾಯ್ತು ಏಕೆಂದು ತೋಚದು 
ಏನೋ ನೋವು ಏನೋ ಗೋಳು ಎದೆಯಲ್ಲಿ ತುಂಬಿತು 
ಆಸೆಗಳ ಕನಸುಗಳೊದೊಂದೇ ಕರಗಹೋಯಿತು .. 
ಅದೇಕೋ ಒಲವಿನ ಸಂಸಾರ ಒಡೆದಾಯಿತು.. 
-----------------------------------------------------------------------------------------------------

ಭವಾನಿ (೧೯೯೭) - ಕಣ್ಮಣಿಯೇ 
ಸಂಗೀತ : ವಿ.ಮನೋಹರ, ಸಾಹಿತ್ಯ : ಶ್ರೀರಂಗ, ಗಾಯನ : ಎಸ್.ಪಿ.ಬಿ 

ಕಣ್ಮಣಿಯೇ ಕಣ್ಮಣಿಯೇ ನನ್ನರಗಿಣಿ ಮಲಗಮ್ಮ ಮಲಗು ನೀ ಮುದ್ದು ಮಣಿ 
ನಾ ಹಾಡುವೇ ... ಈ ಜೋಗುಳಾ..  ಲಾಲೀ...  ಲಾಲೀ...  ಲಾಲೀ...  
ಲಾಲೀ...  ಲಾಲೀ...  ಲಾಲೀ...  
ಕಣ್ಮಣಿಯೇ ಕಣ್ಮಣಿಯೇ ನನ್ನರಗಿಣಿ ಮಲಗಮ್ಮ ಮಲಗು ನೀ ಮುದ್ದು ಮಣಿ 

ಮುದ್ದಾಗಿ ಮಲಗೇ ಕೆಂದಾವರೇ ಬೆಚ್ಚನೆಯ ಈ ಮಡಿಲೇ ನಿನಗಾಸರೆ 
ಆ ಬಾನ ತುಂಬೆಲ್ಲ ಇರುಳಿನ ಹೊದಿಕೆ ಓ ಜಾಣೆ ನಿನಗಿಲ್ಲಿ ಈ ಕರುಳ ಹರಕೆ 
ನೀ ನಕ್ಕರೇ .. ಬೆಳದಿಂಗಳೂ ... .  ಲಾಲೀ...  ಲಾಲೀ...  ಲಾಲೀ...  
ಲಾಲೀ...  ಲಾಲೀ...  ಲಾಲೀ...  
ಓ ಚೆಲುವೇ ನಿನಗಲ್ಲ ಆ ಜೋಗುಳ ಮಲಗದಿರು ಕಾದಿಹದು ಎದೆಯಂಗಳ 

ಬಳುಬಳುಕೋ ನಡುವ ತುಂಟಾಟಕೆ ನಶೆಯೇರಿ ಸೋತೆ ಓ ಬಾಲಿಕೆ 
ಈ ಘಳಿಗೆ ರಸಘಳಿಗೆ ಜೊತೆಗಿರಲು ಮೈತ್ರಿ 
ಮತ್ತಿನಲಿ ಮುತ್ತಿಟ್ಟು ಕಳೆಯೋಣ ರಾತ್ರೀ 
ಇಡೀ ರಾತ್ರಿಯೇ... ಶಿವರಾತ್ರಿಯೇ... ಏಳು.. ಊಂ.. ಹೂಂ .. ಏಳೂ 
ಓ ಚೆಲುವೇ ನಿನಗಲ್ಲ ಆ ಜೋಗುಳ ಮಲಗದಿರು ಕಾದಿಹದು ಎದೆಯಂಗಳ 
ಮಧುಮಾಸದಾ... ಮಧು ನೀಡಲೂ... ಏಳು.. ಊಂ.. ಹೂಂ .. ಏಳೂ 
ಏಳು.. ಊಂ.. ಹೂಂ .. 
-----------------------------------------------------------------------------------------------------

ಭವಾನಿ (೧೯೯೭) - ಕನ್ನಡ ನಾಡಿನ 
ಸಂಗೀತ : ವಿ.ಮನೋಹರ, ಸಾಹಿತ್ಯ : ಎಂ.ಏನ್.ವ್ಯಾಸರಾವ, ಗಾಯನ :  ಡಾ|| ರಾಜಕುಮಾರ 

(ಆಆಆ... ಆಆಆ..  ಆಆಆ )
ಕನ್ನಡ ನಾಡಿನ ಹೆಮ್ಮೆಯ ಹೆಣ್ಣಿನ ಕ್ರಾಂತಿ ನವೋದಯ ಶೋಭಿಸಲೀ 
ವಿಜಯ ದುಂದುಭಿ ನಾದವು ತುಂಬುವ ದಿಗ್ವಿಜಯೋತ್ಸವ ರಂಜಿಸಲೀ .. 
ಜಗದಲಿ ನೀ ಮೇರೇ ಬ್ರಹ್ಮ ಮಹೋತ್ಸವ ಕೀರ್ತಿ ಪತಾಕೆಯ ಬಾನಿನಲಿ 
ವಿಜಯಿಸು ನೀ ಮದ್ಯಾಸುರ ಮರ್ಧಿನಿ ಶುದ್ಧ ಚರಿತ್ರೆಯು ವರ್ಧಿಸಲೀ 
ಶುದ್ಧ ಚರಿತ್ರೆಯು ವರ್ಧಿಸಲೀ  

(ಆಆಆ... ಆಆಆ..  ಆಆಆ )
ದಾಸ್ಯದ ಶೈಯಿಲೇ ನೀಗಿದರೂ ಮತಿ ಭ್ರಷ್ಟರ ಕೌರ್ಯವೂ ಹಿಂಸಿಸಿದೇ 
ಪಾನ ಪಿಶಾಚಿಯ ಭೀಕರ ರೌಧ್ರದ ರಾಕ್ಷಸ ರಾಜ್ಯವು ಕೊಬ್ಬುತಿದೇ 
(ಆಆಆ... ಆಆಆ..  ಆಆಆ )
ದಾಸ್ಯದ ಶೈಯಿಲೇ ನೀಗಿದರೂ ಮತಿ ಭ್ರಷ್ಟರ ಕೌರ್ಯವೂ ಹಿಂಸಿಸಿದೇ 
ಪಾನ ಪಿಶಾಚಿಯ ಭೀಕರ ರೌಧ್ರದ ರಾಕ್ಷಸ ರಾಜ್ಯವು ಕೊಬ್ಬುತಿದೇ 
ಹತ್ಯಾಕಾಂಡವು ತಾಂಡವವಾಡಿ ಅತ್ಯಾಚಾರವು ಮೀರುತಿದೆ 
ವಿಜಯಿಸು ನೀ ಮದ್ಯಾಸುರ ಮರ್ಧಿನಿ ಶುದ್ಧ ಚರಿತ್ರೆಯು ವರ್ಧಿಸಲೀ 
ಶುದ್ಧ ಚರಿತ್ರೆಯು ವರ್ಧಿಸಲೀ  

(ಆಆಆ... ಆಆಆ..  ಆಆಆ )
ಹೆಂಡತಿ ಮಕ್ಕಳ ಹೊಟ್ಟೆಗೆ ಹೊಡೆದು ಹೆಂಡದ ಬಂಡೆಯು ತುಂಬುತಿದೇ 
ನಾನಾ ರೋಗದ ಹೆಮ್ಮಾರಿಯು ತಾ ಕೆನ್ನಾಲಿಗೆಯನು ಚಾಚುತಿದೇ 
(ಆಆಆ... ಆಆಆ..  ಆಆಆ )
ಹೆಂಡತಿ ಮಕ್ಕಳ ಹೊಟ್ಟೆಗೆ ಹೊಡೆದು ಹೆಂಡದ ಬಂಡೆಯು ತುಂಬುತಿದೇ 
ನಾನಾ ರೋಗದ ಹೆಮ್ಮಾರಿಯು ತಾ ಕೆನ್ನಾಲಿಗೆಯನು ಚಾಚುತಿದೇ 
ದೇಶ ದ್ರೋಹದ ಭೃಷ್ಟಾಚಾರವು ದುಷ್ಟ ಪ್ರಪಂಚವ ಸೃಷ್ಟಿಸಿದೆ 
ವಿಜಯಿಸು ನೀ ಮದ್ಯಾಸುರ ಮರ್ಧಿನಿ ಶುದ್ಧ ಚರಿತ್ರೆಯು ವರ್ಧಿಸಲೀ 
ಶುದ್ಧ ಚರಿತ್ರೆಯು ವರ್ಧಿಸಲೀ  

(ಆಆಆ... ಆಆಆ..  ಆಆಆ )
ಭಾರತಾಂಬೆಯ ಭಾಗ್ಯದ ಸಂತತಿ ನಿತ್ಯ ದರಿದ್ರವ ಕಾಣಲಿದೇ 
ಬರ್ಬರ ದುಃಖದ ವಿನಾಶದಂಚಿಗೆ ದೈತ್ಯರ ಕ್ರೌರ್ಯವು ತಳ್ಳುತಿದೆ 
(ಆಆಆ... ಆಆಆ..  ಆಆಆ )
ಭಾರತಾಂಬೆಯ ಭಾಗ್ಯದ ಸಂತತಿ ನಿತ್ಯ ದರಿದ್ರವ ಕಾಣಲಿದೇ 
ಬರ್ಬರ ದುಃಖದ ವಿನಾಶದಂಚಿಗೆ ದೈತ್ಯರ ಕ್ರೌರ್ಯವು ತಳ್ಳುತಿದೆ 
ಉದ್ದರಿಸೇ ಈ ಮೂಢ ಜನಾಂಗವೂ ಪ್ರಪಾತದಲ್ಲಿ ಬೀಳಲಿದೆ.. 
ವಿಜಯಿಸು ನೀ ಮದ್ಯಾಸುರ ಮರ್ಧಿನಿ ಶುದ್ಧ ಚರಿತ್ರೆಯು ವರ್ಧಿಸಲೀ 
ವಿಜಯಿಸು ನೀ ಮದ್ಯಾಸುರ ಮರ್ಧಿನಿ ಶುದ್ಧ ಚರಿತ್ರೆಯು ವರ್ಧಿಸಲೀ 
ಅಮ್ಮಾ... ಅಮ್ಮಾ... ಅಮ್ಮಾ... 
 -----------------------------------------------------------------------------------------------------

ಭವಾನಿ (೧೯೯೭) - ಊರಿಗೂರೇ ಧಂಗೇ 
ಸಂಗೀತ : ವಿ.ಮನೋಹರ, ಸಾಹಿತ್ಯ : ರಮೇಶಚಂದ್ರ, ಗಾಯನ : ಉಮಾಶ್ರೀ 

ಊರಿಗೂರೇ ದಂಗೇ ಎದ್ದೇಳಿ ಏನು ನಿಂಗೇ  
ಭುಗಿಲೇಳೋ ಬೆಂಕಿ ಕುಳಿತು ಹೆಗಲೇರಿ 
ತೆಲೆಕೆಡಿಸಿ ಮಾಡಲು ಅಟ್ಟಹಾಸ 
ಗಾಂಧೀ ಹೇಳಿದ ಗೊತ್ತ ಮೂರೂ ಮುಚ್ಚಿಕೋ ಅಂತಾ.. 
ಮರೆತೇನೂ ಆ ಮಾತ ಮಂಕುತಿಮ್ಮಾ .. 
ಕಣ್ಣಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚಹೋಯ್ತೋ... 
ಊರಿಗೂರೇ ದಂಗೇ ಎದ್ದೇಳಿ ಏನು ನಿಂಗೇಲೇ..   

(ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ) 
ಕೆಚ್ಚಲ ಹಿಂಡುವ ಜನರೇ ಕೊಚ್ಚುವಾ ಹಾಗೇ (ಆಆಆ.. ಆಆಆ.. ) 
ಬಚ್ಚಲ ಬಳಿಗೆ ಒಯ್ದರೂ ದೇಶವಾ ಹೀಗೇ 
ಲೋ.. ಕುರುಡರ ಊರುಗೋಲು ಕುಡುಕರ ಕೈಗಹೋಯಿತು  
ನಾಡಿನಾ ಹರಿಗೋಲು ಬೀದಿಯಲ್ಲಿ ಹೊಂಟಹೋಯ್ತು.. 
ದೊಡ್ಡವರೇ ಸೋಗ ಹಾಕೀ ಬೀಗುವಾಗ.. 
ಕೋಣನ ಮುಂದೆ ಕಿನ್ನರಿ ಯಾತಕ್ಕೋ ಲೋ   
ಗಾಂಧೀ ಹೇಳಿದ ಗೊತ್ತ ಮೂರೂ ಮುಚ್ಚಿಕೋ ಅಂತಾ.. 
ಮರೆತೇನೂ ಆ ಮಾತ ಮಂಕುತಿಮ್ಮಾ .. 
ಕಣ್ಣಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚಹೋಯ್ತೋ... 
ಊರಿಗೂರೇ ದಂಗೇ ಎದ್ದೇಳಿ ಏನು ನಿಂಗೇಲೇ..   

(ರವರವ ರವ ರವ ರವವವವ) 
ಮೀಸೆಯ ಮುದುರಿ ಕುಳಿತ ಎಲ್ಲರ ನಿದಿರೆ 
ನಾಡಿನ ಶಾಂತಿಗೆ ಎಂದು ಬಿಸಿಲಾ ಕುದುರೇ .. 
ಹೇ... ಗೃಹಮಂತ್ರಿ ಗುಂಡಿಟ್ಟ ಹಣಮಂತ್ರಿ ದೋಚಿ ಬಿಟ್ಟ 
ವಿದ್ಯಾಮಂತ್ರಿ ಕಣ್ಣಬಿಟ್ಟ ಕಾನೂನಿನ ಮುಂದಿಟ್ಟ 
ಕತ್ತುಗಳೇ ಕಟಿಂಗ್ ಆಗುವಾಗ 
ಹೇರ್ ಕಟಿಂಗ್ನ್ ಚಿಂತೇ .. ಯಾಕ್ರೋ ನಿಮಗೇಲೇ 
ಗಾಂಧೀ ಹೇಳಿದ ಗೊತ್ತ ಮೂರೂ ಮುಚ್ಚಿಕೋ ಅಂತಾ.. 
ಮರೆತೇನೂ ಆ ಮಾತ ಪುಂಗಿದಾಸ  .. 
ಕಣ್ಣಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು ಎಲ್ಲಾ ಮುಚ್ಚೋ.. 
ಹರ ಹರ ದೇಶ ಮುಚ್ಚಹೋಯ್ತೋ... 
ಊರಿಗೂರೇ ದಂಗೇ ಎದ್ದೇಳಿ ಏನು ನಿಂಗೇಲೇ..   
ಭುಗಿಲೇಳೋ ಬೆಂಕಿ ಕುಳಿತು ಹೆಗಲೇರಿ 
ತೆಲೆಕೆಡಿಸಿ ಮಾಡಲು ಅಟ್ಟಹಾಸ 
ಗಾಂಧೀ ಹೇಳಿದ ಗೊತ್ತ ಮೂರೂ ಮುಚ್ಚಿಕೋ ಅಂತಾ.. 
ಮರೆತೇನೂ ಆ ಮಾತ ಪುಂಗಿದಾಸ  .. 
ಕಣ್ಣಮುಚ್ಚು.. ಬಾಯ್ ಮುಚ್ಚು.. ಕಿವಿ ಮುಚ್ಚು ಎಲ್ಲಾ ಮುಚ್ಚಲೇ .. 
ಹರ ಹರ ದೇಶ ಮುಚ್ಚಹೋಯ್ತೋ... 
ಊರಿಗೂರೇ ದಂಗೇ ಎದ್ದೇಳಿ ಏನು ನಿಂಗೇ ಲೇ..   
----------------------------------------------------------------------------------------------------

No comments:

Post a Comment