1638. ಕುರುಬನ ರಾಣಿ (೧೯೯೮)

ಕುರುಬನ ರಾಣಿ ಚಲನಚಿತ್ರದ ಹಾಡುಗಳು 
  1. ಮಾಂಗಲ್ಯಮಾಂಗಲ್ಯ ಮುತ್ತೈದೆಹೆಣ್ಣಿಗೆ
  2. ಬಾರೇ ನನ್ನ ಕುರುಬನ ರಾಣಿ 
  3. ಯವ್ವಿ ಯಾರವ್ವಿ ಇವಳು ಹೇಳಲೇ 
  4. ಬಣ್ಣ ಬಣ್ಣದ ಪ್ರೀತಿ 
  5. ಬಾರಯ್ಯ ಭಾಗೀರತಿ ಭಾಗ್ಯದೊಡತಿ 
  6. ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ 
  7. ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ 
ಕುರುಬನ ರಾಣಿ (೧೯೯೮) - ಮಾಂಗಲ್ಯಮಾಂಗಲ್ಯ ಮುತ್ತೈದೆ ಹೆಣ್ಣಿಗೆ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ :  ಚಿತ್ರಾ, ಕೋರಸ್  

ಮಾಂಗಲ್ಯ ಮಾಂಗಲ್ಯ ಮುತ್ತೈದೆ ಹೆಣ್ಣಿಗೆ ಸಿಂಗಾರವು 
ಮಾಂಗಲ್ಯವೆಂಬೋದು ಕುಲನಾರಿಗೆ ನಿತ್ಯ ಸೌಭಾಗ್ಯವು
ನಗವು ಇದೆ.... ನಗುವು ಇದೆ... ಜಗವೆಲ್ಲವೂ.. ಹಾರೈಸುವ..
ಮುಕ್ಕೋಟಿ ದೇವರ ಸಾಕ್ಷಿ ಇದೆ
ಮಾಂಗಲ್ಯಮಾಂಗಲ್ಯ ಮುತ್ತೈದೆಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು ಕುಲನಾರಿಗೆ ನಿತ್ಯ ಸೌಭಾಗ್ಯವು

ಮಾಂಗಲ್ಯವೆಂಬೋದು ಕಳಚಿಡುವ ಸರವಲ್ಲ ಬಿಡಿಸದಿರೊ ಗಂಟು ಇದು
ಗಂಡಾಗಿ ಹೆಣ್ಣಾಗಿ ಇದ್ದವರು ಗಂಡ ಹೆಂಡಿರಾಗೋ ನಂಟು ಇದು
ಸುಖವೇನೆ ನೋವೇನೆ ಬಂದಾಗಲೂಕಂಗೆಡದೆ ಕಾಯೋದೆ ಪತಿಧರ್ಮವು
ಪತಿ ಹಾಕಿದ .... ಗೆರೆ ದಾಟದೆ ... ಇತಿಮಿತಿಯಲಿರುವುದೆ ಸತಿ ಧರ್ಮವು
ಮಾಂಗಲ್ಯಮಾಂಗಲ್ಯ ಮುತ್ತೈದೆಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು ಕುಲನಾರಿಗೆ ನಿತ್ಯ ಸೌಭಾಗ್ಯವು

ಕೈ ಹಿಡಿದು ನಡೆಯೋಳ ಕೈ ಬಿಟ್ಟು ನಡೆದಾರೆ ಸ್ವರ್ಗದಲು ನರಕ ಇದೆ
ಕಣ್ಣಾಗೋ ಸತಿಮಣಿಗೆ ಕಣ್ಣೀರು ತಂದಾರೆ ಏಳಿಗೆಯ ಮಾತೆಲ್ಲಿದೆ
ಕಡೆವರೆಗು ಕಾದಿರುವ ಆಣೆ ಇದೆ ವಂಶಾನ ಬೆಳೆಸುವ ವರವೂ ಇದೆ
ರೆಪ್ಪೇಯಲಿ.. ಕಣ್ಣಂತೆಯೆ.. ಹೆಣ್ತನವ ಕಾಪಾಡೋ ಹೊರೆಯು ಇದೆ
ಮಾಂಗಲ್ಯಮಾಂಗಲ್ಯ ಮುತ್ತೈದೆಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು ಕುಲನಾರಿಗೆ ನಿತ್ಯ ಸೌಭಾಗ್ಯವು
ನಗವು ಇದೆ.... ನಗುವು ಇದೆ... ಜಗವೆಲ್ಲವೂ.. ಹಾರೈಸುವ..
ಮುಕ್ಕೋಟಿ ದೇವರ ಸಾಕ್ಷಿ ಇದೆ
ಮಾಂಗಲ್ಯಮಾಂಗಲ್ಯ ಮುತ್ತೈದೆಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬೋದು ಕುಲನಾರಿಗೆ ನಿತ್ಯ ಸೌಭಾಗ್ಯವು
--------------------------------------------------------------------------------------------------------------

ಕುರುಬನ ರಾಣಿ (೧೯೯೮) - ಬಾರೇ ನನ್ನ ಕುರುಬನ ರಾಣಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ :  ರಾಜೇಶ 

ಟ್ರೂರರರ್ .... 
ಬಾರೇ ಬಾರೇ ಬಾರೇ ಬಾರೇ ಬಿಂದಿಗೆಯಾ ಮೊರೆ ತೊರೆ ಬಾರೇ ನನ್ನ ಕುರುಬನ ರಾಣಿ 
ಕೋಟಿ ಕೋಟಿ ಚುಕ್ಕಿ ತಾರೇ ಎಲ್ಲ ಸೇರಿ ಎರಕ ಹೊಯ್ದ ನನ್ನ ಗೊಂಬೆ ಕಿಲ ಕಿಲ ರಾಣಿ 
ಓ.. ಯಪ್ಪೋ ಯಪ್ಪೋ ರೂಪ ಇವಳು ನೀಲಾಂಜನ ದೀಪ 
ಅಹ್ ಭೂಮ್ಯಾಗೆ ಅಪರೂಪ ಇವಳು ನನ್ನ ಹೃದಯದ ದೀಪ 
ಹೆಂಗವಳೂ ದುಂಡು ದುಂಡು ಕೊಬ್ಬಿದ ಕುರಿ ಸೂಪ್ಸ್ ಸೂಪು 
ಬಾರೇ ಬಾರೇ ಬಾರೇ ಬಾರೇ ಬಿಂದಿಗೆಯಾ ಮೊರೆ ತೊರೆ ಬಾರೇ ನನ್ನ ಕುರುಬನ ರಾಣಿ 
ಕೋಟಿ ಕೋಟಿ ಚುಕ್ಕಿ ತಾರೇ ಎಲ್ಲ ಸೇರಿ ಎರಕ ಹೊಯ್ದ ನನ್ನ ಗೊಂಬೆ ಕಿಲ ಕಿಲ ರಾಣಿ 
 
ಮಲ್ಲಿ ಮಲ್ಲಿ ಮಲ್ಲರ ಮಲ್ಲಿ ಬಿನ್ನಾಣತನ ವಯ್ಯಾರತನ ಸಾಕಲೇ 
ಜೋಲಿ ಜೋಲಿ ಜೋಕು ಜೋಲಿ ನೆರಳ ಸಾಕೋ ಹೈದನ ಮಾತು ಕೇಳಲೇ 
ಯಪ್ಪೋ ಮೋನ್ನೆ ವರೆಗೂ ನಾನು ಬರಿ ಕುರಿ ಕಾಯೋ ಕುರುಬ 
ಯಮ್ಮೋ ನೆನ್ನೆಯಿಂದ ನಿನ್ನ ಪ್ರೀತೀಗ ನಾನು ಹಳುಬ
ಬಾರಮ್ಮೀ.. ನಡಿ ನಡಿ ಮನೀಕ ನಡಿ ಸೂಕು ಸೂಕು 
ಬಾರೇ ಬಾರೇ ಬಾರೇ ಬಾರೇ ಬಿಂದಿಗೆಯಾ ಮೊರೆ ತೊರೆ ಬಾರೇ ನನ್ನ ಕುರುಬನ ರಾಣಿ 
ಕೋಟಿ ಕೋಟಿ ಚುಕ್ಕಿ ತಾರೇ ಎಲ್ಲ ಸೇರಿ ಎರಕ ಹೊಯ್ದ ನನ್ನ ಗೊಂಬೆ ಕಿಲ ಕಿಲ ರಾಣಿ 
ಓ.. ಯಪ್ಪೋ ಯಪ್ಪೋ ರೂಪ ಇವಳು ನೀಲಾಂಜನ ದೀಪ 
ಅಹ್ ಭೂಮ್ಯಾಗೆ ಅಪರೂಪ ಇವಳು ನನ್ನ ಹೃದಯದ ದೀಪ 
ಹೆಂಗವಳೂ ದುಂಡು ದುಂಡು ಕೊಬ್ಬಿದ ಕುರಿ ಸೂಪ್ಸ್ ಸೂಪು 

ಮುತ್ಯಾಲ್ಲಮ್ಮ ಮಂಕಾಳಮ್ಮ ಹಿಂಗ್ಯಾಕಮ್ಮಾ ಮೀನಂಗೇ ನೀ ಜಾರುತೀ 
ಅರೆರೇ ನಾಜೂಕಮ್ಮಾ ಪೋಷಕಮ್ಮಾ ಎತ್ತಕೊಂಡು ಹೋಗುವ ನಾನೇ ಭೂಪತಿ 
ಚಿಟ್ಟೆ ಹಿಂಗ್ಯಾಕೆ ಕೈ ಕೊಟ್ಟೆ ಇವರ ಸಹವಾಸದಿಂದ ಕೆಟ್ಟೆ 
ಇನ್ನಿಲ್ಲೇ ನೀನು ಇದ್ರೇ ನಿನ್ನ ಮಾನ ಮುರಾಬುಟ್ಟೇ 
ಬಾರಮ್ಮೀ.. ನಡಿ ನಡಿ ಮನೀಕ ನಡಿ ಸೂಕು ಸೂಕು 
ಬಾರೇ ಬಾರೇ ಬಾರೇ ಬಾರೇ ಬಿಂದಿಗೆಯಾ ಮೊರೆ ತೊರೆ ಬಾರೇ ನನ್ನ ಕುರುಬನ ರಾಣಿ 
ಕೋಟಿ ಕೋಟಿ ಚುಕ್ಕಿ ತಾರೇ ಎಲ್ಲ ಸೇರಿ ಎರಕ ಹೊಯ್ದ ನನ್ನ ಗೊಂಬೆ ಕಿಲ ಕಿಲ ರಾಣಿ 
ಓ.. ಯಪ್ಪೋ ಯಪ್ಪೋ ರೂಪ ಇವಳು ನೀಲಾಂಜನ ದೀಪ 
ಅಹ್ ಭೂಮ್ಯಾಗೆ ಅಪರೂಪ ಇವಳು ನನ್ನ ಹೃದಯದ ದೀಪ 
ಹೆಂಗವಳೂ ದುಂಡು ದುಂಡು ಕೊಬ್ಬಿದ ಕುರಿ ಸೂಪ್ಸ್ ಸೂಪು 
ವಾಹ್ಹರೇ ..ವಾಹ್ಹರೇ .. ಬಾರೇ ಬಾರೇ ಬಿಂದಿಗೆಯಾ ಮೊರೆ ತೊರೆ 
ಬಾರೇ ನನ್ನ ಕುರುಬನ ರಾಣಿ ಹೋಯ್ ಹೋಯ್ 
ಕೋಟಿ ಕೋಟಿ ಚುಕ್ಕಿ ತಾರೇ ಎಲ್ಲ ಸೇರಿ ಎರಕ ಹೊಯ್ದ 
ನನ್ನ ಗೊಂಬೆ ಕಿಲ ಕಿಲ ರಾಣಿ... ಟ್ರೂರರರ್ .... 
-------------------------------------------------------------------------------------------------------------------------

ಕುರುಬನ ರಾಣಿ (೧೯೯೮) - ಯವ್ವಿ ಯಾರವ್ವಿ ಇವಳು ಹೇಳಲೇ 
ಸಂಗೀತ : ವಿ.ಮನೋಹರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ :  ರಾಜೇಶ 

ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 
ತಂದಾನ ತಂದಾನ ಬಂದಾಳೋ ಚಂಚಲೇ ಚಂದನ ಚಂದನ ತಂದಾಳೋ ಶೀತಲೇ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 

ಕೋಲು ಮಲ್ಲಿಗೆ ಕೋಲು ಕೋಲೇ ಕೋಲು ಸಂಪಿಗೇ ಕೋಲು ಕೋಲೇ... ಚ ಚ ಚ ಚ 
ಕೋಲು ಮಲ್ಲಿಗೆ ಕೋಲು ಕೋಲೇ ಕೋಲು ಸಂಪಿಗೇ ಕೋಲು ಕೋಲೇ... ಚ ಚ ಚ ಚ 
ಹಸಿರಾದ ಹೊಲದಾಗೆ ಆತ್ತಲಾಗೇ ಇತ್ತಲಾಗೇ ಹುಚ್ಚೇಲ್ಲೂ ಕೂಗಾಡ್ಯಾವೇ 
ಹಾಂ... ಕೆಂಬಾರ ಮುಗಿಲಾಗೆ ಚುಕ್ಕಿಯೂ ಹೊಳೆದಂಗೇ ಬೆಳ್ಳಕ್ಕಿ ಹಾರಾಡ್ಯಾವೇ   
ಹಳ್ಳ ಕೊಳ್ಳ ಹರಿದಾಡ್ಯಾವೇ ಅಲ್ಲೇ ಕುರಿ ಮ್ಯಾಕೇ  ನೆಗೆದಾಡ್ಯಾವೇ 
ಚೆಂದುಳ್ಳಿ ಚೆಲುವೇರು ಸಾಗ್ಯಾವರೇ ಸಾಲಾಗಿ ಟೀಂ ಟಿನ್ ಕಾಲ್ಗೆಜ್ಜೆ ನುಡದ್ಯಾವೇ ವೈನಾಗಿ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 

ರೀ.... ತಾನ ... ನಾ... ತಂದಾನೋ.... ತಂದಾನೇ ... ನೀನೇನ್ ನೀ ನಾ.. 
ತೇರಿಗೆ ಬಾಡಿನೂಟ ತೇರಿಗೆ ಪಾಯಸದ ಊಟ 
ದೂರಾದಾಗೇ ಬೆಟ್ಟಗಳು ತೆಪ್ಪೆಗೇನೇ ದೇವರಂಗೆ ಸುಮ್ಮಕೇನೇ ಕುಂತಕೊಂಡಾವೇ 
ಎಲೆ ಬಳ್ಳಿ ಮರದಾಗೆ ಒಂದಕೊಂಡು ತಬ್ಬಕೊಂಡು ಸೊಂಪಾಗಿ ಮೆರೆದಾಡ್ಯಾವೇ 
ಕಾಡು ಮೇಡು ಮಾತಾಡ್ಯಾವೇ ಹಾದಿ ಅಂಕು ಡೊಂಕು ಒಳ್ಳಡ್ಯಾವೇ 
ಭೂಲೋಕ ರಂಗಾಗಿ ಸ್ವರ್ಗಾನೇ ಆಗೈತೇ 
ಕುರಿ ಮಂದೆ ಮೇಯ್ಕೊಂಡು ಹಾಯಾಗೀ ಸಾಗೈತೇ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 
ತಂದಾನ ತಂದಾನ ಬಂದಾಳೋ ಚಂಚಲೇ ಚಂದನ ಚಂದನ ತಂದಾಳೋ ಶೀತಲೇ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 
ಯವ್ವಿ ಯಾರವ್ವಿ ಇವಳು ಹೇಳೇಲೇ ಸುವ್ವಿ ಸುವ್ವಾಲೇ ಹಾಡೇ ಕೋಮಲೇ 
----------------------------------------------------------------------------------------------

ಕುರುಬನ ರಾಣಿ (೧೯೯೮) - ಬಣ್ಣ ಬಣ್ಣದ ಪ್ರೀತಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ :  ರಾಜೇಶ, ಪ್ರಿತಿಸಿಂಗ್  

ಬಣ್ಣ ಬಣ್ಣದ ಪ್ರೀತಿ ಮಂಜು ಕರಗೋ ರೀತಿ ಪ್ರೀತಿ ಬಿಸಿಲ ಕುದುರೆ ತರಹ 
ಪ್ರೀತಿ ಮಾತೆಲ್ಲ ಭ್ರಮೆಯೂ ಸುಳ್ಳಲ್ಲಾ ಯಾಕೆ ಬೇಕು ಸನಿಹ ವಿರಹ 
ಬಣ್ಣ ಬಣ್ಣದ ಪ್ರೀತಿ ನೀಲಿ ಬಾನಿನ ರೀತಿ ಪ್ರೀತಿ ಮುಂದೆ ಎಲ್ಲಾ ಒಂದೇನೆ  
ಆ ಕೋಟಿ ದ್ಯಾವರು ತಡೆ ಹಾಕಲಾರರು ತಲೆ ಬಾಗೋ ಪ್ರೀತಿ ಇದು 

ಈ ಪ್ರೀತಿ ಸುಳಿಯಲಿ ಸುಳಿದಾಡೋ ಜೀವಕೆ ದಡವೆಂದು ಬಳಿ ಬಾರದು 
ಆ ಗಗನ ಕುಸುಮಾನೇ ಕೈ ಸೇರಿದ ರೀತಿ ನೂರಾರು ನೋವಿಗೆ ಮದ್ದಾಯಿತು ಈ ಪ್ರೀತಿ 
ಈ ಬೆಸುಗೆ ಎಂದೂ ಹೀಗೇನೇ .. 
ಬಣ್ಣ ಬಣ್ಣದ ಪ್ರೀತಿ ನೀಲಿ ಬಾನಿನ ರೀತಿ ಪ್ರೀತಿ ಮುಂದೆ ಎಲ್ಲಾ ಒಂದೇನೆ  
ಆ ಕೋಟಿ ದ್ಯಾವರು ತಡೆ ಹಾಕಲಾರರು ತಲೆ ಬಾಗೋ ಪ್ರೀತಿ ಇದು 

ಕನಸಲಿ ಈ ಪ್ರೀತಿ ಹಂಚೋದು ಎಂದು ನನಸಲ್ಲಿ ಅದು ನಿಲ್ಲದು 
ನನ್ನ ಪ್ರೀತಿಲಿ ಅಳುಕು ಹುಳಕಿಲ್ಲ ನನ್ನ ಮೊರೆಯಲ್ಲಿ ಬೇರಾಗೋ ಭಯವಿಲ್ಲ 
ದ್ಯಾವರಿಗೂ ಹೆಚ್ಚು ಪ್ರೀತಿನೇ 
ಬಣ್ಣ ಬಣ್ಣದ ಪ್ರೀತಿ ಮಂಜು ಕರಗೋ ರೀತಿ ಪ್ರೀತಿ ಬಿಸಿಲ ಕುದುರೆ ತರಹ 
ಪ್ರೀತಿ ಮಾತೆಲ್ಲ ಭ್ರಮೆಯೂ ಸುಳ್ಳಲ್ಲಾ ಯಾಕೆ ಬೇಕು ಸನಿಹ ವಿರಹ 
ಬಣ್ಣ ಬಣ್ಣದ ಪ್ರೀತಿ ನೀಲಿ ಬಾನಿನ ರೀತಿ ಪ್ರೀತಿ ಮುಂದೆ ಎಲ್ಲಾ ಒಂದೇನೆ  
ಆ ಕೋಟಿ ದ್ಯಾವರು ತಡೆ ಹಾಕಲಾರರು ತಲೆ ಬಾಗೋ ಪ್ರೀತಿ ಇದು 
----------------------------------------------------------------------------------------------------

ಕುರುಬನ ರಾಣಿ (೧೯೯೮) - ಬಾರಯ್ಯ ಭಾಗೀರತಿ ಭಾಗ್ಯದೊಡತಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ :  ರಾಜೇಶ, ಚಿತ್ರಾ 

ಬಾರವ್ವ ಭಾಗೀರಥಿ ಭಾಗ್ಯದೊಡತೀ ಮನೆ ತುಂಬಿ ನಿಲ್ಲವ್ವಾ ಮುದ್ದು ಪಾರ್ವತಿ 
ಮಹಾಲಕ್ಷ್ಮಿ ರೂಪವೇ ಮಂಗಳದ ರೂಪವೇ ಶ್ರೀದೇವಿ ಶುಭವೇ ವರದೇವಿ 
ಚೆಂದುಳ್ಳಿ ಚೆಲ್ವಿಗೇ ಮುತ್ತಿನಾರತೀ ಅರಸು ಕುಮಾರಿಗೇ ಚಂದಾದಾರತಿ 
ಹೂನಾಗ ಸಂಪಿಗೆ ತಣ್ಣೀರೇ ಕನ್ಯೆಗೇ ಹೂ ರಾಶಿ ಹಾಸಿರೇ ಕುಸುಮಿಗೇ 
ಅರಸೀ ಬಂದಳೋ ಅರಸೀ ಚಂದಿರ ಮುಖಿ ಸುರಾ ಸರಸಿ 
ಅರಸಿ ಬಂದಾಳೋ ಅರಸಿ ಸರ ಸಾರ ಸರ ಸರಸಿ 
ಮನೆಯ ಬೆಳಗುವಳೇ ಮನಸ ಒಳಗವಳೇ 
ಮನೆ ಮನೆ ಮನೆ ಮನೆ ಮನೆಯರಗಿಣಿ 
ಬಾರವ್ವ ಬಾರೇ ಗೌರವ್ವ ಕುರುಬನ ರಾಣಿ ಬಾರವ್ವ 
ಅರಸೀ ಬಂದಳೋ ಅರಸೀ ಚಂದಿರ ಮುಖಿ ಸುರಾ ಸರಸಿ 
ಅರಸಿ ಬಂದಾಳೋ ಅರಸಿ ಸರ ಸಾರ ಸರ ಸರಸಿ 
ಮನೆಯ ಬೆಳಗುವಳೇ ಮನಸ ಒಳಗವಳೇ 
ಮನೆ ಮನೆ ಮನೆ ಮನೆ ಮನೆಯರಗಿಣಿ 
ಬಾರವ್ವ ಬಾರೇ ಗೌರವ್ವ ಕುರುಬನ ರಾಣಿ ಬಾರವ್ವ

ಕಳಶದ ಮೊಗದವಳು ಕುಶಲದ ನಗೆಯವಳು 
ಸುಗುಣದ ಸಿರಿಯವಳು ಕೊಡುಗೈ ಹಿಡಿಯವಳು 
ಲಾವಣ್ಯದಾಗೇ ಬಳುಕುವ ತೆನೆ ತೆನೆಯೇ 
ತಾರುಣ್ಯದಾಗೆ ತಾವರೇ ತಾವರೆಯೇ 
ಚಕ್ರ ಚಾಮರವ ಬೀಸಲೇನೇ ಸಖೀ ತೂಗಿ ತೂಗಿ ಬಾಗಿ ಬಳುಕಿ   
ಬಾರವ್ವ ಬಾರೇ ಗೌರವ್ವ ಕುರುಬನ ರಾಣಿ ಬಾರವ್ವ
ಡೈ ಡೈ ಡೈ ಹೋಯ್ಯಯ್ಯಾಯಾ 

ಆಹ ಸುಖ ಆಹ ಖುಷಿ ಎಲ್ಲಾವೂ ಇಲ್ಲೇನಾ ಕೇಳಿರಮ್ಮಾ 
ಅಹ ಪ್ರೀತಿ ಪ್ರೇಮ ಓಹೋ .. 
ಇಂಥ ಸುಖ ಇಂಥ ಖುಷಿ ಕಂಡಿಲ್ಲದೊಳು ನಾ 
ಕಾರೂ ಬಂಗಲೇ ಆಳು ಕಾಳು ಎಲ್ಲಾ ಪ್ರೀತಿ ಮುಂದೆ ತೃಣ 
ಪ್ರೀತಿಗಿಂತ ಹೆಚ್ಚೇನಲ್ಲಾ ಕೋಟಿ ಕೋಟಿ ಕೋಟಿ ಹಣ 
ಅರಸೀ ಬಂದಳೋ ಅರಸೀ ಚಂದಿರ ಮುಖಿ ಸುರಾ ಸರಸಿ 
ಅರಸಿ ಬಂದಾಳೋ ಅರಸಿ ಸರ ಸಾರ ಸರ ಸರಸಿ 
ಮನೆಯ ಬೆಳಗುವಳೇ ಮನಸ ಒಳಗವಳೇ 
ಮನೆ ಮನೆ ಮನೆ ಮನೆ ಮನೆಯರಗಿಣಿ 
ಬಾರವ್ವ ಬಾರೇ ಗೌರವ್ವ ಕುರುಬನ ರಾಣಿ ಬಾರವ್ವ
ಬಾರವ್ವ ಬಾರೇ ಗೌರವ್ವ ಕುರುಬನ ರಾಣಿ ಬಾರವ್ವ
--------------------------------------------------------------------------------------------------------------

ಕುರುಬನ ರಾಣಿ (೧೯೯೮) - ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ :  ಪ್ರೀತುಸಿಂಗ 

ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ ಮುತ್ತಾಯಿತೋ ಮುತ್ತಾಯಿತೋ 
ಎಲ್ಲ ತರ ವಯ್ಯಾರ ಬಾಚಿಕೊಂಡೆ ಕೈಯ್ಯಾರ ಮತ್ತಾಯಿತೋ ಮತ್ತಾಯಿತೋ 
ಕಣ್ಣುಗಳ ತುಂಬಾ ಮಿಂಚುಗಳ ರಾಶೀ 
ಮಂಜು ಮೈಯ್ಯ ತುಂಬಾ ಮುತ್ತುಗಳ ಕಾಶಿ 
ಚಿಮ್ಮಾಯಿತೋ ಚಿಮ್ಮಾಯಿತೋ ಹುಮ್ಮಾಯಿತೋ ಭೀಮ್ಮಾಯಿತೋ 
ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ ಮುತ್ತಾಯಿತೋ ಮುತ್ತಾಯಿತೋ 
ಎಲ್ಲ ತರ ವಯ್ಯಾರ ಬಾಚಿಕೊಂಡೆ ಕೈಯ್ಯಾರ ಮತ್ತಾಯಿತೋ ಮತ್ತಾಯಿತೋ 

ರೇಶಿಮೆಯ ಥಳಕು ಹುಣ್ಣಿಮೆಯ ಬೆಳಕು ಕೆನ್ನೆ ಹೊಳಪಿಂದ ಹಾ ಆಹಾ 
ಚಂದನದ ಒಣಪು ಕಂಪನದ ನುಣುಪು ಮೈಯ್ಯ ಮಹಿಮೆಯಿಂದ ಆಹಾ ಆಹಾ 
ಓಡೋ ಮೋಡಗಳ ಮಾಲೇ ಮಾಡಿದೆ ಒಂದೇ ಸನ್ನೆಯಲೀ 
ನೋಡೋ ಕಣ್ಣುಗಳ ಮೇಲೆ ಬರದೇ ನನ್ನದೇ ಭಾಷೆಯಲೀ 
ನನ್ನದೊಂದು ಬಿಂಕ ಮುಂಜಾನೆಗೇ ಕೊಟ್ಟೆ 
ಸಣ್ಣದೊಂದು ಸುಂಕ ಮುತ್ಸಂಜೆಗೇ ಕೊಟ್ಟೇ 
ಹಂಚಾಯಿತೋ ಹಂಚಾಯಿತೋ ಮೈಯ್ಯ ಸಿರಿ ಬಿಚ್ಚಾಯಿತೋ 
ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ ಮುತ್ತಾಯಿತೋ ಮುತ್ತಾಯಿತೋ 
ಎಲ್ಲ ತರ ವಯ್ಯಾರ ಬಾಚಿಕೊಂಡೆ ಕೈಯ್ಯಾರ ಮತ್ತಾಯಿತೋ ಮತ್ತಾಯಿತೋ 

ಮಧುರಂ ಮಧುರ ಮಧುರಂ ಮಧುರ ಮಧುರಂ  ಮಧುರಂ 
ನಯನಂ ಮಧುರಂ ಶ್ರವಣಂ ಮಧುರಂ ಅಧರಂ ಮಧುರಂ 
ಹಾರೋ ಸೆರಗಿನಿಂದ ಬೀಸೋ ಗಾಳಿಗೇ 
ಎಲ್ಲಾ ಹೃದಯವನು ದೋಚೋ ಸರಸವ ಮಾತ ಮರೆಸಿದೆನೋ 
ಮಾಯದಂತ ಪ್ರಾಯ ನಂಗೆ ಅಡಿಪಾಯ 
ನನ್ನ ತುಂಟು ಹೃದಯ ಊರಿಗೆಲ್ಲಾ ವಿಷಯ  
ಮಿಣುಕಾಡಿತೋ ಮಿಣುಕಾಡಿತೋ ಏನೇನೇಲ್ಲಾ ತುಳುಕಾಡಿತೋ 
ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ ಮುತ್ತಾಯಿತೋ ಮುತ್ತಾಯಿತೋ 
ಎಲ್ಲ ತರ ವಯ್ಯಾರ ಬಾಚಿಕೊಂಡೆ ಕೈಯ್ಯಾರ ಮತ್ತಾಯಿತೋ ಮತ್ತಾಯಿತೋ 
---------------------------------------------------------------------------------------

ಕುರುಬನ ರಾಣಿ (೧೯೯೮) - ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ 
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ :  ಡಾ||ರಾಜಕುಮಾರ 

ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ 
ತಾಳಿಗಾಗಿ ತಾಳಿಕೊಂಡೇ ಎಲ್ಲ ನೋವನೂ 
ಕುರಿಗಳ ಮಂಡೇ ಮುಂದೆ ದಾರಿ ಕಾಣದಾಯಿತೇ 
ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೇ 
ನಂಬಿ  ಬಾಳುವೆಯ ಮಾಡೋ ಸೇತುವೆಯ ಕಟ್ಟಿ 
ಮುರಿಯುತಿರೋ ಜನಗಳ ನಡುವಲಿ 
ನಗುವುದೋ ಅಳುವುದೋ ಅಳುತಲೇ ನಗುವುದೋ 
ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ 
ತಾಳಿಗಾಗಿ ತಾಳಿಕೊಂಡೇ ಎಲ್ಲ ನೋವನೂ 

ಒಬ್ಬರ ನಂಟು ಒಬ್ಬರಿಗುಂಟು ಎಂಬುವ ಮಾತುಗಳುಂಟು 
ಆದರು ಯಾರಿಗೋ ಯಾರದೋ ನಂಟು ಹೇಳುವವರಾರಿಲ್ಲುಂಟು 
ದೇವರು ಬರೆದ ಬಂಧನ ಘಳಿಗೆ ದೇವರು ತಾನೆಯೇ ಸಾಕ್ಷಿ 
ಮನುಜನ ಮದುವೆಯೋ ಗೊಂಬೆಯ ಮದುವೆಯೋ ತಾಳಿಯೂ ತಾನೆಯೇ ಸಾಕ್ಷಿ.. 
ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ 
ತಾಳಿಗಾಗಿ ತಾಳಿಕೊಂಡೇ ಎಲ್ಲ ನೋವನೂ 

ಕೇವಲ ತಾಳಿಯ ಕಟ್ಟಿದ ಕಾರಣ ಆಸರೆ ನೀ ಕೊನೆತನಕ 
ವೃತ ಉಪವಾಸ ಮಾಡುತ ದಿವಸ ಬದುಕಿಸುವುದೇ ನಿನ್ನ ತವಕ 
ಸತಿಯಾದವಳೇ ಪತಿಯನದಾಗ ನೋಯದೇ ಮುಗ್ದನ ಹೃದಯ 
ನಿರ್ಮಲ ಪ್ರೀತಿಗೂ ಬೆಲೆಯೂ ಮಾತ್ರವೇ ಶೂನ್ಯ 
ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ 
ತಾಳಿಗಾಗಿ ತಾಳಿಕೊಂಡೇ ಎಲ್ಲ ನೋವನೂ 
ಕುರಿಗಳ ಮಂಡೇ ಮುಂದೆ ದಾರಿ ಕಾಣದಾಯಿತೇ 
ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೇ 
ನಂಬಿ  ಬಾಳುವೆಯ ಮಾಡೋ ಸೇತುವೆಯ ಕಟ್ಟಿ 
ಮುರಿಯುತಿರೋ ಜನಗಳ ನಡುವಲಿ 
ನಗುವುದೋ ಅಳುವುದೋ ಅಳುತಲೇ ನಗುವುದೋ 
ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ 
ತಾಳಿಗಾಗಿ ತಾಳಿಕೊಂಡೇ ಎಲ್ಲ ನೋವನೂ 
----------------------------------------------------------------------------

No comments:

Post a Comment