- ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ
ಕನ್ನಡಿಗ (೨೦೨೧) - ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ
ಸಂಗೀತ : ರವಿ ಬಸರೂರ, ಸಾಹಿತ್ಯ : ಸಂತೋಷ ಆನಂದರಾಮ ಗಾಯನ : ಶಿವರಾಜಕುಮಾರ
ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ
ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ
ಕರು ಕರೆಯುವಂತ ಕರುಣೆಯ ಪಂಥ ಕರುಳಬಳ್ಳಿ ಈ ಕನ್ನಡ
ಕಲಿಸೋಣ ಗತ್ತು ಕಲಿಯೋಣ ಸ್ವತ್ತು ಕಲಿಯಂತೆ ಕಲಿತೋನು ಕನ್ನಡ
ಅಂತರಂಗ ಶುದ್ದಿ ಮಾಡೋ ವಚನವೇ ಈ ಭಾಷೇ
ಜನ ಜಾಗೃತಿಯ ಅರಿವು ಮೂಡಿಸೋ ಜಾನಪದ ಈ ಭಾಷೇ
ಬೇಧವಿರದ ಕುಲವಿದು ಕ್ರೋಧವಿರದ ಕಲೆಯಿದು
ದಯೆಗೆ ಧರ್ಮಸ್ಥಳವಿದು ನಾಡು ಕನ್ನಡ ಕಳುವಾಗದ ನಿಧಿ ಇದು
ಕೊನೆಯಾಗದ ನದಿ ಇದು ಕನ್ನಡಿಗನ ವಿಧಿ ಇದು
ಮಾತನಾಡು ಕನ್ನಡ ಮಾತೃ ಭಾಷೇ ತಾಯಿಯಂತೇ
ಕೊಟ್ಟ ಮಾತು ತಪ್ಪದಂತೆ ಕಾಯುತ್ತಾಳೆ ನಮ್ಮ ಪುಣ್ಯಕೋಟಿ ಕನ್ನಡ
ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ
ಸಿರಿಗನ್ನಡಂ ಏಳ್ಗೆ ಕನ್ನಡಂ ಬಾಳ್ಗೆ ಕನ್ನಡ ನಮ್ಮ ಪಾಲ್ಗೆ
No comments:
Post a Comment