1642. ರೈಡರ್ (೨೦೨೧)



ರೈಡರ್ ಚಲನಚಿತ್ರದ ಹಾಡುಗಳು 
  1. ಮೆಲ್ಲನೆ ಬೆರಳ ಬೆಸೆದು ನಡೆಯುವ ಚೂರು ದೂರ
  2. ನಿನ್ನ ನೋಡಲೆಂದು ನನ್ನ ಎದೆಯಲಿ ಡವ್ವ ಡವ್ವ
  3. ಬಾನು ಭೂಮಿ ಒಂದಾಗೋ ಜಾಗ
ರೈಡರ್ (೨೦೨೧) - ಮೆಲ್ಲನೆ ಬೆರಳ ಬೆಸೆದು ನಡೆಯುವ ಚೂರು ದೂರ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ : ಸಂಜಿತ ಹೆಗ್ಡೆ 

ಮೆಲ್ಲನೆ ಬೆರಳ ಬೆಸೆದು ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ ಕಂಗಳೇ ನೇರ ನೇರ

ಎದೆಯಲ್ಲಿ ಸಿಹಿ ಗುಟ್ಟು ಹೃದಯಕೆ ಹೊಸ ಹುಟ್ಟು ನೀನು ಸಿಗಲು
ಹಿತವಾದ ಎಡವಟ್ಟು ತಡಿ ಬೇಡ ದಯವಿಟ್ಟು
ಏನೋ ಅಮಲು ಪ್ರತಿ ಹಿತಿ ಮಿತಿ ಗಡಿ ಬಾ ದಾಟುವ
ಇನ್ನೇನು ಕನಸೇ ಬೇಡ ಕಣ್ಣಮುಂದೆ ನೀನು ಇರು ಸಾಕು
ಮೆಲ್ಲನೆ ಬೆರಳ ಬೆಸೆದು ನಡೆಯುವ ಚೂರು ದೂರ

ಮಾತು ಬಂದರು ಮೂಕನಾಗುವುದೇ ಚೆಂದ
ಸೇರಿ ಕೊಂಡಿದೆ ಜೀವ ನಿನ್ನೊಳಗೆ ಸೀದಾ
ಇದಕೆನೆ ಜನರೆಲ್ಲಾ ಅಂತಾರ ಸಹವಾಸ ದೋಷ ಅಂತ
ನಿನ ಸೇರಿ ನಾನ ಲೋಕ ಸೊಗಸಾಗಿ ಬದಲಾಯ್ತು ನೋಡ್ತಾ ನೋಡ್ತಾ
ಸದಾ ಹೀಗೆ ಇನ್ನು ನಿಂಗೆ ನಾ ಕಾವಲು
ಅಂಗೈಯ್ಯ ಇಡುವೆ ಇನ್ನು ಮುಂಗಾಲು ಊರೋ ಮುನ್ನ ನೀನು
ಮೆಲ್ಲನೆ ಬೆರಳ ಬೆಸೆದು ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ ಕಂಗಳೇ ನೇರ ನೇರ
ಜನರ ಆಚೆ ಜಗದ ಆಚೆ ನಮದೆ ಒಂದು ಲೋಕವ
ಹುಡುಕಿಕೊಂಡು ಬದುಕ ಬೇಕು ನಮದೆ ಸ್ವಂತ ಸಂಘವ
ಮೆಲ್ಲನೆ ಬೆರಳ ಬೆಸೆದು ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ ಕಂಗಳೇ ನೇರ ನೇರ
------------------------------------------------------------------------------------------------------------

ರೈಡರ್ (೨೦೨೧) - ನಿನ್ನ ನೋಡಲೆಂದು ನನ್ನ ಎದೆಯಲಿ ಡವ್ವ ಡವ್ವ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಚೇತನಕುಮಾರ  ಗಾಯನ : ಅರ್ಮಾನ ಮಲ್ಲಿಕ್ 

ನಿನ್ನ ನೋಡಲೆಂದು ನನ್ನ ಎದೆಯಲಿ ಡವ್ವ ಡವ್ವ
ನಿನ್ನ ನೆನಪಿನಲ್ಲಿ ದಿನ ಪದೆ ಪದೇ ಡವ್ವ ಡವ್ವ
ನನ್ನ ಕನಸು ಕೂಡ ನಿನ್ನ ಹುಡುಕುತಿದೆ ಡವ್ವ ಡವ್ವ
ನನ್ನ ಮನಸಿನಲ್ಲಿ ನಿಂದೇ ದಿನ ದಿನ ಹವಾ ಹವಾ
ಉಸಿರು ಹುಡುಕಿದೆ ನಿನ್ನ ಕಣ್ಣ ಮುಂದೆ ಒಮ್ಮೆ ಗೋಚರಿಸೆ
ಹೃದಯ ಅದುರಿದೆಕೋ ಅರೆ.. ಅರೆ.. ಅರೆ..
ನಿನ್ನ ನೆನಪಿನಲ್ಲಿ ಎದೆ ಬಡಿಯುತಿದೆ ಡವ್ವ ಡವ್ವ
ನನ್ನ ಮನಸಿನಲ್ಲಿ ನಿಂದೇ ದಿನ ದಿನ ಹವಾ ಹವಾ

ಬೀಸಿರುವ ಗಾಳಿಯು ನೀಡುತ್ತಿದೆ ಸೂಚನೆ ನೀನಿರುವ ಜಾಗ ತಿಳಿಸಿದೆ 
ಕಂಗಳಿಸೊ ನೆನಪುಗಳು ಪಿಸುಗುಟ್ಟಿದೆ ಮೆಲ್ಲನೆ ಮನಸೆಲ್ಲ ನೀನೆ ಒಲವೆ
ಜೊತೆಯಲ್ಲಿ ಇರುವಾಗ ಶುರುವಾದ ಅನುರಾಗ 
ಕಾದಿಹುದು ನಿನಗೀಗ ಸಿಗು ನೀ ಬೇಗ ಅರೆ.. ಅರೆ.. ಅರೆ..
ಕೂಡಿಟ್ಟ ಉಡುಗೊರೆಯೂ ನಿನ ಹೆಸರನು ನುಡಿದಿದೆ ನೀ ಬರುವ ದಾರಿ ಕಾಡಿದೆ 
ಹಾರಾಡೋ ಪಟವೆಲ್ಲ ಕಥೆಯೊಂದನು ಹೇಳಿವೆನಿನಗೆಲ್ಲ 
ನೆನಪಿದೆಯ ಒಲವೆ? ನೀ ಸಿಗುವ ವೇಳೆಗೆ ಮಳೆ ಹನಿಯ 
ಅಕ್ಷತೆಯು ಹರಿಸುವುದು ಆ ಮುಗಿಲು ಕಾಮನಬಿಲ್ಲು  ಅರೆ.. ಅರೆ.. ಅರೆ..
ನಿನ್ನ ನೆನಪಿನಲ್ಲಿ ಎದೆ ಬಡಿಯುತಿದೆ ಡವ್ವ ಡವ್ವ 
ನನ್ನ ಮನಸಿನಲ್ಲಿ ನಿಂದೇ ದಿನ ದಿನ ಹವಾ ಹವಾ 
------------------------------------------------------------------------------------------------------------

ರೈಡರ್ (೨೦೨೧) - ಬಾನು ಭೂಮಿ ಒಂದಾಗೋ ಜಾಗ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ನಾಗೇಂದ್ರ ಪ್ರಸಾದ  ಗಾಯನ : ವಿಜಯ ಪ್ರಕಾಶ 

ಬಾನು ಭೂಮಿ ಒಂದಾಗೋ ಜಾಗ ನೋಡೋಕೆ ಎಷ್ಟೊಂದು ಚೆಂದ 
ಬೇರು ಭೂಮಿ ಒಂದಾಗುವಾಗ ಆತ್ಮೀಯ ಆದಂಥ ಬಂಧ 
ಅರಿಯದ ಜೋಡಿ ಹೃದಯವು ಕೂಡಿ 
ಬೆರೆತಿರೋ ಮೋಡಿ ಸೊಗಸನು ನೋಡಿ 
ಭಾಂದವ್ಯವೇ ಚಿರ ಭಾಂದವ್ಯವೋ 
ಭಾಂದವ್ಯವೋ ಚಿರ ಭಾಂದವ್ಯವೋ 

ಆಟ ಪಾಠದಿ ಜೊತೆಯಾಗಿ ಸೇರಿವೇ ಕಲ್ಮಶ ಇಲ್ಲದ ಜೀವ 
ಮಾತು ಮಾತಲೂ ಹೊಸದೇನೋ ಭಾವನೆ ಸ್ನೇಹವೇ ಇಲ್ಲಿರೋ ದೈವ 
ನೋವಾಗುವಾಗ ಕಣ್ಣಿರಾಗೋ ಸ್ನೇಹ 
ಕೈ ಸೋಲುವಾಗ ಸಂತೈಸೋದು ಸ್ನೇಹ 
ಈ ಜೋಡಿಯ ಗಮನಿಸಿ ನೋಡಿ ಹೃದಯವು ಕೂಡಿ 
ಬೆರೆತಿರೋರೋ ಮೂಡಿ ಸೊಗಸನು ನೋಡಿ 
ಭಾಂದವ್ಯವೇ ಚಿರ ಭಾಂದವ್ಯವೋ 
ಭಾಂದವ್ಯವೋ ಚಿರ ಭಾಂದವ್ಯವೋ 
------------------------------------------------------------------------------------------------------------

No comments:

Post a Comment