ನಿನ್ನ ಸನಿಹಕೆ ಚಲನಚಿತ್ರದ ಹಾಡುಗಳು
- ನೀ… ಪರಿಚಯ ಹೇಳದೆ
- ಏಕೋ ಇದೇಕೋ
- ಒಲವಾಗಿದೆ
- ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
- ನಿನ್ನ ಸನಿಹಕೆ (ಟೈಟಲ್)
- ಅವ್ಯವಸ್ಥೆಯ ಶಬ್ದ
- ಬೇರೆ ಇರೋದೇ ಒಲವ ಇರದೇ
ನಿನ್ನ ಸನಿಹಕೆ (೨೦೨೧) - ನೀ… ಪರಿಚಯ ಹೇಳದೆ
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ಸಿಧಾರ್ಥ ಬೆಲ್ಮನ್ನು, ರಕ್ಷಿತಾ ಸುರೇಶ
ನೀ… ಪರಿಚಯ ಹೇಳದೆ ಸೆಳೆದೇ… ಉಸಿರನು ಮೆಲ್ಲಗೆ
ನಾ… ಹೊರಟರೂ ಎಲ್ಲಿಗೆ ತಲುಪೋ… ತಾಣ ನಿನ್ನಲ್ಲಿದೆ
ಬಿಸಿಲಾ ಸುಡೋ ರಂಗೋಲಿಗೆ ಭುವಿಯ ನೆಲ ಕಾದಂತಿದೆ
ಈ… ಬದುಕಿನ ಸೌಖ್ಯವು ಅಡಗಿ ನಿನ್ನ ಕಣ್ಣಲ್ಲಿದೆ
ಈ… ಮಧುರ ಸಾಂಗತ್ಯವು ಮನದ ಹೆಜ್ಜೆ ಗುರುತಾಗಿದೆ
ಅರಳೋ ಪ್ರತಿ ಆರಂಭಕೂ ಹೊಸೆವ ಕಥೆ ನೂರಾಗಿದೆ
ನೀನಿಲ್ಲದೆ ಬೇರೆ ಗಮನಾನೆ ಇಲ್ಲ ಒಲವಾಗಿದೆ ಬೇರೆ ಸಂದೇಹವಿಲ್ಲ…
ಆಆಆಆಆಆಆಆ
ಈ ಭಾವಲೋಕದ ಒಪ್ಪಂದವೆಲ್ಲ ನಿಯಮಾನುಸಾರಕೆ ಸಂಬಂಧಿಸಿಲ್ಲ
ನಾ ಬದುಕುವ ಆಸೆಗೆ ಹುರುಪು ಈಗ ಬಂದಂತಿದೆ
ಈ ಕನಸಿನಾಕಾಶಕ್ಕೆ ಹೊಳಪು ನೀನೆ ತಂದಂತಿದೆ
ಇಷ್ಟೊಂದು ಮೌನ ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ
ಅತ್ಯಂತವಾಗಿ ಅಭ್ಯಾಸವಾದೆ ಬೇಕೆಂದೇ ಈ ಜೀವಕೆ
ಈ ಭಾವಲೋಕದ ಒಪ್ಪಂದವೆಲ್ಲ ನಿಯಮಾನುಸಾರಕೆ ಸಂಬಂಧಿಸಿಲ್ಲ
ನಾ ಬದುಕುವ ಆಸೆಗೆ ಹುರುಪು ಈಗ ಬಂದಂತಿದೆ
ಈ ಕನಸಿನಾಕಾಶಕ್ಕೆ ಹೊಳಪು ನೀನೆ ತಂದಂತಿದೆ
ಇಷ್ಟೊಂದು ಮೌನ ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ
ಅತ್ಯಂತವಾಗಿ ಅಭ್ಯಾಸವಾದೆ ಬೇಕೆಂದೇ ಈ ಜೀವಕೆ
ಕಾರ್ಮೋಡ ಸರಿದು ಬಾಳಲ್ಲಿ ಹೊಸದಾಗಿ ಸುಳಿದು ತಂಗಾಳಿ
ಬದಲಾಗಿದೆ ಲೋಕವೇ ಒಂದಾಗಲು ಸಾಲದೇ
ನೀ… ಪರಿಚಯ ಹೇಳದೆ ಸೆಳೆದೇ… ಉಸಿರನು ಮೆಲ್ಲಗೆ
ನಾ… ಹೊರಟರೂ ಎಲ್ಲಿಗೆ ತಲುಪೋ… ತಾಣ ನಿನ್ನಲ್ಲಿದೆ
ಬಿಸಿಲಾ ಸುಡೋ ರಂಗೋಲಿಗೆ ಭುವಿಯ ನೆಲ ಕಾದಂತಿದೆ
-------------------------------------------------------------------------------------------------------------
ಏಕೋ ಇದೇಕೋ ಬಾಳೊಂದು ಮುನಿದು ನನ್ನಿಂದ ದೂರಾಗಿದೆ
ಜೋಪಾನವಾಗಿ ಕೂಡಿಟ್ಟ ನನ್ನ ಕನಸೆಲ್ಲ ಚೂರಾಗಿದೆ
ಅವಳೇ ಇರದೇ ನೆನಪುಗಳೇಕೆ ಸಮಯವೇ ಸೋತು ನಿಲ್ಲಬಾರದೇಕೆ
ಕೊಡು ಅವಕಾಶ ದೇವರೇ ಮರುಜೀವಿಸಲು…
ಎದೆ ಬಿರಿವ ಏಕಾಂತಕೆ ಸುಡುವ ಹಠ ಇದೆ…
ನಿನ ಸನಿಹಕ್ಕೆ…
ನೀ… ಪರಿಚಯ ಹೇಳದೆ ಸೆಳೆದೇ… ಉಸಿರನು ಮೆಲ್ಲಗೆ
ನಾ… ಹೊರಟರೂ ಎಲ್ಲಿಗೆ ತಲುಪೋ… ತಾಣ ನಿನ್ನಲ್ಲಿದೆ
ಬಿಸಿಲಾ ಸುಡೋ ರಂಗೋಲಿಗೆ ಭುವಿಯ ನೆಲ ಕಾದಂತಿದೆ
-------------------------------------------------------------------------------------------------------------
ನಿನ್ನ ಸನಿಹಕೆ (೨೦೨೧) - ಏಕೋ ಇದೇಕೋ
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ಸಂಜಿತ ಹೆಗಡೆ
ಜೋಪಾನವಾಗಿ ಕೂಡಿಟ್ಟ ನನ್ನ ಕನಸೆಲ್ಲ ಚೂರಾಗಿದೆ
ಅವಳೇ ಇರದೇ ನೆನಪುಗಳೇಕೆ ಸಮಯವೇ ಸೋತು ನಿಲ್ಲಬಾರದೇಕೆ
ಕೊಡು ಅವಕಾಶ ದೇವರೇ ಮರುಜೀವಿಸಲು…
ಎದೆ ಬಿರಿವ ಏಕಾಂತಕೆ ಸುಡುವ ಹಠ ಇದೆ…
ನಿನ ಸನಿಹಕ್ಕೆ…
ಬರಲು ನನಗಿನ್ನೆಲ್ಲಿ ಇದೆ ಕಾರಣ ನಿನ ಸನಿಹಕ್ಕೆ…
ಸುಳಿವ ಪ್ರತಿ ಉಸಿರಾಟ ಬಲು ದಾರುಣ
ಬರಿ ತಲೆದೂಗುವ ನೋವೆಲ್ಲಕು
ಉಸಿರಾಡುತ… ನೆನಪಲ್ಲಿಯೇ.
------------------------------------------------------------------------------------------------------------
ನಿನ್ನ ಸನಿಹಕೆ (೨೦೨೧) - ಒಲವಾಗಿದೆ
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ಬೆನ್ನಿ ದಯಾಲ, ಐಶ್ವರ್ಯ ರಂಗರಾಜನ್
ಶುರುವಾದ ಮೇಲೆ ಮಾತೊಂದು ಬದಲಾದಂತೆ
ಕಣ್ಣಲ್ಲೇ ನೀನು ನುಡಿವಾಗ
ಒಂದಾದ ಮೇಲೆ ಮತ್ತೊಂದು ಕನಸಾದಂತೆ
ಜೊತೆಯಲ್ಲಿ ನೀನೆ ಇರುವಾಗ
ಹೊಸದಾಗಿ ಕಂಡು ಕೊಂಡೆ ನಿನ್ನ ಕಂಡ ಗಳಿಗೆ
ಖುಷಿಯೆಲ್ಲ ಈ ಜೀವಕ್ಕೆ ನೀನು ಕೊಟ್ಟ ಕೊಡುಗೆ
ಅತಿಯಾದರೆ ಚೆಂದ ತಾನೇ ಪ್ರೀತಿಯಲ್ಲಿ ಸಲಿಗೆ
ಅನುರಾಗಿ ಆಗೋ ಆಸೆ ಸಿಕ್ಕರೆ ನೀ ಬಳಿಗೆ
ಒಲವಾಗಿದೆ…ಅನಿವಾರ್ಯವು ಏನಿದೆ ನೀನಲ್ಲದೆ
ಒಲವಾಗಿದೆ…ಅರಿವಾಗಿದೆ ಎಲ್ಲವು ನಿನ್ನಿಂದಲೇ
ಶುರುವಾಗಿದೆ… ಒಲವಾಗಿದೆ…
ಶುರುವಾಗಿದೆ… ಒಲವಾಗಿದೆ…
ಭೂಮಿ ಆಕಾಶ ಇರುವಂತೆ ಜೊತೆ ಬಿಡದಂತೆ
ನಿನ್ನಲ್ಲೇ ನಾನು ಬೆರೆತಂತೆ
ನನಗೂನು ಈಗ ನಿನ್ನಂತೆ ನೆನಪಿರದಂತೆ
ಜಗವೆಲ್ಲ ಪೂರ ಮರೆತಂತೆ
ಇರದೇನೆ ನನಗಿನ್ನೆಲ್ಲಿ ಕಾದುವಂತ ಕನಸು
ಹುಸಿಯಾಗಿ ಮುನಿದಾಗೆಲ್ಲ ನೀನೆ ನಗುವ ಮೂಡಿಸು
ಅತಿಯಾಗಿ ಎಲ್ಲ ಮರೆತು ನನ್ನೇ ವ್ಯಮೊಹಿಸು
ಜಗವೆಲ್ಲ ಮೀರಿ ಹಾರೋ ಮಾಯೆಯನ್ನೇ ಕಳಿಸು
ಒಲವಾಗಿದೆ…ಸಿಹಿಯಾಗಿದೆ ಲೋಕವೇ ನಿನ್ನ ತೋಳಲಿ
ಒಲವಾಗಿದೆ…ಸುಖ ಒಂದಿದೆ ನೀನಿರೆ ನನ್ನ ಸೋಲಲಿ
ಶುರುವಾಗಿದೆ… ಒಲವಾಗಿದೆ…
ಶುರುವಾಗಿದೆ… ಒಲವಾಗಿದೆ…
ಹೆಸರಿಲ್ಲದ ಸಂಬಂಧ ಬಿಡುವಿಲ್ಲದ ಅನುಬಂಧ
ಬಾಳೊಂದು ದಿನವು ಅರಳೋ ಬಗೆಯ ಚೆಂದ ಚೆಂದ
ಒಂದೊಂದು ಕ್ಷಣ ಕೂಡ ಆಕರ್ಷಕವಾದಂತೆ
ಹೊಸದಾಗಿದೆ ಲೋಕವೇ ನಿನ್ನ ಛಾಯೆ ಇನ್ನು ಚಂದ
ಅಪರೂಪವಾದೆ ನೀಡಿ ಬಾಳಿಗೀಗ ನೆರಳು
ಬೆಲೆ ಎಲ್ಲಿದೆ ಯಾವುದಕಾದರು ಸೋಲದೇನೆ ಮೊದಲು?
ಒಲವಾಗಿದೆ… ಅನಿವಾರ್ಯವು ಏನಿದೆ ನೀನಲ್ಲದೆ?
ಒಲವಾಗಿದೆ…ಅರಿವಾಗಿದೆ ಎಲ್ಲವು ನಿನ್ನಿಂದಲೇ
ಶುರುವಾಗಿದೆ… ಒಲವಾಗಿದೆ…
ಶುರುವಾಗಿದೆ… ಒಲವಾಗಿದೆ.
------------------------------------------------------------------------------------------------------------
ನಿನ್ನ ಸನಿಹಕೆ (೨೦೨೧) - ಮಳೆ ಮಳೆ
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ರಘು ದೀಕ್ಷಿತ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಹನಿ ಹನಿ ಮೊಳಗಲಿ ನವಿರಾಗುವ ತೀರಕೆ
ಮನದನಿ ಬಯಸಿದ ಈಡೇರಿಸು ಕೋರಿಕೆ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಉಸಿರಲಿ ಹರಡಿದೆ, ಸುಂದರ ಸಂಕಟ
ಹೆಸರನು ನೆನೆದರೆ ಜೀವನ ಸಾರ್ಥಕ
ಕಂಗಳ ಹಿಂಬಾಲಿಸು ಹೇಳುವೆ ಕನಸಾ
ನೀನಿರೆ ನನ್ನ ಜೀವಕೆ ಎಲ್ಲಿದೆ ವಿರಸ
ನಿನ್ನಯ ಮುನಿಸಲ್ಲಿಯೇ ನನ್ನನೇ ನೇಮಿಸು
ನಿನ್ನಯ ಸಂಕೋಚಕೆ ನನ್ನನೇ ಸ್ಮರಿಸು
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಕೊರಳನು ಬಿಗಿಯುವ ನೋವಿದೆ ನನ್ನಲಿ
ಕೇವಲ ಮಾತಲಿ ಹೇಗೆ ನಾ ತುಂಬಲಿ
ನನ್ನಯ ಈ ಕಂಬನಿ ನಿನ್ನದೇ ಕೊಡುಗೆ
ಸೇರಲಿ ಉಸಿರೆಲ್ಲವೂ ಸಾವಿನ ಬಳಿಗೆ
ಕಾಣುವ ಕನಸೆಲ್ಲವೂ ಬರಿ ಮೂಢ ನಂಬಿಕೆ
ಕಾಡುವ ನೆನಪೆಲ್ಲವೂ ಏಕಾಂತದ ಕೋರಿಕೆ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಹನಿ ಹನಿ ಮೊಳಗಲಿ ನವಿರಾಗುವ ತೀರಕೆ
ಮನದನಿ ಬಯಸಿದ ಈಡೇರಿಸು ಕೋರಿಕೆ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯಾ ಮಳೆ.
------------------------------------------------------------------------------------------------------------
ನಿನ್ನ ಸನಿಹಕೆ (೨೦೨೧) - ನಿನ್ನ ಸನಿಹಕೆ (ಟೈಟಲ್)
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ಶೃತಿ, ಸಂಜಿತ ಹೆಗಡೆ
ಹೃದಯದ ಪರಿಪಾಡು ಹೀಗೇಕೆ ಅನಿಸೋದು ಅರಿಯದೆ ಮನಸ್ಸೋತರೆ
ಸಮಯದ ಗತಿ ಮೆಲ್ಲ ಹೀಗೇಕೆ ಸಾಗೋದು ನೆನೆಯುತ ನಿನ್ನ ಕಾದರೆ
ಬಿಡದೇ ಹಿಡಿದಂಥ ಒಲವ ಮಳೆಗೆ ಮನದ ನೆಲವೆಲ್ಲ
ಹಸಿರಾಗಿ ಹೂವಾಗಿದೆ ನಿನ್ನ ಕೊಡುಗೆ
ನಿನ್ನ ಸನಿಹಕೆ ಬರುವೆ ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೆ ಬರುವೆ ನನ್ನ ಈ ಜೀವ ಕಿರುಕಾಣಿಕೆ...
ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ ನಿನ್ನಲ್ಲಿದೆ
ಕಿವಿಗೊಡು ನೀ… ವಿವರಿಸುವೆ ಬಿಸಿ ಉಸಿರ ಕವಿತೆಗಳ
ಕೂಡಿಡುವೆ ಬಿಡಬಿಡದೆ ನೀನಿರುವ ನಿಮಿಷಗಳ
ಕೂಡಿಡುವೆ ಬಿಡಬಿಡದೆ ನೀನಿರುವ ನಿಮಿಷಗಳ
ಉಪಗ್ರಹವೇ ನಿನಗೆ ನಾನು
ಕನಸುಗಳ ತೆರೆದಿಡುವೆ ಆವರಿಸು ಅಡಿಗಡಿಗೆ
ಕೋರಿಕೆಯು ಒಂದೇನೇ ಹೃದಯದಲಿ ಮಿನುಮಿನುಗು
ಕೊನೆವರೆಗೂ ಇದೇ ಥರ
ನಿನ್ನ ಸನಿಹಕೆ ಒಲವೇ ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೆ ಬರುವೆ ನನ್ನ ಈ ಜೀವ ಕಿರುಕಾಣಿಕೆ
ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ ನಿನ್ನಲ್ಲಿದೆ.
ಕನಸುಗಳ ತೆರೆದಿಡುವೆ ಆವರಿಸು ಅಡಿಗಡಿಗೆ
ಕೋರಿಕೆಯು ಒಂದೇನೇ ಹೃದಯದಲಿ ಮಿನುಮಿನುಗು
ಕೊನೆವರೆಗೂ ಇದೇ ಥರ
ನಿನ್ನ ಸನಿಹಕೆ ಒಲವೇ ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೆ ಬರುವೆ ನನ್ನ ಈ ಜೀವ ಕಿರುಕಾಣಿಕೆ
ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ ನಿನ್ನಲ್ಲಿದೆ.
------------------------------------------------------------------------------------------------------------
ನಿನ್ನ ಸನಿಹಕೆ (೨೦೨೧) - ಅವ್ಯವಸ್ಥೆಯ ಶಬ್ದ
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ರಘು ಧಿಕ್ಷಿತ
ಯಾರೂ ಯಾರೂ ನಾನ್ ಯಾರು
ಈ ನಶೆಯು ಹೇಳಿದೇ ಪತ್ತೆಯಾ
ನಿನ್ನ ಸನಿಹಕೆ (೨೦೨೧) - ಅವ್ಯವಸ್ಥೆಯ ಶಬ್ದ
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ರಘು ಧಿಕ್ಷಿತ
ಯಾರೂ ಯಾರೂ ನಾನ್ ಯಾರು
ಈ ನಶೆಯು ಹೇಳಿದೇ ಪತ್ತೆಯಾ
ಬದುಕೆ ನಿನಗೊಂದು ವಿದಾಯ
ಬಡಿಯೋ ಈ ಮನಸ್ಸು ಮೃಘೀಯ
ಪ್ರೀತಿ ಗೀತಿ ವ್ಯರ್ಥ ಪೂರ ಲೋಕವೆಲ್ಲ ಕ್ರೂರ!!
ಹೇ!! ಉರಿವ ಗಾಯ ಹೀರಿದಂತ ರಕುತ ಲೆಕ್ಕವಿಲ್ಲ
ಹೊತ್ತಿ ಉರಿವ ಚಿತೆಯು ಎಂದು ಬೆಳಗೊ ದೀಪವಲ್ಲ
ಹರಿತವಾದ ಕತ್ತಿ ಮಾಡದೆಂದು ಒಳ್ಳೆದನ್ನ
ಹೆಪ್ಪುಗಟ್ಟಿದಂತ ನೆನಪು ಕೂಡ ಕಪ್ಪು ಬಣ್ಣ
ಯಾಕೆ ಯಾಕೆ ಮೋಹಕ್ಕೆ ಮನ ಸೋಲೋದು
ಜೋಕೇ ಜೋಕೇ ಪ್ರೀತೀನೆ ನಂಜಾಗೋದು
ಏಯ್!! ನಂಬೋದು ಬೇಡ ಸಾಯೋದು ಬೇಡ
ಮುಳ್ಳಾಗೋ ಪ್ರೀತಿಯಂತು ಬೇಡ ಬೇಡ ಏನು ಬೇಡ
ಕತ್ತಲೆ ಸತ್ಯವು ಇನ್ನೆಂದಿಗೂನು ಬೆಳಕಿದು ಮೋಸಗಾರ
ನಶೆ ಇದು ಶಾಶ್ವತ ಹೀಗಾದರೂನೂ ಬದುಕನು
ಸರಿಸು ದೂರ ಕತ್ತಲೆ ಸತ್ಯವು ಇನ್ನೆಂದಿಗೂನು
ಬೆಳಕಿದು ಮೋಸಗಾರ ನಶೆ ಇದು ಶಾಶ್ವತ
ಹೀಗಾದರೂನೂ ಬದುಕನು ಸರಿಸು ದೂರ

ಏ!! ಇಂದಿಗೂ ಇಲ್ಲ ನಾಳೆಗೂ ಮುಚ್ಚಿ ಹೋಗುವಂತ ಹಾಳು ಬಾಳು ನಮ್ಮದು
ಕೆಟ್ಟದು ಒಳ್ಳೆದು ಅಂತೇನು ಇಲ್ಲ ಎಲ್ಲ ಸುಳ್ಳು
ನಾವೆ ಮಾಡಿಕೊಂಡಿರೋದು....
------------------------------------------------------------------------------------------------------------
ನಿನ್ನ ಸನಿಹಕೆ (೨೦೨೧) - ಬೇರೆ ಇರೋದೇ ಒಲವ ಇರದೇ
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ರಘು ಧಿಕ್ಷಿತ, ರಮ್ಯಭಟ್ಟ, ಅಭಯಂಕರ
ಬೇರೆ ಇರೋದೇ ಒಲವ ಇರದೇ ಉಸಿರೆಲ್ಲಾ ಬಿಸಿ ಆರಿದೆ

ಬದಲಾದ ಹಾದಿ ಮನಸೇ ವಿರೋಧಿ ಕನಸೆಲ್ಲಾ ಹುಸಿ ಆಗಿದೆ
ತೋಚಿದಷ್ಟು ಬದುಕುವೇ ನಾನು ನಿನ್ನ ಹೊರತು ಇರಲಾರೇನು
ಎದೆಗುಳಿದಂತ ಮಾತಿದೆ ಪುನರಾರಂಭಿಸಲು.....
ನಡೆವಷ್ಟೀಗ ದಾರಿಯು ಬಿಡದೆ ಬರಿ ಕಾವಲು...
ನಿನ್ನ ಸನಿಹಕೇ ... ಬರಲು ನನಗಿನ್ನೆಲ್ಲಿದೆ ಕಾರಣ
ನಿನ್ನ ಸನಿಹಕೆ... ಸುಳಿವ ಪ್ರತಿ ಉಸಿರಾಟ ಬಲು ದಾರುಣ
ಮಿನುಗೋ ತಾರೆಯೋ ಆಕಾಶದಿ ಕುಸಿದಂತೇ ... ತನ್ನಂತೇ ..
-----------------------------------------------------------------------------------------------------------
ನಿನ್ನ ಸನಿಹಕೆ (೨೦೨೧) - ಓಡೋ ಓಡೋ
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ರಘು ಧಿಕ್ಷಿತ,
ಸಂಗೀತ : ರಘು ದೀಕ್ಷಿತ, ಸಾಹಿತ್ಯ : ವಾಸುಕಿ ವೈಭವ ಗಾಯನ : ರಘು ಧಿಕ್ಷಿತ,
------------------------------------------------------------------------------------------------------------
No comments:
Post a Comment