1654. ಪ್ರೇಮಮ್ ಪೂಜ್ಯಮ್ (೨೦೨೧)

ಪ್ರೇಮಮ್ ಪೂಜ್ಯಮ್ ಚಲಚಿತ್ರದ ಹಾಡುಗಳು 
  1. ವೈದ್ಯೋ ನಾರಾಯಣ ಹರಿಹಿ 
  2. ಸ್ಟ್ರಿಂಗ್ಸ್ ಆಫ್ ಹಾರ್ಟ್  ಏಂಡ್ ಇಟ್ಸ್ ಎಟರ್ನಲ್ ವೇಟ್ 
  3. ಲವ್ಲೀ ಸ್ಟಾರ್ ರೇವಿಸಿಟೇಡ್ 
  4. ವಿಸೀಲ್ ಆಫ್ ಲವ್ 
  5. ಪ್ರೇಮಮ್ ಪೂಜ್ಯಮ್ 
  6. ಅಮರ ಮಧುರ 
  7. ಅಂಬಾರಿ ಪ್ರೇಮ 
  8. ಓ ಬಾನ ಮೋಡಗಳೇ 
  9. ನಿನ್ನ ಕಣ್ಣ ಅಂಚಿನ 
  10. ಸ್ನೇಹಂ ಪೂಜ್ಯಮ್ 
  11. ಎರಡು ದಶಕದ ನಂತರ 
  12. ಹರಿಯ ಪ್ರೀತಿ 
  13. ನಿನ್ನನ್ನೂ ಬಿಟ್ಟು ನಾ ಹೇಗಿರಲೀ 
  14. ಅಂಬಾರಿ ಪ್ರೇಮ )ದುಃಖ) 
  15. ನಿನ್ನನ್ನೂ ಬಿಟ್ಟು ನಾ ಹೇಗಿರಲೀ (ಹೆಣ್ಣು)
ಪ್ರೇಮಮ್ ಪೂಜ್ಯಮ್ (೨೦೨೧) - ವೈದ್ಯೋ ನಾರಾಯಣ ಹರಿಹಿ 
ಸಂಗೀತ ಹಾಗು ಸಾಹಿತ್ಯ : ರಾಘವೇಂದ್ರ, ಗಾಯನ : ವಿಜಯ ಪ್ರಕಾಶ 

ನನ್ನ ಜೀವನ ನಿಮಗೆ ಸಮರ್ಪಣ
ಕೈ ಮುಗಿವೆನು ಓ ನಾರಾಯಣ
ನಿಮ್ಮ ಸೇವೆಯೇ ನಿಜ ಆಕರ್ಷಣ
ಶಿರ ಬಾಗುವೇನೋ ಸಂಕರ್ಷಣ 
ವೈದ್ಯೋ ನಾರಾಯಣ ಹರಿಹಿ! 
ವೈದ್ಯೋ ನಾರಾಯಣ ಹರಿಹಿ! 

ಭವ ರೋಗ ವೈದ್ಯನು ನೀ ಭಾವ ಭಯವನು ಕಳೆಯಲು ಬಾ
ಜನ ಸೇವೆ ಜನಾರ್ಧನ ಸೇವೆ ಎಂದು ಸಾರಿದೆ ಶ್ರುತಿಗಳು
ಶ್ರುತಿಗಳು.. ಶ್ರುತಿಗಳು.. 
ಮಾನವ ಸೇವೆಯೇ ಮಾಧವ ಸೇವೆಯೂ 
ಮಾನವ ಸೇವೆಯೇ ಮಾಧವ ಸೇವೆಯೂ 
ನಿನ್ನ ವ್ಯಥೆಗಳಿಗೆ ಉಂಟೆ ಸಮಯವು ಓ ವೈದ್ಯನೇ!
ವೈದ್ಯೋ ನಾರಾಯಣ ಹರಿಹಿ!
ವೈದ್ಯೋ ನಾರಾಯಣ ಹರಿಹಿ!

ಮಡುಗಟ್ಟಿದ ದುಗುಡದಲಿ ಮನನೊಂದು ಬೆಂದರು ನೀ
ಪರಸೇವೆ ಪರಾತ್ಪರ ಸೇವೆ ಎಂದು ಸಾಗಿಹೆ ಭುವಿಯೋಳು
ಭುವಿಯೋಳು.. ಭುವಿಯೋಳು..
ನಿಂದರೆ ಬಂದರು ವಂದನ ಭಾವದಿ 
ಚಿಂತೆಯೂ ಇದಾರು ಚಿಂತನ ರಾಗದಿ
ನಿನ್ನ ವ್ಯತೆಗಳಿಗೆ ಉಂಟೆ ಸಮಯವು ಓ ವೈದ್ಯನೇ!
ವೈದ್ಯೋ ನಾರಾಯಣ ಹರಿಹಿ! 
ವೈದ್ಯೋ ನಾರಾಯಣ ಹರಿಹಿ!
-------------------------------------------------------------------------------------------------

ಪ್ರೇಮಮ್ ಪೂಜ್ಯಮ್ (೨೦೨೧) - ಪ್ರೇಮಮ್ ಪೂಜ್ಯಮ್
ಸಂಗೀತ ಹಾಗು ಸಾಹಿತ್ಯ : ರಾಘವೇಂದ್ರ, ಗಾಯನ : ಹರಿಹರನ

ಪ್ರೆಮಂ ಪೂಜ್ಯಂ, ದೈವಂ ಚರಣಂ ನಿತ್ಯಂ ನಿಲಯಂ, ಸತ್ಯಂ ವರದಂ
ಆ ನಿನ್ನ ನಗುವೇ ವರದಾನ ಈ ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ ಈ ಮೌನ ಸ್ನೇಹ ಸಮ್ಮಾನ 

ನಮ್ಮ ಈ ಬಂಧನ ಇದು ಸುರ ಗಾಯನ
ನಿನ್ನ ಈ ಪ್ರೀತಿ ಕಂದನ ಆಕ್ರಂದನ
ನಿನ್ನ ಚಿರ ಯವ್ವನ ಬಲು ಮನಮೋಹನ
ಈ ಪರಮ ವರ್ಷಕೆ ಕೊಡೆಯ ಆಲಿಂಗನ ಆಲಿಂಗನ..
ಪ್ರೆಮಂ ಪೂಜ್ಯಂ, ದೈವಂ ಚರಣಂ ನಿತ್ಯಂ ನಿಲಯಂ, ಸತ್ಯಂ ವರದಂ

ಕಿರುಗಣ್ಣ ನೋಟ ಬಹುಮಾನ ಅನುಕೂಲವಾಯ್ತು ಹವಮಾನ
ನಾ ನಿನ್ನ ಹೃದಯಕೆ ಯಜಮಾನ ಆ ನಿನ್ನ ಬೈಗುಳ ಸವಿಗಾನ
ನಿನ್ನ ಈ ಸ್ಪಂದನ ಎನ್ನ ಚಿರವಂದನ
ಬರಡಾದ ನೆಲದಲ್ಲಿ ನಿಜ ಕಾನನ 
ನೀ ವರಚಂದನ ಎನ್ನ ಮನ ಚಿಂತನ
ಈ ಹೃದಯ ಸಾಗರದ ಮಹಾ ಮಂಥನ ಮಂಥನ..
ಪ್ರೆಮಂ ಪೂಜ್ಯಂ, ದೈವಂ ಚರಣಂ ನಿತ್ಯಂ ನಿಲಯಂ, ಸತ್ಯಂ ವರದಂ
-------------------------------------------------------------------------------------------------

ಪ್ರೇಮಮ್ ಪೂಜ್ಯಮ್ (೨೦೨೧) - ಪ್ರೇಮಮ್ ಪೂಜ್ಯಮ್
ಸಂಗೀತ ಹಾಗು ಸಾಹಿತ್ಯ : ರಾಘವೇಂದ್ರ, ಗಾಯನ : ಹರಿಹರನ

-------------------------------------------------------------------------------------------------

No comments:

Post a Comment