1692. ಹುಡುಗಾಟ (೨೦೦೭)

ಹುಡುಗಾಟ ಚಲನಚಿತ್ರದ ಹಾಡುಗಳು 
  1. ಒಮ್ಮೊಮ್ಮೆ ಹೀಗು ಆಗುವುದು
  2. ಸ್ಟೈಲೋ ಸ್ಟೈಲೋ 
  3. ಮಂದಾಕಿನಿಯೇ 
  4. ಅರೇ ಅರೇ ಸಾಗುತಿದೆ 
  5. ಇಷ್ಟು ಜನ ಚೆಲುವೆಯರಲ್ಲಿ 
  6. ಏನೋ ಒಂಥರಾ... 
  7. ನೆನಪಾಗಿದೇ .. 

ಹುಡುಗಾಟ (೨೦೦೭) - ಒಮ್ಮೊಮ್ಮೆ ಹೀಗು ಆಗುವುದು
ಸಂಗೀತ : ಜೆಸ್ಸಿ ಗಿಫ್ಟ್, ಸಾಹಿತ್ಯ : ಕವಿರಾಜ, ಗಾಯನ : ಅಲಿಷಾ ಚಿನ್ನಯ, ಜುಬಿನ್ ಗರ್ಗ್ 
 
ಆಲಿಶ: ಒಮ್ಮೊಮ್ಮೆ ಹೀಗು ಆಗುವುದು ಎಲ್ಲಿಯೋ ಮನಸು ಜಾರುವುದು
          ಯಾರನ್ನು ಜೀವ ಬೇಡುವುದು ಯೇಹಿ ತೊ ಹೆ ಜಿಂದಗಿ
ಜುಬಿನ್: ಒಮ್ಮೊಮ್ಮೆ ಹೀಗು ಆಗುವುದು ಎಲ್ಲಿಯೋ ಮನಸು ಜಾರುವುದು
            ಯಾರನ್ನು ಜೀವ ಬೇಡುವುದು ಯೇಹಿ ತೊ ಹೆ ಜಿಂದಗಿ
            ಯೆಹಿ ತೊ ಹೆ ಯೇಹಿ ತೊ ಹೆ ಜಿಂದಗಿ
ಆಲಿಶ: ಒಮ್ಮೊಮ್ಮೆ ಹೀಗು ಆಗುವುದು ಎಲ್ಲಿಯೋ ಮನಸು ಜಾರುವುದು
          ಯಾರನ್ನು ಜೀವ ಬೇಡುವುದು  ಯೇಹಿ ತೊ ಹೆ ಜಿಂದಗಿ

ಜುಬಿನ್: ನಿನ್ನೊಂದಿಗೆ ಹೇಳೊದಕ್ಕೆ ಮಾತೀಗ ನೂರಾರಿದೆ
ಆಲಿಶ: ಮಾತಿಗ ನೂರಾರಿದೆ ಈ ಅಂಜಿಕೆ ಹೀಗೇತಕೆ ನಂಗೀಗ ತಡಿಯಾಗಿದೆ
ಜುಬಿನ್: ಎದುರಿದ್ದರು ನೀ ದೂರ ಕಣೆ ದೂರಾದರು ನೀ ಸನಿಹ ಕಣೆ
ಆಲಿಶ: ನಿಂಗು ಗೊತ್ತು ನಂಗೂನು ಗೊತ್ತು ನನ್ನ ನಿನ್ನ ಮನಸಲಿ ಏನುಂಟು
ಜುಬಿನ್: ಹೇಳೊದಕ್ಕೆ ಮಹಾ ಧೈರ್ಯ ಬೇಕು
ಆಲಿಶ: ಹೇಳಿದ್ ಮೇಲೆ ಒಪ್ಪ್ಕೊಬೇಕು ಮುಂದೇನಾಗುತ್ತೊ ಯಾರಿಗೊತ್ತು
ಜುಬಿನ್: ಒಮ್ಮೊಮ್ಮೆ ಹೀಗು            ಆಲಿಶ: ಆಗುವುದು
ಜುಬಿನ್: ಎಲ್ಲಿಯೋ ಮನಸು           ಆಲಿಶ: ಜಾರುವುದು
ಜುಬಿನ್: ಯಾರನ್ನು ಜೀವ ಬೇಡುವುದು
ಆಲಿಶ: ಯೆಹಿ ತೊ ಹೆ ಜಿಂದಗಿ ಯೆಹಿ ತೊ ಹೆ  ಯೆಹಿ ತೊ ಹೆ ಜಿಂದಗಿ

ಜುಬಿನ್: ಮುದ್ದಾಡಿದ ಗುದ್ದಾಡಿದ ಅಲೆದಾಡಿದ ದಿನಗಳು
ಆಲಿಶ: ಅಲೆದಾಡಿದ ದಿನಗಳು ಈ ಸ್ನೇಹದ ಸಮ್ಮೊಹದ ಸಂತೋಷದ ಕ್ಷಣಗಳು
ಜುಬಿನ್: ನನ್ನೊಂದಿಗೆ ನೀ ಕಿತ್ತಾಡಲು ನಿನ್ನೊಂದಿಗೆ ನಾ ರೇಗಾಡಲು
            ಏನೊ ತಂದು ಇನ್ನೇನೊ ಅಂದು ಮತ್ತೆ ನನ್ನ ನಗಿಸಿ ನೀ ನಗುವೆ
            ಕಿತ್ತಾಡಿದ್ರು ಗುದ್ದಾಡಿದ್ರು ತಂಟೆ ಮಾಡೊ ತುಂಟಿ ಆದ್ರು ನೀನು ನಂಗೇಕೊ ಇಷ್ಟ ಕಣೆ 
           ಒಮ್ಮೊಮ್ಮೆ ಹೀಗು ಆಗುವುದು ಎಲ್ಲಿಯೋ ಮನಸು ಜಾರುವುದು
           ಯಾರನ್ನು ಜೀವ ಬೇಡುವುದು ತು ಹಿ ಮೇರಿ ಜಿಂದಗಿ
ಆಲಿಶ: ತು ಹಿ ಮೇರಿ ತು ಹಿ ಮೇರಿ ಜಿಂದಗಿ
-----------------------------------------------------------------------------------------------------

ಹುಡುಗಾಟ (೨೦೦೭) - ಸ್ಟೈಲೋ ಸ್ಟೈಲೋ
ಸಂಗೀತ : ಜೆಸ್ಸಿ ಗಿಫ್ಟ್, ಸಾಹಿತ್ಯ : ಕವಿರಾಜ, ಗಾಯನ : ಜಾರ್ಜ್ ಪೀಟರ್, ಪ್ರಸನ್ನ, ಜೆಸ್ಸಿ ಗಿಫ್ಟ್

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಗೆಲುವೆ ನನ್ನಯ ಲೈಫಿನ ಫ್ಯಾಶನ್ ನನಗೆ ಇಲ್ಲವೊ ಯಾವುದೆ ಟೆಂಶನ್
ನಗಿಸಿ ನಗುವುದೆ ನಮ್ಮಯ ಫ್ಯಾಶನ್ ಎಲ್ಲೆ ಹೋದರು ನಾವ್ ಸೆಂಸೇಶನ್
ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಕೈತುಂಬಾ ಕಾಸಿದ್ರೆ ಮೈತುಂಬಾ ಜೋಶಿದ್ರೆ ಜಗವೆಲ್ಲ ಜೇಬಲ್ಲಿ ಸ್ವರ್ಗಾನೆ ಅಂಗೈಲಿ
ಆ ಸೂರ್ಯ ಬಾನಲ್ಲಿ ಹುಟ್ತಾನೆ ನಮ್ ಕೇಳಿ
ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ
ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಉಳಿಯೋಕೆ ೫ ಸ್ಟಾರು ಸುತ್ತೇಲ್ಲ ಹುಡುಗೀರು ಲೈಫಲ್ಲಿ ಗ್ಲಾಮ್ಮರ್ರು ಇದ್ರ್‍ಏನೆ ಸೂಪರ್ರು
ನಾನೇನೆ ಮಾಡಿದ್ರು ನನ್ಯಾರು ಕೇಳೋರು
ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ
-----------------------------------------------------------------------------------------------------

ಹುಡುಗಾಟ (೨೦೦೭) - ಮಂದಾಕಿನಿಯೇ
ಸಂಗೀತ : ಜೆಸ್ಸಿ ಗಿಫ್ಟ್, ಸಾಹಿತ್ಯ : ಕವಿರಾಜ, ಗಾಯನ : ಜೆಸ್ಸಿ ಗಿಫ್ಟ್, ವಸುಂಧರದಾಸ್

ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ
ಹೋದ ಕಡೆ ಬಂದ ಕಡೆ ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು ಸುಮ್ನೆ ಹೋಗನೆಂದು
ಅರೆ, ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ

ಸಹ್ಯಾದ್ರಿ ಸಾಲಲಿ ಸೊಂಪಾದ ಕಾಡಲಿ
ತಿಂಡುಂದು ಕೊಬ್ಬಿದಂತ ಜಿಂಕೆನ್ಯಾರು ಹಿಡಿದರೊ
ಮತ್ತೇಕೆ ತಂದು ಹಿಂಗೆ ರೋಡಿನಲ್ಲಿ ಬಿಟ್ಟರೊ
ಈ ಮಾಯ ಜಿಂಕೆಯ ಮುಟ್ಟೊಕೆ ಆಸೆಯ
ಹಿಡಿಯೋಕೆ ಬಂದ್ರೆ ನೀನೆ ಬಲೆಗೆ ಬಿದ್ದು ಬಿಟ್ಟಿಯ
ಚಂದವು ಜಾಸ್ತಿಯು ಅದೆ ನನ್ನ ಆಸ್ತಿಯು
ಏನೆ ಆದರೂನು ನೀನು ಮಸ್ತು ಮಸ್ತು ಬೊಂಬೆಯು
ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ

ಒಂದ್ಸೊಲ್ಪ ಬೆಂಕಿನಾ ಒಂದ್ಸೊಲ್ಪ ಬೆಣ್ಣೆನಾ
ಒಟ್ಟಾಗಿ ರುಬ್ಬಿ ಬ್ರಹ್ಮ ನಿನ್ನ ಮಯ್ಯ ಮಾಡಿದ
ಅಬ್ಬಬ್ಬಾ ನಿಜಕು ರಸಿಕ ಆ ಕಲಾವಿದ
ಇಂದ್ರಾನು ಬೇಡಿದ ಚಂದ್ರಾನು ಕಾಡಿದ
ಅವ್ರ್ಯಾರು ಬೇಡ ಅಂದೆ ಆಗ ನಿಂಗೆ ನೀಡಿದ
ಎಂಥಹ ಭಾಗ್ಯವೊ ನೀನೆ ಯೋಗ್ಯವೊ
ಅಂಕೆ ಮೀರಿ ಆಡಬ್ಯಾಡ ಯಾಕೊ ಶಂಕೆ ಬರುತಿದೆ
ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ
ಹೋದ ಕಡೆ ಬಂದ ಕಡೆ ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು ಸುಮ್ನೆ ಹೋಗನೆಂದು
ಅರೆ, ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ ಸುಡಬೇಡ ತಡಿಯೆ
-----------------------------------------------------------------------------------------------------

ಹುಡುಗಾಟ (೨೦೦೭) - ಅರೇ ಅರೇ ಸಾಗುತಿದೆ
ಸಂಗೀತ : ಜೆಸ್ಸಿ ಗಿಫ್ಟ್, ಸಾಹಿತ್ಯ : ಜಯಂತ ಕಾಯ್ಕಿಣಿ , ಗಾಯನ : ನರೇಶ ಅಯ್ಯರ, ಚಿತ್ರಾ

ಅರೆ ಅರೆ ಸಾಗುತಿದೆ ಪ್ರೀತಿಯ ಗಾಳಿಗೆ ನಿನ್ನಯ ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೊ ನೋಡಲಾರೆ
ಆದರು ಯಾಕೆ ಪ್ರೀತಿ ಮಾಡುತ್ತಾರೆ ಅಲೆ ಅಲೆ ಮೂಡುತಿದೆ
ಚಂದ್ರನ ಗಾಲಿಗೆ ಚಂದದ ತೀರಕೆ ಈ ಮನ ಓಡುತಿದೆ

ಪ್ರೀತಿಯಂದರೆ ಮರಳಿನ ಮೇಲೆ ಬೆರಳು ಗೀಚುವ ಚಿತ್ತಾರ
ಪ್ರೀತಿಯಂದರೆ ಕೆಲಸವಿಲ್ಲದ ಎರಡು ಹೃದಯಗಳ ಗ್ರಹಚಾರ
ಪ್ರೀತಿ ಹುಸಿಯಾ ಆಕಾಶ ಹೊನ್ನಕಿರಣಾ
ಪ್ರೀತಿ ಪ್ರಣಯ ಮಾತೆಲ್ಲ ಕಾಲಹರಣ
ಕೇವಲ ನೀನು ಮಾತಿನ ಮಲ್ಲ ಪ್ರೀತಿಯ ಮೌನ ಕಂಡವನಲ್ಲ
ಅರೆ ಅರೆ ಸಾಗುತಿದೆ ಪ್ರೀತಿಯ ಗಾಳಿಗೆ ನಿನ್ನಯ ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೊ ನೋಡಲಾರೆ
ಆದರು ಯಾಕೆ ಪ್ರೀತಿ ಮಾಡುತ್ತಾರೆ
ಅಲೆ ಅಲೆ ಮೂಡುತಿದೆ
ಚಂದ್ರನ ಗಾಲಿಗೆ ಚಂದದ ತೀರಕೆ ಈ ಮನ ಓಡುತಿದೆ

ಪ್ರೀತಿ ಸೋಜಿಗಾ ಪ್ರೀತಿ ಸಂಭ್ರಮ ನವಿರು ನೆನಪಿನ ಕರೆಯೋಲೆ
ಪ್ರೀತಿ ವಂಚನೆ ಪ್ರೀತಿ ಚಂಚಲ ಕಣ್ಣ ಹನಿಗಳೆ ಜಪಮಾಲೆ
ಪ್ರೀತಿ ಹೂವು ಬಹುಮಾನ ಕಣ್ಣ ಬೆಳಕು
ಪ್ರೀತಿ ನೋವು ಅವಮಾನ ಹಳೆಯ ಸರಕು
ಕೇವಲ ನೀನು ಮಾತಿನ ಮಲ್ಲ ಪ್ರೀತಿಯ ಮೌನ ಕಂಡವನಲ್ಲ
ಅರೆ ಅರೆ ಸಾಗುತಿದೆ ಪ್ರೀತಿಯ ಗಾಳಿಗೆ ನಿನ್ನಯ ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೊ ನೋಡಲಾರೆ ಆದರು ಯಾಕೆ ಪ್ರೀತಿ ಮಾಡುತ್ತಾರೆ
ಅಲೆ ಅಲೆ ಮೂಡುತಿದೆ ಚಂದ್ರನ ಗಾಲಿಗೆ ಚಂದದ ತೀರಕೆ ಈ ಮನ ಓಡುತಿದೆ
-----------------------------------------------------------------------------------------------------

ಹುಡುಗಾಟ (೨೦೦೭) - ಇಷ್ಟು ಜನ ಚೆಲುವೆಯರಲ್ಲಿ
ಸಂಗೀತ : ಜೆಸ್ಸಿ ಗಿಫ್ಟ್, ಸಾಹಿತ್ಯ : ಕವಿರಾಜ, ಗಾಯನ : ಕಾರ್ತಿಕ, ಚೇತನ, ಜೆಸ್ಸಿ ಗಿಫ್ಟ್

ಅಬ್ಬಬ್ಬಾ ಏನ್ ಹುಡ್ಗೀರ್ ಗುರು ಇದ್ರಲ್ಲಿ ನಮ್ ಹುಡ್ಗಿ ಯಾರು ಯಾರು
ವ್ಹುಸ್ ದಟ್ ಗರ್ಲ್ ವ್ಹುಸ್ ದಟ್ ಗರ್ಲ್
ಇಷ್ಟು ಜನ ಚೆಲುವೆಯರಲ್ಲಿ ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು ಒಮ್ಮೆ ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾ ಹಿಂದೆ ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ ತಿರುಗೆ ನೋಡಬಾರದೆನು

ಎಡಗಡೆ ಬಲಗಡೆ ಬಲಗಡೆ ಎಡಗಡೆ ಹುಷಾರ್ ಹುಷಾರ್
ಅಗೊ ಅಗೊ ಅಗೊ ಅಗೊ ಅಗೊ ಅಗೊ ಅವಳ ಅವಳ
ಇಗೊ ಇಗೊ ಇಗೊ ಇಗೊ ಇಗೊ ಇಗೊ ಇವಳ ಇವಳ
ಒಲವಿನ ಚೆಲುವಿನ ಸೊಬಗಿನ ಹುಡುಗಿಯ ಬೆಡಗಿನ ಗೆಳತಿಯ
ಸಿಗೆ ಸಿಗೆ ಸಿಗೆ ಸಿಗೆ  ಸಿಗೆ ಸಿಗೆ ಸಿಗೆ ಸಿಗೆ
ಇಷ್ಟು ಜನ ಚೆಲುವೆಯರಲ್ಲಿ ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು ಒಮ್ಮೆ ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾ ಹಿಂದೆ ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ ತಿರುಗೆ ನೋಡಬಾರದೆನು
ವ್ಹುಸ್ ದಟ್ ಗರ್ಲ್

ಹೊಸದಿನ ಹೊಸತನ ನೂತನ ವರುಷವು ಶುರು ಶುರು ಶುರು
ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ ಜಿಗಿದು ಜಿಗಿದು
ಕುಡಿ ಕುಡಿ ಕುಡಿ ಕುಡಿ ಕುಡಿ ಕುಡಿ ಕುಡಿ ಕುಡಿ ಅದು ಇದು ಅದು
ಕಲೆಯುವ ಬೆರೆಯುವ ಜಗವನೆ ಮರೆಯುವ ಸ್ವರ್ಗವೆ ಇಲ್ಲಿದೆ
ಬಿಡು ಬಿಡು ಮರಿ ಮರಿ ಎಲ್ಲ ಎಲ್ಲ ಸರಿ ಸರಿ ಸರಿ
ಇಷ್ಟು ಜನ ಚೆಲುವೆಯರಲ್ಲಿ ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು ಒಮ್ಮೆ ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾ ಹಿಂದೆ ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ ತಿರುಗೆ ನೋಡಬಾರದೆನು
----------------------------------------------------------------------------------------------------

ಹುಡುಗಾಟ (೨೦೦೭) - ಏನೋ ಒಂಥರಾ...
ಸಂಗೀತ : ಜೆಸ್ಸಿ ಗಿಫ್ಟ್, ಸಾಹಿತ್ಯ : ಕವಿರಾಜ, ಗಾಯನ : ಶಾನ್ , ಶ್ರೇಯಾ ಘೋಷಾಲ್

ಗಂಡು : ಏನೋ ಒಂದ್ತರ, ಏನೋ ಒಂದ್ತರ ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ
           ಏನೋ ಒಂದ್ತರ, ಏನೋ ಒಂದ್ತರ ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ
          ಹೇಗೊ ಇದ್ದೆ ನಾ, ಹೇಗೋ ಆದೆ ನಾ, ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ
          ಇಂಥ ಈ ದಿನ, ಇಂಥ ಈ ಕ್ಷಣ ಹೀಗೇನೆ ಇರಬೇಕು ಎಂದೂ ಬಾಳಲ್ಲಿ
ಹೆಣ್ಣು : ಏನೋ ಒಂದ್ತರ, ಏನೋ ಒಂದ್ತರ ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ
          ನಿನ ನೆನಪಲೆ ಮೈಮರೆಯುವೆ ಅದು ಎಲ್ಲಿಗೆ ನಾನಿದ್ದರೂ ನಿನ ಹೆಸರನೇ ನಾ ಬರೆಯುವೆ
          ಅದು ಏನನ್ನೇ ನಾ ಬರೆಯಹೋದರು ಕಳವಳ ತಳಮಳ
          ನೀ ದೂರ ಹೋದಾಕ್ಷಣ ನಾನಿಲ್ಲ ಆ ತತ್ಕ್ಷಣ ನಿನದೇ ಜೀವನ
ಗಂಡು : ಏನೋ ಒಂದ್ತರ, ಏನೋ ಒಂದ್ತರ       ಹೆಣ್ಣು : ಈ ಪ್ರೀತಿಯು
ಗಂಡು : ಈ ರೀತಿಯು                                  ಹೆಣ್ಣು : ಶುರುವಾದ ಆನಂತರ

ಗಂಡು : ಮುಂಜಾನೆಯೊ, ಮುಸ್ಸಂಜೆಯೊ ನೀನಿದ್ದಾಗ ಆನಂದವೋ
ಹೆಣ್ಣು : ಆಯ್ ಲವ್ ಯೂ ಮಾತಾಗಲಿ, ಹಾಡಾಗಲಿ ನಿನ ದನಿಯಿಂದ ಎಲ್ಲಾನು ಚಂದವೋ
ಗಂಡು : ಸುಮಧುರ                              ಹೆಣ್ಣು : ಸಡಗರ
ಗಂಡು : ಜೊತೆಯಾಗಿ ನೀನಿದ್ದರೆ             ಹೆಣ್ಣು: ಬದುಕಾಗಿ ನೀ ಬಂದರೆ
ಗಂಡು : ಭುವಿಯೇ ಆ ಸ್ವರ್ಗವೂ
ಹೆಣ್ಣು : ಏನೋ ಒಂದ್ತರ, ಏನೋ ಒಂದ್ತರ ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ
ಗಂಡು : ಹೇಗೊ ಇದ್ದೆ ನಾ                     ಹೆಣ್ಣು : ಹೇಗೋ ಆದೆ ನಾ
ಗಂಡು : ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ
ಹೆಣ್ಣು : ಇಂಥ ಈ ದಿನ              
ಗಂಡು : ಇಂಥ ಈ ಕ್ಷಣ ಹೀಗೇನೆ ಇರಬೇಕು ಎಂದು ಬಾಳಲ್ಲಿ
ಹೆಣ್ಣು : ಏನೋ ಒಂದ್ತರ, ಏನೋ ಒಂದ್ತರ
ಗಂಡು : ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ
----------------------------------------------------------------------------------------------------

ಹುಡುಗಾಟ (೨೦೦೭) - ನೆನಪಾಗಿದೇ ..
ಸಂಗೀತ : ಜೆಸ್ಸಿ ಗಿಫ್ಟ್, ಸಾಹಿತ್ಯ : ಕವಿರಾಜ, ಗಾಯನ : ರಾಜಲಕ್ಷ್ಮಿ, ವಿಜಯ ಏಸುದಾಸ್

ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ

ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ

ಸ್ವಾತಿಯಲಿ ಮುತ್ತಾಯಿತು ಈ ನನ್ನೆದೆಯ ಚಿಪ್ಪಿನಲಿ
ಇನ್ಯಾರದೊ ಕೈ ಸೇರಿತು ಬರಿ ನೋವೊಂದೆ ಉಳಿದಿದ್ದು ಇಲ್ಲಿ 
ಸರಿಯೇ ಈ ರೀತಿಯು ಭ್ರಮೆಯೇ ಆ ಪ್ರೀತಿಯು
ಅರಿಯೇ ನಾನೇನನು
ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ

ನಾ ನಂಬಿದೆ ನಿನ್ನೊಲವನು ನನ್ನ ನಂಬಿಕೆಯೆ ಉರುಳಾಯಿತೆ
ಈ ಪ್ರೀತಿಯು ತನ ನಂಬೋರನು ಅದು ಎಂದೆಂದು ಕಾಯುವುದಂತೆ
ಬದುಕೇ ಅಯೋಮಯ ಬಿಡು ನೀ ಅತಾಶಯ 
ಇರಲಿ ಸದಾಶಯ
ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗಿದೆ ನೆನಪಾಗಿದೆ
-----------------------------------------------------------------------------------------------------

No comments:

Post a Comment