1697. ಜೂ..ಟ್ (೨೦೦೨)


ಜೂ..ಟ್ ಚಲನಚಿತ್ರದ ಹಾಡುಗಳು 
  1. ನೀನು ಅವಳಾಗಬಹುದು
  2. ನಾನು ನಾನಾಗಿ ಇಲ್ಲ
  3. ನನ್ನ ಸುಂದರ ಕನಸು
  4. ಚಕ್ಕುಲಿ ಗಿಲಿ ಗಿಲಿ 
  5. ಸಹ್ಯಾದ್ರಿಯ ತುದಿಯಲ್ಲಿ 
  6. ಕಾಲೇಜಿಗೂ ಥ್ಯಾಂಕ್ಸ್ 
  7. ವಾಟ್ ಮಾಮೂ 
ಜೂ..ಟ್ (೨೦೦೨) - ನೀನು ಅವಳಾಗಬಹುದು
ಸಂಗೀತ: ಸಾಹಿತ್ಯ ಹಂಸಲೇಖ,  ಗಾಯನ : ಎಸ್ ಪಿ ಬಿ

ನೀನು ಅವಳಾಗಬಹುದು ನಿನಗು ಮನಸಾಗಬಹುದು
ಸುಮ್ನೆ ತಮಾಷೆಗೆ ಉಹಿಸ್ಕೊ ಜಸ್ಟ್ ಥಿಂಕ್ ಕಲ್ಪಿಸ್ಕೊ
ತಾರೆ ತುಂಬಾನೆ ದೂರ ನೀನೆ ಆ ತಾರೆ ಆದ್ರೆ
ಹೂವು ತುಂಬಾನೆ ಮೃದು ನೀನೆ ಆ ಹೂ ಆದ್ರೆ
ಎಟಕುವ ತಾರೆ ನಲಗದ ಹೂವು ನೀನಾಗ್ತೀಯ 
ರಿಯಾಲಿಟಿ ಇನ್ ಇಮ್ಯಾಜಿನೇಶನ್ ರೈಟ್ ರೈಟ್ ಜೂಟ್...  ಜೂಟ್...  
ನೀನು ಅವಳಾಗಬಹುದು ನಿನಗು ಮನಸಾಗಬಹುದು
ಆಶ್ಚರ್ಯವೇನು ಆಶ್ಚರ್ಯವೇನು ಆಗಬಾರದೇನು

ಪ್ರೀತಿ ಶುರುವಾಗಬಹುದು ಕನಸೆ ನಿಜವಾಗಬಹುದು
ಆಶ್ಚರ್ಯವೇನು ಏಹೇ... ಕನಸನ್ನೆ ನೀನು ಕಂಡಿಲ್ಲವೇನು
ಇದರಲ್ಲಿ ಮುಳುಗೋಕೆ ಇದರಲ್ಲಿ ಮುಳುಗೋಕೆ
ಒಂದು ಘಳಿಗೆ ಒಂದು ಭೇಟಿ ಒಂದು ನೋಟ ಒಂದು ಮಾತು
ಸಾಕು ಸಾಕು ಕಣೆ ಸಾಕೆ ಸಾಕು ಕಣೆ 
ನೀನು ಅವಳಾಗಬಹುದು ನಿನಗು ಮನಸಾಗಬಹುದು

ಕಣ್ಣೆರಡು ನಕ್ಷತ್ರ ಮೂಗೊಂದು ಸಂಪಿಗೆ ಹೂ
ಉಪಮಾನ ಇತ್ಯಾದಿ ಕೇಳಿ ಕೇಳಿ ಕಿವುಡಾದಿ
ನಿಜ ಹೇಳುವೆ ಕೇಳಿ ಆಲೋಚಿಸು
ಜೂ...ಟ್ ಎಂದರೇನು ನೀನೆ ಅಲ್ಲವೇನು
ಸ್ವಾರೀ ...  ತಪ್ಪಾಯಿತೇನು ಹೊಸದಾಗಿ ಹೊಗಳೋದೆ
ಹೊಸದಾಗಿ...... ಹೊಗಳೋದೆ..... 
ಹೆಣ್ಣು ಇರದ ಲೋಕ ಉಂಟು ಬೆನ್ನು ಬಿಡದ ಪ್ರೀತಿ ಉಂಟೆ ?
ಬೇಕು ಬೇಕು ಕಣೆ ಹೆಣ್ಣು ಬೇಕೆ ಬೇಕು ಕಣೆ
ತಾರೆ ನೀನಾಗಬಹುದು ಚಂದ್ರ ನಾನಾಗಬಹುದು
ಆಗಬಾರದೇನು ನಾನು ನಿಂಗೆ ಒಳ್ಳೆ ಜೋಡಿ ಅಲ್ಲವೇನು ?
ನೀನೊಬ್ಬ ಕವಿಯಾಗು ಎಂದು ನೀನನ್ನಬಹುದು
ಅಯ್ಯೊ ಕುರಿ ಕಾಯುವವನು ಎಂದು ನಾನನ್ನಬಹುದು
ನಿನ್ನಂದ ಕಲಿಸೊ ಸರಸ್ವತಿಯೆ ಆಗಬಾರದೇನು
ಕಾಳಿದಾಸನಲ್ಲು ಕೇಡಿಲ್ಲವೇನು ?
ಅಂದವೆ ಗುರುವಾಗಿ ಅಂದವೆ ಬದುಕಾಗಿ
ಅಂದ ನೀನಿರದೆ ನಾನು ಚಂದಮಾಮನಾಗಲೇನು
ನಿನ್ನಂದ ನನ್ನುಳಿಸೊ ಶ್ರೀಮತಿಯೆ ಆಗಬಾರದೇನು
ನನ್ನ ನಿನ್ನ ಮದುವೆ ಸಾಧ್ಯವಿಲ್ಲವೇನು ?
ನಿನ್ನೊಡನೆ ಮೆರೆಯೋಕೆ ನಿನ್ನೊಡನೆ ಮೆರೆಯೋಕೆ
ನಿನ್ನ ಅಂದ ನಿನ್ನ ಚಂದ ಪ್ರೀತಿ ಎಂಬ ಪುಷ್ಪಗಂಧಾ
ಸಾಕು ಸಾಕು ಕಣೆ ಸಾಕೆ ಸಾಕು ಕಣೆ
ಹೂವು ನೀನಗಾಬಹುದು ದುಂಬಿ ನಾನಾಗಬಹುದು
ಆಶ್ಚರ್ಯವೇನು ಹೂವಂತೆ ನೀನು ಹೆಣ್ಣಲ್ಲವೇನು
-------------------------------------------------------------------------------------------------------

ಜೂ..ಟ್ (೨೦೦೨) - ನಾನು ನಾನಾಗಿ ಇಲ್ಲ
ಸಂಗೀತ: 
ಸಾಹಿತ್ಯ :ಹಂಸಲೇಖ,  ಗಾಯನ : ಚಿತ್ರ 

ನಾನು ನಾನಾಗಿ ಇಲ್ಲ ಮನಸು ಮೊದಲಂತೆ ಇಲ್ಲ
ಆಶ್ಚರ್ಯವೇನು ಮೊದಲಿನಂತೆ ನಾನು
ಇರಲೆಬೇಕೇನು ನಾನು ಸನ್ಯಾಸಿನಿ ಅಲ್ಲಾ
ಪ್ರೀತಿ ಕಹಿಯೇನು ಅಲ್ಲಾ ಆಶ್ಚರ್ಯವೇನು
ನಾನು ಕೂಡ ಪ್ರೀತಿ ಮಾಡಬಾರದೇನು
ಇದರಲ್ಲೀ ಮುಳುಗೊಕೇ ಇದರಲ್ಲೀ... ಮುಳುಗೊಕೇ.... 
ಒಂದು ಘಳಿಗೆ ಒಂದು ಭೇಟಿ ಒಂದು ನೋಟ ಒಂದು ಮಾತು
ಸಾಕೆ ಸಾಕು ಕಣೊ ಸಾಕೆ ಸಾಕು ಕಣೊ ನಾನು ....

ನಾನಿಂದು ಎಣೆಸಿಲ್ಲ ಬೇಕೆಂದು ಬಯಸಿಲ್ಲ ಹಾಗಂತ ಈ ನನ್ನ
ಮನಸೇನು ಕಲ್ಲಲ್ಲ ನಿಜ ಹೇಳುವೆ ಕೊಡುವೆಯ ಉತ್ತರ
ಹೂವಂತೆ ನಾನು ಹೊಂಬಿಸಿಲು ತಾಕಿ ಅರಳಬಾರದೇನು
ಇದರಲ್ಲೀ ಕರಗೊಕೇ ಇದರಲ್ಲೀಈಈ ಕರಗೊಕೇಏಏ
ಮಾತು ಕೇಳೊ ಒಂದು ಮನಸು ನೀತಿ ತಿಳಿಸೊ
ಒಂದೆ ಕನಸು ಸಾಕೆ ಸಾಕು ಕಣೊ ಸಾಕೆ ಸಾಕು ಕಣೊ
ತಾರೆ ನಾನಾಗಬಹುದು ಚಂದ್ರ ನೀನಾಗಬಹುದು
ಆಗಬಾರದೇನು ನಾನು ನಿಂಗೆ ಒಳ್ಳೆ ಜೋಡಿ ಅಲ್ಲವೇನು

ಆಆ ಋತುವಂತೆ ಬದಲಾದೆ ಮನದಲ್ಲೆ ಬಯಲಾದೆ
ಹೊಸದೊಂದು ಲೋಕದಲ್ಲಿ ಅಡಿಯಿಟ್ಟ ಶಿಷುವಾದೆ
ಬದಲಾವಣೆ ಶಾಶ್ವತ ಅನಿಸಿದೆ ಆಶ್ಚರ್ಯವೇನು ಏನು
ಅನಿಸಬೇಕು ಎಂಬ ವಯಸಿಲ್ಲವೇನು
ಈ ತಂಪು ತಂಗಾಳಿ ತಂದ ಸಿಹಿ ಸುದ್ದಿ ಕೇಳಿ
ನನ್ನ ಎದೆ ನನ್ನ ಮನಸು ಉಕ್ಕಿ ಉಕ್ಕಿ ಕಡಲಾಗಿ
ನಾ ಮೆಚ್ಚಿದ ಚಂದ್ರನಾ ಕೂಗಿದೆ ಆಶ್ಚರ್ಯವೇನು ಏನು
ಮನದೆದೆಯ ಮಾತು ಹೇಳಬಾರದೇನು ಇದರಲ್ಲೀ ಮುಚ್ಚಿಡಲೂ
ಇದರಲ್ಲೀ... ಮುಚ್ಚಿಡಲೂ..... ಸುಮ್ಮನಿಲ್ಲಾ ಕೂಗೆ ಇಲ್ಲಾ
ಕಲ್ಪನೆಗಳ ಕಂತೆ ಇಲ್ಲ ಪ್ರೀತಿ ಒಂದೆ ಕಣೊ ಪ್ರೀತಿ ಒಂದೆ ಕಣೊ
ಹೂವು ನಾನಾಗಬಹುದು ದುಂಬಿ ನೀನಾಗಬಹುದು
ಆಶ್ಚರ್ಯವೇನು ಏನು ಹೂವಂತೆ ನಾನು ಹೆಣ್ಣಲ್ಲವೇನು
-------------------------------------------------------------------------------------------------------

ಜೂ..ಟ್ (೨೦೦೨) - ನನ್ನ ಸುಂದರ ಕನಸು
ಸಂಗೀತ: 
ಸಾಹಿತ್ಯ :ಹಂಸಲೇಖ,  ಗಾಯನ : ಚಿತ್ರ 

ಎಸ್.ಪಿ.ಬಿ: ನನ್ನ ಸುಂದರ ಕನಸು  ಈ ಭೂಮಿಗೆ ಬಂತು ಅದು ನೀನೆ ಅದು ನೀನೆ ಅದು ನೀನೆ
                ಓಡಿ ಬಾ ಓಡಿ ಬಾ ನನ್ನ ಬಾಳಿಗೆ ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಚಿತ್ರ: ನನ್ನ ಹರೆಯದ ಆಸೆ ನಡೆದಾಡುತ ಬಂತು ಅದು ನೀನೆ ಅದು ನೀನೆ ಅದು ನೀನೆ
       ಓಡಿ ಬಾ ಓಡಿ ಬಾ ನನ್ನ ಬಾಳಿಗೆ ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ

ಎಸ್.ಪಿ.ಬಿ: ದಿನಚರಿ ಎಲ್ಲ ಬದಲಾಗಿದೆ ಬದಲಾಗಿದೆ ಹಗಲುಗನಸಿದು ಮೊದಲಾಗಿದೆ ಮುದವಾಗಿದೆ
ಚಿತ್ರ: ನೆನೆಯುವುದೊಂದೆ ಸುಖವಾಗಿದೆ ಸುಖವಾಗಿದೆ ನೆನಪುಗಳೆಲ್ಲ ಸಿಹಿಯಾಗಿದೆ ಮನದುಂಬಿದೆ
ಎಸ್.ಪಿ.ಬಿ: ಓಡಿ ಬಾ ಓಡಿ ಬಾ ನನ್ನ ಬಾಳಿಗೆ ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಚಿತ್ರ: ನನ್ನ ಹೃದಯದ ಆಯ್ಕೆ ಈ ತೋಳಿಗೆ ಬಂತು ಅದು ನೀನೆ ಅದು ನೀನೆ ಅದು ನೀನೆ
ಎಸ್.ಪಿ.ಬಿ: ಓಡಿ ಬಾ ಓಡಿ ಬಾ ಬಾ ನನ್ನ ಬಾಳಿಗೆ ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
ಚಿತ್ರ: ಹೃದಯವು ಅಕ್ಷರ ಕಲಿಯುತಿದೆ ತಿದ್ದುತಿದೆ ಪ್ರೀತಿಯ ಪದವ ಬರೆಯುತಿದೆ ಓದುತಿದೆ
ಎಸ್.ಪಿ.ಬಿ: ಮನದ ಕರಾರು ಬರೆದಾಗಿದೆ ಮುದ್ದಾಗಿದೆ ಓದುವುದೇಕೆ ಸಹಿ ಮಾಡುವೆ ಸರಿಯಾಗಿದೆ
ಚಿತ್ರ: ಓಡಿ ಬಾ ಓಡಿ ಬಾ ನನ್ನ ಬಾಳಿಗೆ ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ

ಎಸ್.ಪಿ.ಬಿ: ನನ್ನ ಹಸಿರು ಸಂಕೇತ          ಚಿತ್ರ: ಒಂದು ಹೃದಯವ ತಂತು
ಎಸ್.ಪಿ.ಬಿ: ಅದು ನೀನೆ                        ಚಿತ್ರ: ಅದು ನೀನೆ
ಎಸ್.ಪಿ.ಬಿ: ಅದು ನೀನೆ                        
ಚಿತ್ರ: ಓಡಿ ಬಾ ಓಡಿ ಬಾ ನನ್ನ ಬಾಳಿಗೆ ಅಪ್ಪುಗೆ ಒಪ್ಪಿಗೆ ತಂದ ತೋಳಿಗೆ
-------------------------------------------------------------------------------------------------------

ಜೂ..ಟ್ (೨೦೦೨) - ಚಕ್ಕುಲಿ ಗಿಲಿ ಗಿಲಿ 
ಸಂಗೀತ: 
ಸಾಹಿತ್ಯ :ಹಂಸಲೇಖ,  ಗಾಯನ : ಅನುರಾಧ ಶ್ರೀರಾಮ್ 

-------------------------------------------------------------------------------------------------------

ಜೂ..ಟ್ (೨೦೦೨) - ಸಹ್ಯಾದ್ರಿಯ ತುದಿಯಲ್ಲಿ 
ಸಂಗೀತ: 
ಸಾಹಿತ್ಯ :ಹಂಸಲೇಖ,  ಗಾಯನ : ಹೇಮಂತ 

-------------------------------------------------------------------------------------------------------

ಜೂ..ಟ್ (೨೦೦೨) - ಕಾಲೇಜಿಗೂ ಥ್ಯಾಂಕ್ಸ್ 
ಸಂಗೀತ: 
ಸಾಹಿತ್ಯ :ಹಂಸಲೇಖ,  ಗಾಯನ : ಎಸ್.ಪಿ.ಬಿ, ಲತಾ ಹಂಸಲೇಖ 

-------------------------------------------------------------------------------------------------------

ಜೂ..ಟ್ (೨೦೦೨) - ವಾಟ್ ಮಾಮೂ 
ಸಂಗೀತ: 
ಸಾಹಿತ್ಯ :ಹಂಸಲೇಖ,  ಗಾಯನ : ಚೇತನ, ಹೇಮಂತ  

-------------------------------------------------------------------------------------------------------

No comments:

Post a Comment