1704. ೧೦ನೇ ತರಗತಿ (೨೦೧೯)



೧೦ನೇ ತರಗತಿ ಚಲನಚಿತ್ರದ ಹಾಡುಗಳು
  1. ಪುಟ್ಟ ಹೃದಯ 
  2. ಮಾರಿ ಹಬ್ಬ 
  3. ಎಲ್ಲಿರುವೆ ಎಲ್ಲಿರುವೆ 
  4. ಕಣ್ಣಲ್ ಕಾಡಲೇ 
  5. ಎಲ್ಲಿರುವೆ ಎಲ್ಲಿರುವೆ 
೧೦ನೇ ತರಗತಿ (೨೦೧೯) - ಪುಟ್ಟ ಹೃದಯ 
ಸಂಗೀತ : ಸಾಹಿತ್ಯ : ರುದ್ರಿ ರಿಷಿಕ್,  ಗಾಯನ : ಮೆಹಬೂಬ ಸಾಬ್ 

ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ 
ಹುಡುಗಾಟದ ವಯಸ್ಸಲ್ಲಿ ಪ್ರೀತಿ ಮಾಡುವ ರೀತಿ 
ಹೃದಯಕ್ಕೆ ರೆಕ್ಕೆಯ ಕಟ್ಟಿ ಮಾಡ್ತಾರೇ ಪ್ರೀತಿ 
ಭಾವನೆಯ ಗರಿಯ ಬಿಚ್ಚಿ ಹಾರುವ ರೀತಿ.. 
(ಜೂಮ್ ತನನನಾ  ಜೂಮ್ ತನನನಾ  ಜೂಮ್ ತನನನಾ  ಜೂಮ್ ಜೂಮ್ 
ಜೂಮ್ ತನನನಾ  ಜೂಮ್ ತನನನಾ  ಜೂಮ್ ತನನನಾ  ಜೂಮ್ ಜೂಮ್ )
ನೇರ.. ನೇರೆರೇರಾ... ನೇರ.. ನೇರೆರೇರಾ ... ನೇರ.. ನೇರೆರೇರಾ  
 
ತುದಿಗಾಲಲ್ಲಿ ನಿಂತೇ ಹೊರಗೆ ಬರುವೆ ಎಂದೂ ಎನ್ನ ಬಳಿಗೆ 
ಬಲಗಾಲಿಟ್ಟು ಎದೆಯ ಒಳಗೆ ಬರುತಾ ನೀನು ತಂದೆ ಸಲಿಗೆ 
ಪುಟ್ಟ ಹೃದಯ ಇಂದು ಪಟ್ಟು ಹಿಡಿದು ನನ್ನ ಬಿಚ್ಚು ಮಾಡಿ ಒಲವ ಪುಟ ತಿರುಗಿಸಿದೆ 
ಹೃದಯಕ್ಕೆ ರೆಕ್ಕೆಯ ಕಟ್ಟಿ ಮಾಡ್ತಾರೇ ಪ್ರೀತಿ 
ಭಾವನೆಯ ಗರಿಯ ಬಿಚ್ಚಿ ಹಾರುವ ರೀತಿ.... 

ಎದುರು ನಿಂತು ಸೆಳೆದಳು ಮನಸ ಬೊಂಬೆಯಂತೆ ನಿಂತನು ಅರಸ 
ಅವಳ ನೋಟ ಎಂಥಾ ಸೆಳೆತ ಜೋರು ಜೋರು ಹೃದಯದ ಬಡಿತ 
ಯಾರಿಗೋ ಬರೆದ ಪ್ರೇಮದ ಪತ್ರವ ಕದ್ದು ನಲ್ಲೆ ಓದಿದಳೇ ಒಲವಲ್ಲಿ ಬಿದ್ದಳು ಅಲ್ಲೇ.... 
ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ 
ಹುಡುಗಾಟದ ವಯಸ್ಸಲ್ಲಿ ಪ್ರೀತಿ ಮಾಡುವ ರೀತಿ 
-----------------------------------------------------------------------

೧೦ನೇ ತರಗತಿ (೨೦೧೯) - ಮಾರಿ ಹಬ್ಬ 
ಸಂಗೀತ : ಸಾಹಿತ್ಯ : ರುದ್ರಿ ರಿಷಿಕ್,  ಗಾಯನ : ಶ್ರೀಹರ್ಷ 

ಮಾರಿ ಹಬ್ಬಕ್ಕ ಹೋಗಿದ್ದವಂತೇ ಚೆನ್ನಾಗ್ ತಿನ್ನಕಂಡ್ ಬಂದವಂತೇ 
ಕುರಿ ಕೋಳಿ ಎಲ್ಲಾ ಹೊಟ್ಟೆ ಒಳಗೆ ಕುಣಿತಾವೇ 
ಸರಿಯಾಗಿ ಇತ್ತು ತಮಟೆ ಏಟು ಹುಡುಗೀರು ಗುಂಪು ಮುಂದೆ ಇತ್ತು 
ಬಿಲ್ಡ್ ಅಪ್ಪಲ್ಲಿ  ಸ್ಟೆಪ್ ಹಾಕ್ಬಿಟ್ಟು ಉಣಕೊಂಡ್ ಬಂದಾವೇ.. 
ನಾಟಿ ಕೋಳಿ ಸಾಂಬರೂ... ಬಾಯಲ್ಲಿ ಫ್ಲೇವರೂ 
ಫೀಲ್ ಮಾಡ್ತಾ ಕೆರೆ ಕಟ್ಟೇಲ್ ತೇಗುತ್ತಿದ್ದವೋ..  
ಚಿಕ್ಕೆರೇಲಿ ಬಿದ್ದವೂ ... ದೊಡ್ಡಕೆರೇಲಿ ಎದ್ದವೂ 
ಊರಲ್ಲಿ ಇಂಥವೇ  ಕ್ವಾಟ್ಲೇಗುಟ್ಟಾದವೋ  
ತನನನ  ನನ ನನ ತನನನ  ನನ ನನ 
ತನನನ  ನನ ನನ ತನನನ  ನನ ನನ 
ತನನನ  ನನ ನನ ತನನನ  ನನ ನನ  
 
ಫೈವ್ ಸ್ಟಾರೂವೇಸ್ಟೋ ಫುಟಪಾತ್ ಟೆಸ್ಟೂ ಬ್ಯಾನ್ ಆಯ್ತು ನೋಟು ಬ್ಲಾಕ್ ಏಂಡ್ ವೈಟೂ 
ಬ್ಯಾನ್ ಆಯ್ತು ನೋಟು ಬ್ಲಾಕ್ ಏಂಡ್ ವೈಟೂ 
ನಾವ್ ತುಂಬಾ  ಡೇರೋ ನಮಗಿಲ್ಲ ಫೀಯರೂ ನಾವ್ ತುಂಬಾ ಚಿಕ್ಕೋರು ಕುಡಿತೀವಿ ಬೀರೂ 
ನಾವ್ ತುಂಬಾ ಚಿಕ್ಕೋರು ಕುಡಿತೀವಿ ಬೀರೂ 
ಒಂದ್ ಊರಲ್ಲಿ ಹುಡುಗ್ (ಆ) ಒಂದೂ ಹುಡುಗೀನ್ (ಆ) ಅವರೌವ್ವಯಿತೇ ಜೊತೆ ಜಗಳ ಮಾಡ್ತಿರ್ತ್ತನೇ .. (ಅಲೆಲೆಲೇ)
ಆದರೆ ಹುಡುಗೀರ್ ಅಪ್ಪಾ (ಆ) ಹುಡುಗ್ರನ್ ಅವ್ವನೇ ಲವ್ವ್ ಮಾಡ್ತಾ ಇರ್ತಿರ್ತಾನೇ  (ಅಯ್ಯಯ್ಯೋ) 
ಕೊನೆಗೆ ಅವರ್ಪ್ಪನಿಗೂ ಇವರವ್ವನ್ಗೂ ಮದುವೆ ಆಗ ಹೋಯ್ತದೇ..  (ಹಂಗೆನಾ )
ಅವರಪ್ಪಂಗೆ ಲವ್ವ್ ಲೆಟರ್ ಬರೆದು ಕೊಟ್ಟನೋ ಯಾರೂ.. (ಯಾರಣ್ಣಾ ) ನಮ್ಮ್ ಮಾಧೂ ಕಣ್ಣಲ್ಲಾ .. 
(ಅಯ್ಯೋ ದುರ್ವಿಧಿಯೇ... )   
ಲವ್ ಲೇಟರ ಪವರೂ ಆಗಿಲ್ಲ ಫೇಲ್ಯೂರೂ ಏನ್ ಬರೀತನೇ ಗುರೂ .. ನಮ್ಮ ರೈಟರೂ..  
ಬರಸ್ಕೊಂಡು ಹೋದೋರು ಲವ್ ಪಾಸ್ ಆಗಹೋದರೂ ಇವನೆನೇ ಊರಿಗೆಲ್ಲಾ ಆದ ಲವ್ ಗುರು 
ತನನನ  ನನ ನನ ತನನನ  ನನ ನನ 
ತನನನ  ನನ ನನ ತನನನ  ನನ ನನ 
ತನನನ  ನನ ನನ ತನನನ  ನನ ನನ  

ಊರಲ್ಲಿರೋ ಕುಂಟ ಮುಟ್ಟೆ ಬುಟ್ಟಾ ಸೊಂಟ 
ರಾಗಿ ಮಷಿನೇ ಮಂಜ ಮಷಿನ ಬಿಡದ ಚೆಂದ 
ಹುಡುಗೀರ ಹಿಂದೆ ಕೃಷ್ಣ ಎನಿ ಟೈಮೂ ಉಷ್ಣಾ   
ಡಿಸೆಂಟ್ ಹುಡುಗ ಸುಂದರ ಅಮವ್ಯಾಸೇ ಚಂದ್ರ ಗಂಡೈಕ್ಕಳ  ಕ್ಯಾರೇಕ್ಟರೋ..... 
ಮೂಲೆಮನೇ ಪಾರೂ ಅವರಪ್ಪಂದೈತೆ ಬಾರೂ 
ಆಂಗ್ರಿ ಬರ್ಡ್ ಶಿಲ್ಪಾ ಹಂಡ್ರೆಡ್ ಕ್ಯಾಂಡಲ್ ಬಲ್ಪ್ 
ಕ್ಯಾಂಡಿ ಕ್ರಶೂ ಶಾಂತೀ ಮದ್ವುಗೆ ಮುಂಚೆ ವಾಂತಿ 
ನಮ್ಮೂರ ಫೀಗರ ಗೀತಾ ಹಿಂದೇ ಬಿದ್ದೋರ ಗ್ವಾತ ಹೆಣ್ಣಾಯಕ್ಳು ಕ್ಯಾಟೆರ್ ಬಿಲ್ಲೋ... (ಅಣ್ಣಾ ಬಾಸೂ )
ಊರೊಲ್ಲೊಂದು ಕಟ್ ಔಟ್ ನಿಲ್ಲಿಸೀ.. ಟೀ ಶರ್ಟ್ ಮೇಲೆ ಫೋಟೋ ಹಾಕ್ಸಿ 
ನಮ್ಮೂರ ಹುಡಗ್ರೆಲ್ಲಾ ಕಲರ್ ಎತ್ತಕಂಡ್ ನಿಂತಾವೇ 
ಥೇಟರ್ ಹತ್ರ ಬ್ಯಾನರ್  ಹೊಡ್ಸಿ ಬಂದಾರೋಗೆಲ್ಲ ಸಿಹಿ ತಿನಿಸಿ 
ಬ್ಲ್ಯಾಕಲ್ ಟಿಕೇಟ್ ಸಿಗದೇ ಇದ್ದರೂ ಒಳಗೆ ಕುಂತಾವೇ 
ಮೈಸೂರೂ ಬಾಯ್ಸಗಳೂ ನಾವ್ ಡೀ ಬಾಸ್ ಫ್ಯಾನಗಳೂ 
ನಮಸ್ತೇ ಅಭಿಮಾನಿಸ್ ಮಂಡ್ಯದೈಕಳು  ಕರುನಾಡ ಸಾರಥಿ ಕನ್ನಡದ ಕೀರುತಿ 
ಚಾಲೆಂಜಿಂಗಳ ನಿಲ್ಲೋದಿಲ್ಲ  ಪಕ್ಕದ ಸ್ಟೇಟಗಳು  
ತನನನ  ನನ ನನ ತನನನ  ನನ ನನ 
ತನನನ  ನನ ನನ ತನನನ  ನನ ನನ 
ತನನನ  ನನ ನನ ತನನನ  ನನ ನನ  
-----------------------------------------------------------------------

೧೦ನೇ ತರಗತಿ (೨೦೧೯) - ಎಲ್ಲಿರುವೆ ಎಲ್ಲಿರುವೆ 
ಸಂಗೀತ : ಸಾಹಿತ್ಯ : ರುದ್ರಿ ರಿಷಿಕ್,  ಗಾಯನ : ಸಿದ್ದಾರ್ಥ ಬೆಲ್ಮನು 

ಎಲ್ಲಿರುವೇ ಎಲ್ಲಿರುವೇ ಮರೆಯಾಗಿ ಹೋಗಿರುವೇ 
ನೀ ನಿಲ್ಲದ ನೋವೆನಲ್ಲೇ ಸೆರೆಯಾಗಿ ಹೋಗಿರುವೇ  
 
ಬರುವ ದಾರಿಗೆ ಬೆಂಕಿ ಹಚ್ಚಿ ಬಿಟ್ಟೇ ನೀ...ನೂ 
ತೂಗೋ ಸೇತುವೆ ಕಡಿದು ದಡದಿ ನಿಂತೇ.. ಏನೋ   
ನಗಲಾರೇ ಇನ್ನೂ...  ನಿನ್ನ ಮನಸ್ಸೂ ಮಾಡಿದ ತಪ್ಪಿಗೇ  
ಜೊತೆ ನಿಲ್ಲುವೇ ನಾನೂ ಅಂಜಿಕೆ ಮರೆತೂ ಬಾ ಗೆಳತೀ 
ನಿನಗಾಗೆ ಕಾದಿರುವೇ... ಓ .. ನೀನೆಂದೂ  ತಿರುಗಿ ಬರುವೇ .. ಬಾ 
ಎಲ್ಲಿರುವೇ ಎಲ್ಲಿರುವೇ ಮರೆಯಾಗಿ ಹೋಗಿರುವೇ 

ನೆನಪಿಂದು ನೆನಪೆಲ್ಲಾ ಅವಳಿಂದು ಬರಲಿಲ್ಲ 
ಬಿಡದಂತೆ ಕಾಡುವ ನೆನಪೊಂದೇ ನನಗೆಲ್ಲಾ.. 
ಒಲವಿಲ್ಲಿ ಒಲವೆಲ್ಲಾ ಅವಳಿರದೇ ಬಲವಿಲ್ಲ  
ಮಿಸುಕಾಡುದಂತೇ ಕಾಣುತಿದೆ ಜಗವೆಲ್ಲಾ... 
ಯಾರಿದ್ದರೇನೋ ...  ಇರದಿದ್ದರೇನೋ  
ನನಗೀಗ ನಾನು ಒಬ್ಬಂಟಿಯೇನೋ ... 
ಮರೆತಿದ್ದರೇನೋ... ಒಲವಿಲ್ಲವೇನೋ.. 
ನೀನಗಾಗಿ ಅಳುವೇ ಚಿನ್ನ ಒಮ್ಮೆ ಬಂದೂ ನಗಿಸೋ ನನ್ನ 
ಎಲ್ಲಿರುವೇ ಎಲ್ಲಿರುವೇ ಮರೆಯಾಗಿ ಹೋಗಿರುವೇ 
ನೀನಿಲ್ಲದ ನೋವೆನಲ್ಲೇ ಸೆರೆಯಾಗಿ ಹೋಗಿರುವೇ...  

ನೀನಿಲ್ಲ ನೀನಿಲ್ಲಾ ನೀನಿರದೇ ನಾನಿಲ್ಲಾ... 
ನಾನಿಲ್ಲದೇನೇ ಹಸೆಮಣೆ ಏರಿದೆಯಲ್ಲಾ.. 
ಸರಿಯಲ್ಲ ಸರಿಯಲ್ಲ ಬ್ರಹ್ಮ ಸರಿ ಬರಿದಿಲ್ಲ 
ಉಸಿರಿದ್ದರೂನು ಮಸಣದಿ ಜಾರಿದೇನಲ್ಲಾ 
ನಿನಗಾಗಿ ಕಾದು ನಿಂತಿರುವೇ ನಾನು ನಿನ್ನ ನೆನಪಲ್ಲೇ ಕುಂತಿರುವೇ ನಾನು 
ನಿನೀರುವೇ ಎಂದೂ ಬಂದಿರುವೇ ನಾನೂ 
ದಯಮಾಡಿ ವರೀಸು ನನ್ನ ಸಾವು ಆವರಿಸುವ ಮುನ್ನ... 
ಎಲ್ಲಿರುವೇ ಎಲ್ಲಿರುವೇ ಮರೆಯಾಗಿ ಹೋಗಿರುವೇ 
ನೀನಿಲ್ಲದ ನೋವೆನಲ್ಲೇ ಸೆರೆಯಾಗಿ ಹೋಗಿರುವೇ...  
-----------------------------------------------------------------------

೧೦ನೇ ತರಗತಿ (೨೦೧೯) - ಕಣ್ಣಲೇ ಕಾಡಲೇ 
ಸಂಗೀತ : ಸಾಹಿತ್ಯ : ರುದ್ರಿ ರಿಷಿಕ್,  ಗಾಯನ : ಅನುರಾಧ ಭಟ್ಟ, ಶ್ರೀ ಹರ್ಷ  

ಗಂಡು : ಕಣ್ಣಲ್ ಕಾದಲೇ ನನ್ನ ಕಾಡ್ತಾಳೇ.... ಹಾರ್ಟಿ ಇಂದೂ ಪರವಶಾ... 
           ಕಾದಲ್ ಎಲ್ಲೇ ಮೀರಿ ಹೋದರೇ ... ಏದಿರಾಗೂ ನೀ ಆ ದಿವಸಾ..  
           ಓ ಮೈ ಡ್ರೀಮಂದನೇ ಇಳಿದೂ ಬರುವ ಮಳೆ ಚೆನ್ನ ಚೆನ್ನ 
           ಅವಳಾ ಬ್ಯೂಟಿಗೇ ಸೋಲಿಗೇ ತನು ಮನ  ಕ್ಷಣ.. 
ಕೋರಸ್ : ಧೀನ್ ಧಿನತ್ ತಕಧಿಮ್ ತಾ ತೋಮ್ ತರಿಕಿಟ ತಾ 
                ತೋಮ್ ತೋಮ್ ತಾ ತಕಧಿನಿ ತಾ ಧೀಮ್ ತರಿಕಿಟ ತಾ 
                ಧೀನ್ ಧಿನತ್ ತಕಧಿಮ್ ತಾ ತೋಮ್ ತರಿಕಿಟ ತಾ 
               ತೋಮ್ ತೋಮ್ ತಾ ತಕಧಿನಿ ತಾ ಧೀಮ್ ತರಿಕಿಟ ತಾ 
ಗಂಡು : ಕಣ್ಣಲ್ ಕಾದಲೇ ನನ್ನ ಕಾಡ್ತಾಳೇ.... ಹಾರ್ಟಿ ಇಂದೂ ಪರವಶಾ... 
           ಕಾದಲ್ ಎಲ್ಲೇ ಮೀರಿ ಹೋದರೇ ... ಏದಿರಾಗೂ ನೀ ಆ ದಿವಸಾ..  

ಗಂಡು : ವಿನೂತನ... ನಿರೂಪನಾ ... ಈದಿನ ದಿನಾ  ದಿನಾನೆನಪಿನಾ...  
ಹೆಣ್ಣು : ಈ ಕ್ಷಣ (ಓಓಓ ) ದಿನಾ ದಿನಾ (ಓಓಓ ) ನಿನ್ನಾ  ಮನೋವರ ಹೂವಾಗೀ ಹೋದೇ ನಾ... 
ಗಂಡು : ಸಾವಿರ ತಾರೇ... ನಿನ್ನಯ ಮೋರೇ ... ನೆನಪಿದ್ದೀ ಈ ವರೆಗೂ ಯಾರೇ... ಅಹ್ಹಹ್ಹಹ್ಹ.. 
           ಯಾರೇ... ಯಾರೇ....      
ಕೋರಸ್ : ಧೀನ್ ಧಿನತ್ ತಕಧಿಮ್ ತಾ ತೋಮ್ ತರಿಕಿಟ ತಾ 
                ತೋಮ್ ತೋಮ್ ತಾ ತಕಧಿನಿ ತಾ ಧೀಮ್ ತರಿಕಿಟ ತಾ 
                ಧೀನ್ ಧಿನತ್ ತಕಧಿಮ್ ತಾ ತೋಮ್ ತರಿಕಿಟ ತಾ 
               ತೋಮ್ ತೋಮ್ ತಾ ತಕಧಿನಿ ತಾ ಧೀಮ್ ತರಿಕಿಟ ತಾ 

ಕೋರಸ್ : ರೀಯಾ ... ರೀಯಾ ... ರೀಯಾ ... ಓ  ರೀಯಾ ... ರೀಯಾ ... ರೀಯಾ ... ಓ 
                ರೀಯಾ ... ರೀಯಾ ... ರೀಯಾ ... ಓ  ರೀಯಾ ... ರೀಯಾ ... ರೀಯಾ ... ಓ 
ಹೆಣ್ಣು : ಶುಭಾಶಯ... (ಓಓಓ ) ನನ್ನಾಶಯ ... (ಓಓಓ ) ಭಾವ ಸಿಹಿಮಯಾ .. ಪ್ರೀತಿ ವಿನಿಮಯಾ... 
ಗಂಡು : ನನ್ನಾಸೆಯಾ.. (ಓಓಓ ) ಕಣ್ಣ ಭಾಷೆಯಾ... (ಓಓಓ)  ನನ್ನಾ ನಿರೀಕ್ಷೆಯ.. ಸಿಹಿ ಮಾಡಿದೆಯಾ 
ಹೆಣ್ಣು : ಈ ಹೂವಿನ ಸಾರ ಚುಂಮ್ಮಿಸೋ ಬಾರಾ..  ನನ್ನರಸಿ ಮರೆಸಿ ಯಾವರಿಸೂ...  ಅಹ್ಹಹ್ಹ .. 
ಗಂಡು : ಕಣ್ಣಲ್ ಕಾದಲೇ ನನ್ನ ಕಾಡ್ತಾಳೇ.... ಓಹೋ ... ಕಾದಲ್ ಎಲ್ಲೇ ಮೀರಿ ಹೋದರೇ ... 
-------------------------------------------------------------------------------------------

೧೦ನೇ ತರಗತಿ (೨೦೧೯) - ಎಲ್ಲಿರುವೆ ಎಲ್ಲಿರುವೆ 
ಸಂಗೀತ : ಸಾಹಿತ್ಯ : ರುದ್ರಿ ರಿಷಿಕ್,  ಗಾಯನ : ಅನುರಾಧ ಭಟ್ಟ 

ಎಲ್ಲಿರುವೇ ಎಲ್ಲಿರುವೇ ನಿನಗಾಗಿ ಕಾದಿರುವೇ 
ನೀ ಬೇಡಿದ ಜೋಗದಲ್ಲಿ ಒಂಟಿಯಾಗಿ ನಿಂತಿರುವೇ .... 
 
ಬರುವ ದಾರಿಗೆ ಬೆಂಕಿ ಹಚ್ಚಿ ಬಿಟ್ಟೇ ನಾ...ನೂ 
ತೂಗೋ ಸೇತುವೆ ಕಡಿದು ದಡದಿ ನಿಂತೇ.. ನಾ.. ನೂ   
ಹ್ಹೂಂ.. ನಗಲಾರೇ ಇನ್ನೂ...    
ಮನಸ್ಸೂ ಅರಿಯದೇ ಮಾಡಿದ ತಪ್ಪಿಗೇ  
ಕ್ಷಮೆಯಿಲ್ಲವೇ..ನೋ  ಮನ್ನಿಸಿ ಮರೆಯದೇ ಬಾ ಗೆಳೆಯಾ 
ನಿನಗಾಗಿ ಕಾದಿರುವೇ... ಆ.. ನೀನೆಂದೂ  ಬಳಿ ಬರುವೇ .. ಬಾ 
ಎಲ್ಲಿರುವೇ ಎಲ್ಲಿರುವೇ ನಿನಗಾಗಿ ಕಾದಿರುವೇ 

ಕನಸ್ಸಿಲ್ಲಿ ಕನಸೆಲ್ಲಾ ಅವನಿಂದು ಬರಲಿಲ್ಲ 
ಬಿಡದಂತೆ ಕಾಡುವ ಕನಸೊಂದೇ ನನಗೆಲ್ಲಾ.. 
ಒಲವಿಲ್ಲಿ ಒಲವೆಲ್ಲಾ ಅವನಿರದೇ ಫಲವಿಲ್ಲ  
ಮಿಸುಕಾಡುದಂತೇ ಕಾಣುತಿದೆ ಜಗವೆಲ್ಲಾ... 
ಯಾರಿದ್ದರೇನೋ ...  ಇರದಿದ್ದರಿಂದೂ 
ನನಗೀಗ ನಾನು ಒಬ್ಬಂಟಿಯೇನೂ ... 
ಮುನಿಸಿದ್ದರೇನೋ... ಒಲವಿಲ್ಲವೇನೋ.. 
ನನಗಾಗಿ ಒಮ್ಮೆ ಬಂದೂ ನಗಿಸೋ ನನ್ನ ಅಳುವ..  ನನ್ನ 
ಅ .. ಎಲ್ಲಿರುವೇ ಎಲ್ಲಿರುವೇ ನಿನಗಾಗಿ ಕಾದಿರುವೇ 
ನೀ ಬೇಡಿದ ಜೋಗದಲ್ಲಿ ಒಂಟಿಯಾಗಿ ನಿಂತಿರುವೇ .... 

ಅಂದು ಕೋರಿಕೆಯಲ್ಲಾ.. ನನ್ನೋ ಬೇಡಿಕೆಯೆಲ್ಲಾ 
ಎದುರಿಲ್ಲದೇ..ನೇ ನಿಂತು ಕಾಡಿದಿಯಲ್ಲಾ... 
ಕನಸೋ ಕಟ್ಟಿದ ನಲ್ಲಾ...   ಒಲವ ಬಿತ್ತಿದ ನಲ್ಲಾ... 
ಮರೆಯೋಕೆ ಇಂದೂ.. ನೆನೆಪಾಟೂ ಇದನಲ್ಲಾ... 
ಸಿನಿಮಾದ ನೀನೂ ಜರಿದದ್ದೇ ನಾನೂ .. 
ಹುಡುಕಿದರೇ ಇಂದೂ ಸುಳಿವಿಲ್ಲ ನೀನೂ .. 
ಬಡವಾಗಿ ನಾನೂ.. ಇದು ಪ್ರೀತಿ ಏನೋ.. 
ತಿಳಿದಿಲ್ಲ ನೀನೇ ತಿಳಿಸೋ ಎದುರು ಬಂದು  ಎದುರಾಗನ್ನ ... 
ಎಲ್ಲಿರುವೇ ಎಲ್ಲಿರುವೇ ನಿನಗಾಗಿ ಕಾದಿರುವೇ 
ನೀ ಬೇಡಿದ ಜೋಗದಲ್ಲಿ ಒಂಟಿಯಾಗಿ ನಿಂತಿರುವೇ .... 
----------------------------------------------------------------------

No comments:

Post a Comment