1706. ಕಾವೇರಿ ತೀರದಲ್ಲಿ (೧೯೯೪)

ಕಾವೇರಿ ತೀರದಲ್ಲಿ ಚಲನಚಿತ್ರದ ಹಾಡುಗಳು 
  1. ಕಾವೇರಿ ತೀರದಲಿ
  2. ಆಗುಂಬೆಯ
  3. ಕುಣಿದಾಡಿದೆ ಹೆಜ್ಜೆಗಳು 
  4. ಓ ಚೈತ್ರದ ಕೋಗಿಲೆಯೇ 
  5. ಕಾವೇರಿ ತೀರದಲಿ (ಲತಾ) 
  6. ಬಾಳು ನಂಜಾಯಿತೇ 
  7. ಓ ಚೈತ್ರದ ಕೋಗಿಲೆಯೇ (ಮಂಜುಳಾ) 
ಕಾವೇರಿ ತೀರದಲ್ಲಿ (೧೯೯೪) - ಕಾವೇರಿ ತೀರದಲಿ
ಸಂಗೀತ : ವಿಜಯಾನಂದ  ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ  

ಗಂಡು : ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ (ಲಲಲ ಲಲಲ ಲಲಲ )
           ಮಲೆನಾಡ ಮಡಿಲಿನಲಿ ಭೂದೇವಿ ಸೆರಗಿನಲಿ ಪ್ರೇಮ (ಲಲಲ ಲಲಲ ಲಲಲ )
ಹೆಣ್ಣು : ತಂಗಾಳಿ ತಂಪೆರೆದು ಮುನ್ನೂರು ನುಡಿ ಬರೆದ ಪ್ರೇಮ (ಲಲಲ ಲಲಲ ಲಲಲ )
          ಶೃಂಗಾರ ಕಾವ್ಯದಲಿ ಸಂಗಾತಿಯ ಪಡೆದ ಪ್ರೇಮ (ಲಲಲ ಲಲಲ ಲಲಲ )
ಗಂಡು : ನಾನು ನೀನು ನಲಿವಾ ದಿನ 
ಹೆಣ್ಣು : ಹಾಲು ಜೇನು ಬೆರೆತಾ ಕ್ಷಣ
ಗಂಡು : ನೂರಾಸೆ ಮನದಲ್ಲಿ ನೀರಾಗಿ ಹರಿದಂತಿದೆ... 
            ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ (ಲಲಲ ಲಲಲ ಲಲಲ )

(ಪರಿರಿಸನಿ ರಿಮಪಪ ದನಿ ಸಾನಿರಿ ಮಮಾಪಪ )
ಗಂಡು : ನನ್ನೆದೆಯ ಗುಡಿಯಲ್ಲಿ ದೈವಶಿಲೆ ನೀ ನಾ ಬಯಸಿ ಪಡೆದಂಥ ಜೀವಶಿಲೆ ನೀ
ಹೆಣ್ಣು : ಚಿಮ್ಮುತಿದೆ ಆಸೆಗಳು ನಿನ್ನೊಲವಲೀ ಆಣೆ ಇಡು ನಾ ಬರುವೆ ಬಾಳತೀರಲಿ
ಗಂಡು : ನಾನ್ನೊಂದು ಸುಮವಾಗಿ ಕೈ ಸೇರುವೆ
ಹೆಣ್ಣು : ಸುಮ ನನ್ನ ಉಸಿರೆಂದು ನಾ ಸಾರುವೆ
ಇಬ್ಬರು : ಜೀವ ಜೀವ ಸೇರಿ ಪ್ರೇಮಗೀತೆಯಾಗಿದೆ
ಗಂಡು : ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ (ಲಲಲ ಲಲಲ ಲಲಲ )

(ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಲಲ )
ಹೆಣ್ಣು : ಚುಕ್ಕಿಗಳು ಬಾನಿನಲಿ ಕಾವಲಿರಲಿ...  ಪ್ರೀತಿ ರಥ ಸಾಗಿರಲೂ ಸಾಕ್ಷಿಯಿರಲಿ
ಗಂಡು : ಹುಣ್ಣಿಮೆಯ ಕಣ್ಣಿನಲಿ ಪ್ರೀತಿಯಿರಲಿ..  ಬಂಧನವು ಸುಖವೆಂದು ಹೇಳುತಿರಲಿ
ಹೆಣ್ಣು : ಇರಲಾರೆ ಕ್ಷಣಕಾಲ ದೂರಾಗಿ ನಾ
ಗಂಡು : ತರಲಾರೆ ನೋವನ್ನು ಬೇರಾಗಿ ನಾ
ಇಬ್ಬರು : ಜೀವ ಜೀವ ಸೇರಿ ಪ್ರೇಮಗೀತೆಯಾಗಿದೆ
ಗಂಡು : ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ (ಲಲಲ ಲಲಲ ಲಲಲ )
ಹೆಣ್ಣು : ತಂಗಾಳಿ ತಂಪೆರೆದು ಮುನ್ನೂರು ನುಡಿ ಬರೆದ ಪ್ರೇಮ (ಲಲಲ ಲಲಲ ಲಲಲ )
ಗಂಡು : ನಾನು ನೀನು ನಲಿವಾ ದಿನ 
ಹೆಣ್ಣು : ಹಾಲು ಜೇನು ಬೆರೆತಾ ಕ್ಷಣ
ಗಂಡು : ನೂರಾಸೆ ಮನದಲ್ಲಿ ನೀರಾಗಿ ಹರಿದಂತಿದೆ
ಇಬ್ಬರು: ಕಾವೇರಿ ತೀರದಲಿ ಸಂಕ್ರಾಂತಿ ಸಂಜೆಯಲಿ ಪ್ರೇಮ (ಲಲಲ ಲಲಲ ಲಲಲ )
--------------------------------------------------------------------------------------

ಕಾವೇರಿ ತೀರದಲ್ಲಿ (೧೯೯೪) - ಆಗುಂಬೆಯಾ 
ಸಂಗೀತ : ವಿಜಯಾನಂದ  ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ, ಕೋರಸ್ 

ಆಗುಂಬೆಯಾ ಗೊಂಬೆಯ ನಿಂಬೇ ನೀನಾ ಮೂತಿ ನೋಡು ಕೋತಿ ಹಾಗಿದೇ .. 
ನಿನ್ನ ಕಂಡು ಹೆದರಿಕೊಂಡು ಓಡೋ ಗಂಡು ನಾನಾ... 
(ಹೇ ಹೇ ರುಕ್ಕಮ್ಮಾ)  ಈ ಸ್ಟೈಲ್ ಬೇಡಮ್ಮಾ... 
(ಹೇ ಹೇ ಪೋಸು) ಯಾಕಮ್ಮಾ... ಆಹ್ಹಾಹ್ಹಾಹಾ ಹೀರೋ ನಾನಮ್ಮಾ... 
ಆಗುಂಬೆಯಾ ಗೊಂಬೆಯ ನಿಂಬೇ ನೀನಾ ಮೂತಿ ನೋಡು ಕೋತಿ ಹಾಗಿದೇ .. 
ನಿನ್ನ ಕಂಡು ಹೆದರಿಕೊಂಡು ಓಡೋ ಗಂಡು ನಾನಾ... 
(ಹೇ ಹೇ ರುಕ್ಕಮ್ಮಾ)  ಈ ಸ್ಟೈಲ್ ಬೇಡಮ್ಮಾ... 
(ಹೇ ಹೇ ಪೋಸು) ಯಾಕಮ್ಮಾ... ಆಹ್ಹಾಹ್ಹಾಹಾ ಹೀರೋ ನಾನಮ್ಮಾ... 

ಹೆಣ್ಣು ಚೆನ್ನಾ ಕಣ್ಣು ಚೆನ್ನಾ ಅಂತಾರಲ್ಲಾ ನಿನ್ನ ನೋಡಿ ಬರೆದೋರ... 
ಶಿಲ್ಪಿ ತನ್ನ ಶಿಲ್ಪವನ್ನು ಮಾಡುವಾಗ ಎದುರು ನೀನು ನಿಂತೋಳಾ .. ಹ್ಹಾ...  
ಹೆಣ್ಣು ಚೆನ್ನಾ ಕಣ್ಣು ಚೆನ್ನಾ ಅಂತಾರಲ್ಲಾ ನಿನ್ನ ನೋಡಿ ಬರೆದೋರ... 
ಶಿಲ್ಪಿ ತನ್ನ ಶಿಲ್ಪವನ್ನು ಮಾಡುವಾಗ ಎದುರು ನೀನು ನಿಂತೋಳಾ .....  
ಓ ಇದಮ್ಮಾ ಓದು ಬಿಟ್ಟು ನಿದ್ದೆ ಬಿಟ್ಟು ಮಂಕಾದ್ನಲ್ಲಾ... (ಜಿಂಗಿ ಜಿಂಗಿ ಜಿಂಗಿ ಜಿಂಗಿ )
ಆ ಬ್ರಹ್ಮ ಕಣ್ಣು ಮುಚ್ಚಿ ಹಣೆಯ ಚಚ್ಚಿ ಸುಸ್ತಾದ್ನಲ್ಲಾ... ( ಜಿಂಗಿ ಜಿಂಗಿ ಜಿಂಗಿ ಜಿಂಗಿ )
ಓಯ್ ಮುದುಕುನು ಕೂಡ ನೋಡಿದರೇ ನಿನ್ನ ವಯಸ್ಸು ಮರೆತು ಕಣ್ಣು ಹೊಡೆವನೂ 
ಆಗುಂಬೆಯಾ ಗೊಂಬೆಯ ನಿಂಬೇ ನೀನಾ ಮೂತಿ ನೋಡು ಕೋತಿ ಹಾಗಿದೇ .. 
ನಿನ್ನ ಕಂಡು ಹೆದರಿಕೊಂಡು ಓಡೋ ಗಂಡು ನಾನಾ... 
(ಹೇ ಹೇ ರುಕ್ಕಮ್ಮಾ)  ಈ ಸ್ಟೈಲ್ ಬೇಡಮ್ಮಾ... 
(ಹೇ ಹೇ ಪೋಸು) ಯಾಕಮ್ಮಾ... ಆಹ್ಹಾಹ್ಹಾಹಾ ಹೀರೋ ನಾನಮ್ಮಾ... 

ಶೇಕು ಬ್ರೇಕು ನಂಗೆ ಗೊತ್ತು ನೋಡೇ ನೀನು ಎಲ್ಲ ಬಲ್ಲ ಭೂಪ ನಾ... 
ಜಾಕಿಚಾನು ನನ್ನ ನೋಡಿ ಭೇಷ್ ಭೇಷ್ ಎಂದ ಫೈಟ್ ಮಾಡೋ ಸ್ಟೈಲನ್ನ್ ... ಆಕ್ಷನ್.. 
ಲವ್ವು ಗಿವ್ವು ಮಾಡು ಅಂದ್ರೆ ರಾಜಾ ನಾನು ಸುಂಕವನ್ನು ಕೇಳೋಲ್ಲ... 
ನನ್ನ ಮೆಚ್ಚಿ ಒಪ್ಪಿ ಬಂದ್ರೇ ರಾಣಿ ನೀನು ಬೇರೆ ಯಾವ ಮಾತಿಲ್ಲ... 
ನೋಡಮ್ಮಾ ಚಿನ್ನದಂಥ ನಮ್ಮ ಹುಡುಗ ಜೈ ಅಂತಾನೇ.... (ವಾಟ್ )
ಏನಮ್ಮಾ ಇಷ್ಟವಿದ್ರೇ ...ಹೇಳೋ ಬೇಗ ಕೆಳ ಅಂತಾನೇ... 
ಒನ್  ವ್ವ್ ವ್ವ್ ವ್ವ್  ಓನ್  ಒನ್  ಟೂ ಟೂಟೂಟೂಟೂ ಟೂ ತ್ರೀ  ತ್ರೀತ್ರೀತ್ರೀ ತ್ರೀ  ಫೋರ್ (ಯೂ ರಾಸ್ಕಲ್ ) 
ಬೇಡವೋ ಮರಿ ನೋಡಿದರೆ ಕರೆ ಇವಳು ತುಂಬಾ ಅಂದಗಾತಿನಾ.... 
ಆಗುಂಬೆಯಾ ಗೊಂಬೆಯ ನಿಂಬೇ ನೀನಾ ಮೂತಿ ನೋಡು ಕೋತಿ ಹಾಗಿದೇ .. (ಅಯ್ಯೋ)
ನಿನ್ನ ಕಂಡು ಹೆದರಿಕೊಂಡು ಓಡೋ ಗಂಡು ನಾನಾ... 
(ಹೇ ಹೇ ರುಕ್ಕಮ್ಮಾ)  ಈ ಸ್ಟೈಲ್ ಬೇಡಮ್ಮಾ... 
(ಹೇ ಹೇ ಪೋಸು) ಯಾಕಮ್ಮಾ... ಆಹ್ಹಾಹ್ಹಾಹಾ ಹೀರೋ ನಾನಮ್ಮಾ... 
ಆಗುಂಬೆಯಾ ಗೊಂಬೆಯ ನಿಂಬೇ ನೀನಾ ಮೂತಿ ನೋಡು ಕೋತಿ ಹಾಗಿದೇ .. 
ನಿನ್ನ ಕಂಡು ಹೆದರಿಕೊಂಡು ಓಡೋ ಗಂಡು ನಾನಾ... 
(ಹೇ ಹೇ ರುಕ್ಕಮ್ಮಾ)  ಈ ಸ್ಟೈಲ್ ಬೇಡಮ್ಮಾ... 
(ಹೇ ಹೇ ಪೋಸು) ಯಾಕಮ್ಮಾ... ಆಹ್ಹಾಹ್ಹಾಹಾ ಹೀರೋ ನಾನಮ್ಮಾ... ಹ್ಹಾ 
-------------------------------------------------------------------------------------

ಕಾವೇರಿ ತೀರದಲ್ಲಿ (೧೯೯೪) - ಕುಣಿದಾಡಿದೆ ಹೆಜ್ಜೆಗಳು 
ಸಂಗೀತ : ವಿಜಯಾನಂದ  ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ, ಶೀಲಾ 

ಗಂಡು : ಆಆಆಅ ... ಆಆಆಅ ... ಆಆಆಅ ... 
ಕೋರಸ್ : ಗರಿಸಾಪ ಮಪಗಾ ಪದನಿದಾ ತೊಂತನ  ತೊಂತನ ತೊಂತನ ತೊಂತನ ತೊಂತನ 
ಹೆಣ್ಣು : ಕುಣಿದಾಡಿದೇ ಹೆಜ್ಜೆಗಳು (ತನನನಂ... ತನನನಂ) 
          ನಲಿದಾಡಿದೇ ಗೆಜ್ಜೆಗಳೂ ..   (ತನನನಂ... ತನನನಂ) 
          ಮೂರೂ ಲೋಕ ಕಂಡೇ ನಿನ್ನ ಮೌನ ಮಾತಿನಲಿ 
          ಓ ನಾನು ಧನ್ಯಳಾದೆ ನಿನ್ನ ಪ್ರೇಮ ಪೂಜೆಯಲಿ 
ಗಂಡು : ಮಧುಮಾಸದ ಮಂತ್ರಗಳು ತನನನಂ... (ತನನನಂ... ತನನನಂ) 
            ಮನದಾಸೆಯ ರೂಪಗಳು ತನನನಂ... (ತನನನಂ... ತನನನಂ) 
            ದೇವಲೋಕದಿಂದ ನನಗಾಗಿ ಬಂದವಳು 
            ಓ.. ಪಾರಿಜಾತ ಹೂವ ವರವಾಗಿ ತಂದವಳು... 

ಕೋರಸ್ : ಪಾ ಪಪಪ ದಾ ಸದಾ ನೀ ರಿರಿಸಾ ಸಸಸ ನಿಗಸ ನಿಸಸ ಸಗಮ ಪದನಿ 
ಹೆಣ್ಣು : ಕಲ್ಲಾದ ನನ್ನನ್ನು ಶಿಲೆಯಂತೆ ಮಾಡಿದೇ ..  ಶೃಂಗಾರ ಮಾಡಿ ಹೊಸರೂಪ ನೀಡಿದೇ ...  
ಗಂಡು : ಬೇಲೂರ ಬಾಲೇಯೇ ನಿನ್ನ ಕಂಡು ನಾಚಿದೆ... ಎಲ್ಲೋರ ಕಲ್ಲಿಗೆ ಸಮನೆಂದು ಸಾರಿದೆ.. 
ಹೆಣ್ಣು : ಶೃತಿಲಯ ಬೇರೆಯಲಿ ಸತಿಪತಿ ನಲಿಯಲಿ 
ಗಂಡು : ಸಂಜೆ ಗಾಳಿ ಬೀಸಲಿ ಗಂಧ ತೇಲಿ ಹೋಗಲಿ... 
ಹೆಣ್ಣು : ಅಲೆಯ ದೊರೆಯೇ ಮನದಂಗಳದಲಿ ನೀ ಬಾ... 
ಗಂಡು : ಮಧುಮಾಸದ ಮಂತ್ರಗಳು (ತನನನಂ... ತನನನಂ) 
            ಮನದಾಸೆಯ ರೂಪಗಳು (ತನನನಂ... ತನನನಂ) 
            ದೇವಲೋಕದಿಂದ ನನಗಾಗಿ ಬಂದವಳು 
            ಓ.. ಪಾರಿಜಾತ ಹೂವ ವರವಾಗಿ ತಂದವಳು... 
ಕೋರಸ್ : ಪಾ ಪಪಪ ದಾ ಸದಾ ಪಾ 
               ಪಾ ಪಪಪ ದಾ ಸದಾ ನೀ ರಿರಿಸಾ ಸಸಸ 

 ಹೆಣ್ಣು : ಶ್ರೀ ರಾಮಚಂದ್ರ ನೀ ಶ್ರೀದೇವಿಯಂತೆ ನಾ 
            ಕಲ್ಯಾಣವಾಗಲಿ ಸುಖಿಯೆಂದು ಹಾಡುವೇ .. 
ಗಂಡು : ವೈದೇಹಿ ನಿನ್ನನ್ನು ನೆರಳಂತೆ ಕಾಯುವೆ 
            ಮರುಜನ್ಮ ಹೀಗೆಯೇ ಇರಲೆಂದು ಬೇಡುವೇ ... 
ಹೆಣ್ಣು : ಎಂಥ ಭಾಗ್ಯ ನನ್ನದೂ ... ಪುಣ್ಯವಂತೆ ಹೆಣ್ಣಿದು 
ಗಂಡು : ಸೂಜಿ ಮಲ್ಲೆ ಹೂವಿದು ನಾಚಿಕೊಂಡರಾಗದು 
ಹೆಣ್ಣು : ಪನಿ ಗಗಸ ನಿಗರಿ ಗರಿನಿದ ಪಮಪ 
          ಕುಣಿದಾಡಿದೇ ಹೆಜ್ಜೆಗಳು  (ತನನನಂ... ತನನನಂ) 
          ನಲಿದಾಡಿದೇ ಗೆಜ್ಜೆಗಳೂ ..    (ತನನನಂ... ತನನನಂ) 
          ಮೂರೂ ಲೋಕ ಕಂಡೇ ನಿನ್ನ ಮೌನ ಮಾತಿನಲಿ 
          ಓ ನಾನು ಧನ್ಯಳಾದೆ ನಿನ್ನ ಪ್ರೇಮ ಪೂಜೆಯಲಿ 
ಗಂಡು : ಮಧುಮಾಸದ ಮಂತ್ರಗಳು  (ತನನನಂ... ತನನನಂ) 
            ಮನದಾಸೆಯ ರೂಪಗಳು  (ತನನನಂ... ತನನನಂ) 
            ದೇವಲೋಕದಿಂದ ನನಗಾಗಿ ಬಂದವಳು 
            ಓ.. ಪಾರಿಜಾತ ಹೂವ ವರವಾಗಿ ತಂದವಳು... 
-------------------------------------------------------------------------------------

ಕಾವೇರಿ ತೀರದಲ್ಲಿ (೧೯೯೪) - ಓ ಚೈತ್ರದ ಕೋಗಿಲೆಯೇ 
ಸಂಗೀತ : ವಿಜಯಾನಂದ  ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ 

ಆಆಆ.... ಓಓಓಓಓಓಓ .... ಓ.. ಲಾಲಲಾ ಲಾರಲಾ ಲಾಲಲಾ ಲಾರಲಾ 
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. 
ನೀನು ಹಾಡೋ ರಾಗದಲಿ ದನಿ ಬೆರೆವೆ ಇಂಪಾಗಿ... 
ನೂರಾರು ಕಾವ್ಯಗಳ ನೀ ತಂದಾಗ ಬೀಸುವ ತಂಗಾಳಿಯೇ ನಮ್ಮ ಹಾಡಿಗೆ ಸುವ್ವಾಲಿಯೇ... 
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. ಓಓಓಓಓ 

ಗಿರಿ ಮೇಲೆ ಮುತ್ತಿಟ್ಟ ಮೋಡಗಳೇ... ಅದು ಮುಂಜಾನೆ ರಂಗೋಲಿಯೋ 
ಎಲೆ ಮೇಲೆ ತೊಟ್ಟಿಕ್ಕೋ ಮುತ್ತುಗಳೇ ...  ಇದು ಪನ್ನೀರಿನ ಮಳೆಯೋ   
ಬಾನಾಡಿ ಹಾರೋ ಹಕ್ಕಿಗಳೇ... ನಲಿದಾಡುವೇ ನಾ ಚುಕ್ಕಿಗಳೇ 
ಕಾವೇರಿ ತೀರದಲಿ ಈ ಗೋಧೂಳಿ ವೇಳಯಲೀ ... 
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. ಓಓಓಓಓ 

ನವಿಲೂರ ಬೀದೀಲಿ ನಾ ಬರುವೇ... ಜನ ಬೆಪ್ಪಾಗಿ ನೋಡುವರೂ ... 
ಮಲ್ಲಿಗೆ ಸಂಪಿಗೆ ಹೂವುಗಳ ಈ ಮೈಯ್ಯ ಮೇಲೆ ಚೆಲ್ಲಿದರು 
ನಾ ಹೇಳಲಾರೇ ಆ ವೈಭವ... ನಾ ತಾಳಲಾರೇ ಸಂತೋಷವ... 
ನೀ ಬಾರೇ ನಮ್ಮೂರಿಗೇ .. ಈ ಕಲ್ಯಾಣಿ ತೌರೂರಿಗೇ ...  
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. 
ನೀನು ಹಾಡೋ ರಾಗದಲಿ ದನಿ ಬೆರೆವೆ ಇಂಪಾಗಿ... 
ನೂರಾರು ಕಾವ್ಯಗಳ ನೀ ತಂದಾಗ ಬೀಸುವ ತಂಗಾಳಿಯೇ ನಮ್ಮ ಹಾಡಿಗೆ ಸುವ್ವಾಲಿಯೇ... 
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. ಓಓಓಓಓ 
--------------------------------------------------------------------------------------

ಕಾವೇರಿ ತೀರದಲ್ಲಿ (೧೯೯೪) - ಕಾವೇರಿ ತೀರದಲಿ
ಸಂಗೀತ : ವಿಜಯಾನಂದ  ಸಾಹಿತ್ಯ : ಎಸ್.ನಾರಾಯಣ, ಗಾಯನ : ಲತಾಹಂಸಲೇಖ 

ಕಾವೇರಿ ತೀರದಲ್ಲಿ ಮುಂಗಾರಿದೇ ಜೋಗಾದ ಗುಂಡಿಯಲ್ಲಿ ತಂಪಾಡಿದೆ 
ಆ ಮೋಡಲಿ... ಸಹ್ಯಾದ್ರಿ ಕಾಡಿನಲ್ಲಿ ಯಾಕೀ ಭಯ 
ರಾಜಿ ಮನೋ ಅಲ್ಲ ಸೋ ಜೀವವ  ಅತಿ ಯಾಣದಾಗ ಅಸೆ ಹೆಚ್ಚಿದಲ್ಲ ... 
ಕಾವೇರಿ ತೀರದಲ್ಲಿ ಮುಂಗಾರಿದೇ ಜೋಗಾದ ಗುಂಡಿಯಲ್ಲಿ ತಂಪಾಡಿದೆ 

ಜೋಗಾದ ಬೀಗಿಗೆ ಓಂಕಾರವೆಂದವೇ.. 
ಓಓಓ....  ಹೆಜ್ಜೇನ ಕದಿಯೋಕೆ ಸಜ್ಜಾಗಿ ನಿಂತೋನೇ  
ಮೈನಾ ಸೆಳೆ ಹಿಂಡಾಗಿವೇ ಜೋಪಾನವೇ 
ಓಓಓಓ ... ನಮ್ಮೂರ ಶುಭ ಪಾನ ಸವಿಯೊತನೇ   
ಬಾಯಾರಿದೇ ...  ಬರಬೇಕು ನೀನೊಮ್ಮೆ ಸಹ್ಯಾದ್ರಿಗೇ .. 
ಮಧುಚಂದ್ರ ಮೈತ್ರಿಯಾ ಸೋಪಾನಕೆ 
ಮಧುಚಂದ್ರ ಮೈತ್ರಿಯಾ ಸೋಪಾನಕೆ
ಕಾವೇರಿ ತೀರದಲ್ಲಿ ಮುಂಗಾರಿದೇ ಜೋಗಾದ ಗುಂಡಿಯಲ್ಲಿ ತಂಪಾಡಿದೆ 
--------------------------------------------------------------------------------------

ಕಾವೇರಿ ತೀರದಲ್ಲಿ (೧೯೯೪) - ಬಾಳು ನಂಜಾಯಿತೇ 
ಸಂಗೀತ : ವಿಜಯಾನಂದ  ಸಾಹಿತ್ಯ : ಎಸ್.ನಾರಾಯಣ, ಗಾಯನ : ಡಾ||ರಾಜಕುಮಾರ 

ತಾ.. ಧೀನ್ ತಕಧಿನ್ನ್ ತಾ ಧೀನ್ ತರಗಿಡಿತಾ ತರಗಿಡಿತಾ ಧೀನ್ ತರಗಿಡಿತಾ 
ಧೀನ್ ತರಗಿಡಿತಾ ಧೀನ್ ತರಗಿಡಿತಾ ಧೀನ್ ತರಗಿಡಿತಾ (ಆಆಆಆಅ ....). 
ಬಾಳು....  ನಂಜಾಯಿತೇ.... ಪ್ರೀತಿ....  ಪಂಜಾಯಿತೇ... 
ಜೀವ...  ಬರಡಾಯಿತೇ ... ದೈವ....  ಕುರುಡಾಯಿತೇ... 
ಮೂಲೋಕದೊಡೆಯ ಈ ಪಾಪಿ ದೊರೆಯ ನೀ ಕೇಳಿ ಬರುವ ದಿನ ಯಾವುದೋ 
ಮೂಲೋಕದೊಡೆಯ ಈ ಪಾಪಿ ದೊರೆಯ ನೀ ಕೇಳಿ ಬರುವ ದಿನ ಯಾವುದೋ 
ಬಾಳು....  ನಂಜಾಯಿತೇ.... ಪ್ರೀತಿ....  ಪಂಜಾಯಿತೇ... 

(ಆಆಆಅ ಆಆಆಆ ಆಆಆ )
ತಾ.. ಧೀನ್ ತಕಧಿನ್ನ್ ತಾ ಧೀನ್ ತರಗಿಡಿತಾ ಥಂಗ್ ಥಂಗ್ ಟಕಟ ಥಂಗ್ ಥಂಗ್ ಟಕಟ
ಥಂಗ್ ಥಂಗ್ ಟಕಟ ಥಂಗ್ ಥಂಗ್ ಟಕಟ ತಾ 
ಮೃದು ಹೂವಿನಲ್ಲೇ ಭೂಕಂಪನ... ಏಕಿಂಥ ಆವೇಶವೋ... 
ಹೆಣ್ಣಾದ ದಿನವೇ ಮಣ್ಣಾದ ಬಯಕೆ ನಿನಗೇಕೆ ಆಕ್ರೋಶವೋ... 
ಮೃದು ಹೂವಿನಲ್ಲೇ ಭೂಕಂಪನ... ಏಕಿಂಥ ಆವೇಶವೋ... 
ಹೆಣ್ಣಾದ ದಿನವೇ ಮಣ್ಣಾದ ಬಯಕೆ ನಿನಗೇಕೆ ಆಕ್ರೋಶವೋ... 
ನೀ ಮಾಡಿದ ಪಾಪವೇನು...  ಜೀವಂತ ಶವವಾದೆ ನೀನು... 
ಮುಗಿಯದ ಈ ಕಥೆಯ ನಾಯಕಿ ನೀನೂ ... 
ಬಾಳು....  ನಂಜಾಯಿತೇ.... ಪ್ರೀತಿ....  ಪಂಜಾಯಿತೇ... 
ಜೀವ...  ಬರಡಾಯಿತೇ ... ದೈವ....  ಕುರುಡಾಯಿತೇ... 

(ಆಆಆ ಆಆಆಆ ಆಆಆಅ )
ತಾ.. ಧೀನ್ ತಕಧಿನ್ನ್ ತಾ ಧೀನ್ ತರಗಿಡಿತಾ ಥಂಗ್ ಥಂಗ್ ಟಕಟ ಥಂಗ್ ಥಂಗ್ ಟಕಟ
ಥಂಗ್ ಥಂಗ್ ಟಕಟ ಥಂಗ್ ಥಂಗ್ ಟಕಟ ತಾ 
ಸುಡುಬೆಂಕಿಯಲ್ಲೇ ಕಾರುಣ್ಯವು ಧಗಿಧಗಿಸಿ ನೀರಾಗಿದೆ... 
ಸಂಸಾರ  ಸುಖದ ಸಂಪ್ರೀತಿ ಸವಿವ ಕನಸುಗಳು ಚೂರಾಗಿದೆ... 
ಸುಡುಬೆಂಕಿಯಲ್ಲೇ ಕಾರುಣ್ಯವು ಧಗಿಧಗಿಸಿ ನೀರಾಗಿದೆ... 
ಸಂಸಾರ  ಸುಖದ ಸಂಪ್ರೀತಿ ಸವಿವ ಕನಸುಗಳು ಚೂರಾಗಿದೆ... 
ದಣಿಯದೇ ಕುಣಿಯಲೀ ಪಾದ... ಮುಜಗವೂ ಮೊಳಗಲಿ ವೇದ... 
ದಣಿಯದೇ ಕುಣಿಯಲೀ ಪಾದ... ಮುಜಗವೂ ಮೊಳಗಲಿ ವೇದ... 
ಇಳಿದು ಬಾ ಧರೆಗೇ ಭಕ್ತಳಾಸೆರೆಗೇ... 
ಬಾಳು....  ನಂಜಾಯಿತೇ.... ಪ್ರೀತಿ....  ಪಂಜಾಯಿತೇ... 
ಜೀವ...  ಬರಡಾಯಿತೇ ... ದೈವ....  ಕುರುಡಾಯಿತೇ... 
ಮೂಲೋಕದೊಡೆಯ ಈ ಪಾಪಿ ದೊರೆಯ ನೀ ಕೇಳಿ ಬರುವ ದಿನ ಯಾವುದೋ 
ಮೂಲೋಕದೊಡೆಯ ಈ ಪಾಪಿ ದೊರೆಯ  ನೀ ಕೇಳಿ ಬರುವ ದಿನ ಯಾವುದೋ 
ಬಾಳು....  ನಂಜಾಯಿತೇ.... ಪ್ರೀತಿ....  ಪಂಜಾಯಿತೇ... 
-------------------------------------------------------------------------------------

ಕಾವೇರಿ ತೀರದಲ್ಲಿ (೧೯೯೪) - ಓ ಚೈತ್ರದ 
ಸಂಗೀತ : ವಿಜಯಾನಂದ  ಸಾಹಿತ್ಯ : ಎಸ್.ನಾರಾಯಣ, ಗಾಯನ : ಮಂಜುಳಗುರುರಾಜ  

ಆಆಆ.... ಓಓಓಓಓಓಓ .... ಓ.. ಲಾಲಲಾ ಲಾರಲಾ ಲಾಲಲಾ ಲಾರಲಾ 
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. 
ನೀನು ಹಾಡೋ ರಾಗದಲಿ ದನಿ ಬೆರೆವೆ ಇಂಪಾಗಿ... 
ನೂರಾರು ಕಾವ್ಯಗಳ ನೀ ತಂದಾಗ ಬೀಸುವ ತಂಗಾಳಿಯೇ ನಮ್ಮ ಹಾಡಿಗೆ ಸುವ್ವಾಲಿಯೇ... 
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. ಓಓಓಓಓ 

ಗಿರಿ ಮೇಲೆ ಮುತ್ತಿಟ್ಟ ಮೋಡಗಳೇ... ಅದು ಮುಂಜಾನೆ ರಂಗೋಲಿಯ
ಎಲೆ ಮೇಲೆ ತೊಟ್ಟಿಕ್ಕೋ ಮುತ್ತುಗಳೇ ...  ಇದು ಪನ್ನೀರಿನ ಮಳೆಯೋ   
ಬಾನಾಡಿ ಹಾರೋ ಹಕ್ಕಿಗಳೇ... ನಲಿದಾಡುವೇ ನಾ ಚುಕ್ಕಿಗಳೇ 
ಕಾವೇರಿ ತೀರದಲಿ ಈ ಗೋಧೂಳಿ ವೇಳಯಲೀ ... 
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. ಓಓಓಓಓ 

ನವಿಲೂರ ಬೀದೀಲಿ ನಾ ಬರುವೇ... ಜನ ಬೆಪ್ಪಾಗಿ ನೋಡುವರೂ ... 
ಮಲ್ಲಿಗೆ ಸಂಪಿಗೆ ಹೂವುಗಳ ಈ ಮೈಯ್ಯ ಮೇಲೆ ಚೆಲ್ಲಿದರು 
ನಾ ಹೇಳಲಾರೇ ಆ ವೈಭವ... ನಾ ತಾಳಲಾರೇ ಸಂತೋಷವ... 
ನೀ ಬಾರೇ ನಮ್ಮೂರಿಗೇ .. ಈ ಕಲ್ಯಾಣಿ ತೌರೂರಿಗೇ ...  
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. 
ನೀನು ಹಾಡೋ ರಾಗದಲಿ ದನಿ ಬೆರೆವೆ ಇಂಪಾಗಿ... 
ನೂರಾರು ಕಾವ್ಯಗಳ ನೀ ತಂದಾಗ ಬೀಸುವ ತಂಗಾಳಿಯೇ ನಮ್ಮ ಹಾಡಿಗೆ ಸುವ್ವಾಲಿಯೇ... 
ಓಹೋ... ಚೈತ್ರದ ಕೋಗಿಲೆಯೇ... ಇರು ಬರುವೆ ಜೊತೆಯಾಗಿ.. ಓಓಓಓಓ 
--------------------------------------------------------------------------------------

No comments:

Post a Comment