1708. ದಿ ವಿಲನ್ (೨೦೧೮)


ದಿ ವಿಲನ್ ಚಲನಚಿತ್ರದ ಹಾಡುಗಳು 
  1. ಬೋಲೋ ಬೋಲೋ ರಾಮಪ್ಪ 
  2. ಟಿಕ್ ಟಿಕ್ ಟಿಕ್ ಟಿಕ್ 
  3. ರಣ ರಣ ರಣ ರಾವಣ 
  4. ಆಯ್ ಎಮ್ ವಿಲನ್ 
  5. ಲವ್ ಆಗೋಯ್ತೆ 
  6. ನೋಡಿವಳ ಅಂದವ 
ದಿ ವಿಲನ್ (೨೦೧೮) - ಬೋಲೋ ಬೋಲೋ ರಾಮಪ್ಪ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ, ಗಾಯನ : ವಿಜಯಪ್ರಕಾಶ, ಕುಶಾಲ್, ಕೋರಸ್ 

ಬೋಲೊ ಬೋಲೊ ಬೋಲೊ ಬೋಲೊ ಬೋಲೊ ಬೋಲೊ ರಾಮಪ್ಪ
ಎಂಥ ಹುಡುಗಿ ಬೇಕು ಅಂತ ಒಸಿ ಬಿಡ್ಸಿ ಹೇಳಪ್ಪ
ದಪ್ಪಗಿರ್ಲೊ ಸಣ್ಣುಗ್ ಇರ್ಲೊ ಉದ್ದಕ್ ಇರ್ಲೊ ಕುಳ್ಳುಕ್ ಇರ್ಲೊ
ನಾಟಿ ಬೇಕ ಫಾರಂ ಬೇಕ ಎಂತ ಕೋಳಿ ಬೇಕಪ್ಪ
ಎಕ್ಕ ಬೆಳ್ ಬೆಳ್ಗೆ ಚೆನ್ನಾಗ್ ಇರ್ಲಿ ಕೆಂಪಕ್ಕ ಊರೆಲ್ಲ ನಿಂತ್ಕಂಡ್ ನೋಡ್ಲಿ
ಎಕ್ಕ ಬೆಳ್ ಬೆಳ್ಗೆ ಚೆನ್ನಾಗ್ ಇರ್ಲಿ ಕೆಂಪಕ್ಕ ಊರೆಲ್ಲ ನಿಂತ್ಕಂಡ್ ನೋಡ್ಲಿ
ಕರ್ಡ್ ನಂಗ್ ಇದ್ದೋವ್ನ್ ನೋಡ್ಲ ಕುರ್ಡ್ನಂಗ್ ಆಗೋದ್ನೋ
ಬೋಲೊ ಬೋಲೊ ಬೋಲೊ ಬೋಲೊ ಬೋಲೊ ಬೋಲೊ ರಾಮಪ್ಪ
ಎಂಥ ಹುಡುಗಿ ಬೇಕು ಅಂತ ಒಸಿ ಬಿಡ್ಸಿ ಹೇಳಪ್ಪ

ಕನ್ಯಾ ರಾಶಿ ಕನ್ಯೆ ನೋಡು  ಐಸ ಐಸ
ಕಾವೇರಿ ಊರಲ್ ಬೆಳ್ದವ್ಳ್ ನೋಡು ಐಸ ಐಸ
ಮಂಡ್ಯ ಹುಡ್ಗಿ ನೋಡ್ಲ ಮಗ ಮೈಕಿ ತುಂಬ್ಕಂಡ್ ಬೆಲ್ದಂಗ್ ಅವ್ಳೆ
ಮೈಸೂರ್ ಹುಡ್ಗಿ ನೋಡ್ಲ ಮಗ ಮಲ್ಲಿಗೆ ಹಂಗೆ ಘಮ್ಗುಡ್ತಾವ್ಳೆ
ಮಂಡ್ಯ ಹುಡ್ಗಿ ಬ್ಯಾಡ ಕಣೆ ಗಾಣುಕ್ ಹಾಕಂಡ್ ರುಬ್ತಾರ್ ಕಣೆ
ಮೈಸೂರ್ ಹುಡ್ಗಿ ಬ್ಯಾಡ ಕಣೆ ಚಾಮುಂಡವ್ವನ್ ರೂಪ ಕಣೆ
ಕೊಡುಗ್ ನವ್ಳ್ ಅಂತು ಬ್ಯಾಡ್ವೇ ಬ್ಯಾಡ ಕೈಯಲ್ ಕೋವಿ ನೋಡಕ್ಕ
ಕೆಂಪ್ ಕೆಂಪ್ಗೆ ಚೆನ್ನಾಗಿರ್ಲಿ ಕೆಂಪಕ್ಕ ಊರೆಲ್ಲ ನಿಂತ್ಕಂಡ್ ನೋಡ್ಲಿ
ಎಕ್ಕ ಗುಂಡ್ ಗುಂಡ್ಗೆ ಚೆನ್ನಾಗ್ ಇರ್ಲಿ ಕೆಂಪಕ್ಕ ಊರೆಲ್ಲ ನಿಂತ್ಕಂಡ್ ನೋಡ್ಲಿ

ಬೆಂಗ್ಳೂರ್ ಹುಡ್ಗಿ ನೋಡ್ಲ ಮಗ ಮಂಡಿ ಗಂಟ ಲಂಗ ಹಾಕಂಡ್ಲಿ
ಮಂಗ್ಳೂರ್ ಹುಡ್ಗಿ ನೋಡ್ಲ ಮಗ ಕೈಯ್ಯಗ್ ಬಾಂಗ್ಡ ಮೀನ ಹಿಡ್ಕಂಡ್ಲಿ
ಅಯ್ಯೋ ಬೆಂಗ್ಳೂರ್ ಹುಡ್ಗಿ ಬೇಡ ಕಣೇ ಕುಡ್ಕಂಡ್ ಬಂದು ಹೊಡಿತಾಳ್ ಕಣೆ
ಎಕ್ಕ, ಮಂಗ್ಳೂರ್ ಹುಡ್ಗಿ ಬ್ಯಾಡ ಕಣೇ ಸಿನಿಮಾ ಶೋಕಿ ಜಾಸ್ತಿ ಕಣೆ
ಹುಬ್ಳಿ ಹುಡ್ಗಿ ಬ್ಯಾಡ್ವೇ ಬ್ಯಾಡ ಖಾರ ಜಾಸ್ತಿ ಕಣಕ್ಕ…
 
ಎಕ್ಕ, ಬೆಳ್ ಬೆಳ್ಗೆ ಚೆನಾಗ್ ಇರ್ಲಿ ಕೆಂಪಕ್ಕ  ಕೈ ತೊಳ್ಕಂಡ್ ಮುಟ್ಟಂಗ್ ಇರ್ಲಿ
ಎಕ್ಕ ಬೆಳ್ ಬೆಳ್ಗೆ ಚೆನಾಗ್ ಇರ್ಲಿ ಕೆಂಪಕ್ಕ ಕೈ ತೊಳ್ಕಂಡ್ ಮುಟ್ಟಂಗ್ ಇರ್ಲಿ
ಖದರ್ ನಂಗ್ ಇದ್ದೋವ್ನ್ ನೋಡ್ಲ ಕುರ್ಡ್ನಂಗ್ ಆಗೋದ್ನೋ
-------------------------------------------------------------------------------------------------

ದಿ ವಿಲನ್ (೨೦೧೮) - ಟಿಕ್ ಟಿಕ್ ಟಿಕ್ ಟಿಕ್ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ, ಗಾಯನ : ವಿಜಯಪ್ರಕಾಶ, ಪ್ರೇಮ, ಖೈಲಾಶ ಖೈರ್ 

ನಾನ್ ಸೈಲೆಂಟ್ ಆಗಿದ್ರೆ ರಾಮ ವಯಲೆಂಟ್ ಆದ್ನೋ ರಾವಣ ರಾವಣ ರಾವಣ
ಅಣ್ಣ ನನ್ನ ಊರು ಅಣ್ಣ ನನ್ನ ಹೆಸರು ಅಣ್ಣ ನಾನು ಕೆಂಚನಳ್ಳಿ ಕೆಂಚ ಕಣಣ್ಣೊ
ಇಫ್ ಯು ಕಮ್ ಟುಡೆ, ಐ ಆಮ್ ಸೊ ಹ್ಯಾಪಿ ಇಫ್ ಯು ಕಮ್ ಟುಮಾರೊ, 
ಐ ಆಮ್ ಟೂ ಬ್ಯಾಡ್ ಯು ಪಿಕ್ ದ ಟೈಮ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್  ರಾವಣ…. ರಾವಣ…..

ಧಗ ಧಗ ಧಗ ಧಗ ರಾಜರ ಹಿರಿ ಮಗ 
ಬಿಟ್ಟ ನೋಡು ಮೂರನೇ ಕಣ್ಣ ಶಂಕರ ಶಿವ ಶಂಕರ 
ತಗ ತಗ ತಗ ತಗ ಮಚ್ಚೆತ್ತು ಬೀಳುವಾಗ
ಕೈ ಕಾಲು ಲ್ಯಾಪ್ಸು ಶಿವ ಶಂಕರ ಅಯ್ಯೊ ಶಂಕರ
ಮಚ್ಚಿಡ್ದು ನಿಂತ್ರೆ ನೀನು ಹುಚ್ಚೆದ್ದು ಕುಣಿತಾರೊ
ಹೆ ಮಚ್ಚಿಡ್ದು ನಿಂತ್ರೆ ನೀನು ಹುಚ್ಚೆದ್ದು ಕುಣಿತಾರೊ
ನಿನ್ನ ಮುಂದೆ ಎಲ್ರು ಬಚ್ಚ ಕಣಣ್ಣ
ಇಫ್ ಯು ಕಮ್ ಟುಡೆ, ಐ ಆಮ್ ಸೊ ಹ್ಯಾಪಿ
ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್
ಯು ಪಿಕ್ ದ ಟೈಮ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ 
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ರಾಜರ ರಾಜಾನೆ ರಾಕ್ಷಸರ ರಾಜಾನೆ ರಾಜಾದಿ ರಾಜ ಬಾರೊ ರಾಕ್ಷಸನೆ
ರಾಜಾದಿ ರಾಜ ಬಾರೊ ಹೇಳಿ ಹೇಳಿ ಹೇಳ್ರಪ್ಪ ಎಲ್ರು ಒಟ್ಗೆ ಹೇಳ್ರಪ್ಪ
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಓಹ್ ಬಿಡು ಬಿಡು ಬಿಡು ಬಿಡು ನಾನನ್ನೋದ್ ಮೊದ್ಲು ಬಿಡು
ನಾವು ಅಂತ ಬಾಳೋದ್ ಕಲಿ ಶಂಕರ ಶಿವ ಶಂಕರ

ಕೊಡು ಕೊಡು ಕೊಡು ಕೊಡು ಕೈಲಾದಷ್ಟು ದಾನ ಕೊಡು 
ಸ್ವರ್ಗ ನರಕ ಎಲ್ಲ ಇಲ್ಲೆ ಶಂಕರ ಅಯ್ಯೋ ಶಂಕರ
ನೆನ್ನೆ ಮೊನ್ನೆ ಬಂದೊವ್ರೆಲ್ಲ ನಂಬರ್ ಒನ್ ಅಂತಾರೊ
ಅವ್ರವ್ರೆ ಸಂಘ ಕಟ್ಕೊಂಡ್ ಬಿರುದು ಇಟ್ಕಂಡ್ ನಿಂತವ್ರೊ
ನಿಂಗೆ ನಂಬರ್ ಗಳೆ ಲೆಕ್ಕ ಇಲ್ಲಣ್ಣ 
ಇಫ್ ಯು ಕಮ್ ಟುಡೆ, ಐ ಆಮ್ ಸೊ ಹ್ಯಾಪಿ
ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್
ಯು ಪಿಕ್ ದ ಟೈಮ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
------------------------------------------------------------------------------------------------

ದಿ ವಿಲನ್ (೨೦೧೮) - ರಣ ರಣ ರಾವಣ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ, ಗಾಯನ : ಶ್ರೇಯಾ ಘೋಷಾಲ್, ಪ್ರೇಮ 

ಕೈಯಲ್ಲಿ ಬಿಲ್ಲಿನ ಕೋಲು ಮೈಯ್ಯಲ್ಲ ಧರ್ಮದ ಶಾಲು
ಧರ್ಮಾನೆ ದೇವರು ಅಂದನು ನನ್ನ ಶ್ರೀರಾಮಚಂದ್ರನು
ಯಾರನ್ನು ನೋಯಿಸದವನು ಸತ್ಯಕ್ಕೆ ತಲೆಬಾಗುವನು
ಮಾತಿಗೆ ತಪ್ಪದ ಮಗನು ನನ್ನ ಶ್ರೀರಾಮಚಂದ್ರನು
ಅಷ್ಟ ದಿಕ್ಕುಗಳು ಕಾಲ ಕೆಳಗೆ ಎಲ್ಲಾ ದೇವರು ಮುಷ್ಟಿಯೊಳಗೆ
ಸೋಲಿಲ್ಲ ನನಗೆ ಸಾವಿಲ್ಲ ಕೊನೆಗೆ 
ನಾ ಯಾರು ಗೊತ್ತ ನಿನಗೆ ರಾವಣ…

ತಂದೆಗೆ ಮಾತು ಕೊಟ್ಟ ರಾಜ್ಯವ ತ್ಯಜಿಸಿ ಬಿಟ್ಟ 
ಆ ತಾಯಿ ಕೌಸಲ್ಯೆಯ ಮಗನು ನನ್ನ ಶ್ರೀರಾಮಚಂದ್ರನು 
ವಾನರ ಸೇನೆ ಕಟ್ಟಿ ಲಂಕೆಗೆ ಬೆಂಕಿ ಇಟ್ಟ
ಸೀತೆಯ ಮರಳಿ ತಂದನು ನನ್ನ ಶ್ರೀರಾಮಚಂದ್ರನು
ಧಗ ಧಗ ಧಗ ಧಗ ಧಗ ಧಗ ಧಗ ಧಗ 
ಉರಿಯುತಿದೆ ಎದೆ ಉರಿಯುತಿದೆ 
ರಣ ರಣ ರಣ ರಣ ರಣ ರಣ ರಕ್ತವು ಕುದಿಯುತಿದೆ ಕುದಿಯುತಿದೆ
ರಾಮನ ಎದೆಯನು ಬಗೆಯುವ ಆಸೆ ನಂದೇ
ರಕ್ತವ ತೆಗೆದು ಪಾದವ ತೊಳೆಯುವೆ ಇಂದೆ ರಾವಣ…
-------------------------------------------------------------------------------------------------

ದಿ ವಿಲನ್ (೨೦೧೮) - ಆಯ್ ಎಮ್ ವಿಲನ್ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ, ಗಾಯನ : ಶಂಕರಮಹಾದೇವನ್, ಕೋರಸ್  

ಮಚ್ಚು ಗಿಚ್ಚು ಹಿಡಿದವನಲ್ಲ ಆದ್ರು ಹವಾ ಇಟ್ಟವನಲ್ಲ
ಕೋಟೆ ಕಟ್ಟಿ ಮೆರೆದವ್ನಲ್ಲ ಆದ್ರು ರಜ್ಯ ಆಳ್ತಾವ್ನಲ್ಲ
ಓಹ್, ಕೌನ್ ರೇ ಹುನೇ?  ಐ ಆಮ್ ವಿಲನ್ 
ದೇಖೋ ಇಂಡಿಯನ್  ಗ್ಯಾಂಗ್ ಸ್ಟರ್ ಹಿ ಇಸ್ ದ ಮಾಸ್ಟರ್ ಓಹೋ
ಗ್ಯಾಂಗ್ ಸ್ಟರ್ ಹಿ ಇಸ್ ದ ರೂಲರ್ ಓಹೋ
ಗ್ಯಾಂಗ್ ಸ್ಟರ್ ಹಿ ಇಸ್ ದ ಫೈಟರ್ ಓಹೋ ಓಹೋ ಓಹೋ

ರಾಜ್ಯ ಕಟ್ಟೋಕೆ ಯಾವ ಸೈನ್ಯನೂ ಬೇಕಾಗಿಲ್ಲ
ನನ್ನ ನೆರಳನ್ನೆ ನಾನು ಯಾವತ್ತು ನಂಬೋದಿಲ್ಲ
ಕೈಲಿ ಕಾಸಿದ್ರೆ ಇಲ್ಲಿ ಕೈಕಾಲಿಗು ನೆಂಟ್ರು ಎಲ್ಲ
ಖಾಲಿ ಜೇಬಲ್ಲಿ ನಿನ್ನ ನಾಯಿನೂ ಮೂಸೋದಿಲ್ಲ
ಏ… ನಾನೆ ಕಿಂಗು ನಂದೆ ರೂಲು ನಂಗೆ ಯಾರೂ ಬೇಕಾಗಿಲ್ಲ
ಏ.. ಕೈಯಲ್ ಗನ್ನು ಇದ್ರೆ ಸಾಕು ನಾನೆ ಗೌರ್ನ್ಮೆಂಟ್ ಇಲ್ಲಿ ಎಲ್ಲ
ಇಲ್ಲಿ ರಾಜಾನೂ, ಮಂತ್ರಿನೂ, ಸೈನ್ಯನೂ ನಾನೇ ಕಣೋ..
ಆಪ್ ಕಾ ನಾಮ್ ಕ್ಯಾ ದಾದ?  
ಐ ಆಮ್ ವಿಲನ್ ದೇಖೋ ಇಂಡಿಯನ್

ನನ್ನ ಸ್ಟೋರಿ ಕೇಳೋಕೆ ಇಲ್ಲಿ ಯಾರ್ಗೂನೂ ಇಷ್ಟ ಇಲ್ಲ
ಹೇಳ್ತಾ ಕೂರೋಕೆ ಈಗ ನಂಗೂನೂ ಟೈಮೂ ಇಲ್ಲ.
ಮೀನ ಹೆಜ್ಜೇನ ಕಂಡು ಹಿಡಿಬೋದು ಅಂತಾರಲ್ಲ
ನನ್ನ ಹೆಜ್ಜೇನ ಕಂಡು ಹಿಡಿಯೋರು ಹುಟ್ಟೆ ಇಲ್ಲ
ಏ.. ಒಂದೇ ಏಟು ಒಂಟಿ ಸಲಗ ಸಿಂಗಲ್ಲಾಗೆ ನುಗ್ತೀನಲ್ಲ
ಹೆಜ್ಜೆ ಇಟ್ರೆ ಸೋಲೆ ಇಲ್ಲ ಸಾವಿಗಂತು ಹೆದರೋನಲ್ಲ
ಇಲ್ಲಿ ಕೇಡಿನೂ, ರೌಡಿನೂ, ವಿಲನ್ನು ನಾನೇ ಕಣೋ ಓ…
ಎವುಡ್ರ ನುವು?  
ಐ ಆಮ್ ವಿಲನ್  ದೇಖೋ ಇಂಡಿಯನ್
------------------------------------------------------------------------------------------------

ದಿ ವಿಲನ್ (೨೦೧೮) - ಲವ್ ಆಗೋಯ್ತೆ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ, ಗಾಯನ :  ಪ್ರೇಮ

ಐತ ಲಕ್ಕಡಿ ಪಕ್ಕಡಿ ಲಕ್ಕಡಿ ಜುಮ್ಮ
ಕದ್ದು ಹೊತ್ಕೊಂಡ್ ಹೋಗ್ತಾನ್ ನೋಡು ಗುಮ್ಮ
ಆಂಜನೇಯ, ಬಾರೊ ಎಲ್ಲಿದ್ದಿಯ ಗದೆಯ ತಂದು ಅವ್ನ ಹೊಡೆದಾಕಯ್ಯ
ಕಳ್ಳೆಪುರಿಯನ್ನು ಕದ್ದು ತಂದಿರುವೆ ಬಾರೋ… ಬಾರೋ… ಬಾರೋ…

ರೋಡಲ್ ನಿಂತು ಕಾಯ್ಲು ಇಲ್ಲ ಹಿಂದೆ ಮುಂದೆ ಸುತ್ಲು ಇಲ್ಲ
ಮಾತುಗ್ ಸೈಡುಗ್ ಕರಿಲೇ ಇಲ್ವಲ್ಲೆ ಏ. ಏ. ಏ. ಏ.
ಮುಂದುಕ್ ಹೇಳ್ಳೇ
ಅವ್ವುನ್ ಕೇಳ್ಲೂ ಇಲ್ಲ ಅಪ್ಪುಂಗ್ ಹೇಳ್ಲೂ ಇಲ್ಲ
ಲವ್ ಆಗೋಯ್ತೇ ನಿನ್ ಮ್ಯಾಲೆ

ಕಳ್ಳ ಕ್ರಿಷ್ಣ, ಗೋಪಿ ಕ್ರಿಷ್ಣ, ರಾಧೆ ಕ್ರಿಷ್ಣ ಹೋಯ್
ಬೆಣ್ಣೆ ಕದ್ದ ಮುದ್ದು ಕ್ರಿಷ್ಣ ರಾಧೆ ಕ್ರಿಷ್ಣ ಹೋಯ್
ಗೋಪಿಕೆರ ಸೀರೆ ಕದ್ದು ದ್ರೌಪದಿಗೆ ದಾನ ಕೊಟ್ಟ
ನಾ ಪಿಳ್ಳಂಗೋವಿ ಊದ್ಲೇ ಇಲ್ಲ 
ಪಿ ಟಿ ಮೇಡಮ್ ಕಲ್ಸ್ಲಿಲ್ಲ ಅದಕೆ ಅವ್ಳು ಊದ್ಲಿಲ್ಲ
ನೀನು ಪಾರಿವಾಳ ಕಳ್ಸ್ಲೂ ಇಲ್ಲ 
ಫೇಸ್ ಬುಕ್ ವಾಟ್ಸಾಪ್ ಇತ್ತಲ್ಲ ಅದಕೆ ಅವಳು ಕಳ್ಸ್ಲಿಲ್ಲ
ಲವ್ ಲೆಟರ್ ಅಂತು ನಂಗೆ ನೀನು ಬರ್ದು ಇಲ್ಲ
ರಾಧೆ ಬಂದು ನಿನ್ನ ಬಗ್ಗೆ ಹೇಳ್ಲೂ ಇಲ್ಲ
ಗುಡಿಯ ಕಟ್ಟಿ ಯಾರೂ ಪೂಜಿಸ್ಲಿಲ್ಲ
ನಮಿಬ್ಬರ ಪ್ರೀತಿ ಹಿಸ್ಟರಿ ಅಲ್ಲ … ಆಆಆ…
ನೀನೇನ್ ರುಕ್ಕು ಅಲ್ಲ ನಾನೇನ್ ಕ್ರಿಷ್ಣ ಅಲ್ಲ
ಲವ್ ಆಗೋಯ್ತೇ ನಿನ್ ಮ್ಯಾಲೆ
ಲವ್ ಆಗೋಯ್ತೇ ನಿನ್ ಮ್ಯಾಲೆ

ವಾರೆ ವಾರೆ ವಾರೆ ವಾರೆ ರಾಮ ಬಂದ ನೋಡೆ
ವಾರೆ ವಾರೆ ವಾರೆ ವಾರೆ ಜಿಂಕೆ ತಂದ ನೋಡೆ
ನಾನು ಬಿಲ್ಲು ಗಿಲ್ಲು ಮುರಿಲೇ ಇಲ್ಲ 
ಮಮ್ಮಿ ಬೂಸ್ಟು ಕೊಡ್ಲಿಲ್ಲ ಅದಿಕೆ ಮುರಿಯಕ್ ಆಗ್ಲಿಲ್ಲ
ನಿನ್ನ ಕಾಡುಗ್ ಕರ್ಕಂಡ್ ಹೋಗ್ಲೂ ಇಲ್ಲ
ಡೈನಾಸರಸ್ ಇತ್ತಲ್ಲ ಅದಿಕೆ ಕರ್ಕೊಂಡ್ ಹೋಗ್ಲಿಲ್ಲ
ಜಿಂಕೆ ಬೇಕು ಅಂತ ನೀನು ಕೇಳ್ಲೂ ಇಲ್ಲ
ರಾವಣ ಬಂದು ನಿನ್ನ ಹೊತ್ಕೊಂಡ್ ಹೋಗ್ಲೂ ಇಲ್ಲ
ಕಪಿ ಸೈನ್ಯವ ಕಟ್ಟಿ ಹುಡುಕಾಡ್ಲಿಲ್ಲ 
ಲಂಕೆ ಸುಟ್ಟು ರಾವಣನ್ ಕೊಲ್ಲೂ ಇಲ್ಲ
ಅಯ್ಯಯ್ಯೊ ಮುಂದೆ?
ನೀನೇನ್ ಸೀತೆ ಅಲ್ಲ ನಾನೇನ್ ರಾಮ ಅಲ್ಲ
ಲವ್ ಆಗೋಯ್ತೇ ನಿನ್ ಮ್ಯಾಲೆ 
ಲವ್ ಆಗೋಯ್ತೇ ನಿನ್ ಮ್ಯಾಲೆ
-------------------------------------------------------------------------------------------------

ದಿ ವಿಲನ್ (೨೦೧೮) - ನೋಡಿವಳ ಅಂದವ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪ್ರೇಮ, ಗಾಯನ : ಅರ್ಮಾನ್ ಮಲ್ಲಿಕ್, ಶ್ರೇಯಾ ಘೋಷಾಲ್ 

ಹಿಂದಿ ಇಶ್ಕ್ ಹೇಯ್ ತಮಿಳು ಕಾದಲೇ ತೆಲುಗು ಪ್ರೇಮಮ ಇಂಗ್ಲಿಷ್ ಲವ್ ಯು ನ..
ನೋಡಿವಳ್ಅಂದಾವ ಮುತ್ತಿನ ಮಾಲೆ ಚಂದಾವ
ನೋಡಿವಳ್ಅಂದಾವ ಮುತ್ತಿನ ಮಾಲೆ ಚಂದಾವ
ಇವಳು ಯಾವ ಊರ ಚೆಲುವೆ ಶಿವ 
ಹೇಳಲ್ಲ.. ಹೇಳಲ್ಲ.. ನಿನ್ಗಂತು ಹೇಳಲ್ಲ!
ಹಿಂದಿ ಇಶ್ಕ್ ಹೇಯ್ ತಮಿಳು ಕಾದಲೇ ತೆಲುಗು ಪ್ರೇಮವ ಹೇಳು ಇಂಗ್ಲಿಷ್ ಲವ್ ಯು ನ
ಕೇರಳ ಪ್ರೇಮಮ ಕನ್ನಡ ಪ್ರೀತಿಯ ಹೇಳು..

ನನಗೆ ನೀನು ಯಾರು ಗೊತ್ತಿಲ್ಲ.. ಕನಸಲಿ ನೀನು ಎಂದು ಬಂದಿಲ್ಲ..
ನಿನ್ನ ಊರು ಕೇಳಲ್ಲ ನನಗೆ ಬ್ಯಾಕ್ ಗ್ರೌಂಡ್ ಬೇಕಿಲ್ಲ 
ನಿನ್ನ ಬಂದು ಬಳಗಾನು ನನಗೆ ಯಾರು ಗೊತ್ತಿಲ್ಲ..
ಇವಳು ಯಾವ ಊರ ಚೆಲುವೆ ಶಿವ
ಹೇಳಲ್ಲ.. ಹೇಳಲ್ಲ.. ನಿನ್ಗಂತು ಹೇಳಲ್ಲ!

ದೇವರು ಪ್ರೀತಿಯ ಒಳಗೆ ಇರುತಾನೆ..
ಹೋ ಎಲ್ಲರ ಹೃದಯದ ಬಳಿಗೆ ಬರುತಾನೆ..
ಅವನು ಟೈಮು ನೋಡಲ್ಲ ಎಂದು ಜಾತಿ ಕೇಳಲ್ಲ
ಕಳ್ಳ ಕೇಡಿ ಅಂತಾನು ಭೇದ ಭಾವ ಮಾಡಲ್ಲ
ಇವನು ಯಾವ ಊರ ಚೆಲುವ ಶಿವ..
ಹೇಳಲ್ಲ.. ಹೇಳಲ್ಲ.. ನಿನ್ಗಂತು ಹೇಳಲ್ಲ!
ನೋಡಿವನ ಅಂದಾವ ಅವನ ನೋಟ ಚಂದಾವ
ನೋಡಿವನ ಅಂದಾವ ಅವನ ನೋಟ ಚಂದಾವ!
------------------------------------------------------------------------------------------------

No comments:

Post a Comment