- ಬಾರಾ ಬಳಿ ಬಾ
- ಒಲವ ಸುಳಿಯುವ ಮೈ ಚೆಲುವು ಎಲ್ಲಿದೆ
- ಮರೆ ಮರೆ ಮರೆ ತೆರೆ ತೆರೆ
- ಹಾರೈಸಿ ಬಂದಾಗ ನಾ ಹೌಹಾರೀ ದೂರಾದಿರಿ
ಜಾಣರ ಜಾಣ (೧೯೬೭) - ಬಾರಾ ಬಳಿ ಬಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ, ಗಾಯನ : ಎಸ್,ಜಾನಕೀ, ಪಿ.ಬಿ.ಶ್ರೀನಿವಾಸ
ಬಾರಾ.... ಬಳಿ ಬಾ... ಇನಿಯಾ... ಬಾ....
ಬಾರಾ ಬಳಿ ಬಾ ಇನಿಯಾ.. ಬಾರಾ ಬಳಿ ಬಾ ಇನಿಯಾ..
ಒಲಿದ ಕನ್ಯೆಯ ಕಣ್ಣ ಸನ್ನೆಯ ಹಾವಭಾವ ಸೇವೆಗೆಲ್ಲಾ ನೀನೇ ಜೀಯಾ
ಹಾವಭಾವ ಸೇವೆಗೆಲ್ಲಾ ನೀನೇ ಜೀಯಾ
ಬಾರಾ ಬಳಿ ಬಾ ಇನಿಯಾ.. ಒಲಿದ ಕನ್ಯೆಯ ಕಣ್ಣ ಸನ್ನೆಯ
ಹಾವಭಾವ ಸೇವೆಗೆಲ್ಲಾ ನೀನೇ ಜೀಯಾ
ನಾಚಿನಿಂತ ಹೆಣ್ಣು ಮೌನ ಬಿಡಿಸು ಬಲ್ಲೆಯಾ... ನಿಂತ ಹೃದಯ ಮಿಡಿಸ ಬಲ್ಲೆಯಾ....
ನಾಚಿನಿಂತ ಹೆಣ್ಣು ಮೌನ ಬಿಡಿಸು ಬಲ್ಲೆಯಾ... ನಿಂತ ಹೃದಯ ಮಿಡಿಸ ಬಲ್ಲೆಯಾ....
ಇಳಿದು ಬಡುವ ನುಡಿಯ ಮಾನ ತಾಳ ಬಲ್ಲೆಯಾ ತಳಿದು ಬಾಳ ಬಲ್ಲೆಯಾ
ಮಾತಿಗಿಂತ ಮೌನವೇ.. ಲೇಸಯ್ಯಕೇ
ಬಾರಾ ಬಳಿ ಬಾ ಇನಿಯಾ.. ಒಲಿದ ಕನ್ಯೆಯ ಕಣ್ಣ ಸನ್ನೆಯ
ಹಾವಭಾವ ಸೇವೆಗೆಲ್ಲಾ ನೀನೇ ಜೀಯಾ
ಬೆಡಗು ಬೆರಗು ಉಡಿಗೆ ತೊಡಿಗೆ ಹೆಣ್ಣಿಗೆಂದೇಯಾ.. ಸೊಗಸು ಕಣ್ಣಿಗೆಂದೆಯಾ
ಬೆಡಗು ಬೆರಗು ಉಡಿಗೆ ತೊಡಿಗೆ ಹೆಣ್ಣಿಗೆಂದೇಯಾ.. ಸೊಗಸು ಕಣ್ಣಿಗೆಂದೆಯಾ
ಧೂಪ ದಮನಿ ಶೀಲ ಪೊರೆಯೂ ಅರಿಯಬಲ್ಲೆಯಾ ಬಣ್ಣ ತೆರೆಯಬಲ್ಲೆಯಾ
ಧೂಪಕ್ಕಿಂತ ಶೂಲವೇ ಮೇಲಲ್ಲವೇ
ಬಾರಾ ಬಳಿ ಬಾ ಇನಿಯಾ.. ಒಲಿದ ಕನ್ಯೆಯ ಕಣ್ಣ ಸನ್ನೆಯ
ಹಾವಭಾವ ಸೇವೆಗೆಲ್ಲಾ ನೀನೇ ಜೀಯಾ
ಹಾವಭಾವ ಸೇವೆಗೆಲ್ಲಾ ನೀನೇ ಜೀಯಾ
---------------------------------------------------------------------------------------------------
ಜಾಣರ ಜಾಣ (೧೯೬೭) - ಒಲವ ಸುಳಿಯುವ ಮೈ ಚೆಲುವು ಎಲ್ಲಿದೆ `
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ, ಗಾಯನ : ಎಸ್,ಜಾನಕೀ,
ಲಾ.. ಲಾ.. ಲಲಲಲ್ಲಲ್ಲಾ ... ಲಾ.. ಲಾ.. ಲಲಲಲ್ಲಲ್ಲಾ ... ಆಆಆ.. ಆಆಆ...
ಒಲವ ಸುಳಿಯುವ ಮೈ ಚೆಲುವು ಇಲ್ಲಿದೆ ಮನಸ್ಸು ಎಣಿಸುವ ಇನಿಸೆಲ್ಲ ಇಲ್ಲಿದೇ
ಬಾರೋ ಹೆಣ್ಣೇ ಮೀಸೆ ಬಣ್ಣ ವಂಡರ್ ಗಂಡಿಗೇ
ನೋಟ ಹೊಳಪು ಮಾಟ ನುಣುಪು ಥಂಡರ್ ಗುಂಡಿಗೇ....
ತುಂಟಿ ತುಂಟ ಸೊಂಟ ಬಳಸಿ ಜಂಟಿ ಕುಣಿದರೇ ..
ಗಂಡೇ ಗಾಂಗೂ ಹೆಣ್ಣೇ ಸಾಂಗು ಡೆನ್ನೆ ಕ್ಯಾಬರೇ ..
ಕೈಗೆ ಸೋಕದೆ ಮೈಗೆ ತಾಕದೇ ದೂರ ಸರಿಯೇ ರಾಂಗು
ಒಲವ ಸುಳಿಯುವ ಮೈ ಚೆಲುವು ಇಲ್ಲಿದೆ ಮನಸ್ಸು ಎಣಿಸುವ ಇನಿಸೆಲ್ಲ ಇಲ್ಲಿದೇ
ಹೃದಯ ಮೀಟಿ ಎದೆಗೆ ನಾಟಿ ಒಲಿವ ಕ್ವಾಲಿಟಿ
ಕಲೆತ ಪೊರೆತ ಗಳಿಸೋ ಗಂಟು ಪ್ರೇಮ ಶೂರಿಟಿ.....
ಮಾನನೇ ರಂಗೂ ಇವನ ಗುಂಗೂ ಎಲ್ಲ ಮಂದಿಗೂ
ನನ್ನ ಸಂಗ ಆಶಾಭಂಗ ಇಲ್ಲ ಎಂದಿಗೂ.....
ನೋಡಿ ಭ್ರಮಿಸದೇ ಕಾಡಿ ರಮಿಸದೇ ನಾಚಿ ನಿಲ್ಲೆ ರಾಂಗು
ಒಲವ ಸುಳಿಯುವ ಮೈ ಚೆಲುವು ಇಲ್ಲಿದೆ ಮನಸ್ಸು ಎಣಿಸುವ ಇನಿಸೆಲ್ಲ ಇಲ್ಲಿದೇ
--------------------------------------------------------------------------------------------------
ಜಾಣರ ಜಾಣ (೧೯೬೭) - ಮರೆ ಮರೆ ಮರೆ ತೆರೆ ತೆರೆ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ, ಗಾಯನ : ಎಸ್,ಜಾನಕೀ, ರಾಮೋಲ
ಗಂಡು : ಮರೆ ಮರೆ ಮರೆ ತೆರೆ ತೆರೆ ತೆರೆ ಪ್ರೇಮಕೆ ಮರೆ ನಾಚಿಕೆ ತೆರೆ
ಹೆಣ್ಣು : ಇನ್ನೂ ಬೇಕೇ
ಗಂಡು : ಮರೆ ಮರೆ ಮರೆ (ಅಹ್ಹಹ್ಹಹಾ) ತೆರೆ ತೆರೆ ತೆರೆ ತೆರೆ ಪ್ರೇಮಕೆ ಮರೆ (ಅಹ್ಹಹ್ಹಹಾ)
ನಾಚಿಕೆ ತೆರೆ
ಹೆಣ್ಣು : ಆಮೇಲೇ ....
ಗಂಡು : ಸರಿ ಸರಿ ಬಳಿ ಒಲಿ ನಲಿ ಗಿಳಿ ಸವಿ ಸವಿ ಸುಖ ಆನಂದ ಉಲ್ಲಾಸವಾ
ಹೆಣ್ಣು : ಎಲ್ಲಿ ಹಾಡಿ
ಗಂಡು : ಸರಿ ಸರಿ ಬಳಿ (ಹೂಂ) ಒಲಿ ನಲಿ ಗಿಳಿ (ಹಿತವಾಗಿ) ಸವಿ ಸವಿ ಸುಖ
ಹೆಣ್ಣು : ಮೈ ಮೈ ಮೈ
ಗಂಡು : ಆನಂದ ಉಲ್ಲಾಸವಾ
ಹೆಣ್ಣು : ಓಹ್ ವಂಡರಫೂಲ್
ಗಂಡು : ಮರೆ ಮರೆ ಮರೆ ತೆರೆ ತೆರೆ ತೆರೆ ಪ್ರೇಮಕೆ ಮರೆ ನಾಚಿಕೆ ತೆರೆ
ಗಂಡು : ಬಾ
ಹೆಣ್ಣು : ಹೂಂಹೂ..
ಗಂಡು : ಇತಿ ಮಿತಿ.. ಯಿರೇ ಸುಖ ಪರಿಪರಿ
ಮಿಲನ ನಯಾ ಭಯಾ ತೊರೆ ಬಾ ನನ್ನ ಹೊಂದಾವರೇ ..
ಇತಿ ಮಿತಿ.. ಯಿರೇ ಸುಖ ಪರಿಪರಿ ಮಲೀನ ಕಳೆ ಕಳೆ ಬಾ ನನ್ನ ಹೊಂದಾವರೇ ..
ಹೆಣ್ಣು : ಯು ನಾಟೀ ಬಾಯ್
ಗಂಡು : ಮರೆ ಮರೆ ಮರೆ ತೆರೆ ತೆರೆ ತೆರೆ ಪ್ರೇಮಕೆ ಮರೆ ನಾಚಿಕೆ ತೆರೆ
---------------------------------------------------------------------------------------------------
ಜಾಣರ ಜಾಣ (೧೯೬೭) - ಹಾರೈಸಿ ಬಂದಾಗ ನಾ ಹೌಹಾರೀ ದೂರಾದಿರಿ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುರಾಸೀ, ಗಾಯನ : ಕೋಮಲ್, ಪಿ.ಬಿ.ಶ್ರೀನಿವಾಸ
ಹೆಣ್ಣು : ಹಾರೈಸಿ ಬಂದಾಗ ನಾ ಹೌಹಾರಿ ದೂರಾದೀರಿ
ಈ ಮಾತ ಅನುರಾಗ ಅನುರಾಗಿ ಹೊರಟಾಗ
ಮೈ ಮರೆಸಿ ಅನೋಭವಿಸಿ ಮರುಳಾದೇನಾ
ಹಾರೈಸಿ ಬಂದಾಗ ನಾ ಹೌಹಾರಿ ದೂರಾದೀರಿ
ಗಂಡು : ಲಾವಣ್ಯ ಬಾ ಎಂದಿತು ತಾರುಣ್ಯ ಓ ಎಂದಿತು
ಲಾವಣ್ಯ ತವರೀಗ ಒಂದಾಗಿ ಬಂದಾಗ
ಅನುರಾಗ ತಾನಾಗಿ ಹೊರ ಹೊಮ್ಮಿತು
ಲಾವಣ್ಯ ಬಾ ಎಂದಿತು ತಾರುಣ್ಯ ಓ ಎಂದಿತು
ಹೆಣ್ಣು: ನೋಡಿ ನನ್ನ ಸೌಂದರ್ಯ ಕೂಡು ದೈವ ಮಾಧುರ್ಯ.... ಆಆಆ...
ನೋಡಿ ನನ್ನ ಸೌಂದರ್ಯ ಕೂಡು ದೈವ ಮಾಧುರ್ಯ. ನನ್ನೊಲವು ಭ್ರಮರಸವೋ
ಗಂಡು : ಆಹಾಹಾ... ಆ ಆಆಆ ಆ
ಹೆಣ್ಣು : ಒಳ್ಳೆ ದಿನ ಗೆಲುವಾಗಿರಿ ಅನುನುದಿನ ಕೈಯ್ಯ್ ಓಡ್ಡಿರೀ
ಅಂಗೈಲ್ಲೇ... ಪಾರಾಗಿರೀ ... ಸಂಗಲ್ಲೇ ಹಾಯಾಗಿರೀ ಆಹಾ ಆಆಆಆ (ಆಆಆಅ ಓ)
ಚಿಗುರೆಲ್ಲಾ ಹಗುರಾಗಿ ಮೊಗ್ಗುವೆಲ್ಲಾ ಚಿಗುರಾಗಿ ಇಡಿಯಾಗಿ ಪದರಾಗಿ ಹಣ್ಣಾಗಿದೇ ...
ಗಂಡು : ಕಾಣಲಾದ ಈ ಕೆಲಸ ಕಾಣದಂತ ವಿಧಿಲಿಖಿತ
ಕಾಣಲಾದ ಈ ಕೆಲಸ ಕಾಣದಂತ ವಿಧಿಲಿಖಿತ
ಗಾಳಿಯೋ ... ಮೋಡಿಯೋ .. (ಆಹಾಹಾಹಾಆಆಆಆ ಆಆ)
ಕಸದಿಂದಾ ರಸವಾಗಿದೇ... ಕಹಿ ಎಲ್ಲಾ ಸಿಹಿಯಾಗಿದೇ
ಹೂವೇಲ್ಲಾ ಹಣ್ಣಾಗಿದೇ..
ಹೂವೇಲ್ಲಾ ಹಣ್ಣಾಗಿದೇ.. ಹೂಂಹೂಂಹೂಂ (ಆಆಆಆ)
ಚಿಗುರೆಲ್ಲಾ ಹಗುರಾಗಿ ಪೋದರೆಲ್ಲಾ ಚಿಗುರಾಗಿ ಮನವೆಲ್ಲಾ ಮಧುವಾಗಿ ಸಿಹಿಯಾಗಿದೇ...
ಲಾವಣ್ಯ ಬಾ ಎಂದಿತು ತಾರುಣ್ಯ ಓ ಎಂದಿತು
ಲಾವಣ್ಯ ತವರೀಗ ಒಂದಾಗಿ ಬಂದಾಗ ಅನುರಾಗ ತಾನಾಗಿ ಹೊರ ಹೊಮ್ಮಿತು
ಇಬ್ಬರು : ಲಾವಣ್ಯ ಲಾಲಾಲಲ್ಲಲಲಾ ತಾರುಣ್ಯ ಲಾಲಾಲಲ್ಲಲಲಾ
--------------------------------------------------------------------------------------------------
No comments:
Post a Comment