1717. ೧೯೮೦ (೨೦೨೧)



೧೯೮೦ ಚಲನಚಿತ್ರದ ಹಾಡುಗಳು
  1. ಹೇ ತಿರುಗೋ ಕಾಲವೇ
  2. ಗುಡುಗಿನ ಗಡಿಯಲ್ಲಿ ಬೆಳಕೂರ ಕರೆ ಕೋರಿ
೧೯೮೦ (೨೦೨೧) - ಹೇ ತಿರುಗೋ ಕಾಲವೇ
ಸಂಗೀತ : ಚಿಂತನ ವಿಕಾಸ, ಸಾಹಿತ್ಯ : ಅಚ್ಚಲ, ಗಾಯನ : ಚಿಂತನ ವಿಕಾಸ, ಅಪೂರ್ವ ಶ್ರೀಧರ

ಹಿಯರ್ ಆಯ್ ಎಮ್ ಟೂ ಫೈಂಡ್ ಅವೇ ಇಟ್ಸ್ ಆಲ್ ಸೋ ಫಾರ್ ಅವೇ
ವಾಂನ ಶೋ ಮೈ ಕಾಂಸೈನ್ಸ್ ದ್ಯಾಟ್ ಎವ್ರಿ ಥಿಂಗ್ ಓಕೆ

ಹೇ ತಿರುಗೋ ಕಾಲವೇ ಮಾಯಜಾಲವೆ
ದಿಗಿಲನ್ನ ಹೆಚ್ಚಿಸುತಿರೊ ಬ್ರಹ್ಮಾಂಡವೆ
ಉರಿಯೋ ಸೂರ್ಯವೇ ಹಸಿರ ಸೆರೆಮನೆ
ದಿಕ್ಕಿಲ್ಲದ ಈ ಪಯಣ ನ್ಯಾಯವೇ
ದಡ ಮುಟ್ಟದ ಅಲೆಯಂತಿದೆ ನನ್ನ ಸ್ಥಿತಿ
ಕ್ರುಸಿಂಗ್ ಅರೌಂಡ್ ದಿ ಟ್ರುಥ್ ಆಯ್ ಡೋಂಟ್ ಹ್ಯಾವ್ ಏ ಕ್ಲೂ
ಹೌ ಡೂ ವೀ ಎಸ್ಕೇಪ್ ಫ್ರಾಮ್ ದಿಸ್ ಕ್ರೇಜಿ ಮಿಸ್ಟರಿ ಬ್ಲ್ಯೂಸ್

ಜಾಡ ಜಡೆಯನು ತಿರುಚಿ ಕಟ್ಟಿಸಿ
ಜಾಣ ಮನದಲಿ ಜಗಳ ಹುಟ್ಟಿಸಿ
ಬೀರುತ್ತ ಭ್ರಮೆಯನ್ನು ಮುಕ್ತಾಯ ಮಾರುತ್ತ
ಏರುತ್ತ ಬೀಗುತ್ತ ವಿಧಿಯನ್ನೇ ತಿವಿಯುತ
ಹೇಳು ಕರ್ತ ಯಾವುದು ಸ್ವಾರ್ಥ
ನಕ್ಕು ಒದೆವ ಮಾರ್ಗವು ವ್ಯರ್ಥ
ಹೇಳು ಹೂಡಿ ಕಾಯಕಲ್ಪ ಕೆಣಕಬೇಡ ನಾನು ಅಲ್ಪ

ತಳಿಗಳ ಹಡೆಯುತ ಕುಡಿಗಳ ಒದೆಯುತ
ಬದುಕಿನ ಸುಳಿಯಲ್ಲಿ ತಿರುವನೆ ತಿರುವುತ
ಅರಿವೆಲ್ಲ ಹರಿದೂ ಹರಿದೂ ಕಲ್ಲಿನ ಸರವಾಗುತ್ತ
ಹುಚ್ಚೆದ್ದು ಜಿದ್ದಿ ಮನಸು ಜಿಗಿದೀತು ಅತ್ತ ಇತ್ತ
ಕಾಲವೇ…. ಆನ್ಸರ್ಸ್
ಆನರವೆಲಿಂಗ್ ಆಯ್ ಥಿಂಕ್ ವೀ ಆರ್ ಕ್ಲೋಸಿಂಗ್
ಇನ್ ಫಸ್ಟ್ ಟೈಮ್ ಇನ್ ಏ ಲಾಂಗ್ ಟೈಮ್
ದಿ ಟೈಮ್ ಇಸ್ ಬಾಫ್ಲಿಂಗ್
---------------------------------------------------------------------------------------------

೧೯೮೦ (೨೦೨೧) - ಗುಡುಗಿನ ಗಡಿಯಲ್ಲಿ ಬೆಳಕೂರ ಕರೆ ಕೋರಿ
ಸಂಗೀತ : ಚಿಂತನ ವಿಕಾಸ, ಸಾಹಿತ್ಯ : ಅಚ್ಚಲ, ಗಾಯನ : ಶ್ರಾವ್ಯಾ ಜಗದೀಶ, ಸಾತ್ವಿಕ, ವಿನಯ, ಮಧುಸೂಧನ 

ಗುಡುಗಿನ ಗಡಿಯಲ್ಲಿ ಬೆಳಕೂರ ಕರೆ ಕೋರಿ
ದುಗುಡವ ಕೊಡಬೇಕಂತ ಇರುಳಿಗೆ ತಿಳಿಹೇಳಿ
ಹಾಡುವೆ ನಾನು ಮಲಗೀಗ ಮಡಿಲೇರಿ
ಗುಡುಗಿನ ಗಡಿಯಲ್ಲಿ ಬೆಳಕೂರ ಕರೆ ಕೋರಿ
ದುಗುಡವ ಕೊಡಬೇಕಂತ ಇರುಳಿಗೆ ತಿಳಿಹೇಳಿ
ಹಾಡುವೆ ನಾನು ಮಲಗೀಗ ಮಡಿಲೇರಿ
ತಾನಾನಿ ನಾನೇ ನೀನಾ ತಾನಾನಿ ನಾನೇ ನೀನಾ
ತಾನಾನಿ ನಾನೇ ನೀನಾ ತಾನಾನಿ ನಾನೇ ನೀನಾ

ಭಯವೂ ಅದು ಉಳಿವಿನ ಒಲವು ಋಣವು ಕ್ಷಣಗಳ ಕಳವು
ಕವಿತೆ ಸಮದನಿಪದ ಸರಪಳಿ ಕಿವಿಯೊಡ್ಡಿ ಕೇಳಿಸದಿರದು
ಭಯವೂ ಅದು ಉಳಿವಿನ ಒಲವು ಋಣವು ಕಾಲದ ಕಳವು
ಕವಿತೆ ಸಮದನಿಪದ ಸರಪಳಿ ಕಿವಿಯೊಡ್ಡಿ ಕೇಳಿಸದಿರದು
ನಿದಿರೆ ಬರಲು ಗುನುಗು ನೀ ಮನದಲ್ಲಿ ತಾನಾನಿ ನಾನೇ ನೀನಾ 
ಬೆಳಕೂರ ಕರೆಕೋರಿ ತಾನಾನಿ ನಾನೇ ನೀನಾ
ಇರುಳಿಗೆ ತಿಳಿಹೇಳಿ ತಾನಾನಿ ನಾನೇ ನೀನಾ
ಬೆಳಕೂರ ಕರೆಕೋರಿ ಇರುಳಿಗೆ ತಿಳಿಹೇಳಿ
-------------------------------------------------------------------------------------------------

No comments:

Post a Comment