ಪರೋಡಿ ಚಲನಚಿತ್ರದ ಹಾಡುಗಳು
- ಹುಟ್ಟಿರುವ ಮಣ್ಣಿಗೆ
- ಪರೋಡಿ ಪರೋಡಿ
- ಕೂಲ್ ಡ್ರಿಂಕ್ಸು
- ಬಾರೇ ಬಾರೇ
- ಎದ್ದು ಬಾರೋ ರುದ್ರ
ಪರೋಡಿ (೨೦೦೭) - ಹುಟ್ಟಿರುವ ಮಣ್ಣಿಗೆ ಅಕ್ಕರೆಯ ನಾಡಿಗೆ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರಿ, ಗಾಯನ : ರಾಜೇಶ, ಚಿತ್ರಾ
ಹುಟ್ಟಿರುವ ಮಣ್ಣಿಗೆ ಅಕ್ಕರೆಯ ನಾಡಿಗೆ ತಕ್ಕವನು ನೀನಾಗು
ಕಸ್ತೂರಿ ಕನ್ನಡದ ಕೀರ್ತಿಯ ಜ್ಯೋತಿಯ ಬೆಳಗುವ ಮಗನಾಗು
ದಿನವು ನ್ಯಾಯವು ಉಳಿಸು ನೀತಿಯ ಬೆಳೆಸು ಧರ್ಮದ ರಕ್ಷಕ
ಆಗೂ ಭರವಸೆ ದೀಪ ಕರುಣೆಯ ರೂಪ ಜೀವನ ಸ್ವಾರ್ಥಕ
ನಮ್ಮ ನಾಡಿನ ಹಿರಿಮೆ ಧ್ವಜವನು ಹಾರಿಸು
ಹೆತ್ತ ತಾಯಿಯ ಪ್ರೀತಿ ಹರಕೆಯ ಸಲ್ಲಿಸು
ಗುರುಹಿರಿಯ ಮನಗೆಲ್ಲುವ ಸೌಜನ್ಯದ ಸಿರಿ ನೀನಾಗು
ದಿನ ಬಾಳಿಗೆ ಸರಿದಾರಿಯ ತೋರುವ ಗುರುವಾಗು
ಎಲ್ಲರನು ಸಂತೈಸುವ ವಾತ್ಸಲ್ಯದ ಕುಡಿಯಾಗು
ತೌರೂರಿಗೆ ಹಿತ ನೀಡುವ ಮಾತಿನ ಸುಧೆಯಾಗು
ಪುಲಕೇಶಿ ಮೆರೆದಂತೆ ರಣಧೀರ ನೀನಾಗು
ನೃಪತುಂಗ ದೊರೆಯಂತೆ ಮಹನೀಯ ನೀನಾಗು
ಮದಕರಿಯ ನಾಯಕನ ಕಲಿತನವು ನಿನಗಿರಲಿ
ಸಂಗೊಳ್ಳಿರಾಯಣ್ಣನ ಸಾಹಸವ ತುಂಬಿರಲಿ
ದೈರ್ಯವಂತನಾಗು ವೀರಪುತ್ರನಾಗು
ಎಲ್ಲಾ ಜನರ ಅಭಿಮಾನಕೆ ಪ್ರೀತಿ ಪಾತ್ರನಾಗು... ಪಾತ್ರನಾಗು
ಗುಣವಂತನು ಹಣವಂತನು ಧನವಂತನು ಭಗವಂತನು ನೀನಾಗು
ಅನ್ಯಾಯಕೆ ಸಿಡಿದೇಳುವ ಕಲಿ ಭೀಮನು ನೀನಾಗು
ಎದೆಗುಂದದೆ ತಲೆಬಾಗದೆ ಹೋರಾಡುವ ವೀರನಾಗು
ಎಂದೆಂದಿಗೂ ತಲೆ ಬಾಗುವ ಅಭಿಮಾನದ ಕಿಡಿಯಾಗು
ಮನೆತನದ ಹಿರಿಯರನು ಅನುಸರಿಸು ನೀ ಕಂದಾ
ಮುತ್ತಿನಂಥ ಮಗನಿಂದಲೇ ಈ ತಾಯಿಗೆ ಅಂದ
ನನ್ನ ಆಸೆ ನನ್ನ ಕನಸು ನೀನಾದೆ ನನ್ನುಸಿರು
ನಮ್ಮ ನಾಡ ಚರಿತೆಯಲಿ ಬರೆದಿರಲಿ ನಿನ್ನ ಹೆಸರು
ಹೃದಯವಂತನಾಗು ಪ್ರಾಣಮಿತ್ರನಾಗು
ಎಲ್ಲ ಜನರ ಅಭಿಮಾನಕೆ ಪ್ರೀತಿ ಪಾತ್ರನಾಗು... ಪ್ರೀತಿ ಪಾತ್ರನಾಗು
----------------------------------------------------------------------------------------------
ಪರೋಡಿ (೨೦೦೭) - ಪರೋಡಿ ಪರೋಡಿ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಉಪೇಂದ್ರ , ಗಾಯನ : ಉಪೇಂದ್ರ
----------------------------------------------------------------------------------------------
ಪರೋಡಿ (೨೦೦೭) - ಕೂಲ್ ಡ್ರಿಂಕ್ಸು
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಶ್ರೀರಂಗ , ಗಾಯನ : ಶಂಕರ ಮಹಾದೇವನ್
----------------------------------------------------------------------------------------------
ಪರೋಡಿ (೨೦೦೭) - ಬಾರೇ ಬಾರೇ
ಸಂಗೀತ :ರಾಜೇಶ ರಾಮನಾಥ, ಸಾಹಿತ್ಯ:ಎಂ.ಏನ್.ವ್ಯಾಸರಾವ, ಗಾಯನ : ಕುನಾಲ್ ಗುಂಜಾವಾಲ, ಶಶಿಕಲಾ
----------------------------------------------------------------------------------------------
ಪರೋಡಿ (೨೦೦೭) - ಎದ್ದು ಬಾರೋ ರುದ್ರ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರಿ, ಗಾಯನ : ಎಸ್.ಪಿ.ಬಿ
----------------------------------------------------------------------------------------------
No comments:
Post a Comment