ಸೌಂದರ್ಯ ಚಲನಚಿತ್ರದ ಹಾಡುಗಳು
- ಹೃದಯದ ಮಾತು
- ಅಲ್ಲಿ ನೋಡು ಅಲ್ಲಿ ನೋಡು
- ಬೆಳಕಿಂದ ಬಾನೆಲ್ಲ ಬಣ್ಣ
- ಸ್ನೇಹ ಪ್ರೀತಿ
- ಸೌಂದರ್ಯ ಸೌಂದರ್ಯ
- ಎಲ್ಲಾ ಈ ಹೆಣ್ಣಿಗೆ
ಸೌಂದರ್ಯ (೨೦೦೭) - ಹೃದಯದ ಮಾತು
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಕುನಾಲ್ ಗುಂಜವಾಲ್, ಅನುರಾಧ ಭಟ್ಟ
ಹೃದಯದ ಮಾತು ಕೇಳು ಕೇಳು ನನ್ನ ಒಲವೇ ಕೇಳಿದರೆ ನೀನೇ ನಗುವೇ
ಮನಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೆ ಕೇಳಿದರೆ ಹೌದು ಎನುವೆ
ಹೃದಯದ ಮಾತು ಕೇಳು ಕೇಳು ನನ್ನ ಒಲವೇ ಕೇಳಿದರೆ ನೀನೇ ನಗುವೇ
ಮನಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೆ ಕೇಳಿದರೆ ಹೌದು ಎನುವೆ
ಕುರುಡಾರಾದರೇ ಎಲ್ಲ ಗಂಡಸರು ಎಷ್ಟು ಚೆನ್ನಾ...
ನನ್ನ ಹೊರತು ನೋಡಕೂಡದು ಯಾರೂ ನಿನ್ನ
ಬಿಸಿಲಲ್ಲೂ ನಿನ್ನ ಹೆಸರ ನೆನೆಯುವುದೀ ತಪ್ಪೆಂದೂ
ಬಯ್ಯುತ್ತೀದೆ ನನ್ನ ಹೃದಯ....
ಹೃದಯದ ಮಾತು ಕೇಳು ಕೇಳು ನನ್ನ ಒಲವೇ ಕೇಳಿದರೆ ನೀನೇ ನಗುವೇ
ನಿನ್ನ ಚಿವುಟು ಎನುತಿದೆ ನನ್ನ ಬುದ್ದಿ ಅಯ್ಯೋ ನೋವು ಬೇಡೆಂದಿದೆ ಈ ಹೃದಯ
ಕಚ್ಚಿ ತಿನ್ನು ಎನ್ನುತಿದೆ ನನ್ನ ಹಸಿವು ಬೇಡ ಮುಚ್ಚಿ ಬಚ್ಚಿಡು ಎನುತಿದೆ ಹೃದಯ
ಏಳು ಉಪ್ಪರಿಗೆಯ ಗಾಜಿನ ಮಹಲಲಿ ನಾನು ನೀನು ಇಬ್ಬರೇ ಹಗಲು ರಾತ್ರಿಗಳಲಿ
ಕೂಡುತ ಇರಬೇಕು ಅನಿಸಿ ಮರುಕ್ಷಣ ಬೇಡ ತಪ್ಪೇನಿಸಿ ನನ್ನದು ಸ್ವಾರ್ಥ ಎನಿಸುತಿದೆ
ತಿರುಗೋ ಭೂಮಿಯು ಕಡಲದಿದ್ದರೆ ಎಷ್ಟು ಚೆನ್ನ
ರಪ್ಪೆ ಅಲುಗದೆ ನೋಡಬೇಕು ನಾನು ನಿನ್ನ...
ರವಿ ಮುಳುಗಿ ಕತ್ತಲೆಯೂ ...
ಕವಿಯುವುದೇ ತಪ್ಪೆಂದು ಬಯ್ಯುತ್ತಿದೆ ನನ್ನ ಹೃದಯ...
ಮನಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೆ ಕೇಳಿದರೆ ಹೌದು ಎನುವೆ
ಸೂರ್ಯ ಚಂದ್ರ ತಂದಿಡಲೇ ನಿನ್ನ ಮುಂದೆ ಎಂಥ ಹಳೆಯ ಸುಳ್ಳಲ್ಲಿ ರುಚಿ ಇಲ್ಲ
ಸತ್ಯ ಬಿಟ್ಟು ನಿನ್ನೆದುರು ಹೋರಡಲ್ಲ ನೀನು ಯಾಕೆ ಸುಳ್ಳನ್ನೇ ಕಲಿತಿಲ್ಲ
ನಿನ್ನ ಒಲವೆನ್ನುವ ಚಕ್ರವ್ಯೂಹದಲೀ.. ನುಗ್ಗಿ ಬಂದಿರುವೇನೀ...
ಪ್ರಾಣ ಕೋಡೋ ಛಲದಲೀ... ಹಿಂತುರಿಗಿ ಹೋಗೋ ಮಾತಿಲ್ಲ...
ಹೋಗುವ ಬುದ್ದಿ ಕಲಿತಿಲ್ಲ ಕಲಿತರು ಹೃದಯ ಕಲಿಸಿಲ್ಲ..
ಶಿವನು ಪಾರ್ವತಿ ಬೇರೆಯಾದರೇ ಎಷ್ಟು ಚೆನ್ನ
ಅವರ ಹಾಗೆ ನನ್ನ ಅರ್ಧ ಭಾಗ ನೀನಾಗು ಚಿನ್ನ
ಓಹ್ ಓಹ್ ಸುಳ್ಳಾಡೋ ಕವಿಯಾದೇ...
ಸಾಕೆಂದು ಮುನಿಯುತಿದೆ ನನ್ನ ಹೃದಯ...
ಹೃದಯದ ಮಾತು ಕೇಳು ಕೇಳು ನನ್ನ ಒಲವೇ ಕೇಳಿದರೆ ನೀನೇ ನಗುವೇ
-------------------------------------------------------------------------------------------------
ಸೌಂದರ್ಯ (೨೦೦೭) - ಅಲ್ಲಿ ನೋಡು ಅಲ್ಲಿ ನೋಡು
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್, ನಂದಿನಿ ಹಂಸಲೇಖ
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು ಸಂಪಗಿ ಮರದಲ್ಲಿ ಹಕ್ಕಿ ಗೂಡು
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು ಅಹ್ಹಹ್ಹ.. ಸಂಪಗಿ ಮರದಲ್ಲಿ ಹಕ್ಕಿ ಗೂಡು
ರೆಕ್ಕೆಯನ್ನ ಸಾಲಕೇಳಿ ದನಿಯನ್ನೇ ದಾನ ಕೇಳಿ
ಹಾಡುವ ಹಾಡುವ ಹಾರುವ ಹಾರುವ ಧೋ..ಓಓಓಓಓ
ಬೆಳ್ಮುಗಿಲೇ ನಮಗಾಗಿ ತಂಬೆಲರೇ ನಮಗಾಗಿ
ಒಲವಿರುವ.. ಚೆಲುವಿರುವ.. ಜಗವೆಲ್ಲ... ನಮಗಾಗಿ...
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು ಸಂಪಗಿ ಮರದಲ್ಲಿ ಹಕ್ಕಿ ಗೂಡು
ಅಲ್ಲಿ ನೋಡಿದರೇ ತೇಲುತಾವೆ ಮೋಡ.... ಆಆಆ
ತುಂಬಿಕೊಂಡ ನೀರ ಹೊತ್ತುಕೊಂಡ ಭಾರ
ನಮಗಾಗಿ... ನಮ್ಮ ಮಳೆಗಾಗಿ
ಬ್ಯುಟಿಫುಲ್ ಬ್ಯುಟಿಫುಲ್ ಇರಲೇ ಅಲ್ಲಿ ಆ ಸ್ವರ್ಗ
ವಂಡರಫೂಲ್ ವಂಡರಫೂಲ್ ನಮಗೆ ಸಾಕು ಈ ನಿಸರ್ಗ
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು ಸಂಪಗಿ ಮರದಲ್ಲಿ ಹಕ್ಕಿ ಗೂಡು
ಓಓಓಓಓಓಓ... ಓಓಓಓಓಓಓ... ಓಓಓಓಓಓಓ...
ಅಮ್ಮ ಅಂದರೆ ಅಪ್ಪಿಕೊಳ್ಳೇ ಚೆಂದ
ತಾಯಿ ಮಕ್ಕಳಂತೆ ಅಪ್ಪಿಕೊಂಡರಂತೆ ಈ ಭೂಮಿ.. ಈ ಹಸಿರು...
ಲವ್ಲೀ ವರ್ಲ್ಡ್ ಲವ್ಲೀ ವರ್ಲ್ಡ್ ಆ ದೇವರ ಚೈಲ್ಡ್
ಲವ್ಲೀ ಚೈಲ್ಡ್ ಲವ್ಲೀ ಚೈಲ್ಡ್ ನಮ್ಮ ಪಾಲಿನ ಲವ್ಲೀ ವರ್ಲ್ಡ್
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು ಸಂಪಗಿ ಮರದಲ್ಲಿ ಹಕ್ಕಿ ಗೂಡು
ರೆಕ್ಕೆಯನ್ನ ಸಾಲಕೇಳಿ ದನಿಯನ್ನ ದಾನ ಕೇಳಿ
ಹಾಡುವ ಹಾಡುವ ಹಾರುವ ಹಾರುವ ಧೋ..ಓಓಓಓಓ
ಬೆಳ್ಮುಗಿಲೇ ನಮಗಾಗಿ ತಂಬೆಲರೇ ನಮಗಾಗಿ
ಒಲವಿರುವ.. ಚೆಲುವಿರುವ.. ಜಗವೆಲ್ಲ... ನಮಗಾಗಿ...
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು ಸಂಪಗಿ ಮರದಲ್ಲಿ ಹಕ್ಕಿ ಗೂಡು
-------------------------------------------------------------------------------------------------
ಸೌಂದರ್ಯ (೨೦೦೭) - ಬೆಳಕಿಂದ ಬಾನೆಲ್ಲ ಬಣ್ಣ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಸೋನು ನಿಗಮ್
ಆ.. ಆಆ ... ಆಆಆ.... ಆಆಆ....
ಬೆಳಕಿನಿಂದ ಬಾನೆಲ್ಲ ಬಣ್ಣ ಬಳುಕಿನಿಂದ ಮನವೆಲ್ಲ ಬಣ್ಣ
ಮುಟ್ಟಲಾರೇ ಮುಟ್ಟಲರೇ ನಿನ್ನೀ ಲಾವಣ್ಯವ..
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಇದೇ ರಸಕಾವ್ಯ ಇದೇ ರಸಮೈತ್ರಿ
ಇದೇ ರಸಗಾಯನ ಇದೇ ರಸಚಂದನ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಅಂತರಂಗದಿಂದ ನನ್ನ ಅರಸಿ ಬಂದ
ನಿನ್ನ ಪ್ರೀತಿಯೆಂಬ ಕಣ್ಣ ಬೆಳಕಿನಿಂದ
ಸ್ನಾನ ಮಾಡಿತೆನ್ನ ಮನವು ಧನ್ಯವಾಯಿತೆನ್ನ ತನವೂ
ಹೃದಯ ಅರಿಯಿತು ಹೃದಯದ ಆಂತರ್ಯ
ಜೀವ ಸವಿಯಿತು ಪ್ರಣಯದ ಕೈಂಕರೆಯ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಬಿಟ್ಟ ಕಣ್ಣಿನಲ್ಲೇ ಬೆಳಕ ನೋಡುತಿರುವ
ರೆಪ್ಪೆ ಅಳುಗದ ಈ ಪುಷ್ಪ ಲೋಕದಲ್ಲಿ
ಕಣ್ಣಿನಲ್ಲೆ ಕಾಡೋ ಪುಷ್ಪ ನೀ...
ಕಾಣದಾ ಪ್ರೀತಿಯ ಭಾಷೆ ನೀ..
ಪ್ರೀತಿ ತುಂಬಿದೆ ನಿನ್ನಾ ಕಣ್ಣಿನಲಿ
ಜೀವ ಮಿಂದಿದೆ ನಿನ್ನಾ ಪ್ರೀತಿಯಲೀ ..
ಬೆಳಕಿನಿಂದ ಬಾನೆಲ್ಲ ಬಣ್ಣ... ಊಂಊಂಊಂಊಂ
ಬಳುಕಿನಿಂದ ಮನವೆಲ್ಲ ಬಣ್ಣ... ಊಂಊಂಊಂಊಂ
ಮುಟ್ಟಲಾರೇ ಮುಟ್ಟಲರೇ ನಿನ್ನೀ ಲಾವಣ್ಯವ..
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
ಇದೇ ರಸಕಾವ್ಯ ಇದೇ ರಸಮೈತ್ರಿ
ಇದೇ ರಸಗಾಯನ ಇದೇ ರಸಚಂದನ
ಸೌಂದರ್ಯ ಸೌಂದರ್ಯ ನಾ ಸವಿಯೋ ಸೌಂದರ್ಯ
------------------------------------------------------------------------------------------------
ಸೌಂದರ್ಯ (೨೦೦೭) - ಸ್ನೇಹ ಪ್ರೀತಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಅದ್ನಾನ್ ಸಮಿ
-------------------------------------------------------------------------------------------------
ಸೌಂದರ್ಯ (೨೦೦೭) - ಸೌಂದರ್ಯ ಸೌಂದರ್ಯ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಸೋನು ನಿಗಮ್, ಚಿತ್ರಾ
-------------------------------------------------------------------------------------------------
ಸೌಂದರ್ಯ (೨೦೦೭) - ಎಲ್ಲಾ ಈ ಹೆಣ್ಣಿಗೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಕಲ್ಪನಾ
-------------------------------------------------------------------------------------------------
No comments:
Post a Comment