- ಭರವಸೆಯ ಬಾಳು
- ತಾಯೇ ದೇವರಮ್ಮ
- ಬಳುಕುವ ಬಳ್ಳಿಯಲಿ
- ಸವಾಲ್ಲೊಂದು
ಭರವಸೆ (೧೯೮೨) - ಭರವಸೆಯ ಬಾಳು
ಸಂಗೀತ : ಮ್ಯಾಕ್ಮೂನ್ ತಾಜ್, ಸಾಹಿತ್ಯ : ನಾಗರಾಜನ್, ಗಾಯನ : ಎಸ್.ಪಿ.ಬಿ
ಭರವಸೆಯ ಬಾಳು ಧರ್ಮದ ಜ್ವಾಲೆಗೇ ತುತ್ತಾಯಿತೂ ...
ಜಾತಿ ಘರ್ಷಣೆಯಲ್ಲಿ ಮಾನವತೆಯ ಕೊಲೆಯಾಯಿತೂ ...
ಮನಸ್ಸೂ ಮಣ್ಣಾಯಿತು ನನಸು ಕನಸಾಯಿತು
ಬಾಳು ಬರಡಾಗಲೂ ಒಲವು ವಧೆಯಾಯಿತೂ
ಮನಸ್ಸೂ ಮಣ್ಣಾಯಿತು ನನಸು ಕನಸಾಯಿತು
ಬಾಳು ಬರಡಾಗಲೂ ಒಲವು ವಧೆಯಾಯಿತೂ ... ಒಲವು ವಧೆಯಾಯಿತೂ
ಬಳ್ಳಿ ಹಾವಾಯಿತೇ.. ಹೂವು ಮುಳ್ಳಾಯಿತೇ..
ಪ್ರೇಮ ಹಾಳಾಯಿತೇ.. ನೀರು ಮರಳಾಯಿತೇ..
ಕಣ್ಣು ಮಂಜಾಗಿದೇ .. ದಾರಿ ಕವಲಾಗಿದೇ ..
ನೋವು ನಂದಾಗಿದೇ... ಜೀವ ಸುಳ್ಳಾಗಿದೇ ..
ಜೀವ ಸುಳ್ಳಾಗಿದೇ .. ಆಸೇ ಬಲಿಯಾಗಿದೆ
ವಿರಹ ಬಂದಾಯಿತು ವ್ಯಥೆಯ ತಂದಾಯಿತು
ಬಾಳು ಬರಡಾಗಲೂ ಒಲವು ವಧೆಯಾಯಿತೂ.. ಒಲವು ವಧೆಯಾಯಿತೂ
ಬಾನಲಿ ಕಾಣದು ಭುವಿಯಲಿ ಕಾಣದು
ಬಾಳಿನ ಗುರಿಯಲೀ .. ಭರವಸೇ ಕಾಣದು
ಗೋತಾಲ ಎಂದರೇ ಜನ್ಮದ ತೊಂದರೇ
ಶಿವನೇ ಹೀಗಾದರೇ ... ನನಗೆ ಸೋಲಾದರೇ ..
ನನಗೆ ಸೋಲಾದರೇ .. ಗೆಲವು ಇಲ್ಲಾದರೇ ...
ವಿಧಿಯೂ ಗೆದ್ದಾಯಿತು ಲೋಕ ಘೋರಾಯಿತು
ಬಾಳು ಬರಡಾಗಲೂ ಒಲವು ವಧೆಯಾಯಿತೂ.. ಒಲವು ವಧೆಯಾಯಿತೂ
ಮನಸ್ಸೂ ಮಣ್ಣಾಯಿತು ನನಸು ಕನಸಾಯಿತು
ಬಾಳು ಬರಡಾಗಲೂ ಒಲವು ವಧೆಯಾಯಿತೂ ... ಒಲವು ವಧೆಯಾಯಿತೂ
------------------------------------------------------------------------------------
ಭರವಸೆ (೧೯೮೨) - ತಾಯೇ ದೇವರಮ್ಮ
ಸಂಗೀತ : ಮ್ಯಾಕ್ಮೂನ್ ತಾಜ್, ಸಾಹಿತ್ಯ : ಕರೀಮಖಾನ, ಗಾಯನ : ವಾಣಿಜಯರಾಂ
ತಾಯೀ ದ್ಯಾವೀರಮ್ಮಾ ಬಂದು ಕಾಲಿಗೆ ಬಿದ್ದೇನಮ್ಮಾ
ತಾಯೀ ದ್ಯಾವೀರಮ್ಮಾ ಬಂದು ಕಾಲಿಗೆ ಬಿದ್ದೇನಮ್ಮಾ
ತಂದು ಕಾಣಿಕೆ ಹರಕೆ ಕೊಟ್ಟೇನಮ್ಮಾ
ತಂದು ಕಾಣಿಕೆ ಹರಕೆ ಕೊಟ್ಟೇನಮ್ಮಾ
ನೂರೊಂದ ಸುತ್ತ ಹಾಕಿ ಪವಲಿಗೆ ನಾ ಬಂದೇ
ನೂರೊಂದ ಸುತ್ತ ಹಾಕಿ ಪವಲಿಗೆ ನಾ ಬಂದೇ
ಮನದಾಸೆ ಕಲಿಕೇ ನನ್ನಮ್ಮಾ
ಮನದಾಸೆ ಕಲಿಕೇ ನನ್ನಮ್ಮಾ
ಚೆಂದುಳ್ಳ ಚಂದಿರ ಆ ನನ್ನ ಗೆಣೆಕಾರ
ನಗು ಚೆಲ್ಲಿ ಮನ ಸೆಳೆವ ಮದಗಾರ
ನಗು ಚೆಲ್ಲಿ ಮನ ಸೆಳೆವ ಮದಗಾರ ಒಲಿದಾರೇ..
ಪುಟ್ಟ ಬಾಗಿಲಿಗೇ ಗೇಣಿಸೆನೂ
ಪುಟ್ಟ ಬಾಗಿಲಿಗೇ ಗೇಣಿಸೆನೂ
ಕನ್ನಡಿಗೇ .. ಕಟ್ಟ ಬಿಗಿಸೇನೂ ...
ತಾಯೀ ದ್ಯಾವೀರಮ್ಮಾ ಬಂದು ಕಾಲಿಗೆ ಬಿದ್ದೇನಮ್ಮಾ
ತಂದು ಕಾಣಿಕೆ ಹರಕೆ ಕೊಟ್ಟೇನಮ್ಮಾ
ತಂದು ಕಾಣಿಕೆ ಹರಕೆ ಕೊಟ್ಟೇನಮ್ಮಾ
ಆಆಆ... ಆಆಆ... ಆಆಆ... ಆಆಆ... ಆಆಆಆಆಆ... ...
ನನ್ನಮ್ಮಾ ದ್ಯಾವೀರೀ ನಿನ ಕರುಣೆ ನನಗಿರಿಲೀ
ನನಗೀಗ ನನ್ನ ಬದುಕು ಐನೂರು..
ನನಗೀಗ ನನ್ನ ಬದುಕು ಐನೂರು ಒಲಿದಾರೆ
ತುಪ್ಪದ ದೀಪ ಉರಿಸೇನು...
ತುಪ್ಪದ ದೀಪ ಉರಿಸೇನು ಮುಡಿ ಕಟ್ಟಿ ಪದವ ಹಾಡೇನು...
ತಾಯೀ ದ್ಯಾವೀರಮ್ಮಾ ಬಂದು ಕಾಲಿಗೆ ಬಿದ್ದೇನಮ್ಮಾ
ತಂದು ಕಾಣಿಕೆ ಹರಕೆ ಕೊಟ್ಟೇನಮ್ಮಾ
ತಂದು ಕಾಣಿಕೆ ಹರಕೆ ಕೊಟ್ಟೇನಮ್ಮಾ.. ನನ್ನಮ್ಮಾ..
-----------------------------------------------------------------------------------
ಸಂಗೀತ : ಮ್ಯಾಕ್ಮೂನ್ ತಾಜ್, ಸಾಹಿತ್ಯ : ಏನ್.ಶೈಲಜಾ, ಗಾಯನ : ವಾಣಿಜಯರಾಂ
ಬಳುಕುವ ಬಳ್ಳಿಯಲ್ಲಿ ಬಿರಿದ ಮೋಹದ ಮಲ್ಲಿಗೆ
ಹೇಳೇ ನನ್ನಲ್ಲೀ ಈಗ ನೀನು ಸೇರಬೇಕೂ .. ಎಲ್ಲಿಗೇ ..
ಬಳುಕುವ ಬಳ್ಳಿಯಲ್ಲಿ ಬಿರಿದ ಮೋಹದ ಮಲ್ಲಿಗೆ
ಹೇಳೇ ನನ್ನಲ್ಲೀ ಈಗ ನೀನು ಸೇರಬೇಕೂ .. ಎಲ್ಲಿಗೇ ..
ಶಿವನ ಪಾದ ಕಮಲದಲ್ಲಿ ಸೇರಿ ಮುಟ್ಟಿ ಪಡೆವೇಯಾ
ಪ್ರಿಯನ ಮನವ ಬಿದ್ದು ನೀನು ಅವನ ಕೈಯ್ಯ ಹಿಡಿವೇಯಾ
ಕಸವದಲ್ಲಿ ಶವದ ಮೇಲೆ ಇರಲು ಬಯಕೆ ಪಳೆವೇಯಾ
ಕಥವ ನೀನು ಬಳ್ಳಿಯಲ್ಲಿ ಅರಳಿ ದುಂಬಿಯ ಕರೆವೇಯಾ
ಅರಳಿ ದುಂಬಿಯ ಕರೆವೇಯಾ...
ನಿನ್ನ ರೂಪ ತರಲು ನನಗೀ ಇನಿಯನ ನೆನಪಾ..
ಅವನ ಸನಿಹ ಸಾರಿ ನಾನು ಮರೆತೇ ನಿನ್ನ ಸ್ನೇಹವಾ..
ಇಂದು ಇಂಥ ತಪ್ಪು ಮಾಡಿ ಮನೆಯನು ಮೋಹವ
ನಿನ್ನ ಕಂಪೇ ಹಾದಿ ಎನಗೀ ಪ್ರಿಯನ ಬಳಿಗೆ ಸೇರುವಾ..
ಪ್ರಿಯನ ಬಳಿಗೆ ಸೇರುವಾ..
ಇನಿಯನ ಮೊದಲಲ್ಲಿ ಪಡೆದರೆ ಬೇಡುವೆ ಶಿವನಾ..
ನನ್ನ ಚರಣ ಕಮಲದಲ್ಲಿ ಇರಿಸಲು ನಿನ್ನ
ಶಿವನ ಈ ಮೊದಲಲ್ಲಿ ಪಡೆದರೇ ಹೇಳು ಓ ಸುಮನಾ..
ಜನುಮ ಜನುಮಕೂ ನನ್ನ ಪ್ರಿಯನೇ ಬಿಡದೇ ಇರನೇನ್ನಾ..
ಬಿಡದೇ ಇರನೇನ್ನಾ..
ಬಳುಕುವ ಬಳ್ಳಿಯಲ್ಲಿ ಬಿರಿದ ಮೋಹದ ಮಲ್ಲಿಗೆ
ಹೇಳೇ ನನ್ನಲ್ಲೀ ಈಗ ನೀನು ಹೇಳಬೇಕೂ .. ಎಲ್ಲಿಗೇ ..
------------------------------------------------------------------------------------
ಭರವಸೆ (೧೯೮೨) - ಸವಾಲ್ಲೊಂದು
ಸಂಗೀತ : ಮ್ಯಾಕ್ಮೂನ್ ತಾಜ್, ಸಾಹಿತ್ಯ : ಕರೀಮಖಾನ, ಗಾಯನ : ಎಸ್.ಪಿ.ಶೈಲಜಾ, ಪಿ.ಬಿ.ಶ್ರೀನಿವಾಸ
ಗಂಡು : ಸವಾಲೊಂದೇಸಿಯುತಿನಿ ನಿಂಗೇ ಒಗಟಿನ ಗಂಟು ತಂದೆ ಜನಕೆ
ಬಿಡಿಸುವ ಜಾಣರಿದ್ದ ಬಳಿಗೆ ನೀವು ಬಂದು ತಿಳಿಸಬೇಕು ನಂಗೇ ....
ಹೆಣ್ಣು : ಸವಾಲನೋಪ್ಪಿಕೊಂಡೆ ಕೊನೆಗೆ ನಾ ಜಾಣಿ ಬಂದಿ ನಿನ್ನ ಬಳಿಗೆ
ಕಲ್ಲಿಂದೇ ಬಿದ್ದ ಬಿಡಿಸಿದಂತೇ ನಾ ಬಿಡಿಸಿ ಹೇಳುತೀನಿ ನಿಂಗೇ ...
ಗಂಡು : ಹೊರಗೆ ನೀ ನೋಡು ಚಿನ್ನದ ಕ್ವಾಟೇ ಒಳಗಡೆ ಚೊಕ್ಕ ಬೆಳ್ಳಿ ಕ್ವಾಟೇ
ನಡುವೆ ನೀ ಹೇಳು ನೀ ದಿನೂಟೇ ತಿಳಿದರೆ ಜಾಣೆ ಹೇಳೇ ಗಂಗೀ ... ಗಂಗೀ ಗಂಗೀ....
ಹೆಣ್ಣು : ಹೊರಗೆ ನೀ ನೋಡು ಚಿನ್ನದ ಕ್ವಾಟೇ ಒಳಗಡೆ ಚೊಕ್ಕ ಬೆಳ್ಳಿ ಕ್ವಾಟೇ
ನಡುವೆ ನೀ ಕೇಳ ನೀರಿನೋಟೆ ತಿಳಿಯದೆ ನಿಂಬೆ ಹಣ್ಣು ಗಂಗಾ... ಗಂಗಾ ಗಂಗಾ...
ಗಂಡು : ಹಸುವಿನ ಬೆಣ್ಣೆ ಕಾಸಲಿಲ್ಲ ಉರಿಯುವ ಬೆಂಕಿ ತಾಕಲಿಲ್ಲ
ಅಲೆದರು ತುಪ್ಪ ಎಂದು ಎಲ್ಲ ತಿಳಿದರೇ ಜಾಣೆ ಹೇಳೇ ಗಂಗೀ ... ಗಂಗೀ ಗಂಗೀ....
ಹೆಣ್ಣು : ಹಸುವಿನ ಬೆಣ್ಣೆ ಕಾಸಲಿಲ್ಲ ಉರಿಯುವ ಬೆಂಕಿ ತಾಕಲಿಲ್ಲ
ಅಲೆದರು ತುಪ್ಪ ಎಂದು ಎಲ್ಲ ತಿಳಿಯದೇ ಜೇನುತುಪ್ಪ ಗಂಗಾ... ಗಂಗಾ ಗಂಗಾ...
ಗಂಡು : ಹಳದಿಯ ಜಡೆಯ ಬಿಲ್ಲೆ ಮ್ಯಾಲೆ ಬಳಿಸಿತು ಹಸಿರು ಬಣ್ಣದ ಶ್ಯಾಲೇ
ದ್ಯಾವರ ಗುಡಿಗೆ ತಳಿಯ ಮಾಲೆ ತಿಳಿದರೇ ಬಾಲೇ ಹೇಳೇ ಗಂಗೀ ... ಗಂಗೀ ಗಂಗೀ....
ಹೆಣ್ಣು : ಹಳದಿಯ ಜಡೆಯ ಬಿಲ್ಲೆ ಮ್ಯಾಲೆ ಬಳಿಸಿತು ಹಸಿರು ಬಣ್ಣದ ಶ್ಯಾಲೇ
ದ್ಯಾವರ ಗುಡಿಗೆ ತಳಿಯ ಮಾಲೆ ತಿಳಿಯದೇ ಫ್ರೆಂಡು ಹೂವೂ ಗಂಗಾ... ಆಹ್ಹಾ.. ಗಂಗಾ ಗಂಗಾ...
ಗಂಡು : ಸವಾಲು ಏನು ಇಲ್ಲ ಮುಂದೆ ತಿಳಿಯಿತು ನೀನು ನಾನು ಒಂದೇ
ಹೆಣ್ಣು : ನೀನು ನಾನು ಒಂದೇ
ಇಬ್ಬರು : ತಿಳಿಯಿತು ನೀನು ನಾನು ಒಂದೇ.. ಒಂದೇ
ಹೆಣ್ಣು : ಬಾ... ಮಾಮ
------------------------------------------------------------------------------------
No comments:
Post a Comment