1734. ಯೋಧ (೨೦೦೯)



ಯೋಧ ಚಲನಚಿತ್ರದ ಹಾಡುಗಳು 
  1. ಇಂಡಿಯಾ ನಮ್ ಇಂಡಿಯಾ
  2. ಲಿಪ್ ಟೂ ಲಿಪ್ 
  3. ಸೂರ್ಯ ನೋಡಯ್ಯಾ 
  4. ಮಾಂಗಲ್ಯಮ್ ತಂತುನಾನೇನ 
  5. ಇಂಡಿಯಾ ನಮ್ ಇಂಡಿಯಾ
ಯೋಧ (೨೦೦೯) - ಇಂಡಿಯಾ ನಮ್ ಇಂಡಿಯಾ
ಸಂಗೀತ  - ಸಾಹಿತ್ಯ: -ನಾದಬ್ರಹ್ಮ ಹಂಸಲೇಖ,  ಗಾಯನ  : -ಕೆ.ಎಸ್.ಚಿತ್ರಾ

ದಿಕ್ಕು ದಿಕ್ಕಲಿ ಭಾವ ಬಂಧನ ಹರಿವ ನೀರೆಲ್ಲ ವೇದ ವಾಚನ
ಸುತ್ತ ಗಾಳಿಯಲಿ ಶಾಂತಿ ಚಿತ್ತನ ಮಣ್ಣ ಕಣಕಣದಿ ಕರುಣೆ ಕಂಪನ
ಈ ನಾಡಲ್ಲಿ ಎಲ್ಲ ದೇವರಿಗೂ ಪೂಜೆಯಿದೆ
ಈ ನಾಡಲ್ಲಿ ಎಲ್ಲ ಧರ್ಮಗಳಿಗೂ ಸ್ಥಾನವಿದೆ
ಈ ನಾಡಲ್ಲಿ ಎಲ್ಲಿ ಜನರಿಗೂ ಹಕ್ಕಿದೆ
ಈ ನಾಡಲ್ಲಿ ಶಾಂತಿಯೇ ಜೀವನ
ನಕ್ಸಲಿಜಂ ಶರಣಾಗಲಿ ಟೆರರಿಸಂ ಕೊನೆಗಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ ನಮ್
ಇಂಡಿಯಾ ನಮ್ ಇಂಡಿಯಾ ಸ್ವತಂತ್ರ ಭೂಮಿ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ 
ನೆಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ

ಭರತಖಂಡಕೆ ಹಸ್ತರೇ ಸಿರಿತನ ಇಲ್ಲಿ ಯಾಕಿದೇ ಇಷ್ಟು ಬಡತನ
ಜ್ಞಾನವಿದ್ಯೆಗೆ ನಾವೇ ಶ್ರೇಷ್ಠರು ಇನ್ನು ಇರುವರು ಅನಕ್ಷರಸ್ಥರು
ಈ ನಾಡಲ್ಲಿ ಅನಕ್ಷರತೆ ಅಳಿಯಬೇಕು
ಈ ನಾಡಲ್ಲಿ ಅಸಮಾನತೆ ತೊಲಗಬೇಕು
ಈ ನಾಡಲ್ಲಿ ಜಾತಿ ಗೋಡೆ ಉರುಳಬೇಕು
ಈ ನಾಡಲ್ಲಿ ಮೌಢ ಕಣ್ಣೆರೆಯಬೇಕು
ಬೆಳೆಕಾರರು ಬೆಲೆಕಾಣಲೆ ಕಲೆಗಾರರು ನೆಲೆಕಾಣಲಿ
ಇದು ಆದಾಗಲೆ ಇದು ನಮ್ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಸ್ವತಂತ್ರ ಭೂಮಿ ಇಂಡಿಯಾ
ನೆಮ್ ಇಂಡಿಯಾ ನಮ್ ಇಂಡಿಯಾ
ಸ್ವಶಕ್ತ ರಾಷ್ಟ್ರ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ಪ್ರಜಾ ಪ್ರಧಾನ ಇಂಡಿಯಾ
ನಮ್ ಇಂಡಿಯಾ ನಮ್ ಇಂಡಿಯಾ
ದೇಸಿಯ ಸ್ವರ್ಗ ಇಂಡಿಯಾ…
--------------------------------------------------------------------------------------------------

No comments:

Post a Comment