1736. ಜಾನು (೨೦೧೨)



ಜಾನು ಚಲನಚಿತ್ರದ ಹಾಡುಗಳು
  1. ನೀನೆ ನನ್ನ ಸವಿಗನಸು
  2. ಕದ್ದು ಮುಚ್ಚಿ ಕದ್ದು ಮುಚ್ಚಿ
  3. ಸ್ವ...ಲ್ಪ ಬಿಟ್ಕೊಂಡು ಆಮೇಲೆ
  4. ಏನ್ ಸಮಾಚಾರ್ ರೀ...
  5. ಕಣ್ಣ್ ಮುಚ್ರೋ ಕಣ್ಣ್ ಮುಚ್ಚ್ರೀ

ಜಾನು (೨೦೧೨) - ನೀನೆ ನನ್ನ ಸವಿಗನಸು
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ್

ನೀನೆ ನನ್ನ ಸವಿಗನಸು ಬೇಗ ಬಂದು ಉಪಚರಿಸು
ನೀ… ನೀಡುತಿರುವ ಈ… ಪ್ರೇಮ ಜ್ವರವ
ಜಾನು ಮೇರಿ ಜಾನ್‌ ನಾನು ನಿನ್ನವ 
ನೀನೆ ನನ್ನ ಸವಿಗನಸು ಬೇಗ ಬಂದು ಉಪಚರಿಸು
ಕನಸಿನ ಕಂತೆಯ

ನಿನ್ನೆದುರಲೆ ಬಿಡಿಸುವೆ ಪ್ರತಿಸಲ ಒಲಿಯುವ ಮನಸಿಗೆ
ತನ್ನೊಲವಲೆ ದೊರಕಿದೆ ಪ್ರತಿಫಲ
ದೂರ ಹೋದಷ್ಟು ನಾನು ಇನ್ನು ನಿನ್ನತ್ತ ಬಂದೆ
ಹಾಡು ಹಗಲಲ್ಲೂ ನಿನ್ನಲ್ಲೆ ನಾ ಕಾಣುವೆ ಚಂದ್ರೋದಯ
ಜಾನು ಮೇರಿ ಜಾನ್ ನಾನು ನಿನ್ನವ
ನೀನೆ ನನ್ನ ಸವಿಗನಸು ಬೇಗ ಬಂದು ಉಪಚರಿಸು
ನೆನಪಿನ ಅಲೆಗಳು

ನನ್ನಾಳದಿ ನಡೆಸಿವೆ ಗಲಬೆಯ ಎಂದಿಗೂ ಮರೆಯದ
ನೀನೀಗಲೆ ಭರವಸೆ ಕೊಡುವೆಯಾ?
ಒಂಟಿ ಇದ್ದಾಗಲೇನೆ ನಂಟು ಹೆಚ್ಚಾಗಬೇಕೆ
ನೀನು ಕಣ್ಣಾಚೆ ಹೋದಾಗ ನಾ ತಾಳುವೆ ಆತಂಕವ
ಜಾನು ಮೇರಿ ಜಾನ್ ನಾನು ನಿನ್ನವ
ನೀನೆ ನನ್ನ ಸವಿಗನಸು ಬೇಗ ಬಂದು ಉಪಚರಿಸು
ನೀ… ನೀಡುತಿರುವ ಈ… ಪ್ರೇಮ ಜ್ವರವ
ಜಾನು ಮೇರಿ ಜಾನ್ ನಾನು ನಿನ್ನವ
---------------------------------------------------------------------------------

ಜಾನು (೨೦೧೨) - ಕದ್ದು ಮುಚ್ಚಿ ಕದ್ದು ಮುಚ್ಚಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಅನುರಾಧ ಭಟ್


ಕದ್ದು ಮುಚ್ಚಿ ಕದ್ದು ಮುಚ್ಚಿ ಅಂದವಾದ ಅನಾಹುತ..
ನಿನ್ನ ಮೆಚ್ಚಿ ನಿನ್ನ ಮೆಚ್ಚಿ ಅಂದವಾದ ಅನಾಹುತ..
ನಿನ್ನೊಂದು ಮಾತಿಗೆ ಏದೆಂದು ಕಾಯುತ.
ನನ್ನಲ್ಲಿ ನೂತನ ಮಿಂಚನ್ನು ಕಾಣುತಾ
ಪ್ರೇಮಿ ಪ್ರೇಮಿ ನಾ ಖಂಡಿತಾ

ನಿನ್ನ ಬಣ್ಣ ಬಂತು ನನ್ನ ಭಾವಕೆ
ಚೂರು ದೂರದಿಂದ ಮೆಲ್ಲ ಕೂಗು ನನ್ನ
ಬೇರೆ ದಾಟಿ ಬಂತು ನನ್ನ ಮೌನಕೆ
ಬೆನ್ನ ಹಿಂದೆ ನಿಂತು ಮುಚ್ಚು ನನ್ನ ಕಣ್ಣ
ಕನಸಿಗೆ ಬಂದು ಉಪಕರಿಸು
ಬಿಡದೇ ನನ್ನ ಉಪಚರಿಸು
ನಾ ಪ್ರೇಮಿ ನಾ ಪ್ರೇಮಿ ನಾ ಪ್ರೇಮಿ ಖಂಡಿತಾ….

ನಿನ್ನ ಗಮನಕಾಗಿ ಅರ್ಜಿ ಹಾಕಲೇ
ಕನಸಿನಲ್ಲಿ ಕೆಲಸ ಕೂಡಿಸಬಲ್ಲೆ ಏನು
ಸಣ್ಣ ಮಾತಿಗೆಲ್ಲಾ ಮರೆಸಿ ಕಾಯಲೆ
ಮತ್ತೆ ಮತ್ತೆ ನನ್ನ ರಮಿಸಬೇಕು ನೀನು
ವಿರಹದ ಬೇಗೆ ಅನುಭವಿಸಿ
ಬರುವೆನು ನಿನ್ನ ಅನುಸರಿಸಿ
ನಾ ಪ್ರೇಮಿ ನಾ ಪ್ರೇಮಿ ನಾ ಪ್ರೇಮಿ ಖಂಡಿತಾ….
ಕದ್ದು ಮುಚ್ಚಿ ಕದ್ದು ಮುಚ್ಚಿ ಅಂದವಾದ ಅನಾಹುತ..
ನಿನ್ನ ಮೆಚ್ಚಿ ನಿನ್ನ ಮೆಚ್ಚಿ ಅಂದವಾದ ಅನಾಹುತ…
ನಿನ್ನೊಂದು ಮಾತಿಗೆ ಏದೆಂದು ಕಾಯುತ
ನನ್ನಲ್ಲಿ ನೂತನ ಮಿಂಚನ್ನು ಕಾಣುತಾ….,
ಪ್ರೇಮಿ ಪ್ರೇಮಿ ನಾ ಖಂಡಿತಾ…
---------------------------------------------------------------------------


ಜಾನು (೨೦೧೨) - ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಭಟ್ ಗಾಯನ : ಲಕ್ಷ್ಮಿ ವಿಜಯ, ಹರಿಕೃಷ್ಣ

ಸ್ವ...ಲ್ಪ ಬಿಟ್ಕೊಂಡು ಆಮೇಲೆ ಕೂತ್ಕೊಂಡು ಮಾತಾಡೋಣ್ವ 
ಸ್ವ...ಲ್ಪ ತಬ್ಕೊಂಡು ಆಮೇಲೆ ಬಂದಿದ್ದು ನೋಡ್ಕೊಳೋಣ್ವಾ

ಜಾತ್ರೆ ಲಿ ಹುಡುಗೀರ ಪಕ್ಕದಲ್ಲಿ
ಸುಮ್ನೆ ನಿಂತ್ಕೊಳ್ಳೋನು ಇರ್ತಾನ
ರಾಮ್ದೇವ್ರು ಇರುವಂತ ಮಡಿಕೇಲಿ
ಸ್ನಾನ ಮಾಡ್ಕೊಂಡವ್ನೆ ಸುಲ್ತಾನ
ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ

ಹೇ ಇಷ್ಟುದ್ದ ಐಸ್ ಕ್ಯಾಂಡಿ
ಗುರಿಯಿಟ್ಟು ತಿಂದ್ರುನು
ಮೂಗಲ್ಲಿ ಹೋಯ್ತು ತಾಯಿ
ಅಯ್ಯಯ್ಯೋ ಅಲ್ನೋಡು ಸಲ್ಮಾನ್ ಖಾನ್ಯಾಕೆ
ಮಾರ್ತಾವ್ನೆ ಕಡ್ಲೇಕಾಯಿ
ಈ ರೋಡ್ ಹಿಂಗ್ಯಾಕೆ ಅಲ್ಲಾಡುತೈತೆ
ಅರೆ ಬಾಬು ಭೂಕಂಪ ಆದಂಗೈತೆ
ಎಲ್ಲಾನು ಶೇಕಿಂಗು ನಾವಿಬ್ರೇ ಸ್ಟ್ಯಾಂಡಿಂಗು
ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ

ನೀ ಹುಡುಗಿ ನಾ ಹುಡುಗ ನೀ ಹತ್ರ ಬರಬೇಡ
ನಾವಿನ್ನು ಲವ್ ಮಾಡಿಲ್ಲ
ನಾ ಹುಡುಗಿ ಅಂತ ನೀ ಯಾತಕ್ಕೆ ಅಂದ್ಕೊಂಡೆ
ನಂಗಿಷ್ಟ ಆಗೋದಿಲ್ಲ
ಬಾರಮ್ಮಿ ಒಂಚೂರು ಕುಸ್ತಿ ಆಡು
ಧಮ್ಮಿದ್ರೆ ಕಾಲ್ಗೆಜ್ಜೆ ಟಚ್ಚ್ಚು ಮಾಡು

ಅರೆ ಆಗೋಗ್ಲಿ ಫೈಟಿಂಗು ಆಮೇಲೆ ಸಿಂಗಿಂಗು
ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ
ಜಾತ್ರೆ ಲಿ ಹುಡುಗೀರ ಪಕ್ದಲ್ಲಿ
ಸುಮ್ನೆ ನಿಂತ್ಕೊಳ್ಳೋನು ಇರ್ತಾನ
ಪರಮಾತ್ಮ ಇರುವಂತ ಮಡಿಕೇಲಿ
ಸ್ನಾನ ಮಾಡ್ಕೊಂಡವ್ನೆ ಸರದಾರ
----------------------------------------------------------------

ಜಾನು (೨೦೧೨) - ಮಾಯಾ ಮಾಯಾ ನಾನೇ ಮಾಯಾ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ್


--------------------------------------------------------------------------------------------------------------------

No comments:

Post a Comment