1738. ತೂತು ಮಡಿಕೆ (೨೦೨೨)



ತೂತು ಮಡಿಕೆ ಚಲನಚಿತ್ರದ ಹಾಡುಗಳು
  1. ಯಾಮಾರಿದೇ ಹೃದಯ
  2. ತೂತು ಮಡಿಕೆ 
  3. ನಸಗುನ್ನಿ ಮತ್ತು ಡಾಲರ್ 
  4. ದೇರ್ ಹೀ ಗೋಸ 
ತೂತು ಮಡಿಕೆ (೨೦೨೨) - ಯಾಮಾರಿದೇ ಹೃದಯ
ಸಂಗೀತ : ಸ್ವಾಮಿನಾಥನ್, ಸಾಹಿತ್ಯ : ಚೇತನ ಕುಮಾರ, ಗಾಯನ : ವಿಜಯ ಪ್ರಕಾಶ

ಯಾಮಾರಿದೆ ಹೃದಯ ಈ ಹುಡುಗಿಯ ಸೆಳೆತಕೆವಾಲುತಿದೆ ಹರೆಯ ಇವಳ ಕರೆಗೆ
ಏಕೋ ಬಂದಿದೆ ಪ್ರೀತಿಯ ಜ್ವರ
ಇವಳ ಕಡೆಗೆ ಹೃದಯದ ನಡಿಗೆ

ಮತ್ತೆ ಮತ್ತೆ ಮಧುರ ಸ್ವರ ಎದೆಯ ಒಳಗೆ
ನಿನ್ನನ್ನು ನೋಡುವಾಸೆ ಏನೇನು ಹೇಳುವಾಸೆ
ಹೆಸರಿಡಿದು ಕೂಗುವಾಸೆ
ನಿನ್ನ ಹಿಂದೆ ನಾನು ದಿನವೂ ಬರುವೆ

ಏನನ್ನೋ ನೀಡುವಾಸೆ ಮತ್ತೊಮ್ಮೆ ನೋಡುವಾಸೆ
ಮನಸಾರ ಅಪ್ಪುವಾಸೆ ತೋಳಲ್ಲೇ ತಪ್ಪುವಾಸೆ

ಅಪ್ಸರೆಯು ಬಂದಳು ಜೋಪಡಿಯ ಎದೆಯೊಳಗೆ
ಕನಸುಗಳ ಉತ್ಸವ ಸ್ವರ್ಗವೇ ಕಣ್ಣ ಮುಂದೆ
ದಿನವೆಲ್ಲಾ ಹಬ್ಬವು ಇವಳೆಂದರೆ ಸಡಗರವು
ಬದಲಾಗಿದೆ ಭಾವನೆ ಮಾತಲಿ ಹೇಳಲಾರೆ

ಹತ್ರ ಹೋಗಲು ಭಯ ಆಗಿದೆ ದೂರ ನಿಲ್ಲಲು ವೇದನೆಯು
ಮಾತು ಆಡಲು ಮನಸ್ಸು ಕಾದಿದೆ
ಮಾತೆ ಬಾರದು ಮುಜುಗರ ಕೇಳೆ
ಕಣ್ಣಲ್ಲೇ ಮುಟ್ಟುವಾಸೆ ಗೊತ್ತಾಯ್ತು ನಿನ್ನ ಭಾಷೆ
ಬದಲಾಯ್ತು ನನ್ನ ವರಸೆ
ನೀನು ಅಂದ್ರೆ ನಂಗೆ ಯಾಕೋ ಇಷ್ಟ
ಹೇಳುವೆ ಮಾತು ನೂರು ಕೇಳು ನೀನು ಒಂದು ಚೂರು
ಮಾಡುವೆ ಪ್ರೀತಿ ಜೋರು ಬಂದು ನೀ ನನ್ನ ಸೇರೆ

ಏಹೇ ಬಿದ್ದಂತಾಗಿದೆ ಎದ್ದಂಗಾಗಿದೆ
ಕಾಣೆಯಾದೆನು ನನ್ನೊಳಗೆ
ಸುಮ್ಮನೆ ಇದ್ದರೂ ಮನಸ್ಸು ನಕ್ಕಿದೆ
ಲೂಸಾಗ್ಹೋದೆನು ಯಾಕೆ ಹಿಂಗೆ
ಜೊತೆಯಲ್ಲೆ ನಡೆಯುವಾಸೆ
ಜೊತೆ ಜೊತೆಗೆ ಇರುವ ಆಸೆ
ಮುದ್ದನ್ನು ಮಾಡುವಾಸೆ
ನೀನು ಅಂದ್ರೆ ನಂಗೆ ಯಾಕೋ ಇಷ್ಟ

ನನ್ನನ್ನೇ ನೀಡುವಾಸೆ ಮತ್ತೊಮ್ಮೆ ನೋಡುವಾಸೆ
ಮನಸಾರ ಅಪ್ಪುವಾಸೆ
ನಿನ್ನ ಬಿಟ್ಟು ಬದುಕು ನಂಗೆ ಕಷ್ಟ
-------------------------------------------------------------------------------------------------

ತೂತು ಮಡಿಕೆ (೨೦೨೨) - ತೂತು ಮಡಿಕೆ ತೂತು ಮಡಿಕೆ
ಸಂಗೀತ : ಸ್ವಾಮಿನಾಥನ್, ಸಾಹಿತ್ಯ : ನಿತಿನ್ ನಾರಾಯಣ, ಗಾಯನ : ಚೇತನ ಕುಮಾರ

ಹೊತ್ತಾರೇ ಎದ್ರೇ ಸಾಕು ನೀರಿಗಾಗಿ ಕಿತ್ತಾಟ 
ಎಲ್ಲಾರಗೂ ಕ್ಲೋಸೂ... ಫ್ರೆಂಡೂ ಇಲ್ಲಿ ಸೊಳ್ಳೆಯ ಕಾಟ 
ಅಪರೂಪಕ್ಕ ಆನಂದ ಹಳೆ ಪಾತ್ರೆ ಸಂಬಂಧ 
ದಾರಿ ಉದ್ದಕ್ಕೂ ಸೊಂಪಾದ ಸುಗಂಧ 
ತೂತು ಮಡಿಕೆ  ತೂತು ಮಡಿಕೆ 
ತೂತು ಇಲ್ಲದ ಜೀವನ ಉಂಟಾ ಮಾಡು ತನಿಖೆ 
ತೂತು ಮಡಿಕೆ  ತೂತು ಮಡಿಕೆ 
ತೂಕ ಹಾಕಬೇಡಿ ಸ್ವಾಮಿ ಒಂದಾಗ ಬಾಳೋಕೆ 
  
ಧಾರಾಕಾರ ಸುಳ್ಳು ಹೇಳೋ ಶೂರ ಈ ಕೇರಿಯ ರಣಧೀರ 
ವಿಕ್ಸ್ ಏಕ್ಷನಗೂ ತಲೆ ನೋವ್ ಬರಸಿ ಜಾಣ 
ಮತ್ತೇ ಇವನ ಜಾಲತಾಣ 

ನಾಯಿ ಬಾಳದಲ್ಲೂ ಮೂಲೆ ಹುಡುಕ್ಕೊ ಅಭ್ಯಾಸ 
ಆಗಾಗ ಮಾಡಿ ಮಾಡಿ ಕೆಟ್ಟು ಹೋಗವನೇ ಮನುಷ್ಯ 
ಕಿತ್ತೋಗಿರೋ ಚಡ್ಡಿ ಹಾಕೀ ಅಂತಾನೇ ನಂದು ಜಾಕೀ 
ನಾಗರೀಕರೆಲ್ಲ ಸೇರಿ ಇವನ ಬಾಯಿಗೇ ಮಣ್ಣ ಹಾಕೀ 
ತೂತು ಮಡಿಕೆ  ತೂತು ಮಡಿಕೆ 
ತೂತು ಇಲ್ಲದ ಜೀವನ ಉಂಟಾ ಮಾಡು ತನಿಖೆ 
ತೂತು ಮಡಿಕೆ  ತೂತು ಮಡಿಕೆ 
ಸಾಲಾಗಿ ಬಂದು ಬೈದು ಹೋಗಿ ಕೊಟ್ಟು ಕಾಣಿಕೆ 

ಬಿಟ್ಟಿ ಕಾಸು ಇವರ ಜೋಷು ಡೈಲಿ ಐಸು ಪೈಸು ಆಡೋ ಬಾಯ್ಸೂ 
ಕೂಲಿಂಗ್ ಗ್ಲಾಸ್ಸೂ ಶೇರೂ ಮಾಡೋ ಫ್ರೆಂಡ್ಸೂ 
ಇವರೇತ್ತಾನೇ ಮಾಸ್ಟರ್ನೆ ಪೀಸ್ಸೂ   

ಊರಿಗೆಲ್ಲಾ ಮೋಕ್ಷಮಾಡುವ ಅಂತ ಬುದ್ಧವಂತರೂ 
ಅದ್ಕೇನೇ ಭೂಮಿ ಬಿಟ್ಟು ಮೇಲೆ ಹೊಂಟ್ ಹೋಗವನೇ ದೇವರೂ 
ಬರಿ ಚಾಲಾಕಿ ತೂತ್ ಮಡಕೆ ತೂಪಾಕಿ  
ಹಾಳ್ ಮಾಡೋಕೆ ಇನ್ನೂ ಉಳಸೇ ಇಲ್ಲ ಬಾಕೀ 
ತೂತು ಮಡಿಕೆ  ತೂತು ಮಡಿಕೆ 
ತೂತು ಇಲ್ಲದ ಜೀವನ ಉಂಟಾ ಮಾಡು ತನಿಖೆ 
ತೂತು ಮಡಿಕೆ  ತೂತು ಮಡಿಕೆ 
ತೂಕ ಹಾಕಬೇಡಿ ಸ್ವಾಮೀ ಒಂದಾಗ ಬಾಳೋಕೆ 
-----------------------------------------------------------------------------------------------------

No comments:

Post a Comment