1744. ರವಿ ಬೋಪಣ್ಣ (೨೦೨೨)



ರವಿ ಬೋಪಣ್ಣ ಚಲನಚಿತ್ರದ ಹಾಡುಗಳು
  1. ಶಾರೀರ ಯಾಕೆ ಹಿಂಗೇ.. 
  2. ಅಭಿಸಾರಿಕೆ 
  3. ಮದಿರೆ ಮದಿರೆ 
  4. ಹೀರೊ ಇವನೇ.. ವಿಲ್ಲನ್ ಇವನೆ 
  5. ಚಂದ ಚಂದ 
  6. ಧಡಕ ಧಡಕ್ 
  7. ಹ್ಯಾಡ್ಸಮ ಹುಡುಗ 
  8. ಹೋರಾಡೋ ಜೀವವೇ 
ರವಿ ಬೋಪಣ್ಣ (೨೦೨೨) - ಶಾರೀರ ಯಾಕೆ ಹಿಂಗೇ.. 
ಸಂಗೀತ : ಸಾಹಿತ್ಯ : ರವಿಚಂದ್ರನ್, ಗಾಯನ : ಶಮಿತ್ ಮಲ್ನಾಡ್ 

ಈ ಶಾರೀರ ಯಾಕೋ ಹಿಂಗೇ ಶಾಯರಿ ಹಾಡ್ತಿದೆ ನಂಗೆ 
ಬಾಹರ ಹೇಳೋಕ್ಕಾಗದೇ ಅಂದರ್ ಏನೋ ಆಗ್ತಿದೆ 

ಹರಹರ ಶಿವ ಶಿವ ಮೈಯೆಲ್ಲಾ ಹವಾ ಹವಾ 
ಹರಹರ ಶಿವ ಶಿವ ಮೈಯೆಲ್ಲಾ ಖುವಾ ಖುವಾ 
ಈ ಪ್ರೀತಿಗೆ ನೀನೇ ರಾಜ ಇಲ್ವಾ 
ಹರಹರ ಹರಹರ ಹರಿಯೇ 
ಹರಹರಹರ ಶಿವ ಶಿವ ಇವನ್ ಬಂದ್ರೇ ಹವಾ ಹವಾ 
ಕನ್ನಡಕೆ ಇವನೇ ಢವ ಢವ 

ಹಗಲು ಕಂಡ ಕನಸು ಹೆಗಲೇರಿತು ನನ್ನ 
ಬೇಕೋ ಬೇಡವೋ ತಿಳಿದೆ ಶರಣಾದೆ ನಾ 
ಮಂತ್ರವಾದಿ ಅವನು ಮಂಕಾದೆ ನಾನು 
ಛೂಮಂತ್ರ ಹೇಳದೆ ಬಾಣ ಬಿಟ್ಟನು 
ಹರಹರಹರ ಶಿವ ಶಿವ ಇವನ್ ಬಂದ್ರೇ ಹವಾ ಹವಾ 
ಕನ್ನಡಕೆ ಇವನೇ ಢವ ಢವ 
ಈ ಶಾರೀರ ಯಾಕೋ ಹಿಂಗೇ ಶಾಯರಿ ಹಾಡ್ತಿದೆ ನಂಗೆ 
ಬಾಹರ ಹೇಳೋಕ್ಕಾಗದೇ ಅಂದರ್ ಏನೋ ಆಗ್ತಿದೆ 

ಬೆಂಕಿ ಅಂತ ಅವನು ಸುಡುತ್ತಾನೆ ಮೈಯ್ಯನ್ನು 
ತೀರದ ಆಸೆಗೆ ಲಸಿಕೆ ಇವನು
ಈ ಕನಸಿನಾತುರ ಮೈಯ್ಯ ಮಾತ್ರ ಭಯಂಕರ 
ಈ ಸಲುಗೆ ಪ್ರೀತಿಗೆ ಓಂಕಾರ 
ಹರಹರಹರ ಶಿವ ಶಿವ ಇವನ್ ಬಂದ್ರೇ ಹವಾ ಹವಾ 
ಕನ್ನಡಕೆ ಇವನೇ ಢವ ಢವ 
ಈ ಶಾರೀರ ಯಾಕೋ ಹಿಂಗೇ ಶಾಯರಿ ಹಾಡ್ತಿದೆ ನಂಗೆ 
ಬಾಹರ ಹೇಳೋಕ್ಕಾಗದೇ ಅಂದರ್ ಏನೋ ಆಗ್ತಿದೆ 
ಹರಹರ ಶಿವ ಶಿವ ಮೈಯೆಲ್ಲಾ ಹವಾ ಹವಾ 
ಹರಹರ ಶಿವ ಶಿವ ಮೈಯೆಲ್ಲಾ ಖುವಾ ಖುವಾ 
ಈ ಪ್ರೀತಿಗೆ ನೀನೇ ರಾಜ ಇಲ್ವಾ 
ಹರಹರ ಹರಹರ ಹರಿಯೇ  
------------------------------------------------------------------------------------------
 
ರವಿ ಬೋಪಣ್ಣ (೨೦೨೨) - ಅಭಿಸಾರಿಕೆ 
ಸಂಗೀತ : ರವಿಚಂದ್ರನ್, ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಮಧು ಬಾಲಕೃಷ್ಣನ್ 

ಅಭಿಸಾರಿಕೆ ಈ ಅರಿಕೆ ನಿನಗಾಗಿಯೇ ತನಿಖೆ 
ಅನುಮನವನು ನೀನೇ ವ್ಯಾಪಿಸಿದೆ 
ಉಳಿಯಬಹುದೇ ಹೇಳು ಪ್ರೀತಿಸದೇ 
ಅಭಿಸಾರಿಕೆ ಈ ಅರಿಕೆ ನಿನಗಾಗಿಯೇ ತನಿಖೆ 

ಭೂಮಿಗೆ ಬಂದು ಮೋಡದ ಸಾಲು 
ಹೊದಿಸಿದೆ ನೋಡು ನವಿಲಿನ ಶಾಲು 
ಕನಸೇ ನಿನಗೂ ಪರಿಚಯ ಬೇಕೇ 
ಉಸಿರ ಬಿಸಿಯ ವಿನಿಮಿಯ ಸಾಕೆ 
ಅಭಿಸಾರಿಕೆ ಈ ಅರಿಕೆ ನಿನಗಾಗಿಯೇ ತನಿಖೆ 

ಕೂಗಿದೆ ಶಿಲ್ಪ ಶಿಲೆಯಲ್ಲಿ ಕೂತು 
ಹೂವಲ್ಲಿ ಗಂಧ ನಡೆಸಿದೆ ಮಾತು 
ಸೆಳೆವ ಅಲೆಯೇ ನರ್ತಿಸು ನೀನು 
ಜಗವ ಮರೆತು ವರ್ತಿಸಲೇನು 
ಅಭಿಸಾರಿಕೆ ಈ ಅರಿಕೆ ನಿನಗಾಗಿಯೇ ತನಿಖೆ 
ಅನುಮನವನು ನೀನೇ ವ್ಯಾಪಿಸಿದೆ 
ಉಳಿಯಬಹುದೇ ಹೇಳು ಪ್ರೀತಿಸದೇ 
ಅಭಿಸಾರಿಕೆ ಅಭಿಸಾರಿಕೆ ಅಭಿಸಾರಿಕೆ ಅಭಿಸಾರಿಕೆ 
------------------------------------------------------------------------------------------

ರವಿ ಬೋಪಣ್ಣ (೨೦೨೨) - ಮದಿರೆ ಮದಿರೆ 
ಸಂಗೀತ : ಸಾಹಿತ್ಯ : ರವಿಚಂದ್ರನ್,  ಗಾಯನ : ರಾಜೇಶ ಕೃಷ್ಣನ್, ಇಂದು ನಾಗರಾಜ 

ಧೀರೇ ಧೀರೇ ಧೀರೇ ಧೀರೇ 
ಧೀರೇ ಧೀರೇ ಧೀರೇ ಧೀರೇ 
ಧೀರೇ ಧೀರೇ ಧೀರೇ 
ಧೀರೇ ಧೀರೇ ಧೀರೇ 
ಧೀರೇ ಧೀರೇ ಧೀರೇರೇ 

ಮದಿರೆ ಮದಿರೆ ಮದಿರೆ ಮದಿರೆ 
ಮರೆಸಿತು ನನ್ನ ನಿದಿರೇ .. ಓಹೋ .... 
ನಿದಿರೆ ನಿದಿರೆ ನಿದಿರೆ ನಿದಿರೆ 
ಯಾಕೆ ಬೇಕು ನೀನಿದ್ರೇ ... 
ಜೊತೆಗಿದ್ರೆ ಜಾಗರಣೆ ಸರಸಕ್ಕೆ ಒಗ್ಗರಣೆ 
ಬಿರಬಿರನೆ ಬಿಡಿಸುವ
ಮದಿರೆ ಮದಿರೆ ಮದಿರೆ ಮದಿರೆ 
ಮರೆಸಿತು ನನ್ನ ನಿದಿರೇ .. ಓಹೋ .... 
ನಿದಿರೆ ನಿದಿರೆ ನಿದಿರೆ ನಿದಿರೆ 
ಯಾಕೆ ಬೇಕು ನೀನಿದ್ರೇ ... 

ಹೆಣ್ಣು ಒಂದು ಮುತ್ತು ಮುತ್ತಿಟ್ಟರೇ ಮುಗಿತು 
ಮತ್ತೆ ,ಮತ್ತೆ ಬೇಕು ಅದೇ ಹೆಣ್ಣ ಗಮ್ಮತ್ತು 
ಹೆಣ್ಣಿಲ್ದೆ ಆಸೆ ಇಲ್ಲದೇ ಆಸೆ ಇಲ್ಲದ ಹೆಣ್ಣಿಲ್ವೇ 
ಸರಸರನೆ ಹಾರೋಣ ಬಾ... 
ಮದಿರೆ ಮದಿರೆ ಮದಿರೆ ಮದಿರೆ 
ಮರೆಸಿತು ನನ್ನ ನಿದಿರೇ .. ಓಹೋ .... 
ನಿದಿರೆ ನಿದಿರೆ ನಿದಿರೆ ನಿದಿರೆ 
ಯಾಕೆ ಬೇಕು ನೀನಿದ್ರೇ ... 

ಒಂದು ಒಂದು ಒಂದೇ ಆಸೆ ಇದ್ರೆ ಮುಂದೆ 
ಬೇರೆ ಆಗೋದುಂಟೆ ಜೀವನ ಅರ್ಧ ಘಂಟೆ 
ಪ್ರತಿ ನಿಮಿಷ ಪ್ರೀತ್ಸೋಕೆ ದಾಹಕ್ಕೆ ದಾಸೋಹಕ್ಕೆ 
ಸಮಯ ಸಾಲದು 
ಮದಿರೆ ಮದಿರೆ ಮದಿರೆ ಮದಿರೆ 
ಮರೆಸಿತು ನನ್ನ ನಿದಿರೇ .. ಓಹೋ .... 
ನಿದಿರೆ ನಿದಿರೆ ನಿದಿರೆ ನಿದಿರೆ 
ಯಾಕೆ ಬೇಕು ನೀನಿದ್ರೇ ... 
ಮಪ ಮಪ ಮಪ ಮಪ  ಪ ಗಮರಿಸ 
ಮಪ ಮಪ ಮಪ ಮಪ  ಪ ಗಮರಿಸ 
------------------------------------------------------------------------------------------

ರವಿ ಬೋಪಣ್ಣ (೨೦೨೨) - ಹೀರೊ ಇವನೇ.. ವಿಲ್ಲನ್ ಇವನೆ 
ಸಂಗೀತ : ಸಾಹಿತ್ಯ : ರವಿಚಂದ್ರನ್,  ಗಾಯನ : ಸಂತೋಷ ವೆಂಕಿ, ಮದ್ವೇಷ ಭಾರಧ್ವಜ, ಅನಿರುದ್ಧ ಶಾಸ್ತ್ರಿ 

ಹೀರೋನು ಇವನೇ ವಿಲ್ಲನ್ನು ಇವನೇ 
ಎದ್ದ ಬಂದ್ರೆ ಎಲ್ಲಾ ಪೀಸು ಪೀಸು 
ಇಂತಹ ಕ್ಯಾರೆಕ್ಟರ್ ಎಲ್ಲು ಹುಟ್ಟಿಲ್ಲ 
ಇಂಥವನ ಚ್ಯಾಪ್ಟರ್ ಹೀಸ್ಟ್ರೀಲಿ ಇಲ್ಲ 
ಓಯ್ ... ಮಾಸ್ಸಿಗೂ ಬಾಸ್ ಕ್ಲಾಸಿಗೂ ಬಾಸು 
ಮಾಸಿಗೂ ಕ್ಲಾಸಿಗೂ ಇವನೇ ಬಾಸು 
ಹೀರೋನು ಇವನೇ ವಿಲ್ಲನ್ನು ಇವನೇ 
ಎದ್ದ ಬಂದ್ರೆ ಎಲ್ಲಾ ಪೀಸು ಪೀಸು 

ಹುಚ್ಚನನಮಗ ಇವ ಅಂತಾರೇ ಹುಚ್ಚುತನನೇ ಇವನ ಬಂಡವಾಳ 
ಭಂಡ ನನ್ನಮಗ ಅಂತಾರೆ ಈ ಭಂಡನೆ ಯಾರೋ ಜಗ್ಗಸೋಕ್ಕಾಗಲ್ಲ 
ಜಗವೆಲ್ಲ ಜಗವೆಲ್ಲ ಈ ಜಾದೂಗಾರನ ಜೇಬಲ್ಲಿ 
ಹೀರೋನು ಇವನೇ ವಿಲ್ಲನ್ನು ಇವನೇ 
ಎದ್ದ ಬಂದ್ರೆ ಎಲ್ಲಾ ಪೀಸು ಪೀಸು 
ಇಂತಹ ಕ್ಯಾರೆಕ್ಟರ್ ಎಲ್ಲು ಹುಟ್ಟಿಲ್ಲ 
ಇಂಥವನ ಚ್ಯಾಪ್ಟರ್ ಹೀಸ್ಟ್ರೀಲಿ ಇಲ್ಲ 

ಬ್ರಹ್ಮಾಸ್ತ್ರ ಇವನ ಕಣ್ಣಲ್ಲಿ ಗೆಲ್ತಾನೆ ಭೂಮಿನೇ ಮಾತಲ್ಲಿ 
ಹೇ.. ಬಲಗೈ ಭಂಟ ಇವನೀಗ ಬ್ರಹ್ಮಾನೇ 
ಹಣೆಬರಹ ತಿದ್ದಿ ಬರಿತಾನೇ 
ಜನರಿಂದ ಮಕರಂದ ಹೀರುವ ಹೀರೊ ರವಿಚಂದ್ರ 
ಹೀರೋನು ಇವನೇ ವಿಲ್ಲನ್ನು ಇವನೇ 
ಎದ್ದ ಬಂದ್ರೆ ಎಲ್ಲಾ ಪೀಸು ಪೀಸು 
ಇಂತಹ ಕ್ಯಾರೆಕ್ಟರ್ ಎಲ್ಲು ಹುಟ್ಟಿಲ್ಲ 
ಇಂಥವನ ಚ್ಯಾಪ್ಟರ್ ಹೀಸ್ಟ್ರೀಲಿ ಇಲ್ಲ 
ಮಾಸ್ಸಿಗೂ ಬಾಸ್ ಕ್ಲಾಸಿಗೂ ಬಾಸು 
ಬಾಸ್ಸಿಗೂ ಬಾಸ್ಸು ಕ್ರೇಜಿ ಬಾಸ್ಸು 
ಎದ್ದ ಬಂದ್ರೆ ಎಲ್ಲಾರು ಪೀಸು ಪೀಸು   
-----------------------------------------------------------------------------------------

ರವಿ ಬೋಪಣ್ಣ (೨೦೨೨) - ಚಂದ ಚಂದ 
ಸಂಗೀತ : ಸಾಹಿತ್ಯ : ರವಿಚಂದ್ರನ್,  ಗಾಯನ : ಸತ್ಯ ಪ್ರಕಾಶ, ಅನುರಾಧ ಭಟ್ಟ 

ಚಂದ ಚಂದ ಚಂದಕ್ಕೆ ಚಂದ 
ಚಂದ ಚಂದ ಚಂದ 
ಅಂದ ನೀನೇ ಚಂದ ನೀನೇ 
ಚಂದ್ರನ ಬೆಳಕು ನೀನೇ 
ತಳ್ಳಕ್ಕ ಬಳಕ್ಕ ನೀನೇ 
ಈ ಮನ್ಸು ಕಲಕಿದ್ದು ನೀನೇ 
ಕೆನ್ನೆ ಗಿಂಡಲೇನೆ ನೀ ನನ್ನ ಸಿಹಿ ಜೇನೇ 
ಚಂದ ಚಂದ ಚಂದದ ಗೊಂಬೆ ನೀ 

ಹೇ ಧಡಕ್ ಧಡಕ್ ಧಡಕ್ ಧಡಕ್ 
ಈ ದಾಹಕ್ಕ ಮೋಹಕ್ಕ ನೀನೇ ಝಲ್ಲಕ್ಕ 
ಹೇ ಧಡಕ್ ಧಡಕ್ ಧಡಕ್ ಧಡಕ್ 
ಈ ಸ್ನೇಹಕ್ಕ ಪ್ರೇಮಕ್ಕ ನೀನೇ ಡೋಲಕ್ಕ 
ಬಳಕೋ ಬಾಲೇ ನೀ ಕೇತಕೋ ಶಿಲೆ ನೀ 
ಅಳುಕೇ ಇಲ್ಲದ ಗಂಧದ ಗೊಂಬೆ ನೀ 
ಮಾತಲ್ಲಿ ಧಿಮಾಕ್ಕ ಕಣ್ಣಲ್ಲಿ ಗಿಮ್ಮಕ್ಕ 
ಕೊಂಕೆ ಇಲ್ಲದ ಪ್ರೇಮ ಕವಿ ನೀ 
ಕಣ್ಮರೆಯಲ್ಲೇ ಪ್ರೀತಿ ಚಮ್ಮಕ್ಕ ಕಣ್ಣಂಚಿನಲ್ಲೇ ಪ್ರೀತಿ ನಾಟಕ 
ಧಡಕ್ ಧಡಕ್ ಧಡಕ್ ಧಡಕ್ 
ಹೇ ಧಡಕ್ ಧಡಕ್ ಧಡಕ್ ಧಡಕ್ 
ಈ ದಾಹಕ್ಕ ಮೋಹಕ್ಕ ನೀನೇ ಝಲ್ಲಕ್ಕ 
ಹೇ ಧಡಕ್ ಧಡಕ್ ಧಡಕ್ ಧಡಕ್ 
ಈ ಸ್ನೇಹಕ್ಕ ಪ್ರೇಮಕ್ಕ ನೀನೇ ಡೋಲಕ್ಕ 

ಎಲೆಲೇಲೋ ಎಲೆಲೇಲೋ ಎಲೆಲೇಲೋ 
ಎಲೆಲೇಲೋ ಎಲೆಲೇಲೋ ಎಲೆಲೇಲೋ 
ಸೊಲ್ಲಕ್ಕ ಗೆಲ್ಲಕ್ಕ ಹೆಣ್ಣೇ ಕುಮ್ಮಕ್ಕ 
ಹೆಣ್ಣ ಇಲ್ಲದ್ದಿದ್ದರೇ ಇಲ್ಲಾ ಬೆಳಕ್ಕ 
ಅಳಕ್ಕ ನಗಕ್ಕ ಗಂಡೇ ಟಾನಿಕ್ 
ಗಂಡೇ ಇಲ್ಲದ ಜೀವ ಬಿಟ್ಟಾಕ್ 
ಕಣ್ಮರೆಯಲ್ಲೇ ಪ್ರೀತಿ ಕಿರಿಕ್ 
ಕಣ್ಣಂಚಿನಲ್ಲೇ ಪ್ರೀತಿ ಚುರಕ್ಕ್ 
ಧಡಕ್ ಧಡಕ್ ಧಡಕ್ ಧಡಕ್ 
ಹೇ ಧಡಕ್ ಧಡಕ್ ಧಡಕ್ ಧಡಕ್ 
ಈ ದಾಹಕ್ಕ ಮೋಹಕ್ಕ ನೀನೇ ಝಲ್ಲಕ್ಕ 
ಹೇ ಧಡಕ್ ಧಡಕ್ ಧಡಕ್ ಧಡಕ್ 
ಈ ಸ್ನೇಹಕ್ಕ ಪ್ರೇಮಕ್ಕ ನೀನೇ ಡೋಲಕ್ಕ 
-----------------------------------------------------------------------------------------

ರವಿ ಬೋಪಣ್ಣ (೨೦೨೨) - ಧಡಕ್ ಧಡಕ್ 
ಸಂಗೀತ : ಸಾಹಿತ್ಯ : ರವಿಚಂದ್ರನ್,  ಗಾಯನ : ಗೌತಮ ಶ್ರೀವತ್ಸ 

ಧಡಕ್ ಧಡಕ್ ಧಡಕ್ ಧಡಕ್ 
ಈ ಹೃದಯ ಖಡಕ್ ಈ ಹೃದಯ ಚುರಕ್ಕ್ 
ಹೇ... ನೆನ್ನೆ ಮೊನ್ನೆ ಎಲ್ಲಾ ನೆನಪೇ 
ಇಂದು ಬದುಕಿಗೆ ನೆನಪಾಯಿತೇ 
ಧಡಕ್ ಧಡಕ್ ಧಡಕ್ ಧಡಕ್ 
ಈ ಹೃದಯ ಖಡಕ್ ಈ ಹೃದಯ ಚುರಕ್ಕ್ 

ಬಾಳೊಂದು ಉಯ್ಯಾಲೆ ಆಡ್ಸೋರು ಯಾರೊಲೇ 
ಆಟ ಆಡ್ಸರೋ ಜೊತೇಲಿರೋರೇ 
ಬಾಳೊಂದು ಕನಸು ನಾಳೆಗೆ ಹುಮ್ಮಸ್ಸೂ 
ಚಮ್ಕಾಯಿಸೋದೇ ಮನಸ್ಸೂ 
ಧಡಕ್ ಧಡಕ್ ಧಡಕ್ ಧಡಕ್ 
ಈ ಹೃದಯ ಖಡಕ್ ಈ ಹೃದಯ ಚುರಕ್ಕ್ 

ಬಾಳೊಂದು ಬಾಣ ಚಲಿಸೋನೆ ಜಾಣ 
ಗುರಿ ತಲುಪೋದೆ ಧ್ಯಾನ 
ಬಾಳೊಂದು ಬಣ್ಣ ಬಣ್ಣದ ಮೈದಾನ 
ಬಣ್ಣ ಬಣ್ಣ ಚೆಲ್ಲಾಟ ಜೀವನ 
ಧಡಕ್ ಧಡಕ್ ಧಡಕ್ ಧಡಕ್ 
ಈ ಹೃದಯ ಖಡಕ್ ಈ ಹೃದಯ ಚುರಕ್ಕ್ 
ತಂದಾನಿ ನೆನೆನಾನಾ  ನೇನಾನಿ ನೇನಾನಿ ನೆನ 
ತಂದಾನಿ ನೆನೆನಾನಾ  ನೇನಾನಿ ನೇನಾನಿ ನೆನ 
-----------------------------------------------------------------------------------------

ರವಿ ಬೋಪಣ್ಣ (೨೦೨೨) - ಹ್ಯಾಡ್ಸಂ ಹುಡುಗ 
ಸಂಗೀತ : ಸಾಹಿತ್ಯ : ರವಿಚಂದ್ರನ್,  ಗಾಯನ : ಗೌತಮ ಶ್ರೀವತ್ಸ 

ಹ್ಯಾಡ್ಸಂ ಹುಡುಗ ಬ್ಯುಟಿಫ್ಯೂಲ್ ಹುಡುಗಿ 
ಇವರ ಮಧ್ಯೆ ಲವ್ ಸ್ಟೋರಿ 
ನಾಳೆ ತಿಳಿಯದೆ ಇಂದು ನುಗ್ಗಿದೆ 
ಅನ್ ಪ್ಲಾನ್ಡ ಈ ಲವ್ ಸ್ಟೋರಿ 
ಈ ಪ್ರೀತಿ ಒಂಥರಾ ಕುಣಿಯುತ್ತೇ ನೂರು ತರ
ಕುಣಿಲೇಬೇಕು ಪ್ರೀತಿ ಆಟಕೆ 
ಹ್ಯಾಡ್ಸಂ ಹುಡುಗ ಬ್ಯುಟಿಫ್ಯೂಲ್ ಹುಡುಗಿ 
ಇವರ ಮಧ್ಯೆ ಲವ್ ಸ್ಟೋರಿ 

ಪ್ರೀತ್ಸೋಕೆ ನೂರು ದಾರಿ 
ಹಿಂದೆ ಬೀಳೋದೇ ಮೊದಲ ದಾರಿ  
ಪ್ರೀತಿಯಲ್ಲಿ ಒಂದು ಬಾರಿ ಬಿದ್ರೆ 
ತಪ್ಪಸಕೊಳ್ಳೋಕೆ ಇಲ್ಲ ದಾರಿ ಕಣಿ ಕೇಳಬೇಡ್ರಿ 
ಹ್ಯಾಡ್ಸಂ ಹುಡುಗ ಬ್ಯುಟಿಫ್ಯೂಲ್ ಹುಡುಗಿ 
ಇವರ ಮಧ್ಯೆ ಲವ್ ಸ್ಟೋರಿ 
 
ಕಣ್ಣಲ್ಲೇ ಆಟ ಶುರು ಇವರು ಆಡಿದ್ದೇ ಆಟ ಗುರು 
ಪ್ರೀತಿಯ ಆಳ ತಿಳಿಯೋಕೆ 
ಹುಡುಗಿಯರ ಕೈಯ್ಯ ಬಿಡಬೇಡರೀ 
ಕಣಿ ಕೇಳಬೇಡಾರೀ 
ಹ್ಯಾಡ್ಸಂ ಹುಡುಗ ಬ್ಯುಟಿಫ್ಯೂಲ್ ಹುಡುಗಿ 
ಇವರ ಮಧ್ಯೆ ಲವ್ ಸ್ಟೋರಿ 
----------------------------------------------------------------------------------------

ರವಿ ಬೋಪಣ್ಣ (೨೦೨೨) - ಹೋರಾಡೋ ಜೀವವೇ 
ಸಂಗೀತ : ಸಾಹಿತ್ಯ : ರವಿಚಂದ್ರನ್,  ಗಾಯನ : ಗೌತಮ ಶ್ರೀವತ್ಸ 

ಹೋರಾಡೋ ಜೀವವೇ ಜೀವನ ಹೋರಾಟವೇ 
ಬದುಕೇ ತರಬೇತಿ ಕೊನೆಗೆ ಬೆಂಕಿಗೆ ಆಹುತಿ 

ಹೋರಾಡೋ ಜೀವವೇ ಜೀವನ ಹೋರಾಟವೇ 
ಬದುಕೇ ತರಬೇತಿ ಕೊನೆಗೆ ಬೆಂಕಿಗೆ ಆಹುತಿ 

ಹೋರಾಡೋ ಜೀವವೇ ಜೀವನ ಹೋರಾಟವೇ 
ಬದುಕೇ ತರಬೇತಿ ಕೊನೆಗೆ ಬೆಂಕಿಗೆ ಆಹುತಿ 
-----------------------------------------------------------------------------------------

No comments:

Post a Comment