1747. ಬನಾರಸ (೨೦೨೨)



ಬನಾರಸ ಚಲನಚಿತ್ರದ ಹಾಡುಗಳು 
  1. ಬೆಳಕಿನ ಕವಿತೆ ಬೆರಗಿಗೆ ಸೋತೆ
  2. ಮಾಯಗಂಗೆ ಮಾಯಗಂಗೆ ಮೌನಿ ಆದಳೆ
ಬನಾರಸ (೨೦೨೨) - ಬೆಳಕಿನ ಕವಿತೆ ಬೆರಗಿಗೆ ಸೋತೆ
ಸಂಗೀತ : ಅಜನೀಶ ಲೋಕನಾಥ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ಸಂಜಿತ ಹೆಗಡೆ, ಸಂಗೀತ ರವೀಂದ್ರನಾಥ 

ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ ಹೀಗೆ ತಾನೇ ಪ್ರೇಮ
ಸೆಳೆಯುವ ಗಳಿಗೆ
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳು ನನ್ನೊಳಗೆ

ಹತ್ತಿಯಂತೆ ಇವಳು ಈ ಮುದ್ದಾದ
ಬೆಂಕಿನ ಗಂಟಾಕಿದಂತ ಶಿವ ಯಾರೋ?
ರೆಪ್ಪೆಯಲ್ಲೇ ಸರಸ ಸದಾಕಾಲ
ಸಮ್ಮೋಹಗೊಳಿಸುವ ಹುಡುಗಿ
ಒಂದೇ ಒಂದು ನಿಮಿಷ ಈ ಮಾದೇ
ಕೈ ಬೆರಳು ತಾಗಿ
ಸರಿಯೋ ಕಾಲ ಕೂಡ ಸವೆಯೋ ತರ ನಾ
ಪ್ರೀತಿ ಮಾಡೋ ಹೈದ ಮಜ್ನು ತರ
ಹೀಗೆ ತಾನೇ ಪ್ರೇಮ ಸರಿಸಿತು ಜಗವ

ಮೆಚ್ಚಿದನು ಅರಸ ಸಿಗೊಬೇಡ
ಅಂತಾನೆ ಸರಿಸುತ ಪರದೆ ಪ್ರೀತಿಸುವ ಕೆಲಸ
ರಜೆ ಹಾಕೋ ಮಾತಿಲ್ಲ ರಾಧೆ
ಉಸಿರ ಆಣೆ ಮಾಡು ಪ್ರೇಮೋತ್ಸವ ನಾ
ಅರಿಯೋ ಮುನ್ನ ಆಯ್ತು ಈ ಸಂಭವ
ಹೀಗೆ ತಾನೇ ಪ್ರೇಮ ಮುಗಿಯದ ಕವನ
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳು ನನ್ನೊಳಗೆ
--------------------------------------------------------------------------

ಬನಾರಸ (೨೦೨೨) - ಮಾಯಗಂಗೆ ಮಾಯಗಂಗೆ ಮೌನಿ ಆದಳೆ
ಸಂಗೀತ : ಅಜನೀಶ ಲೋಕನಾಥ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ಚಾರ್ಮನ್ ಮಲ್ಲಿಕ

ಮಾಯಗಂಗೆ ಮಾಯಗಂಗೆ ಮೌನಿ ಆದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ
ನಾನೆ ಗಂಗೆಯೋ ನನ್ನ ಒಳಗೆ ಗಂಗೆಯೋ
ಅನ್ನೋ ಸಂಶಯ ಮೂಡಿದೆ ಈಗ
ದೇವರೂರಿಗೆ ನಾನೇ ದಾರಿಹೋಕನ?
ಅನ್ನೋ ಅಚ್ಚರಿ ಆಗಿರೋ ಯೋಗ
ಪುಟ್ಟ ದೋಣಿ ಒಂದು ಸುಲಿಗೆ ಸಿಕ್ಕಿಕೊಂಡ ಹಾಗಿದೆ
ಇಂತದೊಂದು ದಾಳಿಯನ್ನು ಜೀವ ತಾಳಬಲ್ಲದೆ?
ಮಾಯಗಂಗೆ ಮಾಯಗಂಗೆ ಮೌನಿ ಆದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ

ಆ ಬಾನೆತ್ತರ ಈ ಗೋಪುರ ವಾಲೋ ತರ
ಏಳು ಸ್ವರ ಈ ಮಾಮರ ಕೇಳೋ ತರ
ನಾನೀಗ ಅವಳ ಹೆಜ್ಜೇನ ನೋಡುತ
ಸಾಗಿದೆ ಈ ಪಾದ ಹೋಗೋ ಗುರಿನೆ ಕಾಣದೆ

ದತ್ತ ಬೆಳಕಲು ಎಲ್ಲ ಕತ್ತಲಾಗಿದೆ
ನೀನು ಹೇಳಿದೆ ಬದುಕಿನ ದಾರಿ
ಹುಟ್ಟ ಬೇಕಿದೆ ಮತ್ತೆ ಹುಟ್ಟ ಬೇಕಿದೆ
ಪ್ರೀತಿ ಮಾಡಲು ಸೀಳುತ ಗೋರಿ
ಮಾಯಗಂಗೆ ಮಾಯಗಂಗೆ ಮೌನಿ ಆದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ

ಗೂಡಂಗಡಿ ಚಹಾ ಪುಡಿ ಮಾತಾಡಿದೆ
ಏನಾಯಿತು ಹೇಗಾಯಿತು ಹೇಳೆಂದಿದೆ
ಆ ಕಣ್ಣ ಒಳಗೆ ನಕ್ಷತ್ರ ಮಂದಳಿ
ಮಾತಲಿ ನಾ ಹೇಗೆ ಅವಳ ವಿಚಾರ ಹೇಳಲಿ
ತುಂಬಾ ಜಂಗುಳಿ ಇಲ್ಲಿ ಬಸ್ಮದೊಕುಳಿ
ನಾನು ಮೈಲಿಗೆ ಆಗದ ಆತ್ಮ
ಹರಿಯುತಿರುವೇನು ಹೇಗೆ ನಿಂತುಕೊಳ್ಳಲಿ
ನನ್ನ ಮುಂದಿನ ಪೂಜೆಯೇ ಪ್ರೇಮ
ಮಾಯಗಂಗೆ ಮಾಯಗಂಗೆ ಮೌನಿ ಆದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ
----------------------------------------------------------------------------------------------

No comments:

Post a Comment