ಅವತಾರ ಪುರುಷ ಚಲನಚಿತ್ರದ ಹಾಡುಗಳು
- ಪ್ರೇಮ ಹೃದಯದೆ ಬಂದರೆ
- ಸಾಗರಕೆ ಚಂದ್ರಮನ ಬೆರೆವಾಸೆ
- ಈ ರಾತ್ರಿ ಪೂಜಾ ಸಮಯ
- ಕುಲುಕುತ ಬಳಕುವ ನಡುವನು ಸವರಲು
- ಕಣ್ಣುಗಳ ತೆರೆಯೋ ತೆರೆಯೋ
ಅವತಾರ ಪುರುಷ (೧೯೮೯) - ಪ್ರೇಮ ಹೃದಯದೆ ಬಂದರೆ
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಮಂಜುಳಾ, ಕೋರಸ್
ಪ್ರೇಮ ಹೃದಯದ ಬಂದರೆ ಜಗವೆಲ್ಲ ಸಂತೋಷವೇ
ನೀನು ಜೊತೆಯಲ್ಲೇ ಇದ್ದರೆ ಪ್ರತಿ ಮಾತು ಸಂಗೀತವೇ
ಮನಸು ಮನಸು ಕಳೆಸು ಬೆರೆಸು ಹ್ಹಾ... ರಾಗ ಹಾಡಿದೆ... ಶೃತಿ ಸೇರಿದೆ...
ಪ್ರೇಮ ಹೃದಯದ ಬಂದರೆ ಜಗವೆಲ್ಲ ಸಂತೋಷವೇ... ಆಹಾಹಾ...ಆಆಆ
ನೀನು ಜೊತೆಯಲ್ಲೇ ಇದ್ದರೆ ಪ್ರತಿ ಮಾತು ಸಂಗೀತವೇ
ಹಾದಿ ಬೀದಿಯಾದರೇನು ನೂರು ಕಣ್ಣು ಸೇರಲೇನು
ಜೀವ ಜೀವ ಸೇರಿದಾಗ ಅಂಜದಂತೆ ಯಾರೀಗೂನು...
ಜೋಡಿ ಹಕ್ಕಿ ಹಾರೋವಾಗ ಬೇಡಿ ಇಲ್ಲ... ಬೇಲಿ ಇಲ್ಲ...
ಪ್ರೀತಿ ಮಾಡಿ ಆಡೋವಾಗ ಹೆಜ್ಜೆಯಲ್ಲಿ ಶಂಕೆಯಿಲ್ಲ...
ಆದವೆಂಬ ತೇರಿನಲ್ಲಿ ಬಂದೆ ನೀನು ದೇವಿಯಂತೆ
ತಂದೆ ನಾನು ನನ್ನ ನಿನಗೆ ಪೂಜೆ ಮಾಡೋ ದಾಸನಂತೆ
ಪ್ರೇಮ ಹೃದಯದ ಬಂದರೆ ಜಗವೆಲ್ಲ ಸಂತೋಷವೇ... ಆಹಾಹಾ...ಆಆಆ
ಆಆಆ ನೀನು ಜೊತೆಯಲ್ಲೇ ಇದ್ದರೆ ಪ್ರತಿ ಮಾತು ಸಂಗೀತವೇ
ತರತಾತಾತತತತದ ...
ಪ್ರೀತಿಯೆಂಬ ತೋಟದಲ್ಲಿ ನಿತ್ಯ ಬಿಟ್ಟ ನಗೆಯ ಮಲ್ಲಿ
ಹೂವಾಯ್ತು ಮಾಲೆ ಕಟ್ಟಿ ಇಟ್ಟೆ ನಿನ್ನ ಪಾದದಲ್ಲಿ
ಬಾಳು ಎಂಬ ಸ್ಟೇಜಿನಲ್ಲಿ ನಾನೇ ರಾಜ ನೀನೇ ರಾಣಿ
ಬಣ್ಣ ಬೆಳಕು ಬೇಡ ಇಲ್ಲಿ ಹಾಡು ಬಲವ ತಾಳಕಿಲ್ಲಿ
ಹೂವ ಕಂಪಿನಂತೆ ಬಂತೆ ನನ್ನ ಹೃದಯದ ತುಂಬಿ
ನೀನೇ ಬಾಳಿಗೊಂದು ಅರ್ಥ ತಂದೆ ದಾರಿ ತೋರು ಇನ್ನೂ ಮುಂದೆ
ಪ್ರೇಮ ಹೃದಯದ ಬಂದರೆ ಜಗವೆಲ್ಲ ಸಂತೋಷವೇ... ಆಹಾಹಾ...ಆಆಆ
ಆಆಆ ನೀನು ಜೊತೆಯಲ್ಲೇ ಇದ್ದರೆ ಪ್ರತಿ ಮಾತು ಸಂಗೀತವೇ
ಮನಸು... ಲಾಲಾ ಮನಸು ಲಾಲಾ ಕಲೆತು.. ತೂರೂರು ಬೆರೆತು.. ತೂರೂರು
ರಾಗ ಹಾಡಿದೆ... ಶೃತಿ ಸೇರಿದೆ...
ಪ್ರೇಮ ಹೃದಯದ ಬಂದರೆ ಜಗವೆಲ್ಲ ಸಂತೋಷವೇ... ಆಹಾಹಾ...ಆಆಆ
ಆಆಆ ನೀನು ಜೊತೆಯಲ್ಲೇ ಇದ್ದರೆ ಪ್ರತಿ ಮಾತು ಸಂಗೀತವೇ... ಯ್ಯಾ...
---------------------------------------------------------------------------------------------------------------
ಅವತಾರ ಪುರುಷ (೧೯೮೯) - ಸಾಗರಕೆ ಚಂದ್ರಮನ ಬೆರೆವಾಸೆ
ಸಂಗೀತ : ವಿಜಯಾನಂದ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ,
ಆ... ಆಆಆಆಅ...
ಸಾಗರಕೆ... ಚಂದ್ರಮನ ಬೆರೆವಾಸೆ
ಓ... ಚುಂಬನದ ಸಿಹಿ ಆಸೆ...
ಮೇಘಕೆ ಬೀಸೋ ಗಾಳಿಯ ಆಸೆ
ಭೂಮಿಗೆ ಬೀಳೋ ಮಳೆ ಹನಿ ಆಸೆ
ಜೀವಕೆ ಸ್ನೇಹದ ಆಸೆ...
ಜೀವಕೆ ಸ್ನೇಹದ ಆಸೆ...
ಸಾಗರಕೆ... ಚಂದ್ರಮನ ಬೆರೆವಾಸೆ
ಓ... ಚುಂಬನದ ಸಿಹಿ ಆಸೆ...
ಒಲವಿನ ತೇರು ಏರುವ ಆಸೆ ಬಳಿಗೆ ಬರಲಾರೇ ಏನೋ ...
ಬೆಡಗಿಯ ದೇವಿ ಲಾವಣ್ಯ ಸಿರಿಯೇ ಬಿಟ್ಟು ಇರಲಾರೆ ನಾನು
ಜೀವನ ಪಥದಿ ಜೊತೆಯಾದೆ ನೀನು
ಕತ್ತಲ ಬಾಳ ಬೆಳಕಾದ ಬಾನು
ಮಾತಿದು ಸುರವೀಣೆಯಂತೆ...
ಪ್ರೀತಿಯು ಸ್ವರಮೇಳದಂತೆ
ಸಾಗರಕೆ... ಚಂದ್ರಮನ ಬೆರೆವಾಸೆ
ಓ... ಚುಂಬನದ ಸಿಹಿ ಆಸೆ...
ಆಆಆ.. ನಿನಿಸನಿನಿಸ ನಿಸರಿಸನಿಸಪಸನಿಸ ಪಸನೀಸ
ಆ...ಆ...ಆ...ಆ.. ಆಆಆಆಆಆ....
ಕಾಮನಬಿಲ್ಲ ಕಣ್ಣಲ್ಲೇ ಕಂಡೆ ಕಳೆಯ ಸಾಕಾರ ನೀನೋ .. ಓ
ನೂತನ ಗಾನ ಬಾಳಲ್ಲಿ ಬರೆದ ಸುಖದ ಸವಿ ಭಾವ ನೀನು...
ಚಿಮ್ಮುವ ನಲ್ಮೆ ಹೊನಲಾಗಿ ಬಂದೆ
ಸ್ವರ್ಗ ಸೊಬಗ ಧರೆಯಲ್ಲೇ ಕಂಡೆ
ಪ್ರೇಮವೂ ನಿಜ ಗಂಗೆಯಂತೆ
ಜೀವನ ಶೃತಿ ಸೇರಿದಂತೆ.. ಹೇ.. ಹೇ..ಹೇ..
ಸಾಗರಕೆ... ಚಂದ್ರಮನ ಬೆರೆವಾಸೆ
ಓ... ಚುಂಬನದ ಸಿಹಿ ಆಸೆ...
ಮೇಘಕೆ ಬೀಸೋ ಗಾಳಿಯ ಆಸೆ
ಭೂಮಿಗೆ ಬೀಳೋ ಮಳೆ ಹನಿ ಆಸೆ
ಜೀವಕೆ ಸ್ನೇಹದ ಆಸೆ...
ಜೀವಕೆ ಸ್ನೇಹದ ಆಸೆ...
---------------------------------------------------------------------------------------------------------------
ಅವತಾರ ಪುರುಷ (೧೯೮೯) - ಈ ರಾತ್ರಿ ಪೂಜಾ ಸಮಯ
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಾ, ಕೋರಸ್
ಲಾಲಾಲಾಲಾ... ಲಾಲಾಲಾಲಾ... ಲಾಲಾಲಾಲಾ... ಲಾಲಾಲಾಲಾ...
ಹ್ಹಾ.. ಈ ರಾತ್ರಿ ಪೂಜಾ ಸಮಯ ಲಾಲಾಲಾಲಾ...
ಈ ಸೇವೆ ನಿನಗೆ ಇನಿಯಾ ಲಾಲಾಲಾಲಾ...
ತನುಮನದಿಂದ ಭಜಿಸುವೆ ನಿನ್ನ...
ಅಯ್ಯೋ.... ಹರಿ ಹರಿ... ಹರಿ ಹರಿ...
ಈ ರಾತ್ರಿ ಪೂಜಾ ಸಮಯ ಲಾಲಾಲಾಲಾ...
ಈ ಸೇವೆ ನಿನಗೆ ಇನಿಯಾ ಲಾಲಾಲಾಲಾ...
ಯಮುನೆಯ ಕೆರೆಯಲಿ ಕರೆದಿಹೆ ಮಾಧವ
ಕೊಳಲಿನ ಸೆಳೆತಕೆ ಕುಣಿಯುವ ರೋಜ ನಾ
ಆಡು ಬಾ... ದಾಸಿಯ ಸೇವೆಯ ಬೇಡು ಬಾ
ಬೇಗ ಬಾ... ಓಡಿ ಬಾ ವರಗಳ ನೀಡು ಬಾ...
ಮನದ ವೇದನೆ ರೋಧನೆ ನೀಗಿ...
ಒಲವ ತೋರಿಸು ನೀನೇ ...
ಸುಖದ ಸೀಮೆಗೆ ದಾರಿಯ ತೋರಿ
ಬಳಿಗೆ ಕರೆದುಕೋ ನೀನೇ
ಹರಿ ಓಂ... ಹರಿ ಹರಿ... ಹರಿ ಹರಿ...
ಈ ರಾತ್ರಿ ಪೂಜಾ ಸಮಯ ಲಾಲಾಲಾಲಾ...
ಈ ಸೇವೆ ನಿನಗೆ ಇನಿಯಾ ಆಹ್ಹಹ ...
ಲಾಲಾಲಾಲಾ... ಲಾಲಾಲಾಲಾ...
ಲಾಲಾಲಾಲಾ... ಲಾಲಾಲಾಲಾ...
ಭಜನೆಯ ಸುಖದಲಿ ಮರೆಯುವೆ ಮೈಯ್ಯನು
ದಿನ ದಿನ ಎಣಿಸಿಹೆ ಬೆರೆಯಲು ನಿನ್ನನು
ಸನ್ನಿಧಿ ದರ್ಶನ ಈ ದಿನ ನೀಡು ಬಾ
ಭಕ್ತಿಗೂ ಶಕ್ತಿಗೂ ಬೇಧವ ಹೇಳು ಬಾ...
ಹೂವ ಮಂಚದೆ ತೂಗುವೆ ನಿನ್ನನು
ತರುವೆ ಹಾಲಾಭಿಷೇಕ...
ಕಡಲ ನೌಕೆಗೆ ಪೂಸುವೇ ಚಂದನ
ತೀರಿಸೋ ಆಸೆ ಅನೇಕ
ಹರಿ ಓಂ... ಹರಿ ಹರಿ... ಹರಿ ಹರಿ...
ಈ ರಾತ್ರಿ ಪೂಜಾ ಸಮಯ ಲಾಲಾಲಾಲಾ...
ಈ ಸೇವೆ ನಿನಗೆ ಇನಿಯಾ
ತನುಮನದಿಂದ ಭಜಿಸುವೆ ನಿನ್ನ...
ಅಯ್ಯೋ... ಹರಿ ಹರಿ... ಹರಿ ಹರಿ... ಹೇ... ಯ್ಯಾ...
----------------------------------------------------------------------------------------------------------------
ಅವತಾರ ಪುರುಷ (೧೯೮೯) - ಕುಲುಕುತ ಬಳಕುವ ನಡುವನು ಸವರಲು
ಸಂಗೀತ : ವಿಜಯಾನಂದ, ಸಾಹಿತ್ಯ : ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಮ
ಆಆಆ...ಆಆಆ... ಲಾಲಾಲಲಲ ಲಾಲಾಲಲಲ
ಕುಲುಕುತ ಬಳುಕುವ ನಡುವನು ಸವರಲು ಚೆನ್ನ
ಅರಳಿದ ಹವಳದ ತುಟಿಗಳ ಮುದ್ದಿಸೆ ಚೆನ್ನ
ರವಿ ಜಾರಿದಾಗ ಶಶಿ ಮೂಡಿದಾಗ
ಏಕಾಂತದಲ್ಲಿ ಜೊತೆ ಸೇರಿದಾಗ
ದಿನವೆಲ್ಲಾ ನಾವು ಹೀಗೆ ಪ್ರೇಮದಲಿ ನಲಿಯುವ ಅನುದಿನ
ಕುಲುಕುತ ಬಳುಕುವ ನಡುವನು ಸವರಲು ಚೆನ್ನ
ಅರಳಿದ ಹವಳದ ತುಟಿಗಳ ಮುದ್ದಿಸೆ ಚೆನ್ನ
ಇರುಳಲಿ ಬೆಳಕನು ಚೆಲ್ಲುತಿದೆ ಕರಿ ಮುಗಿಲಲಿ ಮಿಂಚುಗಳು
ಓ.. ಹನಿ ಹನಿ ಮಳೆ ಹನಿ ಸುರಿಸುತಿದೆ ಆ ತೇಲುವ ಮೋಡಗಳು
ಚಳಿಯನು ನಾ ತಾಳೆ ಬಳಿ ಬಾರೆಯ
ಮನಸಾರ ಆನಂದ ತರಲಾರೆಯಾ
ಮನ ಬಾನಿನಲಿ ಓಲಾಡಿರಲಿ ಮಳೆ ನೀರನಲಿ ತನು ತೇಲಿರಲಿ
ದಿನವೆಲ್ಲ ನಿನ್ನ ಸೇರಿ ಆಡುವೆನು ಬಿಡು ಬಿಡು ಭಯವನು...
ಕುಲುಕುತ ಬಳುಕುವ ನಡುವನು ಸವರಲು ಚೆನ್ನ
ಅರಳಿದ ಹವಳದ ತುಟಿಗಳ ಮುದ್ದಿಸೆ ಚೆನ್ನ... ರತತರತಾ
ತನುವಿಗೆ ತನುವನು ಸೋಕಿಸುತ ನಾ ಚಳಿಯಲೂ ಬಿಸಿ ತರುವೇ
ಯೌವ್ವನ ತರುತಿರೆ ಬಯಕೆಗಳ ಬರಿ ಮೌನದಿ ಕೆರಳಿಸುವೆ
ಹೊಸದೇನೂ ಬೇಕೆಂದು ನಾ ಕೇಳುವೆ ಕಿವಿಯಲಿ ಏನೆಂದು ನೀ ಹೇಳುವೇ ..
ಪಿಸುಮಾತಿನಲಿ ಸವಿನೋಟದಲಿ ಅನುರಾಗದಲಿ ಅತಿ ಮೋಹದಲಿ
ಹಿತವಾದ ಸ್ವರ್ಗ ಇಲ್ಲೇ ತೋರಿಸುವೆ... ಚೆಲುವನೇ.. ಗೆಳೆಯನೇ..
ಕುಲುಕುತ ಬಳುಕುವ ನಡುವನು ಸವರಲು ಚೆನ್ನ
ಅರಳಿದ ಹವಳದ ತುಟಿಗಳ ಮುದ್ದಿಸೆ ಚೆನ್ನ
ರವಿ ಜಾರಿದಾಗ ಶಶಿ ಮೂಡಿದಾಗ
ಏಕಾಂತದಲ್ಲಿ ಜೊತೆ ಸೇರಿದಾಗ
ದಿನವೆಲ್ಲಾ ನಾವು ಹೀಗೆ ಪ್ರೇಮದಲಿ ನಲಿಯುವ ಅನುದಿನ
ರಪಪಾಪ ರಪಪಾಪ ರಪಪಾಪ ರಪಪಾಪ ಪ
ರಪಪಾಪ ರಪಪಾಪ ರಪಪಾಪ ರಪಪಾಪ ಪ
----------------------------------------------------------------------------------------------------------------
ಅವತಾರ ಪುರುಷ (೧೯೮೯) - ಕಣ್ಣುಗಳ ತೆರೆಯೋ ತೆರೆಯೋ
ಸಂಗೀತ : ವಿಜಯಾನಂದ, ಸಾಹಿತ್ಯ : ಉದಯಶಂಕರ, ಗಾಯನ : ಎಸ್.ಪಿ.ಬಿ,
ಕಣ್ಣುಗಳ ತೆರೆಯೋ ತೆರೆಯೋ
ಈ ವೇದನೆಯ ಅರಿಯೋ ಅರಿಯೋ
ಛಲವೋ ಬಲವೋ ವಿಧಿಯಾ ನಿಲುವೋ
ಜನರ ವಿಷಯ ತಿಳಿಯೋ
ಕಣ್ಣುಗಳ ತೆರೆಯೋ ತೆರೆಯೋ
ಈ ವೇದನೆಯ ಅರಿಯೋ ಅರಿಯೋ
ಆಆಆಆ.. ಆಆಆಅ
ಶಿಲೆಯಾದ ನಿನ್ನೇ ಬರಿ ಬೊಂಬೆ ಎಂದು
ಹಣಕ್ಕಾಗಿ ಕದಿವಂತ ಮನೆಹಾಳರ
ಶಿಲೆಯಾದ ನಿನ್ನೆ ಬರಿ ಬೊಂಬೆ ಎಂದು
ಹಣಕ್ಕಾಗಿ ಕದಿವಂತ ಮನೆಹಾಳರ
ಅನ್ಯಾಯ ಅವಿವೇಕ ನೀ ಕಾಣೆಯ
ನೊಂದೋರ ಮನಸಾರ ಸಂತೈಸೆಯ
ನಿನ್ನ ಸೃಷ್ಟಿಯ ನಿನ್ನ ಲೋಕದ ನಿನ್ನ ಜನರೆಲ್ಲ...
ಜೀವ ಹೀರುವ ಪಾಪಿ ದಾನವರಾಗಿ ನಿಂತಿಹರು.. ಆ ಆ ಆ ಆಅ
ಕಣ್ಣುಗಳ ತೆರೆಯೋ ತೆರೆಯೋ
ಈ ವೇದನೆಯ ಅರಿಯೋ ಅರಿಯೋ
ಆಆಆಆ.. ಆಆಆಅ
ಗುಡಿಯಲ್ಲಿ ಏಕೆ ಕಲ್ಲಾಗಿ ನಿಂತೇ
ದಿನವೆಲ್ಲ ಬರಿ ಮೌನ ಹೇಗೇತಕೆ... ಆಆಆ
ಗುಡಿಯಲ್ಲಿ ಏಕೆ ಕಲ್ಲಾಗಿ ನಿಂತೇ
ದಿನವೆಲ್ಲ ಬರಿ ಮೌನ ಹೇಗೇತಕೆ
ಹೂ ಹಾರ ಹೆಚ್ಚಾಯ್ತು ನೀ ಕಾಣೆಯ
ಬಾಳಲ್ಲಿ ಸುಖ ಶಾಂತಿ ನೀ ಕಾಣೆಯ
ನಿನ್ನೆ ಪೂಜಿಸಿ ನಿನ್ನೆ ನಂಬಿದ ನಿನ್ನ ಭಕ್ತರನು
ನೀನೆ ಬಿಟ್ಟರೇ ಇಂದೇ ನಿನ್ನನು ಮರೆತು ಹೋಗುವೇನು.. ಆಆಆ
ಕಣ್ಣುಗಳ ತೆರೆಯೋ ತೆರೆಯೋ
ಈ ವೇದನೆಯ ಅರಿಯೋ ಅರಿಯೋ
ಛಲವೋ ಬಲವೋ ವಿಧಿಯಾ ನಿಲುವೋ
ಜನರ ವಿಷಯ ತಿಳಿಯೋ ... ಓ...
----------------------------------------------------------------------------------------------------------------
No comments:
Post a Comment