- ಹೊಸ ಹಾಡು ಹಾಡುತ
- ರಾಧಾ ಮೈ ಡಾರ್ಲಿಂಗ್
- ಹಣವುಂಟೇ ಗುಣವುಂಟೇ
- ಯೂ ಪೀಪಲ್
ಮಾವ ಸೊಸೆ ಸವಾಲ್ (೧೯೮೨) - ಹೊಸ ಹಾಡು ಹಾಡುತ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಹೊಸ ಹಾಡು ಹಾಡುತ ಹೊಸ ನೋಟ ನೋಡುತ
ಹೊಸ ಲೋಕ ಕಾಣುವ ನಾವು ಆಸೆಯ ಹೂಗಳು ಅರಳಿರಲು
ಅನುರಾಗದ ಬೆಳಕು ಮೂಡಿರಲು
ಗಂಡು : ಹೊಸ ಹಾಡು ಹಾಡುತ ಹೊಸ ನೋಟ ನೋಡುತ
ಹೊಸ ಲೋಕ ಕಾಣುವ ನಾವು ಆಸೆಯ ಹೂಗಳು ಅರಳಿರಲು
ಅನುರಾಗದ ಬೆಳಕು ಮೂಡಿರಲು
ಹೆಣ್ಣು : ಆ... ಆಆಆ..
ಗಂಡು : ಆ... ಆಆಆ.. ಆ... ಆ ಆ ಆ.. ಆ ಆ ಆ..
ಗಂಡು : ಬಾಳಿನ ಬಾನಿನಲಿ ಪ್ರೇಮದ ರವಿಯು
ಮೂಡುತ ಬಂದನು ಹರುಷವ ತಂದು
ಹೆಣ್ಣು : ಆ... ಆಆಆ.. ಆ... ಆ ಆ ಆ.. ಆ ಆ ಆ..
ಗಂಡು : ಬಾಳಿನ ಬಾನಿನಲಿ ಪ್ರೇಮದ ರವಿಯು
ಮೂಡುತ ಬಂದನು ಹರುಷವ ತಂದು
ಹೆಣ್ಣು : ಸುಂದರ ಕನಸುಗಳು ಕಂಗಳ ಕುಣಿಸಿರಲು
ಕಾಣದ ಬಯಕೆಗಳು ಈ ಹೃದಯವ ತುಂಬಿರಲು
ಗಂಡು : ಕಾಣದೆ ನಿನ್ನ ಕಾಣಲೆಂದು ಓಡಿ ಬಂದೆ ಸೇರಲು
ಹೊಸ ಹಾಡು ಹಾಡುತ ಹೊಸ ನೋಟ ನೋಡುತ
ಹೊಸ ಲೋಕ ಕಾಣುವ ನಾವು ಆಸೆಯ ಹೂಗಳು ಅರಳಿರಲು
ಅನುರಾಗದ ಬೆಳಕು ಮೂಡಿರಲು
ಹೆಣ್ಣು : ಪ್ರೇಮದ ಗೀತೆಯ ಪಲ್ಲವಿಯಾಗಿ
ಸ್ನೇಹದ ಮಾತಿನ ಸವಿ ನುಡಿಯಾಗಿ
ಗಂಡು : ಆ... ಆಆಆ.. ಆ... ಆ ಆ ಆ.. ಆ ಆ ಆ..
ಹೆಣ್ಣು : ಹೆಣ್ಣು : ಪ್ರೇಮದ ಗೀತೆಯ ಪಲ್ಲವಿಯಾಗಿ
ಸ್ನೇಹದ ಮಾತಿನ ಸವಿ ನುಡಿಯಾಗಿ
ಗಂಡು : ಸೇರಲು ಸಲಿಗೆಯಲಿ ಮನ ಹಾಡಿತು ಸಡಗರದಿ
ನಲ್ಲೆಯ ಪ್ರೀತಿಯಲಿ ಸವಿ ಮಾತಿನ ಸರಸದಲಿ
ಹೆಣ್ಣು : ಮಲ್ಲಿಗೆ ಹೂವಿನ ಮಳೆ ಸುರಿದಂತೆ ಕಂಡೆನಲ್ಲ ನಾನಿಂದು
ಗಂಡು : ಹೊಸ ಹಾಡು ಹಾಡುತ ಹೊಸ ನೋಟ ನೋಡುತ
ಹೊಸ ಲೋಕ ಕಾಣುವ ನಾವು
ಇಬ್ಬರು : ಆಸೆಯ ಹೂಗಳು ಅರಳಿರಲು
ಅನುರಾಗದ ಬೆಳಕು ಮೂಡಿರಲು
ಆಸೆಯ ಹೂಗಳು ಅರಳಿರಲು
ಅನುರಾಗದ ಬೆಳಕು ಮೂಡಿರಲು
----------------------------------------------------------------------------------------------
ಮಾವ ಸೊಸೆ ಸವಾಲ್ (೧೯೮೨) - ರಾಧಾ ಮೈ ಡಾರ್ಲಿಂಗ್
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,
ರಾಧಾ ಮೈ ಡಾರ್ಲಿಂಗ್ ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಒಡೆಯಿತಲ್ಲ
ಕೈಗೆ ಬಂದ ತುತ್ತು ಬಾಯಿಗಿಲ್ಲ ಆಸೆಯ ಮುತ್ತುಗಳು ಒಡೆಯಿತಲ್ಲ
ಒಲಿದ ಹೆಂಡಿರೇ ನನ್ನ ದೂರ ಮಾಡಿದ ಮೇಲೆ
ಬದುಕೇಕೆ ದೇವರೇ ಅರಿಯೆನಲ್ಲ... ದೇವರೇ... ಹೇ.. ಹೇ.. ಹೇಹೇಹೇ
ಕೊಂಡು ತಂದ ಮಂಚ ದಂಡವಾದ ಮೇಲೆ
ಈ ಕೊಣೆಯಲ್ಲಿನು ಕೆಲಸವಿಲ್ಲ
ಮದುವೆಯಾದರು ಬ್ರಹ್ಮಚಾರಿಯಾಗಿರುವ
ಸಂಸಾರದ ಸೆರೆಗೆ ಅರ್ಥವಿಲ್ಲ
ಕೈಗೆ ಬಂದ.. ನನ್ ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಒಡೆಯಿತಲ್ಲ
ಕೆಂಪು ಕೆನ್ನೆಯ ತೋರಿ ಮೋಹವ ಬರಸದಿರು
ಕೈ ಮುಗಿವೇ ಮರೆಯಾಗಿ ಹೋಗೆ ಸಾಕು
ಹೇ... ಹೇಹೇಹೇ .. ಹೇಹೇಹೇ ..
ಮೈ ಮುಟ್ಟಿ ಕೈ ಮುಟ್ಟು ಝುಮ್ ಝುಮ್ ಅನಿಸದಿರು
ಬೇಡದ ಮೇಲೇಕೆ ಕೆಣಕಬೇಕು
ಮುದ್ದಾಡದೆ ನಿನ್ನ ದೂರ ಗೊರಕೆ ಹೊಡೆಯೆ
ಸುಮ್ಮನೇಕೆ ಒಳಗೆ ಮಲಗೇಕು
ಕೈಗೆ ಬಂದ.. ನನ್ ಕೈಗೆ ಬಂದ
ನನ್ ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಒಡೆಯಿತಲ್ಲ
ಕೈಗೆ ಬಂದ ತುತ್ತು ಬಾಯಿಗಿಲ್ಲ
ಆಸೆಯ ಮುತ್ತುಗಳು ಒಡೆಯಿತಲ್ಲ
ರಾಧಾ ಮೈ ಡಾರ್ಲಿಂಗ್ ... ಮೈ ಸ್ವೀಟ್ ಹಾರ್ಟ್
ಮೈ ಸ್ವೀಟಿ... ಅಹ್ಹಹ್ಹ.. ಅಹ್ಹಹ್ಹಹ್ಹಹ್ಹಾ .. ಅಹ್ಹಹ್ಹಹ್ಹಹ್ಹಾ ..
----------------------------------------------------------------------------------------------
ಮಾವ ಸೊಸೆ ಸವಾಲ್ (೧೯೮೨) - ಹಣವುಂಟೇ ಗುಣವುಂಟೇ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಹೇ ಹಣವುಂಟೇ.. ಮನವುಂಟೇ ನನ್ನ ಒಲವು ಉಂಟೇ
ಒಂದೇ ಕ್ಷಣ... ಒಂದೇ ಕ್ಷಣ... ನೀ ಬಾರೋ ಜಾಣ
ನೀ ಬಾರೋ ಜಾಣ..
ಹೇ ಹಣವುಂಟೇ.. ಮನವುಂಟೇ ನನ್ನ ಒಲವು ಉಂಟೇ
ಒಂದೇ ಕ್ಷಣ... ಹ್ಹಾ.. ಒಂದೇ ಕ್ಷಣ... ನೀ ಬಾರೋ ಜಾಣ
ನೀ ಬಾರೋ ಜಾಣ..
ಕಣ್ಣಿನಲ್ಲೇ ನನ್ನ ನುಂಗಬೇಡಯ್ಯಾ
ಬಣ್ಣ ನೋಡಿ ಕೈಯ ಚಾಚಬೇಡಯ್ಯ ...
ಕಣ್ಣಿನಲ್ಲೇ ನನ್ನ ನುಂಗಬೇಡಯ್ಯಾ
ಬಣ್ಣ ನೋಡಿ ಕೈಯ ಚಾಚಬೇಡಯ್ಯ ...
ಇಲ್ಲಿ ಕಾಡಬೇಡ ನನ್ನ ಕೂಗಬೇಡ
ಬೇಕು ಎನ್ನಬೇಡ ಏನೂ ಮಾಡಬೇಡ
ಅಲ್ಲಿ ಬೇರೆ ಸ್ಥಾನ ಉಂಟು ಗೊತ್ತೇನು
ಒಂದೇ ಕ್ಷಣ... ಒಂದೇ ಕ್ಷಣ... ನೀ ಬಾರೋ ಜಾಣ
ನೀ ಬಾರೋ ಜಾಣ.. ಹೇ..ಹೇ..ಹೇ..
ಹಣವುಂಟೇ.. ಮನವುಂಟೇ ನನ್ನ ಒಲವು ಉಂಟೇ
ಒಂದೇ ಕ್ಷಣ... ಹ್ಹಾ.. ಒಂದೇ ಕ್ಷಣ... ನೀ ಬಾರೋ ಜಾಣ
ನೀ ಬಾರೋ ಜಾಣ..
ಚಿಂತೆ ಮಾಡೋ ಮೊರೆ ಜನರು ಕಂಡಾರು
ಕಂಡೆ ನಿನ್ನ ಮಂಕ ಎಂದು ನಕ್ಕಾರು
ಚಿಂತೆ ಮಾಡೋ ಮೊರೆ ಜನರು ಕಂಡಾರು
ಕಂಡೆ ನಿನ್ನ ಮಂಕ ಎಂದು ನಕ್ಕಾರು
ರನ್ನ ಬೇಕೇ ಹೇಳು ಚಿನ್ನ ಬೇಕೇ ಹೇಳು
ಜಾಲಿಯಾಗಿ ಕಾಲ ನೂಕುವಂತೆ ಏಳು
ನಾನೇ ನಿನ್ನವಳಾದ ಮೇಲೆ ಇನ್ನೇನು
ಒಂದೇ ಕ್ಷಣ... ಒಂದೇ ಕ್ಷಣ... ನೀ ಬಾರೋ ಜಾಣ
ನೀ ಬಾರೋ ಜಾಣ.. ಹೇ..ಹೇ..ಹೇ..
ಹಣವುಂಟೇ.. ಮನವುಂಟೇ ನನ್ನ ಒಲವು ಉಂಟೇ
ಒಂದೇ ಕ್ಷಣ... ಹ್ಹಾ.. ಒಂದೇ ಕ್ಷಣ... ನೀ ಬಾರೋ ಜಾಣ
ನೀ ಬಾರೋ ಜಾಣ.. ಹೇ...ಹೇ..
----------------------------------------------------------------------------------------------
ಮಾವ ಸೊಸೆ ಸವಾಲ್ (೧೯೮೨) - ಯೂ ಪೀಪಲ್
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಹ್ಯಾಪಿ ಬರ್ತಡೇ ಟೂ ಯು... ಹ್ಯಾಪಿ ಬರ್ತಡೇ ಟೂ ಯು...
ಲಾ.. ಲಾಲಾಲಾ... ಲಾ.. ಲಾಲಾಲಾ... ಲಾ.. ಲಾಲಾಲಾ...
ಯೂ ಪೀಪಲ್.. ಮೈ ಡಿಯರ್ ಯಂಗ್ ಪೀಪಲ್
ಬೇಕೇನು ಹೇಳಬೇಕೇನು ನನ್ನ ಮಾವನವನರ ಕೀರ್ತಿಯನ್ನು
ಬಲ್ಲಿರೇನು ಇವರ ಮಹಿಮೆಯನ್ನು
ಯೂ ಪೀಪಲ್.. ಮೈ ಡಿಯರ್ ಯಂಗ್ ಪೀಪಲ್
ಬೇಕೇನು ಹೇಳಬೇಕೇನು ನನ್ನ ಮಾವನವನರ ಕೀರ್ತಿಯನ್ನು
ಬಲ್ಲಿರೇನು ಇವರ ಮಹಿಮೆಯನ್ನು
ಗೌರವ ಘನತೆಗಳು ಕಾವಲು ಕಾಯುತಿವೆ
ಇವರ ಮನೆ ಹಿಂಬಾಗಿಲಲ್ಲಿ .. ಇವರ ಮನೆ ಹಿಂಬಾಗಿಲಲ್ಲಿ
ಹಣವಂತ ಬಲು ಗುಣವಂತ.. ಹ್ಹಾ...
ಹಣವಂತ ಬಲು ಗುಣವಂತ..
ಇವರ ಸರಿಸಾಟಿ ಯಾರ ಕಾಣೇನೂ
ಯೂ ಪೀಪಲ್.. ಮೈ ಡಿಯರ್ ಯಂಗ್ ಪೀಪಲ್
ಬೇಕೇನು ಹೇಳಬೇಕೇನು ನನ್ನ ಮಾವನವನರ ಕೀರ್ತಿಯನ್ನು
ಬಲ್ಲಿರೇನು ಇವರ ಮಹಿಮೆಯನ್ನು
ಎದುರಿಸಿ ನಿಲ್ಲುವರ ಉಳಿಸುವುದೇ ಇಲ್ಲ
ಅಂಥ ಶಕ್ತಿ ಉಂಟು ಇವರಲ್ಲಿ
ಅಂಥ ಶಕ್ತಿ ಉಂಟು ಇವರಲ್ಲಿ
ಕೊಲೆಯನು ಮಾಡಿದರೂ ತಪ್ಪಿಸಿಕೊಳ್ಳುವರು
ನೀರಿನಂತೆ ಹಣವನ್ನು ಚೆಲ್ಲಿ....
ನೀರಿನಂತೆ ಹಣವನ್ನು ಚೆಲ್ಲಿ....
ಅನ್ಯಾಯ ಇವರುಸಿರಂತೆ ಅಹ್ಹಹ್ಹಹ್ಹಾ...
ಅನ್ಯಾಯ ಇವರುಸಿರಂತೆ
ನಾನು ಇವರಂತೇ ಯಾರ ಕಾಣೆನು
ಯೂ ಪೀಪಲ್.. ಮೈ ಡಿಯರ್ ಯಂಗ್ ಪೀಪಲ್
ಬೇಕೇನು ಹೇಳಬೇಕೇನು ನನ್ನ ಮಾವನವನರ ಕೀರ್ತಿಯನ್ನು
ಬಲ್ಲಿರೇನು ಇವರ ಮಹಿಮೆಯನ್ನು
---------------------------------------------------------------------------------------------
No comments:
Post a Comment