- ಸಖಿಯೇ ಸಖಿಯೇ ನನಗೆ ದೊರೆತ ಒಲವ ನಿಧಿಯೇ
ಅರ್ಜುನ (೨೦೧೫) - ಸಖಿಯೇ ಸಖಿಯೇ ನನಗೆ ದೊರೆತ ಒಲವ ನಿಧಿಯೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಕಾರ್ತೀಕ
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
ಖುಷಿಯೇ ಖುಷಿಯೇ, ನನ್ನ ಎದೆಗೆ ಇಳಿದ ಖುಷಿಯೇ, ನೀ ಯಾರೇ,
ನೀ ನನಗೆ, ನಾ ನಿನಗೆ, ಈ ಜಗವು ನಮಗೇಕೆ,
ನಿನ್ನ ನಗೆ, ಸಾಕೆನಗೆ, ಬೇರೆ ಸುಖ ನಮಗೇಕೆ,
ಯಾರೇ ನೀ ಯಾರೇ ಸಖಿ,
ಯಾರೇ ನೀ ಯಾರೇ ಸಖಿ,
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
ಅಲ್ಲೇ ನಂಗೀಗ ನೀ ಬರೀ ಸಂಗಾತಿ, ತಾಯಿಯು ನೀ ನನಗೆ,
ಮುದ್ದು ಮುದ್ದಾದ ತಂಟೆಗಳಲ್ಲಿ, ನೀ ಎಳೆಯ ಹೋಗುವೆ,
ಚೆಲುವೆಯೇ ನಂಗೆ ನೀ ವಿಸ್ಮಯ,
ನನ್ನದೇ ದೃಷ್ಟಿ ತಾಕೋ ಭಯ,
ಪರಿ ಪರಿ ನನ್ನ ಈ ಪ್ರೀತಿಯ,
ಕೆಣಕುವೆ ಯಾವ ನ್ಯಾಯ,
ಯಾರೇ ನೀ ಯಾರೇ ಸಖಿ,
ಯಾರೇ ನೀ ಯಾರೇ ಸಖಿ,
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
ಒಂದು ಗಳಿಗೇನು ನಿಲ್ಲದು ಈ ನಿನ್ನ ಸುಂದರ ಹೂಮುನಿಸು,
ನಿನ್ನ ಹಾಗೇನೇ ಆಡಲು ತುಂಟಾಟ ನೀ ನನಗೂ ಕಲಿಸು,
ಬದಲಿಸಿ ನನ್ನ ಈ ಲೋಕವ,
ನಡೆಸುವೆ ನೀನು ನಿತ್ಯೋತ್ಸವ,
ಕನಸಿಗೂ ಚಂದ ಈ ವಾತ್ಸವ,
ಕುಣಿದಿದೆ ನನ್ನ ಜೀವ,
ಯಾರೇ ನೀ ಯಾರೇ ಸಖಿ,
ಯಾರೇ ನೀ ಯಾರೇ ಸಖಿ,
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,
No comments:
Post a Comment