1763. ಮುತ್ತೈದೆ ಭಾಗ್ಯ (೧೯೮೩)


ಮುತ್ತೈದೆ ಭಾಗ್ಯ ಚಲನಚಿತ್ರದ ಹಾಡುಗಳು 
  1. ಸಂಸಾರ ಸಾಗರ 
  2. ನಿನ್ನಿಂದ ಆನಂದ 
  3. ಸುರಿವ ಕಣ್ಣಿರಿಗೇ 
  4. ಗಂಡನು ಗೆಲ್ಲುವ 
ಮುತ್ತೈದೆ ಭಾಗ್ಯ (೧೯೮೩) - ಸಂಸಾರ ಸಾಗರ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ರವಿ, ಗಾಯನ : ವಾಣಿಜಯರಾಮ 

ಸಂಸಾರ ಸಾಗರ ಆನಂದ ಸಾಗರ 
ಸಂಸಾರ ಸಾಗರ ಆನಂದ ಸಾಗರ 
ಮಮತೆಯ ಅಲೆಯಲಿ ಪ್ರೇಮದ ನಾವೆ  
ಮಮತೆಯ ಅಲೆಯಲಿ ಪ್ರೇಮದ ನಾವೆ ತೇಲುವ ಸುಖ ಸಾಗರ  
ಸಂಸಾರ ಸಾಗರ ಆನಂದ ಸಾಗರ 
ಸಂಸಾರ ಸಾಗರ ಆನಂದ ಸಾಗರ 

ಒಲವಿನ ವಾರಿಧೀ ಪತಿಯೇ ಶ್ರೀ ನಿಧಿ 
ಚೆಲುವಿನ ನಲಿವಿನ ಸುಖದ ಸನ್ನಿಧಿ 
ಒಲವಿನ ವಾರಿಧೀ ಪತಿಯೇ ಶ್ರೀ ನಿಧಿ 
ಚೆಲುವಿನ ನಲಿವಿನ ಸುಖದ ಸನ್ನಿಧಿ 
ಏಳೇಳು ಜನುಮದ ಪ್ರೀತಿಯ ಹಾದಿ 
ಹರಿಯುವ ಹರಿಸುವ ಪುಣ್ಯದ ಈ ನದಿ... ಪುಣ್ಯದ ಈ ನದಿ 
ಸಂಸಾರ ಸಾಗರ ಆನಂದ ಸಾಗರ 
ಸಂಸಾರ ಸಾಗರ ಆನಂದ ಸಾಗರ 

ಮನದಲಿ ಕಾಣುವ ಆಸೆಯೇ ಏಣಿಸೆ 
ಮನೆಯಲಿ ನಲಿಯುವ ಮಕ್ಕಳೇ ಕಾಣಿಕೆ 
ಮನದಲಿ ಕಾಣುವ ಆಸೆಯೇ ಏಣಿಸೆ 
ಮನೆಯಲಿ ನಲಿಯುವ ಮಕ್ಕಳೇ ಕಾಣಿಕೆ 
ಎಂದಿಗೂ ಸವೆಯದ ಮಮತೆಯ ಬಯಕೆ 
ಕಾಣದ ನೋಡದ ದೇವನ ಹರಕೆ... ದೇವನ ಹರಕೆ 
ಸಂಸಾರ ಸಾಗರ ಆನಂದ ಸಾಗರ 
ಸಂಸಾರ ಸಾಗರ ಆನಂದ ಸಾಗರ 

ತಾಯಿಯ ಒಡಲಿನ ಒಂದೊಂದು ಚೂರು 
ನಾಡಿನ ಕಡಲಲಿ ನಾವೆಯು ದೂರು  
ತಾಯಿಯ ಒಡಲಿನ ಒಂದೊಂದು ಚೂರು 
ನಾಡಿನ ಕಡಲಲಿ ನಾವೆಯು ದೂರು  
ಅನ್ನದ ಮಕ್ಕಳು ಚಿನ್ನದ ಮಕ್ಕಳು 
ಬಾಳಲಿ ಅರಸುವೇ ನೂರು...   ಅರಸುವೇ ನೂರು...   
ಸಂಸಾರ ಸಾಗರ ಆನಂದ ಸಾಗರ 
ಸಂಸಾರ ಸಾಗರ ಆನಂದ ಸಾಗರ 
ಮಮತೆಯ ಅಲೆಯಲಿ ಪ್ರೇಮದ ನಾವೆ  
ಮಮತೆಯ ಅಲೆಯಲಿ ಪ್ರೇಮದ ನಾವೆ ತೇಲುವ ಸುಖ ಸಾಗರ  
ಸಂಸಾರ ಸಾಗರ ಆನಂದ ಸಾಗರ 
ಸಂಸಾರ ಸಾಗರ ಆನಂದ ಸಾಗರ 
------------------------------------------------------------------------------

ಮುತ್ತೈದೆ ಭಾಗ್ಯ (೧೯೮೩) - ನಿನ್ನಿಂದ ಆನಂದ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರವಿ, ಎಸ್.ಪಿ.ಬಿ., ಪಿ.ಬಿ.ಎಸ್ 

ನಿನ್ನಿಂದ ಆನಂದ ಈ ಮನೆಗೆ 
ಸುಖ ಶಾಂತಿಯ ತಂದೆ ನೀ ನಮಗೆ 
ನಿನ್ನಿಂದ ಆನಂದ ಈ ಮನೆಗೆ 
ಸುಖ ಶಾಂತಿಯ ತಂದೆ ನೀ ನಮಗೆ 
ನಿನ್ನಿಂದ ಆನಂದ ಈ ಮನೆಗೆ 
ಸುಖ ಶಾಂತಿಯ ತಂದೆ ನೀ ನಮಗೆ 

ಬಾಡದಿರುವ ತಾವರೆ ಹಾಗೆ ಆರದಿರುವ ಜ್ಯೋತಿಯ ಹಾಗೆ 
ಬಾಡದಿರುವ ತಾವರೆ ಹಾಗೆ ಆರದಿರುವ ಜ್ಯೋತಿಯ ಹಾಗೆ 
ಸಡಗರದಿಂದ ಸಂಭ್ರಮದಿಂದ 
ಸಡಗರದಿಂದ ಸಂಭ್ರಮದಿಂದ ಬಾಳು ಎಂದೆಂದೂ ಸಂತೋಷದಿಂದ 
ನಿನ್ನಿಂದ ಆನಂದ ಈ ಮನೆಗೆ 
ಸುಖ ಶಾಂತಿಯ ತಂದೆ ನೀ ನಮಗೆ 

ತಾಯಿಯ ಮನಕೆ ಹಿತವನು ತರಲು ತಂದೆಯ ಮನಕೆ ಹರುಷವ ತರಲು 
ಆ.. ತಾಯಿಯ ಮನಕೆ ಹಿತವನು ತರಲು ತಂದೆಯ ಮನಕೆ ಹರುಷವ ತರಲು 
ದೇವರ ವರವೋ ಪುಣ್ಯದ ಫಲವೋ 
ದೇವರ ವರವೋ ಪುಣ್ಯದ ಫಲವೋ ಮಡಿಲ ಹೂವಾಗಿ ನೀ ಬಂದೆ ಕಂದ 
ನಿನ್ನಿಂದ ಆನಂದ ಈ ಮನೆಗೆ 
ಸುಖ ಶಾಂತಿಯ ತಂದೆ ನೀ ನಮಗೆ 

ನೂರು ವರುಷ ಬದುಕಿರಬೇಕು ಎಂದು ಹೀಗೆ ನಗುತಿರಬೇಕು 
ನೂರು ವರುಷ ಬದುಕಿರಬೇಕು ಎಂದು ಹೀಗೆ ನಗುತಿರಬೇಕು 
ಆ ಧೃವತಾರೆ ನಾಚುವ ಹಾಗೆ 
ಹ್ಹಾ.. ಆ ಧೃವತಾರೆ ನಾಚುವ ಹಾಗೆ ಬಾಳ ಬಾನಲ್ಲೇ ನೀನಿರಬೇಕು 
ನಿನ್ನಿಂದ ಆನಂದ ಈ ಮನೆಗೆ 
ಸುಖ ಶಾಂತಿಯ ತಂದೆ ನೀ ನಮಗೆ 
ನಿನ್ನಿಂದ ಆನಂದ ಈ ಮನೆಗೆ 
ಸುಖ ಶಾಂತಿಯ ತಂದೆ ನೀ ನಮಗೆ 
------------------------------------------------------------------------------

ಮುತ್ತೈದೆ ಭಾಗ್ಯ (೧೯೮೩) - ಸುರಿವ ಕಣ್ಣಿರಿಗೇ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರವಿ

ಸುರಿವ ಕಣ್ಣಿರಿಗೇ ಬೆಲೆಯೂ ಇನ್ನೆಲ್ಲಿದೇ 
ಸುರಿವ ಕಣ್ಣಿರಿಗೇ ಬೆಲೆಯೂ ಇನ್ನೆಲ್ಲಿದೇ 
ನಗುವು ಇನ್ನಲ್ಲಿ ಗೆಲವು ಇನ್ನೇಲ್ಲಿ ಬದುಕೇ ಇರುಳಾಗಿದೆ ... 
ಬದುಕೇ ಇರುಳಾಗಿದೆ ... 
ಸುರಿವ ಕಣ್ಣಿರಿಗೇ ಬೆಲೆಯೂ ಇನ್ನೆಲ್ಲಿದೇ 

ಬಯಸಿದ ನೂರು ಬಯಕೆಗಳೆಲ್ಲ ಕನಸಿನ ಹಾದಿ ಹಿಡಿದಿದೇಯಲ್ಲಾ 
ಸೌಖ್ಯವೆಲ್ಲಿ ಕಾಣುವೇ ನೀ.. 
ಸೌಖ್ಯವೆಲ್ಲಿ ಕಾಣುವೇ ನೀ ಕೊರಗುವುದೇ ಮರುಗುವುದೇ ಇನ್ನೂ ಬಾಳೆಲ್ಲ.. 
ಸುರಿವ ಕಣ್ಣಿರಿಗೇ ಬೆಲೆಯೂ ಇನ್ನೆಲ್ಲಿದೇ 

ಬದುಕಿನ ತುಂಬಾ ಕಹಿ ಇರುವಾಗ ಹೃದಯದ ತುಂಬಾ ನೋವಿರುವಾಗ 
ಇನ್ನೂ ಎಲ್ಲಿ ನೆಮ್ಮದಿಯು... 
ಇನ್ನೂ ಎಲ್ಲಿ ನೆಮ್ಮದಿಯು ವಿಧಿ ಬರೆವ ಬರಹದಲಿ ಶಾಂತಿ ಸಾವಲ್ಲೀ ... 
ಸುರಿವ ಕಣ್ಣಿರಿಗೇ ಬೆಲೆಯೂ ಇನ್ನೆಲ್ಲಿದೇ 

ಮಡಿಲಿನ ಕೆಂಡ ಸುಡುತಿದೆ ಎಂದು ಒಡಲಿನ ಮೋಹ ಮರೆಯುತ ನೊಂದು 
ಜೀವ ದೇಹದ ತೊರೆದಾಯ್ತು....   
ಜೀವ ದೇಹದ ತೊರೆದಾಯ್ತು ಕಂಬನಿಯು ಇನ್ನೇಕೆ ಕಥೆಯು ಮುಗಿದಾಯ್ತು 
ಸುರಿವ ಕಣ್ಣಿರಿಗೇ ಬೆಲೆಯೂ ಇನ್ನೆಲ್ಲಿದೇ 
ನಗುವು ಇನ್ನಲ್ಲಿ ಗೆಲವು ಇನ್ನೇಲ್ಲಿ ಬದುಕೇ ಇರುಳಾಗಿದೆ ... 
ಬದುಕೇ ಇರುಳಾಗಿದೆ ... 
------------------------------------------------------------------------------

ಮುತ್ತೈದೆ ಭಾಗ್ಯ (೧೯೮೩) - ಗಂಡನು ಗೆಲ್ಲುವ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಮ, ಕೋರಸ್  

ಜೋ ಜೋ ಜೋ ಜೋ ಜೋ ಜೋ ಜೋ ಜೋ 
ಜೋ ಜೋ ಜೋ ಜೋ ಜೋ ಜೋ ಜೋ ಜೋ 
ಸರಿಗಮ ಪಮಪಮಗರಿಸನಿ ಸಗಮಗ ನಿಸದ ... 
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೇ ..  
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೇ .. 
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೇ ..  
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೇ .. 

ಮೇನಕೆ ಸೊಬಗಿಗೆ ಕೌಶಿಕ ಶರಣಾದ ಸೀತೆಯ ಮೋಹಕೆ ಅಳಿದ ರಾವಣ.. 
ರಿಬಬಾ... ರಿಬಬಾ... ರಿಬಬಾ... ರಿಬಬಾ... 
ಮೇನಕೆ ಸೊಬಗಿಗೆ ಕೌಶಿಕ ಶರಣಾದ ಸೀತೆಯ ಮೋಹಕೆ ಅಳಿದ ರಾವಣ.. 
ದ್ರೌಪದಿ ಚೆಲುವಿಗೆ ಕೌರವ ಬೆರಗಾದ 
ದ್ರೌಪದಿ ಚೆಲುವಿಗೆ ಕೌರವ ಬೆರಗಾದ ಪದ್ಮಿನಿ ಚಿತ್ತೂರ ಯುದ್ಧಕೆ ಕಾರಣ... 
ಪದ್ಮಿನಿ ಚಿತ್ತೂರ ಯುದ್ಧಕೆ ಕಾರಣ... 
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೇ ..  
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೇ .. 

ಹೇಹೇಹೇ .. ಆಹಾ.. ಓಹೋ ... ಹೂಂ ಹೂಂ ಅಹ್ಹಹ್ಹಹ್ಹಹಾ 
ಸಾವಿರ ಹಡಗಿನ ಸಾಗರ ಸಮರ ಎಳೆನಳ ರೂಪದ ಫಲವಂತೆ 
ಹೇಹೇಹೇ .. ಹೇಹೇ ಹೇ .. ಹೇ ಹೇ ಹೇ .. 
ಸಾವಿರ ಹಡಗಿನ ಸಾಗರ ಸಮರ ಎಳೆನಳ ರೂಪದ ಫಲವಂತೆ 
ಶಿಲೆಯಲಿ ಕಲೆಯ ಕಲ್ಪನೆ ಸ್ಫೂರ್ತಿ 
ಶಿಲೆಯಲಿ ಕಲೆಯ ಕಲ್ಪನೆ ಸ್ಫೂರ್ತಿ ಶಾಂತಲೆ ಅಂದದ ಮೆರುಗಂತೆ...  
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೇ ..  
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೇ .. 
ಗಂಡನು ಗೆಲ್ಲುವ ಸೌಂದರ್ಯ ಕಣ್ಣಿಗೇ ..  
ರಾಜ್ಯವ ಉರುಳಿಸೋ ಚಾತುರ್ಯ ಹೆಣ್ಣಿಗೇ .. 
-----------------------------------------------------------------------------

No comments:

Post a Comment