- ಸಾರಾಯಿ ಶೀಶೆಯಲಿ ನನ್ನ ದೇವಿ ಕಾಣುವಳು
- ಲಂಬೋಧರ ಲಕುಮಿಕರ
- ಹುಟ್ಟಿದ ಮಕ್ಕಳು ಭೂಮಿಗೆ
- ಸಂಜೆ ಗಾಳಿ ಬೀಸುವಾಗ
- ಮಲಗು ಮಗಳೇ ಎಲ್ಲರಂತೆ
- ಈ ಹಾಡು ಯಾರಿಗೋ
ಮಾಂಗಲ್ಯ ಸಾಕ್ಷಿ (೧೯೯೫) - ಸಾರಾಯಿ ಶೀಶೆಯಲಿ ನನ್ನ ದೇವಿ ಕಾಣುವಳು
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ.
ಸಾರಾಯಿ ಶೀಶೆಯಲಿ ನನ್ನ ದೇವಿ ಕಾಣುವಳು
ಸುಮ ಬಾಣವೇ ಅವಳಾಗುತ ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳು
ಸಾರಾಯಿ ಶೀಶೆಯಲಿ ನನ್ನ ದೇವಿ ಕಾಣುವಳು
ಸುಮ ಬಾಣವೇ ಅವಳಾಗುತ ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳು ಆಹಾಹ...
ಸೂಜಿ ಮಲ್ಲೆ ಹೂವಾ ನಾ ಹೃದಯಾ ತುಂಬಿಕೊಂಡೇ ಹೂವ ಈಗ ಹಾವಾಯಿತೇ...
ಪ್ರೀತಿಯಿಂದ ಕುಕ್ಕಿ ನೋಯಿಸಿದೇ ಏಕೇ ಹೇಳು ನೀ...
ಪ್ರತಿದಿನ ಕುಡಿವೇ ನೀನ ನೆನಪಲಿ ಹಾಡಿ ಕುಣಿವೆ ನಲಿವೆ ಅಳುವೇ ...
ನಾನೇನು ದೇವದಾಸನಲ್ಲ ನನ್ನಂಥ ಪ್ರೇಮಿ ಯಾರೂ ಇಲ್ಲ...
ಸಾರಾಯಿ ಶೀಶೆಯಲಿ ನನ್ನ ದೇವಿ ಕಾಣುವಳು
ಸುಮ ಬಾಣವೇ ಅವಳಾಗುತ ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳು
ಹುಟ್ಟು ಸಾವು ಮಧ್ಯ ನಾ ಕಟ್ಟಿಕೊಂಡ ನಂಟು ನೀರ ಮೇಲೆ ಗುಳ್ಳೆಯಂತೇ ...
ಪ್ರೀತಿ ಪ್ರೇಮ ಸುಳ್ಳು ಎಲ್ಲಾ ಇಲ್ಲಿ ಪೊಳ್ಳು ಮೂಡನೇ...
ಬದುಕಿನ ತುಂಬಾ ಹೊಲಸೂ ಅದು ನೆನೆಯದೇ ಹೋದರೇ ಸೊಗಸೂ... ಮನಸೂ.. ಹೂಂಹೂಂ
ಇದೇನು ಪ್ರೇಮಲೋಕವಲ್ಲ... ನನ್ನಂಥ ಪ್ರೇಮಿ ಯಾರೂ ಇಲ್ಲ...
ಸಾರಾಯಿ ಶೀಶೆಯಲಿ ನನ್ನ ದೇವಿ ಕಾಣುವಳು
ಸುಮ ಬಾಣವೇ ಅವಳಾಗುತ ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳು
-----------------------------------------------------------------------------------------
ಮಾಂಗಲ್ಯ ಸಾಕ್ಷಿ (೧೯೯೫) - ಲಂಬೋಧರ ಲಕುಮಿಕರ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಸಂಗೀತ ಕಟ್ಟಿ
ಶ್ರೀ ಗಣನಾಥ ಸಿಂಧೂರ ವರ್ಣ ಕರುಣಾಸಾಗರ ಕರಿವದನ
ಶ್ರೀ ಗಣನಾಥ ಸಿಂಧೂರ ವರ್ಣ ಕರುಣಾಸಾಗರ ಕರಿವದನ
ಲಂಬೋಧರ ಲಕುಮಿಕರ ಅಂಬಾಸುತ ಅಮರ ವಿನುತ
ಲಂಬೋಧರ ಲಕುಮಿಕರ ಅಂಬಾಸುತ ಅಮರ ವಿನುತ
ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮತೇ ನಮೋ ನಮೋ
ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮತೇ ನಮೋ ನಮೋ
ಲಂಬೋಧರ ಲಕುಮಿಕರ ಅಂಬಾಸುತ ಅಮರ ವಿನುತ
-----------------------------------------------------------------------------------------
ಮಾಂಗಲ್ಯ ಸಾಕ್ಷಿ (೧೯೯೫) - ಹುಟ್ಟಿದ ಮಕ್ಕಳು ಭೂಮಿಗೆ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಚಿತ್ರಾ
ಲಾಲಾಲಲಾಲಾಲ ಲಾಲಾಲಲಾಲಾಲ
ಸಮ ದನಿದ ನಿದಮ ದಮರಿಸ
ಹುಟ್ಟಿದ ಮಕ್ಕಳು ಭೂಮಿಗೇ ಬಿದ್ದೋಡೇ ಅಮ್ಮಾ ಅಮ್ಮಾ ಎನ್ನುವರೂ
ಹುಟ್ಟಿದ ಮಕ್ಕಳು ಭೂಮಿಗೇ ಬಿದ್ದೋಡೇ ಅಮ್ಮಾ ಅಮ್ಮಾ ಎನ್ನುವರೂ
ತಾಯಿಗಿಂತ ಮಿಗಿಲಾದ ದೇವರೂ...
ತಾಯಿಗಿಂತ ಮಿಗಿಲಾದ ದೇವರು ಬೇರೋಂದಿಲ್ಲೇನ್ನುವರೂ... ಅಮ್ಮಾ... ಅಮ್ಮಾ.. ಅಮ್ಮಾ
ಭೂಮಿಗೇ ಬೆಳಕನು ಬೀರುವ ಸೂರ್ಯನ ಹೆತ್ತತಾಯಿ ಹೆಣ್ಣೂ...
ತಿಳಿ ಬೆಳದಿಂಗಳ ಸೂಸುವ ಚಂದ್ರನ ಹೊತ್ತ ತಾಯೀ ಹೆಣ್ಣೂ
ಬುದ್ಧ ಬಸವ ಪೈಗಂಬರ ಯೇಸುಗೆ ಜನ್ಮದಾತೆ ಹೆಣ್ಣೂ
ವ್ಯಾಸ ಭಾಸ ವಾಲ್ಮೀಕಿ ಕವಿಗಳ ಹೆತ್ತವಳೇ ಹೆಣ್ಣು ಅವಳೇ ಈ ಹೆಣ್ಣೂ...ಅಮ್ಮಾ... ಅಮ್ಮಾ.. ಅಮ್ಮಾ
ಹುಟ್ಟಿದ ಮಕ್ಕಳು ಭೂಮಿಗೇ ಬಿದ್ದೋಡೇ ಅಮ್ಮಾ ಅಮ್ಮಾ ಎನ್ನುವರೂ
ತಂದೆ ತಾಯ್ಗಳ ಎರಡು ಆತ್ಮಕೆ ಅರಳಿದ ಹೂವೂ ಹೆಣ್ಣೂ
ಮನೆಯನು ಮನವನು ತುಂಬಿದ ಭಾಗ್ಯದ ಬೆಳಕಾಗಿದೆ ಹೆಣ್ಣೂ
ಹುಟ್ಟಿದ ಮನೆಗೂ ಕೊಟ್ಟಿದ ಮನೆಗೂ ನಂದಾದೀಪ ಹೆಣ್ಣೂ
ಎಲ್ಲೀ ಸ್ತ್ರೀಯರು ಪೂಜಿಸುತಿರುವರೋ ಅಲ್ಲಿ ದೇವನಿಹನೋ
ಅವಳೇ ಈ ಹೆಣ್ಣೂ ಅಮ್ಮಾ... ಅಮ್ಮಾ... ಅಮ್ಮಾ..
ಹುಟ್ಟಿದ ಮಕ್ಕಳು ಭೂಮಿಗೇ ಬಿದ್ದೋಡೇ ಅಮ್ಮಾ ಅಮ್ಮಾ ಎನ್ನುವರೂ
ತಾಯಿಗಿಂತ ಮಿಗಿಲಾದ ದೇವರೂ...
ತಾಯಿಗಿಂತ ಮಿಗಿಲಾದ ದೇವರು ಬೇರೋಂದಿಲ್ಲೇನ್ನುವರೂ... ಅಮ್ಮಾ... ಅಮ್ಮಾ.. ಅಮ್ಮಾ
ಸಮ ದನಿದ ನಿದಮ ದಮರಿಸ
ಸಮ ದನಿದ ನಿದಮ ದಮರಿಸ
ಸಮ ದನಿದ ನಿದಮ ದಮರಿಸ
-----------------------------------------------------------------------------------------
ಮಾಂಗಲ್ಯ ಸಾಕ್ಷಿ (೧೯೯೫) - ಸಂಜೆ ಗಾಳಿ ಬೀಸುವಾಗ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ, ಚಂದ್ರಿಕಾ ಗುರುರಾಜ
ಸಂಜೆ ಗಾಳಿ ಬೀಸುವಾಗ ಪ್ರೇಮ ರಾಗ ಮೂಡಿದೆ ತನನಾನಾ
ಕಣ್ಣರೆಪ್ಪೆ ಕೂಡೋವಾಗ ಮೌನಗೀತೆ ಹಾಡಿದೆ ತಾನಾನನ
ನನಸಾಗಿದೆ ಕನಸೆಲ್ಲವೂ ನಿಜವಾಗಿದೆ ನೆನಪೆಲ್ಲವೂ
ತುಟಿ ಮೇಲೆ ಬರದ ಮಾತುಗಳೇನಿವೆಯೋ
ಹೊಸ ಆಸೆ ಹೇಳಲು ಕಾತರ ತುಂಬಿದೆಯೋ
ಸಂಜೆ ಗಾಳಿ ಬೀಸುವಾಗ ಪ್ರೇಮ ರಾಗ ಮೂಡಿದೆ ತನನಾನಾ
ಕಣ್ಣರೆಪ್ಪೆ ಕೂಡೋವಾಗ ಮೌನಗೀತೆ ಹಾಡಿದೆ ತಾನಾನನ
ಮುಂಜಾನೆ ಮಂಜಿನ ಹನಿಯು ಈ ತುಟಿಗೆ ಚುಂಬನ
ತುಟಿ ಮೇಲೆ ಪ್ರಾಯದ ಹಸಿವು ಎದೆಯೊಳಗೆ ಕಂಪನ
ಬಿಸಿಯುಸಿರಲ್ಲೂ ದಾಹವಿದೆ ನಸುನಗೆಯಲ್ಲೂ ಮೋಹವಿದೆ
ಇವನೋ ಬಿಸಿ ತರುಣ ಇವಳೋ ಹಸಿ ತರುಣಿ
ಈ ಜಗವೇ ಈಗ ಇವರ ಕಾಲಡಿಗೇ
ಸಂಜೆ ಗಾಳಿ ಬೀಸುವಾಗ ಪ್ರೇಮ ರಾಗ ಮೂಡಿದೆ ತನನಾನಾ
ಕಣ್ಣರೆಪ್ಪೆ ಕೂಡೋವಾಗ ಮೌನಗೀತೆ ಹಾಡಿದೆ ತಾನಾನನ
ರಂಗಾದ ಬಾನಿಗೆ ರವಿಯ ಚಿತ್ತಾರ ಮೂಡಿದೆ
ಈ ಪ್ರೇಮಿಯ ನೆರಳಿನ ಮಳೆಬಿಲ್ಲ ಹಾಸಿದೆ
ಅರಿಯಲು ಏನು ಈ ನಿಮಿಷ ಇವರಿರುವಲ್ಲಿ ಭುವಿ ಹರುಷ
ಎದೆಯ ಹೃದಯದೊಳಗೇ ಅವಿತ ಮರುಘಳಿಗೆ
ಈ ಜಗವೇ ಈಗ ಇವರ ಕಾಲಡಿಗೇ
ಸಂಜೆ ಗಾಳಿ ಬೀಸುವಾಗ ಪ್ರೇಮ ರಾಗ ಮೂಡಿದೆ ತನನಾನಾ
ಕಣ್ಣರೆಪ್ಪೆ ಕೂಡೋವಾಗ ಮೌನಗೀತೆ ಹಾಡಿದೆ ತಾನಾನನ
ತುಟಿ ಮೇಲೆ ಬರದ ಮಾತುಗಳೇನಿವೆಯೋ
ಹೊಸ ಆಸೆ ಹೇಳಲು ಕಾತರ ತುಂಬಿದೆಯೋ
-----------------------------------------------------------------------------------------
ಮಾಂಗಲ್ಯ ಸಾಕ್ಷಿ (೧೯೯೫) - ಮಲಗು ಮಗಳೇ ಎಲ್ಲರಂತೆ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಚಂದ್ರಿಕಾ ಗುರುರಾಜ
ಮಲಗು ಮಗಳೇ ಎಳೆದಂತೆ ಮುಚ್ಚಿದ ಕಣ್ಣ ತೆರೆಯದಂತೆ
ಮಲಗು ಮಗಳೇ ಎಳೆದಂತೆ ಮುಚ್ಚಿದ ಕಣ್ಣ ತೆರೆಯದಂತೆ
ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ
ಯಾವನ ರೂಪವೋ ಮುಗಿವನ ಪ್ರೀತಿ ಗಂಡನ ಕೋಪಕೆ ಮರಣದ ಭೀತಿ
ಜೀತದ ಆಳು ಈ ಹೆಣ್ಣಿನ ಬಾಳು ಉಸಿರಿರುವ ತನಕ ಬಾರಿಯ ಗೋಳು
ನನ್ನೀ ಜೀವನ ಕೊನೆಯಾಗಲೆಂದೇ ನನ್ನಯ ಉದರದಂತೆ ನೀನೇಕೆ ಬಂದೆ
ಮಲಗು ಮಗಳೇ ಎಳೆದಂತೆ ಮುಚ್ಚಿದ ಕಣ್ಣ ತೆರೆಯದಂತೆ
ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ
ಬಾಲ್ಯ ಯೌವ್ವನ ಮುಪ್ಪಿನ ಹೆಣ್ಣಿಗೆ ಬೆಲೆ ಏನಿಹುದು ಲೋಕದ ಕಣ್ಣಿಗೇ
ಸಂಶಯಗೊಂಡರೆ ಗಂಡನೇ ಚೆಂಡ ಹೊಸತಿಲ ಹೊರಗೆ ಸುಳಿದರೆ ದಂಡ
ನಾಯಿಯ ಬಾಳುವೆ ಮನೆತೊರೆದಾಗ ಒಣಗಿದ ಮರವು ನೀ ಮನ ಒಡೆವಾಗ
ಮಲಗು ಮಗಳೇ ಎಳೆದಂತೆ ಮುಚ್ಚಿದ ಕಣ್ಣ ತೆರೆಯದಂತೆ
ಮಲಗು ಮಗಳೇ ಎಳೆದಂತೆ ಮುಚ್ಚಿದ ಕಣ್ಣ ತೆರೆಯದಂತೆ
ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ
-----------------------------------------------------------------------------------------
ಮಾಂಗಲ್ಯ ಸಾಕ್ಷಿ (೧೯೯೫) - ಈ ಹಾಡು ಯಾರಿಗೋ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಮಹಾದೇವ ಬಣಕಾರ, ಗಾಯನ : ಸಂಗೀತ ಕಟ್ಟಿ
ಈ ಹಾಡು ಯಾರಿಗೋ ಪ್ರಿಯ.. ಓಓಓಓಓ ಈ ಬಾಳು ಏತಕೋ ದಯಾ
ಸಭ್ಯತೆಯ ಸಂಸ್ಕ್ರತಿಯ ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ ನೀ ಒಡಲ ಇರಿದಿರುವೆ
ತಿರುಕರು ಮೈಮುಚ್ಚಲು ಅರಿವೆಗೆ ಅಲೆದಲೆದರು
ಧನಿಕರು ಮೈಮೇಲಿನ ಈ ಅರಿವೆಯ ಭಾರ ಅಂದರು
ತಿರುಕ ಧನಿಕರ ಲೋಕ ಇದು ಮೂಕ ತಿಳಿಯಹೋದರೆ ಶೋಕ
ಸಭ್ಯತೆಯ ಸಂಸ್ಕ್ರತಿಯ ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ ನೀ ಒಡಲ ಇರಿದಿರುವೆ
ಈ ಹಾಡು ಯಾರಿಗೋ ಪ್ರಿಯ.. ಓಓಓಓಓ ಈ ಬಾಳು ಏತಕೋ ದಯಾ
ಯೋಧರು ಎದೆಗೊಂದದೇ ಸಿಡಿದರು ಸ್ವಾತಂತ್ರಕೇ
ಮೂಢರು ಮದವೇರುತ ಇಲ್ಲಿ ಕುಡಿದರು ತಾ ಸ್ವಾರ್ಥಕೆ
ಮದದ ಅಮಲಿನ ಮೇಲೆ ಜಗವ ಮರೆತ ವೇಳೆ
ಬದುಕಿನ ಈ ಕ್ಷಣ ಕ್ಷಣ ನೀ ನಶಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ ನೀ ಒಡಲ ಇರಿದಿರುವೇ
ಈ ಹಾಡು ಯಾರಿಗೋ ಪ್ರಿಯ.. ಓಓಓಓಓ ಈ ಬಾಳು ಏತಕೋ ದಯಾ
ಸಭ್ಯತೆಯ ಸಂಸ್ಕ್ರತಿಯ ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ ನೀ ಒಡಲ ಇರಿದಿರುವೆ
----------------------------------------------------------------------------------------
No comments:
Post a Comment