- ಒಂದಾ ಎರಡಾ ಓದಿದ ಹುಡುಗರ ಪಾಡು
- ಓಹ್ ಬಂಗಾರಪುರದ
- ಇದ್ಯಾಕಿಂಗ್ ಆಡ್ತಿಯಪ್ಪೋ
- ಸೀರೆ ಒಗೆದರೇ ಕೋಟಿ ಪುಣ್ಯದ ಫಲ
- ಹೆಂಡ್ತೀಗೇ
ರೂಪಾಯಿ ರಾಜ (೧೯೯೩) - ಒಂದಾ ಎರಡಾ ಓದಿದ ಹುಡುಗರ ಪಾಡು
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ: ಎಸ್.ಪಿ.ಬಿ
ಒಂದ್.. ಎರಡ್.. ಓದಿದ ಹುಡುಗರ ಪಾಡು
ಕೆಲಸ ಕೊಡದು ನಾನು ಜನಿಸಿದ ನಾಡು
ಒಂದ್.. ಎರಡ್.. ಓದಿದ ಹುಡುಗರ ಪಾಡು
ಕೆಲಸ ಕೊಡದು ನಾನು ಜನಿಸಿದ ನಾಡು
ಲಾಭಿಗಳೂ .. ಲಂಚಗಳೂ ... ಜಾಬುಗಳನು ಹಿಡಿವಾಗ
ಸರಿ ಹೋಗದು ಸಾಲದ ನಾಡು ಹೀಗಾದರೇ ನಾಚಿಕೆ ಕೇಡು
ಒಂದ್.. ಎರಡ್.. ಓದಿದ ಹುಡುಗರ ಪಾಡು
ಕೆಲಸ ಕೊಡದು ನಾನು ಜನಿಸಿದ ನಾಡು
ಬಿ.ಏ... ಎಂಎ... ಹಾಲೇ ಕೊಡದ ಹಸುವೂ
ಬೀಯೀ ಏಮಯೀ ಓದಿದರೂ ಬಿಡದು ಈ ಹಸಿವೂ
ಮಡಿಕಲ್ ಡಿಫಿಕಲ್ ಆದರೂ ಚಿನ್ನದ ಕೋಳಿ
ಲಕ್ಷ ಕೊಡದ ಬಡವನಿಗೆ ದೊರಕುವುದೇ ಹೇಳಿ
ಹಣವೆಲ್ಲ ಹರಿಯೋದು ಹಣದ ಕೊಪ್ಪರಿಗೆಗೇ
ಕೂಳಿಗೆ ಸಾಲದೇ ಏಳಿಗೆ ಕಾಣದೇ ...
ಒಂದ್.. ಎರಡ್.. ಓದಿದ ಹುಡುಗರ ಪಾಡು
ಕೆಲಸ ಕೊಡದು ನಾನು ಜನಿಸಿದ ನಾಡು
ಲಾಭ ಬೇಕೂ ಕ್ಷೇಮ ಮಾತ್ರ ಬೇಡ... ಹ್ಹ
ಕಲ್ಲು ಮಣ್ಣು ತಿನಿಸೋದೇ ಇಲ್ಲಿನ ವ್ಯಾಪಾರ...
ಕೋಟಿ ಸಾಲ ಪಡೆಯೋ ಮೋಸದ ಜಾಲ
ನುಂಗಿ ಅಂಗಡಿ ಮುಚ್ಚುವುದೇ ಇಂದಿನ ವ್ಯವಹಾರ
ಚಿಂತಕರೇ.. ಹಂತಕರ ಉಳಿಸೋ ವಿದುಳ ರಾಗ
ರಕ್ಷಕರೇ ಭಕ್ಷಕರ ನಡೆಸೋ ಕಾಲದಾಗ
ಭರವಸೇ ಇರುವುದೇ ಶುಭದಿನ ಬರುವುದೇ
ಒಂದ್.. ಎರಡ್.. ಓದಿದ ಹುಡುಗರ ಪಾಡು
ಕೆಲಸ ಕೊಡದು ನಾನು ಜನಿಸಿದ ನಾಡು
ಜಾತಿಗಳು ಭಾಷೆಗಳೂ ಬೆಸೆಯಲು ಬಿಡದಿರುವಾಗ
ಸರಿಹೋಗದು ಸಾಲದ ನಾಡು ಹೀಗಾದರೇ ನಾಚಿಕೆ ಕೇಡೂ
ಒಂದ್.. ಎರಡ್.. ಓದಿದ ಹುಡುಗರ ಪಾಡು
ಕುಂಟ ಕುರುಡ ಓದದೇ ಬದುಕಿದೆ ನೋಡು
------------------------------------------------------------------------------
ರೂಪಾಯಿ ರಾಜ (೧೯೯೩) - ಓಹ್ ಬಂಗಾರಪುರದ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ: ಎಸ್.ಪಿ.ಬಿ, ಚಿತ್ರಾ
------------------------------------------------------------------------------
ರೂಪಾಯಿ ರಾಜ (೧೯೯೩) - ಇದ್ಯಾಕಿಂಗ್ ಆಡ್ತಿಯಪ್ಪೋ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ: ಎಸ್.ಪಿ.ಬಿ, ಚಿತ್ರಾ
------------------------------------------------------------------------------
ರೂಪಾಯಿ ರಾಜ (೧೯೯೩) - ಸೀರೆ ಒಗೆದರೇ ಕೋಟಿ ಪುಣ್ಯದ ಫಲ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ: ಎಸ್.ಪಿ.ಬಿ
ಸೀರೆ ಒಗೆದರೇ ಕೋಟಿ ಪುಣ್ಯದ ಫಲ
ಸೌಟು ಹಿಡಿದರೇ ಭೀಮಾನೆಯ ಬಲ
ಸೀರೆ ಒಗೆದರೇ ಕೋಟಿ ಪುಣ್ಯದ ಫಲ
ಸೌಟು ಹಿಡಿದರೇ ಭೀಮನಾನೆಯ ಬಲ
ಸತಿ ಸೇವೆ ಮಾಡೋ ಪತಿ ತುಂಬಾ ಭಾಗ್ಯವಂತ
ಸತಿ ಮನೆ ಕಾಯೋ ಪತಿಗೆ ಏನೂ ಇಲ್ಲ ಸ್ವಂತ...
ಸೀರೆ ಒಗೆದರೇ ಕೋಟಿ ಪುಣ್ಯದ ಫಲ
ಸೌಟು ಹಿಡಿದರೇ ಭೀಮನಾನೆಯ ಬಲ
ಅಡುಗೆ ಮಾಡೋದು ಗಡಿಗೆ ತೊಳೆಯೋದು
ಆಳು ಕಲೆಗಿಂತ ಸುಲಭವೋ ... ಹಾಡೂ
ಮನೆಯ ಗುಡಿಸೋದು ಪೂಜೆ ನಡೆಸೋದು
ಅಲೆಯು ನನಗಂತೂ ಸರಳವೋ... ಅಹಹಹಹಾ
ನೀರ ಕಾಸಬಹುದೂ ಬಚ್ಚಲ ಬಳಿಯಬಹುದೂ
ಬೇಡ ಅಯ್ಯೋ ತೆರಿಗೆ ವನವಾಸ
ಹೆಣ್ತಿ ಕೂಗಬಹುದೂ ಅಂಥ ಕಾಯಬಹುದೂ
ಬೇಡ ಹೊರಗೆ ಬರಿ ಉಪವಾಸ..
ಸೀರೆ ಒಗೆದರೇ ಕೋಟಿ ಪುಣ್ಯದ ಫಲ
ಸೌಟು ಹಿಡಿದರೇ ಭೀಮನಾನೆಯ ಬಲ
ಸಾಲ ಮಾಡೋದೂ ಕೊಡದೇ ಓಡೋದು
ತರಲೇ ತಂಟೆಯೇ ತಪ್ಪಿತೋ...ಓಓಓಓಓ
ತಂದರೆ ಮಾಡೋದೂ ಬೈದರೇ ದೂರೋದೂ
ನನಗೆ ಕೆಲಸವೇ ಒಪ್ಪಿತೋ
ದಾಸಿಯಾಗಿ ಹೆಣ್ಣೂ ಸಾವಿರಾರು ವರುಷ
ಹಡೆದು ದುಡಿದು ಮಡಿದವಳೋ
ಗಂಡು ಹೆಣ್ಣು ಸುಟ್ಟೂ ಮಾರುಕಟ್ಟೆ ಕೆಟ್ಟೂ
ಸತಿಯೇ ... ಪತಿಯ ತುಳಿದಿಹಳೋ ... ಅಹ್ಹಹಾಹಾ
ಸೀರೆ ಒಗೆದರೇ ಕೋಟಿ ಪುಣ್ಯದ ಫಲ
ಸೌಟು ಹಿಡಿದರೇ ಭೀಮನಾನೆಯ ಬಲ
ಸತಿ ಸೇವೆ ಮಾಡೋ ಪತಿ ತುಂಬಾ ಭಾಗ್ಯವಂತ
ಸತಿ ಮನೆ ಕಾಯೋ ಪತಿಗೆ ಏನೂ ಇಲ್ಲ ಸ್ವಂತ...
ಸೀರೆ ಒಗೆದರೇ ಕೋಟಿ ಪುಣ್ಯದ ಫಲ
ಸೌಟು ಹಿಡಿದರೇ ಭೀಮನಾನೆಯ ಬಲ
------------------------------------------------------------------------------
ರೂಪಾಯಿ ರಾಜ (೧೯೯೩) - ಹೆಂಡ್ತೀಗೇ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ: ಎಸ್.ಪಿ.ಬಿ
------------------------------------------------------------------------------
No comments:
Post a Comment