1771. ಪ್ರಾಣ ಸ್ನೇಹಿತ (೧೯೯೩)

ಪ್ರಾಣ ಸ್ನೇಹಿತ ಚಲನಚಿತ್ರದ ಹಾಡುಗಳು 
  1. ಏನ್ ಗುರೂ ಬೇಡ ಗುರೂ 
  2. ಹೋಟೆಲ್ ಮೇ ಖಾನ್ ಛತ್ತರಮೇ ಸೋನಾ 
  3. ಹೆಣ್ಣೊಂದ ಕಂಡೇ ನಾ ಮೋಹಗೊಂಡೇ 
  4. ಪ್ರೇಮವೂ ನಿಲ್ಲದ ಅಲೇ 
  5. ಓಹ್ ಕೇಳೋ ನನ್ನ ಧೀರ 
ಪ್ರಾಣ ಸ್ನೇಹಿತ (೧೯೯೩) - ಏನ್ ಗುರೂ ಬೇಡ ಗುರೂ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ, ವಿಷ್ಣು 

ಏನ್ ಗುರೂ ಬೇಡ ಗುರೂ 
ಏನ್ ಗುರೂ ಬೇಡ ಗುರೂ 
ಬಾಟಲ್ ತುಂಬ ಏನದು ಶರಾಬು ಆಣೆ ಮಾಡಿ ಹೇಳು ಗುರು ಜವಾಬು  
ಹೇಹೇಹೇ... ಚಿಂತೆಯ ಮಾಡಿ ನೋಯುವೇ ಕುಡಿದು ಕುಡಿದು ಸಾಯುವೇ ... 
ಚಿಂತೆಯ ಮಾಡಿ ನೋಯುವೇ ಕುಡಿದು ಕುಡಿದು ಸಾಯುವೇ ... 
ಸೇಂದಿ ಸರಾಯಿ ಬೇಡ ಎಂದು ಗಾಂಧಿ ಹೇಳಿದ ಮಾತಿದು 
ಬಾಟಲ್ ಮಹಿಮೆ ನಿಂಗೇನೇ ಗೊತ್ತು ಹೇಳ್ತಿನಿ ಕೇಳೋ ಭೇಕೂಪ 
ಬಾಟಲ್ ಮಹಿಮೆ ನಿಂಗೇನೇ ಗೊತ್ತು ಹೇಳ್ತಿನಿ ಕೇಳೋ ಭೇಕೂಪ 
ಶೇಂದಿ ಬ್ರ್ಯಾಂಡಿ ಸ್ವರ್ಗದ ಸ್ವತ್ತು ಆ ನಮ್ಮ ದೇವರ ಸ್ವರೂಪ 
ಶೇಂದಿ ಬ್ರ್ಯಾಂಡಿ ಸ್ವರ್ಗದ ಸ್ವತ್ತು ಆ ನಮ್ಮ ದೇವರ ಸ್ವರೂಪ 
ಸಂತೆ ಮಾರೋ ಸರಕಲ್ಲ ಇದು ಚಿಂತೆ ಮರೆಸೋ ಅಮೃತ 
ಹೇ... ಹೋಗು 

ದೇವನ್ನು ಸುಡುವ ಮದ್ಯಪಾನ ಬೇಡ ಗೆಳೆಯ 
ಬೇಜಾರ ಪಡದೆ ಕೇಳು ಗುರುವೇ ನನ್ನ ನುಡಿಯ 
ಬುದ್ದಿ ಮಾತು ಕೇಳೋರಿಲ್ಲ ಶುದ್ಧವಾಗಿ ನಡೆಯೋರಲ್ಲ 
ನೀತಿ ಶಾಸ್ತ್ರ ಓದದಕ್ಕೆ ಬದನೇಕಾಯಿ ತಿನ್ನೋಕೇ 
ಸುಮ್ಮನೆ ವಾದಿಸಿ ಸಾಯುವೇ ಏಕೆ ಸಂಗಾತಿ 
ಅರೆ ಹುಟ್ಟಿದ ಮೇಲೆ ಸಾಯಲೇಬೇಕು ಭೂಮಿಲಿ ಯಾವುದು ಶಾಸ್ವತ 
ಪ್ಲೀಸ್... ಶಟ್ ಅಪ್ 

ಒಂದಾಗಿ ಇರುವ ನಾವು ಬೇರೆ ಆಗಬೇಕೇ 
ಈ ನಮ್ಮ ಸ್ನೇಹ ಬೂದಿಯಾಗಿ ಹೋಗಬೇಕೇ 
ಸ್ನೇಹಕ್ಕೆ ಹೊಡಿಯೋ ಗೋಲಿ ರಾಮಾಯಣ ಬೇಡ ಇಲ್ಲಿ 
ಕುಡಿಯೋನು ಹೇಳೋ ಮಾತೆ ನಿಜವಾದ ಭಗವದ್ಗೀತೆ 
ಏನೂ ಗುರೂ ... ಏನೂ ಗುರೂ ... ಮನಸೂ ಏಕೆ ಕಲ್ಲಾಯ್ತು 
ಎರಡು ಮನಸ್ಸು ಒಡೆದ ಹೋಯ್ದ ಮೇಲೆ ಯಾರಿಗೇ ಯಾರು ಸ್ನೇಹಿತ 
ಹ್ಹಾ.....   ಹೋಗೋ.... ಶಟ್ ಅಪ್  
----------------------------------------------------------------------------------------------

ಪ್ರಾಣ ಸ್ನೇಹಿತ (೧೯೯೩) - ಹೋಟೆಲ್ ಮೇ ಖಾನ್ ಛತ್ತರಮೇ ಸೋನಾ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ, ವಿಷ್ಣು 

ಹೋಟೆಲ್ ಮೇ ಖಾನಾ ಛತ್ತರ್ ಮೇ ಸೋನಾ 
ಇದುವೇ ಜೀವನಾ ಇದೇನೇ ನಮ್ಮಾ ಜೀವನ... 
ಹೋಟೆಲ್ ಮೇ ಖಾನಾ ಛತ್ತರ್ ಮೇ ಸೋನಾ 
ಇದುವೇ ಜೀವನಾ ಇದೇನೇ ನಮ್ಮಾ ಜೀವನ... 

ನಮ್ಮ ದೇಶದಲ್ಲಿ ಎಲ್ಲಾ ಮೋಸವೂ ಹೊಟ್ಟೆ ಪಾಡಿಗಾಗಿ ನಾನಾ ವೇಷವೂ 
ಲಂಚ ಕೋರ ಅಧಿಕಾರಿಗಳು ಚಂಚಾಗಿರಿ ಮಾಡುವ ಜನರು 
ಆ.. ಪುಡಾರಿ ಪೋಲಿಗಳೆಲ್ಲ ದೊಡ್ಡ ಪದವಿಗೇರುವುದಿಲ್ಲ 
ಹೇ... ಗ್ರ್ಯಾಜುಟು ಆದೋರೆಲ್ಲ ಇಡಿಯೆಟ್ ಆದರಲ್ಲ 
ಕೇಳು ಅಲ್ಲಿ ರೊಕ್ಕ ಇಲ್ಲ ಜಾಬು ಎಲ್ಲೂ ಸಿಕ್ಕೋದಿಲ್ಲ.. ತರಪರಿಪ.. 
ಹೋಟೆಲ್ ಮೇ ಖಾನಾ ಛತ್ತರ್ ಮೇ ಸೋನಾ 
ಇದುವೇ ಜೀವನಾ ಇದೇನೇ ನಮ್ಮಾ ಜೀವನ... 

ಎಂದೂ ಮುರಿಯದಿರೂ ನಮ್ಮ ಸ್ನೇಹವು ಒಂದೇ ಜೀವವಾದ ಎರಡು ದೇಹವು 
ಬದುಕ್ಕೊಂದು ಜಟಕಾಬಂಡಿ ವಿಧಿಯೇ ಅದರ ಚಾಲಕನಂತೆ 
ನಾವೆಲ್ಲಾ ಕುದುರೆಗಳಾಗಿ ಓದುತ್ತಿರುವ ಪಯಣಿಗರಂತೆ 
ಹೇ... ಅದೃಷ್ಟ ಹೊಡೆಯೋದು ಆದರಿಷ್ಟ ಬಂದಾಗ 
ಅಲ್ಲಿವರೆಗೂ ನಾನು ನೀನು ಹಾಕಬೇಕು ತಿಪ್ಪರಲಾಗ.. 
ತರಪರಿಪ ರಿಬ ... ಡಿಂಗ್ ಡಾಂಗ್    
ಹೋಟೆಲ್ ಮೇ ಖಾನಾ ಛತ್ತರ್ ಮೇ ಸೋನಾ 
ಇದುವೇ ಜೀವನಾ ಇದೇನೇ ನಮ್ಮಾ ಜೀವನ... 
ಹೋಟೆಲ್ ಮೇ ಖಾನಾ ಛತ್ತರ್ ಮೇ ಸೋನಾ 
ಇದುವೇ ಜೀವನಾ ಇದೇನೇ ನಮ್ಮಾ ಜೀವನ... 
----------------------------------------------------------------------------------------------

ಪ್ರಾಣ ಸ್ನೇಹಿತ (೧೯೯೩) - ಹೆಣ್ಣೊಂದ ಕಂಡೇ ನಾ ಮೋಹಗೊಂಡೇ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ, ವಿಷ್ಣು 

ಹೆಣ್ಣೊಂದ ಕಂಡೇ ನಾ ಮೋಹಗೊಂಡೆ ಕಂಡೋಡನೆ ಮೈಮರೆತು ಹೋದೆ 
ಮುದ್ದಾದ ಹುಡುಗಿ ಬಳುಕಾಡಿ ಬರಲು 
ಮುದ್ದಾದ ಹುಡುಗಿ ಬಳುಕಾಡಿ ಬರಲು ಮೈತುಂಬ ಬಿಸಿ ಏರಿತೇಕೆ 
ನಾ ಕಂಡ ಹೆಣ್ಣಾ ನೀ ಕಾಣಲಾರೆ ಕಂಡಾಗ ನಾ ಸೋತು ಹೋದೆ 
ನೆನಪಾದ ವೇಳೆ ಸಿಹಿಯಾದ ಕನಸು 
ನೆನಪಾದ ವೇಳೆ ಸಿಹಿಯಾದ ಕನಸು ಆ ಸುಖವ ನಾ ಹೇಳಲಾರೇ ..... 

ನಕ್ಕು ನಲಿದು ನೀನು ಹತ್ತಿರಕ್ಕೆ ಬಂದು ಸೋಕಿದಾಗ ನನ್ನ ಝುಮ್ಮೆನಿಸೀ ಜೀವಾ 
ನಕ್ಕು ನಲಿದು ನೀನು ಹತ್ತಿರಕ್ಕೆ ಬಂದು ಸೋಕಿದಾಗ ನನ್ನ ಝುಮ್ಮೆನಿಸೀ ಜೀವಾ 
ಕೊಟ್ಟಾಯ್ತು ಮನಸೂ ಬಾ ನನ್ನ ವರಿಸು 
ಕೊಟ್ಟಾಯ್ತು ಮನಸೂ ಬಾ ನನ್ನ ವರಿಸು ತವಗಡುವ ಎದೆ ಬಡಿತ ಜೋರು 
ಹೆಣ್ಣೊಂದ ಕಂಡೇ ನಾ ಮೋಹಗೊಂಡೆ ಕಂಡೋಡನೆ ಮೈಮರೆತು ಹೋದೆ 
ಮುದ್ದಾದ ಹುಡುಗಿ ಬಳುಕಾಡಿ ಬರಲು 
ಮುದ್ದಾದ ಹುಡುಗಿ ಬಳುಕಾಡಿ ಬರಲು ಮೈತುಂಬ ಬಿಸಿ ಏರಿತೇಕೆ 

ಮೆತ್ತಗಿರುವ ನಿನ್ನ ಮುಟ್ಟಲೇನು ಚಿನ್ನ ಅಪ್ಪಿಕೊಳ್ಳಲೇನು ಮೆಲ್ಲನೆ ನಾನು.. ಆ..  
ಮೆತ್ತಗಿರುವ ನಿನ್ನ ಮುಟ್ಟಲೇನು ಚಿನ್ನ ಅಪ್ಪಿಕೊಳ್ಳಲೇನು ಮೆಲ್ಲನೆ ನಾನು 
ಮೆಚ್ಛಾದೇ ನೀನೂ ಹುಚ್ಚಾದೇ ನಾನು 
ಮೆಚ್ಛಾದೇ ನೀನೂ ಹುಚ್ಚಾದೇ ನಾನು ನಿನ್ನಾಸೆ ನಾ ತಾಳಲಾರೇ .. 
ನಾ ಕಂಡ ಹೆಣ್ಣಾ ನೀ ಕಾಣಲಾರೆ ಕಂಡಾಗ ನಾ ಸೋತು ಹೋದೆ 
ನೆನಪಾದ ವೇಳೆ ಸಿಹಿಯಾದ ಕನಸು 
ನೆನಪಾದ ವೇಳೆ ಸಿಹಿಯಾದ ಕನಸು ಆ ಸುಖವ ನಾ ಹೇಳಲಾರೇ ..... 
ಹೆಣ್ಣೊಂದ ಕಂಡೇ ನಾ ಮೋಹಗೊಂಡೆ ಕಂಡೋಡನೆ ಮೈಮರೆತು ಹೋದೆ 
ಮುದ್ದಾದ ಹುಡುಗಿ ಬಳುಕಾಡಿ ಬರಲು 
ಮುದ್ದಾದ ಹುಡುಗಿ ಬಳುಕಾಡಿ ಬರಲು ಮೈತುಂಬ ಬಿಸಿ ಏರಿತೇಕೆ 
----------------------------------------------------------------------------------------------

ಪ್ರಾಣ ಸ್ನೇಹಿತ (೧೯೯೩) - ಪ್ರೇಮವೂ ನಿಲ್ಲದ ಅಲೇ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರೀ , ಗಾಯನ : ಮಂಜುಳಾ 

----------------------------------------------------------------------------------------------

ಪ್ರಾಣ ಸ್ನೇಹಿತ (೧೯೯೩) - ಓಹ್ ಕೇಳೋ ನನ್ನ ಧೀರ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಭಂಗಿರಂಗ, ಗಾಯನ : ಮಂಜುಳಾ ಗುರುರಾಜ, ಬಿ.ಆರ್.ಛಾಯಾ 

----------------------------------------------------------------------------------------------

No comments:

Post a Comment