1772. ನ್ಯಾಯಕ್ಕಾಗಿ ನಾನು (೧೯೮೯)


ನ್ಯಾಯಕ್ಕಾಗಿ ನಾನು ಚಲನಚಿತ್ರದ ಹಾಡುಗಳು 
  1. ನನ್ನ ಹೆಸರು 
  2. ತಾಳಿ ಕಟ್ಟಿಲ್ಲ 
  3. ಧೀರರ ಧೀರ 
  4. ಕಳ್ಳ ನಲ್ಲ 
ನ್ಯಾಯಕ್ಕಾಗಿ ನಾನು (೧೯೮೯) - ನನ್ನ ಹೆಸರು 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಮ, ಮಂಜುಳಾಗುರುರಾಜ 

ನನ್ನ ಹೆಸರು ಮಿಂಚುಳ್ಳಿ ನನ್ನ ಊರು ಹುಬ್ಬಳ್ಳಿ 
ನಲುಗಾಡೋ ಹೂಬಳ್ಳಿ ನೋಡೋಕೆ ನಾ ಮಳ್ಳಿ ಬಾ ಬಾರೋ ಯಾಂದಳ್ಳಿ  
ನನ್ನ ಹೆಸರು ಮಿಂಚುಳ್ಳಿ ನನ್ನ ಊರು ಹುಬ್ಬಳ್ಳಿ 

ಶೋಕಿ ಮಾಡೋ ಹುಡುಗ ಉಂಟು 
ಹುಡುಗಿ ಕೈಯಲೀ ಖಡ್ಗ ಉಂಟೂ ಖಡ್ಗ ತಾಕಿದಾಗ ಕಣಕಣ 
ಮುಟ್ಟಿ ನೋಡೋ ದಪ್ಪ ಉಂಟು ಘಟ್ಟಿಯಾದ ಮಾಲೆಯುಂಟು 
ತಟ್ಟಿ ನೋಡಿದಾಗ ಝಣಝಣ 
ಬಾಳೋಕೆ ನೂರು ದಾರಿ ನಮ್ಮದು ಅಡ್ಡದಾರಿ ಏನ್ ಮಾಡಲಿ ಸಾರೀ ಸಾರೀ 

ರಾಮಯ್ಯ ವಸ್ತಾವಯ್ಯ ರಾಮಯ್ಯ ವಸ್ತಾವಯ್ಯ 
ಹೆಣ್ಣು ನೋಡಿ ಇಲ್ಲಿ ಬಾರಯ್ಯ ಕಣ್ಣು ಕಣ್ಣು ಬಿಟ್ಟು ನೋಡಯ್ಯ 
ರಾಮಯ್ಯ ವಸ್ತಾವಯ್ಯ ರಾಮಯ್ಯ ವಸ್ತಾವಯ್ಯ 

ನಮ್ಮ ಗುರು ನಿಂತಿರೋ ಪೋಸನು ನೋಡು 
ಅಮಿತಾಬ ಮಾಡುವ ಫೈಟನು ನೋಡು 
ರಜನಿಕಾಂತನ ಸ್ಟೈಲನು ನೋಡು 
ಚಿರಂಜೀವಿ ಮಾಡೋ ಬ್ರೇಕ್ ಡಾನ್ಸ್ ನೋಡು 
ಅನುರಾಧ ಜಯಮಾಲಿನಿ ಡಿಸ್ಕೊಶಾಂತಿ ಇಲ್ಲೇ ನೋಡು ನೀ 
ಈ ಆಟ ಆನಂದ ರಾಮಯ್ಯ ಗೋವಿಂದ 

ಧಮ್ ಮಾರೋ ಧಮ್ ಒಂದು ಪೆಗ್ ರಮ್ ತಲೆ ಸುತ್ತಿ ಗುಮ್ 
ಹರೇ ಕೃಷ್ಣ ಹರೇ ರಾಮ  ಹರೇ ಕೃಷ್ಣ ಹರೇ ರಾಮ  
ಬೇಕಣ್ಣ ಮರೆಯೋಕೆ ಚಿಂತೆ ಶೋಕಿಗೆ ಇಲ್ಲೊಂದು ಸಂತೆ 
ಬೇಕಣ್ಣ ಮರೆಯೋಕೆ ಚಿಂತೆ ಶೋಕಿಗೆ ಇಲ್ಲೊಂದು ಸಂತೆ 
ಮತ್ತು ಏರುತಿದೆ ಹೊತ್ತು ಮೀರುತಿದೆ ಎತ್ತು ನೋಟು ಕಂತಯ್ಯ.. 
ಧಮ್ ಮಾರೋ ಧಮ್ ಮುಗುದಹೋಯ್ತಯ್ಯಾ ಕಾಮ್ 

ಬೋಲೋ ಶಿವಶಂಕರ ಜೈ ಜೈ ಶಿವಶಂಕರ  
ಬೋಲೋ ಶಿವಶಂಕರ ಜೈ ಜೈ ಶಿವಶಂಕರ  
ಏನು ನಿನ್ನ ಮಾಯಾವಿದೋ 
ಖಾವಿ ಹಾಕಿದಾಗ ಕಾಸಿನ ಸವಿದಾಗ 
ಏನು ಮಂತ್ರ ಮೋಡಿಯಿದೋ ಹೇಳು ಶಿವ 
ಶಿವನನ್ನು ಮೆಚ್ಚಿಸುವ ಬೂಟಾಟಿಕೆ  ಶಿವಲೋಕ ಸಿಕ್ಕದಯ್ಯ ಡಂಬಾಟಿಕೆ 
ಪಿಟಿಪಿಟಿ ಮಂತ್ರ ಬಗೆ ಬಗೆ ತಂತ್ರ ಬಾಳೋಕೆ 
ತರತರ ವೇಷ ಹೊಟ್ಟೆಯ ಪಾಡು ಮಾಡೋಕೆ 
ಶಂಭೋ.. ಓಓಓಓಓಓಓ ಎಲ್ಲಾ ನಿನ್ನ ಆಟ ನೋಡು 
ಶಂಕರ ಶಂಕರ ಶಂಭೋ ಶಂಭೋ  
ಬೋಲೋ ಶಿವಶಂಕರ ಜೈ ಜೈ ಶಿವಶಂಕರ  
ಬೋಲೋ ಶಿವಶಂಕರ ಜೈ ಜೈ ಶಿವಶಂಕರ  
ಏನು ನಿನ್ನ ಮಾಯಾವಿದೋ 
ಖಾವಿ ಹಾಕಿದಾಗ ಕಾಸಿನ ಸವಿದಾಗ 
ಏನು ಮಂತ್ರ ಮೋಡಿಯಿದೋ ಹೇಳು ಶಿವ 
------------------------------------------------------------------------------------------------------------- 

ನ್ಯಾಯಕ್ಕಾಗಿ ನಾನು (೧೯೮೯) - ತಾಳಿ ಕಟ್ಟಿಲ್ಲ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಮ, ಎಸ್.ಪಿ.ಬಿ 

ತಾಳಿ ಕಟ್ಟಿಲ್ಲ ಮೈಯ್ಯಿ ಮುಟ್ಟಿಲ್ಲ 
ರಸ ತುಂಬಿದ ಈ ಹಣ್ಣು ಹೊಸದಾಗಿದೆ 
ನೋಡಿನ್ನು ನಿಂಗಾಗಿ ಕಾದಿರೋ ಹೆಣ್ಣು 
ಹೇ.. ತಾಳಿ ಕಟ್ಟಿಲ್ಲ ಮೈಯ್ಯಿ ಮುಟ್ಟಿಲ್ಲ 
ರಸ ತುಂಬಿದ ನಿನ್ನನ್ನು ರುಚಿನೋಡದೇ 
ಬಿಡೆ ನಾನು ನಿಂಗಾಗಿ ಕಾದಿರೋ ಗಂಡು 

ಬಾಳೆದಂಟಿನಂತ ಸೊಂಟ ಎಂಥ ಆಟ ಆಡಿದೆ 
ನೋಡು ತುಂಟ ನೀನೇ ನಂಟ ಮಾಡು ತಂಟೆ ಎಂದಿದೆ 
ಬಾಳೆದಂಟಿನಂತ ಸೊಂಟ ಎಂಥ ಆಟ ಆಡಿದೆ 
ನೋಡು ತುಂಟ ನೀನೇ ನಂಟ ಮಾಡು ತಂಟೆ ಎಂದಿದೆ 
ಮೇಣದ ಮೈಯ್ಯಿದು ಕರಗಿಸೋ ಬೆಂಕಿಯು ನೀನು ಆಗಯ್ಯಾ 
ಕಾಣದ ಅನುಭವ ಸುಖವನು ನೀಡುವ ರಸಿಕನೂ ನೀನಯ್ಯಾ 
ತಾಳಿ ಕಟ್ಟಿಲ್ಲ ಮೈಯ್ಯಿ ಮುಟ್ಟಿಲ್ಲ 
ರಸ ತುಂಬಿದ ಈ ಹಣ್ಣು ಹೊಸದಾಗಿದೆ 
ನೋಡಿನ್ನು ನಿಂಗಾಗಿ ಕಾದಿರೋ ಹೆಣ್ಣು 

ನನ್ನ ಒಡಲು ಕೂರಲು ಬಿಡದು ನಿನ್ನ ಮನವ ಕೆಣಕದೆ 
ಆಸೆ ಕಡಲ ಉಕ್ಕೋ ಅಲೆಯು ನಿನ್ನ ಮೈಯ್ಯ ತಣಿಸದೆ 
ಯೌವ್ವನ ಎನ್ನುವ ಜೀನಿನ ಹೊಳೆಯಲಿ ಈಜಲು ಕಲಿಯಮ್ಮ 
ರಂಗಿನ ರಾತ್ರಿಯ ಗುಂಗಲಿ ನಿನ್ನಯ ರಂಗನು ತೋರಮ್ಮ 
ತಾಳಿ ಕಟ್ಟಿಲ್ಲ ಮೈಯ್ಯಿ ಮುಟ್ಟಿಲ್ಲ 
ರಸ ತುಂಬಿದ ಈ ಹಣ್ಣು ಹೊಸದಾಗಿದೆ 
ನೋಡಿನ್ನು ನಿಂಗಾಗಿ ಕಾದಿರೋ ಹೆಣ್ಣು 
ತಾಳಿ ಕಟ್ಟಿಲ್ಲ ಮೈಯ್ಯಿ ಮುಟ್ಟಿಲ್ಲ 
ರಸ ತುಂಬಿದ ನಿನ್ನನ್ನು ರುಚಿನೋಡದೇ 
ಬಿಡೆ ನಾನು ನಿಂಗಾಗಿ ಕಾದಿರೋ ಗಂಡು 
------------------------------------------------------------------------------------------------------------- 

ನ್ಯಾಯಕ್ಕಾಗಿ ನಾನು (೧೯೮೯) - ಧೀರರ ಧೀರ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. 

ಧೀರರ ಧೀರ ವೀರರ ವೀರ ಭೈರವ ನಾಯಕ ಬರ್ತಾನೇ 
ರೋಷದ ಹುಲಿ ಸೇಡಿನ ಬೆಂಕಿ ಭೈರವ ನಾಯಕ ಬರ್ತಾನೇ 
ನ್ಯಾಯ ನೀತಿ ಕಾಪಾಡಿ ಧರ್ಮದ ರಕ್ಷಣೆ ತಾ ಮಾಡಿ 
ಅನ್ಯಾಯ ಅಕ್ರಮ ಚೆಂಡಾಡಿ ಆರ್ತರ ಸೇವೆಯ ತಾ ಮಾಡಿ 
ಭೈರವ ತಾಳಲು ಕಲ್ಕಿಯ ವೇಷ ದ್ರೋಹ ಮೋಸ ಎಲ್ಲಾ ನಾಶ 
ಧೀರರ ಧೀರ ವೀರರ ವೀರ ಭೈರವ ನಾಯಕ ಬರ್ತಾನೇ 

ಸತ್ಯದ ರಕ್ಷಣೆ ಮಾಡೋಕ್ಕೆ ಶಾಂತಿಯ ಗೀತೆಯ ಹಾಡೋಕೇ 
ದುಷ್ಟಗೆ ಶಿಕ್ಷೆಯ ನೀಡೋಕೆ ಕ್ರಾಂತಿಯ ಕಹಳೆ ಉದೋಕೆ    
ಬಿಳಿ ಕುದರೆಯ ಮೇಲೇರಿ ಬಿರುಗಾಳಿಯ ಹಾಗೇ ಬರ್ತಾನೇ .. 
ಬಿಳಿ ಕುದರೆಯ ಮೇಲೇರಿ ಬಿರುಗಾಳಿಯ ಹಾಗೇ ಬರ್ತಾನೇ .. 
ಬಡವರ ರಕ್ತ ಹೀರೋರಗೆ ಸಿಂಹದ ಸ್ವಪ್ನ ಆಗ್ತಾನೇ 
ನಾಯಕನೆಂದರೇ ಪಾಪಿಗಳೆಲ್ಲರ ಮಾರಣ ಹೋಮ ವೈರಿ ನಿರ್ನಾಮ 
ಧೀರರ ಧೀರ ವೀರರ ವೀರ ಭೈರವ ನಾಯಕ ಬರ್ತಾನೇ 
ರೋಷದ ಹುಲಿ ಸೇಡಿನ ಬೆಂಕಿ ಭೈರವ ನಾಯಕ ಬರ್ತಾನೇ 

ಮಾನವ ಕುಲದ ಜನ್ಮಕಾರಿಣಿಯ ಮಾನಕ್ಕೆ ಹಾನಿಯು ತಾನಾಯ್ತೆ 
ಕಾಮಾಂಧ ಜನರ ದಾಹಕ್ಕೆ ಇಂದು ಹೆಣ್ಣಿನ ಶೀಲವು ಬಲಿಯಾಯ್ತೆ 
ಅಯ್ಯೋ.... ಓಓಓಓಓ 
ಹೆಣ್ಣಿನ ಕಣ್ಣಿನ ಧಾರೆಯ ಒರೆಸಲು ಓಡೋಡಿ ಬರುವ ನಾಯಕನು 
ಭೂಮಿ ತಾಯಿಯ ಭಾರವ ಇಳಿಸಲು ಬೆಂಕಿಯೇ ಆಗುವ ನಾಯಕನು 
ಭೈರವ ಬಂದರೇ ಶಾಂತಿ ಸಂತೋಷ ಊರಿಗೆ ರಕ್ಷೇ ದುಷ್ಟಗೇ ಶಿಕ್ಷೇ 
 
ಗಂಡೆದೇ ಭೂಪನು ಕೆಂಡದ ಹಾಗೆ ಪುಂಡರ ಗುಂಪನು ಕೊಲ್ಲುವನು 
ಚಂಡಮಾರುತ ಆಗುತ ವೈರಿಯ ರುಂಡಗಳ ಚೆಂಡಾಡುವನು 
ನ್ಯಾಯಕ್ಕಾಗಿ ನಾನೂ ... ನ್ಯಾಯಕ್ಕಾಗಿ ನಾನೂ ... 
ನ್ಯಾಯಕ್ಕಾಗಿ ನಾನ್ನೆನುತ ನೀತಿ ದೇವತೆ ಬಾವುಟ ಎತ್ತುವನು 
ಸಮಾಜ ಘಾತಕರೆಲ್ಲರಿಗೂ ಯಮರಾಜನ ರೂಪವ ತಾಳುವನು 
ಭೈರವ ತಾಳಲು ಕಲ್ಕಿಯ ವೇಷ ದ್ರೋಹ ಮೋಸ ಎಲ್ಲಾ ನಾಶ 
ಧೀರರ ಧೀರ ವೀರರ ವೀರ ಭೈರವ ನಾಯಕ ಬರ್ತಾನೇ 
ರೋಷದ ಹುಲಿ ಸೇಡಿನ ಬೆಂಕಿ ಭೈರವ ನಾಯಕ ಬರ್ತಾನೇ 
ಭೈರವ ನಾಯಕ ಬರ್ತಾನೇ ಭೈರವ ನಾಯಕ ಬರ್ತಾನೇ 
ಭೈರವ ನಾಯಕ ಬರ್ತಾನೇ ಭೈರವ ನಾಯಕ ಬರ್ತಾನೇ 
-------------------------------------------------------------------------------------------------------------- 

ನ್ಯಾಯಕ್ಕಾಗಿ ನಾನು (೧೯೮೯) - ಕಳ್ಳನಲ್ಲ ಮನಸ್ಸು ಕದ್ದೆ ಅಲ್ಲ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಚಿತ್ರಾ  

ಕಳ್ಳನಲ್ಲ ಮನಸ್ಸನ್ನು ಕದ್ದೆ ನೀನು ಸುಳ್ಳನಲ್ಲ ನಿನ್ನನ್ನು ಗೆದ್ದ ನಾನು 
ನಾಯಕ ನೀನು ವೇಷವ ತೆಗೆಯೇ ನಿನ್ನಲ್ಲೊಂದಾದೇನೂ 
ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು 
ನಾಯಕಿ ನೀನು ನನ್ನ ಅರಿತೇ ನಿನ್ನಲ್ಲೊಂದಾದೇನೂ 

ಪ್ರೀತಿ ಬರುವಾಗ ಅದು ಹೇಳಿ ಕೇಳಿ ಬರಲಿಲ್ಲ 
ನನ್ನ ಸೆಳೆದಾಗ ಸರಿ ಹೊತ್ತುಗೊತ್ತು ತಿಳಿದಿಲ್ಲ 
ಪ್ರೇಮ ಏನೆಂದು ನಾ ಹಿಂದೆ ಮುಂದೆ ಅರಿತಿಲ್ಲ 
ಹೀಗೆ ಮಾಡೆಂದು ನಾ ಪಾಠಗೀಠ ಕಲಿತಿಲ್ಲ 
ಹೇಳಿಕೊಡಲೇ ಬೇಗ ಬೇಗ ಈಗ ಈಗ 
ಆತುರವೇಕೆ ತಾಳಲಾರೆ ಇಂಥ ವೇಗ ಬಲ್ಲೇ ನಿನ್ನಾಟವವವವ 
ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು 
ನಾಯಕಿ ನೀನು ನನ್ನ ಅರಿತೇ ನಿನ್ನಲ್ಲೊಂದಾದೇನೂ 

ರಾತ್ರಿ ಪ್ರತಿರಾತ್ರಿ ನಿನ್ನ ಪ್ರೀತಿ ಪಾಠ ಕನಸಲ್ಲಿ 
ರೀತಿ ಹೊಸ ರೀತಿ  ನೀ ಆಡೋ ಆಟ ನನ್ನಲ್ಲೀ 
ರಾಗ ಅನುರಾಗ ಮಿಡಿದಾಗ ನನ್ನ ಎದೆಯನ್ನೂ 
ಬೇಗ ಸವಿ ಬೇಗ ಒಲವೆಂಬ ಜೇನಹನಿಯನ್ನು 
ಬಯಕೆ ನೂರು ನಾನು ನೀನು ಸೇರಿದಾಗ 
ಬೇಡ ಯಾರು ಪ್ರೇಮಲೋಕ ನೋಡುವಾಗ ಸಾಕು ತುಂಟಾಟವೂ.. ಬಾ ಬಾ 
ಕಳ್ಳನಲ್ಲ ಮನಸ್ಸನ್ನು ಕದ್ದೆ ನೀನು ಸುಳ್ಳನಲ್ಲ ನಿನ್ನನ್ನು ಗೆದ್ದ ನಾನು 
ನಾಯಕ ನೀನು ವೇಷವ ತೆಗೆಯೇ ನಿನ್ನಲ್ಲೊಂದಾದೇನೂ 
ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು 
ನಾಯಕಿ ನೀನು ನನ್ನ ಅರಿತೇ ನಿನ್ನಲ್ಲೊಂದಾದೇನೂ 
------------------------------------------------------------------------------------------------------------- 

No comments:

Post a Comment